Tue 12 Dec 2017, 8:24PM

ಹೆಚ್ಚಿನ ಸುದ್ದಿಗಳು

ಶಿವರಾತ್ರಿ ಅಚರಣೆಯಿಂದ ಅಂತರಂಗ ದರ್ಶನವಾಗುತ್ತದೆ, ಜೀವನ ಪಾವನವಾಗುತ್ತದೆ.

Saturday, February 25th, 2017 | Suddi Belthangady | no responses

06 copy 01 copy 02 copy 03 copy 04 copy 05 copy

ಧರ್ಮಸ್ಥಳದಲ್ಲಿ ಶುಕ್ರವಾರ ಶಿವರಾತ್ರಿ ಪ್ರಯುಕ್ತ ನಡೆಯುವ ಆಹೋ ರಾತ್ರಿ ಶಿವ ಪಂಚಾಕ್ಷರಿ ಪಠಣವನ್ನು ಧರ್ಮಸ್ಥಳದ ಧಮರ್ಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.
ಉಜಿರೆ: ನಮ್ಮ ದೇಹದಲ್ಲಿ ಆತ್ಮ ಇದ್ದರೆ ಶಿವ, ಇಲ್ಲದಿದ್ದರೆ ಅದು ಶವ. ನಿರಾಕಾರವಾದ ಪರಶಿವನ ಮಹಿಮೆ ಅಪಾರವಾಗಿದ್ದು ಪ್ರಾರ್ಥನೆ, ಧ್ಯಾನ, ವ್ರತೋಪಾಸನೆಯಿಂದ ಆತ್ಮ ಧ್ಯಾನದಿಂದ ಶಿವ ದರ್ಶನವಾಗುತ್ತದೆ. ಶಿವ ಕಾರುಣ್ಯದ ಫಲ ಅನುಭವಿಸಬಹುದು. ಶಿವ ಕ್ಷೇತ್ರದಲ್ಲಿ ಮೂಲ ಸಾನ್ನಿಧ್ಯವಿದೆ. ವಿಶೇಷ ಶಕ್ತಿ ಇದೆ. ಶಿವ ಕ್ಷೇತ್ರ ದರ್ಶನದಿಂದ ದೇಹ, ಮನಸ್ಸು ಪವಿತ್ರವಾಗುತ್ತದೆ ಎಂದು ಧರ್ಮಸ್ಥಳದ ಧಮರ್ಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶಿವರಾತ್ರಿ ಪ್ರಯುಕ್ತ ಅಹೋರಾತ್ರಿ ನಡೆಯುವ ಶಿವ ಪಂಚಾಕ್ಷರಿ ಪಠಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಕ್ತರ ಪಾಲಿಗೆ ಶಿವನು ಪರಮೇಶ್ವರನಾಗಿರುತ್ತಾನೆ. ಜೀವನ ಸಂಬಂಧವಾದ ದುಃಖವನ್ನು, ಕಷ್ಟಗಳನ್ನು ದೂರ ಮಾಡುವವನೇ ರುದ್ರ. ದೃಢ ಸಂಕಲ್ಪದೊಂದಿಗೆ ಶ್ರದ್ಧಾ, ಭಕ್ತಿಯಿಂದ ದೇವರ ಧ್ಯಾನ, ಆರಾಧನೆ ಮಾಡಿದರೆ ನಮಗೆ ಅಂತರಂಗ ದರ್ಶನವಾಗುತ್ತದೆ. ವೇದ ಪ್ರಿಯನೂ, ನಾದಪ್ರಿಯನೂ ಆದ ಶಿವನು ಭಕ್ತ ಪ್ರಿಯನಾಗಿರುತ್ತಾನೆ. ಶಿವ ರಾತ್ರಿಯಂದು ಪರಿಶುಧ್ಧ ಭಾವ ಮತ್ತು ಭಕ್ತಿಯಿಂದ ನಮ್ಮನ್ನು ನಾವು ಶುದ್ಧೀಕರಿಸಿಕೊಳ್ಳಬಹುದು. ಬಾಹ್ಯ ಸೌಂದರ್ಯದ ಜೊತೆಗೆ ಅಂತರಂಗ ಸೌಂದರ್ಯಕ್ಕೂ ಮಹತ್ವ ನೀಡಿ ದೇವರು ಕೊಟ್ಟ ಅಮೂಲ್ಯ ಜೀವನವನ್ನು ಪಾವನವಾಗಿ ಮಾಡಬೇಕು ಎಂದು ಅವರು ಹೇಳಿದರು.
ಶ್ರದ್ಧೆಯಿಂದ ಶ್ರಮವಿಲ್ಲ. ನಂಬಿಕೆಯಿಂದ ಸೋಲಿಲ್ಲ. ಭಕ್ತಿಯಿಂದ ಭಯವಿಲ್ಲ ಎಂದು ಹೆಗ್ಗಡೆಯವರು ಕಿವಿಮಾತು ಹೇಳಿದರು.
ಪಾದಯಾತ್ರಿಗಳು ಶಿಸ್ತಿನಿಂದ ಧ್ಯಾನ ಮಾಡುತ್ತಾ ಬರಬೇಕು ಎಂದು ಅವರು ಸಲಹೆ ನೀಡಿದರು.
ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಸುಪ್ರಿಯಾ ಹಷರ್ೆಂದ್ರ ಕುಮಾರ್, ಡಿ. ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್ ಉಪಸ್ಥಿತರಿದ್ದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top