Sun 17 Dec 2017, 8:22AM

ಹೆಚ್ಚಿನ ಸುದ್ದಿಗಳು

ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ ಯಲಹಂಕದ 20ನೇ ವಾರ್ಷಿಕೋತ್ಸವ ಸಮಾರಂಭ

Thursday, January 12th, 2017 | Suddi Belthangady | no responses

bdy varshikothsava copyಬೆಳ್ತಂಗಡಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರದ ಸಹಯೋಗದೊಂದಿಗೆ ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ ಯಲಹಂಕದ 20ನೇ ವಾರ್ಷಿಕೋತ್ಸವ ಜ.08ರಂದು ಬೆಂಗಳೂರು ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಸಭಾಂಗಣದ ಯಲಹಂಕದಲ್ಲಿ ನಡೆಯಿತು.
ಈ ಕಾರ‍್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರು ಉದ್ಯಮಿ ಗೋವಿಂದೂರು ವೆಂಕಪ್ಪ ಹೆಗ್ಡೆ ಉದ್ಘಾಟಿಸಿ, ದಕ್ಷಿಣ ಕನ್ನಡದವರು ಹೃದಯ ಶ್ರೀಮಂತಿಕೆ ಉಳ್ಳವರು. ಬುದ್ದಿ ಜೀವಿಗಳು. 20 ವರ್ಷದಿಂದ ಈ ಸಂಘವನ್ನು ಕಟ್ಟಿ ಜನರನ್ನು ಒಗ್ಗೂಟಿಸಿದ್ದೀರಿ. ಈ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರು ಸಾಹಿತಿಗಳಾದ ಬೊಳುವಾರು ಮಹಮ್ಮದ್ ಕುಂಞಿ, ಕನ್ನಡದ ಹಿರಿಯ ಚಲನಚಿತ್ರ ನಟಿ ಶ್ರೀಮತಿ ಸತ್ಯಭಾಮ ಆರೂರು, ರಾಜು ಬಲ್ಲಾಲ್ ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ದಯಾನಂದ ಕೊಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಚಿತ್ರಕಲಾ ರಘುನಾಥ ರೈ, ಕೋಶಾಧಿಕಾರಿಯಾದ ಅಲಂಗಾರು ಜಯರಾಮ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷರುಗಳಾದ ಕೆ.ವಿಠಲ ಶೆಟ್ಟಿ, ಆನಂದ ಶೆಟ್ಟಿ, ಕೆ.ಲಕ್ಷ್ಮೀ ನಾರಾಯಣ ಆಳ್ವ, ಪರಿಕಾ ಭಾಸ್ಕರ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ಕನ್ನಡದ ಹಿರಿಯ ಚಲನಚಿತ್ರ ನಟಿ ಸತ್ಯಭಾಮ ಇವರನ್ನು ಸಂಘದಿಂದ ಸನ್ಮಾನಿಸಲಾಯಿತು. ಚಿತ್ರಕಲಾ ರಘುನಾಥ ರೈ ವರದಿ ಮಂಡಿಸಿದರು. ರಾಮಚಂದ್ರ ಮಿಚಾರು ಕಾರ‍್ಯಕ್ರಮ ನಿರೂಪಿಸಿ, ಸಂಘದ ಉಪಾಧ್ಯಕ್ಷರಾದ ಬಾಬು ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿಯಾದ ಚಿತ್ರಕಲಾ, ರಘುನಾಥ ರೈ ಧನ್ಯವಾದವಿತ್ತರು.
ನಂತರ ಶ್ರೀನಿವಾಸ ನಿರ್ದೇಶನದಲ್ಲಿ ಸಮಿತಿ ಸದಸ್ಯರಿಂದ ಯಕ್ಷಗಾನ ನಡೆಯಿತು. ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top