Wed 22 Nov 2017, 8:22PM

ಹೆಚ್ಚಿನ ಸುದ್ದಿಗಳು

  ಬೆಳ್ತಂಗಡಿ : ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ರಿಕ್ಷಾ ಮತ್ತು ಪಿಕಪ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಎಲ್.ಕೆ.ಜಿ ವಿದ್ಯಾರ್ಥಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಬಾರ್ಯ ಎಂಬಲ್ಲಿ ಇಂದು(ನ. 22) ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಬಾರ್ಯ ಮೂಡಡ್ಕ ಅಲ್ ಮದೀನತ್ತುಲ್ ಮುನವ್ವರ ಆಂಗ್ಲ ಮಾಧ್ಯಮ ಶಾಲೆಯ ಎಲ್.ಕೆ.ಜಿ. ವಿದ್ಯಾರ್ಥಿ, ಕೆರೀಂ ದರ್ಖಾಸು ಅವರ ಪುತ್ರ ಮಹಮ್ಮದ್ ಸನದ್(6 ವ.) ಎಂದು ಗುರುತಿಸಲಾಗಿದೆ. ವಾಹನದಲ್ಲಿದ್ದ ಉಳಿದ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಿಕಪ್ ಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ.

killuruಬೆಳ್ತಂಗಡಿ : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಇದರ ಸದಸ್ಯರಾಗಿ ಬೆಳ್ತಂಗಡಿ ತಾಲೂಕು ಕಿಲ್ಲೂರಿನ ಯುವ ಪ್ರತಿಭೆ, ಸಂಘಟಕ, ಯುವ ವಾಗ್ಮಿಯಾಗಿರುವ ತನ್ಸೀಫ್ ಕಿಲ್ಲೂರು ಇವರನ್ನು ನೇಮಕ ಮಾಡಲಾಗಿದೆ.

yoga

Yoga1

yoga2ಧರ್ಮಸ್ಥಳ : ಶಾಂತಿವನ ಟ್ರಸ್ಟ್ ಧರ್ಮಸ್ಥಳ ವತಿಯಿಂದ ಅಂತಾರಾಷ್ಟ್ರೀಯ ಯೋಗೋತ್ಸವ ಮತ್ತು 2ನೇ ಒಕ್ಕೂಟ ಯೋಗ ಫೆಡರೇಶನ್ ಕ್ರೀಡಾ ಕಪ್-2017  ಉದ್ಘಾಟನಾ ಸಮಾರಂಭವು ಇಂದು(ನ. 21) ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.
ಉದ್ಘಾಟನೆಯನ್ನು ಆಸ್ಟ್ರಿಯಾ ವಿಯೆನ್ನಾ ಶ್ರೀ ದೀಪ್ ಮಾಧವಾನಂದ ಆಶ್ರಮದ ವಿಶ್ವ ಗುರು ಮಹಾಮಂಡಲೇಶ್ವರ ಪರಮಹಂಸ ಶ್ರೀ ಸ್ವಾಮಿ ಮಹೇಶ್ವರಾನಂದಜಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಕ್ ಉಪಸ್ಥಿತರಿದ್ದರು.
ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಂತಿವನ ಟ್ರಸ್ಟ್‌ನ ಟ್ರಸ್ಟಿಗಳಾದ ಶ್ರೀಮತಿ ಹೇಮಾವತಿ ವಿ ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಭಾರತ ಯೋಗ ಒಕ್ಕೂಟದ ಗೌರವ ಅಧ್ಯಕ್ಷ ಅಶೋಕ್ ಕುಮಾರ್ ಅಗರ್‌ವಾಲ್, ಹಿರಿಯ ಉಪಾಧ್ಯಕ್ಷೆ ಶ್ರೀಮತಿ ಇಂದು ಅಗರ್‌ವಾಲ್, ಕರ್ನಾಟಕ ಅಮೆಚೂರ್ ಯೋಗ ಕ್ರೀಡಾ ಸಂಘದ ಅಧ್ಯಕ್ಷ ಗಂಗಾಧರಪ್ಪ ಭಾಗವಹಿಸಿದ್ದರು.

namakarana

namakarana1ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಸುಜೀತ್ ಮತ್ತು ಎಸ್.ಡಿ.ಎಂ ಆಂಗ್ಲ ಮಾದ್ಯಮ ಪ್ರೌಢಶಾಲಾ ಅಧ್ಯಾಪಕಿ ಆಶಾ ಅವರ ಮಗು ಅರುಷಿ ನಾಮಕರಣ ನ 19 ರಂದು ಉಜಿರೆ ಅತ್ತಾಜೆಯಲ್ಲಿ ನಡೆಯಿತು. ಬೆಳಗ್ಗೆ ಯುವ ಕಲಾವಿದ ಮಣಿನಾಲ್ಕೂರು ಅವರ ಗಾಯನದ ಮೂಲಕ ಆರಂಭಗೊಂಡಿತು. ಬಳಿಕ ಅಖಿಲ ಭಾರತ ವಿಚಾರವಾದಿ ಸಂಘದ ರಾಷ್ಟ್ರೀಯ ಅಧ್ಯಕ್ಷ ಪ್ರೋ. ನರೇಂದ್ರ ನಾಯಕ್ ಅವರಿಂದ ವೈಜ್ಞಾನಿಕ ಮನೋಭಾವ ಬೆಳೆಸುವ ವಿವಿಧ ಕಾರ್ಯಕ್ರಮಗಳು ನಡೆದವು. ಜೊತೆಗೆ ಖ್ಯಾತ ಸಂಗೀತ ಕಲಾವಿದ ಶೀನಾ ನಾಡೋಲಿ ಅವರಿಂದ ಕೊಳಲಿನ ಮೂಲಕ ವಿವಿಧ ಹಾಡುಗಳನ್ನು ಹಾಡಿ ಮನರಂಜಿಸಿದರು.
ಮಗುವಿನ ನಾಮಕರಣವನ್ನು ಪವಾಡಗಳ ರಹಸ್ಯ ಬಯಲು ಮಾಡುವ ಮೂಲಕ ಆಚರಿಸಿರುವುದು ಶ್ಲಾಘನೀಯ. ಇತ್ತೀಚೆಗೆ ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾದ ಮೌಢ್ಯ ನಿಷೇಧ ಕಾಯ್ದೆ ಜನರಲ್ಲಿ ಬೇರೂರಿರುವ ಮೌಢ್ಯವನ್ನು ತೊಲಗಿಸುವುದಾಗಿದೆ. ಇಂತಹ ಕಾಯ್ದೆ ಜ್ಯಾರಿಯಾದ ಈ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಸಿರುವ ಸುಜೀತ್ ದಂಪತಿಗಳ ಕಾರ್ಯ ಅಭಿನಂದನೀಯ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾಗವಹಿಸಿದ ಜನರನ್ನು ಉಪಯೋಗಿಸಿಕೊಂಡು ವೈಜ್ಞಾನಿಕ ಮನೋಭಾವ ಬೆಳೆಸುವ ಕಾರ್ಯಕ್ರಮವನ್ನು ನರೇಂದ್ರ ನಾಯಕ್ ನಡೆಸಿಕೊಟ್ಟರು.

  ಧರ್ಮಸ್ಥಳ : ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕ ಆಯ್ಕೆಗೆ ನ. ೧೯ರಂದು ಚುನಾವಣೆ ನಡೆದಿದ್ದು, ಒಟ್ಟು 12 ಕ್ಷೇತ್ರಗಳಿಗೆ ನಡೆದ ಚುನವಣೆಯಲ್ಲಿ 11 ಸ್ಥಾನಗಳಲ್ಲಿ ಸಹಕಾರ ಭಾರತಿ(ಬಿಜೆಪಿ) ಬೆಂಬಲಿತರು ಹಾಗೂ 1ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚುನಾಯಿತರಾಗಿ ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ.
ಸಾಲಗಾರ ಕ್ಷೇತ್ರದ ಸಾಮಾನ್ಯ 5 ಸ್ಥಾನಗಳಲ್ಲಿ 4 ಮಂದಿ ಸಹಕಾರ ಭಾರತಿ ಬೆಂಬಲಿತರಾದ ಅಜಿತ್ ಕುಮಾರ್ ಜೈನ್, ಜಯರಾಮ ಭಂಡಾರಿ ಎಂ., ಶ್ರೀಪತಿ ಹೆಬ್ಬಾರ್ ಎಂ., ಹರಿದಾಸ ಗಾಂಭೀರ. ಕಾಂಗ್ರೆಸ್ ಬೆಂಬಲಿತರಾದ ಚಂದನ್ ಪ್ರಸಾದ್ ಕಾಮತ್. ಸಾಲಗಾರರ ಕ್ಷೇತ್ರ ಪರಿಶಿಷ್ಟ ಪಂಗಡ ಮೀಸಲು 1 ಸ್ಥಾನಕ್ಕೆ ಸಹಕಾರ ಭಾರತಿ ಬೆಂಬಲಿತರಾದ ಉಮಾನಾಥ, ಸಾಲಗಾರರ ಮಹಿಳಾ ಮೀಸಲು 2 ಕ್ಷೇತ್ರಕ್ಕೆ ಸಹಕಾರಿ ಭಾರತಿ ಬೆಂಬಲಿತರಾದ ಆಶಾ ಸದಾಶಿವ, ಶಾಂಭವಿ ರೈ., ಸಾಲಗಾರರ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು 1 ಸ್ಥಾನಕ್ಕೆ ಸಹಕಾರ ಭಾರತಿ ಬೆಂಬಲಿತರಾದ ಶೀನ. ಸಾಲಗಾರರ ಕ್ಷೇತ್ರ ಹಿಂದುಳಿದ ವರ್ಗ ಎ ಮೀಸಲು ವರ್ಗದ 2 ಸ್ಥಾನಕ್ಕೆ ಸಹಕಾರ ಭಾರತಿ ಬೆಂಬಲಿತರಾದ ಹಾಲಿ ಅಧ್ಯಕ್ಷ ಪಿ. ರಘುಚಂದ್ರ ರಾವ್, ಮತ್ತು ಪ್ರೀತಂ ಡಿ., ಸಾಲಗಾರರಲ್ಲದ ಕ್ಷೇತ್ರದ 1 ಸ್ಥಾನಕ್ಕೆ ಸಹಕಾರ ಭಾರತಿ ಬೆಂಬಲಿತರಾದ ಗಿರಿಧರ ಡಿ. ಚುನಾಯಿತರಾಗಿದ್ದಾರೆ.

abhinandana samarambhaಬೆಳ್ತಂಗಡಿ : ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಲ, ಬೆಂಗಳೂರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ಬೆಳ್ತಂಗಡಿ ತಾಲೂಕು ಸಹಕಾರಿ ಯೂನಿಯನ್ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕಿನ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳು, ಪ್ರಾಥಮಿಕ ಸಹಕಾರ ಸಂಘಗಳು, ಉಜಿರೆ ರಬ್ಬರ್ ಸೊಸೈಟಿ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಭಾಗಿತ್ವದಲ್ಲಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘ ಉಜಿರೆ ಇವರ ಆಶ್ರಯದಲ್ಲಿ, 64ನೇ ಅಖಿಲ ಭಾರತ ಸಹಕಾರಿ ಸಪ್ತಾಹ 2017 ಇದರ ಅಂಗವಾಗಿ ತಾಂತ್ರಿಕ ಜಾಗೃತಿ ಮತ್ತು ನಗದು ರಹಿತ ಪಾವತಿ ಮೂಲಕ ಆರ್ಥಿಕ ಸೇರ್ಪಡೆಯಲ್ಲಿ ಸಹಕಾರ ಸಂಘಗಳ ಪಾತ್ರ ಮತ್ತು ಸಹಕಾರಿ ರತ್ನ ಡಾ| ಎಂ.ಎನ್ ರಾಜೇಂದ್ರ ಕುಮಾರ್ ಮತ್ತು ಶಾಸಕ ಕೆ. ವಸಂತ ಬಂಗೇರರಿಗೆ ಅಭಿನಂದದಾ ಸಮಾರಂಭ ಇಂದು(ನ. ೧೮) ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ರಥಬೀದಿ ಇಲ್ಲಿ ನಡೆಯಿತು.

SSF 1

SSFಬೆಳ್ತಂಗಡಿ : ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಸ್ಥಾಪಕಾಧ್ಯಕ್ಷ, ೮ ರಾಷ್ಟ್ರಗಳನ್ನೊಳಗೊಂಡ ಮಾನವ ಹಕ್ಕುಗಳ ದಕ್ಷಿಣ ಏಷ್ಯಾ ಅಧ್ಯಕ್ಷ ಶ್ರೀನಿವಾಸ ಗೌಡ ಎಸ್ಸೆಸ್ಸೆಫ್ ಡಿವಿಷನ್ ಕಾನ್ಫರೆನ್ಸ್‌ಗೆ ಭೇಟಿ ನೀಡಿ ಜಿಲ್ಲೆ ಮತ್ತು ತಾಲೂಕು ನಾಯಕರ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ವಿಜಯ ಕುಮಾರ್, ತಾಲೂಕು ಅಧ್ಯಕ್ಷ ಸೆಬಾಸ್ಟಿಯನ್ ಪಿ.ಸಿ, ನಿರ್ದೇಶಕ ಲ. ಅಶ್ರಫ್ ಆಲಿಕುಂಞಿ ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ, ನಾಯಕರಾದ ಹಾಜಿ ಅಬ್ದುಲ್ ರಝಾಕ್ ಸಖಾಫಿ, ಮುತ್ತಲಿಬ್ ವೇಣೂರು, ಇಕ್ಬಾಲ್ ಮಾಚಾರ್, ಖಲಂದರ್ ಪದ್ಮುಂಜ, ಅಬ್ದುಲ್ ರಹಮಾನ್ ಸಖಾಫಿ ನಾವೂರು, ಸಾದಿಕ್ ಮಾಸ್ಟರ್ ಮಲೆಬೆಟ್ಟು, ಮೊದಲಾದವರು ಬರಮಾಡಿಕೊಂಡರು.

manava hakku kurithu mahithiಬೆಳ್ತಂಗಡಿ: ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಇದರ ತಾಲೂಕು ಘಟಕದ ವತಿಯಿಂದ ಮಾನವ ಹಕ್ಕುಗಳ ರಕ್ಷಣೆ ಕುರಿತಾದ ಜಾಗೃತಿ ವಿಶೇಷ ಕಾರ್ಯಕ್ರಮ ನ. 17 ರಂದು ಬೆಳ್ತಂಗಡಿ ಬಸ್ಟ್ಯಾಂಡ್ ಎದುರುಗಡೆ ಇರುವ ಸಂತೋಮ್ ಟವರ್ ಸಭಾಂಗಣದಲ್ಲಿ ನಡೆಯಿತು.

Pavithra santhoshಕರಂಬಾರು ಗ್ರಾಮದ ಮುಂಡೇಲು ಮನೆಯ ದಿ. ಬಾಬು ಶೆಟ್ರ ಪುತ್ರಿ ಪವಿತ್ರರ ವಿವಾಹವು ನರ್ಸಜಾಲು ದಿ. ಅಣ್ಣಿ ಶೆಟ್ರ ಪುತ್ರ ಸಂತೋಷ್‌ರೊಂದಿಗೆ ನ. ೧೨ರಂದು ವೇಣೂರು ಗಾರ್ಡನ್ ವ್ಯೂವ್ ಹಾಲ್‌ನಲ್ಲಿ ಜರುಗಿತು.

Mallika sathishನಾವೂರು ಗ್ರಾಮದ ಕಣಾಲು ಮನೆ ದಿ. ಡೀಕಯ್ಯ ಮೂಲ್ಯರ ಪುತ್ರಿ ಮಲ್ಲಿಕರ ವಿವಾಹವು ನೆಲ್ಲಿಗುಡ್ಡೆ ಶಬರಿ ನಿವಾಸ ಶೀನ ಮೂಲ್ಯರ ಪುತ್ರ ಸತೀಶ ರೊಂದಿಗೆ ನ. 12 ರಂದು ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ಸಭಾ ಭವನದಲ್ಲಿ ಜರಗಿತು.

praveen-suchithaಕೋಡಿ ದತ್ತಕೃಪಾ ನಿವಾಸ ರುಕ್ಮಯ್ಯ ಸಪಲ್ಯರ ಪುತ್ರ ಪ್ರವೀಣ್ ಕುಮಾರ್‌ರವರ ವಿವಾಹವು ಉಳ್ಳಾಲ ಉಪ್ಪುಗುಡ್ಡೆ ಶೇಖರ ಸಪಲ್ಯರ ಪುತ್ರಿ ಸುಚಿತಾರೊಂದಿಗೆ ನ.12 ರಂದು ಬೆಳ್ತಂಗಡಿ ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣದ ಆಶಾ ಸಾಲ್ಯಾನ್ ಕಲ್ಯಾಣ ಮಂಟಪದಲ್ಲಿ ಜರುಗಿತು.

Harshendra sowmyaಕಲ್ಮಂಜ ಗ್ರಾಮದ ಬಂಡ್ರಜಾಲು ಶ್ರೀ ತುಳಸಿ ಮನೆಯ ಆದಪ್ಪ ಗೌಡರ ಪುತ್ರ ಹರ್ಷೇಂದ್ರ ರವರ ವಿವಾಹವು ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಕುಭಲ ಮನೆ ಅಚ್ಚುತ ಗೌಡರ ಪುತ್ರಿ ಸೌಮ್ಯಶ್ರೀರೊಂದಿಗೆ ನ. 12 ರಂದು ಶ್ರೀ ಕ್ಷೇತ್ರ ಪಜಿರಡ್ಕ ದೇವಸ್ಥಾನದಲ್ಲಿ ಜರಗಿತು.

prashaಮದ್ದಡ್ಕದ ಕುದುರೆಕಲ್ಲು ಮನೆಯ ಪ್ರಕಾಶ್ ಕೋಟ್ಯಾನ್ ಮತ್ತು ಶ್ರೀಮತಿ ಶಾರದ ದಂಪತಿ ಪುತ್ರಿ ಪ್ರ್ರಶಾಳ ೧ನೇ ವರ್ಷದ ಹುಟ್ಟುಹಬ್ಬವನ್ನು ನ.೧೧ ರಂದು ಕುದುರೆಕಲ್ಲು ಮನೆಯಲ್ಲಿ ಆಚರಿಸಲಾಯಿತು.

Samanviಬೆಳ್ತಂಗಡಿ: ಕೆಂಬರ್ಜೆ ಮನೆ ಪ್ರಭಾಕರ ಪೂಜಾರಿ ಮತ್ತು ವನಿತಾ ದಂಪತಿ ಪುತ್ರಿ ಸಮನ್ವಿ ಇವರ 3ನೇ ವರ್ಷದ ಹುಟ್ಟುಹಬವನ್ನು ನ.15ರಂದು ಆಚರಿಸಲಾಯಿತು.

  Maneeshಶಿರ್ಲಾಲು ಗ್ರಾಮದ ಬಾನೊಟ್ಟು ರಾಧಾಕೃಷ್ಣ ಮತ್ತು ಶ್ರೀಮತಿ ಮಲ್ಲಿಕಾ ದಂಪತಿಯ ಪುತ್ರ ಮನೀಷ್‌ನ 9ನೇ ವರ್ಷದ ಹುಟ್ಟುಹಬ್ಬವನ್ನು ನ.3ರಂದು ಆಚರಿಸಲಾಯಿತು.

Abhinavಓಡಿಲ್ನಾಳ ಗ್ರಾಮದ ನಾನಾಡಿ ಮನೆ ಶ್ರೀಮತಿ ಕಸ್ತೂರಿ ಉಮೇಶ್ ಪ್ರಭು ದಂಪತಿ ಪುತ್ರ ಅಭಿನವ್ ರವರು 2 ನೇ ವರ್ಷದ ಹುಟ್ಟು ಹಬ್ಬವನ್ನು ನ 14 ರಂದು ಆಚರಿಸಿದರು

R J sanvikನಾವೂರು ಗ್ರಾಮದ ಶ್ರೀಮತಿ ರೇಷ್ಮಾ ಮತ್ತು ಜಯಾನಂದ್ ದಂಪತಿ ಪುತ್ರ ಆರ್.ಜೆ ಸಾನ್ವಿಕ್‌ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಇತ್ತೀಚೆಗೆ ಆಚರಿಸಲಾಯಿತು.

