Thu 14 Dec 2017, 3:43PM

ಹೆಚ್ಚಿನ ಸುದ್ದಿಗಳು

ಡಿ.ಸಿ. ಮನ್ನಾ ಭೂಮಿ ಹಂಚಿಕೆಗೆ ಶೀಘ್ರವೇ ಅಗತ್ಯ ಕ್ರಮದ ಭರವಸೆ ವ್ಯಕ್ತವಾಗಿದೆ: ಶೇಖರ್ ಕುಕ್ಕೇಡಿ

Thursday, August 24th, 2017 | Suddi Belthangady | no responses

d c manna pressmeeetಬೆಳ್ತಂಗಡಿ: ದ.ಕ. ಉಡುಪಿ ಜಿಲ್ಲೆಯಲ್ಲಿ ಶೋಷಿತ ಸಮುದಾಯದ ದಲಿತರಿಗೆ ಮೀಸಲಿರಿಸಲಾಗಿರುವ ಡಿ.ಸಿ. ಮನ್ನಾ ಭೂಮಿ ಹಂಚಿಕೆ ವಿಚಾರದಲ್ಲಿ ರಾಜ್ಯ ಸರಕಾರ ಸ್ಪಷ್ಟವಾದ ನಿಲುವನ್ನು ತೆಗೆದುಕೊಂಡಿದ್ದು ಸರಕಾರದ ವಶದಲ್ಲಿರುವ ಡಿ.ಸಿ ಮನ್ನಾ ಭೂಮಿಯನ್ನು ಅರ್ಹ ಫಲಾನುಭವಿಗಳಿಗೆ ಹಂಚಲು ಅಗತ್ಯವಿರುವ ಕಾರ್ಯಪಡೆಯನ್ನು ಆಯಾ ತಹಶಿಲ್ದಾರರ ಮೂಲಕ ರಚಿಸಲು ತೀರ್ಮಾನಿಸಲಾಗಿದೆ ಎಂದು ಕಾಂಗ್ರೆಸ್ ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ, ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ ಮಂಗಳೂರಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ಜಿಲ್ಲೆಗೆ ಭೇಟಿ ನೀಡಿ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ಸಮ್ಮುಖ ಸಭೆ ನಡೆಸಿ ನಿರ್ಧಾರ ಪ್ರಕಟಿಸಿದ್ದಾರೆ. ಡಿ.ಸಿ. ಮನ್ನಾ ಭೂಮಿ ಪಡೆಯಲು ಇದ್ದ ೮ ಸಾವಿರ ಆದಾಯ ಮಿತಿಯನ್ನು ೫೦ ಸಾವಿರಕ್ಕೆ ಹೆಚ್ಚಿಸುವ ನಿರ್ಧಾರಕ್ಕೂ ಬರಲಾಗಿದ್ದು 50 ಸೆಂಟ್ಸ್ ನಿಂದ 1 ಎಕ್ರೆಗೆ ಏರಿಸುವುದಾಗಿಯೂ ಸಚಿವರು ಭರವಸೆ ನೀಡಿದ್ದಾರೆ. ಇದರಿಂದಾಗಿ 2 ದಶಕದಿಂದ ನಡೆಯುತ್ತಿದ್ದ ಹೋರಾಟಕ್ಕೆ ತಾತ್ವಿಕ ಅಂತ್ಯ ಬರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು. ಅತಿಕ್ರಮಣ ಜಮೀನಿಗೆ ಪರ್‍ಯಾಯವಾಗಿ ಜಮೀನನ್ನು ಕಂಡುಕೊಳ್ಳಲು ಕಾರ್‍ಯಪಡೆ ಮುಂದಿನ ಕ್ರಮ ಕೈಗೊಳ್ಳಲಿದೆ. ಒಂದೆರಡು ವಾರಗಳಲ್ಲಿ ಈ ಕಾರ್ಯಗಳು ಆಗಲಿದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ರಘುರಾಜ್ ಕದ್ರಿ, ದಿನೇಶ್ ಪಿ.ಎಸ್, ಪ್ರಭಾಕರ ಶಾಂತಿಕೋಡಿ, ಪ್ರೇಮನಾಥ ಪಿ.ಬಿ, ಮಿಥುನ್ ಕುಮಾರ್ ಇವರು ಉಪಸ್ಥಿತರಿದ್ದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top