Sat 16 Dec 2017, 5:28AM

ಹೆಚ್ಚಿನ ಸುದ್ದಿಗಳು

ವಿಶ್ವದ ಅತಿದೊಡ್ಡ ಆನ್ಲೈನ್ ಪರೀಕ್ಷೆ

Friday, February 17th, 2017 | Suddi Belthangady | no responses

  ಭಾರತೀಯ ರೈಲ್ವೇ 18ಸಾವಿರ ಖಾಲಿ ಹುದ್ದೆಗಳಿಗೆ ಆನ್ಲೈನ್ ಪರೀಕ್ಷೆ ಆಯೋಜಿಸಿತ್ತು. ಇದು ಜಗತ್ತಿನ ಪ್ರಥಮ ಅತಿದೊಡ್ಡ ಆನ್ಲೈನ್ ಪರೀಕ್ಷೆಯಾಗಿತ್ತು. ಪರೀಕ್ಷಾ ಅವ್ಯವಹಾರ ತಡೆಗಟ್ಟುವ ನಿಟ್ಟಿನಲ್ಲಿ ರೈಲ್ವೇ ಇಲಾಖೆ ಕಳೆದ ತಿಂಗಳ 17ರಿಂದ 19ರವರೆಗೆ ಆನ್ಲೈನ್ ಪರೀಕ್ಷೆ ನಡೆಸಿತ್ತು. ಪ್ರಥಮ ಹಂತದಲ್ಲಿ ಉತ್ತೀರ್ಣರಾಗಿದ್ದ 2.73 ಲಕ್ಷ ಅಭ್ಯರ್ಥಿಗಳಿಗೆ ಆನ್ಲೈನ್ ಪ್ರವೇಶ ಪರೀಕ್ಷೆ ನಡೆಸಿದ್ದೆವು ಎಂದು ರೈಲ್ವೇ ಸಚಿವಾಲಯ ತಿಳಿಸಿದೆ. ರೈಲ್ವೇ ನೇಮಕಾತಿ ಪ್ರಾಧಿಕಾರವು ಗ್ರೂಪ್-ಸಿ ಹುದ್ದೆಗಳಿಗಾಗಿ ಪರೀಕ್ಷೆ ನಡೆಸಿತ್ತು. ಈವರೆಗೂ ರೈಲ್ವೇ ಪರೀಕ್ಷೆಗಳನ್ನು ಕೈಬರಹದಲ್ಲಿ ನಡೆಸುತ್ತಿದ್ದ ಇಲಾಖೆ ಇದೀಗ ಡಿಜಿಟಲ್‌ಮಯವಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆ, ಪಾರದರ್ಶಕತೆ ಕಾಪಾಡುವುದು ಮತ್ತು ಇನ್ನಿತರ ಅವ್ಯವಹಾರಗಳಿಗೆ ಕಡಿವಾಣ ಹಾಕಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹಿರಿಯ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top