Sat 16 Dec 2017, 11:39AM

ಹೆಚ್ಚಿನ ಸುದ್ದಿಗಳು

ಪಿ.ಯು.ಸಿ ಫಲಿತಾಂಶ

Thursday, May 26th, 2016 | Suddi Belthangady | no responses

585 copy

namitha jois k s (hepk)ಉಜಿರೆ ಎಸ್.ಡಿ.ಎಂ. ಸನಿವಾಸ, ಸಂತ ತೆರೆಸಾ ಬೆಳ್ತಂಗಡಿ ಶೇ. ೯೯
ನಡ ಸರಕಾರಿ ಪ.ಪೂ. ಕಾಲೇಜಿಗೆ ಶೇ. ೯೭

ಬೆಳ್ತಂಗಡಿ : ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಮಂಡಳಿ ಎಪ್ರಿಲ್ ತಿಂಗಳಲ್ಲಿ ನಡೆಸಿದ ದ್ವಿತೀಯ ಪಿ.ಯು.ಸಿ. ಪಬ್ಲಿಕ್ ಪರೀಕ್ಷೆಯ ಫಲಿತಾಂಶವು ಮೇ ೨೫ ರಂದು ಎಲ್ಲಾ ಕಾಲೇಜುಗಳಲ್ಲಿ ಪ್ರಕಟಗೊಂಡಿದ್ದು, ಬೆಳ್ತಂಗಡಿ ತಾಲೂಕಿನ ಎಲ್ಲಾ ಕಾಲೇಜುಗಳು ಉತ್ತಮ ಫಲಿತಾಂಶ ಪಡೆದುಕೊಂಡಿದೆ.
ತಾಲೂಕಿನ ಸರಕಾರಿ ಮತ್ತು ಖಾಸಗಿ ಕಾಲೇಜುಗಳು ಸೇರಿದಂತೆ ಒಟ್ಟು ೨೧ ಪದವಿ ಪೂರ್ವ ಕಾಲೇಜಿನಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವುಗಳಲ್ಲಿ ೧೯ ಕಾಲೇಜುಗಳ ಫಲಿತಾಂಶ ಲಭ್ಯವಾಗಿದ್ದು, ವಿವರಗಳನ್ನು ಒಳ ಪುಟದಲ್ಲಿ ಪ್ರಕಟಿಸಲಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಸರಕಾರಿ ಕಾಲೇಜುಗಳಲ್ಲಿ ನಡ ಪ.ಪೂ. ಕಾಲೇಜು ಶೇ. ೯೭ ಫಲಿತಾಂಶ ಪಡೆದು ಸರಕಾರಿ ಶಾಲೆಗಳಲ್ಲಿ ಅತೀ ಹೆಚ್ಚು ಫಲಿತಾಂಶ ಪಡೆದ ಕೀರ್ತಿಗೆ ಪಾತ್ರವಾಗಿದೆ. ಅರಸಿನಮಕ್ಕಿ ಪ.ಪೂ. ಕಾಲೇಜು ಶೇ ೯೫.೪೫ ಫಲಿತಾಂಶ ಪಡೆದು ದ್ವಿತೀಯ ಸ್ಥಾನದಲ್ಲಿದೆ. ಖಾಸಗಿ ಕಾಲೇಜುಗಳಲ್ಲಿ ಪ್ರಥಮ ಸ್ಥಾನವನ್ನು ಎರಡು ಕಾಲೇಜುಗಳು ಹಂಚಿಕೊಂಡಿದೆ. ಉಜಿರೆ ಎಸ್.ಡಿ.ಎಂ. ಸನಿವಾಸ ಕಾಲೇಜು ಶೇ.೯೯ ಫಲಿತಾಂಶ ಹಾಗೂ ಸಂತ ತೆರೆಸಾ ಪ.