Nishithaವೇಣೂರು ಮೂಡ್ಲ ಮನೆಯ ಹರೀಶ್ ಪೂಜಾರಿ ಮತ್ತು ಶ್ರೀಮತಿ ನಳಿನಿ ದಂಪತಿ ಪುತ್ರಿ ನಿಶಿತಾಳ 4ನೇ ವರ್ಷದ ಹುಟ್ಟುಹಬ್ಬವನ್ನು ನ. 13ರಂದು ಆಚರಿಸಲಾಯಿತು.

perady societyಪೆರಾಡಿ : ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ನೀಡುತ್ತಿರುವ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ನ.15ರಂದು ಮಂಗಳೂರಿನಲ್ಲಿ ನಡೆದ  64ನೇ ಅಖಿಲ ಭಾರತ ಸಹಕಾರ ಸಪ್ತಾಹ-2017ನೇ ಸಮಾರಂಭದಲ್ಲಿ ಪೆರಾಡಿ ಸಹಕಾರಿ ಸಂಘದ ಅಧ್ಯಕ್ಷರಾದ ಸತೀಶ್ ಕೆ. ಕಾಶಿಪಟ್ಣ ಹಾಗೂ ಮುಖ್ಯ ಕಾರ್‍ಯನಿರ್ವಾಹಣಾಧಿಕಾರಿ ಯು.ಶೇಖ್ ಲತೀಫ್ ಇವರನ್ನು ಸಚಿವರಾದ ಪ್ರಮೋದ್ ಮಧ್ವರಾಜ್‌ರವರು  ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಚಿವರಾದ ರಮಾನಾಥ ರೈ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್ ರಾಜೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Lion rajyapalara betiಬೆಳ್ತಂಗಡಿ : ಲಯನ್ಸ್ ಕ್ಲಬ್‌ಗೆ ಜಾತಿಯ ಭೇದವಿಲ್ಲ, ಎಲ್ಲಿ ಜನ ಕಷ್ಟದಲ್ಲಿದ್ದಾರೆ, ದುಃಖಿತರಿದ್ದಾರೆ, ಎಲ್ಲಿ ಸೇವೆ ಪಡೆಯಲು ಅರ್ಹರು ಇದ್ದಾರೆ ಅವರಿಗೆ ಪ್ರಾಮಾಣಿಕತೆಯಿಂದ ಸೇವೆ ಒದಗಿಸಿಕೊಡುವುದೇ ನಮ್ಮ ಕರ್ತವ್ಯ, ನಮ್ಮದು ಸೇವೆಯೇ ಜಾತಿ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಲ| ಎಚ್.ಆರ್. ಹರೀಶ್ ಹೇಳಿದರು.
ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಬೆಳ್ತಂಗಡಿ ಮತ್ತು ಅಳದಂಗಡಿ ಕ್ಲಬ್‌ಗಳಿಗೆ ಲಯನ್ಸ್ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ನಿಮಿತ್ತ ನ. 10 ರಂದು ಎಸ್‌ಡಿಎಂ ಕಲಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಯನ್ಸ್ ಕ್ಲಬ್ ಬೆಳ್ತಂಗಡಿ ಸ್ಥಾಪಕ ಸದಸ್ಯರ ಗೌರವಾರ್ಪಣೆಯನ್ನು ಅತ್ಯಂತ ಮಾದರಿಯಾಗಿ ಏರ್ಪಡಿಸಿದ್ದೂ ಮಾತ್ರವಲ್ಲದೆ ಧರಣೇಂದ್ರ ಕೆ. ಜೈನ್, ವಿಜಯ ಕುಮಾರ್ ಜೈನ್ ಅವರ ನೇತೃತ್ವದಲ್ಲಿ ವರ್ಷಪೂರ್ತಿ ವಿಭಿನ್ನ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ, ಅಲ್ಲದೆ ನನ್ನ ಭೇಟಿಯ ಸಂದರ್ಭವೂ ಕೂಡ ವಿವಿಧ ಧರ್ಮೀಯರ ಕ್ಷೇತ್ರಗಳಿಗೆ ಭೇಟಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಕೆ. ಧರಣೇಂದ್ರ ಜೈನ್ ಮಾತನಾಡಿ, ಪ್ರಶಸ್ತಿಯ ಉದ್ದೇಶದಿಂದ ನಾವು ಯಾವುದೇ ಸೇವಾ ಕಾರ್ಯ ಮಾಡುತ್ತಿಲ್ಲ, ಎಲ್ಲಾ ಸದಸ್ಯರ ಕೂಡುವಿಕೆಯೊಂದಿಗೆ ನಿಸ್ವಾರ್ಥವಾಗಿ ಅವರಿಂದ ಆಗುತ್ತಿರುವ ಒಂದೊಂದೇ ನೈಜ ಸೇವಾ ಕಾರ್ಯಗಳು ಸಮಾಜದಲ್ಲಿ ದೊಡ್ಡ ಪರಿಣಾಮವಾಗಿ ಮಾರ್ಪಡುತ್ತಿದೆಯಷ್ಟೇ ಎಂದರು.
ಮುಖ್ಯ ಅತಿಥಿಗಳಾಗಿದ್ದ ಲಯನ್ಸ್ ಜಿಲ್ಲಾ ಸಂಪುಟದ ಪ್ರ. ಕಾರ್ಯದರ್ಶಿ ಲ| ವಸಂತ ಕುಮಾರ್ ಶೆಟ್ಟಿ ಮಂಗಳೂರು, ಪ್ರಾಂತ್ಯಾಧ್ಯಕ್ಷ ಲ| ನಿತ್ಯಾನಂದ ನಾವರ, ವಲಯಾಧ್ಯಕ್ಷ ಲ| ವೆಂಕಟೇಶ್ ಎಂ.ಬಿ ಮತ್ತು ಲ| ವಾಸು ಮೂಡಬಿದ್ರೆ, ರಾಜ್ಯಪಾಲರ ಪ್ರಾಂತೀಯ ಪ್ರತಿನಿಧಿ ಕೆ. ಶಿವಪ್ರಸಾದ್ ಹೆಗ್ಡೆ ಮೂಡಬಿದ್ರೆ, ಜಿಲ್ಲಾ ಸಂಯೋಜಕ ಲ| ಪ್ರವೀಣ್ ಕುಮಾರ್ ಇಂದ್ರ ವೇಣೂರು ಶುಭ ಕೋರಿದರು. ಸಭಾಸದರ ನೆಲೆಯಲ್ಲಿ ಪಾಂತ್ಯ 7ರ ಅಧ್ಯಕ್ಷ ಕುಡ್ಪಿ ಅರವಿಂದ ಶೆಣೈ, ಮೋಟಿವೇಟ್ ವಿಭಾಗದ ಸಂಯೋಜಕ ಲ| ಮೆಲ್ವಿನ್ ಡಿಸೋಜಾ ಕಿನ್ನಿಗೊಳಿ ಮತ್ತು ಶಾಶ್ವತ ಕಾಮಗಾರಿ ನಿರ್ದೇಶಕ ಲ| ಡಾ. ಗೀತ್‌ಪ್ರಕಾಶ್ ವಿಟ್ಲ ಶುಭ ಕೋರಿದರು. ವೇದಿಕೆಯಲ್ಲಿ ನಾರಾವಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಮುರಳಿ ಬಿ, ವೇಣೂರು ಕ್ಲಬ್ ಅಧ್ಯಕ್ಷ ಲ| ನಿತೇಶ್ ಎಚ್, ಮೂಡಬಿದ್ರೆ ಕ್ಲಬ್ ಅಧ್ಯಕ್ಷ ಲ| ರಾಮಚಂದ್ರ ಆಚಾರ್ಯ, ಆಲಂಗಾರು ಕ್ಲಬ್ ಅಧ್ಯಕ್ಷ ಲ| ಜೆರಾಲ್ಡ್ ಪಿಂಟೊ, ಮಂಗಳೂರು ಕ್ಲಬ್ ಅಧ್ಯಕ್ಷ ಲ| ವೆಂಕಟೇಶ್ ಬಾಳಿಗ ಉಪಸ್ಥಿತರಿದ್ದರು.
ಸನ್ಮಾನ: ವೇದಿಕೆಯಲ್ಲಿ ರಾಜ್ಯಪಾಲ ಎಚ್. ಆರ್. ಹರೀಶ್ ಮತ್ತು ಅವರ ಧರ್ಮಪತ್ನಿ, ಲಯನ್ಸ್ ಜಿಲ್ಲೆಯ ಪ್ರಥಮ ಮಹಿಳೆ ಲ| ನಮಿತಾ ಹರೀಶ್ ಅವರನ್ನು ಸನ್ಮಾನಿಸಲಾಯಿತು. ಸ್ಥಾಪಕ ಸದಸ್ಯರಾದ ಲ| ಎಂ.ಜಿ. ಶೆಟ್ಟಿ ಮತ್ತು ಲ| ವಿ.ಆರ್. ನಾಯಕ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಲಾಂಗೂಲ ಚಾಲಕ ಲ| ದೇವಿಪ್ರಸಾದ್, ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಕುವೆಟ್ಟು ಪಂಚಾಯತ್ ಅಧ್ಯಕ್ಷ ಅಶೋಕ್ ಕೋಟ್ಯಾನ್ ಅವರಿಗೆ ವಿಶೇಷ ಸನ್ಮಾನ ನೆರವೇರಿಸಲಾಯಿತು. ಯೋಧರಿಗೆ ನಮನ ಕಾರ್ಯಕ್ರಮದಡಿ ಗುರುವಾಯನಕೆರೆಯ ಏಕನಾಥ ಶೆಟ್ಟಿ ಅವರ ಪತ್ನಿ ಜಯಂತಿ ಅವರಿಗೆ ಸನ್ಮಾನ ನೆರವೇರಿಸಿ ಅಭಿನಂದಿಸಲಾಯಿತು. ಚೈತ್ರಾ ಲಾಯಿಲ ಅವರಿಗೆ ಲ| ಸುರೇಶ್ ಶೆಟ್ಟಿ ಪ್ರಾಯೋಜಕತ್ವದ ವಿದ್ಯಾನಿಧಿ ಹಸ್ತಾಂತರ, ಶಾಶ್ವತ ಕಾಮಗಾರಿಯಡಿ ಸುಶೀಲಾ ದೇವಾಡಿಗ ಕಲ್ಮಂಜ ಅವರಿಗೆ ಮನೆ ನಿರ್ಮಾಣದ ಜವಾಬ್ಧಾರಿ ಹೊತ್ತು ಸಂಪೂರ್ಣ ನಿರ್ವಹಣೆ ಮಾಡಿದ ಲ| ಅಶ್ರಫ್ ಆಲಿಕುಂಞಿ ಅವರ ಮೂಲಕ ಮನೆಯ ಕೀಲಿಕೈ ಹಸ್ತಾಂತರ ಸಹಿತ ಇತರ ಸೇವಾ ಚಟುವಟಿಕೆಗಳನ್ನು ನಡೆಸಲಾಯಿತು. ಲಯನ್ಸ್ ಜಿಲ್ಲೆಗೆ ಉತ್ತಮ ಮಾರ್ಗದರ್ಶನ ನೀಡುತ್ತಿರುವ ಲ| ಪ್ರಕಾಶ್ ಶೆಟ್ಟಿ ನೊಚ್ಚ ಅವರನ್ನು ರಾಜ್ಯಪಾಲರ ವತಿಯಿಂದ ಪುರಸ್ಕರಿ ಸಿದರು.
ರಾಜ್ಯಪಾಲರ ಮನ್ನಣೆ: ಉತ್ತಮ ಸೇವೆಗಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಧರಣೇಂದ್ರ ಕೆ ಜೈನ್, ಕಾರ್ಯದರ್ಶಿ ಲ| ಸುರೇಶ್ ಶೆಟ್ಟಿ ಲಾಲ, ಕೋಶಾಧಿಕಾರಿ ಲ| ವಿನ್ಸೆಂಟ್ ಟಿ. ಡಿಸೋಜಾ, ಅಳದಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ವಿಜಯಕುಮಾರ್ ಜೈನ್, ಕಾರ್ಯದರ್ಶಿ ಸುಕೇಶ್ ಜೈನ್, ಕೋಶಾಧಿಕಾರಿ ಹಿಲಾರಿ ಫೆರ್ನಾಂಡಿಸ್ ಅವರಿಗೆ ರಾಜ್ಯಪಾಲರು ವಿಶೇಷ ಪಿನ್ ತೊಡಿಸಿ ಗೌರವಿಸಿದರು. ಸೇವಾ ಚಟುವಟಿಕೆಯ ಪಿನ್‌ಅನ್ನು ಲ| ಅಶ್ರಫ್ ಆಲಿಕುಂಞಿ ಅವರಿಗೆ ನೀಡಿ ಪುರಸ್ಕರಿಸಿದರು. ಪ್ರಶಂಸ ಬ್ಯಾನರನ್ನು ಲ| ನಿತ್ಯಾನಂದ ನಾವರ, ಲ| ರಾಜು ಶೆಟ್ಟಿ ಬೆಂಗೆತ್ಯಾರು, ಲ| ರಾಮಕೃಷ್ಣ ಗೌಡ, ಲ| ವಿ.ಆರ್. ನಾಯಕ್ ಅವರಿಗೆ ರಾಜ್ಯಪಾಲರು ಹಸ್ತಾಂತರಿಸಿದರು.
ಗೌರವದ ಪಿನ್ನ್ ಅನ್ನು ಲ| ಸೀತಾರಾಮ ರಾವ್, ಲ| ರಘುರಾಮ ಗಾಂಭೀರ, ಲ| ವಿ.ಆರ್. ನಾಯಕ್, ಲ| ಎಂ.ಜಿ ಶೆಟ್ಟಿ ಮತ್ತು ಲ| ರಾಮಕೃಷ್ಣ ಗೌಡ ಅವರಿಗೆ ಹಸ್ತಾಂತರಿಸಿದರು. ಅಳದಂಗಡಿ ಕ್ಲಬ್ ಅಧ್ಯಕ್ಷ ಲ| ವಿಜಯ ಕುಮಾರ್ ಜೈನ್ ಸ್ವಾಗತಿಸಿದರು. ಲ| ವಸಂತ ಶೆಟ್ಟಿ ಅತಿಥಿಗಳನ್ನು ಬರಮಾಡಿಕೊಂಡರು. ಲ| ಎಲೋಶಿಯಸ್ ಲೋಬೊ ನೀತಿ ಸಂಹಿತೆ ಪಠಿಸಿದರು. ಲ| ಸುರೇಶ್ ಶೆಟ್ಟಿ ಲಾಲ ಮತ್ತು ಲ| ಸದಾನಂದ ಕುದ್ಯಾಡಿ ವರದಿ ಮಂಡಿಸಿದರು. ಹೊಸದಾಗಿ ಸೇರ್ಪಡೆಗೊಂಡ ರಾಮ ಪಿ. ಸಾಲ್ಯಾನ್ ಮತ್ತು ಮಂಜುನಾಥ ಅವರ ಪರಿಚಯ ವನ್ನು ಲ| ನಾಮದೇವ ರಾವ್ ನಿರ್ವಹಿಸಿ ದರು. ಲ| ವಿನ್ಸೆಂಟ್ ಟಿ. ಡಿಸೋಜಾ ಪ್ರಾರ್ಥನೆ ಹಾಡಿದರು. ರಾಜ್ಯಪಾಲರ ಪ್ರಶಂಸನಾ ಪತ್ರವನ್ನು ಲ| ವಿ.ಆರ್. ನಾಯಕ್ ವಾಚಿಸಿದರು. ಚಿತ್ರ: ಮನು ಮದ್ದಡ್ಕ.

Selestin d'sozaಮಡಂತ್ಯಾರು: ಮಂಗಳೂರು ಧರ್ಮ ಪ್ರಾಂತ್ಯದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಇದರ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಸೆಲೆಸ್ಟಿನ್ ಡಿಸೋಜ ಆಯ್ಕೆಯಾಗಿದ್ದಾರೆ.
ಶ್ರೀಮತಿ ಸೆಲೆಸ್ಟಿನ್ ಡಿಸೋಜ ಇವರು ಸಮಾಜ ಸೇವೆಯಲ್ಲಿ ಹೆಸರುವಾಸಿಯಾಗಿದ್ದು, ಭಾರತೀಯ ಜನತಾ ಪಾರ್ಟಿಯಲ್ಲಿ ಸಕ್ರೀಯ ಸದಸ್ಯರಾಗಿ, ಸೇಕ್ರೆಡ್‌ಹಾರ್ಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ, ಬೆಳ್ತಂಗಡಿ ವಲಯ ಕಥೋಲಿಕ್ ಸಭೆಯ ಸ್ತ್ರೀಹಿತ ಸಂಚಾಲಕರಾಗಿ, ಮಡಂತ್ಯಾರು ಘಟಕದ ಕಥೋಲಿಕ್ ಸಭಾದ ಪ್ರಧಾನ ಕಾರ್ಯದರ್ಶಿಯಾಗಿ, ಎಸ್.ವಿ.ಪಿ. ಸಂಘದ ಉಪಾಧ್ಯಕ್ಷರಾಗಿ, ಮಡಂತ್ಯಾರು ಚರ್ಚಿನ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ನೀಡುತ್ತಿದ್ದಾರೆ.

belziyam ninda sdm BEd ge betiಉಜಿರೆ : ಸಂಶೋಧನಾತ್ಮಕ ಅಧ್ಯಯನದ ನಿಮಿತ್ತ ಇತ್ತೀಚೆಗೆ ಬೆಲ್ಜಿಯಂನ ಶೈಕ್ಷಣಿಕ ತಂಡವು ಉಜಿರೆಯ ಎಸ್.ಡಿ.ಎಂ.ಬಿ.ಎಡ್ ಕಾಲೇಜಿಗೆ ಭೇಟಿ ನೀಡಿತು. ಬಿ.ಎಡ್.ಕಾಲೇಜಿನ ಧ್ಯೇಯ, ಉದ್ದೇಶ, ಶೈಕ್ಷಣಿಕ ಸೌಲಭ್ಯ ಮತ್ತು ಕಾಲೇಜಿನ ಪ್ರಾಧ್ಯಾಪಕರ ಪರಿಚಯದೊಂದಿಗೆ ಸಂಸ್ಥೆಯ ಶೈಕ್ಷಣಿಕ ಸಾಧನೆಗಳ ಕುರಿತು ಕಾಲೇಜಿನ ಪ್ರಾಂಶುಪಾಲ ಡಾ.ಕೆ. ನಿತ್ಯಾನಂದರವರು ವಿವರಿಸಿದರು.
ಬೆಲ್ಜಿಯಂ ಶೈಕ್ಷಣಿಕ ತಂಡದಲ್ಲಿ ತರಬೇತುದಾರ ಹೆಲ್ಡೆ ವಾನ್‌ಡೊರೆನ್, ಭೂಗೋಳ ಶಿಕ್ಷಕ ಸ್ಟೆಫಾನಿ ವರ್ಪ್ಲೆಸ್ಟಿ, ಫ್ರೆಂಚ್ ಶಿಕ್ಷಕ ಕಿಮ್ ಹ್ಯೂ, ಜೀವಶಾಸ್ತ್ರ ಹಾಗೂ ಇಂಗ್ಲೀಷ್ ಶಿಕ್ಷಕ ಬ್ರೆಚ್‌ದಗ್ರೇಟರ್, ಸಮಾಲೋಚಕಿ ಸಾರಾ ಡಿ ಬೇಕರ್, ಸಂಶೋಧಕ ಫ್ರಾಂಕ್‌ರೆಂಡರ್ಸ್, ಪ್ರಶಿಕ್ಷಣಾರ್ಥಿ ಸಪ್ನಕುಮಾರ್, ಆನ್‌ಕಾರ್ಡಿನೆಲ್, ನೀಲ್ ಡಿ ಗರ್ಸೆಮ್, ಜೊಲಿಯನ್ ವಂಡರ್‌ಗ್ರೂಕ್, ಸಂದೀಪ್ ಶೆಟ್ಟಿ ಮೊದಲಾದವರಿದ್ದು, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಶಿಕ್ಷಕ ತರಬೇತುದಾರ ಪ್ರದೀಪ್ ಕುಮಾರ್ ಇವರು ತಂಡದ ಸಂಯೋಜಕರಾಗಿ ಜತೆಗಿದ್ದರು.
ಬೆಲ್ಜಿಯಂನ ಶೈಕ್ಷಣಿಕ ತಂಡದೊಡಗಿನ ಸಂವಾದದಲ್ಲಿ ಮಾತನಾಡಿದ ಎಸ್.ಡಿ.ಎಂ. ಬಿ.ಎಡ್.ಕಾಲೇಜಿನ ಉಪನ್ಯಾಸಕ ಸಂತೋಷ್ ಸಲ್ದಾನ ರವರು ದ.ಕ ಶಾಲೆಗಳ ತರಗತಿಗಳಲ್ಲಿ ಕನ್ನಡ, ತುಳು, ಕೊಂಕಣಿ, ಮಲಯಾಳಂ, ಮರಾಠಿ ಮೊದಲಾದ ಐದಾರು ಮಾತೃಭಾಷೆಯ ಮಕ್ಕಳಿದ್ದು ಆ ಮಕ್ಕಳಿಗೆ ಪಠ್ಯದ ಪರಿಕಲ್ಪನೆಗಳನ್ನು ಅರ್ಥೈಸುವಲ್ಲಿ ಇಲ್ಲಿನ ಶಿಕ್ಷಕರಿಗೆ ಬೆಲ್ಜಿಯಂನ ಪರಿಸರಕ್ಕಿಂತ ಹೆಚ್ಚಿನ ಸವಾಲುಗಳಿವೆ. ಹಾಗೆಯೇ ಇಲ್ಲಿನ ಮಕ್ಕಳು ಶಾಲೆಯಲ್ಲಿ ಕಲಿಸುವ ಭಾಷೆಗಳ ಜೊತೆಗೆ ಸ್ಥಳೀಯವಾದ ಹಲವಾರು ಭಾಷೆಗಳನ್ನೂ ಕಲಿತಿರುವುದು ಈ ಪರಿಸರದ ಮಕ್ಕಳ ವಿಶೇಷತೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಬಿ.ಎಡ್.ಕಾಲೇಜಿನ ಉಪನ್ಯಾಸಕ ಪ್ರವೀಣ್ ಪದ್ಯಾಣ, ಕು.ವಿದ್ಯಾಶ್ರೀ ಹಾಗೂ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ ಉಪಸ್ಥಿತರಿದ್ದರು. ಬಿ.ಎಡ್.ನ ಪ್ರಶಿಕ್ಷಣಾರ್ಥಿ ಮರ್ಲಿನ್ ಪಿರೇರಾ ಸ್ವಾಗತಿಸಿ, ಮನಸ್ವಿನಿ ಧನ್ಯವಾದವಿತ್ತು ವರ್ನನ್ ಮೆಂಡೋನ್ಸಾ ಕಾರ್ಯಕ್ರಮ ನಿರೂಪಿಸಿದರು.

