Thu 14 Dec 2017, 12:37AM

ಹೆಚ್ಚಿನ ಸುದ್ದಿಗಳು

ಪರೀಕ್ಷೆಯಲ್ಲಿ ಕಾಪಿ ಹೊಡೆದ್ರೆ 3 ವರ್ಷ ಡಿಬಾರ್

Friday, February 17th, 2017 | Suddi Belthangady | no responses

  ಪ್ರಶ್ನೆಪತ್ರಿಕೆ ಸೋರಿಕೆ ಶಿಕ್ಷೆ ಹಾಗೂ ಪರೀಕ್ಷಾ ವೇಳೆ ನಕಲು ಶಿಕ್ಷೆ ವಿಚಾರಗಳಿಗೆ ಸಂಬಂಧಪಟ್ಟ ಮಂಡಿಸಲಾದ ನೂತನ ವಿಧೇಯಕವನ್ನು ವಿಧಾನಸಭೆ ಅನುಮೋದನೆ ನೀಡಿದೆ. ನೂತನ ಮಸೂದೆಯಂತೆ, ಪರೀಕ್ಷೆಯ ವೇಳೆ ನಕಲು ಮಾಡುವ ವಿದ್ಯಾರ್ಥಿಯನ್ನು ಮೂರು ವರ್ಷ ಡಿಬಾರ್ ಮಾಡುವ ಕಠಿಣ ಕ್ರಮವನ್ನೂ ಅಳವಡಿಸಲಾಗಿದೆ. ಇನ್ನು ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ಕಾಲೇಜಿನ ಮಾನ್ಯತೆಯನ್ನು ಮೂರು ವರ್ಷ ಡಿಬಾರ್ ಮಾಡುವ ಕಾಲೇಜಿನ ಮಾನ್ಯತೆಯನ್ನು ಮೂರು ವರ್ಷ ರದ್ದುಗೊಳಿಸಲಾಗುತ್ತದೆ. ಇತ್ತೀಚೆಗೆ, ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಹಿಂದೆಂದೂ ಕಾಣದ ಮಟ್ಟಕ್ಕೆ ಸೋರಿಕೆಯಾಗಿ ಇಡೀ ಸರ್ಕಾರವೇ ಸಾರ್ವಜನಿಕರ ಮುಂದೆ ತಲೆತಗ್ಗಿಸುವಂತಾಗಿತ್ತು. ಅತ್ಯುತ್ತಮ ಶೈಕ್ಷಣಿಕ ಪರಿಸರ ಹೊಂದಿರುವ ಕಾರಣಕ್ಕಾಗಿ ರಾಷ್ಟ್ರಮಟ್ಟದಲ್ಲಿ ಪ್ರತಿಷ್ಠೆ ಹೊಂದಿರುವ ಕರ್ನಾಟಕಕ್ಕೆ ಇದರಿಂದ ಮಸಿ ಬಳಿದಂತಾಗಿತ್ತು. ಈ ಹಿನ್ನೆಲೆಯಲ್ಲಿ, ಇಂಥ ಅಕ್ರಮಗಳನ್ನು ನಿಲ್ಲಿಸಲು ರಾಜ್ಯ ಸರ್ಕಾರ ನೂತನ ಮಸೂದೆಯನ್ನು ಮಂಡಿಸಲಾಗಿದೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top