Thu 28 Apr 2016, 9:05PM

ವಿಶೇಷ ಸುದ್ದಿಗಳು

 • ವೇಣೂರಿನ ಹಿರಿಯ ಚೇತನ ಹಿಲಾರಿ ಪಿರೇರಾ ನಿಧನ
 • ಕ್ರಿಕೆಟ್ ಪಂದ್ಯಾಟ ಪವರ್ ಆನ್ ಪ್ಯಾಂಥರ್ಸ್ ರನ್ನರ‍್ಸ್
 • ಗ್ರಾಮ ಉದಯ್ ಸೇ ದೇಶ್ ಉದಯ್ಗೆ ಯಂಗ್ ಚಾಲೆಂಜರ‍್ಸ್‌ನಿಂದ 5 ಸಾವಿರ ನೆರವು
 • ಉಜಿರೆ : ಮಾನಸ ಎಂಟರ್‌ಪ್ರೈಸಸ್ ಸ್ಟಿಲ್ ರೇಲಿಂಗ್ಸ್ ಶುಭಾರಂಭ
 • ಉಜಿರೆಯಲ್ಲಿ ಯೋಗ ಮತ್ತು ಪ್ರಾಣಾಯಾಮ ಶಿಬಿರ ಮಾನಸಿಕ ಶಾಂತಿ, ಆರೋಗ್ಯಪೂರ್ಣ ಜೀವನಕ್ಕೆ ಯೋಗ ದಿವ್ಯೌಷಧಿ : ಪಡ್ವೆಟ್ನಾಯ
 • ನೀರು ನೈರ್ಮಲ್ಯ ಸಮಿತಿ ಅನುರ್ಜಿತಗೊಳಿಸಿ… ಸಿಸಿ ಟಿವಿ ಸರಿಪಡಿಸಿ… ನೀರಿನ ಸಂಪರ್ಕ ಕಡಿತದಲ್ಲಿ ಪಕ್ಷಪಾತ ತಡೆಯಿರಿ… ಕ್ರಿಯಾ ಯೋಜನೆಗಳು ಗ್ರಾಮ ಸಭೆಯಲ್ಲೇ ನಡೆಯಲಿ…
 • ಮದ್ದಡ್ಕ ಬಂಡಿಮಠ ಮೈದಾನದಲ್ಲಿ ತ್ಯಾಜ್ಯ
 • ಡೈನಾಮಿಕ್ ಕೋಚಿಂಗ್ ಸೆಂಟರ್‌ನಲ್ಲಿ ವಿವಿಧ ಕೋರ್ಸುಗಳು ಲಭ್ಯ
 • ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ /ಧಾರ್ಮಿಕ ಸಭೆ
 • ಅಳದಂಗಡಿ ಪರಿಸರದಲ್ಲಿ ದೂರವಾಣಿಗಳು ಸ್ತಬ್ದ
 • ಹೆಚ್ಚಿನ ಸುದ್ದಿಗಳು

  ಸಾಮಾನ್ಯ
  ವೇಣೂರಿನ ಹಿರಿಯ ಚೇತನ ಹಿಲಾರಿ ಪಿರೇರಾ ನಿಧನ
  Apr 28th 5:24

  ವೇಣೂರು: ವೇಣೂರಿನ ನಿವಾಸಿ ಸಮಾಜ ಸೇವಕ ಹಿರಿಯ ಚೇತನ ಹಿಲಾರಿ ಪಿರೇರಾ (೯೦) ಅವರು ಅಲ್ಪ ಕಾಲದ ಅಸೌಖ್ಯದಿಂದ ಎ.೨೫ರಂದು… ಮುಂದೆ ಓದಿ

  hindu 1

 • ಕ್ರಿಕೆಟ್ ಪಂದ್ಯಾಟ ಪವರ್ ಆನ್ ಪ್ಯಾಂಥರ್ಸ್ ರನ್ನರ‍್ಸ್
 • ಗ್ರಾಮ ಉದಯ್ ಸೇ ದೇಶ್ ಉದಯ್ಗೆ ಯಂಗ್ ಚಾಲೆಂಜರ‍್ಸ್‌ನಿಂದ 5 ಸಾವಿರ ನೆರವು
 • ಉಜಿರೆ : ಮಾನಸ ಎಂಟರ್‌ಪ್ರೈಸಸ್ ಸ್ಟಿಲ್ ರೇಲಿಂಗ್ಸ್ ಶುಭಾರಂಭ
 • ಉಜಿರೆಯಲ್ಲಿ ಯೋಗ ಮತ್ತು ಪ್ರಾಣಾಯಾಮ ಶಿಬಿರ ಮಾನಸಿಕ ಶಾಂತಿ, ಆರೋಗ್ಯಪೂರ್ಣ ಜೀವನಕ್ಕೆ ಯೋಗ ದಿವ್ಯೌಷಧಿ : ಪಡ್ವೆಟ್ನಾಯ
 • ನೀರು ನೈರ್ಮಲ್ಯ ಸಮಿತಿ ಅನುರ್ಜಿತಗೊಳಿಸಿ… ಸಿಸಿ ಟಿವಿ ಸರಿಪಡಿಸಿ… ನೀರಿನ ಸಂಪರ್ಕ ಕಡಿತದಲ್ಲಿ ಪಕ್ಷಪಾತ ತಡೆಯಿರಿ… ಕ್ರಿಯಾ ಯೋಜನೆಗಳು ಗ್ರಾಮ ಸಭೆಯಲ್ಲೇ ನಡೆಯಲಿ…
 • ಮದ್ದಡ್ಕ ಬಂಡಿಮಠ ಮೈದಾನದಲ್ಲಿ ತ್ಯಾಜ್ಯ
 • ಡೈನಾಮಿಕ್ ಕೋಚಿಂಗ್ ಸೆಂಟರ್‌ನಲ್ಲಿ ವಿವಿಧ ಕೋರ್ಸುಗಳು ಲಭ್ಯ
 • ಬಲಿಪಶು ಆಗುತ್ತಿದೇಯ ನಮ್ಮ ನೆರಿಯ
 • ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ /ಧಾರ್ಮಿಕ ಸಭೆ
 • ಅಳದಂಗಡಿ ಪರಿಸರದಲ್ಲಿ ದೂರವಾಣಿಗಳು ಸ್ತಬ್ದ
 • malebettu 1

  karthik 1

  ಧಾರ್ಮಿಕ
  ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ /ಧಾರ್ಮಿಕ ಸಭೆ
  Apr 28th 4:53

  ಮುಂಡೂರು : ಇಂದಿನ ಆಧುನಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಶ್ರೀಮಂತಿಕೆ ಇದ್ದರೆ ಏನನ್ನು ಬೇಕಾದರೂ ಪಡೆಯಬಹುದು ಎಂದರೇ ಅದು ತಪ್ಪು… ಮುಂದೆ ಓದಿ

  mayur 1

 • ದರ್ಭೆತಡ್ಕ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನಕ್ಕೆ ಸ್ವಾಮೀಜಿ ಭೇಟಿ
 • ಹಲ್ಲಿಂಗೇರಿ ಶ್ರೀ ದುರ್ಗಾಪರಮೇಶ್ವರೀ ಪ್ರಾರ್ಥನಾಮಂದಿರಕ್ಕೆ ಸ್ವಾಮೀಜಿ ಭೇಟಿ
 • ವೇಣೂರು: ಶ್ರೀ ಮಹಾಲಿಂಗೇಶ್ವರ ದೇವಳದ ಜಾತ್ರಾ ಮಹೋತ್ಸವ ಸಂಪನ್ನ
 • ಕೊಕ್ಕಡ ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶಿಲಾನ್ಯಾಸ
 • ಭಜನೆಯಿಂದ ಬದುಕು ಕಟ್ಟುವ ಕಾರ್ಯ: ಶ್ರೀ ಗುರುದೇವಾನಂದ ಸ್ವಾಮೀಜಿ
 • ಧರ್ಮದ ಆಚರಣೆ ಅಧರ್ಮದ ಪರಿತ್ಯಾಗದಿಂದ ಇಚ್ಛೆ ನೆರವೇರುವುದು: ಶ್ರೀ ಭಾರತೀತೀರ್ಥ ಶ್ರೀಗಳು
 • ಶ್ರೀ ಮೂಕಾಂಬಿಕೆ ದೇವಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
 • ಕುವೆಟ್ಟು ಬಯಲು ಗದ್ದೆಯಲ್ಲಿ ಸಾರ್ವಜನಿಕ ಶನಿ ಪೂಜೆ ಹಾಗೂ ಗುರು ಪೂಜೆ
 • ಶಿಬಾಜೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
 • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕುರಿಯ ಎಲ್ನಾಡುಗುತ್ತು ಮನೆತನದಿಂದ ೧ ಲಕ್ಷ ರೂ. ದೇಣಿಗೆ
 • hilari pirera copyವೇಣೂರು: ವೇಣೂರಿನ ನಿವಾಸಿ ಸಮಾಜ ಸೇವಕ ಹಿರಿಯ ಚೇತನ ಹಿಲಾರಿ ಪಿರೇರಾ (೯೦) ಅವರು ಅಲ್ಪ ಕಾಲದ ಅಸೌಖ್ಯದಿಂದ ಎ.೨೫ರಂದು ಮಂಗಳೂರು ನಿವಾಸದಲ್ಲಿ ನಿಧನ ಹೊಂದಿದರು.
  ಇವರು ವೇಣೂರು ವಿಶೇಷ ಶಾಲೆಯ ಸ್ಥಾಪಕರಾಗಿದ್ದು, ವೇಣೂರು ಲಯನ್ಸ್ ಕ್ಲಬ್‌ನ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ, ಲಯನ್ಸ್ ಜಿಲ್ಲಾ ಚೇರ್‌ಮೆನ್ ಆಗಿ ಸಮಾಜ ಸೇವೆಯಲ್ಲಿ ತೊಡಗಿದ್ದರು. ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ವೇಣೂರು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾಗಿ ಕರಿಮಣೇಲು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ, ವೇಣೂರು ಪ್ರೌಢ ಶಾಲೆ ಮತ್ತು ಕರಿಮಣೇಲು ಸಂತ ಜೂಡರ ಹಿ.ಪ್ರಾ. ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ವಿದ್ಯೋದಯ ಹಿ.ಪ್ರಾ. ಶಾಲೆಯ ಶತಮಾನೋತ್ಸವ ಆಚರಣಾ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿ ಜನಮನ್ನಣೆ ಗಳಿಸಿದ್ದಾರೆ. ಮೃತರು ಯೇಸು ಸಭೆಯ ಧರ್ಮಗುರು ಫಾ| ಮೆಲ್ವಿನ್ ಸಹಿತ ಐವರು ಪುತ್ರರು ಮತ್ತು ಧರ್ಮ ಭಗಿನಿ ಸಿ| ರೋಶನಿ ಸಹಿತ ಏಳು ಮಂದಿ ಪುತ್ರಿಯರನ್ನು ಅಗಲಿದ್ದಾರೆ.
  ಸಂತಾಪ: ಇವರ ನಿಧನಕ್ಕೆ ಮಾಜಿ ಕೇಂದ್ರ ಸಚಿವ ವಿ. ಧನಂಜಯ ಕುಮಾರ್, ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ, ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ತಾ.ಪಂ. ಸದಸ್ಯ ವಿಜಯ ಗೌಡ, ವೇಣೂರು ಗ್ರಾ.ಪಂ. ಸದಸ್ಯ ರಾಜೇಶ್ ಪೂಜಾರಿ ಕೊಪ್ಪದಬಾಕಿಮಾರು, ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಪ್ರವೀಣ್ ಕುಮಾರ್ ಇಂದ್ರ, ವೇಣೂರಿನ ಹಿರಿಯ ವೈದ್ಯ ಡಾ| ಬಿಪಿ ಇಂದ್ರ, ವೇಣೂರು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ರೊನಾಲ್ಡ್ ಡಿಸೋಜ, ವೇಣೂರು ಪ್ರಾ.ಕೃ.ಪ.ಸ.ಸಂಘದ ನಿವೃತ್ತ ಮೆನೇಜರ್ ಎಚ್. ಮಹಮ್ಮದ್, ಅಧ್ಯಕ್ಷ ಸುಂದರ ಹೆಗ್ಡೆ ಬಿಇ, ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ಗಿರೀಶ್ ಕೆ.ಎಸ್., ಉದ್ಯಮಿ ಭಾಸ್ಕರ ಪೈ, ಕರಿಮಣೇಲು ಹಾ.ಉ.ಸ.ಸಂಘದ ಅಧ್ಯಕ್ಷ ದೇಜಪ್ಪ ಶೆಟ್ಟಿ ಸೇರಿದಂತೆ ಉದ್ಯಮಿಗಳು, ಸಂಘ-ಸಂಸ್ಥೆಗಳ ಮುಖಂಡರು, ವಿವಿಧ ರಾಜಕೀಯ ಪಕ್ಷದ ಮುಖಂಡರು ಹಾಗೂ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತದೇಹವನ್ನು ಇಂದು (ಎ.೨೮) ಸಂಜೆ ೩.೩೦ಕ್ಕೆ ವೇಣೂರಿನ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತಿದ್ದು, ಬಳಿಕ ವೇಣೂರು ಕ್ರಿಸ್ತರಾಜ ದೇವಾಲಯದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

  sampath tropi copy ಬೆಳ್ತಂಗಡಿ : ಎ. 23/24 ರಂದು ನಡೆದ ದಿ| ಸಂಪತ್ ಸ್ಮರಣಾರ್ಥ ನಡೆದ ಕ್ರಿಕೆಟ್ ಪಂದ್ಯಾಟ ಸಂಪತ್ ಟ್ರೋಫಿ ಇದರಲ್ಲಿ ಬೆಳ್ತಂಗಡಿ ಪವರ್ ಆನ್ ಬ್ಯಾಟರಿ ಮಾಲಕ ಶೀತಲ್ ಜೈನ್‌ರವರ ಮಾಲಕತ್ವದ ಪವರ್ ಆನ್ ಪ್ಯಾಂಥರ್ಸ್ ತಂಡವು ರನ್ನರ್ ಆಗಿ ಹೊರಹೊಮ್ಮಿದೆ.

  yang chalengers neravu copyಮುಂಡಾಜೆ : ಮುಂಡಾಜೆ ಗ್ರಾಮದ ಕೂಳೂರು ಎಂಬಲ್ಲಿ ಮಾದರಿಯಾಗಿ ಅಭಿವೃದ್ಧಿ ಹೊಂದುತ್ತಿರುವ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಪೂರಕವಾಗಿ ಮುಂಡಾಜೆ ಯಂಗ್‌ಚಾಲೆಂಜರ‍್ಸ್ ಕ್ರೀಡಾ ಸಂಘದ ವತಿಯಿಂದ ೫ ಸಾವಿರ ರೂ. ಆರ್ಥಿಕ ನೆರವನ್ನು ಏ. ೨೪ ರಂದು ಹಸ್ತಾಂತರಿಸಲಾಯಿತು. ಗ್ರಾಮ ಉದಯ್ ಸೇ ಭಾರತ್ ಉದಯ್ ಎನ್ನುವ ಘೋಷವಾಖ್ಯದೊಂದಿಗೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯ ಯೋಜನೆಗೆ ಗ್ರಾಮದ ಒಂದು ಕ್ರೀಡಾ ಸಂಘ ಸ್ಪಂದಿಸುವ ಮೂಲಕ ಮಾದರಿಯಾಯಿತು.
  ಸಂಘದ ಸಂಚಾಲಕ ಲ| ನಾಮದೇವ ರಾವ್, ಅಧ್ಯಕ್ಷ ನಾಗರಾಜ ನಾಯ್ಕ, ಉಪಾಧ್ಯಕ್ಷ ಪುಷ್ಪರಾಜ್, ಸದಸ್ಯ ಸುರೇಶ್ ಗೌಡ ಮುಂಡಲೊಟ್ಟು ಇವರು ಈ ಚೆಕ್ಕನ್ನು ಪಂಚಾಯತ್ ಅಧ್ಯಕ್ಷೆ ಶಾಲಿನಿ ವಿಜಯ ಕುಮಾರ್, ಉಪಾಧ್ಯಕ್ಷೆ ವಸಂತಿ ರಾಜ್‌ಗೋಪಾಲ್, ಪಿಡಿಒ ಸಂಜೀವ ನಾಯ್ಕ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಸದಸ್ಯರಾದ ನಾರಾಯಣ ಗೌಡ ದೇವಸ್ಯ, ಚಂದ್ರಾವತಿ ಉಮೇಶ್, ಅಶ್ವಿನಿ ಹೆಬ್ಬಾರ್, ಸುಮನಾ ಗೋಖಲೆ, ಚೆನ್ನಕೇಶವ ನಾಯ್ಕ, ಸುರೇಶ್ ಕುಮಾರ್, ಸಿಬ್ಬಂದಿ ರಾಮಾಚಾರಿ ಸೇರಿದಂತೆ ಇತರರು ಮತ್ತು ಗ್ರಾಮಸ್ಥರು ಹಾಜರಿದ್ದರು.
  ಚಿತ್ರ : ಖುಷಿ ಡಿಜಿಟಲ್ಸ್ ಸೋಮಂತಡ್ಕ.

  manasa enterprises oepning copy ಉಜಿರೆ : ಇಲ್ಲಿನ ಟಿ.ಬಿ ಕ್ರಾಸ್‌ನಲ್ಲಿರುವ ಕೆ.ಎಚ್ ಕಾಂಪ್ಲೇಕ್ಸ್‌ನಲ್ಲಿ ನೂತನವಾಗಿ ಪ್ರಾರಂಭಿಸಿದ ಮಾನಸ ಎಂಟರ್‌ಪ್ರೈಸಸ್ ಸ್ಟೀಲ್ ರೇಲಿಂಗ್ಸ್‌ನ ಶುಭಾರಂಭವು ಎ.೨೪ ರಂದು ನಡೆಯಿತು.
  ಸಂಸ್ಥೆಯ ಮಾಲಕರ ಮಾತ-ಪಿತರಾದ ಶ್ರೀಮತಿ ಸುಮತಿ ಮತ್ತು ವಿನಯಚಂದ್ರ ಜೈನ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
  ಈ ಸಂದರ್ಭದಲ್ಲಿ ಮೂಲ್ಕಿ ವಿಜಯಾ ಬ್ಯಾಂಕ್‌ನ ಮ್ಯಾನೇಜರ್ ಶ್ರವಣ್‌ರಾಜ್, ಪವರ್ ಪೊಂಟ್ಸ್ ಮಾಲಕರಾದ ಮಹಾವೀರ ಜೈನ್, ಮಹೇಂದ್ರ ಜೈನ್, ಕೆ.ಎಚ್ ಕಾಂಪ್ಲೇಕ್ಸ್ ಮಾಲಕ ಹೈದರ್ ಹಾಗೂ ಬಂಧು-ಮಿತ್ರರು ಉಪಸ್ಥಿತರಿದ್ದರು.
  ಸಂಸ್ಥೆಯ ಮಾಲಕ ಪ್ರದೀಪ್ ಜೈನ್ ಆಹ್ವಾನಿತ ಗಣ್ಯರನ್ನು ಬರಮಾಡಿಕೊಂಡು ಸತ್ಕರಿಸಿದರು.

   ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರು ಇಲ್ಲಿನ ರಕ್ಷಕ- ಶಿಕ್ಷಕ ಸಂಘದ ಮಹಾಸಭೆಯು ಎ. 23ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
  ಮುಖ್ಯ ಅತಿಥಿಗಳಾಗಿ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕ ವಂದನೀಯ ಫಾ. ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅವರ ವಿದ್ಯಾರ್ಜನೆಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ೪೦೦ ಮೀಟರ್‌ಗಳ ಟ್ರಾಕ್ ಸಿದ್ಧಗೊಂಡಿದೆ. ೨ ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ಸಿದ್ಧಗೊಳ್ಳುತ್ತಾ ಇದೆ. ಗ್ರಾಮೀಣ ಪ್ರದೇಶದ ನಮ್ಮ ವಿದ್ಯಾರ್ಥಿಗಳು ಉತ್ತಮ ಮಟ್ಟದ ವಿದ್ಯಾಭ್ಯಾಸವನ್ನು ಪಡೆಯುವಂತಾಗಬೇಕು ಮತ್ತು ಇದಕ್ಕೆ ಹೆತ್ತವರ ಪ್ರೋತ್ಸಾಹ ಸಹಕಾರ ಅಗತ್ಯ ಎಂದರು.
  ಪ್ರಾಂಶುಪಾಲರಾದ ಪ್ರೋ. ಅಲೆಕ್ಸ್ ಐವನ್ ಸಿಕ್ವೇರಾ ಅವರು ೨೦೧೫-೧೬ ನೇ ಶೈಕ್ಷಣಿಕ ಸಾಲಿನಲ್ಲಿ ಕಾಲೇಜಿನ ವಿವಿಧ ಚಟುವಟಿಕೆಗಳ ಬಗ್ಗೆ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸಾಧನೆಯ ಕುರಿತು ವಿವರಗಳನ್ನು ನೀಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೋ. ಆಗ್ನೇಸ್ ರೊಡ್ರಿಗಸ್ ಗತವರ್ಷದ ಲೆಕ್ಕವನ್ನು ಮಂಡಿಸಿದರು. ಸಂಘದ ಅಧ್ಯಕ್ಷ ಎಸ್.ಆರ್ ನಾಯಕ್ ಅನಿಸಿಕೆಗಳನ್ನು ಮುಂದಿಡುತ್ತಾ ಕಾಲೇಜಿನ ಒಟ್ಟು ಬೆಳವಣಿಗೆಗೆ ಹೆತ್ತವರೆಲ್ಲರ ಸಹಕಾರನ್ನು ಬಯಸಿದರು.

    ನೀರು ಮತ್ತು ನೈರ್ಮಲ್ಯ ಸಮಿತಿಯನ್ನು ಗ್ರಾಮ ಸಭೆಯಲ್ಲಿ ರಚಿಸಬೇಕೆಂಬ ನಿಯಮವಿದ್ದರೂ ಅದನ್ನು ಮೀರಿ ಕಳೆದ ಗ್ರಾಮ ಸಭೆಯಲ್ಲಿ ಅದರ ವಿಚಾರವನ್ನೇ ಪ್ರಸ್ತಾಪಿಸದೆ ಪಂಚಾಯತ್ ಆಡಳಿತ ಅವರಷ್ಟಕ್ಕೇ ಮಾಡಿರುವ ಸಮಿತಿಯನ್ನು ಅನುರ್ಜಿತಗೊಳಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಮತ್ತು ಚುನಾವಣಾ ಆಯೋಗಕ್ಕೂ ದೂರು ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ ವಿದ್ಯಮಾನಕ್ಕೆ ಸಭೆ ಸಾಕ್ಷಿಯಾದುದು ಏ. ೨೩ ರಂದು ನಡೆದ ಕುವೆಟ್ಟು ಗ್ರಾಮಸಭೆಯಲ್ಲಿ.
  ಗ್ರಾಮ ಪಂಚಾಯತ್‌ನ ಎರಡನೇ ಸುತ್ತಿನ ಗ್ರಾಮ ಸಭೆಯು ಇಲ್ಲಿನ ಮದ್ದಡ್ಕ ಸಮುದಾಯ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷ ಅಶೋಕ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿತು. ಉಪಾಧ್ಯಕ್ಷೆ ಅಕ್ಷತಾ ಕೆ. ಶೆಟ್ಟಿ ಸೇರಿದಂತೆ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ತಾ.ಪಂ. ಸದಸ್ಯ ಗೋಪಿನಾಥ ನಾಯಕ್ ವಿಶೇಷ ಆಹ್ವಾನಿತರಾಗಿದ್ದರು. ಕಾರ್ಯದರ್ಶಿ ರವಿ ನಿ. ಬನಪ್ಪ ಗೌಡ್ರ, ಪಿಡಿಒ ರವೀಂದ್ರ ಆರ್. ನಾಯಕ್ ಸಿಬ್ಬಂದಿ ವಸಂತ ಶೆಟ್ಟಿ ಅವರು ವಿವಿಧ ಜವಾಬ್ಧಾರಿಗಳನ್ನು ನಿರ್ವಹಿಸಿದರು. ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರ ಸಿ.ಆರ್. ನರೇಂದ್ರ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.
  ನೈರ್ಮಲ್ಯ ಸಮಿತಿಯನ್ನು ಅನುರ್ಜಿತಗೊಳಿಸಿ ಗ್ರಾಮ ಸಭೆಯಲ್ಲೇ ಮತ್ತೆ ಮರು ಆಯ್ಕೆ ಮಾಡಬೇಕು. ಪಂಚಾಯತ್ ಆಡಳಿತ ಮಂಡಳಿಯವರಿಗೆ ಬೇಕಾದವರನ್ನು ಸೇರಿಸಿ ಮಾಡಿದ್ದು ಸರಿಯಲ್ಲ ಎಂದು ಚಂದ್ರಹಾಸ ಕೇದೆ, ಮುಹಮ್ಮದ್ ರಫೀಕ್ ಅಲಾದಿಕೊಟ್ಟಿಗೆ, ಹರಿಪ್ರಸಾದ್ ಭಟ್ ಅವರು ಆಕ್ಷೇಪಿಸಿದರು. ಅಧಿಕಾರಿಗಳು ತಪ್ಪು ಮಾಡಿದ್ದು ಇಲ್ಲಿ ಸಾಬೀತಾಗಿದೆ. ಅವರ ವಿರುದ್ಧವೂ ಕ್ರಮ ಆಗಬೇಕು ಎಂದು ಪಟ್ಟುಬಿಡದೆ ಒತ್ತಾಯಿಸಲಾಯಿತು. ನೋಡೆಲ್ ಅಧಿಕಾರಿ, ಪಿಡಿಒ ಹಾಗೂ ಅಧ್ಯಕ್ಷರು ಇದಕ್ಕೆ ಉತ್ತರ ನೀಡಲು ಪ್ರಯತ್ನ ಪಟ್ಟರೂ ಗ್ರಾಮಸ್ಥರು ಮಾತ್ರ ಬಿಡಲೇ ಇಲ್ಲ.
  ಪಂಚಾಯತ್‌ನ ಅಭಿವೃದ್ದಿ ವಿಚಾರಗಳ ಕ್ರಿಯಾ ಯೋಜನೆ ಗ್ರಾಮ ಸಭೆಯಲ್ಲೇ ಆಗಬೇಕು ಎಂದು ಚಂದ್ರಹಾಸ ಕೇದೆ ಅವರು ಆಗ್ರಹಿಸಿದರು. ಅದಕ್ಕೆ ಆಡಳಿತದ ಕಡೆಯಿಂದ ನೀರಸ ಪ್ರತಿಕ್ರಿಯೆ ಬಂದಾಗ ತೀವ್ರವಾಗಿ ಒತ್ತಾಯಿಸಿದ ಅವರು ಈ ವಿಚಾರವನ್ನು ಮತ್ತಷ್ಟು ಒತ್ತಿ ಪ್ರಸ್ತಾಪಿಸಿದರು.
  ಸಭೆಯಲ್ಲಿ ಆದರೂ ಸಾಮಾನ್ಯ ಸಭೆಯಲ್ಲಿ ಅದನ್ನು ತಿರಸ್ಕರಿಸುವ ಹಕ್ಕು ಪಂಚಾಯತಕ್ಕೆ ಇದೆ ಎಂದು ಅಧ್ಯಕ್ಷರು ಹೇಳಿದಾಗ, ಅದು ಸಾಮಾನ್ಯ ಸಭೆಯಲ್ಲಿ ಬೇಕಾದರೆ ನೀವು ಕೈಬಿಡಿ,. ಆದರೆ ನಿಯಮಾನುಸಾರ ಗ್ರಾಮಸಭೆಯಲ್ಲೇ ಕ್ರಿಯಾಯೋಜನೆ ನಡೆಯಲಿ. ನಮಗೆ ಇಲ್ಲಿ ವಿಶ್ವಾಸದ ಕೊರತೆ ಎದುರಾಗಿದೆ. ೧೦ ವರ್ಷಗಳಿಂದ ನಾವು ಗ್ರಾಮ ಸಭೆಯಲ್ಲಿ ಬೊಬ್ಬೆ ಹೊಡೆಯುತ್ತಾ ಬಂದಿರುವ ಅನೇಕ ಕಾಮಗಾರಿಗಳು, ಮನವಿಗಳ ಮೂಲಕ ನೀಡಿದ ಬೇಡಿಕೆಗಳು ಇಂದಿಗೂ ಈಡೇರಿಲ್ಲ. ಈಡೇರುತ್ತದೆ ಎಂಬ ಭರವಸೆಯೂ ನಮಗಿಲ್ಲ.
  ಇಲ್ಲೇ ಪಕ್ಕದಲ್ಲಿರುವ ಬಸ್ಟ್ಯಾಂಡ್ ದುರಸ್ಥಿ, ಮೋರಿ ದುರಸ್ಥಿ, ಮೈದಾನದ ದುರಸ್ಥಿ ಇದೆಲ್ಲವೂ ಇಂದಿಗೂ ಬೇಡಿಕೆಯಾಗಿಯೇ ಮುಂದುವರಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಬಳಿಕ ಆ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
  ಪಂಚಾಯತ್‌ಗೆ ಅಳವಡಿಸಿದ ಸಿ.ಸಿ. ಕ್ಯಾಮರಾ ವಿಚಾರದಲ್ಲಿ ಆನಂದ ಶೆಟ್ಟಿ ಐಸಿರಿ ಅವರು ಕೇಳಿದ ಪ್ರಶ್ನೆಗೆ ಭಾರೀ ಚರ್ಚೆಯೇ ನಡೆಯಿತು. ಅದರ ಮಾನಿಟರ್ ಮತ್ತು ಕಂಟ್ರೋಲ್ ಅಧ್ಯಕ್ಷರ ಕಚೇರಿಯಲ್ಲಿಟ್ಟಿರುವುದು ಸರಿಯಲ್ಲ. ಅದನ್ನು ಪಿಡಿಒ ಕೊಠಡಿಯಲ್ಲಿಡಬೇಕು ಎಂಬ ವಿಚಾರಕ್ಕೆ ಅಲ್ಲಿ ಹೆಚ್ಚು ಪ್ರಾಶಸ್ಥ್ಯವಿದ್ದ ಹಾಗೆ ಗೋಚರಿಸಿತು. ಪಿಡಿಒ ಅವರು, ತನ್ನ ಕೊಠಡಿಯಲ್ಲಿದ್ದ ಸಿ.ಸಿ. ಕ್ಯಾಮರಾವನ್ನು ಮೇಲಕ್ಕೆ ತಿರುಗಿಸಿಟ್ಟಿದ್ದಾರೆ ಎಂದು ಆಕ್ಷೇಪಣೆಗಳು ವ್ಯಕ್ತವಾದವು. ಈ ಸಂದರ್ಭ ಮಾತನಾಡಿದ ಅಧ್ಯಕ್ಷರು, ನಮ್ಮ ಸಿಬ್ಬಂದಿಗಳು ಜನತೆ ನೀಡುವ ಸೇವೆಯನ್ನು ಖಾತರಿಪಡಿಸಿಕೊಳ್ಳಲು ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ. ಇದರಲ್ಲಿ ನಮಗೆ ಯಾವುದೇ ಸ್ವಾರ್ಥವಿಲ್ಲ. ಮುಂದಕ್ಕೆ ನನ್ನ ಕೊಠಡಿಯಲ್ಲೂ ಅಳವಡಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
  ಪೊಯ್ಯುಟ್ಟು ದಾರಿದೀಪ ಉದ್ಘಾಟನೆಗೆ ಬಿಜೆಪಿ ಪಕ್ಷದ ಚುನಾವಣಾ ಚಿಹ್ನೆ ಇರುವ ಬ್ಯಾನರ್ ಹಾಕಿ ಅಧ್ಯಕ್ಷರಿಗೆ ಶುಭ ಕೋರಿ ಹಾಕಿರುವುದು ಸರಿಯಲ್ಲ ಎಂದು ಹರಿಪ್ರಸಾದ್ ಭಟ್ ಆಕ್ಷೇಪವೆತ್ತಿದರು. ಪಂಚಾಯತ್‌ನಲ್ಲಿ ಪಕ್ಷವಿಲ್ಲ. ನೀವು ಗೆದ್ದಿರುವ ಚುನಾವಣಾ ಚಿಹ್ನೆಯನ್ನೂ ಬೇಕಾದರೆ ಬಳಸಿ ಎಂದು ತಿಳಿಸಿದರು. ಈ ವೇಳೆ ಮಾತನಾಡಿದ ಅಧ್ಯಕ್ಷರು, ಅದು ಪಂಚಾಯತ್‌ನಿಂದ ಅಳವಡಿಸಿದ ಬ್ಯಾನರ್ ಅಲ್ಲ. ಜನರೇ ಅಭಿಮಾನದಿಂದ ಹಾಕಿರಬಹುದು. ನಮಗೇನು ಮಾಡಲು ಆಗುವುದಿಲ್ಲ. ಬ್ಯಾನರ್‌ಗೆ ಅನುಮತಿ ಪಡೆದುಕೊಂಡು ಹಾಕಿದ್ದಾರೆ ಎಂದರು. ಈ ಸಂದರ್ಭ ಮಾತನಾಡಿದ ಚಂದ್ರಹಾಸ ಕೇದೆ ಮತ್ತು ಮಹಮ್ಮದ್ ರಫೀಕ್ ಅವರು, ಅದರ ಉದ್ಘಾಟನೆಗೆ ಮತ್ತು ಇತ್ತೀಚೆಗೆ ಅಂಬೇಡ್ಕರ್ ಜಯಂತಿಯಂದು ಸಿಂಟೆಕ್ಸ್ ನೀರಿನ ಟ್ಯಾಂಕಿ ವಿತರಣೆ ವೇಳೆ ಮಾಜಿ ಶಾಸಕರನ್ನು ಕರೆದು ಕಾರ್ಯಕ್ರಮ ಮಾಡಿದ್ದು ಶಿಷ್ಟಾಚಾರದ ಉಲ್ಲಂಘನೆ ಎಂದು ಆಕ್ಷೇಪಿಸಿದರು. ಅಲ್ಲದೆ ದಾರಿದೀಪ ಉದ್ಘಾಟನೆ ವೇಳೆ ಆ ವಾರ್ಡ್‌ನ ಸದಸ್ಯರಿಗೂ ತಿಳಿಸದೆ ಮಾಡಿದ್ದೂ ಆಕ್ಷೇಪಾರ್ಹ ಎಂದು ವಾದ ಮಂಡಿಸಿದರು.
  ನೀರಿನ ಸಂಪರ್ಕ ಕಡಿತ ವಿಚಾರಕ್ಕೆ ಸಂಬಂಧಿಸಿ ೧ ಸಾವಿರಕ್ಕಿಂತ ಹೆಚ್ಚು ನೀರಿನ ತೆರಿಗೆ ಬಾಕಿ ಇರಿಸಿಕೊಂಡಿರುವ ಸಂಪರ್ಕ ಕಡಿತ ಮಾಡಿ ೨ ಸಾವಿರ ಉಳಿಸಿಕೊಂಡವರನ್ನು ಬಿಟ್ಟಿದ್ದೀರಿ. ಇದು ಪಕ್ಷಪಾತ ನೀತಿ ಎಂದು ದಿನೇಶ್ ಮೂಲ್ಯ ಕೊಂಡೆಮಾರು ಅವರು ತೀವ್ರವಾಗಿ ಆಕ್ಷೇಪಿಸಿದರು. ನೀರಿನ ಪುಸ್ತಕ ತರಿಸಿ ವೇದಿಕೆಯಲ್ಲಿ ಪರಿಶೀಲನೆಯನ್ನೂ ನಡೆಸಲಾಯಿತು. ಈ ವೇಳೆ ಕೆಲಕಾಲ ಗ್ರಾಮಸಭೆ ಜಮಾಬಂದಿ ಸಭೆಯಂತೆ ಕಂಡು ಬಂತು.

