Sun 17 Dec 2017, 11:35AM

ಹೆಚ್ಚಿನ ಸುದ್ದಿಗಳು

ಸರಣಿ ಶಿವ ಪೂಜಾ ಅಭಿಯಾನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಲಿ : ಸ್ವಾಮೀಜಿ

Thursday, September 28th, 2017 | Suddi Belthangady | no responses

uruvalu shiva pooja samapanaಬೆಳ್ತಂಗಡಿ: ವಿವಿಧ ಮಾಧ್ಯಮಗಳಿಂದಾಗಿ ಪಾಶ್ಚಾತ್ಯ ನಾಗರೀಕತೆ ನಮ್ಮನ್ನು ಆವರಿಸುತ್ತಿರುವ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿಯ ಪರಂಪರಾಗತ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಧಾರೆಯೆರೆಯುವ ಕಾರ್ಯ ನಿರಂತರ ನಡೆಯಬೇಕಾಗಿದೆ ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಉರುವಾಲು ಸನಿಹದ ಬನಾರಿ ಮನೆಯಲ್ಲಿ ನಡೆದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಸುಳ್ಯ ಇದರ ವೇದ-ಯೋಗ-ಕಲಾ ಶಿಬಿರದ ಸರಣಿ ಶಿವ ಪೂಜಾ ಅಭಿಯಾನ-೨೦೧೭ರ ೩೮೬ನೇ ಶಿವ ಪೂಜಾ ಸಮಾಪನಾ ಸಮಾರಂಭ ಹಾಗೂ ಸಮ್ಮಾನ ಕಾರ್ಯಕ್ರಮದಲ್ಲಿ ಸೆ.೨೪ ರಂದು ಆಶೀರ್ವಚನ ನೀಡಿದರು.
ಅಸುರೀ ಶಕ್ತಿಗಳ ಮಧ್ಯೆ ಸಂಸ್ಕಾರಯುತ ಮಕ್ಕಳನ್ನು ಸಮಾಜಕ್ಕೆ ನೀಡುವ ಅಗತ್ಯವಿದೆ. ವೇದಮಂತ್ರಗಳಿಗೆ ದಿವ್ಯವಾದ ಶಕ್ತಿಯಿಂದೆ. ಪರಂಪರಾಗತ ಮೌಲ್ಯಗಳಿಗೆ ಸಮಾಜದಲ್ಲಿ ಅದರದ್ದೇ ಆದ ಸ್ಥಾನವಿದೆ. ಸಾಂಪ್ರದಾಯಿಕ ಆಚರಣೆ ಬಿಡಬಾರದು. ಮಕ್ಕಳಲ್ಲಿ ಸಜ್ಜನಶೀಲತೆ, ಕ್ರೀಯಾಶೀಲತೆಯನ್ನು ಬೆಳೆಸುವಲ್ಲಿ ಪ್ರತಿಷ್ಠಾನವು ಹಮ್ಮಿಕೊಂಡಿರುವ ಕಾರ್ಯ ನಿರಂತರವಾಗಿ ಮುಂದುವರಿಯಲಿ ಎಂದು ಶ್ರೀಗಳು ಆಶೀರ್ವದಿಸಿದರು.
ಸಮಾಪನಾ ಮುಖ್ಯ ಭಾಷಣ ಮಾಡಿದ ಉಜಿರೆ ಎಸ್‌ಡಿಎಂ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ವಿದ್ವಾನ್ ಡಾ| ಶ್ರೀಧರ ಭಟ್ ಅವರು, ಎಲ್ಲ ಜ್ಞಾನಗಳಲ್ಲಿ ವೇದ ಜ್ಞಾನವೇ ಅತೀ ಶ್ರೇಷ್ಠ. ಪ್ರತಿಯೊಬ್ಬನಿಗೂ ಇದರ ಸ್ವಲ್ಪವಾದರೂ ತಿಳುವಳಿಕೆ ಬೇಕೇ ಬೇಕು. ಇಂದು ಸಂಸ್ಕೃತ ಪಾಠಶಾಲೆಗಳಲ್ಲಿ ಪುಸ್ತಕದ ಅಂಶಗಳನ್ನಷ್ಟೇ ಬೋಧಿಸುತ್ತಾರೆಯೇ ಹೊರತು ಪ್ರಾಯೋಗಿಕತೆಯನ್ನು ಹೇಳಿಕೊಡುವುದಿಲ್ಲ. ಸರಿಯಾದ ತಿಳುವಳಿಕೆಯುಳ್ಳ ಪುರೋಹಿತರು ಸಮಾಜದಲ್ಲಿದ್ದಾಗ ಯೋಗ್ಯ ಮಾರ್ಗದರ್ಶನ ಸಿಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಅಭಿಯಾನ ಸಂಚಾಲಕ ಶಂಕರ ಭಟ್ ಕೆ. ಪುತ್ತೂರು ವಹಿಸಿದ್ದರು. ಶ್ರೀಗಳು ಬ್ರಹ್ಮಶ್ರೀ ವೇ| ಮೂ| ಶಿವಪ್ರಸಾದ ಭಟ್ಟ ಚೂಂತಾರು ದಂಪತಿಯನ್ನು ದೇವ-ಸಾಧಕ ಗೌರವ ಪುರಸ್ಕಾರ ಪ್ರದಾನಿಸಿ, ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ ಭಟ್ ಹಾಗೂ ವೇದ ಗುರು ಸುದರ್ಶನ ಭಟ್ ಇವರಿಗೆ ಸ್ಮರಣಿಕೆ ನೀಡಿ, ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿದರು.
ಆರು ವಿದ್ಯಾರ್ಥಿಗಳಿಗೆ ವೇದ ರತ್ನ ಪ್ರತಿಭಾ ಪುರಸ್ಕಾರ ಪ್ರದಾನಿಸಲಾಯಿತು.
ಪ್ರತಿಷ್ಠಾನ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿದ್ದರು.
ಬನಾರಿ ಸತೀಶ್ ಭಟ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಆದಿತ್ಯ, ವಿದ್ಯಾರಣ್ಯ, ಶ್ರೀಪಾದ ಅನಿಸಿಕೆ ವ್ಯಕ್ತಪಡಿಸಿದರು. ಪೋಷಕರು ಅಭಿಪ್ರಾಯ ತಿಳಿಸಿದರು. ರಾಜಗೋಪಾಲ ಭಟ್ ಅಭಿನಂದನಾ ನುಡಿಗಳನ್ನಾಡಿದರೆ, ಲಲಿತಾ ಲಕ್ಷ್ಮೀ ಅಭಿನಂದನಾ ಪತ್ರ ವಾಚಿಸಿದರು. ಕುಂಬ್ರ ರಾಮಚಂದ್ರ ಭಟ್ ಪೋಷಕರ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದರು.
ವೇದಗುರು ಸುದರ್ಶನ ಭಟ್ ವಂದಿಸಿದರು. ವಿದ್ಯಾ ಹಾಗೂ ಶ್ರೀದೇವಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top