Thu 14 Dec 2017, 9:21PM

ಹೆಚ್ಚಿನ ಸುದ್ದಿಗಳು

ಎಂ. ಆಯಿಶಾ ಕಿಲ್ಲೂರು ಅವರಿಗೆ ಎಕ್ಸಲೆಂಟ್ ಅವಾರ್ಡ್ ಮತ್ತು ನಗದು ಪುರಸ್ಕಾರ

Thursday, August 25th, 2016 | Suddi Belthangady | no responses

telent snamana copyಬೆಳ್ತಂಗಡಿ : ಕಳೆದ ಸಾಲಿನ ದ್ವಿತೀಯ ಪಿಯುಸಿ ಯಲ್ಲಿ ರಾಜ್ಯದ ಟಾಪರ್‌ಗಳಲ್ಲಿ ಒಬ್ಬರಾಗಿರುವ ಮತ್ತು ಸಿ. ಎ ಪ್ರವೇಶಾತಿ ಪರೀಕ್ಷೆಯಲ್ಲಿ ಸಿಪಿಟಿ ಯಲ್ಲಿ ದೇಶಕ್ಕೆ 21ನೇ ಸ್ಥಾನ ಪಡೆದ ಆಯಿಶಾ ಕಿಲ್ಲೂರು ಅವರಿಗೆ ದುಬಾಯಿ ಬಿ. ಸಿ.ಎಫ್ ವತಿಯಿಂದ ಮಂಗಳೂರಿನಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಮಂಗಳೂರು ಮಹಾನಗರ ಪಾಲಿಕೆಯ ಕಮಿಷನರ್ ಮುಹಮ್ಮದ್ ನಝೀರ್ ಅವರು ಎಕ್ಸಲೆಂಟ್ ಅವಾರ್ಡ್ ಮತ್ತು ನಗದನ್ನು ನೀಡಿದರು. ಮಂಗಳೂರು ಶಾಸಕರಾದ ಜೆ. ಆರ್ ಲೋಬೋ, ಬಿ.ಸಿ.ಎಫ್ ಅಧ್ಯಕ್ಷ ಡಾ| ಯೂಸುಫ್ ಮತ್ತು ಪದಾಧಿಕಾರಿಗಳು, ಮಮ್ತಾಝ್ ಅಲಿ ಕೃಷ್ಣಾಪುರ, ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ಅಧ್ಯಕ್ಷ ರಿಯಾಝ್ ಕಣ್ಣೂರು, ರಫೀಕ್ ಮಾಸ್ಟರ್ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಸಂಯುಕ್ತ ಜಮಾತ್ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ದುಆ ಪ್ರಾರ್ಥನೆ ನೆರವೇರಿಸಿದರು. ಆಯಿಶಾ ಕಿಲ್ಲೂರು ಅವರು ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಅಭ್ಯಾಸ ನಿರತರಾಗಿದ್ದಾರೆ ಇವರು ಕಿಲ್ಲೂರು ನಿವಾಸಿ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಕುಂತೂರು ಮತ್ತು ಉಮೈಮಾ ದಂಪತಿ ಪುತ್ರಿಯಾಗಿದ್ದಾರೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top