Wed 13 Dec 2017, 2:45PM

ಹೆಚ್ಚಿನ ಸುದ್ದಿಗಳು

ಶ್ರೀರಾಮ ಕ್ಷೇತ್ರ: ನವರಾತ್ರಿ ವಿಶೇಷ ಪೂಜೆ- ಚಂಡಿಕಾಯಾಗ

Thursday, September 28th, 2017 | Suddi Belthangady | no responses

Shree Rama kshethra navarathri poojeಧರ್ಮಸ್ಥಳ: ಇಲ್ಲಿಯ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಗೊಂಡಿರುವ ಮಹಾಶಕ್ತಿ ಸ್ವರೂಪಿಣಿಯರಾದ ನವದುರ್ಗೆಯವರ ಸನ್ನಿಧಿಯಲ್ಲಿ ಸೆ.21 ರಿಂದ ನವರಾತ್ರಿ ವಿಶೇಷ ಪೂಜೆ ಜರಗಿತು.
ಸೆ.೨೫ರಂದು ಶ್ರೀ ದುರ್ಗಾಪರಮೇಶ್ವರಿ ಹಾಗೂ ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಪೂಜೆ, ಚಂಡಿಕಾಯಾಗ, ಕ್ಷೇತ್ರದ ಮಠಾದೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ವೇ| ಮೂ| ಲಕ್ಷ್ಮೀಪತಿ ಗೋಪಾಲಾ ಚಾರ್ಯರ ನೇತೃತ್ವದಲ್ಲಿ ಜರಗಿತು. ಕ್ಷೇತ್ರದ ಟ್ರಸ್ಟಿಗಳು, ಗಣ್ಯರು, ಸಿಬ್ಬಂದಿವರ್ಗದವರು, ರಥಬೀದಿ ವ್ಯಾಪಾರಸ್ಥರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಸಿದ್ದರು. ಸೆ.29 ರಂದು ಮಹಾ ಗೌರಿಗೆ ವಿಶೇಷ ಪೂಜೆ, ಆಯುಧಪೂಜೆ ಹಾಗೂ ಸೆ.30 ರಂದು ವಿಜಯದಶಮಿ ವಿಶೇಷ ಪೂಜೆ ನಡೆಯಲಿದೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top