Sun 17 Dec 2017, 12:50PM

ಹೆಚ್ಚಿನ ಸುದ್ದಿಗಳು

ನಮ್ಮೊಳಗಿನ ಏಕತೆ ಸಹಕಾರದಿಂದ ಯಶಸ್ಸು ಸಾಧ್ಯ

Friday, July 8th, 2016 | Suddi Belthangady | no responses

SDM high school vidyarthi sanga udgatane 1 copy  ಧರ್ಮಸ್ಥಳ : “ವಿದ್ಯಾರ್ಥಿ ಜೀವನದಲ್ಲಿ ನಿಶ್ಚಿತವಾದ ಗುರಿ ಬೇಕು. ಎಲ್ಲರ ಒಳಗಿನ ಸಹಕಾರದಿಂದ ಈ ಗುರಿ ಈಡೇರುತ್ತದೆ. ಪರಸ್ಪರ ಕೊಡುಕೊಳ್ಳುವಿಕೆ ಇದ್ದಾಗ ಸಾಮೂಹಿಕ ಕಲಿಕೆ ಆಗುತ್ತದೆ. ಇದಕ್ಕೆಲ್ಲಾ ಸಂಘ ಚಟುವಟಿಕೆಗಳು ಸಹಕಾರಿಯಾಗುತ್ತದೆ. ಎಂದು ಶ್ರೀ ಧ.ಮಂ. ಶಿಕ್ಷಕ ಶಿಕ್ಷಣ (ಬಿ.ಎಡ್.) ಮಹಾವಿದ್ಯಾಲಯ ಉಜಿರೆಯ ಪ್ರಾಂಶುಪಾಲ ನಿತ್ಯಾನಂದ  ಹೇಳಿದರು. ಅವರು ಜು.1ರಂದು ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆ, ಧರ್ಮಸ್ಥಳದಲ್ಲಿ 2016-17ನೇ ಸಾಲಿನ ವಿವಿಧ ಸಂಘಗಳ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡುತ್ತಿದ್ದರು. ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಕು| ಸುಶ್ರಾವ್ಯ. ವಿಜಯಲಕ್ಷ್ಮೀ, ಕಾವ್ಯ ಶ್ರೀ,  ಅನುಷ್, ಜಸ್ನಾ ಜೋಯ್, ಚೈತ್ರಾ ಕೆ, ಚಂದ್ರಶೇಖರ್, ನೀತಿ, ಐಶ್ವರ್‍ಯ ಹಾಗೂ ಶ್ರೀಕಾಂತ್ ಇವರನ್ನು ಶಾಲೆಯ ವತಿಯಿಂದ ಪುರಸ್ಕರಿಸಲಾಯಿತು. ವಿಜ್ಞಾನ, ಗಣಿತ, ಪರಿಸರ, ಸಾಹಿತ್ಯ, ಸಾಂಸ್ಕೃತಿಕ, ಕಲಾ ಮಾನವಿಕ ಮತ್ತು ಕ್ರೀಡಾ ಸಂಘಗಳ ವಾರ್ಷಿಕ ಕ್ರಿಯಾ ಯೋಜನೆಯನ್ನು ಕ್ರಮವಾಗಿ ವಿದ್ಯಾರ್ಥಿಗಳಾದ ಪೂಜಾಶ್ರೀ, ಕುಮುದ, ಮಹಮ್ಮದ್ ಹಾಸಿರ್, ಪ್ರೀತಾ, ಲಕ್ಷ್ಮೀ, ಜೋಸ್ತ್ನಾ, ಸ್ಪರ್ಶಾ ಮತ್ತು ಪ್ರಣವ್ ವಾಚಿಸಿದರು. ಶಾಲಾ ಮುಖ್ಯ ಶಿಕ್ಷಕ   ಜನಾರ್ದನ ಬಿ. ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಜಯರಾಮ ಮಯ್ಯ ಸ್ವಾಗತಿಸಿ, ಹಿರಿಯ ಶಿಕ್ಷಕ ಧನ್ಯ ಕುಮಾರ್ ಧನ್ಯವಾದವಿತ್ತ ಈ ಕಾರ್ಯಕ್ರಮವನ್ನು ಶಿಕ್ಷಕ  ಮುಕುಂದ ಚಂದ್ರ ನಿರೂಪಿಸಿದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top