kokkada sahakari sapthahaಕೊಕ್ಕಡ : 64 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ನಮ್ಮ ನಡಿಗೆ ಸದಸ್ಯರ ಮನೆ ಕಡೆಗೆ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಸಂಘದ ಅಧ್ಯಕ್ಷ ನಾರಾಯಣ ಗೌಡ ನುಡಿದರು.
ಸಹಕಾರಿ ಸಪ್ತಾಹದ ಆರಂಭದ ದಿನವಾದ ನ.14 ರಂದು ಕೊಕ್ಕಡ ಸಂಘದ ಆವರಣದಲ್ಲಿ ಸಹಕಾರಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ಸಂಘದ ವ್ಯಾಪ್ತಿಗೆ ಒಳಪಟ್ಟ ಪ್ರತೀ ಸದಸ್ಯರ ಮನೆಗಳಿಗೂ ಸಂಘದ ನಿರ್ದೇಶಕರುಗಳು ಮತ್ತು ಸಿಬ್ಬಂದಿಗಳ ಸಹಯೋಗದಲ್ಲಿ ಸಹಕಾರಿ ಸಪ್ತಾಹದ ಆರಂಭದ ದಿನ ನಮ್ಮ ನಡಿಗೆ ಸದಸ್ಯರ ಮನೆ ಕಡೆಗೆ ಅನ್ನುವ ಧ್ಯೇಯವಾಕ್ಯದಡಿಯಲ್ಲಿ ಭೇಟಿ ನೀಡಲಿದ್ದು ಈ ಭೇಟಿಯನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮುಂದುವರೆಸಿ ವರ್ಷದೊಳಗೆ ಎಲ್ಲಾ ಸದಸ್ಯರ ಮನೆಗಳ ಭೇಟಿಯನ್ನು ಮುಗಿಸುವ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಭೇಟಿಯ ಸಂದರ್ಭ ಪ್ರತೀ ಸಂಘದ ಸದಸ್ಯರ ಮನೆಗಳಲ್ಲೂ ಬಾಕಿಯುಳಿದವರನ್ನು ಸದಸ್ಯರನ್ನಾಗಿಸುವುದು, ಸಂಘದಲ್ಲಿ ಉಳಿತಾಯ ಖಾತೆ ಹೊಂದದವರಿಗೆ ಹೊಸ ಖಾತೆಯನ್ನು ತೆರೆಯಲು ಬೇಕಾದ ದಾಖಲೆಗಳ ಮಾಹಿತಿ ನೀಡಿ ಖಾತೆಯನ್ನು ತೆರೆಯುವುದು, ಯಶಸ್ವಿನಿ ಯೋಜನೆ, ಸಂಘದಲ್ಲಿ ದೊರೆಯುವ ಸಾಲ ಸೌಲಭ್ಯಗಳ ಮಾಹಿತಿ ನೀಡುವುದು. ಸಂಘದ ವ್ಯವಹಾರಗಳ ಬಗ್ಗೆ ಸದಸ್ಯರ ಅಭಿಪ್ರಾಯಗಳನ್ನು ಪಡೆಯುವುದು, ಎಲ್ಲಾ ಸದಸ್ಯರ ಸಲಹೆ ಸೂಚನೆಗಳನ್ನು ಪಡೆದು ಸಂಘವನ್ನು ಅಭಿವೃದ್ದಿಯತ್ತ ಕೊಂಡೊಯ್ಯುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಜಿಲ್ಲೆಯಲ್ಲಿಯೇ ಪ್ರಥಮವಾಗಿ ವಿಶಿಷ್ಟವಾದ ಈ ಕಾರ್ಯಯೋಜನೆಯನ್ನು ಕೊಕ್ಕಡದ ಸಂಘದಲ್ಲಿ ಆರಂಭಿಸಲಾಗುತ್ತಿದೆ ಎಂದರು.
ಸಂಘದ ಉಪಾಧ್ಯಕ್ಷ ಎಮ್. ಲಕ್ಷ್ಮೀನಾರಾಯಣ ಶಬರಾಯ , ನಿರ್ದೇಶಕರುಗಳಾದ ಮಹಾಬಲ ನಾಯ್ಕ, ಸೀತಮ್ಮ, ಭವಾನಿ, ಸಂಘದ ಹಿರಿಯ ಸದಸ್ಯರುಗಳಾದ ಎಲ್ಲಿಕ್ಕಳ ಸೂರ್ಯನಾರಾಯಣ ಶರ್ಮ, ಶಂಕರ ಜೋಷಿ, ಭೂಪ ಗೌಡ,ಬದಿಜಾಲು ತಿಮ್ಮಪ್ಪ ಗೌಡ, ಚೋಮ ಬಡೆಕ್ಕರ, ಸುಂದರ ನಾಯ್ಕ, ವರ್ಗೀಸ್, ಕೃಷ್ಣ ನಾಯ್ಕ, ಮಗ್ಗಿ, ಸುಗುಣ, ಪದ್ಮಾವತಿ, ವೆಂಕಪ್ಪ ಗೌಡ ಮತ್ತು ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್ವರಿ ಸ್ವಾಗತಿಸಿದರು. ನವೀನ್ ಕಜೆ ವಂದಿಸಿದರು. ಬಾಲಮುರಳಿಕೃಷ್ಣ ನಿರೂಪಿಸಿದರು.

naravi basadi karthika deeposavaನಾರಾವಿ : ನಾರಾವಿ ಮಾಗಣೆ ಭಗವಾನ್ ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನ.9 ರಂದು ನೆರವೇರಿತು.
ಅಪರಾಹ್ನ ಜರುಗಿದ ನಿತ್ಯವಿಧಿ ಸಹಿತ ಶ್ರೀ ಪದ್ಮಾವತಿ ಅಮ್ಮನವರ ಆರಾಧನೆ ಹಾಗೂ ರಾತ್ರಿ ನಡೆದ ಭಗವಾನ್ ಶ್ರೀ ಧರ್ಮನಾಥ ಸ್ವಾಮಿಯ ಉತ್ಸವ ಕಾರ್ಯಕ್ರಮದಲ್ಲಿ ಊರ ಪರವೂರ ಅಸಂಖ್ಯಾತ ಭಕ್ತಾಧಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಬಸದಿಯ ಆಡಳಿತ ಸಮಿತಿಯ ಅಧ್ಯಕ್ಷ ಬಿ. ನಿರಂಜನ್ ಅಜ್ರಿ, ಕಾರ್ಯಾಧ್ಯಕ್ಷ ಪ್ರೇಮ್‌ಕುಮಾರ್ ಜೈನ್, ದಿಗಂಬರ ಜೈನ ಯುವಜನ ಸಂಘದ ಅಧ್ಯಕ್ಷ ಜಿನೇಂದ್ರ ಜೈನ್, ಭಾರತೀಯ ಜೈನ್ ಮಿಲನ್ ನಾರಾವಿ ಶಾಖೆಯ ಅಧ್ಯಕ್ಷ ನಿರಂಜನ್ ಜೈನ್, ಮಾಜಿ ನಿರ್ದೇಶಕ ಶಿಶುಪಾಲ್ ಜೈನ್, ಉದ್ಯಮಿಗಳಾದ ಮಹಾವೀರ್ ಜೈನ್, ಶಶಿಕಾಂತ್ ಜೈನ್, ಆಡಳಿತ ಸಮಿತಿಯ ಸದಸ್ಯ ಮುನಿರಾಜ್ ಜೈನ್,ಅಶೋಕ್ ಕುಮಾರ್ ಜೈನ್, ಈದು, ನಾರಾವಿ ಗ್ರಾಮಗಳ ಸಮಸ್ತ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು.

krishnamoorthiಬೆಳ್ತಂಗಡಿ: ಪ್ರಸ್ತುತ ಉಜಿರೆಯ ಸನಿವಾಸ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸು ತ್ತಿರುವ ಟಿ. ಕೃಷ್ಣಮೂರ್ತಿಯವರಿಗೆ ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲ್ಲಿರುವ ದಕ್ಷಿಣ ಭಾರತದ ಅಂತರರಾಜ್ಯ ವಿಶ್ವ ವಿದ್ಯಾಲಯವಾದ ದ್ರಾವಿಡಿಯನ್ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.
ಶ್ರೀ ಧ.ಮಂ.ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ. ಜಯಕುಮಾರ ಶೆಟ್ಟಿ ಮಾರ್ಗದರ್ಶನದಲ್ಲಿ ನಡೆಸಿದ ಅರಕನೆಟ್ ಮಾರ್ಕೆಟಿಂಗ್ :ಪ್ರಾಬ್ಲಮ್ಸ್ ಅಂಡ್ ಪ್ರಾಸ್ಪೆಕ್ಟ್ಸ್ – ಎ ಕೇಸ್ ಸ್ಟಡಿ ಆಫ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ (ಅಡಿಕೆ ಮಾರುಕಟ್ಟೆ-ಸಮಸ್ಯೆಗಳು ಮತ್ತು ಭವಿಷ್ಯ-ದ.ಕ ಜಿಲ್ಲೆಯ ಅಧ್ಯಯನ) ಎಂಬ ಸಂಶೋಧನಾ ಪ್ರಬಂಧವನ್ನು ಪುರಸ್ಕರಿಸಿ ವಿಶ್ವವಿದ್ಯಾಲಯವು ಟಿ. ಕೃಷ್ಣಮೂರ್ತಿಯವರಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.
ಟಿ. ಕೃಷ್ಣಮೂರ್ತಿಯವರು ಈ ಹಿಂದೆ ಉಜಿರೆಯ ಶ್ರೀ ಧ.ಮಂ. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿಯಾಗಿ, ಉಪ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಮಂಗಳೂರು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯದ ಉತ್ತಮ ಎನ್‌ಎಸ್‌ಎಸ್ ಅಧಿಕಾರಿ ಎಂಬ ಪ್ರಶಸ್ತಿ ಗಳಿಸಿದ್ದರು. ಹಾಗೆಯೇ ಅಂತರರಾಷ್ಟ್ರೀಯ ಜೇಸಿ ಸಂಸ್ಥೆಯ ಸದಸ್ಯರಾದ ಇವರು ವ್ಯಕ್ತಿತ್ವ ವಿಕಸನದ ರಾಷ್ಟ್ರೀಯ ತರಬೇತಿದಾರರಾಗಿ ವಿವಿಧ ವಿಷಯಗಳಲ್ಲಿ ವಿವಿಧ ಸಂಘಟನೆಗಳ ಸದಸ್ಯರಿಗೆ 2000ಕ್ಕೂ ಮಿಕ್ಕಿ ತರಬೇತಿಗಳನ್ನು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ನೀಡಿದ್ದಾರೆ. ಅಂತರರಾಷ್ಟ್ರೀಯ ಜೇಸಿ ಸಂಸ್ಥೆಯಿಂದ ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬೆಳ್ತಂಗಡಿ ತಾಲೂಕಿನ ಸಮೂಹ ಎಂಬ ಸಾಂಸ್ಕೃತಿಕ ಸಂಘಟನೆಯ ಸ್ಥಾಪಕ ಕಾರ್ಯದರ್ಶಿಗಳಾಗಿ 25 ವರ್ಷಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಅರ್ಥಶಾಸ್ತ್ರ ಹಾಗೂ ವ್ಯಕ್ತಿತ್ವ ವಿಕಸನದ ವಿಷಯದಲ್ಲಿ ಹಲವಾರು ಕಾರ್ಯಾಗಾರಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.

pathrika dinacharaneಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇದರ ವತಿಯಿಂದ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೆವಿಜಿ ಕಾನೂನು ಕಾಲೇಜು ಸುಳ್ಯ ಮತ್ತು ಸುದ್ದಿ ಬಿಡುಗಡೆ ಪತ್ರಿಕಾ ಸಮೂಹ ಇವರ ಸಹಭಾಗಿತ್ವದಲ್ಲಿ ನ. 16 ರಂದು ಕೆ.ವಿ.ಜಿ ಕಾನೂನು ಕಾಲೇಜು ಸುಳ್ಯದಲ್ಲಿ ನಡೆದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಪತ್ರಕರ್ತರಿಗೆ ವೃತ್ತಿ ಕಾರ್ಯಾಗಾರವನ್ನು ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಕೆ.ರವಿ ಪ್ರಧಾನ ಭಾಷಣಗೈದರು. ನ.ಪಂ.ಅಧ್ಯಕ್ಷೆ ಶೀಲಾವತಿ ಮಾಧವ ಮುಖ್ಯ ಅತಿಥಿಯಾಗಿದ್ದರು. ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಶಂಕರಪ್ಪ, ಅಕಾಡೆಮಿ ಸದಸ್ಯರುಗಳಾದ ರವಿ, ವೆಂಕಟೇಶ್, ಕೆ.ವಿ.ಜಿ ಕಾನೂನು ಕಾಲೇಜು ಪ್ರಾಂಶುಪಾಲರಾದ ಉದಯಕೃಷ್ಣ, ಕಾರ್ಯಾಗಾರ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಯು.ಪಿ.ಶಿವಾನಂದ, ಸಂಚಾಲಕ ಕೆ.ಎಂ.ಮುಸ್ತಫಾ, ಸಂಘಟನಾ ಸಮಿತಿಯ ಗೌರವಾಧ್ಯಕ್ಷ ಹರೀಶ್ ರೈ ಪಿ.ಬಿ., ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ವೇದಿಕೆಯಲ್ಲಿದ್ದರು.

sammelana2

sammelana

sammelana1ಉಜಿರೆ : ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಲಾದ ಸರ್ವಧರ್ಮ ಸಮ್ಮೇಳನದ 85ನೇ ಅಧಿವೇಶನವನ್ನು ಸುಬ್ರಹ್ಮಣ್ಯ ಮಠದ ವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿ ಉದ್ಘಾಟಿಸಿ, ಮಾತನಾಡಿದ ಅವರು ಸಮಾಜದ ಒಳಿತಿಗಾಗಿ ಧರ್ಮದ ಆಚರಣೆಯ ಅವಶ್ಯಕತೆ ಇದೆ. ನಮ್ಮ ಜೀವನದಲ್ಲಿ ಧರ್ಮವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಎಲೆಗೂ, ಮರಕ್ಕೂ ಇರುವ ಅವಿನಾಭಾವ ಸಂಬಂಧ ನಮಗೂ ಧರ್ಮಕ್ಕೂ ಇದೆ. ನಮ್ಮಿಂದ ಧರ್ಮ, ಧರ್ಮದಿಂದ ನಾವು ಎಂಬ ಭಾವನೆ ಇದ್ದಾಗ ಧರ್ಮ ಜಾಗೃತಿಯಾಗುತ್ತದೆ. ಧರ್ಮ ಜಾಗೃತಿ ಮತ್ತು ಧರ್ಮದ ಅನುಷ್ಠಾನದಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಜೈನ ಧರ್ಮದಲ್ಲಿ ಸಮನ್ವಯ ಎಂಬ ವಿಷಯದ ಬಗ್ಗೆ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ, ಉಡುಪಿಯ ಅಕ್ಬರ್ ಅಲಿ ಇಸ್ಲಾಂ ಧರ್ಮದಲ್ಲಿ ಸಮನ್ವಯ ದೃಷ್ಟಿ ಎಂಬ ವಿಷಯದ ಬಗ್ಗೆ, ಕ್ರೈಸ್ತ ಧರ್ಮದ ಬಗ್ಗೆ ಬೆಂಗಳೂರಿನ ಸ್ವಾಮಿ ಅಂತೋನಿರಾಜ್ ಮಾತನಾಡಿ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ವೆಲ್ಲೂರಿನ ಶ್ರೀ ನಾರಾಯಣಿ ಪೀಠಂ ನ ಶ್ರೀಶಕ್ತಿ ಅಮ್ಮ ವಹಿಸಿದ್ದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್ ಕಾಮತ್ ಧನ್ಯವಾದವಿತ್ತರು. ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಸಂಪತ್ ಕುಮಾರ್ ಮತ್ತು ಪ್ರೊ. ಬಿ.ಎ. ಕುಮಾರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
ರಾತ್ರಿ ಕಂಚಿಮಾರು ಕಟ್ಟೆ ಉತ್ಸವ ನಡೆಯಿತು.

pay 2 cartಮಡಂತ್ಯಾರು: ಇಲ್ಲಿಯ ಆಶೀರ್ವಾದ್ ಸಭಾಂಗಣದ ಕಟ್ಟಡದಲ್ಲಿ ರಿಟೇಲ್ ಆನ್‌ಲೈನ್ ಶಾಪ್ ಪೇ ಟೂ ಕಾರ್ಟ್ ನ.11ರಂದು ಶುಭಾರಂಭಗೊಂಡಿದೆ.
ಕುಟುಂಬದ ಹಿರಿಯರಾದ ಜೆರಾಲ್ಡ್ ಲೋಬೊ ಮತ್ತು ಶ್ರೀಮತಿ ಸೆಲಿನ್ ಲೋಬೊ ರಿಬ್ಬನ್ ಕತ್ತರಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದರು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂ. ಫಾ| ಬಾಸಿಲ್‌ವಾಸ್ ದೀಪ ಬೆಳಗಿಸಿ ಆಶೀರ್ವಚನ ನೆರವೇರಿಸಿ ಮಡಂತ್ಯಾರಿಗೊಂದು ಹೊಸ ಯುಗ ಪ್ರಾರಂಭಗೊಂಡಿದೆ. ಇಂಟರ್‌ನೆಟ್ ಮೂಲಕ ಇಡೀ ಭೂಲೋಕ ಖರೀದಿಸುವ ವ್ಯವಸ್ಥೆ ಪೇ ಟೂ ಕಾರ್ಟ್ ಯೋಜನೆ ಎಂದರು. ನಾವು ಪಡುವ ಶ್ರಮಕ್ಕೆ ದೇವರ ಅನುಗ್ರಹ ಇರುತ್ತದೆ. ಇಲ್ಲಿ ಉತ್ತಮ ವ್ಯವಹಾರ ನಡೆಯಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಶಾದೀಪದ ನಿರ್ದೇಶಕ ವಂ. ಫಾ| ಜೋರ್ಜ್ ಫಾಂತುಮಯೆರ್, ಮಡಂತ್ಯಾರು ಜುಮಾ ಮಸೀದಿಯ ಕತೀಬ್ ಅಬ್ದುಲ್ ರಜಾಕ್ ಶಾಫಿ, ಪೇ ಟೂ ಕಾರ್ಟ್ ಭಾರತೀಯ ವ್ಯವಹಾರ ಮುಖ್ಯಸ್ಥ ಸೂರಜ್ ರೆಬೆಲ್ಲೊ, ಪೇ ಟೂ ಕಾರ್ಟ್ ಸ್ಥಳೀಯ ಮುಖ್ಯಸ್ಥ ಧನಂಜಯ ಕುಮಾರ್, ವಲಯ ಮುಖ್ಯಸ್ಥ ಬಿ.ಎಸ್. ರಾಜೇಶ್ ಶುಭ ಹಾರೈಸಿದರು. ಮಾಲಕ ಸ್ಟೀವ್ ಅಂದ್ರಾದೆ ಸ್ವಾಗತಿಸಿ, ಶ್ರೀಮತಿ ಜುಲಿಯಾನಾ ಅಂದ್ರಾದೆ ವಂದಿಸಿದರು.
ಕು| ಸ್ಟೆಫಿ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು. ಜಾರ್ಜ್ ಅಂದ್ರಾದೆ ಆಗಮಿಸಿದ ಅತಿಥಿ ಗಣ್ಯರನ್ನು ಸತ್ಕರಿಸಿ ದರು. ಇಲ್ಲಿ ಎಲ್ಲಾ ಗ್ರಹೋಪಯೋಗಿ ವಸ್ತುಗಳು, ಅಡುಗೆ ಉಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು ಅತ್ಯಂತ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ ಎಂದು ತಿಳಿಸಿದರು.