  ಬೇಡಿಕೆ ಮತ್ತು ಚರ್ಚೆಗಳು :
  ಮದ್ದಡ್ಕ ತೋಟಗಾರಿಕಾ ಫಾರ್ಮ್‌ನಲ್ಲಿ ಕಾಡು ಬೆಳೆದು ಕಾಡು ಪ್ರಾಣಿಗಳು ಜೀವಿಸುತ್ತಿದೆ. ಇದನ್ನು ಇಲಾಖೆ ಗಮನಿಸಬೇಕು.
  ಓಡಿಲ್ನಾಳ ಗ್ರಾಮದಲ್ಲಿ ಕಾನೂನು ಬಾಹಿರ ದಾರಿದೀಪಗಳು ಉರಿಯುತ್ತಿದೆ. ಅದನ್ನು ತೆರವುಗೊಳಿಸಿ.
  ಕಟ್ಟಡಬೈಲು ಶಾಲೆಗೆ ಶಿಕ್ಷಕರ ಕೊರತೆ ಇದೆ ಕೂಡಲೇ ನೀಗಿಸಿ.
  ಸುಮುದಾಯ ಭವನದ ಪಕ್ಕದಲ್ಲೇ ಕೊಳಚೆ ನೀರು ಶೇಖರಣೆಯಾಗಿ ಸೊಳ್ಳೆ ಉತ್ಪಾದನಾ ಕೇಂದ್ರದಂತಾಗಿದೆ. ಆರೋಗ್ಯ ಇಲಾಖೆಯಿಂದ ಕ್ರಮ ಕೈಗೊಳ್ಳಿ.
  ಕೊಂಕೋಡಿ ಬದ್ಯಾರು ಪರಿಸರದಲ್ಲಿ ತೀವ್ರ ಲೋ ವೋಲ್ಟೇಜ್ ಸಮಸ್ಯೆ ಇದೆ. ಮೆಸ್ಕಾಂ ಇಲಾಖೆ ತಕ್ಷಣ ಸ್ಪಂದಿಸಿ.
  ಗುರುವಾಯನಕೆರೆ ಶಾಲಾ ರಸ್ತೆ ಡಾಂಬರೀಕರಣಗೊಳಿಸಿ.
  ಗುರುವಾಯನಕೆರೆ ಶಾಲೆ ಬಳಿ ಹಂಪ್ಸ್ ಅಳವಡಿಸಿ ಮಕ್ಕಳನ್ನು ಅಪಘಾತದಿಂದ ಕಾಪಾಡಿ.
  ಗುರುವಾಯನಕೆರೆ ಒತ್ತುವರಿ ತೆರವುಗೊಳಿಸಿ.
  ಗ್ರಾಮ ಸಭೆಯ ಪ್ರಚಾರಕ್ಕೆ ಮಾಡಿದ ಬ್ಯಾನರ್‌ನ ಲೆಕ್ಕ ಕೊಡಿ.

  ಬೆಳಿಗ್ಗೆ ೧೧ ಗಂಟೆಯ ಸುಮಾರಿಗೆ ಸಭೆ ಪ್ರಾರಂಭಗೊಳ್ಳುವ ಹಂತದಲ್ಲಿ ಸಾಕಷ್ಟು ಗ್ರಾಮಸ್ಥರು ಇಲ್ಲದ್ದರಿಂದ ಕೊರಂ ವಿಚಾರವೆತ್ತಿ ಸಭೆ ಹೇಗೆ ಸಿಂಧುವಾಗುತ್ತದೆ ಎಂಬ ವಾದ ನಡೆಯಿತು. ಸ್ವಲ್ಪ ಹೊತ್ತಿನಲ್ಲಿ ಮತ್ತಷ್ಟು ಮಂದಿ ಬಂದ ಬಳಿಕ ಸಭೆ ನಡೆಯಿತು. ದೀರ್ಘವಾದ ಸಭೆಯು ಮಧ್ಯಾಹ್ನ ೩ ಗಂಟೆಯವರೆಗೆ ಮುನ್ನಡೆದಾಗ ಮಾರ್ಗದರ್ಶಿ ಅಧಿಕಾರಿಗಳು ಸಭೆಯನ್ನು ಊಟದ ನಂತರಕ್ಕೆ ಮುಂದೂಡಿದರು. ಮತ್ತೆ ೩.೩೦ಕ್ಕೆ ಪ್ರಾರಂಭವಾದ ಸಭೆಯಲ್ಲಿ ಗ್ರಾಮಸ್ಥರ ಸಂಖ್ಯೆ ತೀರಾ ಕ್ಷೀಣವಾಗಿತ್ತು. ಬೆಳಗ್ಗಿನ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣರಾಗಿದ್ದವರು ಮಧ್ಯಾಹ್ನದ ನಂತರವೂ ಇದ್ದು ಚರ್ಚೆ ನಡೆಸುತ್ತಿದ್ದಾಗ ಇನ್ನಷ್ಟು ಜನ ಸಭೆಗೆ ಆಗಮಿಸಿದರು. ವಿವಿಧ ಇಲಾಖಾವಾರು ಮಾಹಿತಿಗಳು ನಡೆದು ಸಂಬಂಧಿತ ಇಲಾಖಾವಾರು ಚರ್ಚೆಗಳು ನಡೆದವು. ಕಳೆದ ಬಾರಿ ಅಪರಾಹ್ನ ಪ್ರಾರಂಭವಾದ ಸಭೆ ರಾತ್ರಿ ೮ ಗಂಟೆವರೆಗೆ ನಡೆದಿದ್ದರೆ ಈ ಬಾರಿ ಬೆಳಗ್ಗಿನಿಂದ ಸಂಜೆ ೫.೩೦ರವರೆಗೂ ಸಭೆ ನಡೆಯಿತು.

  kuvettu kasa 1

  kuvettu kasa 2 copyಕುವೆಟ್ಟು ಗ್ರಾಮದ ಮದ್ದಡ್ಕ ಬಂಡಿಮಠ ಮೈದಾನದ ಬದಿಯಲ್ಲಿ ಪ್ಲಾಸ್ಟಿಕ್ ಹಾಗೂ ಗಾಜಿನ ಚೂರು ಹಾಕುವಂತಹ ವ್ಯವಸ್ಥೆ ಗ್ರಾಮ ಪಂಚಾಯತ್ ಮಾಡಿದೆ. ಆದರೆ ಅದರಲ್ಲಿ ಪ್ಲಾಸ್ಟಿಕ್ ಅಲ್ಲದೆ ಕೊಳೆತು ಹೊದ ತ್ಯಾಜ್ಯ ವಸ್ತಗಳನ್ನು ನಾಗರಿಕರು ತಂದು ಸುರಿಯುತ್ತಿದ್ದು, ಬಾರಿ ದರ್ವಾಸನೆ ಬರುತ್ತಿದ್ದು ಮೂಗು ಮುಚ್ಚಿಕೊಂಡು ಹೊಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂದಪಟ್ಟ ಇಲಾಖೆ ಇತ್ತ ಕಡೆ ಗಮನ ಹರಿಸಿ ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ. ಚಿತ್ರ/ವರದಿ: ಮನು ಮದ್ದಡ್ಕ

    ಬೆಳ್ತಂಗಡಿ: ಇಲ್ಲಿಯ ಮೂರು ಮಾರ್ಗದ ಬಳಿಯ ವಿವಾ ಕಾಂಪ್ಲೆಕ್ಸ್‌ನಲ್ಲಿ ದೀಪಾ ಗೋಲ್ಡ್‌ನ ಮೇಲ್ಗಡೆ ಇರುವ ಡೈನಾಮಿಕ್ ಕೋಚಿಂಗ್ ಸೆಂಟರ್‌ನಲ್ಲಿ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್, ಸೇರಿದಂತೆ ಹತ್ತನೆ ತರಗತಿ, ಪಾಸಾದ ಮತ್ತು ಪ್ರಥಮ ಪಿಯುಸಿ ಪೇಲಾದ ವಿದ್ಯಾರ್ಥಿಗಳಿಗೆ ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ, ೪ ರಿಂದ ೯ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಿಲ್ಲಿಸಿರುವ ವಿದ್ಯಾರ್ಥಿಗಳಿಗೆ ನೇರವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ಅವಕಾಶವಿದ್ದು, ಅಗತ್ಯ ಕೋಚಿಂಗ್ ನೀಡಲಾಗುವುದು. ಪರೀಕ್ಷೆ ಬರೆದು ಪಾಸಾಗುವ ವಿದ್ಯಾರ್ಥಿಗಳಿಗೆ ಸರ್ಕಾರಿ ಮಾನ್ಯತೆ ಇರುವ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಸರ್ಟಿಫಿಕೇಟ್ ನೀಡಲಾಗುವುದು. ಇದಲ್ಲದೆ ಪಿ.ಯು.ಸಿ ವಿಜ್ಞಾನ, ವಾಣಿಜ್ಯ, ಕಲಾ ವಿಷಯಗಳಿಗೆ ಹೈಸ್ಕೂಲ್ ತರಗತಿಯ ಎಲ್ಲಾ ವಿಷಯಗಳಿಗೆ ಬೇಕಾದ ಅಗತ್ಯ ತರಬೇತಿಯ ಲಭ್ಯವಿರುವುದೆಂದು ಪ್ರಕಟಣೆ ತಿಳಿಸಿದೆ.

   ಹೌದು ಒಂದು ಮೂಲದಿಂದ ಯೋಚಿಸಿದಾರೇ ಆಗೆ ಕಣ್ಣರೇ ಕಾಣುತ್ತಿದೆ.ನಮ್ಮ ನೆರಿಯಾದ ಈಗಿನ ಪರಿಸ್ಥಿತಿ!!!….?
  ಒಂದು ಕಾಲವಿತ್ತು ನೆರಿಯಾ ಎಂದಾಗ ಬಾಯಿಗೆ ಬರೋ ಮಾತು, ಒಂದು ಸುಂದರ ಪರಿಸರವನ್ನು ಹೊಂದಿರುವ ಪ್ರದೇಶ ಮತ್ತು ಇಡೀ ಬೆಳ್ತಂಗಡಿಯಲ್ಲೆ ಆತೀ ದೊಡ್ಡ ಗ್ರಾಮವೆಂದು. ನೀರು, ಸಂಚಾರ, ಕೃಷಿ, ಯುವಸಂಪತ್ತು, ಮಹಿಳಾಬಿವೃದ್ದಿ ಮೂರು ಧರ್ಮದವರನ್ನು ಒಂದೇ ತಕ್ಕಡಿಯಲ್ಲಿ ತೂಗಿ ಹಾಕಿದ ಗಾಂಧಿಜೀ ಕನಸ್ಸಿನ ರಾಮ ರಾಜ್ಯ ವೆಂದೇ ಪ್ರಚಲಿತವಾಗಿತ್ತು.
  ನೆರಿಯಾ ಏಕೆ ಬಲಿಪಾಶು ಆಗುತ್ತಿದೆ!!?
  *ಬೃಹತ್ ಕಂಪೆನಿಗಳ ಸ್ಥಾಪನೆ-ಹೌದು ಕೃಷಿಯನ್ನೆ ನಂಬಿ ಬದುಕಿರುವ ನೆರಿಯಾದ ಜನರಿಗೆ ಬರಸಿಡಿಲಿನಂತೆ ಬಂದು ಶಾಕ್ ನಿಡ್ಡಿದ್ದ್ ಹೆಚ್‌ಪಿಸಿಎಲ್, ಎಂಆರ್‌ಪಿಎಲ್, ಬರೋಕಾದಂತಹ ಬೃಹತ್ ಕಂಪೆನಿಗಳು, ಇದರ ಆಗಮನ ಆದ ಕೆಲವೇ ತಿಂಗಳಲ್ಲಿ ನೆರಿಯದ ಚಿತ್ರಾಣವೇ ಬದಲಾಯಿತು,ಒಂದು ಕಡೆಯಲ್ಲಿ ಕೃಷಿಕಾನ ಅಷ್ಟು ಜಾಗ ಹೊಗುತ್ತೆ ಇಷ್ಟು ಜಾಗ ಹೊಗುತ್ತೆ ಎಂದು ಕೆಲ ಜನರು ಕಟ್ಟೆಯಲ್ಲಿ ಕೂತುಕೊಂಡು ಮಾತಡಿಕೊಂಡರೇ,ಕೆಲವರು ಅದನ್ನೆ ಅಪಹಾಸ್ಯ ಮಾಡಿ ನಗುತ್ತಿರುವುದು ಕಂಡುಬರುತ್ತಿತ್ತು.ಆದರೆ ಇದ್ದೆಲ್ಲಾದರ ನಡುವೆ ಬೆವರು ಸುರಿಸಿ ದುಡಿದ ರೈತನ ಜಮೀನನ್ನು ನಾಶ ಮಾಡಿಯೇ ಬಿಟ್ಟಿತ್ತು ಕಂಪೆನಿಯ ಬೃಹತ್ ಗಾತ್ರದ ಇಟಾಚಿಗಳು.
  ಕೊನೆಗೂ ಗೆಲ್ಲಾಲಾಗದೇ ರೈತ ಕಣ್ಣಿರು ಸುರಿಸಿದಾರೇ, ಒಂದು ಹಾದಿಯಲ್ಲಿ ಪರಿಸರ ಪ್ರೇಮಿ ನೆರಿಯ ಬಲಿಪಶು ಆದಾದ್ದು ಇಲ್ಲಿ ನಾವು ಕಹಿನೆನಪನ್ನು ನೆನಪಿಸಿಕೊಳ್ಳಬಹುದು.
  *ನಿಮಗೆ ಡಾಮರು ರಸ್ತೆ ಮಾಡಿಕೊಡುತ್ತೇವೆ ಎಂದು ಬಡವರನ್ನು ಬಲಿಪಶು ಮಾಡಿದ ರಾಜಕಾರಣಿಗಳು-
  ಒಂದು ದಿನ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತಿರುವಾಗ ನೆರಿಯಾ ಗ್ರಾಮದ ಲೈನ್ ಬಳಿ ನನಗೆ ಹೂವಿನಿಂದ ಸಿಂಗಾರಿಸಿ, ಶಾಮಿಯಾನ್ ಹಾಕಿ ನಿರ್ಮಿಸಲಾದ ಪುಲ್ಲಾಜೆ ಕಡೆ ಸಾಗುವ ರಸ್ತೆಯ ಪ್ರವೇಶ ದ್ವಾರ,ಇದೆನೋ ಕಂಪೆನಿಯಾ ಕಾರ್ಯಕ್ರಮವೆಂದು ಸುಮ್ಮನಾದೇ, ಅದರೇ ಕೊನೆಗೆ ತಿಳಿಯಿತು ಇದು ಪುಲ್ಲಾಜೆ ಕಡೆ ಹೊಸ ರಸ್ತೆ ಡಾಮರಿಕರಣದ ಭೂಮಿ ಪೂಜೆಗೆ ನಿರ್ಮಿಸಿದ ತಾತ್ಕಲಿಕ ಕನಸ್ಸಿನ ಅರಮನೆಯೆಂದು.ಆಂದಿನ ಕಾರ್ಯಕ್ರಮದಲ್ಲಿ ರಾಜಕಾರಣಿಗಳು ಸುಳ್ಳು ಬರವಸೆ ನೀಡಿ ಬಡವರ ಜೊತೆ ನೆರಿಯ ಗ್ರಾಮದ ಒಂದು ಪ್ರದೇಶವನ್ನು ಬಲಿಪಶು ಮಾಡಿರುವುದು ನಾವು ಇಂದು ನೆನಪಿಸಿಕೊಳ್ಳಬಹುದು.
  *ಕೊಲೋಡಿ ಅಭಿವೃದ್ದಿ ಮಾಡುತ್ತೇವೆ.
  ತೀರಾ ಇತ್ತಿಚೆಗೆ ಅಧಿಕಾರಕ್ಕೆ ಬಂದ ಹೊಸ ಆಡಳಿತ ಚುನಾವಣಾ ಸಮಯದಲ್ಲಿ ಕೊಲೋಡಿ ಜನರನ್ನು ಒಲೈಸಿ ಅಧಿಕಾರ ಗಿಟ್ಟಿಸಿಕೊಂಡಿತ್ತು,ಕೊಲೋಡಿ ಜನ ಅಭಿವೃಧ್ದಿಯನ್ನು ಹಾರೈಸಿ ಹೊಸ ಸರಕಾರವನ್ನು ಗದ್ದುಗೆ ತಂದರೇ ಅವರ ಕನಸ್ಸನ್ನು ಕನಸ್ಸಾಗಿಯೇ ಉಳಿಸಿ ,ಸಮಸ್ಯಗೆ ಪರಿಹಾರವಿಲ್ಲದ ರೋಗದಂತ ಕಾರ್ಯನಿರ್ವಹಿಸುತ್ತಿದೆ.
  ಈ ಮುಖಾಂತರ ನೆರಿಯಾದ ಕೋಲೋಡಿಯನ್ನು ಬಲಿಪಶು ಮಾಡಲಾಗುತ್ತಿದೆಯ ಎಂದೆನ್ನಿಸುತ್ತಿದೆ.
  *ಡಾಕ್ಟರೇ ಇಲ್ಲಾದೆ ಬಲಿಪಶುವಾಯಿತ್ತು. ನೆರಿಯದ ಸರಕಾರಿ ಆಸ್ಪತ್ರೆ-ದಿನ ನೂರಾರು ರೋಗಿಗಳಿಗೆ ಆಶಾಕಿರಣವಾಗಿರುವ ನೆರಿಯಾ ಸ. ಆಸ್ಪತ್ರೆ ಇಂದು ರೋಗಿಗಳಿದ್ದರು ಡಾಕ್ಟರ್ ಇಲ್ಲದೇ ಚಾಲಕನಿಲ್ಲಾದ ಬಸ್ಸಿನಂತಾಗಿದೆ ನಮ್ಮ ನೆರಿಯಾದ ಆಸ್ಪತ್ರೆ.
  * ಡ್ಯಾಮ್ ಮತ್ತು ಬೃಹತ್ ವಿದ್ಯುತ್ ತಂತಿಯಿಂದ ಬಲಿಪಶುವಾಯಿತ್ತು ಪರಿಸರ, ಕೃಷಿ-
  ಡ್ಯಾಮ್,ವಿದ್ಯುತ್ ಲೈನ್ ಮುಂತಾದ ಬೃಹತ್ ಯೋಜನೆಯಿಂದ ನೆರಿಯಾದ ಪರಿಸರದ ಜೊತೆ ಕೃಷಿಗು ಮಹತ್ತರವಾದ ಒಡೆತ ಬಿತ್ತು.
  *ಗ್ರಾಮವನ್ನು ಗಾಸಿಗೊಳಿಸಿದ ಪುಷ್ಪಗಿರಿ ಯೋಜನೆ-
  ಪುಷ್ಪಗಿರಿ ಯೋಜನೆ ಎಂದರೇ ಸಾಕು ನೆರಿಯದಲ್ಲಿ ಕೇಳಿಬರುವ ಮಾತು ಪಿಲಿ,ಆನೆ,ಸಿಂಹ ಬರ್ಪುಂಡೂಗೆ ಮಾರಾಯ ಎಂಬಾ ಸ್ವಾತಂತ್ರ್ಯ ದೇಶದ ಹೆದರಿಕೆಯ ಮಾತು.ಕಡೆಯಾದಾಗಿ ಜನರಲ್ಲಿ ಮುಡಿದ ಗೊಂದಲವು ಇದೆ ಇನ್ನೇನು ಈ ಯೋಜನೆಯ ಮುಖಾಂತರ ಇಡೀ ನೆರಿಯವನ್ನು ಬಲಿಪಶು ಮಾಡುತ್ತಾದೆ ಎಂದು.
  ಏನೇ ಆಗಲೀ ಸಂಪೂರ್ಣ ನೆರಿಯ ಬಲಿಪಶು ಆಗುವ ಮೊದಲು ನಾವು ಎಚ್ಚೆತ್ತು ಕೊಂಡರೇ ಒಳ್ಳೆದು ಎನ್ನುವುದು ನಮ್ಮ ಚಿಕ್ಕ ಅನಿಸಿಕೆ. -ಮಹೇಶ್ ಗೌಡ ಅತ್ರೋಡಿ

