Mon 20 Nov 2017, 9:08PM

ಹೆಚ್ಚಿನ ಸುದ್ದಿಗಳು

ಆಯಿಷಾ, ಐ.ಪಿ.ಸಿ.ಸಿ. ತೇರ್ಗಡೆ

Monday, August 21st, 2017 | Suddi Belthangady | no responses

ayishaಮೂಡಬಿದ್ರೆ ಆಳ್ವಾಸ್ ಕಾಲೇಜಿನ ಸಿ.ಎ ವಿಧ್ಯಾರ್ಥಿನಿ ಯಂ ಆಯಿಷಾ ಕಿಲ್ಲೂರುರವರು, ಸಿಪಿಟಿ ನಂತರದ ದೇಶಾದ್ಯಂತ ನಡೆದ 2017ರ ಐ.ಪಿ.ಸಿ.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದು ಆಳ್ವಾಸ್ ಕಾಲೇಜಿನ ಪ್ರಥಮ ಸ್ಥಾನವನ್ನು ತನ್ನದಾಗಿಸಿ ಕೊಂಡಿದ್ದಾರೆ. 2016ರ ಸಿ.ಪಿ.ಟಿ ಪರೀಕ್ಷೆಯಲ್ಲಿ ದೇಶಕ್ಕೆ 21ನೇ ರ್‍ಯಾಂಕ್ ಪಡೆದ ಆಯಿಷಾ ಎಸ್ಸ್‌ಸ್ಸ್‌ಲ್ಸಿಯಲ್ಲಿ ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದಿದ್ದರು. ಪಿಯುಸಿಯಲ್ಲಿ ರಾಜ್ಯದ 10 ಟಾಪರ್‌ಗಳಲ್ಲಿ ಒಬ್ಬರಾಗಿದ್ದರು. ಬೆಳ್ತಂಗಡಿ ತಾಲೂಕಿನ ಕಿಲ್ಲೂರು ನಿವಾಸಿ ಹಾಜಿ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಕುಂತೂರು ಹಾಗೂ ಉಮೈಮಾ ದಂಪತಿಗಳ ಸುಪುತ್ರಿಯಾದ ಆಯಿಷಾರವರು ಇದೀಗ ಮಂಗಳೂರಿನಲ್ಲಿ ಸಿ.ಎ ತರಬೇತಿ ಪಡೆಯುತ್ತಿದ್ದಾರೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top