Sat 16 Dec 2017, 4:36PM

ಹೆಚ್ಚಿನ ಸುದ್ದಿಗಳು

ಭಜನೆಯಿಂದ ಆಧ್ಯಾತ್ಮಿಕ ಚೈತನ್ಯ ಜಾಗೃತಿ : ಸ್ವಾಮೀಜಿ

Thursday, September 14th, 2017 | Suddi Belthangady | no responses

Bhajana kammata udgataneಧರ್ಮಸ್ಥಳ: ಜೀವನವನ್ನು ಪರಿಶುದ್ಧಗೊಳಿಸಲು ಭಕ್ತಿ ಮಾರ್ಗ ಮುಖ್ಯ, ಭಜನೆಯನ್ನು ಹೃದಯ ತುಂಬಿ ಹಾಡಬೇಕು, ಭಜನೆಗೆ ಭಕ್ತಿ ಮಾರ್ಗವೇ ಶ್ರೇಷ್ಠವಾಗಿದ್ದು ಪರಿಶುದ್ಧ ಭಾವನೆಯಿಂದ ಭಜನೆ ಮಾಡಿದರೆ ಆಧ್ಯಾತ್ಮಿಕ ಚೈತನ್ಯ ಜಾಗೃತಿಯಾಗಿ ಆತ್ಮೋನ್ನತಿ ಹೊಂದ ಬಹುದು ಎಂದು ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಶ್ರೀ ಕ್ಷೇತ್ರ ಧರ್ಮಸ್ಥಳ ಇದರ ವತಿಯಿಂದ 19ನೇ ವರ್ಷದ ಭಜನಾ ತರಬೇತಿ ಕಮ್ಮಟ ಸೆ.11ರಂದು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಆರಂಭಗೊಂಡಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯರವರು ವಿಜ್ಞಾನ ಮತ್ತು ತಂತ್ರಜ್ಞಾನ ಬಾಹ್ಯದ ಬೆಳವಣಿಗೆಗೆ ಬೇಕು. ಆದರೆ ಅಂತರಂಗದ ಬೆಳವಣಿಗೆಗೆ, ಸುಸಂಸ್ಕೃತ ನಾಗರಿಕ ಸಮಾಜ ನಿರ್ಮಾಣಕ್ಕೆ ದೇವರ ಪೂಜೆ, ಭಜನೆ ಮುಖ್ಯ, ಭಜನೆಯಿಂದ ದ್ವೇಷ, ಕ್ಲೇಶಗಳು ದೂರವಾಗಿ, ಅಂತರಂಗ ಪರಿಶುದ್ಧವಾಗಿ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಆತ್ಮ ತೃಪ್ತಿಯೊಂದಿಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಎಂದು ಅವರು ಅಭಿಪ್ರಾಯಪಟ್ಟರು.
ಸದೃಢ ಸಮಾಜ ನಿರ್ಮಾಣ : ಮಾಣಿಲ ಶ್ರೀ
ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಗ್ರಾಮೀಣ ಪ್ರದೇಶದ ಜನರಲ್ಲಿ ನಾಯಕತ್ವದ ಗುಣ ಬೆಳೆಸುವುದು ಮತ್ತು ಐಕ್ಯಮತ್ಯ ನಿರ್ಮಾಣ ಭಜನಾ ಕಮ್ಮಟದ ಮುಖ್ಯ ಉದ್ದೇಶವಾಗಿದೆ. ಭಜನೆಯಿಂದ ಭಾವ, ಕರ್ಮ, ಮನ ಶುದ್ಧಿಯಾಗಿ ಮಾನವೀಯ ಮೌಲ್ಯಗಳು ಉದ್ದೀಪನ ಗೊಂಡು, ಪ್ರೀತಿ-
ವಿಶ್ವಾಸದ ಸಾಮರಸ್ಯದ ಬದುಕಿನೊಂದಿಗೆ ದುಶ್ಚಟ ಮುಕ್ತ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ಉಪಾಧ್ಯಕ್ಷೆ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು ಮಾತನಾಡಿ ರಾಗ ತಾಳದಿಂದ ಕೂಡಿದ ಶ್ರದ್ಧಾ ಭಕ್ತಿಯ ಭಜನೆ ದೇವರಿಗೆ ಪ್ರಿಯವಾಗುತ್ತದೆ. ನಮ್ಮ ದೈನಂದಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುವುದೇ ದೇವರ ಪೂಜೆ ಆಗಿದೆ. ಸಿಕ್ಕಿದ ಅವಕಾಶದ ಸದುಪಯೋಗ ಮಾಡಿ ಸಾಧ್ಯವಾದಷ್ಟು ಪರೋಪಕಾರ ಮಾಡಬೇಕು. ಭಜನೆಯ ಸತ್ಸಂಗದಿಂದ ನಮ್ಮ ಅಂತರಂಗ ಪರಿಶುದ್ಧವಾಗುತ್ತದೆ. ಭಜನೆಯ ಮೂಲಕ ಧರ್ಮದ ಮರ್ಮವನ್ನು ಸರಳವಾಗಿ ಗ್ರಹಿಸಬಹುದು ಎಂದರು.
ನಾಯಕತ್ವ ಬೆಳೆಯಬೇಕು : ಡಾ. ಹೆಗ್ಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಜನೆ ಭಗವಂತನ ಅನುಗ್ರಹ ಪ್ರಾಪ್ತಿಗೆ ಸರಳ ಮಾರ್ಗವಾಗಿದೆ. ಭಜನೆಯ ಮೂಲಕ ಸತ್ಯ, ಸದಾಚಾರಗಳೊಂದಿಗೆ ಸಂಸ್ಕಾರಯುತ ಜೀವನ ನಡೆಸಬೇಕು. ಭಜನಾ ಮಂಡಳಿಗಳ ಮೂಲಕ ಊರಿನಲ್ಲಿ ಸಾಮರಸ್ಯ, ಸಂಘಟನೆ ಮತ್ತು ನಾಯಕತ್ವ ಬೆಳೆಯಬೇಕು ಎಂದು ನುಡಿದರು. ಜಾತಿ ಮತ ಬೇಧವಿಲ್ಲದೆ ಎಲ್ಲರೂ ಪ್ರೀತಿ-ವಿಶ್ವಾಸದಿಂದ ಭಜನಾ ಮಂದಿರದಲ್ಲಿ ಸೇರಿ ಭಜನೆ ಮಾಡಿ ತನ್ಮೂಲಕ ಗ್ರಾಮದ ಸ್ವಾಸ್ಥ್ಯ ಕಾಪಾಡುವುದೇ ಭಜನಾ ಕಮ್ಮಟದ ಉದ್ದೇಶ ಎಂದು ತಿಳಿಸಿದರು. ಭಜನಾ ಕಮ್ಮಟಗಳ ಯಶೋದೀಪ್ತಿಯನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಭಜನಾ ಪರಿಷತ್‌ನ ಉಪಾಧ್ಯಕ್ಷ ಡಿ. ಹರ್ಷೇಂದ್ರ ಕುಮಾರ್, ಭಜನಾ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ ಉಪಸ್ಥಿತರಿದ್ದರು. ಸುಮಂಗಲಾ ಮತ್ತು ತಂಡದವರ ಪ್ರಾರ್ಥನೆ ಬಳಿಕ ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿ, ಕಾರ್ಯದರ್ಶಿ ಮಮತಾ ರಾವ್ ಧನ್ಯವಾದವಿತ್ತರು. ಶ್ರೀನಿವಾಸರಾವ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top