Tue 17 Oct 2017, 4:52PM

ಹೆಚ್ಚಿನ ಸುದ್ದಿಗಳು

ಬೆಳ್ತಂಗಡಿಯಲ್ಲಿ ಸಂಭ್ರಮದ ತೆನೆಹಬ್ಬ

Friday, September 8th, 2017 | webmanager | no responses

thene habba1

thene habba2

thene habba3

thene habba4

thene habba

ಬೆಳ್ತಂಗಡಿ: ಹೊಲಿ ರಿಡೀಮರ್ ಚರ್ಚ್ ಬೆಳ್ತಂಗಡಿ ಇದರ ವತಿಯಿಂದ ಸೆ. 8ರಂದು ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಕನ್ಯಾ ಮರಿಯಮ್ಮ ಹುಟ್ಟುಹಬ್ಬ ಹಾಗೂ ತೆನೆ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಮಂಗಳೂರು ಚರ್ಚ್‌ನ ಧರ್ಮಗುರು ರೆ| ಫಾ| ಅನಿಲ್ ಡಿ’ಸೋಜ ಅವರು ಆಶೀರ್ವಚನ ನೀಡಿ, ಕನ್ಯಾ ಮರಿಯಮ್ಮ ಹಬ್ಬದ ಆಚರಣೆಯ ಬಗ್ಗೆ ಸಂದೇಶ ನೀಡಿದರು. ಬೆಳ್ತಂಗಡಿ ಚರ್ಚ್‌ನ ಧರ್ಮಗುರು ರೆ| ಫಾ| ಬೊನವೆಂಚರ್ ನಝ್ರೆತ್ ಹಾಗೂ ಸಹಾಯಕ ಧರ್ಮಗುರು ರೆ| ಫಾ| ಮೆಲ್ವಿನ್ ಡಿಸೋಜ, ಪ್ರಾಂಶುಪಾಲ ಅನಿಲ್ ಡಿ’ಸೋಜ ಉಪಸ್ಥಿತರಿದ್ದರು.
ಜೋಸೆಫ್ ಮತ್ತು ಶ್ರೀಮತಿ ಲಿಡ್ವಿನ್ ಟೆಲ್ಲಿಸ್ ದಂಪತಿಗಳು ಕನ್ಯಾ ಮರಿಯಮ್ಮರಿಗೆ ವಿಶೇಷ ಚಿನ್ನದ ಕೀರಿಟವನ್ನು ಸೇವೆಯಾಗಿ ಸಮರ್ಪಸಿದರು. ಆಕರ್ಷಕ ಮೆರವಣಿಗೆ ಮೂಲಕ ತೆನೆಯನ್ನು ಚರ್ಚ್‌ಗೆ ಕೊಂಡೊಯ್ದು ಬಲಿ ಪೂಜೆ ನಂತರ ಎಲ್ಲರಿಗೂ ವಿತರಿಸಲಾಯಿತು. ಚರ್ಚ್‌ನ ವ್ಯಾಪ್ತಿಯ ನಾಗರಿಕರು, ವಾಹನ ಚಾಲಕ ಮಾಲಕರು ಭಾಗವಹಿಸಿದ್ದರು.

Leave a Reply


ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

September 2017
M T W T F S S
« Aug   Oct »
 123
45678910
11121314151617
18192021222324
252627282930  

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top