  munduru darmika shabe copy ಮುಂಡೂರು : ಇಂದಿನ ಆಧುನಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಶ್ರೀಮಂತಿಕೆ ಇದ್ದರೆ ಏನನ್ನು ಬೇಕಾದರೂ ಪಡೆಯಬಹುದು ಎಂದರೇ ಅದು ತಪ್ಪು ಕಲ್ಪನೆ, ಜೀವನ ಮಾಡಲು ಆರೋಗ್ಯ, ನೆಮ್ಮದಿ ಮುಖ್ಯ, ಇದನ್ನು ಎಷ್ಟೇ ಐಶ್ವರ್ಯ ಇದ್ದರು ಕೊಂಡುಕೊಳ್ಳಲು ಸಾಧ್ಯವಿಲ್ಲ, ಅ!ದಕ್ಕೆ ಸದಾ ಭಗವಂತನ ಸ್ಮರಣೆ ಮಾಡಿ, ಶ್ರದ್ಧಾ ಭಕ್ತಿಯಿಂದ ಭಜನೆಯನ್ನು ಮಾಡಿ ಶುದ್ಧ ಮನಸ್ಸಿನ ಭಕ್ತಿಯಿಂದ ಪೂಜಿಸಿದರೆ ಸಾಧ್ಯವಿದೆ ಎಂದು ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
  ಅವರು ಎ.೨೨ ರಂದು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡೂರು ಇದರ ಪ್ರತಿಷ್ಠಾ ವರ್ಧಂತ್ಯುತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
  ಹಿಂದೂ ಸಮಾಜದ ಯೋಚನೆ ಏನೆಂದರೆ ನಮಗೆ ನಮ್ಮ ಚಿಂತನೆ ಇಲ್ಲಾ, ಬೇರೆಯವರ ಚಿಂತೆ, ಜೀವನದಲ್ಲಿ ಮದ ಮತ್ಸರವನ್ನು ಬಿಟ್ಟು, ಸನ್ಮಾರ್ಗದಲ್ಲಿ ನಡೆಯುವುದನ್ನು ಕಲಿಯಬೇಕು, ಜೀವನದಲ್ಲಿ ದೊಡ್ಡ ಪುಣ್ಯದ ಕೆಲಸವೆನೆಂದರೆ ಕಷ್ಟ ಕಾಲದಲ್ಲಿ ಕೈಚಾಚಿ ಸಹಾಯ ಮಾಡಿದ ಅಪತ್ಭಾಂದವರನ್ನು ಎಂದಿಗೂ ಮರೆಯಬೇಡಿ ಇದಕ್ಕೆ ದೇವರ ದಯೆ ಕೂಡ ಇದೆ ಎಂದರು.
  ಮುಖ್ಯ ಅತಿಥಿ ನೆಲೆಯಲ್ಲಿ ಬೆಂಗಳೂರು ಹೈಕೋರ್ಟು ನ್ಯಾಯವಾದಿ ಹರೀಶ್ ಪೂಂಜ ಮಾತನಾಡಿ ಗ್ರಾಮದಲ್ಲಿ ದೇವಸ್ಥಾನವೊಂದು ಜೀರ್ಣೋದ್ಧಾರ ಗೊಂಡು ಅಭಿವೃದ್ಧಿ ಹೊಂದಿದರೆ ಇಡೀ ಗ್ರಾಮವೇ ಅಭಿವೃದ್ಧಿಯಾದಂತೆ, ಹೇಗೆಂದರೆ ಗ್ರಾಮದಲ್ಲಿ ಶಾಂತಿ ನೆಲೆಸಿ, ಕಷ್ಟ ಕಾರ್ಪಣ್ಯಗಳು ದೂರವಾಗಿ ಉತ್ತಮವಾದ ಜೀವನ ನಡೆಸಲು ಅವಕಾಶದ ಜೊತೆಗೆ ನಾವು ಅಭಿವೃದ್ಧಿ ಹೊಂದುತ್ತೇವೆ ಎಂದರು.
  ಅಳದಂಗಡಿ ಭಾಗದ ಜಿ.ಪಂ ಸದಸ್ಯ ಶೇಖರ್ ಕುಕ್ಕೇಡಿ ಮಾತನಾಡಿ ಈ ಭಾಗದ ರಸ್ತೆ ತೀರಾ ಹದಗೆಟ್ಟಿದ್ದು, ಮುಂದಿನ ದಿನಗಳಲ್ಲಿ ರಸ್ತೆ ರಿಪೇರಿಗೆ ಸಂಪೂರ್ಣ ಸಹಕಾರ ನೀಡುತ್ತೇನೆಂದು ಭರವಸೆಯನ್ನಿತ್ತರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಡಾ| ಎಂ.ಎಂ ದಯಾಕರ್ ಭಟ್ ವಹಿಸಿ ಮಾತನಾಡಿ ಸಮಾಜದಲ್ಲಿರುವ ಬೇಧ-ಭಾವ ಎಂಬ ಪಿಡುಗನ್ನು ನಾಶ ಮಾಡಬೇಕಾದರೆ ಇಂತಹ ಧರ್ಮ ಕೇಂದ್ರಗಳಲ್ಲಿ ಭಾಗವಹಿಸುವುದರಿಂದ ಮನ ಪರಿವರ್ತನೆಯಾಗುವುದರಿಂದ ಸಾಧ್ಯ ಎಂದರು.
  ವೇದಿಕೆಯಲ್ಲಿ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ರಾಜೀವ ಸಾಲ್ಯಾನ್, ತಾ.ಪಂ ಸದಸ್ಯೆ ಜಯಶೀಲಾ ಕುಶಾಲಪ್ಪ ಗೌಡ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್ ಕುಮಾರ್ ನಡಕ್ಕರ, ಆಡಳಿತಾಧಿಕಾರಿ ಕೆ. ಮೋಹನ ಬಂಗೇರ, ಅಧ್ಯಕ್ಷ ಚಾಮರಾಜ ಸೇಮಿತ, ಅರ್ಚಕರಾದ ಎಂ. ಅರವಿಂದ್ ಭಟ್, ಕಾರ್ಯದರ್ಶಿ ಜಿನ್ನಪ್ಪ ಬಂಗೇರ, ಜಗನ್ನಾಥ ಆಚಾರ್ಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಳೆದ ೩೧ ವರ್ಷದಿಂದ ರಸ್ತೆ ಸಾರಿಗೆ ನಿಗಮದಲ್ಲಿ ಬಸ್ ಚಾಲಕರಾಗಿ ಪ್ರಮಾಣಿಕ ಸೇವೆ ಸಲ್ಲಿಸಿದ ಮುಂಡೂರಿನ ಆನಂದ ಮೂಲ್ಯರಿಗೆ ಮುಖ್ಯಮಂತ್ರಿಯವರ ಚಿನ್ನದ ಪದಕ ಪಡೆದ ಸಂದರ್ಭದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಡೂರಿನ ವತಿಯಿಂದ ಇವರನ್ನು ಸನ್ಮಾನಿಸ ಲಾಯಿತು.
  ಆಶಿಕಾ ಪ್ರಾರ್ಥನೆ ಹಾಡಿ, ರಾಜೀವ್ ಸಾಲ್ಯಾನ್ ಸ್ವಾಗತಿಸಿ, ಶ್ರೀಮತಿ ಸುಧಾಮಣಿ ಕಾರ್ಯಕ್ರಮ ನಿರೂಪಿಸಿ, ಮೋಹನ್ ಬಂಗೇರ ಧನ್ಯವಾದವಿತ್ತರು.
  ಬೆಳಿಗ್ಗೆ ಗಣಪತಿ ಹೋಮ, ಚಂಡಿಕಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ದೇವರ ಬಲಿ ಉತ್ಸವ, ಸಾರ್ವಜನಿಕ ಅನ್ನಸಂತರ್ಪಣೆ ನಡೆದು, ಸಂಜೆ ಸ್ಥಳೀಯ ಮಕ್ಕಳಿಂದ, ಸಾರ್ವಜನಿಕರಿಂದ, ವಿವಿಧ ಸಂಘ-ಸಂಸ್ಥೆಯಿಂದ ವಿವಿಧ ಸಾಂಸ್ಕೃತಿಕ ವಿನೋದಾವಳಿಗಳು ನಡೆದು, ದೇವರಿಗೆ ರಂಗಪೂಜೆ, ಗಣಪತಿ ದೇವರಿಗೆ ಮೂಡಪ್ಪ ಸೇವೆ ನಡೆದು, ರಾತ್ರಿ ಮುಂಡೂರು ಶಾರದಾಂಬಾ ಯುವಕ ಮಂಡಲದ ಸದಸ್ಯರಿಂದ ವಾಸುದೇವ ಲಾಲ ವಿರಚಿತ ತುಳುನಾಟಕ ಅಮೃತ ಮಲ್ಲಿಗೆ ನಡೆಯಿತು.

  aladangady bsnl cable repair copy ಬೆಳ್ತಂಗಡಿ: ಗ್ರಾಮ ಪಂಚಾಯತಿ ಕಾಮಗಾರಿಯಿಂದಾಗಿ ಬಿಎಸ್‌ಎನ್‌ಎಲ್ ಗ್ರಾಹಕರು ಹಾಗೂ ಸಿಬ್ಬಂದಿಗಳು ಪರದಾಡುವಂತ ಸ್ಥಿತಿ ಅಳದಂಗಡಿಯ ಪೇಟೆಯಲ್ಲಿ ನಿರ್ಮಾಣವಾಗಿದೆ.
  ಅಳದಂಗಡಿ ಗ್ರಾ. ಪಂಚಾಯತು ವತಿಯಿಂದ ನೀರಿನ ಪೈಪ್ ಅಳವಡಿಸಲು ಎ.೨೪ ರಂದು ರಾತ್ರೋರಾತ್ರಿ ಜೆಸಿಬಿಯ ಮೂಲಕ ವಾಣಿಜ್ಯ ಸಂಕೀರ್ಣವೊಂದರ ಸುತ್ತ ಪೈಪ್ ಲೈನ್ ಹಾಕಲು ಸುಮಾರು ಎರಡು ಅಡಿ ಆಳದ ಚರಂಡಿಯನ್ನು ಅಗೆಯಿಸಿತು. ಅಗೆತ ಒಳ್ಳೆಯ ಉದ್ದೇಶಕ್ಕಾದರೂ ಅದರಿಂದ ಬಿಎಸ್‌ಎನ್‌ಎಲ್‌ನ ಕೇಬಲ್‌ಗಳು ಮಾತ್ರ ಪುಡಿಪುಡಿಯಾದವು. ಬಿಎಸ್‌ಎನ್‌ಎಲ್ ಸಿಬ್ಬಂದಿಗಳಿಗೆ ಯಾವುದೇ ಪೂರ್ವ ಸೂಚನೆ ನೀಡದೆ ಏಕಾಏಕಿ ಪಂಚಾಯತು ಆಡಳಿತ ಈ ರೀತಿ ಮಾಡಿರುವುದು ದೂರವಾಣಿ ಗ್ರಾಹಕರಲ್ಲಿ ಆಕ್ರೋಶವನ್ನುಂಟು ಮಾಡಿದೆ.
  ಜೆಸಿಬಿ ಚಾಲಕ ಫೋನ್‌ನ ಕೇಬಲ್ ಕಾಣುತ್ತಿದ್ದರೂ ಯಾವುದೇ ಕಾಳಜಿ ವಹಿಸದೆ ಅಗೆದದ್ದು ನಾಗರಿಕರಲ್ಲಿ ಬೇಸರವನ್ನುಂಟು ಮಾಡಿದೆ. ದೂರವಾಣಿ ತಂತಿಗಳು ಜೆಸಿಬಿಯ ಅಗೆತದಿಂದಾಗಿ ತುಂಡಾಗಿವೆ. ಸೂಕ್ಷ್ಮವಾದ ತಂತಿಗಳನ್ನು ಸಮರ್ಪಕವಾಗಿ ಮತ್ತೆ ಜೋಡಿಸುವುದು ಹರಸಾಹಸವೇ. ಆದರೂ ಉರಿಬಿಸಿಲಲ್ಲಿ ಬಿಎಸ್‌ಎನ್‌ಎಲ್‌ನ ಸಿಬ್ಬಂದಿಗಳಾದ ನಾರಾಯಣ, ಧರ್ಣಪ್ಪ ಅವರ ತಂಡ ಕಳೆದೆರಡು ದಿನಗಳಿಂದ ತಂತಿಗಳನ್ನು ಜೋಡಿಸುವಲ್ಲಿ ನಿರತರಾಗಿದ್ದಾರೆ. ಅಳದಂಗಡಿ ಸುತ್ತಮುತ್ತ ಕಳೆದೆರಡು ದಿನಗಳಿಂದ ದೂರವಾಣಿಗಳು ಸ್ತಬ್ದವಾಗಿವೆ.