ka ra ve karyakramaನಮ್ಮ ನಿಯತ್ತು ನಮ್ಮನ್ನು ಕಾಪಾಡುತ್ತದೆ : ಕರವೇ ಅಧ್ಯಕ್ಷ ಶ್ರೀನಿವಾಸ ಗೌಡ
ಈ ಭೂಮಿಯ ಮೇಲೆ ಎಲ್ಲರೂ ಒಂದೇ, ಇಲ್ಲಿ ಯಾವ ಜಾತಿ, ಯಾವ ಧರ್ಮ? ನಮ್ಮ ನಿಯತ್ತು ಸರಿ ಇದ್ದರೆ ಅದೇ ನಮ್ಮನ್ನು ಕಾಪಾಡುತ್ತದೆ. ನಮ್ಮ ಉಪಚಾರ ಹೇಗಿರುತ್ತದೋ ಅದೇ ರೀತಿ ಸಮಾಜ ನಮ್ಮನ್ನೂ ಉಪಚರಿಸುತ್ತದೆ. ಕರ್ನಾಟಕದ ಮಣ್ಣಲ್ಲಿ ಹುಟ್ಟಿದ ಬಳಿಕ ಈ ಕನ್ನಡ ತಾಯಿ ಭುವನೇಶ್ವರಿಯ ಋಣ ತೀರಿಸುವ ಉದ್ಧೇಶದಿಂದ ಈ ಘಟಕದ ತಾ| ಅಧ್ಯಕ್ಷತೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ, ಎಲ್ಲರೂ ಒಟ್ಟಿಗೆ ಸೇರಿ ಈ ಕೆಲಸ ಮಾಡೋಣ. ಈ ಕಾರ್ಯಕ್ರಮಕ್ಕೆ ನಮಗೆ ಅನೇಕರು ಕೈ ಜೋಡಿಸಿದ್ದಾರೆ ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಗೌಡ ಪಟ್ರಮೆ ಹೇಳಿದರು.

ಗಣ್ಯರ ಅನಿಸಿಕೆಗಳು:
ದ.ಕ. ಜಿಲ್ಲೆಯ ೫ ಸಾವಿರಕ್ಕೂ ಅಧಿಕ ಮಂದಿ ಬೇರೆ ಬೇರೆ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿದ್ದು ಅವರ ರಕ್ಷಣೆಯನ್ನು ಟಿ.ಎ. ನಾರಾಯಣ ಗೌಡ ನೇತೃತ್ವದ ಕರವೇ ಮಾಡುತ್ತಿದೆ, ಕನ್ನಡ ಭಾಷೆಗೆ, ಕನ್ನಡಿಗರಿಗೆ ಅನ್ಯಾಯವಾದರೆ ನಾವು ಹೇಗೆ ಒಗ್ಗಟ್ಟು ಸಾಧಿಸುತ್ತೇವೋ ಭಾರತ ಮಾತೆಗೆ ಅನ್ಯಾಯ ವಾದಾಗ ಭಾರತೀಯರಾದ ನಾವು ಒಗ್ಗಟ್ಟಾಗೋಣ. -ಹರೀಶ್ ಪೂಂಜ, ಜಿಲ್ಲಾಧ್ಯಕ್ಷರು ಬಿಜೆಪಿ ಯುವಮೋರ್ಚಾ
ಕರವೇ ಇಂದು ಜಾತಿ ಧರ್ಮದ ಭೇದವಿಲ್ಲದೆ ಕೆಲಸ ಮಾಡುತ್ತಿದೆ, ನಾವು ಇತರ ಭಾಷಿಗರ ವಿರೋಧಿಗಳಲ್ಲ, ಆದರೆ ಇತರ ಭಾಷಿಗರು ನಮ್ಮ ಮೇಲೇರಿ ಬರುವುದನ್ನು ಸಹಿಸುವುದಿಲ್ಲ. -ಕರವೇ ಮಂಗಳೂರು ತಾ| ಅಧ್ಯಕ್ಷ ಮಧುಸೂಧನ ಗೌಡ
ನೇತ್ರಾವತಿ ನದಿ ತಿರುವು ಯೋಜನೆ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ವೀರಪ್ಪ ಮೊಲಿ, ಕರಾವಳಿ ಭಾಗದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ. ಅತ್ತ ಜನರಿಗೆ ಕುಡಿಯುವ ನೀರು ಬೇಕು, ಇತ್ತ ಕರಾವಳಿಯ ಜೀವನದಿ ನೇತ್ರಾವತಿ, ಪಶ್ಚಿಮ ಘಟ್ಟ ಉಳಿಯಬೇಕು ಎಂಬುದು ಕರವೇ ನೀತಿ.-ತೇಗೂರು ಜಗದೀಶ್ ಅರಸ್. ಉಡುಪಿ-ಮಂಗಳೂರು ಕರವೇ ಉಸ್ತುವಾರಿ.

ಉಜಿರೆ : ಕರ್ನಾಟಕ ರಕ್ಷಣಾ ವೇದಿಕೆ ಕಳೆದ 18 ವರ್ಷಗಳಿಂದ ನಿರಂತರವಾಗಿ ರಾಜ್ಯದಲ್ಲಿ ಟಿ.ಎ. ನಾರಾಯಣ ಗೌಡರ ನೇತೃತ್ವದಲ್ಲಿ ಕನ್ನಡದ ಸೇವೆಯ ಜೊತೆಗೆ ಕನ್ನಡ ಭಾಷೆ ಮತ್ತು ಕನ್ನಡಿಗರ ಮೇಲೆ ಇತರ ಭಾಷಿಗರಿಂದ ಆಗುತ್ತಿರುವ ಆಕ್ರಮಣವನ್ನು ತಡೆದು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಲ| ಅನಿಲ್‌ದಾಸ್ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ನ. 11 ರಂದು ಉಜಿರೆ ಅರಿಪ್ಪಾಡಿ ಮಠ ಮೈದಾನದಲ್ಲಿ ಆಯೋಜಿಸಿದ್ದ 62ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದ ಬಹುಮಾನ ವಿತರಣೆ ಹಾಗೂ ತಾಲೂಕು ಸಮಿತಿಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಘಟಕದ ನೂತನ ಅಧ್ಯಕ್ಷ, ಉದ್ಯಮಿ ಶ್ರೀನಿವಾಸ ಗೌಡ ಪಟ್ರಮೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅರಿಪ್ಪಾಡಿ ಮಠದ ಮುಖ್ಯಸ್ಥ ಬಾಲಕೃಷ್ಣ ಅರಿಪ್ಪಡಿತ್ತಾಯ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಪ್ರವೀಣ್ಚಂದ್ರ ಜೈನ್ ಪಡಂಗಡಿ, ಬಿಜೆಪಿ ಯುವ ಮೋರ್ಚಾ ತಾ| ಅಧ್ಯಕ್ಷ ಸಂಪತ್ ಬಿ. ಸುವರ್ಣ, ಮಂಗಳೂರು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಲತಾ ಸಾಲ್ಯಾನ್, ವಸ್ತ್ರಂ ಉಜಿರೆ ಮಾಲಕ ಸುಧಾಕರ ಗೌಡ ಧರ್ಮಸ್ಥಳ, ಗಣೇಶ್ ಪ್ರಸಾದ್ ಮೋಟಾರ್ ಲಿಂಕ್ಸ್ ಮಾಲಕ ಬಿ. ಪಾಂಡುರಂಗ ಭಂಡಾರ್ಕರ್, ಮಂಗಳೂರು ನಗರ ಘಟಕದ ಅಧ್ಯಕ್ಷ ಮುಹಮ್ಮದ್ ರಝಾಕ್, ಕರ್ನಾಟಕ ಕಾರ್ಮಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಲಕ್ಷ್ಮಣ ಗೌಡ, ಉರಗ ಪ್ರೇಮಿ ಸ್ನೇಕ್ ಜೋಯ್, ಬಿ.ಎಂ. ಗ್ರೂಪ್ಸ್‌ನ ಮಾಲಕ ಹನೀಫ್ ಬಿ.ಎಮ್, ಸಿಂಧೂ ಇಲೆಕ್ಟ್ರಿಕಲ್ಸ್ ಮಾಲಕ ಜನಾರ್ದನ, ಉದ್ಯಮಿ ಶ್ರೀಕಾಂತ್ ಸಂಪಿಗೆತ್ತಾಯ, ಮಂಗಳೂರಿನ ಉದ್ಯಮಿ ಶಮೀರ್ ನಾಳ, ಜಲೀಲ್ ಬಾಬಾ ಬೆಳ್ತಂಗಡಿ, ಗಿರೀಶ್ ಪ್ರಭು ಉಜಿರೆ, ವಿಶ್ವನಾಥ ಗೌಡ ಶಾರದಾ ಫ್ಯಾನ್ಸಿ ಉಜಿರೆ, ಫಝಲ್ ರಹಿಮಾನ್ ಕೋಯ ಎರ್ನೋಡಿ ಉಜಿರೆ, ಯು.ಕೆ. ಮುಹಮ್ಮದ್ ಹನೀಫ್ ಕಾಶಿಬೆಟ್ಟು, ಆಸಿಫ್ ಮಂಗಳೂರು ಇವರುಗಳು ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ :
ಸಮಾರಂಭದಲ್ಲಿ ತಾಲೂಕಿನ ಸಾಧಕ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಕೆ. ಬಾಲಭಾಸ್ಕರ್, ಸಮಾಜ ಸೇವಕ ರಾಮಚಂದ್ರ ಶೆಟ್ಟಿ ಉಜಿರೆ, ಮಂಗಳೂರು ನ್ಯಾಷನಲ್ ಟ್ಯುಟೋರಿಯಲ್ ಕಾಲೇಜು ಪ್ರಾಂಶುಪಾಲ ಯು.ಎಚ್. ಖಾಲಿದ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ದೇವಿಪ್ರಸಾದ್, ಝೀ ಕನ್ನಡ ಕಾಮಿಡಿ ಕಿಲಾಡಿ ಕಲಾವಿದ ಅನೀಶ್ ಅಮೀನ್, ಸ್ವಾರ್ ಸುವರ್ಣ ವಾಹಿನಿ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ ವಿಜೇತ ಮಾಸ್ಟರ್ ತೌಶೀರ್ ಎಂ. ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಝೀ ಕನ್ನಡದ ಕಾಮಿಡಿ ಕಿಲಾಡಿ ಕಲಾವಿದ ಹಿತೇಶ್ ಕಾಪಿನಡ್ಕ ಅವರ ಪರವಾಗಿ ಅವರ ತಂದೆ ಸನ್ಮಾನ ಸ್ವೀಕರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ಆಬಿದ್ ಅಲಿ (ಅಭಿ) ಉಜಿರೆ, ಜೊತೆ ಕಾರ್ಯದರ್ಶಿಗಳಾದ ಶಾಹಿದ್ ಪಾದೆ ಮತ್ತು ಸಿದ್ದೀಕ್, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ ಪಡೀಲ್ ಮುಂಡಾಜೆ, ಸಂಘಟನಾ ಜೊತೆ ಕಾರ್ಯದರ್ಶಿ ನಿತಿನ್ ಕುಮಾರ್ ಹರ್ಷ ಎಂಟರ್‌ಪ್ರೈಸಸ್, ಸಂಚಾಲಕ ಹರೀಶ್ ಸುವರ್ಣ ಕನ್ಯಾಡಿ, ಮತ್ತು ಅನೀಷ್ ಬೆಡ್‌ಮಾರ್ಟ್ ಹಾಗೂ ಎಲ್ಲಾ ಸದಸ್ಯರುಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಘಟಕದ ಸದಸ್ಯ ಹರೀಶ್ ಬಳೆಂಜ ಸ್ವಾಗತಿಸಿದರು. ಇರ್ಪಾನ್ ಎಂ.ಡಿ. ಕ್ರೀಡಾ ವಿಜೇತರ ಪಟ್ಟಿ ವಾಚಿಸಿದರು. ಪ್ರ. ಕಾರ್ಯದರ್ಶಿ ಶಾಹುಲ್ ಹಮೀದ್ ಕ್ಯೂಟಿಎಫ್ ಧನ್ಯವಾದವಿತ್ತರು. ಶಮಿತಾ ಪ್ರಾರ್ಥನೆ ಹಾಡಿದರು. ಶ್ರೀನಿವಾಸ್ ಗೌಡರ ಪತ್ನಿ ಪುಷ್ಪಾ ಶ್ರೀನಿವಾಸ್ ಸಹಿತ ಎಲ್ಲಾ ಮಹಿಳಾ ಸದಸ್ಯರುಗಳೂ ಕೂಡ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಅಕ್ಷತಾ ಮತ್ತು ಮಂಜು ಆರ್ ಕಾರ್ಯಕ್ರಮ ನಿರೂಪಿಸಿದರು.

bjpಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಸಚಿವೆ, ರಾಜ್ಯ ಪ್ರದಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರ ಬಗ್ಗೆ ಅವಹೇಳನಕಾರಿಯಾಗಿ ಬರೆದ ಯತೀಶ್ ಯಕ್ಷ ಹೆಸರಿನ ಫೆಸ್ಬುಕ್ ಖಾತೆದಾರನ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಮತ್ತು ಸಾಮಾಜಿಕ ಜಾಲತಾಣ ಪ್ರಕೋಷ್ಟ ಬೆಳ್ತಂಗಡಿ ಮಂಡಲದಿಂದ ಲಿಖಿತ ದೂರು ದಾಖಲಿಸಲಾಯಿತು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ರಂಜನ್ ಜಿ ಗೌಡ, ಜಿಲ್ಲಾ ಕಾರ್ಯದರ್ಶಿ ಕೊರಗಪ್ಪ ನಾಯ್ಕ್, ತಾ.ಪ.ಸ ಸುಧಾಕರ್ ಲಾಯಿಲ, ಲಾಯಿಲ ಪಂಚಾಯತ್ ಉಪಾಧ್ಯಕ್ಷ ಗಿರೀಶ್ ಡೊಂಗ್ರೆ, ಸಾಮಾಜಿಕ ಜಾಲತಾಣ ಸಂಚಾಲಕ ವಿಜಯ್ ಗೌಡ ಅತ್ತಾಜೆ, ಜಿಲ್ಲಾ ಸಾಮಾಜಿಕ ಜಾಲತಾಣ ಸದಸ್ಯ ರಾಜ್ ಗೋಪಾಲ್ ಭಟ್ ಮತ್ತು ನಾರಾಯಣ್ ಆಚಾರ್ ಉಪಸ್ಥಿತರಿದ್ದರು.

hardhika abhinandane

hardhika abhinandane

Thursday, August 27th, 2015 | Suddi Belthangady | no responses ಮುಂದೆ ಓದಿ

mosaru kudike

RK ujire

25 years wedding anniversary

amogha dress

abhinandane

shree rama kshethra

sdm speciality hospital

R K ujire

anugraha mobiles

ತ್ರೋಬಾಲ್  ತಾಲೂಕು ಮಟ್ಟಕ್ಕೆ ಆಯ್ಕೆ

ತ್ರೋಬಾಲ್ ತಾಲೂಕು ಮಟ್ಟಕ್ಕೆ ಆಯ್ಕೆ

Thursday, August 27th, 2015 | Suddi Belthangady | no responses ಸವಣಾಲು: ಸ.ಪ್ರಾ.ಶಾಲೆ ಸವಣಾಲು ಇಲ್ಲಿ ನಡೆದ ಅಳದಂಗಡಿ ವಲಯ ಮಟ್ಟದ ಬಾಲಕ-ಬಾಲಕಿಯರ ತ್ರೋಬಾಲ್… ಮುಂದೆ ಓದಿ

ಇಂದಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಆಯ್ಕೆ

Thursday, August 27th, 2015 | suddiblt | no responses ಇಂದಬೆಟ್ಟು : ಇಲ್ಲಿನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಭೆಯು… ಮುಂದೆ ಓದಿ

ಅಕ್ರಮ ಮದ್ಯ ಮಾರಾಟ ವಿರೋಧಿಸಿ ಕಾಯರ್ತಡ್ಕದಲ್ಲಿ ಭಾರೀ ಪ್ರತಿಭಟನೆ, ರಸ್ತೆ ತಡೆ

Thursday, August 27th, 2015 | suddiblt | no responses ಕಳೆಂಜ: ಕಳೆಂಜ ಪರಿಸರದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವಂತೆ ಒತ್ತಾಯಿಸಿ ಕಳೆಂಜ,… ಮುಂದೆ ಓದಿ

ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

Thursday, August 27th, 2015 | suddiblt | no responses ಸವಣಾಲು: ಸವಣಾಲು ಗ್ರಾಮದ ಕೃಷ್ಣಪ್ಪ ಪೂಜಾರಿ (65ವ.) ಎಂಬವರು ಆ. 19 ರಿಂದ… ಮುಂದೆ ಓದಿ

ವಸಂತ ಶೆಟ್ಟಿಯವರಿಗೆ ಸಾಧನಾಶ್ರೀ ಪ್ರಶಸ್ತಿ

ವಸಂತ ಶೆಟ್ಟಿಯವರಿಗೆ ಸಾಧನಾಶ್ರೀ ಪ್ರಶಸ್ತಿ

Thursday, August 27th, 2015 | suddiblt | no responses ಬೆಳ್ತಂಗಡಿ : ಜೇಸಿಐ ಇಂಡಿಯಾ ವಲಯ ೧೫ರ ವತಿಯಿಂದ ಜೇಸಿಐ ಬೆಳ್ಳಾರೆ ಘಟಕದ… ಮುಂದೆ ಓದಿ

ನಿಯಮಗಳನ್ನು ಗಾಳಿಗೆ ತೂರಿ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಮಣ್ಣು ಕೊರೆದು ಹೋಗಿ ಅಲ್ಲಲ್ಲಿ ಪೈಪ್ ಪ್ರತ್ಯಕ್ಷ : ಭಾರೀ ಅನಾಹುತ ಸಾಧ್ಯತೆ

Thursday, August 27th, 2015 | suddiblt | no responses ನೆರಿಯ : ಜನರ ಭಾರೀ ವಿರೋಧದ ನಡುವೆಯೇ ಪಂಪ್ ಹೌಸ್, ಪೈಪ್‌ಲೈನ್ ಕಾಮಗಾರಿ… ಮುಂದೆ ಓದಿ

ಎತ್ತಿನ ಹೊಳೆ ಯೋಜನೆ: ಬಿರುಸುಗೊಂಡ ಕಾಮಗಾರಿ  ಜನರ ತೀವ್ರ ವಿರೋಧ: ಹೋರಾಟಕ್ಕೆ ಸಿದ್ಧತೆ

Thursday, August 27th, 2015 | suddiblt | no responses  ಬೆಳ್ತಂಗಡಿ : ಅವೈಜ್ಞಾನಿಕವಾಗಿ ನಡೆಯುತ್ತಿರುವ ಎತ್ತಿನ ಹೊಳೆ ಯೋಜನೆ ಮತ್ತು ನದಿ ತಿರುವು… ಮುಂದೆ ಓದಿ

