Mon 18 Dec 2017, 8:06PM

ಹೆಚ್ಚಿನ ಸುದ್ದಿಗಳು

ಕ್ರಿಯಾಶೀಲ ವ್ಯಕ್ತಿಗೆ ಹೆಚ್ಚು ಕೆಲಸ ಮಾಡುವುದೇ ವಿಶ್ರಾಂತಿ : ಸಚಿವ ರೈ

Thursday, October 12th, 2017 | Suddi Belthangady | no responses

madanthyar jcಸನ್ಮಾನ, ಪುರಸ್ಕಾರ: ಸಮಾರೋಪದ ವೇದಿಕೆಯಲ್ಲಿ ರಿದಂ ಸಾಂಸ್ಕೃತಿಕ ವಿಕಾಸ ಕೇಂದ್ರ ಸುರತ್ಕಲ್ ಇದರ ನಿರ್ದೇಶಕ ಸುಧಾಕರ್ ಎನ್. ಸುರತ್ಕಲ್ ಅವರಿಗೆ ಜೇಸಿ ಕಲಾರತ್ನ ಪ್ರಶಸ್ತಿ, ವ್ಯವಹಾರ ಕ್ಷೇತ್ರದ ಸಾಧನೆಗಾಗಿ ಗಿರೀಶ್ ಪೈ ಕೊಲ್ಪೆದಬೈಲು ಅವರಿಗೆ ಸಾಧನಾಶ್ರೀ ಪುರಸ್ಕಾರ, ಪ್ರಗತಿಪರ ಕೃಷಿಕ ಕೃಷ್ಣಪ್ಪ ನಾಯ್ಕ್ ಅವರಿಗೆ ಜೈ ಕಿಸಾನ್ ಪ್ರಸಸ್ತಿ, ಮಾಜಿ ಸೈನಿಕ ಕಾಂತಪ್ಪ ಗೌಡ ಅವರಿಗೆ ಜೈ ಜವಾನ್ ಪ್ರಶಸ್ತಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿರುವ ಸಂಪತ್ ಬಿ. ಸುವರ್ಣ ಅವರಿಗೆ ಜೇಸಿರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮಡಂತ್ಯಾರು: ಜನಸಂಖ್ಯಾ ಸ್ಪೋಟ ದೇಶಕ್ಕೆ ಮಾರಕ ಎಂಬ ಭಾವನೆ ಇತ್ತು. ಆದರೆ ಅದೇ ಜನಸಂಖ್ಯೆ ಮತ್ತು ಯುವ ಸಮೂಹವನ್ನು ಸಂಪನ್ಮೂಲವಾಗಿ ಬಳಕೆ ಮಾಡಿಕೊಂಡಾಗ ಮಾರಕವಾಗುವ ಜನತೆ ಸಂಪತ್ತಾಗಿ ಪರಿವರ್ತನೆಯಾಗುತ್ತಾರೆ. ಜಡತ್ವ ಮತ್ತು ಆಲಸ್ಯ ಸ್ವಭಾವ ದೇಶದ ಬೆಳವಣಿಗೆಯಲ್ಲಿ ಹಿನ್ನಡೆ ಕೊಡುವಂತದ್ದಾಗಿದ್ದು, ಕ್ರಿಯಾಶೀಲ ವ್ಯಕ್ತಿಗೆ ಜಡತ್ವದ ಪ್ರದರ್ಶನ ಸಾಧ್ಯವೇ ಇಲ್ಲ. ಕ್ರಿಯಾಶೀಲ ವ್ಯಕ್ತಿ ಹೆಚ್ಚು ಕೆಲಸದಲ್ಲಿ ತೊಡಗಿಕೊಂಡಿರುವುದೇ ಆತನಿಗೆ ವಿಶ್ರಾಂತಿ ಇದ್ದಂತೆ. ಅಂತಹಾ ಚಟುವಟಿಕೆಯುಕ್ತ ಜೀವನವನ್ನು ಜೇಸಿಯಂತಹಾ ಸಂಸ್ಥೆ ನೀಡುತ್ತದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು
ಜೇಸಿಐ ಮಡಂತ್ಯಾರು ಇವರ ವತಿಯಿಂದ ಅ. 2 ರಿಂದ ಅ. 8 ರವರೆಗೆ ಮಡಂತ್ಯಾರು ಕೊರೆಯ ಕಂಪೌಂಡ್‌ನಲ್ಲಿ ಆಯೋಜಿಸಿದ್ದ ಸಂಭ್ರಮದ ಜೇಸಿ ಸಪ್ತಾಹ ಆಕಾಶ ದೀಪ- 2017 ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಒಟ್ಟಿಗೆ ಸೇರಿ ಬೆಳೆಯುವುದು, ಪರಸ್ಪರ ಅರ್ಥಮಾಡಿಕೊಳ್ಳುವುದು