  Shreedhara rao K copyಬೆಳ್ತಂಗಡಿ : ಬಾಲಕರ ಬಾಲಮಂದಿರ ಬೊಂದೇಲ್ ಮಂಗಳೂರು ಇದರ ವ್ಯವಸ್ಥಾಪಕ ಸಮಿತಿಗೆ ಶ್ರೀಧರ ಭಟ್ ಕಳೆಂಜ ಆಯ್ಕೆಯಾಗಿದ್ದಾರೆ. ಇವರು ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಮಂಗಳೂರು ಇದರ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  hindu 1

  sdm 2

  sdm 1

  kaniyooru grama sabhe copy ಪದ್ಮುಂಜ ಇಲ್ಲಿಯ ಕಣಿಯೂರು ಗ್ರಾಮ ಪಂಚಾಯತಿಯಲ್ಲಿ ರಾಷ್ಟ್ರೀಯ ಪಂಚಾಯತ್‌ರಾಜ್ ದಿವಸ್ ಆಚರಿಸುವ ಬಗ್ಗೆ ವಿಶೇಷ ಗ್ರಾಮ ಸಭೆಯು ಕಣಿಯೂರು ಗ್ರಾಮ ಪಂಚಾಯತಿಯ ಪಂ. ಅಧ್ಯಕ್ಷರಾದ ಸುನಿಲ್ ಸಾಲಿಯಾನ್‌ರವರ ಅಧ್ಯಕ್ಷತೆಯಲ್ಲಿ ಜರುಗಿತು. ಉಪಾಧ್ಯಕ್ಷೆ ಆಶಾ ಪಂ. ಸದಸ್ಯರುಗಳು ಉಪಸ್ಥಿತರಿದ್ದರು.
  ಪಂ. ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್ ಕೆ. ಸ್ವಾಗತಿಸಿ, ವಿಶೇಷ ಗ್ರಾಮ ಸಭೆಯ ಮಾಹಿತಿ ನೀಡಿದರು. ಅಧ್ಯಕ್ಷ ಸುನಿಲ್ ಸಾಲಿಯಾನ್ ರವರು ಮಾತನಾಡಿ, ವಿಶೇಷ ಗ್ರಾಮ ಸಭೆಯ ಮುಖ್ಯ ಉದ್ದೇಶ ಗ್ರಾಮದ ಅಭಿವೃದ್ಧಿ ಗ್ರಾಮ ಅಭಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿ ಹೊಂದಿದಂತೆ.
  ಗ್ರಾಮಸ್ಥರು ಪಂಚಾಯತಿಯೊಂದಿಗೆ ಕೈ ಜೋಡಿಸಿದರೆ ಗ್ರಾಮದ ಅಭಿವೃದ್ಧಿಗೆ ನಾಂದಿಯಾಗುತ್ತದೆ ಎಂದರು. ಬೆಳ್ತಂಗಡಿ ಶಿಕ್ಷಣ ಇಲಾಖೆಯಿಂದ ನೋಡಲ್ ಅಧಿಕಾರಿಯವರು ಆಗಮಿಸಿದ್ದರು.

  Dana sagata vahana palti copy ಚಾರ್ಮಾಡಿ : ಇನ್ನೂ ನೋಂದಣಿಯಾಗಿರದ ಟೆಂಪೋ ಟ್ರಾವೆಲರ್ ವಾಹನವೊಂದು ಚಾರ್ಮಾಡಿ ಕಣಿವೆ ರಸ್ತೆಯ ೧ನೇ ತಿರುವಿನಲ್ಲಿ ಮಗುಚಿಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅದರೊಳಗಿದ್ದ ೭ ಜಾನುವಾರುಗಳು ದಾರುಣವಾಗಿ ಮೃತಪಟ್ಟಿದೆ.
  ಇದೊಂದು ಜಾನುವಾರು ಅಕ್ರಮ ಸಾಗಾಟದ ಕೃತ್ಯದ ಇನ್ನೊಂದು ಮುಖ ಎಂಬುದು ಈ ಅಪಘಾತದಿಂದ ಬಯಲಾಗಿದ್ದು ವಾಹನದಲ್ಲಿದ್ದವರು ಜಾನುವಾರು ಮತ್ತು ವಾಹನವನ್ನು ತ್ಯಜಿಸಿ ಕಾಲ್ಕಿತ್ತಿದ್ದಾರೆ. ಅಪಘಾತದ ವಿಚಾರ ತಿಳಿದ ನಾಗರಿಕರು ಧರ್ಮಸ್ಥಳ ಠಾಣೆಗೆ ಮಾಹಿತಿ ನೀಡಿದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಸಾರ್ವಜನಿಕರ ನೆರವಿನೊಂದಿಗೆ ವಾಹನದ ಕದ ತೆರೆದಾಗ ಅದರೊಳಗಿದ್ದ ೬ ಜಾನುವಾರುಗಳು ಸಾವನ್ನಪ್ಪಿದ್ದು ವು. ಒಂದಕ್ಕೆ ಗಾಯವಾಗಿದ್ದು ಇನ್ನೂ ೩ ಅಪಾಯದಿಂದ ಪಾರಾಗಿದೆ.
  ಸದ್ರಿ ವಾಹನಕ್ಕೆ ಇನ್ನೂ ನೊಂದಾವಣೆಯಾಗಿರದ ಕಾರಣ ನಂಬರ್ ಪ್ಲೇಟ್ ಇರಲಿಲ್ಲ. ಟೆಂಪೋದ ಒಳಗಿನ ಆಸನಗಳನ್ನು ತೆಗೆದು ಕಿಟಕಿಯ ಭಾಗಕ್ಕೆ ಸ್ಕ್ರೀನ್‌ಗಳನ್ನು ಅಳವಡಿಸಲಾಗಿತ್ತು. ಚಿಕ್ಕಮಗಳೂರು ಕಡೆಯಿಂದ ಮಂಗಳೂರಿಗೆ ಜಾನುವಾರುಗಳನ್ನು ಸಾಗಾಟ ಮಾಡುವ ವ್ಯವಸ್ಥಿತಿ ಸಂಚಿನ ಭಾಗ ಇದಾಗಿರಬಹುದೆಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ.

   ಲಾಯಿಲ: ಉತ್ಸಾಹಿ ಯುವಕ ಮಂಡಲ (ರಿ) ಲಾಲ ಮತ್ತು ವರುಣ್ ಟ್ರಾವೆಲ್ಸ್, ಬೆಳ್ತಂಗಡಿ ಇದರ ಆಶ್ರಯದಲ್ಲಿ ದ.ಕ., ಉಡುಪಿ, ಕೊಡಗು ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಪುರುಷರ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಉತ್ಸಾಹಿ-ವರುಣ್ ಟ್ರೋಪಿ- ೨೦೧೬ ಹಾಗೂ ಬೃಹತ್ ರಕ್ತದಾನ ಶಿಬಿರ ಮತ್ತು ಸಾಂಸ್ಕೃತಿಕ ವೈಭವವು ಲಾಯಿಲ ಪಡ್ಲಾಡಿ ಶಾಲಾ ವಠಾರದಲ್ಲಿ ಎ. ೩೦ರಂದು ನಡೆಯಲಾಗುವುದು.
  ಬೃಹತ್ ರಕ್ತದಾನ ಶಿಬಿರದ ಉದ್ಘಾಟನೆಯನ್ನು ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ನೆರವೇರಿಸಲಿರುವರು. ಅಧ್ಯಕ್ಷತೆಯನ್ನು ಲಾಯಿಲ ಗ್ರಾ.ಪಂ. ಅಧ್ಯಕ್ಷ ಶ್ರೀಮತಿ ವೀಣಾ ರಾವ್ ವಹಿಸಲಿರುವರು.
  ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಮೇ| ಜ| ಎಂ.ವಿ. ಭಟ್, ಲಾಯಿಲ ಜಿ.ಪಂ. ಸದಸ್ಯೆ ಸೌಮ್ಯಲತಾ ಜಯಂತ ಗೌಡ, ಎಸ್.ಕೆ.ಡಿ.ಆರ್.ಡಿ.ಪಿ ಮೇಲ್ವಿಚಾರಕ ಸುರೇಶ್ ಹಾಗೂ ಗೌರವ ಉಪಸ್ಥಿತಿಯಲ್ಲಿ ಲಾಯಿಲ ಗ್ರಾ.ಪಂ. ಸದಸ್ಯ ಕೃಷ್ಣಪ್ಪ ಪೂಜಾರಿ, ಲಾಯಿಲ ಗ್ರಾ.ಪಂ. ಸದಸ್ಯ ಶ್ರೀಮತಿ ಅಮಿತಾ, ಲಾಲ ಗ್ರಾ.ಪಂ. ಸದಸ್ಯ ಶ್ರೀಮತಿ ಆಶಾ ಸಲ್ಡಾನ, ಪಡ್ಲಾಡಿ ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ನಿರಂಜನ್ ಜೈನ್, ಲಾಲ ಉತ್ಸಾಹಿ ಯುವಕ ಮಂಡಲ ಅಧ್ಯಕ್ಷ ಹರೀಶ್ ಎಲ್. ಉಪಸ್ಥಿತಲಿರುವರು. ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭದ ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ನೆರವೇರಿಸಲಿರುವರು. ಅಧ್ಯಕ್ಷತೆಯನ್ನು ಸುಂಗಬೆಟ್ಟು ಕ್ಷೇತ್ರ ಜಿ.ಪಂ. ಸದಸ್ಯರಾದ ತುಂಗಪ್ಪ ಬಂಗೇರ ವಹಿಸಲಿರುವರು.

  Somanthadka gana thyajya prathibhatane copy ಮುಂಡಾಜೆ : ಮುಂಡಾಜೆ ಗ್ರಾಮದ ಕೂಳೂರು – ಕುರುಡ್ಯ ಎಂಬಲ್ಲಿ ರೂ.೨೦ಲಕ್ಷ ವೆಚ್ಚದಲ್ಲಿ ಗ್ರಾಮ ಪಂಚಾಯತು ವತಿಯಿಂದ ನಿರ್ಮಿಸಲು ಉದ್ದೇಶಿಸಲಾದ ತ್ಯಾಜ್ಯ ವಿಲೇವಾರಿ ಘಟಕವನ್ನು ವಿರೋಧಿಸಿ ಆ ಭಾಗದ ನಾಗರಿಕರು ಎ.೨೬ರಂದು ಸೋಮಂತಡ್ಕದಲ್ಲಿ ಪ್ರತಿಭಟನೆ ನಡೆಸಿ, ನಂತರ ಸದ್ರಿ ಘಟಕವನ್ನು ಜನವಸತಿ ಇಲ್ಲದಿರುವ ದೂರದ ಪ್ರದೇಶದಲ್ಲಿ ಸ್ಥಾಪಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯತು ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
  ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಹಿರಿಯ ಸಹಕಾರಿ ಎನ್.ಎಸ್. ಗೋಖಲೆ ಅವರು ಮಾತನಾಡಿ ಕುರುಡ್ಯ ಜನವಸತಿ ಪ್ರದೇಶವಾಗಿದೆ. ಇಲ್ಲಿ ನೂರಕ್ಕೂ ಹೆಚ್ಚು ಮನೆಗಳಿವೆ, ಅಲ್ಲದೆ ದೇವಸ್ಥಾನ, ಅರೆಬಿಕ್ ಶಾಲೆ ಇದೆ. ಇಂತಹ ಪ್ರದೇಶದಲ್ಲಿ ತ್ಯಾಜ್ಯ ಘಟಕ ನಿರ್ಮಿಸುವುದು ಸರಿಯಲ್ಲ. ಇದನ್ನು ಜನವಸತಿ ಇಲ್ಲದ ದೂರದ ಪ್ರದೇಶದಲ್ಲಿ ಮಾಡಿ, ನಮ್ಮದು ಬೆಂಬಲ ಇದೆ ಎಂದು ಹೇಳಿದರು. ಈ ಘಟಕವನ್ನು ಹಿಂದಿನವರು ಮಾಡಿದ್ದಾರೆ ಎಂದು ಹೇಳುವುದು ಬೇಡ, ಅವರು ತಪ್ಪು ಮಾಡಿದ್ದರೆ ಅದನ್ನು ಸರಿಪಡಿಸಿ ಇದಕ್ಕಾಗಿ ವಿಶೇಷ ಗ್ರಾಮ ಸಭೆಯನ್ನು ಕರೆದು ಜನಾಭಿಪ್ರಾಯ ಸಂಗ್ರಹಿಸಿ ಎಂದು ಸಲಹೆಯಿತ್ತರು.
  ನ್ಯಾಯವಾದಿ ಬಿ.ಎಂ. ಭಟ್ ಅವರು ಮಾತನಾಡಿ ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಗ್ರಾಮಸ್ಥರ ತೀರ್ಮಾನವೇ ಅಂತಿಮವಾಗಿದೆ. ಜನರಿಂದ ಮತ ಪಡೆದು ಅಧಿಕಾರಕ್ಕೆ ಬಂದ ಬಳಿಕ ಜನರನ್ನು ತುಳಿಯುವ ಕೆಲಸ ಮಾಡಬಾರದು. ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ಕುರುಡ್ಯ ಪ್ರದೇಶದಲ್ಲಿ ತ್ಯಾಜ್ಯ ಘಟಕಕ್ಕೆ ಜನರ ವಿರೋಧ ಇರುವುದರಿಂದ ಗ್ರಾಮ ಸಭೆ ಅಥವಾ ವಾರ್ಡ್ ಸಭೆ ನಡೆಸಿ ಜನರ ಅಭಿಪ್ರಾಯ ಪಡೆಯಿರಿ. ಒಂದು ವೇಳೆ ಇದನ್ನು ಧಿಕ್ಕರಿಸಿ ಮುನ್ನಡೆದರೆ, ಕುರುಡ್ಯದಲ್ಲಿ ತಂದು ಹಾಕಿದ ತ್ಯಾಜ್ಯವನ್ನು ಪಂಚಾಯತದ ಎದುರು ತಂದು ಹಾಕಿ ಪ್ರತಿಭಟಿಸುವುದಾಗಿ ತಿಳಿಸಿದರು.
  ಕೆ. ಸತ್ಯನಾರಾಯಣ ಹೊಳ್ಳ ಅವರು ಮಾತನಾಡಿ ಊರಿಗೆ ಬಂದ ಮಾರಿಯನ್ನು ನಾವೆಲ್ಲರೂ ಒಟ್ಟಾಗಿ ಸೇರಿ ಊರಿನಿಂದ ಓಡಿಸಲು ಸಿದ್ಧರಾಗಿದ್ದೇವೆ ಎಂದರು. ಶ್ರೀಮತಿ ಕುಸುಮ ಕಲ್ಲಾಜೆ, ಶೇಖರ್ ಎಲ್.ಲಾಲ, ಸುಂದರಿ ಪದ್ಮುಂಜ, ದಮ್ಮಾನಂದ ಬೆಳ್ತಂಗಡಿ ಮಾತನಾಡಿ ಜನರ ವಿರೋಧದ ನಡುವೆ ಘಟಕ ನಿರ್ಮಿಸಿ ಇದರಿಂದ ಜನರ ಆರೋಗ್ಯ ಮತ್ತು ಪರಿಸರದ ಮೇಲೆ ಆಗುವ ದುಷ್ಪಾರಿಣಾಮಗಳಿಗೆ ಪಂಚಾಯತು ಜವಾಬ್ದಾರಿಯಾಗಬೇಕಾಗುತ್ತದೆ ಎಂದು ಹೇಳಿದರು.
  ನಂತರ ಮೆರವಣಿಗೆಯಲ್ಲಿ ಗ್ರಾಮ ಪಂಚಾಯತಕ್ಕೆ ತೆರಳಿ ಪಂಚಾಯತು ಅಧ್ಯಕ್ಷೆ ಶಾಲಿನಿ ವಿಜಯಕುಮಾರ್ ಮತ್ತು ಪಿಡಿಒ ಸಂಜೀವ ನಾಯ್ಕ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಗ್ರಾ.ಪಂ. ಸದಸ್ಯ ಅಬ್ದುಲ್ ಅಝೀಝ್, ಮಹಮ್ಮದ್, ಮೊದೀನ್, ಬಾಲಕೃಷ್ಣ ಶೆಟ್ಟಿ ಕುಳೂರು, ಶಿವಪ್ಪ ನಾಯ್ಕ, ಸಂತೋಷ್, ವಿಠಲ ಸುವರ್ಣ, ಸುಧೀಂದ್ರ ಭಂಡಾರಿ, ಬಾಲಕೃಷ್ಣ ಗೌಡ, ವಾಸು ಪೂಜಾರಿ, ವಿನೋದ್ ಶೆಟ್ಟಿ, ಗಣೇಶ್ ಗೌಡ, ಶಾಜಿ ಮ್ಯಾಥ್ಯು, ಕುಸುಮಾವತಿ, ಫಾತುಂಞ, ರಮ್ಲತ್, ಸರೋಜ, ಜ್ಯೋತಿ, ಬಿಪಾತುಮ, ರುಕ್ಯ, ಶಾಂತಪ್ಪ ಪೂಜಾರಿ, ಹನೀಫಾ, ಉಸ್ಮಾನ್, ರಮೇಶ್ ಆಚಾರ್ಯ, ಗಿರೀಶ್ ರೈ ಕುಳೂರು, ಮಾಧವ ಭಟ್, ನಾಗಂಡ ಶಂಕರ ಹೊಳ್ಳ ಮೊದಲಾದವರು ಭಾಗವಹಿಸಿದ್ದರು. ಸದಾಶಿವ ಮತ್ತು ವಾಸು ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಪ್ರತಿಭಟನಾ ಸಭೆಗೆ ಮೊದಲು ಸೋಮಂತ್ತಡ್ಕ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