ಹಣಗಳಿಕೆಯ ಶಿಕ್ಷಣಕ್ಕಿಂತ ಬುದ್ಧಿಮತ್ತೆ ಉದ್ದೀಪನ ಶಿಕ್ಷಣ ಅಗತ್ಯ : ಪ್ರದೀಪ್ ಕುಮಾರ್ ಕಲ್ಕೂರ

Thursday, August 27th, 2015 | suddiblt | no responses ವೇಣೂರು : ಹಣಗಳಿಕೆಯ ಶಿಕ್ಷಣದ ಬದಲು ಬುದ್ದಿಮತ್ತೆ ಮತ್ತು ನೈತಿಕ ಜಾಗೃತಿ ಉದ್ದೀಪನಗೊಳಿಸುವ… ಮುಂದೆ ಓದಿ

14ನೇ ಹಣಕಾಸು ಯೋಜನೆ ಅನುದಾನ ಕಿತ್ತುಕೊಂಡರೆ ರಾಜ್ಯ ಸರಕಾರದ ವಿರುದ್ಧ ಹೋರಾಟ : ಕೋಟ ಎಚ್ಚರಿಕೆ

Thursday, August 27th, 2015 | suddiblt | no responses ಬಂದಾರು : ಈ ಹಿಂದೆ ಇದ್ದ 13ನೇ ಹಣಕಾಸು ಯೋಜನೆಯನ್ನು ಬದಲಿಸಿರುವ ಪ್ರಧಾನಮಂತ್ರಿ… ಮುಂದೆ ಓದಿ

ನೆರಿಯ ಪ್ರಕರಣದ ಆರೋಪಿಗಳಿಬ್ಬರು ಪೊಲೀಸ್ ಬಲೆಗೆ

Thursday, August 27th, 2015 | suddiblt | no responses ಬೆಳ್ತಂಗಡಿ : ನೆರಿಯ ಗ್ರಾಮದ ಕಾಟಾಜೆ ನಿವಾಸಿ ಸುಂದರ ಮಲೆಕುಡಿಯ ಅವರ ಮೇಲೆ… ಮುಂದೆ ಓದಿ

ವಿಮುಕ್ತಿಯಿಂದ 6.50 ಲಕ್ಷ ವೆಚ್ಚದಲ್ಲಿ  300 ವಿದ್ಯಾರ್ಥಿಗಳಿಗೆ ಉಚಿತ ಸೋಲಾರ್ ಲೈಟ್

Thursday, August 27th, 2015 | suddiblt | no responses ಲಾಯಿಲ : ಕಪುಚಿನ್ ಕೃಷಿಕ ಸೇವಾ ಕೇಂದ್ರ ವಿಮುಕ್ತಿ ಗ್ರಾಮಾಭಿವೃದ್ಧಿ ಯೋಜನೆ ಲಾಯಿಲ… ಮುಂದೆ ಓದಿ

ಬೆಳ್ತಂಗಡಿ ನ.ಪಂ. ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಧ್ಯಕ್ಷರಾಗಿ ಶ್ರೀಮತಿ ನಳಿನಿ ವಿಶ್ವನಾಥ್, ಉಪಾಧ್ಯಕ್ಷೆ ಮಮತಾ ಶೆಟ್ಟಿ

Thursday, August 27th, 2015 | suddiblt | no responses   ಬೆಳ್ತಂಗಡಿ: ನಗರ ಪಂಚಾಯತ್‌ನಲ್ಲಿ ರಾಜೀನಾಮೆಯಿಂದಾಗಿ ತೆರವಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗೆ ಆ.… ಮುಂದೆ ಓದಿ

ಉಪ್ಪಿನಂಗಡಿ ರೋಟರಿ ಕ್ಲಬ್

ಉಪ್ಪಿನಂಗಡಿ ರೋಟರಿ ಕ್ಲಬ್

Thursday, August 27th, 2015 | suddiblt | no responses ಬೆಳ್ತಂಗಡಿ : ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಉಪ್ಪಿನಂಗಡಿಯ ವೈದ್ಯ, ನೇತ್ರಾವತಿ ತಿರುವು… ಮುಂದೆ ಓದಿ

ಜಾವೆಲಿನ್ ತ್ರೋ: ನಿಶ್ಮಿತಾ ರಾಷ್ಟ್ರಮಟ್ಟಕ್ಕೆ

ಜಾವೆಲಿನ್ ತ್ರೋ: ನಿಶ್ಮಿತಾ ರಾಷ್ಟ್ರಮಟ್ಟಕ್ಕೆ

Thursday, August 27th, 2015 | suddiblt | no responses ಬೆಳ್ತಂಗಡಿ: ಜವಾಹರ್ ನವೋದಯ ವಿದ್ಯಾಲಯ ಇದರ ಕ್ರೀಡಾ ಕೂಟದಲ್ಲಿ ೧೭ ರ ವಯೋಮಾನದ… ಮುಂದೆ ಓದಿ

  ಬೆಳ್ತಂಗಡಿ : ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ರಿಕ್ಷಾ ಮತ್ತು ಪಿಕಪ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಎಲ್.ಕೆ.ಜಿ ವಿದ್ಯಾರ್ಥಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಬಾರ್ಯ ಎಂಬಲ್ಲಿ ಇಂದು(ನ. 22) ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಬಾರ್ಯ ಮೂಡಡ್ಕ ಅಲ್ ಮದೀನತ್ತುಲ್ ಮುನವ್ವರ ಆಂಗ್ಲ ಮಾಧ್ಯಮ ಶಾಲೆಯ ಎಲ್.ಕೆ.ಜಿ. ವಿದ್ಯಾರ್ಥಿ, ಕೆರೀಂ ದರ್ಖಾಸು ಅವರ ಪುತ್ರ ಮಹಮ್ಮದ್ ಸನದ್(6 ವ.) ಎಂದು ಗುರುತಿಸಲಾಗಿದೆ. ವಾಹನದಲ್ಲಿದ್ದ ಉಳಿದ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಿಕಪ್ ಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ.

killuruಬೆಳ್ತಂಗಡಿ : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಇದರ ಸದಸ್ಯರಾಗಿ ಬೆಳ್ತಂಗಡಿ ತಾಲೂಕು ಕಿಲ್ಲೂರಿನ ಯುವ ಪ್ರತಿಭೆ, ಸಂಘಟಕ, ಯುವ ವಾಗ್ಮಿಯಾಗಿರುವ ತನ್ಸೀಫ್ ಕಿಲ್ಲೂರು ಇವರನ್ನು ನೇಮಕ ಮಾಡಲಾಗಿದೆ.

yoga

Yoga1

yoga2ಧರ್ಮಸ್ಥಳ : ಶಾಂತಿವನ ಟ್ರಸ್ಟ್ ಧರ್ಮಸ್ಥಳ ವತಿಯಿಂದ ಅಂತಾರಾಷ್ಟ್ರೀಯ ಯೋಗೋತ್ಸವ ಮತ್ತು 2ನೇ ಒಕ್ಕೂಟ ಯೋಗ ಫೆಡರೇಶನ್ ಕ್ರೀಡಾ ಕಪ್-2017  ಉದ್ಘಾಟನಾ ಸಮಾರಂಭವು ಇಂದು(ನ. 21) ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.
ಉದ್ಘಾಟನೆಯನ್ನು ಆಸ್ಟ್ರಿಯಾ ವಿಯೆನ್ನಾ ಶ್ರೀ ದೀಪ್ ಮಾಧವಾನಂದ ಆಶ್ರಮದ ವಿಶ್ವ ಗುರು ಮಹಾಮಂಡಲೇಶ್ವರ ಪರಮಹಂಸ ಶ್ರೀ ಸ್ವಾಮಿ ಮಹೇಶ್ವರಾನಂದಜಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಕ್ ಉಪಸ್ಥಿತರಿದ್ದರು.
ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಂತಿವನ ಟ್ರಸ್ಟ್‌ನ ಟ್ರಸ್ಟಿಗಳಾದ ಶ್ರೀಮತಿ ಹೇಮಾವತಿ ವಿ ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಭಾರತ ಯೋಗ ಒಕ್ಕೂಟದ ಗೌರವ ಅಧ್ಯಕ್ಷ ಅಶೋಕ್ ಕುಮಾರ್ ಅಗರ್‌ವಾಲ್, ಹಿರಿಯ ಉಪಾಧ್ಯಕ್ಷೆ ಶ್ರೀಮತಿ ಇಂದು ಅಗರ್‌ವಾಲ್, ಕರ್ನಾಟಕ ಅಮೆಚೂರ್ ಯೋಗ ಕ್ರೀಡಾ ಸಂಘದ ಅಧ್ಯಕ್ಷ ಗಂಗಾಧರಪ್ಪ ಭಾಗವಹಿಸಿದ್ದರು.

namakarana

namakarana1ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಸುಜೀತ್ ಮತ್ತು ಎಸ್.ಡಿ.ಎಂ ಆಂಗ್ಲ ಮಾದ್ಯಮ ಪ್ರೌಢಶಾಲಾ ಅಧ್ಯಾಪಕಿ ಆಶಾ ಅವರ ಮಗು ಅರುಷಿ ನಾಮಕರಣ ನ 19 ರಂದು ಉಜಿರೆ ಅತ್ತಾಜೆಯಲ್ಲಿ ನಡೆಯಿತು. ಬೆಳಗ್ಗೆ ಯುವ ಕಲಾವಿದ ಮಣಿನಾಲ್ಕೂರು ಅವರ ಗಾಯನದ ಮೂಲಕ ಆರಂಭಗೊಂಡಿತು. ಬಳಿಕ ಅಖಿಲ ಭಾರತ ವಿಚಾರವಾದಿ ಸಂಘದ ರಾಷ್ಟ್ರೀಯ ಅಧ್ಯಕ್ಷ ಪ್ರೋ. ನರೇಂದ್ರ ನಾಯಕ್ ಅವರಿಂದ ವೈಜ್ಞಾನಿಕ ಮನೋಭಾವ ಬೆಳೆಸುವ ವಿವಿಧ ಕಾರ್ಯಕ್ರಮಗಳು ನಡೆದವು. ಜೊತೆಗೆ ಖ್ಯಾತ ಸಂಗೀತ ಕಲಾವಿದ ಶೀನಾ ನಾಡೋಲಿ ಅವರಿಂದ ಕೊಳಲಿನ ಮೂಲಕ ವಿವಿಧ ಹಾಡುಗಳನ್ನು ಹಾಡಿ ಮನರಂಜಿಸಿದರು.
ಮಗುವಿನ ನಾಮಕರಣವನ್ನು ಪವಾಡಗಳ ರಹಸ್ಯ ಬಯಲು ಮಾಡುವ ಮೂಲಕ ಆಚರಿಸಿರುವುದು ಶ್ಲಾಘನೀಯ. ಇತ್ತೀಚೆಗೆ ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾದ ಮೌಢ್ಯ ನಿಷೇಧ ಕಾಯ್ದೆ ಜನರಲ್ಲಿ ಬೇರೂರಿರುವ ಮೌಢ್ಯವನ್ನು ತೊಲಗಿಸುವುದಾಗಿದೆ. ಇಂತಹ ಕಾಯ್ದೆ ಜ್ಯಾರಿಯಾದ ಈ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಸಿರುವ ಸುಜೀತ್ ದಂಪತಿಗಳ ಕಾರ್ಯ ಅಭಿನಂದನೀಯ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾಗವಹಿಸಿದ ಜನರನ್ನು ಉಪಯೋಗಿಸಿಕೊಂಡು ವೈಜ್ಞಾನಿಕ ಮನೋಭಾವ ಬೆಳೆಸುವ ಕಾರ್ಯಕ್ರಮವನ್ನು ನರೇಂದ್ರ ನಾಯಕ್ ನಡೆಸಿಕೊಟ್ಟರು.

  ಧರ್ಮಸ್ಥಳ : ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕ ಆಯ್ಕೆಗೆ ನ. ೧೯ರಂದು ಚುನಾವಣೆ ನಡೆದಿದ್ದು, ಒಟ್ಟು 12 ಕ್ಷೇತ್ರಗಳಿಗೆ ನಡೆದ ಚುನವಣೆಯಲ್ಲಿ 11 ಸ್ಥಾನಗಳಲ್ಲಿ ಸಹಕಾರ ಭಾರತಿ(ಬಿಜೆಪಿ) ಬೆಂಬಲಿತರು ಹಾಗೂ 1ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚುನಾಯಿತರಾಗಿ ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ.
ಸಾಲಗಾರ ಕ್ಷೇತ್ರದ ಸಾಮಾನ್ಯ 5 ಸ್ಥಾನಗಳಲ್ಲಿ 4 ಮಂದಿ ಸಹಕಾರ ಭಾರತಿ ಬೆಂಬಲಿತರಾದ ಅಜಿತ್ ಕುಮಾರ್ ಜೈನ್, ಜಯರಾಮ ಭಂಡಾರಿ ಎಂ., ಶ್ರೀಪತಿ ಹೆಬ್ಬಾರ್ ಎಂ., ಹರಿದಾಸ ಗಾಂಭೀರ. ಕಾಂಗ್ರೆಸ್ ಬೆಂಬಲಿತರಾದ ಚಂದನ್ ಪ್ರಸಾದ್ ಕಾಮತ್. ಸಾಲಗಾರರ ಕ್ಷೇತ್ರ ಪರಿಶಿಷ್ಟ ಪಂಗಡ ಮೀಸಲು 1 ಸ್ಥಾನಕ್ಕೆ ಸಹಕಾರ ಭಾರತಿ ಬೆಂಬಲಿತರಾದ ಉಮಾನಾಥ, ಸಾಲಗಾರರ ಮಹಿಳಾ ಮೀಸಲು 2 ಕ್ಷೇತ್ರಕ್ಕೆ ಸಹಕಾರಿ ಭಾರತಿ ಬೆಂಬಲಿತರಾದ ಆಶಾ ಸದಾಶಿವ, ಶಾಂಭವಿ ರೈ., ಸಾಲಗಾರರ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು 1 ಸ್ಥಾನಕ್ಕೆ ಸಹಕಾರ ಭಾರತಿ ಬೆಂಬಲಿತರಾದ ಶೀನ. ಸಾಲಗಾರರ ಕ್ಷೇತ್ರ ಹಿಂದುಳಿದ ವರ್ಗ ಎ ಮೀಸಲು ವರ್ಗದ 2 ಸ್ಥಾನಕ್ಕೆ ಸಹಕಾರ ಭಾರತಿ ಬೆಂಬಲಿತರಾದ ಹಾಲಿ ಅಧ್ಯಕ್ಷ ಪಿ. ರಘುಚಂದ್ರ ರಾವ್, ಮತ್ತು ಪ್ರೀತಂ ಡಿ., ಸಾಲಗಾರರಲ್ಲದ ಕ್ಷೇತ್ರದ 1 ಸ್ಥಾನಕ್ಕೆ ಸಹಕಾರ ಭಾರತಿ ಬೆಂಬಲಿತರಾದ ಗಿರಿಧರ ಡಿ. ಚುನಾಯಿತರಾಗಿದ್ದಾರೆ.

abhinandana samarambhaಬೆಳ್ತಂಗಡಿ : ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಲ, ಬೆಂಗಳೂರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ಬೆಳ್ತಂಗಡಿ ತಾಲೂಕು ಸಹಕಾರಿ ಯೂನಿಯನ್ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕಿನ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳು, ಪ್ರಾಥಮಿಕ ಸಹಕಾರ ಸಂಘಗಳು, ಉಜಿರೆ ರಬ್ಬರ್ ಸೊಸೈಟಿ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಭಾಗಿತ್ವದಲ್ಲಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘ ಉಜಿರೆ ಇವರ ಆಶ್ರಯದಲ್ಲಿ, 64ನೇ ಅಖಿಲ ಭಾರತ ಸಹಕಾರಿ ಸಪ್ತಾಹ 2017 ಇದರ ಅಂಗವಾಗಿ ತಾಂತ್ರಿಕ ಜಾಗೃತಿ ಮತ್ತು ನಗದು ರಹಿತ ಪಾವತಿ ಮೂಲಕ ಆರ್ಥಿಕ ಸೇರ್ಪಡೆಯಲ್ಲಿ ಸಹಕಾರ ಸಂಘಗಳ ಪಾತ್ರ ಮತ್ತು ಸಹಕಾರಿ ರತ್ನ ಡಾ| ಎಂ.ಎನ್ ರಾಜೇಂದ್ರ ಕುಮಾರ್ ಮತ್ತು ಶಾಸಕ ಕೆ. ವಸಂತ ಬಂಗೇರರಿಗೆ ಅಭಿನಂದದಾ ಸಮಾರಂಭ ಇಂದು(ನ. ೧೮) ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ರಥಬೀದಿ ಇಲ್ಲಿ ನಡೆಯಿತು.

SSF 1

SSFಬೆಳ್ತಂಗಡಿ : ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಸ್ಥಾಪಕಾಧ್ಯಕ್ಷ, ೮ ರಾಷ್ಟ್ರಗಳನ್ನೊಳಗೊಂಡ ಮಾನವ ಹಕ್ಕುಗಳ ದಕ್ಷಿಣ ಏಷ್ಯಾ ಅಧ್ಯಕ್ಷ ಶ್ರೀನಿವಾಸ ಗೌಡ ಎಸ್ಸೆಸ್ಸೆಫ್ ಡಿವಿಷನ್ ಕಾನ್ಫರೆನ್ಸ್‌ಗೆ ಭೇಟಿ ನೀಡಿ ಜಿಲ್ಲೆ ಮತ್ತು ತಾಲೂಕು ನಾಯಕರ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ವಿಜಯ ಕುಮಾರ್, ತಾಲೂಕು ಅಧ್ಯಕ್ಷ ಸೆಬಾಸ್ಟಿಯನ್ ಪಿ.ಸಿ, ನಿರ್ದೇಶಕ ಲ. ಅಶ್ರಫ್ ಆಲಿಕುಂಞಿ ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ, ನಾಯಕರಾದ ಹಾಜಿ ಅಬ್ದುಲ್ ರಝಾಕ್ ಸಖಾಫಿ, ಮುತ್ತಲಿಬ್ ವೇಣೂರು, ಇಕ್ಬಾಲ್ ಮಾಚಾರ್, ಖಲಂದರ್ ಪದ್ಮುಂಜ, ಅಬ್ದುಲ್ ರಹಮಾನ್ ಸಖಾಫಿ ನಾವೂರು, ಸಾದಿಕ್ ಮಾಸ್ಟರ್ ಮಲೆಬೆಟ್ಟು, ಮೊದಲಾದವರು ಬರಮಾಡಿಕೊಂಡರು.

manava hakku kurithu mahithiಬೆಳ್ತಂಗಡಿ: ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಇದರ ತಾಲೂಕು ಘಟಕದ ವತಿಯಿಂದ ಮಾನವ ಹಕ್ಕುಗಳ ರಕ್ಷಣೆ ಕುರಿತಾದ ಜಾಗೃತಿ ವಿಶೇಷ ಕಾರ್ಯಕ್ರಮ ನ. 17 ರಂದು ಬೆಳ್ತಂಗಡಿ ಬಸ್ಟ್ಯಾಂಡ್ ಎದುರುಗಡೆ ಇರುವ ಸಂತೋಮ್ ಟವರ್ ಸಭಾಂಗಣದಲ್ಲಿ ನಡೆಯಿತು.

Pavithra santhoshಕರಂಬಾರು ಗ್ರಾಮದ ಮುಂಡೇಲು ಮನೆಯ ದಿ. ಬಾಬು ಶೆಟ್ರ ಪುತ್ರಿ ಪವಿತ್ರರ ವಿವಾಹವು ನರ್ಸಜಾಲು ದಿ. ಅಣ್ಣಿ ಶೆಟ್ರ ಪುತ್ರ ಸಂತೋಷ್‌ರೊಂದಿಗೆ ನ. ೧೨ರಂದು ವೇಣೂರು ಗಾರ್ಡನ್ ವ್ಯೂವ್ ಹಾಲ್‌ನಲ್ಲಿ ಜರುಗಿತು.