ಪೂ. ಕಾಲೇಜು ಬೆಳ್ತಂಗಡಿ ಶೇ. ೯೯ ಫಲಿತಾಂಶ ಪಡೆದು ತಾಲೂಕಿನಲ್ಲಿ ಖಾಸಗಿ ಕಾಲೇಜುಗಳಲ್ಲಿ ಅತೀ ಹೆಚ್ಚು ಫಲಿತಾಂಶ ಪಡೆದ ಕಾಲೇಜುಗಳು ಎಂಬ ದಾಖಲೆಯಾಗಿದೆ. ವಾಣಿ ಪ.ಪೂ. ಕಾಲೇಜು ಹಳೆಕೋಟೆ ಬೆಳ್ತಂಗಡಿ ಶೇ. ೯೭.೩೧ ಫಲಿತಾಂಶ ಪಡೆದು ದ್ವಿತೀಯ ಸ್ಥಾನದಲ್ಲಿದೆ.
ತಾಲೂಕಿನಲ್ಲಿ ಕಲಾ ವಿಭಾಗದಲ್ಲಿ ಎಸ್.ಡಿ.ಎಂ. ಉಜಿರೆ ಪದವಿ ಪೂರ್ವ ಕಾಲೇಜಿನ ನಮಿತಾ ಜೋಯ್ಸ್ ಕೆ.ಎಸ್. ೫೬೫ ಅಂಕ ಪಡೆದು ಪ್ರಥಮ, ವಾಣಿಜ್ಯ ವಿಭಾಗದಲ್ಲಿ ಗುರುದೇವ ಕಾಲೇಜಿನ ರನಿತಾ ೫೮೫ ಅಂಕಗಳಿಸಿ ಪ್ರಥಮ, ವಿಜ್ಞಾನ ವಿಭಾಗದಲ್ಲಿ ಉಜಿರೆ ಎಸ್.ಡಿ.ಎಂ. ಸನಿವಾಸ ಕಾಲೇಜಿನ ಆಕಾಶ್ ತಿಮ್ಮಣ್ಣಪ್ಪ ಸಜ್ಜನ್ ೫೮೮ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ವಾಣಿ ಕಾಲೇಜು ವಾಣಿಜ್ಯ ವಿಭಾಗದಲ್ಲಿ ಶೇ. ೧೦೦, ಶ್ರೀ ಗುರುದೇವ ಕಾಲೇಜು ಬೆಳ್ತಂಗಡಿ ವಿಜ್ಞಾನ ವಿಭಾಗದಲ್ಲಿ ಶೇ. ೧೦೦ ಫಲಿತಾಂಶ, ಸಂತ ತೆರೆಸಾ ಬೆಳ್ತಂಗಡಿ ಕಲಾ ವಿಭಾಗದಲ್ಲಿ ಶೇ. ೧೦೦ ಫಲಿತಾಂಶ ಪಡೆದ ಸಾಧನೆ ಮಾಡಿದೆ. ಫಲಿತಾಂಶದ ಪೈಕಿ ಗೇರುಕಟ್ಟೆ ಮತ್ತು ಕೊಯ್ಯೂರು ಪ.ಪೂ. ಕಾಲೇಜುಗಳ  ಫಲಿತಾಂಶಕ್ಕೆ ಬಹಳಷ್ಟು ಪ್ರಯತ್ನಿಸಿದರೂ ಲಭ್ಯವಾಗಲಿಲ್ಲ.
ಎಸ್.ಡಿ.ಎಂ. ಪ.ಪೂ. ಕಾಲೇಜಿನಲ್ಲಿ ೧೭೭, ವಾಣಿ ಪ.ಪೂ. ಕಾಲೇಜು ಮತ್ತು ಸೇ.ಹಾ. ಪ.ಪೂ. ಕಾಲೇಜು ಮಡಂತ್ಯಾರು ೫೦, ಉಜಿರೆ ಎಸ್.ಡಿ.ಎಂ. ಸನಿವಾಸ ಕಾಲೇಜು ೩೮ ಅತೀ ಹೆಚ್ಚು ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆದಿದ್ದಾರೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top