Sun 26 Mar 2017, 9:03AM

ಹೆಚ್ಚಿನ ಸುದ್ದಿಗಳು

ಬೆಳ್ತಂಗಡಿ ಸಂಪೂರ್ಣ ಡಿಜಿಟಲ್ ಸಾಕ್ಷರ ತಾಲೂಕಾಗಲು ಸುದ್ದಿಯ ಯೋಜನೆ ಫೇಸ್‌ಬುಕ್ ವ್ಯಾಟ್ಸಪ್‌ನ ಉತ್ತಮ ವಿಷಯಗಳಿಗೆ ಸುದ್ದಿಯಲ್ಲಿ ಅವಕಾಶ ಮುಗ್ಧ ಜನರು ಅವಹೇಳನಕಾರಿ ಸಂದೇಶಗಳಿಗೆ ಬಲಿಯಾಗದಂತೆ ಎಚ್ಚರಿಕೆ

Thursday, November 19th, 2015 | Suddi Belthangady | no responses
ಡಾ| ಯು.ಪಿ.ಶಿವಾನಂದ

ಡಾ| ಯು.ಪಿ.ಶಿವಾನಂದ

ಸಾಮಾನ್ಯ ಜನರು ಕೂಡ ತಂತ್ರಜ್ಞಾನವನ್ನು ಬಳಸಿ ಸರಕಾರದ ಮತ್ತು ತಮಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಪಡೆಯುವ ಕೇಂದ್ರ ಸರಕಾರದ ಯೋಜನೆಯಾದ ಡಿಜಿಟಲ್ ಸಾಕ್ಷರತೆಯನ್ನು ಬೆಳ್ತಂಗಡಿ ತಾಲೂಕಿನಲ್ಲಿ ಎಲ್ಲಾ ಮನೆಗಳಿಗೆ ಮುಟ್ಟಿಸಿ ದೇಶದಲ್ಲೇ ಅತ್ಯಂತ ಹೆಚ್ಚು ಡಿಜಿಟಲ್ ಸಾಕ್ಷರತೆಯುಳ್ಳ ತಾಲೂಕನ್ನಾಗಿ ಮಾಡುವ ಯೋಜನೆಯನ್ನು ಸುದ್ದಿ ಪತ್ರಿಕೆ ಹಾಕಿಕೊಂಡಿದೆ. ಉತ್ತಮ ವಿಷಯಗಳನ್ನು ಮನೆ ಮನೆಗೆ ತಲುಪಿಸಲು ಪತ್ರಿಕೆ ಯಲ್ಲದೆ ಸಾಮಾಜಿಕ ಜಾಲತಾಣಗಳನ್ನು ಸುದ್ದಿ ಬಳಸಿಕೊಳ್ಳಲಿದೆ. ಅದಕ್ಕಾಗಿ ಫೇಸ್‌ಬುಕ್ ಮತ್ತು ವ್ಯಾಟ್ಸಪ್ ಹಾಗೂ ಇತರ ಜಾಲತಾಣಗಳ ಬಳಕೆದಾರರನ್ನು ಉಪಯೋಗಿಸಿ ಅವರ ಒಳ್ಳೆಯ ವಿಚಾರಗಳನ್ನು, ಜನೋಪಯೋಗಿ ಚರ್ಚೆಗಳನ್ನು ಜನರಿಗೆ ತಲುಪಿಸಲು ಸುದ್ದಿ ಪತ್ರಿಕೆ ಸುದ್ದಿ ವೆಬ್‌ಸೈಟ್, ಸುದ್ದಿ ಮೊಬೈಲ್ ಆಪ್ ಸ್ಥಳಾವಕಾಶ ನೀಡಲಿದೆ. ಅದಕ್ಕಾಗಿಯೇ ಪತ್ರಿಕೆಯಲ್ಲಿ ಪುಟ ಮೀಸಲಿಡಲಿದೆ.
ಆದರೆ ಇತ್ತೀಚೆಗೆ ಕೆಲವು ವಿಕೃತ ಮನಸ್ಸಿನ ವ್ಯಕ್ತಿಗಳು ವ್ಯಾಟ್ಸಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅವಹೇಳನ ಮಾಡುವುದು, ತಿರುಚಿ ಅಪಪ್ರಚಾರ, ಬ್ಲ್ಯಾಕ್‌ಮೇಲ್ ಮಾಡುವುದು, ಗಂಭೀರ ಸಮಸ್ಯೆಯಾಗಿದೆ. ಮುಗ್ಧ ಜನರ ಮನಸ್ಸನ್ನು ಹಾಳು ಮಾಡುವ, ಕ್ರಿಮಿನಲ್‌ಗಳಾಗಲು ಪ್ರಚೋದನೆ ನೀಡುವ ಅಂತವರನ್ನು ನಿಯಂತ್ರಿಸುವುದು ಎಲ್ಲರ ಕರ್ತವ್ಯವಾಗಿದೆ. ಅದಕ್ಕಾಗಿ ಸಾಮಾಜಿಕ ಜಾಲತಾಣ ಉಪ ಯೋಗಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವವರನ್ನು ಗುರುತಿಸಿ, ಅವರನ್ನು ಜನರೇ ಬಹಿಷ್ಕರಿಸುವಂತೆ ಮಾಡುವ ಆಂದೋಲನವನ್ನು ಸುದ್ದಿ ಪತ್ರಿಕೆ ಹಾಕಿಕೊಂಡಿದೆ. ಆ ಮೂಲಕ ಬಂದ್, ಗಲಭೆಗೆ, ಸಮಾಜದ ಅಶಾಂತಿಗೆ ಕಾರಣರಾಗುವವರಿಗೆ ಸರಿಯಾದ ಶಿಕ್ಷೆ ದೊರಕುವಂತೆ ಮಾಡುವ ಕಾರ್ಯಕ್ರಮವಿದು ಅದಕ್ಕೆ ಜನರ ಬೆಂಬಲ ಬೇಕಾಗಿದೆ. ಸಾಮಾಜಿಕ ಜಾಲತಾಣಗಳನ್ನು ಸದುಪಯೋಗ ಪಡಿಸುವ ನಿಟ್ಟಿನಲ್ಲಿ ಅವರ ಬೆಂಬಲಕ್ಕೆ ಸುದ್ದಿ ಪತ್ರಿಕೆ ನಿಂತಂತೆ ಸಾಮಾಜಿಕ ಜಾಲತಾಣ ಗಳನ್ನು ಬಳಸುವವರು ಅದನ್ನು ದುರುಪಯೋಗ ಮಾಡುವವರ ವಿರುದ್ಧ ಸಿಡಿದು ನಿಲ್ಲಬೇಕೆಂದು ಬಯಸುತ್ತಿದ್ದೇವೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top