  balanja badinade bajana ramayana sampanna copyಬಳಂಜ : ಶ್ರೀ ಶಾಸ್ತಾರ ಬ್ರಹ್ಮಲಿಂಗೇಶ್ವರ ಮತ್ತು ನಾಗಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಿರಿ ಕ್ಷೇತ್ರ ಬದಿನಡೆ ಬಳಂಜ ಇದರ ಆಶ್ರಯದಲ್ಲಿ ಕಳೆದ ಒಂದು ವಾರದಿಂದ ಸಂಪೂರ್ಣ ರಾಮಾಯಣ ಕಥಾ ಸಪ್ತಾಹ, ಭಜನಾ ಅಭ್ಯಾಸ, ನಗರ ಭಜನೆ ಕಾರ್ಯಕ್ರಮದ ಸಮಾರೋಪ ಸಮಾರಂಭವು ಎ.೨೨ರಂದು ನಡೆಯಿತು.
  ಬೆಳಿಗ್ಗೆ ದೇವರಿಗೆ ಪಾವನ ಅಬಿಷೇಕ, ದುರ್ಗಾ ನಮಸ್ಕಾರ ಪೂಜೆ, ಸಿರಿದೇವಿಗೆ ಹೂವಿನ ಪೂಜೆ, ಹರಕೆ ಸಿರಿ ಅರ್ಪಣೆ, ಭಜನಾ ಮಂಗಳೋತ್ಸವ ನಡೆದು ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಧರ್ಮದರ್ಶಿ ಜಯಸಾಲ್ಯಾನ್ ವಹಿಸಿ ಮಾತನಾಡಿ ಕಳೆದ ಒಂದು ವಾರದಿಂದ ವಿವಿಧ ಗ್ರಾಮದಿಂದ ಮಕ್ಕಳು ಬಂದು ಇಲ್ಲಿ ಕಲಿತ ಕುಣಿತ ಭಜನೆ, ನಗರ ಭಜನೆ ಹಾಗೂ ಸಂಪೂರ್ಣ ರಾಮಾಯಣದ ಬಗ್ಗೆ, ಸಂಸ್ಕಾರ, ಸಂಸ್ಕೃತಿಯ ಬಗ್ಗೆ ತಿಳಿದಿದ್ದಿರಿ, ಮುಂದಿನ ನಿಮ್ಮ ಜೀವನದಲ್ಲಿ ಪಾಲಿಸಿಕೊಂಡು ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ ಬಾಳಿ ಎಂದರು.

  hosangady gramshabe copy ವೇಣೂರು: ರಾಷ್ಟ್ರೀಯ ಪಂಚಾಯತ್‌ರಾಜ್ ದಿನಾಚರಣೆ ಅಂಗವಾಗಿ ಹೊಸಂಗಡಿ ಗ್ರಾ.ಪಂ. ಆವರಣದಲ್ಲಿ ಕರೆಯಲಾಗಿದ್ದ ಗ್ರಾಮಸಭೆಗೆ ಕಂದಾಯ ಇಲಾಖಾಧಿಕಾರಿಗಳು ಗೈರು ಹಾಜರಾಗಿ ಗ್ರಾಮಸ್ಥರ ಆಕ್ಷೇಪದ ಮೇರೆಗೆ ಶಾಸಕ ಕೆ. ವಸಂತ ಬಂಗೇರರವರು ವೇದಿಕೆಯಿಂದಲೇ ದೂರವಾಣಿ ಕರೆ ಮಾಡಿ ಬೆಳ್ತಂಗಡಿ ಉಪ ತಹಶೀಲ್ದಾರ್ ಅಬ್ದುಲ್ ಖಾದರ್‌ರವರನ್ನು ಕೆಲವೇ ನಿಮಿಷಗಳಲ್ಲಿ ಗ್ರಾಮಸಭೆಗೆ ಕರೆತಂದ ವಿದ್ಯಾಮಾನ ಹೊಸಂಗಡಿಯ ಗ್ರಾಮಸಭೆಯಲ್ಲಿ ನಡೆದಿದೆ.
  ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕರೂ ಸೇರಿದಂತೆ ಜಿಲ್ಲಾಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳು, ಶಾಸಕರು ಹಾಜರಾಗಿದ್ದರೂ ಕಂದಾಯ ಇಲಾಖೆ ಯಿಂದ ಯಾವೊಬ್ಬ ಅಧಿಕಾರಿಯೂ ಹಾಜರಾಗದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ವೇದಿಕೆಯಲ್ಲಿದ್ದ ಶಾಸಕ ಕೆ. ವಸಂತ ಬಂಗೇರರವರು ತಹಶೀಲ್ದಾರ್ ಅವರನ್ನು ಮೊಬೈಲ್ ಕರೆಯ ಮೂಲಕ ಸಂಪರ್ಕಿಸಿ ಗೈರು ಹಾಜರಾಗಿರುವುಕ್ಕೆ ತರಾಟೆಗೆ ತೆಗೆದುಕೊಂಡು ಯಾವುದೇ ನೆಪ ನೀಡದೆ ೨೦ ನಿಮಿಷದಲ್ಲಿ ಗ್ರಾಮಸಭೆಯಲ್ಲಿ ಹಾಜರಿರುವಂತೆ ಸೂಚಿಸಿದರು. ಕೆಲವೇ ನಿಮಿಷಗಳಲ್ಲಿ ಉಪ ತಹಶೀಲ್ದಾರ್ ಅಬ್ದುಲ್ ಖಾದರ್ ಸಭೆಯಲ್ಲಿ ಹಾಜರಾದರು.
  ಸಭೆಯಲ್ಲಿ ಉಪಸ್ಥಿತರಿದ್ದ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕ ಪಿ. ಮನೋಜ್ ಕುಮಾರ್ ಮಾತನಾಡಿ, ಗ್ರಾಮಸಭೆಯಂದು ಕೇವಲ ಗ್ರಾ.ಪಂ.ಗೆ ಆಗಮಿಸದೆ ನಿರಂತರವಾಗಿ ಗ್ರಾಮಸ್ಥರು ಗ್ರಾ.ಪಂ.ನ ಸಂಪರ್ಕದಲ್ಲಿರಬೇಕು. ಪಂಚಾಯತುಗೆ ಇದೀಗ ಸಾಕಷ್ಟು ಅನುದಾನಗಳು ಬರುತ್ತಿದ್ದು, ಅದನ್ನು ಉಪಯೋಗಿಸುವ ಅಧಿಕಾರ ಪಂಚಾಯತ್‌ಗೆ ಇದೆ. ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಪಂಚಾಯತ್‌ನ ಆದ್ಯ ಧ್ಯೇಯವಾಗಿರಬೇಕು ಎಂದರು. ಹೊಸಂಗಡಿ ಗ್ರಾ.ಪಂ. ಪ್ರತಿಯೊಂದು ವಿಷಯದಲ್ಲೂ ಇತರ ಪಂಚಾಯತುಗಳಿಗೆ ಮಾದರಿಯಾಗಿ ಕಾಣುತ್ತಿದೆ. ಮೂಲಭೂತ ಸೌಲಭ್ಯಗಳಾದ ರಸ್ತೆ, ಅಂಗನವಾಡಿ ಕೇಂದ್ರಗಳು ಮೇಲ್ದರ್ಜೆಗೇರಿರುವುದು ಗ್ರಾಮೀಣ ಭಾಗದಲ್ಲಿ ಇಷ್ಟೊಂದು ಅಭಿವೃದ್ಧಿ ಹೊಸಂಗಡಿ ಕಂಡು ಸಂತಸವಾಗಿದೆ ಎಂದರು.
  ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರವರು ಗ್ರಾಮ ವಿಕಾಸ ಯೋಜನೆಯ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಗ್ರಾಮ ವಿಕಾಸ ಯೋಜನೆಯಡಿ ೭೫ ಲಕ್ಷ ರೂ.ವನ್ನು ಹೊಸಂಗಡಿ ಗ್ರಾ.ಪಂ.ಗೆ ಒದಗಿಸಿದ್ದು, ತ್ವರಿತಗತಿಯಲ್ಲಿ ಕಾಮಗಾರಿಗಳು ನಡೆಯಬೇಕಿದೆ. ಹೊಸಂಗಡಿ ಗ್ರಾ.ಪಂ.ಗೆ ೧೦೦ ಮನೆಗಳನ್ನು ಒದಗಿಸಿಕೊಡುತ್ತೇನೆ. ಆದರೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಕೆಲಸ ಪಂಚಾಯತ್‌ನಿಂದ ಆಗಬೇಕು ಎಂದರು.
  ಕೋಟ್ಪಾ ಕಾಯ್ದೆಯ ಜಾರಿಯಿಂದ ಲಕ್ಷಾಂತರ ಮಂದಿ ಬಡ ಬೀಡಿ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ, ಬದಲಿ ವ್ಯವಸ್ಥೆಗೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು, ಗಣಿ ಇಲಾಖೆಯ ಅನುಮತಿಯನ್ನು ಆಯಾ ಪಂಚಾಯತ್ ಗೆ ನೀಡಬೇಕು, ಕೂಟೇಲು ರಸ್ತೆಯ ದುರಸ್ಥಿ ಕಾರ್ಯ ನಡೆಯಬೇಕು ಮುಂತಾದ ಬೇಡಿಕೆಗಳನ್ನು ಗ್ರಾಮಸ್ಥರು ಸಭೆಯ ಮುಂದಿಟ್ಟರು. ಗ್ರಾಮಸಭೆಯ ಅಧ್ಯಕ್ಷತೆಯನ್ನು ಹೊಸಂಗಡಿ ಗ್ರಾ.ಪಂ. ಅಧ್ಯಕ್ಷೆ ಹೇಮಾವಸಂತ್ ವಹಿಸಿದ್ದರು. ಸಭೆಯ ನೋಡೆಲ್ ಅಧಿಕಾರಿಯಾಗಿ ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗದ ಇಂಜಿನಿಯರ್ ಸಿ.ಆರ್. ನರೇಂದ್ರ ಸಭೆಯನ್ನು ನಡೆಸಿಕೊಟ್ಟರು. ನನ್ನ ಮನೆ-ನನ್ನ ರಸ್ತೆ ಯೋಜನೆಯಡಿ ಗಾಂದೊಟ್ಟು ರಸ್ತೆ ಸ್ವಚ್ಛತಾ ಅಭಿಯಾನ ನಡೆಯಿತು.
  ದ.ಕ. ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ ಟಿ.ಎಸ್. ಲೋಕೇಶ್, ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ತಾ.ಪಂ. ಸದಸ್ಯ ಓಬಯ್ಯ ಆರಂಬೋಡಿ, ಹೊಸಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ಲಲಿತಾ ಟಿ. ಹೆಗ್ಡೆ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

  thushar gowda copyಬೆಳ್ತಂಗಡಿ: ಝೀ ಕನ್ನಡ ಟಿ.ವಿ. ಚಾನೆಲ್ ನಲ್ಲಿ ಎ.30ರಿಂದ ಪ್ರತೀ ಶನಿವಾರ ಮತ್ತು ಆಧಿತ್ಯವಾರ ರಾತ್ರಿ 9 ಗಂಟೆಗೆ ಪ್ರಸಾರ ಆರಂಭವಾಗಲಿರುವ ಡ್ರಾಮಾ ಜೂನಿಯರ‍್ಸ್ ಕಾರ್ಯಕ್ರಮದಲ್ಲಿ ನಾಟಕ ಪ್ರದರ್ಶನ ನೀಡಲು ನಮ್ಮ ತಾಲೂಕಿನ ಬಾಲ ಪ್ರತಿಭೆ ನಿಡುಬೆ ನಿವಾಸಿ ತುಷಾರ್ ಗೌಡ ಪಯ್ಯೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ಡ್ರಾಮಾ ಜೂನಿಯರ‍್ಸ್‌ಗೆ ಆಡಿಷನ್ ನಡೆದಾಗ ಅದರಲ್ಲಿ ತುಷಾರ್ ಭಾಗವಹಿಸಿದ್ದರು. ಇದೀಗ ತುಷಾರ್‌ರವರ ತಂದೆ ವಿಜಯಕುಮಾರ್ ಪಯ್ಯೆ ಹಾಗೂ ತಾ ಶ್ರೀಮತಿ ರೂಪಾರವರಿಗೆ ಝೀ ಕನ್ನಡ ಚಾನೆಲ್‌ನಿಂದ ಸಂದೇಶ ಬಂದಿದ್ದು, ಡ್ರಾಮಾ ಜೂನಿಯರ‍್ಸ್ ಕಾರ್ಯಕ್ರಮಕ್ಕೆ ತುಷಾರ್ ಗೌಡ ಆಯ್ಕೆಯಾಗಿರುವುದಾಗಿ ತಿಳಿಸಿದ್ದಾರೆ. ತುಷಾರ್ ಬೆಳ್ತಂಗಡಿ ತಾಲೂಕು ಪಯ್ಯೆಮನೆ (ದಿಡುಪೆ) ಪದ್ಮನಾಭ ಗೌಡರ ಮೊಮ್ಮಗನಾಗಿದ್ದು ಪ್ರಸ್ತುತ ಸುಳ್ಯ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ೬ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

  munduru ananda moolya sanmana copyಮುಂಡೂರು: ಕಳೆದ 31 ವರ್ಷಗಳಿಂದ ಸುಧೀರ್ಘ ವಾಗಿ ಕರ್ನಾಟಕ ಸರಕಾರದ ರಸ್ತೆ ಸಾರಿಗೆ ನಿಗಮದಲ್ಲಿ ಬಸ್ ಚಾಲಕರಾಗಿ ಪ್ರಮಾಣಿಕವಾಗಿ ಸೇವೆ ಸಲ್ಲಿಸಿದ ಮುಂಡೂರಿನ ಆನಂದ ಮೂಲ್ಯರವರು ಕರ್ನಾಟಕ ಸರಕಾರದಿಂದ ಮುಖ್ಯಮಂತ್ರಿ ಯವರಿಂದ ಚಿನ್ನದ ಪದಕವನ್ನು ಪಡೆದಿದ್ದು, ಊರಿಗೆ ಕೀರ್ತಿಯನ್ನು ತಂದ ಸಾಧಕರಿಗೆ ಮುಂಡೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಎ.೨೨ ರಂದು ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರನ್ನು ದೇವಸ್ಥಾನದ ವತಿಯಿಂದ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ, ಡಾ| ಎಂ.ಎಂ ದಯಾಕರ್ ಭಟ್, ಜಿ.ಪಂ ಸದಸ್ಯ ಶೇಖರ್ ಕುಕ್ಕೇಡಿ, ತಾ.ಪಂ ಸದಸ್ಯೆ ಜಯಶೀಲಾ ಕುಶಾಲಪ್ಪ ಗೌಡ, ಅಭಿವೃದ್ಧಿ ಸಮಿತಿ ಸದಸ್ಯ ಮಹೇಶ್ ಕುಮಾರ್ ನಡಕ್ಕರ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ರಾಜೀವ ಸಾಲ್ಯಾನ್, ಆಡಳಿತಾಧಿಕಾರಿ ಮೋಹನ್ ಬಂಗೇರ, ಚಾಮರಾಜ್, ಎಂ ಅರವಿಂದ ಭಟ್, ಜಿನ್ನಪ್ಪ ಬಂಗೇರ, ಜಗನ್ನಾಥ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

  Ravindra M copyಬೆಳ್ತಂಗಡಿ : ಉಪ್ಪಿನಂಗಡಿ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿದ್ದ ರವೀಂದ್ರ ಎಂ. ಅವರು ಇದೀಗ ಹೆಡ್‌ಕಾನ್ಸ್‌ಟೇಬಲ್ ಆಗಿ ಪದೋನ್ನತಿಗೊಂಡು ಧರ್ಮಸ್ಥಳ ನೂತನ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಇಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
  ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಎರ್ಮೆಕ್ಕಾರು ನಿವಾಸಿ ದಿ. ಚಂದು ನಾಯರ್ ಮತ್ತು ಕಾತ್ಯಾಯಿನಿ ದಂಪತಿ ಪುತ್ರರಾಗಿರುವ ರವೀಂದ್ರ ಅವರು 20 ವರ್ಷಗಳ ಹಿಂದೆ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡು ಮಂಗಳೂರು ಸಂಚಾರಿ ಠಾಣೆ, ವೇಣೂರು ಠಾಣೆ ಮತ್ತು ಉಪ್ಪಿನಂಗಡಿ ಠಾಣೆಯಲ್ಲಿ ಸೇವೆ ಸಲ್ಲಿಸಿ 2 ತಿಂಗಳ ಹಿಂದೆ ಪದೋನ್ನತಿಗೊಂಡು ಹೆಡ್‌ಕಾನ್ಸ್‌ಟೇಬಲ್ ಆಗಿದ್ದಾರೆ. ವರ್ಗಾವಣೆಗೊಂಡಿರುವ ಅವರು ಇದೀಗ ಧರ್ಮಸ್ಥಳ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾರೆ.