Mallika sathishನಾವೂರು ಗ್ರಾಮದ ಕಣಾಲು ಮನೆ ದಿ. ಡೀಕಯ್ಯ ಮೂಲ್ಯರ ಪುತ್ರಿ ಮಲ್ಲಿಕರ ವಿವಾಹವು ನೆಲ್ಲಿಗುಡ್ಡೆ ಶಬರಿ ನಿವಾಸ ಶೀನ ಮೂಲ್ಯರ ಪುತ್ರ ಸತೀಶ ರೊಂದಿಗೆ ನ. 12 ರಂದು ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ಸಭಾ ಭವನದಲ್ಲಿ ಜರಗಿತು.

praveen-suchithaಕೋಡಿ ದತ್ತಕೃಪಾ ನಿವಾಸ ರುಕ್ಮಯ್ಯ ಸಪಲ್ಯರ ಪುತ್ರ ಪ್ರವೀಣ್ ಕುಮಾರ್‌ರವರ ವಿವಾಹವು ಉಳ್ಳಾಲ ಉಪ್ಪುಗುಡ್ಡೆ ಶೇಖರ ಸಪಲ್ಯರ ಪುತ್ರಿ ಸುಚಿತಾರೊಂದಿಗೆ ನ.12 ರಂದು ಬೆಳ್ತಂಗಡಿ ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣದ ಆಶಾ ಸಾಲ್ಯಾನ್ ಕಲ್ಯಾಣ ಮಂಟಪದಲ್ಲಿ ಜರುಗಿತು.

Harshendra sowmyaಕಲ್ಮಂಜ ಗ್ರಾಮದ ಬಂಡ್ರಜಾಲು ಶ್ರೀ ತುಳಸಿ ಮನೆಯ ಆದಪ್ಪ ಗೌಡರ ಪುತ್ರ ಹರ್ಷೇಂದ್ರ ರವರ ವಿವಾಹವು ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಕುಭಲ ಮನೆ ಅಚ್ಚುತ ಗೌಡರ ಪುತ್ರಿ ಸೌಮ್ಯಶ್ರೀರೊಂದಿಗೆ ನ. 12 ರಂದು ಶ್ರೀ ಕ್ಷೇತ್ರ ಪಜಿರಡ್ಕ ದೇವಸ್ಥಾನದಲ್ಲಿ ಜರಗಿತು.

prashaಮದ್ದಡ್ಕದ ಕುದುರೆಕಲ್ಲು ಮನೆಯ ಪ್ರಕಾಶ್ ಕೋಟ್ಯಾನ್ ಮತ್ತು ಶ್ರೀಮತಿ ಶಾರದ ದಂಪತಿ ಪುತ್ರಿ ಪ್ರ್ರಶಾಳ ೧ನೇ ವರ್ಷದ ಹುಟ್ಟುಹಬ್ಬವನ್ನು ನ.೧೧ ರಂದು ಕುದುರೆಕಲ್ಲು ಮನೆಯಲ್ಲಿ ಆಚರಿಸಲಾಯಿತು.

Samanviಬೆಳ್ತಂಗಡಿ: ಕೆಂಬರ್ಜೆ ಮನೆ ಪ್ರಭಾಕರ ಪೂಜಾರಿ ಮತ್ತು ವನಿತಾ ದಂಪತಿ ಪುತ್ರಿ ಸಮನ್ವಿ ಇವರ 3ನೇ ವರ್ಷದ ಹುಟ್ಟುಹಬವನ್ನು ನ.15ರಂದು ಆಚರಿಸಲಾಯಿತು.

  Maneeshಶಿರ್ಲಾಲು ಗ್ರಾಮದ ಬಾನೊಟ್ಟು ರಾಧಾಕೃಷ್ಣ ಮತ್ತು ಶ್ರೀಮತಿ ಮಲ್ಲಿಕಾ ದಂಪತಿಯ ಪುತ್ರ ಮನೀಷ್‌ನ 9ನೇ ವರ್ಷದ ಹುಟ್ಟುಹಬ್ಬವನ್ನು ನ.3ರಂದು ಆಚರಿಸಲಾಯಿತು.

Abhinavಓಡಿಲ್ನಾಳ ಗ್ರಾಮದ ನಾನಾಡಿ ಮನೆ ಶ್ರೀಮತಿ ಕಸ್ತೂರಿ ಉಮೇಶ್ ಪ್ರಭು ದಂಪತಿ ಪುತ್ರ ಅಭಿನವ್ ರವರು 2 ನೇ ವರ್ಷದ ಹುಟ್ಟು ಹಬ್ಬವನ್ನು ನ 14 ರಂದು ಆಚರಿಸಿದರು

R J sanvikನಾವೂರು ಗ್ರಾಮದ ಶ್ರೀಮತಿ ರೇಷ್ಮಾ ಮತ್ತು ಜಯಾನಂದ್ ದಂಪತಿ ಪುತ್ರ ಆರ್.ಜೆ ಸಾನ್ವಿಕ್‌ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಇತ್ತೀಚೆಗೆ ಆಚರಿಸಲಾಯಿತು.

Nishithaವೇಣೂರು ಮೂಡ್ಲ ಮನೆಯ ಹರೀಶ್ ಪೂಜಾರಿ ಮತ್ತು ಶ್ರೀಮತಿ ನಳಿನಿ ದಂಪತಿ ಪುತ್ರಿ ನಿಶಿತಾಳ 4ನೇ ವರ್ಷದ ಹುಟ್ಟುಹಬ್ಬವನ್ನು ನ. 13ರಂದು ಆಚರಿಸಲಾಯಿತು.

perady societyಪೆರಾಡಿ : ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ನೀಡುತ್ತಿರುವ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ನ.15ರಂದು ಮಂಗಳೂರಿನಲ್ಲಿ ನಡೆದ  64ನೇ ಅಖಿಲ ಭಾರತ ಸಹಕಾರ ಸಪ್ತಾಹ-2017ನೇ ಸಮಾರಂಭದಲ್ಲಿ ಪೆರಾಡಿ ಸಹಕಾರಿ ಸಂಘದ ಅಧ್ಯಕ್ಷರಾದ ಸತೀಶ್ ಕೆ. ಕಾಶಿಪಟ್ಣ ಹಾಗೂ ಮುಖ್ಯ ಕಾರ್‍ಯನಿರ್ವಾಹಣಾಧಿಕಾರಿ ಯು.ಶೇಖ್ ಲತೀಫ್ ಇವರನ್ನು ಸಚಿವರಾದ ಪ್ರಮೋದ್ ಮಧ್ವರಾಜ್‌ರವರು  ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಚಿವರಾದ ರಮಾನಾಥ ರೈ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್ ರಾಜೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Lion rajyapalara betiಬೆಳ್ತಂಗಡಿ : ಲಯನ್ಸ್ ಕ್ಲಬ್‌ಗೆ ಜಾತಿಯ ಭೇದವಿಲ್ಲ, ಎಲ್ಲಿ ಜನ ಕಷ್ಟದಲ್ಲಿದ್ದಾರೆ, ದುಃಖಿತರಿದ್ದಾರೆ, ಎಲ್ಲಿ ಸೇವೆ ಪಡೆಯಲು ಅರ್ಹರು ಇದ್ದಾರೆ ಅವರಿಗೆ ಪ್ರಾಮಾಣಿಕತೆಯಿಂದ ಸೇವೆ ಒದಗಿಸಿಕೊಡುವುದೇ ನಮ್ಮ ಕರ್ತವ್ಯ, ನಮ್ಮದು ಸೇವೆಯೇ ಜಾತಿ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಲ| ಎಚ್.ಆರ್. ಹರೀಶ್ ಹೇಳಿದರು.
ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಬೆಳ್ತಂಗಡಿ ಮತ್ತು ಅಳದಂಗಡಿ ಕ್ಲಬ್‌ಗಳಿಗೆ ಲಯನ್ಸ್ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ನಿಮಿತ್ತ ನ. 10 ರಂದು ಎಸ್‌ಡಿಎಂ ಕಲಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಯನ್ಸ್ ಕ್ಲಬ್ ಬೆಳ್ತಂಗಡಿ ಸ್ಥಾಪಕ ಸದಸ್ಯರ ಗೌರವಾರ್ಪಣೆಯನ್ನು ಅತ್ಯಂತ ಮಾದರಿಯಾಗಿ ಏರ್ಪಡಿಸಿದ್ದೂ ಮಾತ್ರವಲ್ಲದೆ ಧರಣೇಂದ್ರ ಕೆ. ಜೈನ್, ವಿಜಯ ಕುಮಾರ್ ಜೈನ್ ಅವರ ನೇತೃತ್ವದಲ್ಲಿ ವರ್ಷಪೂರ್ತಿ ವಿಭಿನ್ನ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ, ಅಲ್ಲದೆ ನನ್ನ ಭೇಟಿಯ ಸಂದರ್ಭವೂ ಕೂಡ ವಿವಿಧ ಧರ್ಮೀಯರ ಕ್ಷೇತ್ರಗಳಿಗೆ ಭೇಟಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಕೆ. ಧರಣೇಂದ್ರ ಜೈನ್ ಮಾತನಾಡಿ, ಪ್ರಶಸ್ತಿಯ ಉದ್ದೇಶದಿಂದ ನಾವು ಯಾವುದೇ ಸೇವಾ ಕಾರ್ಯ ಮಾಡುತ್ತಿಲ್ಲ, ಎಲ್ಲಾ ಸದಸ್ಯರ ಕೂಡುವಿಕೆಯೊಂದಿಗೆ ನಿಸ್ವಾರ್ಥವಾಗಿ ಅವರಿಂದ ಆಗುತ್ತಿರುವ ಒಂದೊಂದೇ ನೈಜ ಸೇವಾ ಕಾರ್ಯಗಳು ಸಮಾಜದಲ್ಲಿ ದೊಡ್ಡ ಪರಿಣಾಮವಾಗಿ ಮಾರ್ಪಡುತ್ತಿದೆಯಷ್ಟೇ ಎಂದರು.
ಮುಖ್ಯ ಅತಿಥಿಗಳಾಗಿದ್ದ ಲಯನ್ಸ್ ಜಿಲ್ಲಾ ಸಂಪುಟದ ಪ್ರ. ಕಾರ್ಯದರ್ಶಿ ಲ| ವಸಂತ ಕುಮಾರ್ ಶೆಟ್ಟಿ ಮಂಗಳೂರು, ಪ್ರಾಂತ್ಯಾಧ್ಯಕ್ಷ ಲ| ನಿತ್ಯಾನಂದ ನಾವರ, ವಲಯಾಧ್ಯಕ್ಷ ಲ| ವೆಂಕಟೇಶ್ ಎಂ.ಬಿ ಮತ್ತು ಲ| ವಾಸು ಮೂಡಬಿದ್ರೆ, ರಾಜ್ಯಪಾಲರ ಪ್ರಾಂತೀಯ ಪ್ರತಿನಿಧಿ ಕೆ. ಶಿವಪ್ರಸಾದ್ ಹೆಗ್ಡೆ ಮೂಡಬಿದ್ರೆ, ಜಿಲ್ಲಾ ಸಂಯೋಜಕ ಲ| ಪ್ರವೀಣ್ ಕುಮಾರ್ ಇಂದ್ರ ವೇಣೂರು ಶುಭ ಕೋರಿದರು. ಸಭಾಸದರ ನೆಲೆಯಲ್ಲಿ ಪಾಂತ್ಯ 7ರ ಅಧ್ಯಕ್ಷ ಕುಡ್ಪಿ ಅರವಿಂದ ಶೆಣೈ, ಮೋಟಿವೇಟ್ ವಿಭಾಗದ ಸಂಯೋಜಕ ಲ| ಮೆಲ್ವಿನ್ ಡಿಸೋಜಾ ಕಿನ್ನಿಗೊಳಿ ಮತ್ತು ಶಾಶ್ವತ ಕಾಮಗಾರಿ ನಿರ್ದೇಶಕ ಲ| ಡಾ. ಗೀತ್‌ಪ್ರಕಾಶ್ ವಿಟ್ಲ ಶುಭ ಕೋರಿದರು. ವೇದಿಕೆಯಲ್ಲಿ ನಾರಾವಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಮುರಳಿ ಬಿ, ವೇಣೂರು ಕ್ಲಬ್ ಅಧ್ಯಕ್ಷ ಲ| ನಿತೇಶ್ ಎಚ್, ಮೂಡಬಿದ್ರೆ ಕ್ಲಬ್ ಅಧ್ಯಕ್ಷ ಲ| ರಾಮಚಂದ್ರ ಆಚಾರ್ಯ, ಆಲಂಗಾರು ಕ್ಲಬ್ ಅಧ್ಯಕ್ಷ ಲ| ಜೆರಾಲ್ಡ್ ಪಿಂಟೊ, ಮಂಗಳೂರು ಕ್ಲಬ್ ಅಧ್ಯಕ್ಷ ಲ| ವೆಂಕಟೇಶ್ ಬಾಳಿಗ ಉಪಸ್ಥಿತರಿದ್ದರು.
ಸನ್ಮಾನ: ವೇದಿಕೆಯಲ್ಲಿ ರಾಜ್ಯಪಾಲ ಎಚ್. ಆರ್. ಹರೀಶ್ ಮತ್ತು ಅವರ ಧರ್ಮಪತ್ನಿ, ಲಯನ್ಸ್ ಜಿಲ್ಲೆಯ ಪ್ರಥಮ ಮಹಿಳೆ ಲ| ನಮಿತಾ ಹರೀಶ್ ಅವರನ್ನು ಸನ್ಮಾನಿಸಲಾಯಿತು. ಸ್ಥಾಪಕ ಸದಸ್ಯರಾದ ಲ| ಎಂ.ಜಿ. ಶೆಟ್ಟಿ ಮತ್ತು ಲ| ವಿ.ಆರ್. ನಾಯಕ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಲಾಂಗೂಲ ಚಾಲಕ ಲ| ದೇವಿಪ್ರಸಾದ್, ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಕುವೆಟ್ಟು ಪಂಚಾಯತ್ ಅಧ್ಯಕ್ಷ ಅಶೋಕ್ ಕೋಟ್ಯಾನ್ ಅವರಿಗೆ ವಿಶೇಷ ಸನ್ಮಾನ ನೆರವೇರಿಸಲಾಯಿತು. ಯೋಧರಿಗೆ ನಮನ ಕಾರ್ಯಕ್ರಮದಡಿ ಗುರುವಾಯನಕೆರೆಯ ಏಕನಾಥ ಶೆಟ್ಟಿ ಅವರ ಪತ್ನಿ ಜಯಂತಿ ಅವರಿಗೆ ಸನ್ಮಾನ ನೆರವೇರಿಸಿ ಅಭಿನಂದಿಸಲಾಯಿತು. ಚೈತ್ರಾ ಲಾಯಿಲ ಅವರಿಗೆ ಲ| ಸುರೇಶ್ ಶೆಟ್ಟಿ ಪ್ರಾಯೋಜಕತ್ವದ ವಿದ್ಯಾನಿಧಿ ಹಸ್ತಾಂತರ, ಶಾಶ್ವತ ಕಾಮಗಾರಿಯಡಿ ಸುಶೀಲಾ ದೇವಾಡಿಗ ಕಲ್ಮಂಜ ಅವರಿಗೆ ಮನೆ ನಿರ್ಮಾಣದ ಜವಾಬ್ಧಾರಿ ಹೊತ್ತು ಸಂಪೂರ್ಣ ನಿರ್ವಹಣೆ ಮಾಡಿದ ಲ| ಅಶ್ರಫ್ ಆಲಿಕುಂಞಿ ಅವರ ಮೂಲಕ ಮನೆಯ ಕೀಲಿಕೈ ಹಸ್ತಾಂತರ ಸಹಿತ ಇತರ ಸೇವಾ ಚಟುವಟಿಕೆಗಳನ್ನು ನಡೆಸಲಾಯಿತು. ಲಯನ್ಸ್ ಜಿಲ್ಲೆಗೆ ಉತ್ತಮ ಮಾರ್ಗದರ್ಶನ ನೀಡುತ್ತಿರುವ ಲ| ಪ್ರಕಾಶ್ ಶೆಟ್ಟಿ ನೊಚ್ಚ ಅವರನ್ನು ರಾಜ್ಯಪಾಲರ ವತಿಯಿಂದ ಪುರಸ್ಕರಿ ಸಿದರು.
ರಾಜ್ಯಪಾಲರ ಮನ್ನಣೆ: ಉತ್ತಮ ಸೇವೆಗಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಧರಣೇಂದ್ರ ಕೆ ಜೈನ್, ಕಾರ್ಯದರ್ಶಿ ಲ| ಸುರೇಶ್ ಶೆಟ್ಟಿ ಲಾಲ, ಕೋಶಾಧಿಕಾರಿ ಲ| ವಿನ್ಸೆಂಟ್ ಟಿ. ಡಿಸೋಜಾ, ಅಳದಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ವಿಜಯಕುಮಾರ್ ಜೈನ್, ಕಾರ್ಯದರ್ಶಿ ಸುಕೇಶ್ ಜೈನ್, ಕೋಶಾಧಿಕಾರಿ ಹಿಲಾರಿ ಫೆರ್ನಾಂಡಿಸ್ ಅವರಿಗೆ ರಾಜ್ಯಪಾಲರು ವಿಶೇಷ ಪಿನ್ ತೊಡಿಸಿ ಗೌರವಿಸಿದರು. ಸೇವಾ ಚಟುವಟಿಕೆಯ ಪಿನ್‌ಅನ್ನು ಲ| ಅಶ್ರಫ್ ಆಲಿಕುಂಞಿ ಅವರಿಗೆ ನೀಡಿ ಪುರಸ್ಕರಿಸಿದರು. ಪ್ರಶಂಸ ಬ್ಯಾನರನ್ನು ಲ| ನಿತ್ಯಾನಂದ ನಾವರ, ಲ| ರಾಜು ಶೆಟ್ಟಿ ಬೆಂಗೆತ್ಯಾರು, ಲ| ರಾಮಕೃಷ್ಣ ಗೌಡ, ಲ| ವಿ.ಆರ್. ನಾಯಕ್ ಅವರಿಗೆ ರಾಜ್ಯಪಾಲರು ಹಸ್ತಾಂತರಿಸಿದರು.
ಗೌರವದ ಪಿನ್ನ್ ಅನ್ನು ಲ| ಸೀತಾರಾಮ ರಾವ್, ಲ| ರಘುರಾಮ ಗಾಂಭೀರ, ಲ| ವಿ.ಆರ್. ನಾಯಕ್, ಲ| ಎಂ.ಜಿ ಶೆಟ್ಟಿ ಮತ್ತು ಲ| ರಾಮಕೃಷ್ಣ ಗೌಡ ಅವರಿಗೆ ಹಸ್ತಾಂತರಿಸಿದರು. ಅಳದಂಗಡಿ ಕ್ಲಬ್ ಅಧ್ಯಕ್ಷ ಲ| ವಿಜಯ ಕುಮಾರ್ ಜೈನ್ ಸ್ವಾಗತಿಸಿದರು. ಲ| ವಸಂತ ಶೆಟ್ಟಿ ಅತಿಥಿಗಳನ್ನು ಬರಮಾಡಿಕೊಂಡರು. ಲ| ಎಲೋಶಿಯಸ್ ಲೋಬೊ ನೀತಿ ಸಂಹಿತೆ ಪಠಿಸಿದರು. ಲ| ಸುರೇಶ್ ಶೆಟ್ಟಿ ಲಾಲ ಮತ್ತು ಲ| ಸದಾನಂದ ಕುದ್ಯಾಡಿ ವರದಿ ಮಂಡಿಸಿದರು. ಹೊಸದಾಗಿ ಸೇರ್ಪಡೆಗೊಂಡ ರಾಮ ಪಿ. ಸಾಲ್ಯಾನ್ ಮತ್ತು ಮಂಜುನಾಥ ಅವರ ಪರಿಚಯ ವನ್ನು ಲ| ನಾಮದೇವ ರಾವ್ ನಿರ್ವಹಿಸಿ ದರು. ಲ| ವಿನ್ಸೆಂಟ್ ಟಿ. ಡಿಸೋಜಾ ಪ್ರಾರ್ಥನೆ ಹಾಡಿದರು. ರಾಜ್ಯಪಾಲರ ಪ್ರಶಂಸನಾ ಪತ್ರವನ್ನು ಲ| ವಿ.ಆರ್. ನಾಯಕ್ ವಾಚಿಸಿದರು. ಚಿತ್ರ: ಮನು ಮದ್ದಡ್ಕ.

