Mon 18 Dec 2017, 3:43AM

ಹೆಚ್ಚಿನ ಸುದ್ದಿಗಳು

ಶೇಣಿ ಜನ್ಮಶತಮಾನೋತ್ಸವ : ಯಕ್ಷಗಾನ ತಾಳಮದ್ದಳೆ-ಶೇಣಿ ಪ್ರಶಸ್ತಿ ಪ್ರದಾನ ಯಕ್ಷಗಾನದ ಕಿರಿಯ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ಪಡ್ವೆಟ್ನಾಯ

Thursday, October 12th, 2017 | Suddi Belthangady | no responses

ujire sheni prasasti pradanaಇದೇ ಸಂದರ್ಭದಲ್ಲಿ ಉಜಿರೆಯ ಹಿರಿಯ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಸುರೇಶ ಕುದ್ರೆಂತಾಯರಿಗೆ ಶೇಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಮದ್ದಳೆ ವಾದಕ ಉಜಿರೆಯ ವಾಸುದೇವ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಯಕ್ಷಭಾರತಿ ಅಧ್ಯಕ್ಷ ಹರಿದಾಸ ಗಾಂಭೀರ ಪ್ರಶಸ್ತಿ ಸನ್ಮಾನಿತರನ್ನು ಅಭಿನಂದಿಸಿದರು. ರವೀಂದ್ರ ಶೆಟ್ಟಿ ಬಳೆಂಜ ಪ್ರಶಸ್ತಿ ಪತ್ರ ವಾಚಿಸಿದರು. ಸುರೇಶ ಕುದ್ರೆಂತಾಯರು ಶೇಣಿ ಕುರಿತಾದ ಆಶುಕವಿತೆಯನ್ನು ಹಾಡಿ ಪ್ರತಿವಚನ ನುಡಿದರು.

ಉಜಿರೆ : ಹಿರಿಯ ಕಲಾವಿದರು ನೇಪಥ್ಯಕ್ಕೆ ಸರಿದಾಗ ಕಿರಿಯ ಕಲಾವಿದರಿಗೆ ಅವಕಾಶ ಮಾಡಿಕೊಡುವ ಮೂಲಕ ಯಕ್ಷಗಾನ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕಾದುದು ಅತ್ಯಗತ್ಯ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ನುಡಿದರು.
ಅವರು ಅ.8ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ಸಮಿತಿ, ಮಿತ್ರಮಂಡಳಿ ಮುಂಡಾಜೆ ಮತ್ತು ಯಕ್ಷಭಾರತಿ ಕನ್ಯಾಡಿ ನೇತೃತ್ವದಲ್ಲಿ ಶೇಣಿ ಜನ್ಮಶತಮಾನೋತ್ಸವದ ಅಂಗವಾಗಿ ನಡೆದ ಯಕ್ಷಗಾನ ತಾಳಮದ್ದಳೆ ಸಪ್ತಾಹ-2017ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶೇಣಿ ಸಂಸ್ಮರಣೆಗೈದ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಸದಸ್ಯ ತಾರಾನಾಥ ಬಲ್ಯಾಯ ಶೇಣಿಯವರ ಮಾತುಗಳಲ್ಲಿ ಹೊಸತನ, ಸಮಕಾಲೀನ ವೈಚಾರಿಕ ಸಾಹಿತ್ಯ, ಸಾರ್ವಕಾಲಿಕ ಮೌಲ್ಯ ಹೊಂದಿದ್ದು, ಯಾವುದೇ ವಸ್ತುವನ್ನು ಸುಂದರ ಸಾಹಿತ್ಯಿಕ ಕಲಾಕೃತಿಯಾಗಿ ರೂಪಿಸಿದ ಕನ್ನಡ ಸಾಹಿತ್ಯದ ಯುಗಪುರುಷ ಎಂದರು.
ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಜಮಾ ಉಗ್ರಾಣದ ಮುತ್ಸದ್ದಿ ಬಿ. ಭುಜಬಲಿ, ಬೆಳ್ತಂಗಡಿಯ ನೋಟರಿ ವಕೀಲ ಮರಳೀಧರ ಭಟ್, ಪ್ರಕಾಶ್ ಇಲೆಕ್ಟ್ರಾನಿಕ್ಸ್ ಸಮೂಹ ಮಾಲಕ ಪುಷ್ಪರಾಜ ಶೆಟ್ಟಿ, ಬೆಳ್ತಂಗಡಿ ಪದವಿ ಕಾಲೇಜಿನ ಪ್ರಾಧ್ಯಾಪಕ ಟಿ.ಕೆ ಶರತ್‌ಕುಮಾರ್ ಭಾಗವಹಿಸಿದ್ದರು. ಧರ್ಮಸ್ಥಳದ ನಾರಾಯಣ ಕುದ್ರೆಂತ್ತಾಯ, ಸಪ್ತಾಹದ ಕಾರ್ಯಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಉಪಸ್ಥಿತರಿದ್ದರು. ಶೇಣಿಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟಿನ ಪಿ.ವಿ. ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಅಧ್ಯಕ್ಷ ಶರತ್‌ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿದರು. ಸಪ್ತಾಹ ಸಮಿತಿ ಪ್ರಧಾನ ಸಂಚಾಲಕ ಚಂದ್ರಮೋಹನ ಮರಾಠೆ ಕಾರ್ಯಕ್ರಮ ನಿರೂಪಿಸಿ, ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು. ಹರೀಶ್ ಕೊಳ್ತಿಗೆ, ಮಹೇಶ್ ಕನ್ಯಾಡಿ ಮೊದಲಾದವರು ಸಹಕರಿಸಿದರು.
ಪುರುಷೋತ್ತಮ ಭಟ್ ನಿಡುವಜೆ ಮತ್ತು ಮಹೇಶ್ ಕನ್ಯಾಡಿ ಹಾಡುಗಾರಿಕೆಯಲ್ಲಿ `ಕರ್ಣಭೇದನ’ ತಾಳಮದ್ದಳೆ ಹಾಗೂ `ಸುದರ್ಶನ ವಿಜಯ ಅಗ್ರಪೂಜೆ’ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top