ಸಮಾಜದಲ್ಲಿ ಮುಖ್ಯವಾದ ವಿಚಾರ. ಸುಂದರ ಭಾರತ ನಿರ್ಮಾಣ ಇಂದಿನ ಯುವಜನತೆ ಮತ್ತು ವಿದ್ಯಾರ್ಥಿಗಳ ಕೈಯಲ್ಲಿದೆ. ಆಧುನಿಕ ತಂತ್ರಜ್ಞಾನಗಳು ಸರಳವಾಗಿದ್ದು ಅದನ್ನು ದುರುಪಯೋಗಪಡಿಸಿ ಕೊಂಡು ಸುಳ್ಳು ಪ್ರಚಾರಗಳನ್ನು ಮಾಡುವಂತಹದ್ದು ದೇಶದ್ರೋಹಕ್ಕೆ ಸಮವಾದದ್ದು ಎಂದು ಮಾರ್ಮಿಕ ವಾಗಿ ನುಡಿದರು. ಸಭಾಧ್ಯಕ್ಷತೆಯನ್ನು ಜೇಸಿಐ ಮಡಂತ್ಯಾರು ಅಧ್ಯಕ್ಷ ರಾಜೇಶ್ ಪಿ. ಪುಂಜಾಲಕಟ್ಟೆ ವಹಿಸಿ ಸಭೆ
ಮುನ್ನಡೆಸಿದರು. ಮುಖ್ಯ ಅತಿಥಿಯಾಗಿದ್ದ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರುಗಳಾದ ರೆ. ಫಾ. ಬೇಸಿಲ್ ವಾಸ್ ಅವರು ಮಾತನಾಡಿ, ನಾನು ನನ್ನದು ಎಂಬ ಸ್ವಾರ್ಥ ತೊರೆದು ಕೀಳರಿಮೆ ಹೋಗಲಾಡಿಸಿಕೊಂಡು, ಆತ್ಮವಿಶ್ವಾಸದಿಂದ ಬೆಳೆಯುವ ಕಲೆಯನ್ನು ಜೇಸಿ ಸಂಸ್ಥೆ ಕಲಿಸಿಕೊಡುತ್ತದೆ ಎಂದರು. ಪೂರ್ವ ವಲಯಾಧ್ಯಕ್ಷ ರಾಮಚಂದ್ರ ರಾವ್ ದಿಕ್ಸೂಚಿ ಭಾಷಣ ಮಾಡಿದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಡಾ| ಸುಧೀರ್ ಪ್ರಭು, ಮುರಗೇಂದ್ರ ಮಿತ್ರಮಂಡಳಿ ಪುಂಜಾಲಕಟ್ಟೆ ಅಧ್ಯಕ್ಷ ಮೋಹನ್ ಸಾಲ್ಯಾನ್, ಉಜಿರೆಯ ಉದ್ಯಮಿ ದಾಮೋಧರ ಕಾಮತ್, ಮಡಂತ್ಯಾರು ಎಂ.ಆರ್. ಸುಪಾರಿ ಮಾಲಕ ಹೈದರ್ ಎಂ.ಆರ್, ದುರ್ಗಾ ಟ್ರೇಡರ್‍ಸ್ ಮಾಲಕ ಯಶೋಧರ ಬಂಗೇರ, ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಮುಹಮ್ಮದ್, ಯುವ ಕಾಂಗ್ರೆಸ್ ತಾ| ಅಧ್ಯಕ್ಷ ಅಭಿನಂದನ್, ಕೆಥೋಲಿಕ್ ಸಭಾ ಅಧ್ಯಕ್ಷ ರೋಹಣ್ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ವೇದಿಕೆಯಲ್ಲಿ ಜೇಸಿಐ ಮಡಂತ್ಯಾರು ಕಾರ್ಯದರ್ಶಿ ನವೀನ್ ಕೋಡ್ಲಕ್ಕೆ, ಸಪ್ತಾಹ ನಿರ್ದೇಶಕ ಶ್ರೀಧರ ಆಚಾರ್ಯ, ಸಪ್ರಾಹ ಸಹಸಂಯೋಜಕ ವಿನ್ಸೆಂಟ್ ಮೋರಾಸ್, ನಿಕಟಪೂರ್ವಾಧ್ಯಕ್ಷ ಜಯೇಶ್ ಬರೆಟ್ಟೋ, ಜೂನಿಯರ್ ಜೇಸಿ ಅಧ್ಯಕ್ಷ ಪ್ರಜ್ವಲ್ ಶೆಟ್ಟಿ, ಜೇಸಿರೆಟ್ ಅಧ್ಯಕ್ಷೆ ದಿವ್ಯರಾಣಿ ಹಾಗೂ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದು ಸಹಕಾರ ನೀಡಿದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top