Mon 18 Dec 2017, 10:14PM

ಹೆಚ್ಚಿನ ಸುದ್ದಿಗಳು

ಮಡಂತ್ಯಾರು ಪದವಿ ಕಾಲೇಜಿನ ಪ್ರೊಫೆಸರ್ ಎನ್.ಎಮ್. ಜೋಸೆಫ್‌ರಿಗೆ ಡಾಕ್ಟರೇಟ್

Thursday, September 28th, 2017 | Suddi Belthangady | no responses

Josef n mಮಡಂತ್ಯಾರು: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೋಫೆಸರ್ ಆಗಿರುವ ಎನ್. ಎಮ್. ಜೋಸೆಫ್ ಅವರ ವಿಶೇಷ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪ್ರದಾನ ಮಾಡಿದೆ. ಸಿಂಡಿಕೇಟ್‌ನಿಂದ ಕುಲಪತಿಗಳಿಗೆ ದತ್ತವಾದ ಅಧಿಕಾರಕ್ಕನುಗುಣವಾಗಿ ಮತ್ತು ಪರೀಕ್ಷಾ ಮಂಡಳಿ ಶಿಫಾರಸ್ಸಿನಂತೆ ಪ್ರೊಫೆಸರ್ ಡಾ. ಎಸ್. ಮಹೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಜೋಸೆಫ್ ಅವರು ಎ ಕ್ರಿಟಿಕಲ್ ಎನಾಲೈಸಿಸ್ ಓಫ್ ವಾಟರ್ ರಿಸೋರ್ಸ್ ಮೆನೇಜ್‌ಮೆಂಟ್ ಇನ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ ವಿದ್ ಸ್ಪೆಷಲ್ ರೆಫರೆನ್ಸ್ ಟು ಬೆಳ್ತಂಗಡಿ ತಾಲೂಕ್ ಈ ಮಹಾ ಪ್ರಬಂಧಕ್ಕೆ ಅವರಿಗೆ ಡಾಕ್ಟರೇಟ್ ದೊರೆತಿದೆ.
ಸ್ವತಃ ಮನೆಯಲ್ಲೇ ಜಲಸಂರಕ್ಷಣೆಯ ವಿಧಾನವನ್ನು ಅನುಸರಿಸಿರುವ ಅವರು ಮಳೆಕೊಲು ಮತ್ತು ನೀರಿಂಗಿಸುವಿಕೆ ವಿಧಾನ ಜಾರಿಗೆ ತಂದಿದ್ದಾರೆ. ಕೃಷಿ ಇಲಾಖೆ, ಶಾಲಾ ಕಾಲೇಜುಗಳಲ್ಲಿ ಜಲಸಂರಕ್ಷಣೆಯ ಬಗ್ಗೆ ವಿಶೇಷ ಉಪನ್ಯಾಸ, ಪ್ರಾತ್ಯಕ್ಷಿಕೆಯನ್ನೂ ನಡೆಸಿಕೊಡುತ್ತಿದ್ದಾರೆ. ಭಾವೈಕ್ಯತೆ, ಧಾರ್ಮಿಕ ಸಾಮರಸ್ಯದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿರುವ ಅವರು ಕಾಲೇಜಿನಲ್ಲಿ ಅತ್ಯುತ್ತಮ ಎನ್.ಎಸ್.ಎಸ್. ಅಧಿಕಾರಿ ಬಿರುದಿಗೂ ಬಾಜನರಾದವರಾಗಿದ್ದಾರೆ. ಕ್ರಿಯಾಶೀಲ ಸಂಘಟಕರಾಗಿದ್ದು, ಅತ್ಯುತ್ತಮ ಉದ್ಘೋಷಕರಾಗಿಯೂ ಗುರುತಿಸಿಕೊಂಡಿದ್ದಾರೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top