  aaa

  ann sikls 7

  ann silks 2

  ann silks 3

  ann silks 4

  ann silks 5

  ann silks 6

  ann silks

  ann silks1ಬೆಳ್ತಂಗಡಿ: ವಸ್ತ್ರ ವ್ಯಾಪಾರ ರಂಗದಲ್ಲಿ ಹೊಸ ಛಾಪು ಮೂಡಿಸುವ ಪ್ರಯತ್ನದಲ್ಲಿ ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಜೆ.ಎಂ. ಕಾಂಪ್ಲೆಕ್ಸ್‌ನಲ್ಲಿ ಸುಸಜ್ಜಿತ ವಸ್ತ್ರಮಳಿಗೆ ಆನ್ ಸಿಲ್ಕ್ ಎ. 28ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಶುಭಾರಂಭಗೊಂಡಿತು.
  ಮಳಿಗೆಯನ್ನು ಬೆಳ್ತಂಗಡಿ ಶಾಸಕರಾದ ಕೆ. ವಸಂತ ಬಂಗೇರ ಉದ್ಘಾಟಿಸಿದರು.ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿಯವರು ಆಶೀರ್ವಾದ ವಿಧಿ ಹಾಗೂ ಆಶೀರ್ವಚನ ನೀಡಲಿದ್ದು. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಶುಭ ಹಾರೈಕೆಗಳೊಂದಿಗೆ, ಅತಿಥಿಗಳಾಗಿ ಪುತ್ತೂರು ಧರ್ಮ ಪ್ರಾಂತ್ಯದ ವಿಕಾರ್ ಜನರಲ್ ರೆ| ಫಾ| ಜಾಜ್ ಕಾಲಾಯಿ, ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್‌ನ ರೆ| ಫಾ| ಬೊನವೆಂಚರ್ ನಜ್ರೆತ್, ಬೆಳ್ತಂಗಡಿಯ ಕ್ಯೂ.ಜೆ.ಎಂ. ಖತೀಬರಾದ ಬಿ.ಎಂ. ಶಂಶುದ್ದೀನ್, ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಮುಗುಳಿ ನಾರಾಯಣ ರಾವ್, ತಹಶೀಲ್ದಾರ್ ಪ್ರಸನ್ನ ಮೂರ್ತಿ, ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಆರ್. ಲಿಂಗಪ್ಪ, ನ್ಯಾಯವಾದಿ ಸೇವಿಯರ್ ಪಾಲೇಲಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ರಂಜನ್ ಜಿ.ಗೌಡ, ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ, ಸೌತ್ ಇಂಡಿಯನ್ ಬ್ಯಾಂಕಿನ ಮನೇಜರ್ ಜೊಬಿನ್ ಮ್ಯಾಥ್ಯೂ, ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಎಸ್. ಕುಲಾಲ್ ಉಪಸ್ಥಿತರಿದ್ದರು.

  aropi ಪೆರಾಡಿ: ಜಮೀನು ಹಾಗೂ ಹಣಕ್ಕಾಗಿ ನಿರಂತರವಾಗಿ ಪೀಡಿಸುತ್ತಿದ್ದ ಆರೋಪಿಗಳು ಚಿಕ್ಕಪ್ಪನನ್ನೇ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಪೆರಾಡಿ ಗ್ರಾಮದ ಕುರೆದ್ದುವಿನಲ್ಲಿ ಎ.೨೨ರ ರಾತ್ರಿ ಸಂಭವಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
  ಪೆರಾಡಿಯ ಕುರೆದ್ದು ನಿವಾಸಿ ದಿ. ಮೊಂಟ ಮೂಲ್ಯ ಅವರ ಪುತ್ರ ಸುಂದರ ಮೂಲ್ಯ (೫೫) ಮೃತಪಟ್ಟ ದುರ್ದೈವಿ. ಸುಂದರ ಮೂಲ್ಯರ ಮನೆ ಸಮೀಪವೇ ವಾಸವಾಗಿರುವ ಇವರ ಸಹೋದರ ಅಣ್ಣಿ ಮೂಲ್ಯರ ಪುತ್ರರಾದ ದಯಾನಂದ (೩೨) ಹಾಗೂ ಸತೀಶ (೩೭) ಜೈಲು ಪಾಲಾಗಿರುವ ಆರೋಪಿಗಳು.
  ನಡೆದದ್ದೇನು?: ಎ.೨೨ರ ಸಂಜೆ ಪೆರಾಡಿ ಸಮೀಪದ ಅಂಗಡಿಗೆ
  ಆಗಮಿಸಿದ್ದ ಸುಂದರ ಮೂಲ್ಯರನ್ನು ಭೇಟಿಯಾಗಿದ್ದ ಸತೀಶ ಸಾಲದ ರೂಪದಲ್ಲಿ ಹಣದ ಬೇಡಿಕೆ ಇರಿಸಿದ್ದ ಎನ್ನಲಾಗಿದೆ. ಇದಕ್ಕೆ ನಯವಾಗಿಯೇ ತಿರಸ್ಕರಿಸಿದ್ದ ಸುಂದರ ಮೂಲ್ಯರೊಂದಿಗೆ ಮಾತಿಗೆ ಮಾತು ಬೆಳೆಸಿ ಯದ್ವಾ ತದ್ವಾ ಹಲ್ಲೆ ನಡೆಸಿದ್ದಾರೆ. ಇಲ್ಲಿಂದ ಮನೆಗೆ ಬಂದಿದ್ದ ಸುಂದರ ಮೂಲ್ಯರ ಮನೆಗೂ ಆಗಮಿಸಿ ಸಹೋದರ ಸತೀಶನನ್ನು ಕರೆಸಿದ ದಯಾನಂದ ಜಮೀನು ವಿವಾದವನ್ನೂ ಮುಂದಿಟ್ಟು ಯದ್ವತದ್ವಾ ಹಲ್ಲೆ ನಡೆಸಿದ್ದು, ಕೆನ್ನೆಗೆ ಬಿದ್ದ ಬಲವಾದ ಏಟಿನಿಂದ ನೆಲಕ್ಕುರುಳಿದ ಸುಂದರ ಮೂಲ್ಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
  ಪತ್ನಿ, ಮಕ್ಕಳು ಮನೆಯಲ್ಲಿರಲಿಲ್ಲ: ಮೃತರ ಪತ್ನಿ ಸುಜಾತರವರು ಇಬ್ಬರು ಪುಟ್ಟ ಮಕ್ಕಳೊಂದಿಗೆ ಮುದ್ದಾಡಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ತವರು ಮನೆಯಾದ ವೇಣೂರಿನ ಕಾಂತಿಬೆಟ್ಟುವಿಗೆ ಆಗಮಿಸಿದ್ದರು. ರಾತ್ರಿ ಸುಮಾರು ೯.೧೫ರ ಸುಮಾರಿಗೆ ಸುಜಾತರವರ ಮೊಬೈಲ್‌ಗೆ ಕರೆ ಮಾಡಿದ ದಯಾನಂದ, ಚಿಕ್ಕಪ್ಪ ದಾರಿ ಬದಿಯಲ್ಲಿ ಬಿದ್ದಿದ್ದು, ಎಬ್ಬಿಸಿ ಮನೆಗೆ ತಲುಪಿಸಿದಾಗ ಮನೆಯಂಗಳದಲ್ಲೂ ಬಿದ್ದಿದ್ದಾರೆಂದು ತಿಳಿಸಿದ್ದಾನೆ. ಪತ್ನಿ ಸುಜಾತರವರು ಮನೆಗೆ ಬಂದು ನೋಡುವಷ್ಟರಲ್ಲಿ ಗಂಡ ಸುಂದರ ಮೂಲ್ಯರವರ ಮೃತದೇಹ ಮನೆಯಂಗಳ ದಲ್ಲಿ ಪತ್ತೆಯಾಗಿತ್ತು.
  ಸ್ಥಳದಲ್ಲಿದ್ದ ಆರೋಪಿಗಳು: ರಾತ್ರಿ ಸಂಬಂಧಿಕರು ಬಂದು ಮೃತದೇಹವನ್ನು ಬಂದು ಗಮನಿಸುತ್ತಿದ್ದಂತೆ ಸ್ಥಳದಲ್ಲಿದ್ದ ದಯಾನಂದ ಮತ್ತು ಸತೀಶ ಅಂತ್ಯ ಸಂಸ್ಕಾರ ಏರ್ಪಾಡು ಮಾಡುವಂತೆ ತಿಳಿಸಿದ್ದಾರೆ. ಆದರೆ ಸಂಶಯ ಉಂಟಾಗಿ ಸಂಬಂಧಿಕರು ವೇಣೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮರುದಿನ ಬೆಳಿಗ್ಗೆ ವೇಣೂರು ಪೊಲೀಸರು ಘಟನಾ ಸ್ಥಳಕ್ಕೆ ಬರುತ್ತಿದ್ದಂತೆ ಸ್ಥಳದಲ್ಲಿದ್ದ ದಯಾನಂದ ಮತ್ತು ಸತೀಶ ಸ್ಥಳದಿಂದ ಪರಾರಿಯಾಗಿದ್ದರು.
  ಬೆದರಿಕೆಯೊಡ್ಡಿದ್ದ ಆರೋಪಿಗಳು: ಜಮೀನು, ಹಣ ಹಾಗೂ ಬಾವಿಯಿಂದ ನೀರು ತೆಗೆಯುವ ವಿಷಯದಲ್ಲಿ ಸುಂದರ ಮೂಲ್ಯರೊಂದಿಗೆ ದಯಾನಂದ ನಿರಂತರವಾಗಿ ಗಲಾಟೆ ನಡೆಸುತ್ತಿದ್ದುದ್ದಲ್ಲದೆ ಹಲವಾರು ಬಾರಿ ಕೊಲ್ಲುವುದಾಗಿ ಜೀವಬೆದರಿಕೆ ಒಡ್ಡಿರುವುದಾಗಿ ಮೃತರ ಪತ್ನಿ ಸುಜಾತರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
  ಮೊಬೈಲ್ ಸ್ವಿಚ್ ಆಫ್: ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ತಲುಪುತ್ತಿದ್ದಂತೆ ಸ್ಥಳದಿಂದ ಪರಾರಿಯಾದ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಇದು ಮತ್ತಷ್ಟು ಸಂಶಯಕ್ಕೆ ಕಾರಣವಾಗಿತ್ತು.ಪ್ರಕರಣಕ್ಕೆ ಸಂಬಂಧಿಸಿ ವೇಣೂರು ಠಾಣಾ ಪ್ರಭಾರ ಪೊಲೀಸ್ ಉಪ ನಿರೀಕ್ಷಕ ಶೀನಪ್ಪ ಗೌಡರವರ ನೇತೃತ್ವದ ತನಿಖಾ ತಂಡ ರಚಿಸಲಾಗಿದ್ದು, ಎ.೨೫ರಂದು ಬಂಟ್ವಾಳ ತಾಲೂಕಿನ ಸೂರಿಕುಮೇರುನಲ್ಲಿರುವ ಸಂಬಂಧಿಕರ ಮನೆಯ ಬಳಿಯಿಂದ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
  ಉನ್ನತ ಪೊಲೀಸ್ ಅಧಿಕಾರಿ ಗಳಿಂದ ಪರಿಶೀಲನೆ : ದ.ಕ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿ.ಎಸ್. ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ತೀವ್ರ ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳ ಉಪ ವಿಭಾಗದ ಡಿವೈಎಸ್‌ಪಿ ಭಾಸ್ಕರ ರೈ, ಬೆಳ್ತಂಗಡಿ ವೃತ್ತ ನಿರೀಕ್ಷಕ ಲಿಂಗಪ್ಪ ಪೂಜಾರಿ, ಠಾಣಾ ಪ್ರಭಾರ ಇನ್ಸ್‌ಪೆಕ್ಟರ್ ಲಿಂಗದಾಲ್, ವೇಣೂರು ಠಾಣಾ ಎಎಸ್‌ಐ ಶೀನಪ್ಪ ಗೌಡ ಹಾಗೂ ಸಿಬ್ಬಂದಿ, ಬೆಳ್ತಂಗಡಿ ಪೊಲೀಸ್ ಉಪ ನಿರೀಕ್ಷಕ ಸಂದೇಶ್ ಪಿ.ಜಿ. ಹಾಗೂ ಸಿಬ್ಬಂದಿ ಆಗಮಿಸಿ ತೀವ್ರ ತನಿಖೆ ಹಾಗೂ ಮಹಜರು ನಡೆಸಿದರು. ಮಂಗಳೂರು ವೈದ್ಯರ ತಂಡ ಭೇಟಿ ನೀಡಿ ಮೃತದೇಹ ಪರೀಕ್ಷಿಸಿದ್ದು, ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಅವರು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಂಗಳೂರಿಗೆ ಕೊಂಡೊಯ್ಯಲಾಗಿತ್ತು.

  dharmastala marrege copyಬೆಳ್ತಂಗಡಿ : ನಾಡಿನ ಪುಣ್ಯ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷದಂತೆ ಈ ವರ್ಷ ನಡೆಯುವ 45ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭವು ಎ.೨೯ರಂದು ಶುಕ್ರವಾರ ಸಂಜೆ ೬.೪೮ರ ಗೋಧೋಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷೀಣಿ ಸಭಾ ಭವನದಲ್ಲಿ ನಡೆಯಲಿದೆ.
  ಈ ಬಾರಿಯ ವಿವಾಹ ಸಮಾರಂಭದಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು ೧೨೫ ಜೋಡಿ ವಧು-ವರರು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಈ ಪೈಕಿ ಸುಮಾರು ೧೨೦ ಜೋಡಿಗಳ ದಾಖಲೆಗಳನ್ನು ಪರಿಶೀಲಿಸಿ ಅಂತಿಮಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯ ಸರಕಾರದ ಮುಜರಾಯಿ ಇಲಾಖಾ
  ಸಚಿವ ಮನೋಹರ್ ತಹಶೀಲ್ದಾರ್, ಮಾಜಿ ಕ್ರಿಕೆಟ್ ಆಟಗಾರ ಬ್ರಿಜೇಶ್ ಪಟೇಲ್, ಬೆಳ್ತಂಗಡಿ ಕ್ಷೇತ್ರದ ಶಾಸಕ ಕೆ. ವಸಂತ ಬಂಗೇರ, ಬಿರ್ಲಾ ಕಾರ್ಪೋರೇಶನ್‌ನ ಅಧಿಕಾರಿ ಆದಿತ್ಯ ಸರೋಗಿ ಮತ್ತು ಬೆಂಗಳೂರಿನ ಸಂದೇಶ ಮೆನನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಾಶಂಸನೆ ಮಾಡಲಿದ್ದಾರೆ.
  ಧ್ಯೇಯೋದ್ಧೇಶ: ನಮ್ಮ ದೇಶ ಆರ್ಥಿಕ ಹಿಂದುಳಿದಿರುವಿಕೆ ಮತ್ತು ಅನಕ್ಷರತೆಯೇ ಮೊದಲಾದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದರಿಂದಾಗಿ ಸಾಮಾಜಿಕ ಭದ್ರತೆ ಹಾಗೂ ಧಾರ್ಮಿಕ ಪಾವಿತ್ರ್ಯತೆಯನ್ನು ಹೊಂದಿರುವ ವಿವಾಹವನ್ನು ಏರ್ಪಡಿಸುವುದು ಬಡ ಜನತೆಗೆ ಕಷ್ಟದಾಯಕವಾಗಿದೆ. ಹತ್ತು ಹಲವು ಅನಗತ್ಯ ದುಂದುವೆಚ್ಚಗಳಿಂದ ಕೂಡಿ ವಿವಾಹವು ದಲಿತರು ಹಾಗೂ ಹಿಂದುಳಿದವರ ಆರ್ಥಿಕ ಗುಲಾಮಗಿರಿಗೆ ಕಾರಣವಾಗಿದೆ. ಈ ವಿಧಾನವನ್ನು ಸರಳೀಕರಿಸುವ ಮಾರ್ಗದರ್ಶನದೊಂದಿಗೆ ಜನತೆಗೆ ಸಹಾಯ ಹಸ್ತವನ್ನು ನೀಡುವುದೇ ಈ ಸಾಮೂಹಿಕ ವಿವಾಹದ ಧ್ಯೇಯೋದ್ದೇಶವಾಗಿದೆ. ಧಾರ್ಮಿಕ ಕ್ಷೇತ್ರಗಳು ಧರ್ಮ ಜಾಗೃತಿಯೊಂದಿಗೆ ಸಾಮಾಜಿಕ ಮಾರ್ಗದರ್ಶನವನ್ನು ಕಾಲ ಕಾಲಕ್ಕೆ ಸಂದರ್ಭೋಚಿತವಾಗಿ ನೀಡುತ್ತಿರಬೇಕು ಈ ಹಿನ್ನಲೆಯಲ್ಲಿ ಶ್ರೀ ಕ್ಷೇತ್ರವು ಪರಂಪರೆಯಿಂದಲೇ ಈ ಕಾರ್ಯವನ್ನು ಮಾಡುತ್ತಾ ಬಂದಿದೆ. ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಆರಂಭಗೊಂಡ ಬಳಿಕ ಇದೇ ಮಾದರಿಯನ್ನು ರಾಜ್ಯದ ಅನೇಕ ಕ್ಷೇತ್ರಗಳು ಅನುಸರಿಸುತ್ತಿರುವುದು ಇಲ್ಲಿ ಉಲ್ಲೇಖನೀಯ.

