Sat 16 Dec 2017, 12:52PM

ಹೆಚ್ಚಿನ ಸುದ್ದಿಗಳು

ಉಜಿರೆ ದೇವಳಕ್ಕೆ ಬಾಳೆಕುದ್ರು ಶ್ರೀ ಭೇಟಿ

Thursday, October 12th, 2017 | Suddi Belthangady | no responses

ujirege balekudrushriಉಜಿರೆ: ಸನಾತನ ಸಂಸ್ಕೃತಿಯನ್ನು ನಾವು ದೂರವಿಟ್ಟರೂ ವಿದೇಶಿಯರು ಅದನ್ನು ಮೆಚ್ಚಿ ಅನುಸರಿಸುತ್ತಿದ್ದಾರೆ. ಯೋಗ, ಧ್ಯಾನ, ಆಯುರ್ವೇದಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಉತ್ತಮ ಸಾಧನೆ ಮಾಡುತ್ತಿದ್ದಾರೆ. ವಿಶಿಷ್ಠ ಪರಂಪರೆಯುಳ್ಳ ನಮ್ಮ ದೇಶವನ್ನು ಪ್ರೀತಿಸಿದಾಗ ಮಾತ್ರ ನಮ್ಮ ಆಚರಣೆಗಳಿಗೆ ಅರ್ಥ ಬರುತ್ತದೆ ಎಂದು ಉಡುಪಿ ಹಂಗಾರಕಟ್ಟೆ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ನುಡಿದರು. ಅವರು ಅ.7ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಚನ ನೀಡಿದರು. ದೇವಸ್ಥಾನದ ವತಿಯಿಂದ ವಾದ್ಯ ವೇದ ಘೋಷದೊಂದಿಗೆ ಶ್ರೀಗಳನ್ನು ಬರಮಾಡಿಕೊಂಡು ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಫಲಕಾಣಿಕೆ ಸಮರ್ಪಿಸಿ ಗೌರವಿಸಿದರು.
ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಉಪಾಧ್ಯಕ್ಷ ನಾಗೇಶ್ ರಾವ್ ಮುಂಡ್ರುಪ್ಪಾಡಿ, ಶರತ್‌ಕೃಷ್ಣ ಪಡ್ವೆಟ್ನಾಯ, ಬಾಲಕೃಷ್ಣ ಅರಿಪಾಡಿತ್ತಾಯ, ಗಿರೀಶ ಕುದ್ರೆಂತಾಯ, ಸುರೇಶ ಕುದ್ರೆಂತಾಯ, ರವೀಂದ್ರ ಒಪ್ಪಂತ್ತಾಯ, ಮೊದಲಾದವರು ಉಪಸ್ಥಿತರಿದ್ದರು. ಶರತ್‌ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿ, ಮುರಳೀಕೃಷ್ಣ ಆಚಾರ್ ನಿರೂಪಿಸಿ, ವಂದಿಸಿದರು.
ಶ್ರೀ ಚಕ್ರಾರ್ಚನೆ: ಅಜಿತ್‌ನಗರ ಚಕ್ರಪಾಣಿ ಸರಳಾಯರ ಮನೆಯಲ್ಲಿ ಶ್ರೀಗಳವರು ಎರಡು ದಿನ ವಾಸ್ತವ್ಯವಿದ್ದು, ಶ್ರೀ ಚಕ್ರಾರ್ಚನೆ ಪೂಜೆ ನೆರವೇರಿಸಿದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top