Mon 18 Dec 2017, 7:41PM

ಹೆಚ್ಚಿನ ಸುದ್ದಿಗಳು

ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖೆಯ ವಾರ್ಷಿಕೋತ್ಸವ

Thursday, October 12th, 2017 | Suddi Belthangady | no responses

LICಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖೆಯು ಪ್ರಾರಂಭಗೊಂಡು ಯಶಸ್ವಿ 10ವರ್ಷ ಪೂರೈಸಿ 11ನೇ ವರ್ಷಕ್ಕೆ ಪಾದಾರ್ಪಣೆಗೊಂಡ ವಾರ್ಷಿಕೋತ್ಸವ ಅ. 12(ಇಂದು) ಉಪಗ್ರಹ ಶಾಖೆಯಲ್ಲಿ ಜರಗಿತು.
ಬಂಟ್ವಾಳ ಶಾಖೆಯ ಹಿರಿಯ ಶಾಖಾಧಿಕಾರಿ ಬಾಲಕೃಷ್ಣ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಉಪಗ್ರಹ ಶಾಖಾಧಿಕಾರಿ ಆರ್.ಡಿ ಯೋಗೇಂದ್ರ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಭಿವೃದ್ಧಿ ಅಧಿಕಾರಿಗಳಾದ ಎ. ಜಯದೇವ್, ಎಂ.ವಿ ಶೆಟ್ಟಿ, ಟಿ.ಡಿ ರಾಘವೇಂದ್ರ, ಉದಯಶಂಕರ್, ಆಡಳಿತಾಧಿಕಾರಿಗಳಾದ ಕೇಶವ ಎಂ., ಶ್ರೀನಿವಾಸ್, ಪ್ರತಿನಿಧಿಗಳು, ಗ್ರಾಹಕರು ಉಪಸ್ಥಿತರಿದ್ದರು. ವಾರ್ಷಿಕೋತ್ಸವದ ಅಂಗವಾಗಿ ಹೊಸ ವ್ಯವಹಾರ ಸ್ಪರ್ಧೆಯಲ್ಲಿ ಸಾಧನೆಗೈದ ಪ್ರತಿನಿಧಿಗಳನ್ನು ಗುರುತಿಸಿ ಗೌರವಿಸಲಾಯಿತು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top