Sun 17 Dec 2017, 1:11PM

ಹೆಚ್ಚಿನ ಸುದ್ದಿಗಳು

ವಿಶ್ವದ 10 ಅಪಾಯಕಾರಿ ರಾಷ್ಟ್ರಗಳ ಪಟ್ಟಿ

Friday, October 14th, 2016 | Suddi Belthangady | no responses

  ವಿಶ್ವದ 10 ಅಪಾಯಕಾರಿ ರಾಷ್ಟ್ರಗಳ ಪಟ್ಟಿಯನ್ನು ಮಾಡಲಾಗಿದ್ದು, ಐಸಿಸ್ ಉಗ್ರರು ಅಟ್ಟಹಾಸ ಮೆರೆಯುತ್ತಿರುವ ಸಿರಿಯಾ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಸಿರಿಯಾದಲ್ಲಿ ಐಸಿಸ್ ಉಗ್ರರ ಅಟ್ಟಹಾಸಕ್ಕೆ ಇದುವರೆಗೂ ಸಹಸ್ರಾರು ಮಂದಿ ಹತ್ಯೆಯಾಗಿದ್ದರೆಂದು ಹೇಳಲಾಗಿದೆ. ಅಪಾಯಕಾರಿ ರಾಷ್ಟ್ರಗಳ ಪಟ್ಟಿಯಲ್ಲಿ ದಕ್ಷಿಣ ಸೂಡಾನ್ ಎರಡನೇ ಸ್ಥಾನದಲ್ಲಿದ್ದರೆ, ಇರಾಕ್ ಮೂರನೇ ಸ್ಥಾನದಲ್ಲಿದೆ. ತಾಲಿಬಾನಿಗಳ ಕಾಟದಿಂದ ಇನ್ನೂ ಮುಕ್ತಿ ಹೊಂದದ ಅಫ್ಘಾನಿಸ್ತಾನ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಸೊಮಾಲಿಯಾ, ಯೆಮನ್, ಉಕ್ರೇನ್, ಲಿಬಿಯಾ, ಡೆಮಾಕ್ರಡಿಕ್ ರಿಪಬ್ಲಿಕ್ ಆಫ್ ಕಾಂಗೋ ಹಾಗೂ ಹತ್ತನೇ ಸ್ಥಾನದಲ್ಲಿ ಉತ್ತರ ಕೊರಿಯಾ ಇದೆ. ಕಳೆದ ಬಾರಿ9ನೇ ಸ್ಥಾನದಲ್ಲಿದ್ದ ಪಾಕಿಸ್ತಾನ ಈ ಬಾರಿ ಕೊಂಚ ಮೇಲಕ್ಕೇರಿದೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top