Mon 20 Nov 2017, 12:14PM

ಹೆಚ್ಚಿನ ಸುದ್ದಿಗಳು

ಉಜಿರೆಯಲ್ಲಿ ಆ.14ರಂದು ಸ್ವಚ್ಛತಾ ರ್‍ಯಾಲಿ(Rally)

Friday, August 11th, 2017 | Suddi Belthangady | no responses

ಕೇಂದ್ರ ಸರಕಾರದ ಸ್ವಚ್ಛ ಪಾಕ್ಷಿಕ ಯೋಜನೆಯ ನಿರ್ದೇಶನದ ಅನ್ವಯ ಎಸ್.ಡಿ.ಎಮ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಆರಂಭಿಸಿದ್ದ ವಿಶೇಷ ಸ್ವಚ್ಛತಾ ಪಾಕ್ಷಿಕ ಅಭಿಯಾನದ ಭಾಗವಾಗಿ ಆಗಸ್ಟ್ 14ರಂದು ಉಜಿರೆಯಲ್ಲಿ ಬೃಹತ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಎಸ್‌ಡಿಎಂ ಕಾಲೇಜು ಸ್ವಚ್ಛತೆಗೆ ಸಂಬಂಧಿಸಿದಂತೆ ಮಹತ್ವದ ಸಂದೇಶ ಸಾರಲಿದೆ.
ಆ. 1 ರಂದು ಆರಂಭಗೊಂಡಿದ್ದ ಈ ಅಭಿಯಾನ 15ರಂದು ಸಮಾರೋಪಗೊಳ್ಳಲಿದೆ. ಇದಕ್ಕೂ ಮುಂಚೆ ಮುನ್ನಾದಿನ ೧೪ರಂದು ಸ್ವಚ್ಛತೆಯ ಪ್ರಜ್ಞೆಯನ್ನು ಪ್ರಚುರಪಡಿಸುವ ಉದ್ದೇಶದ ಜಾಗೃತಿ ಮೆರವಣಿಗೆ ನಡೆಯಲಿದೆ. ಪದವಿ ಕಾಲೇಜಿನಿಂದ ಚಾರ್ಮಾಡಿ ಮತ್ತು ಬೆಳ್ತಂಗಡಿ ರಸ್ತೆಗಳ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಈ ಮೆರವಣಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ಸ್ವಚ್ಛತೆಯ ಮಹತ್ವದ ಕುರಿತ ಉದ್ಘೋಷಗಳು ಮೊಳಗಲಿವೆ.
ಎಸ್‌ಡಿಎಂ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ 1500ಕ್ಕೂ ಹೆಚ್ಚಿನ ಜನರು ಬೃಹತ್ ರ್‍ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಭಿಯಾನದಡಿ ಎಸ್.ಡಿ.ಎಂ ಪದವಿ ಕಾಲೇಜಿನ ಆವರಣ ಮತ್ತು ಉಜಿರೆಯ ಸುತ್ತಮುತ್ತ ಎನ್‌ಎಸ್‌ಎಸ್ ಸ್ವಯಂಸೇವಕರು ಸ್ವಚ್ಛತೆಯ ಕಾರ್ಯನಿರ್ವಹಿಸಿದ್ದಾರೆ. ಈಗಾಗಲೇ ಉಜಿರೆಯ 318 ಮನೆಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಕಸ ವಿಂಗಡಣೆಯ ಕ್ರಮಗಳ ಬಗ್ಗೆ ಕುಟುಂಬಗಳ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.
ಸ್ವಚ್ಚತೆಯ ಅರಿವು ಮೂಡಿಸುವಲ್ಲಿ ಈ ರ್‍ಯಾಲಿ ಮಹತ್ವದ ಪಾತ್ರ ನಿರ್ವಹಿಸಲಿದ್ದು, ಇದರಲ್ಲಿ ಪಾಲ್ಗೊಂಡು ಸ್ವಚ್ಛತೆಯ ಪ್ರಜ್ಞೆ ಮೂಡಿಸಲು ಬೆಂಬಲಿಸಬೇಕು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top