Sun 17 Dec 2017, 1:46PM

ಹೆಚ್ಚಿನ ಸುದ್ದಿಗಳು

ಫೆ. 26ರಿಂದ ದಿ| ಶಿಶಿರ್ ಕುಮಾರ್ ಸ್ಮರಣಾರ್ಥ ಅಂತರ್‌ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆ

Thursday, January 12th, 2017 | Suddi Belthangady | no responses

thungappa bangera pressmeet copyಪುಂಜಾಲಕಟ್ಟೆ : ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ, ಜೆ.ಸಿ.ಐ. ಮಡಂತ್ಯಾರು ಇದರ ಸಂಯುಕ್ತ ಆಶ್ರಯದಲ್ಲಿ ಮಾ.5ರಂದು 9ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮತ್ತು ಫೆ.26ರಿಂದ ಮಾ.4ರ ತನಕ ದಿ| ಶಿಶಿರ್ ಕುಮಾರ್ ಪಿ.ಎಸ್. ಇವರ ಸ್ಮರಣಾರ್ಥ ದ.ಕ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಫ್ರೆಂಡ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ತಿಳಿಸಿದ್ದಾರೆ.
ಅವರು ಬಂಟ್ವಾಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. 33ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ 33 ವರ್ಷಗಳಿಂದ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿ, ವಿವಿಧ ಸಾಧಕರಿಗೆ ಸ್ವಸ್ತಿಕ್ ಪುರಸ್ಕಾರ ರಾಜ್ಯ ಪ್ರಶಸ್ತಿ ನೀಡುವ ಉತ್ತಮ ಕಾರ್ಯ ಮಾಡುತ್ತಿದೆ. ಎಂ. ತುಂಗಪ್ಪ ಬಂಗೇರರು ೧೯೮೩ರಲ್ಲಿ ಸಮಾನ ಮನಸ್ಕ ಯುವಕರೊಂದಿಗೆ ಸ್ವಸ್ತಿಕ್ ಕ್ರಿಕೆಟ್ ತಂಡವನ್ನು ಕಟ್ಟಿಕೊಂಡು ಕ್ಲಬ್‌ನ್ನು ಸ್ಥಾಪನೆಗೊಳಿಸಿ ನಿರಂತರ ಕಬಡ್ಡಿ ಪಂದ್ಯಾಟ ಆಯೋಜಿಸುತ್ತಿರುವುದು ಕ್ಲಬ್‌ನ ಹೆಗ್ಗಳಿಕೆ ಎಂದರು.
ಇದರ ಜೊತೆಗೆ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳ ಜೊತೆಗೆ ಸ್ವಸ್ತಿ ಸಿರಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ಸಾಮೂಹಿಕ ವಿವಾಹದೊಂದಿಗೆ ಅದ್ದೂರಿಯಾಗಿ ಆಚರಿಸಿ ನಾಡಿನ ಗಮನ ಸೆಳೆದಿದೆ ಉಚಿತ ಸಾಮೂಹಿಕ ವಿವಾಹಕ್ಕೆ ಸಂಬಂಧಿಸಿದಂತೆ 10 ಜೋಡಿಗಿಂತ ಮೇಲ್ಪಟ್ಟು ಪ.ಜಾತಿಯ ವಧುವರರು ಭಾಗವಹಿಸಿದ್ದಲ್ಲಿ ಸರಕಾರದಿಂದ ತಲಾ ರೂ. 5೦ಸಾವಿರ ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದರು. ನಾಟಕದಲ್ಲಿ ಆಯ್ದ 7 ತಂಡಗಳಿಗೆ ಮಾತ್ರ ಅವಕಾಶವಿದ್ದು, ಪ್ರಥಮ ರೂ.30ಸಾವಿರ, ದ್ವೀತಿಯ ರೂ.20ಸಾವಿರ, ತೃತೀಯ ಮತ್ತು ಚತುರ್ಥ ತಲಾ ರೂ.10ಸಾವಿರ ಬಹುಮಾನ ಜೊತೆಗೆ ವೈಯಕ್ತಿಕ ಬಹುಮಾನಗಳಿವೆ. ಸ್ಪರ್ಧಾ ತಂಡಕ್ಕೆ ರೂ.10 ಸಾವಿರ ಭತ್ಯೆ ನೀಡಲಾಗುವುದು ಹೆಚ್ಚಿನ ಮಾಹಿತಿಗೆ 9901098038ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಲಬ್‌ನ ಅಧ್ಯಕ್ಷ ಪ್ರಶಾಂತ್ ಎಂ., ಕಾರ್ಯದರ್ಶಿ ಜಯರಾಜ್, ಹೆಚ್.ಕೆ. ನಯನಾಡು, ಪ್ರಭಾಕರ ಪಿ.ಎಂ, ರಾಜೇಶ್ ಪುಳಿಮಜಲು ಉಪಸ್ಥಿತರಿದ್ದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top