  car 1

  nischinth 1 copy

  car

  Maddadka car copyಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಮದ್ದಡ್ಕ ಮತ್ತು ಕಾರ್ಕಳ ತಾಲೂಕು ಬಜಗೊಳಿಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ತಾಲೂಕಿನ ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.
  ಏ. 26 ರಂದು ರಾತ್ರಿ ಮದ್ದಡ್ಕದಲ್ಲಿ ನಡೆದ ಅಪಘಾತದಲ್ಲಿ ಇಲ್ಲಿನ ಸುಲ್ತಾನ್‌ಗುರಿ ನಿವಾಸಿ ಅಬೂಬಕ್ಕರ್(66ವ.) ಸಾವನ್ನಪ್ಪಿದರೆ, ಏ. 27 ರಂದು ಕಾರ್ಕಳ ತಾಲೂಕು ಬಜಗೊಳಿಯಲ್ಲಿ ನಡೆದ ಅಪಘಾತದಲ್ಲಿ ಉಜಿರೆ ಗ್ರಾಮದ ಶಿವಾಜಿನಗರ ನಿವಾಸಿ, ಸುಂದರ ಗೌಡ ಮತ್ತು ಹೇಮಾವತಿ ದಂಪತಿ ಪುತ್ರ ನಿಶ್ಚಿತ್ ಗೌಡ (23ವ.) ಮೃತರಾದರು.
  ಮದ್ದಡ್ಕ ಅಪಘಾತ ವಿವರ:
  ಏ. 26 ರ ರಾತ್ರಿ 8.45 ರ ವೇಳೆಗೆ ತನ್ನ ಮನೆಯಿಂದ ಮದ್ದಡ್ಕ ಪೇಟೆ ಕಡೆಗೆ ಹೊರಟಿದ್ದ ಅಬೂಬಕ್ಕರ್ ಅವರಿಗೆ ಅತಿವೇಗದಿಂದ ಬಂದ ಕಾರೊಂದು ಡಿಕ್ಕಿಹೊಡೆದು ರಸ್ತೆ ಬದಿ ಪಲ್ಟಿಯಾಗಿದೆ. ಈ ವೇಳೆ ಅಬೂಬಕ್ಕರ್ ಅವರ ತಲೆಗೆ ಗಂಭೀರ ಗಾಯವಾಯಿತು. ತಕ್ಷಣ ವಿಚಾರ ತಿಳಿದು ಅವರ ಮಕ್ಕಳಾದ ಅಶ್ರಫ್ ಮತ್ತು ಸಾಹಿಲ್ ಮುಹಮ್ಮದ್ ಅವರು ತಂದೆಯವರನ್ನು ಗುರುವಾಯನಕೆರೆ ಅಭಯಾ ಆಸ್ಪತ್ರೆಗೆ ಕೊಂಡೊಯ್ದು ಪ್ರಥಮ ಚಿಕಿತ್ಸೆ ನೀಡಿದರು. ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಜಲೀಲ್ ಅವರ ಅಂಬುಲೆನ್ಸ್‌ನಲ್ಲಿ ಮಂಗಳೂರಿಗೆ ಸಾಗಿಸುವ ಪ್ರಯತ್ನದ ನಡುವೆ ಪುಂಜಾಲಕಟ್ಟೆ ತಲುಪುತ್ತಿದ್ದಂತೆ ಅವರು ಮೃತಪಟ್ಟರು. ಬಳಿಕ ವಾಹನ ತಿರುಗಿ ಅವರ ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಯಿತು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮದ್ದಡ್ಕ ಮಸೀದಿ ಆವರಣದಲ್ಲಿ ದಫನ ನಡೆಸಲಾಯಿತು.
  ಮೃತರು ಪತ್ನಿ ಆಸ್ಯಮ್ಮ, ಪುತ್ರರಾದ ಅಶ್ರಫ್, ಸಾಹಿಲ್ ಮುಹಮ್ಮದ್ (ಮುಸ್ತಫಾ), ಸಂಶುದ್ದೀನ್, ಪುತ್ರಿಯರಾದ ಝುಹುರಾ, ರುಕಿಯಾ ಮತ್ತು ಆಯಿಶಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಮನೆಗೆ ಶಾಸಕ ವಸಂತ ಬಂಗೇರ, ಮಾಜಿ ಶಾಸಕ ಪ್ರಭಾಕರ ಬಂಗೇರ, ತಾ.ಪಂ. ಸದಸ್ಯ ಗೋಪಿನಾಥ ನಾಯಕ್, ಮಾಜಿ ಸದಸ್ಯ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಮದ್ದಡ್ಕ ಮಸೀದಿ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಅಬ್ಬೋನು ಮದ್ದಡ್ಕ, ಎಂ. ಉಮರಬ್ಬ, ಮಸೀದಿ ಧರ್ಮಗುರುಗಳಾದ ರಫೀಕ್ ಅಹ್‌ಸನಿ ಸೇರಿದಂತೆ ಅನೇಕ ಮಂದಿ ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
  ಬಜಗೊಳಿ ಅಪಘಾತದ ವಿವರ:
  ಏ. ೨೭ ರಂದು ಬೆಳಿಗ್ಗೆ ಕಾರ್ಕಳ ತಾಲೂಕು ಬಜಗೊಳಿ ಎಂಬಲ್ಲಿ ಮಿನಿ ಬಸ್ಸು ಮತ್ತು ಶಿಫ್ಟ್ ಕಾರಿನ ನಡುವೆ ನಡೆದ ಅಪಘಾತದಲ್ಲಿ ನಿಶ್ಚಿತ್ ಗೌಡ ನಿಧನರಾದರು.
  ಕಾರಿನಲ್ಲಿದ್ದ ಮಾಲತಿ ರಾವ್, ಕೃತಿ ಉಡುಪ, ಆಧ್ಯಾ ಅವರುಗಳಿಗೂ ಗಾಯಗಳಾಗಿದ್ದು ಈ ಪೈಕಿ ಮಾಲತಿ ರಾವ್ ಅವರಿಗೆ ತೀವ್ರ ಗಾಯಗಳಾಗಿದ್ದು ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
  ನಿಶ್ಚಿತ್ ಗೌಡ ಅವರು ಉತ್ತಮ ದುಡಿಮೆಗಾರನಾಗಿದ್ದು, ಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಅವರು ಉಜಿರೆಯ ಮಾಲತಿ ರಾವ್ ಅವರ ಮನೆಯವರನ್ನು ಉಡುಪಿಯಲ್ಲಿ ನಡೆಯಬೇಕಾಗಿದ್ದ ಮದುವೆ ಸಮಾರಂಭಕ್ಕೆಂದು ಶಿಫ್ಟ್ ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಮಿನಿ ಬಸ್ಸು ಮತ್ತು ಕಾರು ಎರಡರ ಮುಂಭಾಗವೂ ಜಖಂ ಗೊಂಡಿದ್ದು ಪ್ರಾರಂಭದಲ್ಲಿ ನಿಶ್ಚಿತ್ ಮತ್ತು ಸಹಪ್ರಯಾಣಿಕರು ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತದರೂ ಚಾಲಕರಾಗಿದ್ದ ನಿಶ್ಚಿತ್ ಮಾತ್ರ ಮೃತಪಟ್ಟರು.
  ಮೃತರು ತಂದೆ ಸುಂದರ ಗೌಡ, ತಾಯಿ ಹೇಮಾವತಿ, ಮೂವರು ಸಹೋದರಿಯರಾದ ನವ್ಯಾ, ದಿವ್ಯಾ ಮತ್ತು ಭವ್ಯಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತ ನಿಶ್ಚಿತ್ ಮನೆಗೆ ಓರ್ವನೆ ಗಂಡು ಮಗನಾಗಿದ್ದ. ಆರ್ಥಿಕವಾಗಿ ಸಾಧಾರಣ ಸ್ಥಿತಿಯಲ್ಲಿದ್ದ ಅವರ ಮನೆಗೆ ಇವರೇ ಭವಿಷ್ಯದ ಆಧಾರ ಸ್ಥಂಬವಾಗಿದ್ದ. ಇದೀಗ ಅವರ ಅಕಾಲಿಕ ಅಗಲುವಿಕೆಯಿಂದ ತಂದೆ ತಾಯಿ ಅತೀವ ದುಃಖಿತರಾಗಿದ್ದಾರೆ.
  ವಿಷಯ ತಿಳಿಯುತ್ತಿದ್ದಂತೆ ಉಜಿರೆಯ ಉದ್ಯಮಿ ಆರ್. ಎಮ್ ರವಿ ಚಕ್ಕಿತ್ತಾಯ ಅವರು ಸುದ್ದಿಯನ್ನು ಅಗತ್ಯ ಇರುವ ಎಲ್ಲರಿಗೂ ಮುಟ್ಟಿಸಿದ್ದು ತಕ್ಷಣ ಅಪಘಾತ ಸ್ಥಳಕ್ಕೆ ಮತ್ತು ಮಣಿಪಾಲ ಆಸ್ಪತ್ರೆಗೆ ಹೋಗುವಲ್ಲಿ ಸಹಕಾರಿಯಾದರು. ಅವರ ನೆರೆಹೊರೆಯವರಾದ ಡಾ| ರವೀಂದ್ರನಾಥ ಪ್ರಭು, ಗುತ್ತಿಗೆದಾರ ಶ್ರೀನಿವಾಸ ಗೌಡ “ಮಧುರಾ” ಮತ್ತು ಇತರರು ಮಣಿಪಾಲಕ್ಕೆ ಧಾವಿಸಿದ್ದಾರೆ. ಇತ್ತ ಮೃತರ ಮನೆಗೂ ಅನೇಕ ಗಣ್ಯ ಮಹನೀಯರು ಭೇಟಿ ನೀಡಿ ಮನೆಮಂದಿಗೆ ಸಾಂತ್ವನ ಹೇಳಿದ್ದಾರೆ.

  Asha D'souzaಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆಯ ಬೆಳ್ತಂಗಡಿ ಉಪಗ್ರಹ ಶಾಖೆ ಪ್ರತಿನಿಧಿ ಶ್ರೀಮತಿ ಆಶಾ ಡಿಸೋಜ 2015-16ನೇ ಸಾಲಿನಲ್ಲಿ ರೂಪಾಯಿ 10.02 ಲಕ್ಷ ಪ್ರಥಮ ಪ್ರಿಮಿಯಂ ಆದಾಯವನ್ನು ತಂದು ಹೆಮ್ಮೆಯ ಪ್ರತಿನಿಧಿಯಾಗಿ ಹೊರಹೊಮ್ಮಿದ್ದಾರೆ ಎಂದು ಉಪಗ್ರಹ ಶಾಖಾಧಿಕಾರಿ ಹೆಚ್.ಆರ್. ಪದ್ಮನಾಭ ತಿಳಿಸಿರುತ್ತಾರೆ.

  chandrahasa charmady ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದವರಿಗೆ ನೀಡಲಾಗುವ 2015ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ನಿರಂತರ ಪ್ರಗತಿ ಪತ್ರಿಕೆಯ ಉಪಸಂಪಾದಕರಾದ ಚಂದ್ರಹಾಸ ಚಾರ್ಮಾಡಿ ಆಯ್ಕೆಯಾಗಿ, 2015ರ ಸಪ್ಟೆಂಬರ್ 15ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ದೇಹ ನಾಡಲ್ಲಿ ಮನಸ್ಸು ಕಾಡಲ್ಲಿ ಎಂಬ ವರದಿಗೆ ಈ ಪ್ರಶಸ್ತಿ ಲಭಿಸಿದೆ. ಅವರಿಗೆ ಪ್ರಶಸ್ತಿಯು ರೂ. 10,001/- ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಲಾಯಿತು.
  ಚಂದ್ರಹಾಸ ಚಾರ್ಮಾಡಿಯವರು ಪತ್ರಿಕೋದ್ಯಮ ಮತ್ತು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು ಪ್ರಸ್ತುತ ಕಳೆದ ಏಳು ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಕಟಿತ ನಿರಂತರ ಪ್ರಗತಿ ಮಾಸಪತ್ರಿಕೆಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ 4500ಕ್ಕೂ ಹೆಚ್ಚು ಲೇಖನ ಮತ್ತು ನುಡಿಚಿತ್ರಗಳು ವಿವಿಧ ದಿನಪತ್ರಿಕೆ ಮತ್ತು ಸಾಪ್ತಾಹಿಕ, ಮಾಸಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕಳೆದ ಭಾರಿ ಕರ್ನಾಟಕ ಸರಕಾರದ ಬೆಂಗಳೂರು ಕೃಷಿ ಮಾರುಕಟ್ಟೆ ಮಂಡಳಿಯಿಂದ ಪ್ರಕಟಗೊಳ್ಳುತ್ತಿರುವ ಕೃಷಿಪೇಟೆ ಪತ್ರಿಕೆಯಲ್ಲಿ ಪ್ರಕಟಗೊಂಡ ಇವರ ಲೇಖನಕ್ಕೆ ಬಹುಮಾನ ಲಭಿಸಿದೆ. ಇವರು ಉತ್ತಮ ಛಾಯಾಗ್ರಾಹಕರಾಗಿದ್ದು ಸುದ್ದಿಬಿಡುಗಡೆ ಪತ್ರಿಕೆಯ ಅಂಕಣಗಾರರು ಕೂಡಾ. ಪಿ.ಗೋಪಾಲಕೃಷ್ಣ ಸ್ಮರಣಾರ್ಥ ವಾರ್ಷಿಕವಾಗಿ ಕೊಡಮಾಡುವ ಈ ಪ್ರಶಸ್ತಿಯನ್ನು ಪ.ಗೋ ಮೆಮೋರಿಯಲ್ ಟ್ರಸ್ಟ್ ಮೂಲಕ ನೀಡಲಾಗುತ್ತದೆ.

  hilari pirera copyವೇಣೂರು: ವೇಣೂರಿನ ನಿವಾಸಿ ಸಮಾಜ ಸೇವಕ ಹಿರಿಯ ಚೇತನ ಹಿಲಾರಿ ಪಿರೇರಾ (೯೦) ಅವರು ಅಲ್ಪ ಕಾಲದ ಅಸೌಖ್ಯದಿಂದ ಎ.೨೫ರಂದು ಮಂಗಳೂರು ನಿವಾಸದಲ್ಲಿ ನಿಧನ ಹೊಂದಿದರು.

  ಶಿಕ್ಷಣ
  ಉಜಿರೆಯಲ್ಲಿ ಯೋಗ ಮತ್ತು ಪ್ರಾಣಾಯಾಮ ಶಿಬಿರ ಮಾನಸಿಕ ಶಾಂತಿ, ಆರೋಗ್ಯಪೂರ್ಣ ಜೀವನಕ್ಕೆ ಯೋಗ ದಿವ್ಯೌಷಧಿ : ಪಡ್ವೆಟ್ನಾಯ
  Apr 28th 5:04

  ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರು ಇಲ್ಲಿನ ರಕ್ಷಕ- ಶಿಕ್ಷಕ ಸಂಘದ ಮಹಾಸಭೆಯು ಎ. 23ರಂದು ಕಾಲೇಜಿನ ಸಭಾಂಗಣದಲ್ಲಿ… ಮುಂದೆ ಓದಿ

  hamsa 1

  ಕ್ರೀಡೆ
  ಕ್ರಿಕೆಟ್ ಪಂದ್ಯಾಟ ಪವರ್ ಆನ್ ಪ್ಯಾಂಥರ್ಸ್ ರನ್ನರ‍್ಸ್
  Apr 28th 5:14

  ಬೆಳ್ತಂಗಡಿ : ಎ. 23/24 ರಂದು ನಡೆದ ದಿ| ಸಂಪತ್ ಸ್ಮರಣಾರ್ಥ ನಡೆದ ಕ್ರಿಕೆಟ್ ಪಂದ್ಯಾಟ ಸಂಪತ್ ಟ್ರೋಫಿ ಇದರಲ್ಲಿ… ಮುಂದೆ ಓದಿ

  anar car 1

  ಕೃಷಿ
  ಅಂಡಿಂಜೆ: ಎಕ್ರೆಗಟ್ಟಲೆ ರಬ್ಬರ್ ತೋಟಕ್ಕೆ ಬೆಂಕಿ; ನಷ್ಟ
  Apr 23rd 9:45

  ಅಂಡಿಂಜೆ: ಎಕ್ರೆಗಟ್ಟಲೆ ರಬ್ಬರ್ ತೋಟ ಬೆಂಕಿಗಾಹುತಿಯಾದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಡಿಂಜೆಯಲ್ಲಿ ಎ. 22ರಂದು ಸಂಭವಿಸಿದೆ.
  ಅಂಡಿಂಜೆ… ಮುಂದೆ ಓದಿ

  rajaram 1

  ಮೊಬೈಲ್ ಸ್ವಿಚ್ ಆಫ್: ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ತಲುಪುತ್ತಿದ್ದಂತೆ ಸ್ಥಳದಿಂದ ಪರಾರಿಯಾದ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಇದು ಮತ್ತಷ್ಟು ಸಂಶಯಕ್ಕೆ ಕಾರಣವಾಗಿತ್ತು.ಪ್ರಕರಣಕ್ಕೆ ಸಂಬಂಧಿಸ