Selestin d'sozaಮಡಂತ್ಯಾರು: ಮಂಗಳೂರು ಧರ್ಮ ಪ್ರಾಂತ್ಯದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಇದರ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಸೆಲೆಸ್ಟಿನ್ ಡಿಸೋಜ ಆಯ್ಕೆಯಾಗಿದ್ದಾರೆ.
ಶ್ರೀಮತಿ ಸೆಲೆಸ್ಟಿನ್ ಡಿಸೋಜ ಇವರು ಸಮಾಜ ಸೇವೆಯಲ್ಲಿ ಹೆಸರುವಾಸಿಯಾಗಿದ್ದು, ಭಾರತೀಯ ಜನತಾ ಪಾರ್ಟಿಯಲ್ಲಿ ಸಕ್ರೀಯ ಸದಸ್ಯರಾಗಿ, ಸೇಕ್ರೆಡ್‌ಹಾರ್ಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ, ಬೆಳ್ತಂಗಡಿ ವಲಯ ಕಥೋಲಿಕ್ ಸಭೆಯ ಸ್ತ್ರೀಹಿತ ಸಂಚಾಲಕರಾಗಿ, ಮಡಂತ್ಯಾರು ಘಟಕದ ಕಥೋಲಿಕ್ ಸಭಾದ ಪ್ರಧಾನ ಕಾರ್ಯದರ್ಶಿಯಾಗಿ, ಎಸ್.ವಿ.ಪಿ. ಸಂಘದ ಉಪಾಧ್ಯಕ್ಷರಾಗಿ, ಮಡಂತ್ಯಾರು ಚರ್ಚಿನ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ನೀಡುತ್ತಿದ್ದಾರೆ.

belziyam ninda sdm BEd ge betiಉಜಿರೆ : ಸಂಶೋಧನಾತ್ಮಕ ಅಧ್ಯಯನದ ನಿಮಿತ್ತ ಇತ್ತೀಚೆಗೆ ಬೆಲ್ಜಿಯಂನ ಶೈಕ್ಷಣಿಕ ತಂಡವು ಉಜಿರೆಯ ಎಸ್.ಡಿ.ಎಂ.ಬಿ.ಎಡ್ ಕಾಲೇಜಿಗೆ ಭೇಟಿ ನೀಡಿತು. ಬಿ.ಎಡ್.ಕಾಲೇಜಿನ ಧ್ಯೇಯ, ಉದ್ದೇಶ, ಶೈಕ್ಷಣಿಕ ಸೌಲಭ್ಯ ಮತ್ತು ಕಾಲೇಜಿನ ಪ್ರಾಧ್ಯಾಪಕರ ಪರಿಚಯದೊಂದಿಗೆ ಸಂಸ್ಥೆಯ ಶೈಕ್ಷಣಿಕ ಸಾಧನೆಗಳ ಕುರಿತು ಕಾಲೇಜಿನ ಪ್ರಾಂಶುಪಾಲ ಡಾ.ಕೆ. ನಿತ್ಯಾನಂದರವರು ವಿವರಿಸಿದರು.
ಬೆಲ್ಜಿಯಂ ಶೈಕ್ಷಣಿಕ ತಂಡದಲ್ಲಿ ತರಬೇತುದಾರ ಹೆಲ್ಡೆ ವಾನ್‌ಡೊರೆನ್, ಭೂಗೋಳ ಶಿಕ್ಷಕ ಸ್ಟೆಫಾನಿ ವರ್ಪ್ಲೆಸ್ಟಿ, ಫ್ರೆಂಚ್ ಶಿಕ್ಷಕ ಕಿಮ್ ಹ್ಯೂ, ಜೀವಶಾಸ್ತ್ರ ಹಾಗೂ ಇಂಗ್ಲೀಷ್ ಶಿಕ್ಷಕ ಬ್ರೆಚ್‌ದಗ್ರೇಟರ್, ಸಮಾಲೋಚಕಿ ಸಾರಾ ಡಿ ಬೇಕರ್, ಸಂಶೋಧಕ ಫ್ರಾಂಕ್‌ರೆಂಡರ್ಸ್, ಪ್ರಶಿಕ್ಷಣಾರ್ಥಿ ಸಪ್ನಕುಮಾರ್, ಆನ್‌ಕಾರ್ಡಿನೆಲ್, ನೀಲ್ ಡಿ ಗರ್ಸೆಮ್, ಜೊಲಿಯನ್ ವಂಡರ್‌ಗ್ರೂಕ್, ಸಂದೀಪ್ ಶೆಟ್ಟಿ ಮೊದಲಾದವರಿದ್ದು, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಶಿಕ್ಷಕ ತರಬೇತುದಾರ ಪ್ರದೀಪ್ ಕುಮಾರ್ ಇವರು ತಂಡದ ಸಂಯೋಜಕರಾಗಿ ಜತೆಗಿದ್ದರು.
ಬೆಲ್ಜಿಯಂನ ಶೈಕ್ಷಣಿಕ ತಂಡದೊಡಗಿನ ಸಂವಾದದಲ್ಲಿ ಮಾತನಾಡಿದ ಎಸ್.ಡಿ.ಎಂ. ಬಿ.ಎಡ್.ಕಾಲೇಜಿನ ಉಪನ್ಯಾಸಕ ಸಂತೋಷ್ ಸಲ್ದಾನ ರವರು ದ.ಕ ಶಾಲೆಗಳ ತರಗತಿಗಳಲ್ಲಿ ಕನ್ನಡ, ತುಳು, ಕೊಂಕಣಿ, ಮಲಯಾಳಂ, ಮರಾಠಿ ಮೊದಲಾದ ಐದಾರು ಮಾತೃಭಾಷೆಯ ಮಕ್ಕಳಿದ್ದು ಆ ಮಕ್ಕಳಿಗೆ ಪಠ್ಯದ ಪರಿಕಲ್ಪನೆಗಳನ್ನು ಅರ್ಥೈಸುವಲ್ಲಿ ಇಲ್ಲಿನ ಶಿಕ್ಷಕರಿಗೆ ಬೆಲ್ಜಿಯಂನ ಪರಿಸರಕ್ಕಿಂತ ಹೆಚ್ಚಿನ ಸವಾಲುಗಳಿವೆ. ಹಾಗೆಯೇ ಇಲ್ಲಿನ ಮಕ್ಕಳು ಶಾಲೆಯಲ್ಲಿ ಕಲಿಸುವ ಭಾಷೆಗಳ ಜೊತೆಗೆ ಸ್ಥಳೀಯವಾದ ಹಲವಾರು ಭಾಷೆಗಳನ್ನೂ ಕಲಿತಿರುವುದು ಈ ಪರಿಸರದ ಮಕ್ಕಳ ವಿಶೇಷತೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಬಿ.ಎಡ್.ಕಾಲೇಜಿನ ಉಪನ್ಯಾಸಕ ಪ್ರವೀಣ್ ಪದ್ಯಾಣ, ಕು.ವಿದ್ಯಾಶ್ರೀ ಹಾಗೂ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ ಉಪಸ್ಥಿತರಿದ್ದರು. ಬಿ.ಎಡ್.ನ ಪ್ರಶಿಕ್ಷಣಾರ್ಥಿ ಮರ್ಲಿನ್ ಪಿರೇರಾ ಸ್ವಾಗತಿಸಿ, ಮನಸ್ವಿನಿ ಧನ್ಯವಾದವಿತ್ತು ವರ್ನನ್ ಮೆಂಡೋನ್ಸಾ ಕಾರ್ಯಕ್ರಮ ನಿರೂಪಿಸಿದರು.

kokkada sahakari sapthahaಕೊಕ್ಕಡ : 64 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ನಮ್ಮ ನಡಿಗೆ ಸದಸ್ಯರ ಮನೆ ಕಡೆಗೆ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಸಂಘದ ಅಧ್ಯಕ್ಷ ನಾರಾಯಣ ಗೌಡ ನುಡಿದರು.
ಸಹಕಾರಿ ಸಪ್ತಾಹದ ಆರಂಭದ ದಿನವಾದ ನ.14 ರಂದು ಕೊಕ್ಕಡ ಸಂಘದ ಆವರಣದಲ್ಲಿ ಸಹಕಾರಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ಸಂಘದ ವ್ಯಾಪ್ತಿಗೆ ಒಳಪಟ್ಟ ಪ್ರತೀ ಸದಸ್ಯರ ಮನೆಗಳಿಗೂ ಸಂಘದ ನಿರ್ದೇಶಕರುಗಳು ಮತ್ತು ಸಿಬ್ಬಂದಿಗಳ ಸಹಯೋಗದಲ್ಲಿ ಸಹಕಾರಿ ಸಪ್ತಾಹದ ಆರಂಭದ ದಿನ ನಮ್ಮ ನಡಿಗೆ ಸದಸ್ಯರ ಮನೆ ಕಡೆಗೆ ಅನ್ನುವ ಧ್ಯೇಯವಾಕ್ಯದಡಿಯಲ್ಲಿ ಭೇಟಿ ನೀಡಲಿದ್ದು ಈ ಭೇಟಿಯನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮುಂದುವರೆಸಿ ವರ್ಷದೊಳಗೆ ಎಲ್ಲಾ ಸದಸ್ಯರ ಮನೆಗಳ ಭೇಟಿಯನ್ನು ಮುಗಿಸುವ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಭೇಟಿಯ ಸಂದರ್ಭ ಪ್ರತೀ ಸಂಘದ ಸದಸ್ಯರ ಮನೆಗಳಲ್ಲೂ ಬಾಕಿಯುಳಿದವರನ್ನು ಸದಸ್ಯರನ್ನಾಗಿಸುವುದು, ಸಂಘದಲ್ಲಿ ಉಳಿತಾಯ ಖಾತೆ ಹೊಂದದವರಿಗೆ ಹೊಸ ಖಾತೆಯನ್ನು ತೆರೆಯಲು ಬೇಕಾದ ದಾಖಲೆಗಳ ಮಾಹಿತಿ ನೀಡಿ ಖಾತೆಯನ್ನು ತೆರೆಯುವುದು, ಯಶಸ್ವಿನಿ ಯೋಜನೆ, ಸಂಘದಲ್ಲಿ ದೊರೆಯುವ ಸಾಲ ಸೌಲಭ್ಯಗಳ ಮಾಹಿತಿ ನೀಡುವುದು. ಸಂಘದ ವ್ಯವಹಾರಗಳ ಬಗ್ಗೆ ಸದಸ್ಯರ ಅಭಿಪ್ರಾಯಗಳನ್ನು ಪಡೆಯುವುದು, ಎಲ್ಲಾ ಸದಸ್ಯರ ಸಲಹೆ ಸೂಚನೆಗಳನ್ನು ಪಡೆದು ಸಂಘವನ್ನು ಅಭಿವೃದ್ದಿಯತ್ತ ಕೊಂಡೊಯ್ಯುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಜಿಲ್ಲೆಯಲ್ಲಿಯೇ ಪ್ರಥಮವಾಗಿ ವಿಶಿಷ್ಟವಾದ ಈ ಕಾರ್ಯಯೋಜನೆಯನ್ನು ಕೊಕ್ಕಡದ ಸಂಘದಲ್ಲಿ ಆರಂಭಿಸಲಾಗುತ್ತಿದೆ ಎಂದರು.
ಸಂಘದ ಉಪಾಧ್ಯಕ್ಷ ಎಮ್. ಲಕ್ಷ್ಮೀನಾರಾಯಣ ಶಬರಾಯ , ನಿರ್ದೇಶಕರುಗಳಾದ ಮಹಾಬಲ ನಾಯ್ಕ, ಸೀತಮ್ಮ, ಭವಾನಿ, ಸಂಘದ ಹಿರಿಯ ಸದಸ್ಯರುಗಳಾದ ಎಲ್ಲಿಕ್ಕಳ ಸೂರ್ಯನಾರಾಯಣ ಶರ್ಮ, ಶಂಕರ ಜೋಷಿ, ಭೂಪ ಗೌಡ,ಬದಿಜಾಲು ತಿಮ್ಮಪ್ಪ ಗೌಡ, ಚೋಮ ಬಡೆಕ್ಕರ, ಸುಂದರ ನಾಯ್ಕ, ವರ್ಗೀಸ್, ಕೃಷ್ಣ ನಾಯ್ಕ, ಮಗ್ಗಿ, ಸುಗುಣ, ಪದ್ಮಾವತಿ, ವೆಂಕಪ್ಪ ಗೌಡ ಮತ್ತು ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್ವರಿ ಸ್ವಾಗತಿಸಿದರು. ನವೀನ್ ಕಜೆ ವಂದಿಸಿದರು. ಬಾಲಮುರಳಿಕೃಷ್ಣ ನಿರೂಪಿಸಿದರು.

naravi basadi karthika deeposavaನಾರಾವಿ : ನಾರಾವಿ ಮಾಗಣೆ ಭಗವಾನ್ ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನ.9 ರಂದು ನೆರವೇರಿತು.
ಅಪರಾಹ್ನ ಜರುಗಿದ ನಿತ್ಯವಿಧಿ ಸಹಿತ ಶ್ರೀ ಪದ್ಮಾವತಿ ಅಮ್ಮನವರ ಆರಾಧನೆ ಹಾಗೂ ರಾತ್ರಿ ನಡೆದ ಭಗವಾನ್ ಶ್ರೀ ಧರ್ಮನಾಥ ಸ್ವಾಮಿಯ ಉತ್ಸವ ಕಾರ್ಯಕ್ರಮದಲ್ಲಿ ಊರ ಪರವೂರ ಅಸಂಖ್ಯಾತ ಭಕ್ತಾಧಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಬಸದಿಯ ಆಡಳಿತ ಸಮಿತಿಯ ಅಧ್ಯಕ್ಷ ಬಿ. ನಿರಂಜನ್ ಅಜ್ರಿ, ಕಾರ್ಯಾಧ್ಯಕ್ಷ ಪ್ರೇಮ್‌ಕುಮಾರ್ ಜೈನ್, ದಿಗಂಬರ ಜೈನ ಯುವಜನ ಸಂಘದ ಅಧ್ಯಕ್ಷ ಜಿನೇಂದ್ರ ಜೈನ್, ಭಾರತೀಯ ಜೈನ್ ಮಿಲನ್ ನಾರಾವಿ ಶಾಖೆಯ ಅಧ್ಯಕ್ಷ ನಿರಂಜನ್ ಜೈನ್, ಮಾಜಿ ನಿರ್ದೇಶಕ ಶಿಶುಪಾಲ್ ಜೈನ್, ಉದ್ಯಮಿಗಳಾದ ಮಹಾವೀರ್ ಜೈನ್, ಶಶಿಕಾಂತ್ ಜೈನ್, ಆಡಳಿತ ಸಮಿತಿಯ ಸದಸ್ಯ ಮುನಿರಾಜ್ ಜೈನ್,ಅಶೋಕ್ ಕುಮಾರ್ ಜೈನ್, ಈದು, ನಾರಾವಿ ಗ್ರಾಮಗಳ ಸಮಸ್ತ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು.

krishnamoorthiಬೆಳ್ತಂಗಡಿ: ಪ್ರಸ್ತುತ ಉಜಿರೆಯ ಸನಿವಾಸ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸು ತ್ತಿರುವ ಟಿ. ಕೃಷ್ಣಮೂರ್ತಿಯವರಿಗೆ ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲ್ಲಿರುವ ದಕ್ಷಿಣ ಭಾರತದ ಅಂತರರಾಜ್ಯ ವಿಶ್ವ ವಿದ್ಯಾಲಯವಾದ ದ್ರಾವಿಡಿಯನ್ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.
ಶ್ರೀ ಧ.ಮಂ.ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ. ಜಯಕುಮಾರ ಶೆಟ್ಟಿ ಮಾರ್ಗದರ್ಶನದಲ್ಲಿ ನಡೆಸಿದ ಅರಕನೆಟ್ ಮಾರ್ಕೆಟಿಂಗ್ :ಪ್ರಾಬ್ಲಮ್ಸ್ ಅಂಡ್ ಪ್ರಾಸ್ಪೆಕ್ಟ್ಸ್ – ಎ ಕೇಸ್ ಸ್ಟಡಿ ಆಫ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ (ಅಡಿಕೆ ಮಾರುಕಟ್ಟೆ-ಸಮಸ್ಯೆಗಳು ಮತ್ತು ಭವಿಷ್ಯ-ದ.ಕ ಜಿಲ್ಲೆಯ ಅಧ್ಯಯನ) ಎಂಬ ಸಂಶೋಧನಾ ಪ್ರಬಂಧವನ್ನು ಪುರಸ್ಕರಿಸಿ ವಿಶ್ವವಿದ್ಯಾಲಯವು ಟಿ. ಕೃಷ್ಣಮೂರ್ತಿಯವರಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.
ಟಿ. ಕೃಷ್ಣಮೂರ್ತಿಯವರು ಈ ಹಿಂದೆ ಉಜಿರೆಯ ಶ್ರೀ ಧ.ಮಂ. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿಯಾಗಿ, ಉಪ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಮಂಗಳೂರು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯದ ಉತ್ತಮ ಎನ್‌ಎಸ್‌ಎಸ್ ಅಧಿಕಾರಿ ಎಂಬ ಪ್ರಶಸ್ತಿ ಗಳಿಸಿದ್ದರು. ಹಾಗೆಯೇ ಅಂತರರಾಷ್ಟ್ರೀಯ ಜೇಸಿ ಸಂಸ್ಥೆಯ ಸದಸ್ಯರಾದ ಇವರು ವ್ಯಕ್ತಿತ್ವ ವಿಕಸನದ ರಾಷ್ಟ್ರೀಯ ತರಬೇತಿದಾರರಾಗಿ ವಿವಿಧ ವಿಷಯಗಳಲ್ಲಿ ವಿವಿಧ ಸಂಘಟನೆಗಳ ಸದಸ್ಯರಿಗೆ 2000ಕ್ಕೂ ಮಿಕ್ಕಿ ತರಬೇತಿಗಳನ್ನು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ನೀಡಿದ್ದಾರೆ. ಅಂತರರಾಷ್ಟ್ರೀಯ ಜೇಸಿ ಸಂಸ್ಥೆಯಿಂದ ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬೆಳ್ತಂಗಡಿ ತಾಲೂಕಿನ ಸಮೂಹ ಎಂಬ ಸಾಂಸ್ಕೃತಿಕ ಸಂಘಟನೆಯ ಸ್ಥಾಪಕ ಕಾರ್ಯದರ್ಶಿಗಳಾಗಿ 25 ವರ್ಷಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಅರ್ಥಶಾಸ್ತ್ರ ಹಾಗೂ ವ್ಯಕ್ತಿತ್ವ ವಿಕಸನದ ವಿಷಯದಲ್ಲಿ ಹಲವಾರು ಕಾರ್ಯಾಗಾರಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.

pathrika dinacharaneಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇದರ ವತಿಯಿಂದ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೆವಿಜಿ ಕಾನೂನು ಕಾಲೇಜು ಸುಳ್ಯ ಮತ್ತು ಸುದ್ದಿ ಬಿಡುಗಡೆ ಪತ್ರಿಕಾ ಸಮೂಹ ಇವರ ಸಹಭಾಗಿತ್ವದಲ್ಲಿ ನ. 16 ರಂದು ಕೆ.ವಿ.ಜಿ ಕಾನೂನು ಕಾಲೇಜು ಸುಳ್ಯದಲ್ಲಿ ನಡೆದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಪತ್ರಕರ್ತರಿಗೆ ವೃತ್ತಿ ಕಾರ್ಯಾಗಾರವನ್ನು ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಕೆ.ರವಿ ಪ್ರಧಾನ ಭಾಷಣಗೈದರು. ನ.ಪಂ.ಅಧ್ಯಕ್ಷೆ ಶೀಲಾವತಿ ಮಾಧವ ಮುಖ್ಯ ಅತಿಥಿಯಾಗಿದ್ದರು. ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಶಂಕರಪ್ಪ, ಅಕಾಡೆಮಿ ಸದಸ್ಯರುಗಳಾದ ರವಿ, ವೆಂಕಟೇಶ್, ಕೆ.ವಿ.ಜಿ ಕಾನೂನು ಕಾಲೇಜು ಪ್ರಾಂಶುಪಾಲರಾದ ಉದಯಕೃಷ್ಣ, ಕಾರ್ಯಾಗಾರ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಯು.ಪಿ.ಶಿವಾನಂದ, ಸಂಚಾಲಕ ಕೆ.ಎಂ.ಮುಸ್ತಫಾ, ಸಂಘಟನಾ ಸಮಿತಿಯ ಗೌರವಾಧ್ಯಕ್ಷ ಹರೀಶ್ ರೈ ಪಿ.ಬಿ., ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ವೇದಿಕೆಯಲ್ಲಿದ್ದರು.

sammelana2

sammelana

sammelana1ಉಜಿರೆ : ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಲಾದ ಸರ್ವಧರ್ಮ ಸಮ್ಮೇಳನದ 85ನೇ ಅಧಿವೇಶನವನ್ನು ಸುಬ್ರಹ್ಮಣ್ಯ ಮಠದ ವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿ ಉದ್ಘಾಟಿಸಿ, ಮಾತನಾಡಿದ ಅವರು ಸಮಾಜದ ಒಳಿತಿಗಾಗಿ ಧರ್ಮದ ಆಚರಣೆಯ ಅವಶ್ಯಕತೆ ಇದೆ. ನಮ್ಮ ಜೀವನದಲ್ಲಿ ಧರ್ಮವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಎಲೆಗೂ, ಮರಕ್ಕೂ ಇರುವ ಅವಿನಾಭಾವ ಸಂಬಂಧ ನಮಗೂ ಧರ್ಮಕ್ಕೂ ಇದೆ. ನಮ್ಮಿಂದ ಧರ್ಮ, ಧರ್ಮದಿಂದ ನಾವು ಎಂಬ ಭಾವನೆ ಇದ್ದಾಗ ಧರ್ಮ ಜಾಗೃತಿಯಾಗುತ್ತದೆ. ಧರ್ಮ ಜಾಗೃತಿ ಮತ್ತು ಧರ್ಮದ ಅನುಷ್ಠಾನದಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಜೈನ ಧರ್ಮದಲ್ಲಿ ಸಮನ್ವಯ ಎಂಬ ವಿಷಯದ ಬಗ್ಗೆ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ, ಉಡುಪಿಯ ಅಕ್ಬರ್ ಅಲಿ ಇಸ್ಲಾಂ ಧರ್ಮದಲ್ಲಿ ಸಮನ್ವಯ ದೃಷ್ಟಿ ಎಂಬ ವಿಷಯದ ಬಗ್ಗೆ, ಕ್ರೈಸ್ತ ಧರ್ಮದ ಬಗ್ಗೆ ಬೆಂಗಳೂರಿನ ಸ್ವಾಮಿ ಅಂತೋನಿರಾಜ್ ಮಾತನಾಡಿ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ವೆಲ್ಲೂರಿನ ಶ್ರೀ ನಾರಾಯಣಿ ಪೀಠಂ ನ ಶ್ರೀಶಕ್ತಿ ಅಮ್ಮ ವಹಿಸಿದ್ದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್ ಕಾಮತ್ ಧನ್ಯವಾದವಿತ್ತರು. ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಸಂಪತ್ ಕುಮಾರ್ ಮತ್ತು ಪ್ರೊ. ಬಿ.ಎ. ಕುಮಾರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
ರಾತ್ರಿ ಕಂಚಿಮಾರು ಕಟ್ಟೆ ಉತ್ಸವ ನಡೆಯಿತು.

pay 2 cartಮಡಂತ್ಯಾರು: ಇಲ್ಲಿಯ ಆಶೀರ್ವಾದ್ ಸಭಾಂಗಣದ ಕಟ್ಟಡದಲ್ಲಿ ರಿಟೇಲ್ ಆನ್‌ಲೈನ್ ಶಾಪ್ ಪೇ ಟೂ ಕಾರ್ಟ್ ನ.11ರಂದು ಶುಭಾರಂಭಗೊಂಡಿದೆ.
ಕುಟುಂಬದ ಹಿರಿಯರಾದ ಜೆರಾಲ್ಡ್ ಲೋಬೊ ಮತ್ತು ಶ್ರೀಮತಿ ಸೆಲಿನ್ ಲೋಬೊ ರಿಬ್ಬನ್ ಕತ್ತರಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದರು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂ. ಫಾ| ಬಾಸಿಲ್‌ವಾಸ್ ದೀಪ ಬೆಳಗಿಸಿ ಆಶೀರ್ವಚನ ನೆರವೇರಿಸಿ ಮಡಂತ್ಯಾರಿಗೊಂದು ಹೊಸ ಯುಗ ಪ್ರಾರಂಭಗೊಂಡಿದೆ. ಇಂಟರ್‌ನೆಟ್ ಮೂಲಕ ಇಡೀ ಭೂಲೋಕ ಖರೀದಿಸುವ ವ್ಯವಸ್ಥೆ ಪೇ ಟೂ ಕಾರ್ಟ್ ಯೋಜನೆ ಎಂದರು. ನಾವು ಪಡುವ ಶ್ರಮಕ್ಕೆ ದೇವರ ಅನುಗ್ರಹ ಇರುತ್ತದೆ. ಇಲ್ಲಿ ಉತ್ತಮ ವ್ಯವಹಾರ ನಡೆಯಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಶಾದೀಪದ ನಿರ್ದೇಶಕ ವಂ. ಫಾ| ಜೋರ್ಜ್ ಫಾಂತುಮಯೆರ್, ಮಡಂತ್ಯಾರು ಜುಮಾ ಮಸೀದಿಯ ಕತೀಬ್ ಅಬ್ದುಲ್ ರಜಾಕ್ ಶಾಫಿ, ಪೇ ಟೂ ಕಾರ್ಟ್ ಭಾರತೀಯ ವ್ಯವಹಾರ ಮುಖ್ಯಸ್ಥ ಸೂರಜ್ ರೆಬೆಲ್ಲೊ, ಪೇ ಟೂ ಕಾರ್ಟ್ ಸ್ಥಳೀಯ ಮುಖ್ಯಸ್ಥ ಧನಂಜಯ ಕುಮಾರ್, ವಲಯ ಮುಖ್ಯಸ್ಥ ಬಿ.ಎಸ್. ರಾಜೇಶ್ ಶುಭ ಹಾರೈಸಿದರು. ಮಾಲಕ ಸ್ಟೀವ್ ಅಂದ್ರಾದೆ ಸ್ವಾಗತಿಸಿ, ಶ್ರೀಮತಿ ಜುಲಿಯಾನಾ ಅಂದ್ರಾದೆ ವಂದಿಸಿದರು.
ಕು| ಸ್ಟೆಫಿ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು. ಜಾರ್ಜ್ ಅಂದ್ರಾದೆ ಆಗಮಿಸಿದ ಅತಿಥಿ ಗಣ್ಯರನ್ನು ಸತ್ಕರಿಸಿ ದರು. ಇಲ್ಲಿ ಎಲ್ಲಾ ಗ್ರಹೋಪಯೋಗಿ ವಸ್ತುಗಳು, ಅಡುಗೆ ಉಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು ಅತ್ಯಂತ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ ಎಂದು ತಿಳಿಸಿದರು.

ka ra ve karyakramaನಮ್ಮ ನಿಯತ್ತು ನಮ್ಮನ್ನು ಕಾಪಾಡುತ್ತದೆ : ಕರವೇ ಅಧ್ಯಕ್ಷ ಶ್ರೀನಿವಾಸ ಗೌಡ
ಈ ಭೂಮಿಯ ಮೇಲೆ ಎಲ್ಲರೂ ಒಂದೇ, ಇಲ್ಲಿ ಯಾವ ಜಾತಿ, ಯಾವ ಧರ್ಮ? ನಮ್ಮ ನಿಯತ್ತು ಸರಿ ಇದ್ದರೆ ಅದೇ ನಮ್ಮನ್ನು ಕಾಪಾಡುತ್ತದೆ. ನಮ್ಮ ಉಪಚಾರ ಹೇಗಿರುತ್ತದೋ ಅದೇ ರೀತಿ ಸಮಾಜ ನಮ್ಮನ್ನೂ ಉಪಚರಿಸುತ್ತದೆ. ಕರ್ನಾಟಕದ ಮಣ್ಣಲ್ಲಿ ಹುಟ್ಟಿದ ಬಳಿಕ ಈ ಕನ್ನಡ ತಾಯಿ ಭುವನೇಶ್ವರಿಯ ಋಣ ತೀರಿಸುವ ಉದ್ಧೇಶದಿಂದ ಈ ಘಟಕದ ತಾ| ಅಧ್ಯಕ್ಷತೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ, ಎಲ್ಲರೂ ಒಟ್ಟಿಗೆ ಸೇರಿ ಈ ಕೆಲಸ ಮಾಡೋಣ. ಈ ಕಾರ್ಯಕ್ರಮಕ್ಕೆ ನಮಗೆ ಅನೇಕರು ಕೈ ಜೋಡಿಸಿದ್ದಾರೆ ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಗೌಡ ಪಟ್ರಮೆ ಹೇಳಿದರು.

ಗಣ್ಯರ ಅನಿಸಿಕೆಗಳು:
ದ.ಕ. ಜಿಲ್ಲೆಯ ೫ ಸಾವಿರಕ್ಕೂ ಅಧಿಕ ಮಂದಿ ಬೇರೆ ಬೇರೆ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿದ್ದು ಅವರ ರಕ್ಷಣೆಯನ್ನು ಟಿ.ಎ. ನಾರಾಯಣ ಗೌಡ ನೇತೃತ್ವದ ಕರವೇ ಮಾಡುತ್ತಿದೆ, ಕನ್ನಡ ಭಾಷೆಗೆ, ಕನ್ನಡಿಗರಿಗೆ ಅನ್ಯಾಯವಾದರೆ ನಾವು ಹೇಗೆ ಒಗ್ಗಟ್ಟು ಸಾಧಿಸುತ್ತೇವೋ ಭಾರತ ಮಾತೆಗೆ ಅನ್ಯಾಯ ವಾದಾಗ ಭಾರತೀಯರಾದ ನಾವು ಒಗ್ಗಟ್ಟಾಗೋಣ. -ಹರೀಶ್ ಪೂಂಜ, ಜಿಲ್ಲಾಧ್ಯಕ್ಷರು ಬಿಜೆಪಿ ಯುವಮೋರ್ಚಾ
ಕರವೇ ಇಂದು ಜಾತಿ ಧರ್ಮದ ಭೇದವಿಲ್ಲದೆ ಕೆಲಸ ಮಾಡುತ್ತಿದೆ, ನಾವು ಇತರ ಭಾಷಿಗರ ವಿರೋಧಿಗಳಲ್ಲ, ಆದರೆ ಇತರ ಭಾಷಿಗರು ನಮ್ಮ ಮೇಲೇರಿ ಬರುವುದನ್ನು ಸಹಿಸುವುದಿಲ್ಲ. -ಕರವೇ ಮಂಗಳೂರು ತಾ| ಅಧ್ಯಕ್ಷ ಮಧುಸೂಧನ ಗೌಡ
ನೇತ್ರಾವತಿ ನದಿ ತಿರುವು ಯೋಜನೆ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ವೀರಪ್ಪ ಮೊಲಿ, ಕರಾವಳಿ ಭಾಗದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ. ಅತ್ತ ಜನರಿಗೆ ಕುಡಿಯುವ ನೀರು ಬೇಕು, ಇತ್ತ ಕರಾವಳಿಯ ಜೀವನದಿ ನೇತ್ರಾವತಿ, ಪಶ್ಚಿಮ ಘಟ್ಟ ಉಳಿಯಬೇಕು ಎಂಬುದು ಕರವೇ ನೀತಿ.-ತೇಗೂರು ಜಗದೀಶ್ ಅರಸ್. ಉಡುಪಿ-ಮಂಗಳೂರು ಕರವೇ ಉಸ್ತುವಾರಿ.

ಉಜಿರೆ : ಕರ್ನಾಟಕ ರಕ್ಷಣಾ ವೇದಿಕೆ ಕಳೆದ 18 ವರ್ಷಗಳಿಂದ ನಿರಂತರವಾಗಿ ರಾಜ್ಯದಲ್ಲಿ ಟಿ.ಎ. ನಾರಾಯಣ ಗೌಡರ ನೇತೃತ್ವದಲ್ಲಿ ಕನ್ನಡದ ಸೇವೆಯ ಜೊತೆಗೆ ಕನ್ನಡ ಭಾಷೆ ಮತ್ತು ಕನ್ನಡಿಗರ ಮೇಲೆ ಇತರ ಭಾಷಿಗರಿಂದ ಆಗುತ್ತಿರುವ ಆಕ್ರಮಣವನ್ನು ತಡೆದು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಲ| ಅನಿಲ್‌ದಾಸ್ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ನ. 11 ರಂದು ಉಜಿರೆ ಅರಿಪ್ಪಾಡಿ ಮಠ ಮೈದಾನದಲ್ಲಿ ಆಯೋಜಿಸಿದ್ದ 62ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದ ಬಹುಮಾನ ವಿತರಣೆ ಹಾಗೂ ತಾಲೂಕು ಸಮಿತಿಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಘಟಕದ ನೂತನ ಅಧ್ಯಕ್ಷ, ಉದ್ಯಮಿ ಶ್ರೀನಿವಾಸ ಗೌಡ ಪಟ್ರಮೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅರಿಪ್ಪಾಡಿ ಮಠದ ಮುಖ್ಯಸ್ಥ ಬಾಲಕೃಷ್ಣ ಅರಿಪ್ಪಡಿತ್ತಾಯ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಪ್ರವೀಣ್ಚಂದ್ರ ಜೈನ್ ಪಡಂಗಡಿ, ಬಿಜೆಪಿ ಯುವ ಮೋರ್ಚಾ ತಾ| ಅಧ್ಯಕ್ಷ ಸಂಪತ್ ಬಿ. ಸುವರ್ಣ, ಮಂಗಳೂರು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಲತಾ ಸಾಲ್ಯಾನ್, ವಸ್ತ್ರಂ ಉಜಿರೆ ಮಾಲಕ ಸುಧಾಕರ ಗೌಡ ಧರ್ಮಸ್ಥಳ, ಗಣೇಶ್ ಪ್ರಸಾದ್ ಮೋಟಾರ್ ಲಿಂಕ್ಸ್ ಮಾಲಕ ಬಿ. ಪಾಂಡುರಂಗ ಭಂಡಾರ್ಕರ್, ಮಂಗಳೂರು ನಗರ ಘಟಕದ ಅಧ್ಯಕ್ಷ ಮುಹಮ್ಮದ್ ರಝಾಕ್, ಕರ್ನಾಟಕ ಕಾರ್ಮಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಲಕ್ಷ್ಮಣ ಗೌಡ, ಉರಗ ಪ್ರೇಮಿ ಸ್ನೇಕ್ ಜೋಯ್, ಬಿ.ಎಂ. ಗ್ರೂಪ್ಸ್‌ನ ಮಾಲಕ ಹನೀಫ್ ಬಿ.ಎಮ್, ಸಿಂಧೂ ಇಲೆಕ್ಟ್ರಿಕಲ್ಸ್ ಮಾಲಕ ಜನಾರ್ದನ, ಉದ್ಯಮಿ ಶ್ರೀಕಾಂತ್ ಸಂಪಿಗೆತ್ತಾಯ, ಮಂಗಳೂರಿನ ಉದ್ಯಮಿ ಶಮೀರ್ ನಾಳ, ಜಲೀಲ್ ಬಾಬಾ ಬೆಳ್ತಂಗಡಿ, ಗಿರೀಶ್ ಪ್ರಭು ಉಜಿರೆ, ವಿಶ್ವನಾಥ ಗೌಡ ಶಾರದಾ ಫ್ಯಾನ್ಸಿ ಉಜಿರೆ, ಫಝಲ್ ರಹಿಮಾನ್ ಕೋಯ ಎರ್ನೋಡಿ ಉಜಿರೆ, ಯು.ಕೆ. ಮುಹಮ್ಮದ್ ಹನೀಫ್ ಕಾಶಿಬೆಟ್ಟು, ಆಸಿಫ್ ಮಂಗಳೂರು ಇವರುಗಳು ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ :
ಸಮಾರಂಭದಲ್ಲಿ ತಾಲೂಕಿನ ಸಾಧಕ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಕೆ. ಬಾಲಭಾಸ್ಕರ್, ಸಮಾಜ ಸೇವಕ ರಾಮಚಂದ್ರ ಶೆಟ್ಟಿ ಉಜಿರೆ, ಮಂಗಳೂರು ನ್ಯಾಷನಲ್ ಟ್ಯುಟೋರಿಯಲ್ ಕಾಲೇಜು ಪ್ರಾಂಶುಪಾಲ ಯು.ಎಚ್. ಖಾಲಿದ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ದೇವಿಪ್ರಸಾದ್, ಝೀ ಕನ್ನಡ ಕಾಮಿಡಿ ಕಿಲಾಡಿ ಕಲಾವಿದ ಅನೀಶ್ ಅಮೀನ್, ಸ್ವಾರ್ ಸುವರ್ಣ ವಾಹಿನಿ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ ವಿಜೇತ ಮಾಸ್ಟರ್ ತೌಶೀರ್ ಎಂ. ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಝೀ ಕನ್ನಡದ ಕಾಮಿಡಿ ಕಿಲಾಡಿ ಕಲಾವಿದ ಹಿತೇಶ್ ಕಾಪಿನಡ್ಕ ಅವರ ಪರವಾಗಿ ಅವರ ತಂದೆ ಸನ್ಮಾನ ಸ್ವೀಕರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ಆಬಿದ್ ಅಲಿ (ಅಭಿ) ಉಜಿರೆ, ಜೊತೆ ಕಾರ್ಯದರ್ಶಿಗಳಾದ ಶಾಹಿದ್ ಪಾದೆ ಮತ್ತು ಸಿದ್ದೀಕ್, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ ಪಡೀಲ್ ಮುಂಡಾಜೆ, ಸಂಘಟನಾ ಜೊತೆ ಕಾರ್ಯದರ್ಶಿ ನಿತಿನ್ ಕುಮಾರ್ ಹರ್ಷ ಎಂಟರ್‌ಪ್ರೈಸಸ್, ಸಂಚಾಲಕ ಹರೀಶ್ ಸುವರ್ಣ ಕನ್ಯಾಡಿ, ಮತ್ತು ಅನೀಷ್ ಬೆಡ್‌ಮಾರ್ಟ್ ಹಾಗೂ ಎಲ್ಲಾ ಸದಸ್ಯರುಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಘಟಕದ ಸದಸ್ಯ ಹರೀಶ್ ಬಳೆಂಜ ಸ್ವಾಗತಿಸಿದರು. ಇರ್ಪಾನ್ ಎಂ.ಡಿ. ಕ್ರೀಡಾ ವಿಜೇತರ ಪಟ್ಟಿ ವಾಚಿಸಿದರು. ಪ್ರ. ಕಾರ್ಯದರ್ಶಿ ಶಾಹುಲ್ ಹಮೀದ್ ಕ್ಯೂಟಿಎಫ್ ಧನ್ಯವಾದವಿತ್ತರು. ಶಮಿತಾ ಪ್ರಾರ್ಥನೆ ಹಾಡಿದರು. ಶ್ರೀನಿವಾಸ್ ಗೌಡರ ಪತ್ನಿ ಪುಷ್ಪಾ ಶ್ರೀನಿವಾಸ್ ಸಹಿತ ಎಲ್ಲಾ ಮಹಿಳಾ ಸದಸ್ಯರುಗಳೂ ಕೂಡ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಅಕ್ಷತಾ ಮತ್ತು ಮಂಜು ಆರ್ ಕಾರ್ಯಕ್ರಮ ನಿರೂಪಿಸಿದರು.

bjpಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಸಚಿವೆ, ರಾಜ್ಯ ಪ್ರದಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರ ಬಗ್ಗೆ ಅವಹೇಳನಕಾರಿಯಾಗಿ ಬರೆದ ಯತೀಶ್ ಯಕ್ಷ ಹೆಸರಿನ ಫೆಸ್ಬುಕ್ ಖಾತೆದಾರನ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಮತ್ತು ಸಾಮಾಜಿಕ ಜಾಲತಾಣ ಪ್ರಕೋಷ್ಟ ಬೆಳ್ತಂಗಡಿ ಮಂಡಲದಿಂದ ಲಿಖಿತ ದೂರು ದಾಖಲಿಸಲಾಯಿತು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ರಂಜನ್ ಜಿ ಗೌಡ, ಜಿಲ್ಲಾ ಕಾರ್ಯದರ್ಶಿ ಕೊರಗಪ್ಪ ನಾಯ್ಕ್, ತಾ.ಪ.ಸ ಸುಧಾಕರ್ ಲಾಯಿಲ, ಲಾಯಿಲ ಪಂಚಾಯತ್ ಉಪಾಧ್ಯಕ್ಷ ಗಿರೀಶ್ ಡೊಂಗ್ರೆ, ಸಾಮಾಜಿಕ ಜಾಲತಾಣ ಸಂಚಾಲಕ ವಿಜಯ್ ಗೌಡ ಅತ್ತಾಜೆ, ಜಿಲ್ಲಾ ಸಾಮಾಜಿಕ ಜಾಲತಾಣ ಸದಸ್ಯ ರಾಜ್ ಗೋಪಾಲ್ ಭಟ್ ಮತ್ತು ನಾರಾಯಣ್ ಆಚಾರ್ ಉಪಸ್ಥಿತರಿದ್ದರು.

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top