Fri 13 Oct 2017, 7:37PM

ಹೆಚ್ಚಿನ ಸುದ್ದಿಗಳು

ರಾಮ ಕ್ಷತ್ರೀಯ ಸಂಘದಿಂದ 17ನೇ ವರ್ಷದ ಕ್ಷತ್ರೀಯ ಚೈತನ್ಯ ಕಾರ್ಯಕ್ರಮ ಸಂಘಟನೆ ಎಂದರೆ ತ್ಯಾಗ : ಲಯನ್ಸ್ ಮಾಜಿ ಗವರ್ನರ್ ಜೆ ಕೃಷ್ಣಾನಂದ ರಾವ್

Friday, October 13th, 2017 | Suddi Belthangady | no responses

Rama khsathriyaಬೆಳ್ತಂಗಡಿ: ಸಂಘಟನೆ ಎಂದರೆ ತ್ಯಾಗ. ಅಲ್ಲಿ ನಮ್ಮ ವೈಯುಕ್ತಿಕ ವಿಚಾರಗಳಿರ ಕೂಡದು. ಸಂಘಟನೆ ಯೊಳಗೆ ಪ್ರತಿಷ್ಠೆ, ರಾಜಕೀಯ ಪ್ರವೇಶಿಸಿದರೆ ಸಂಘದ ಉದ್ದೇಶವೇ ಹಾಳಾಗುತ್ತದೆ. ಜಿಲ್ಲೆಯಲ್ಲಿ ಕನಿಷ್ಟ ಸಂಖ್ಯೆಯಲ್ಲಿರುವ ನಾವು ಇನ್ನಷ್ಟು ಸಂಘಟಿತರಾಗಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಗುರುತಿಸಲ್ಪ ಡುವಂತಾಗಬೇಕು ಎಂದು ಮಂಗಳೂರು ರಾಮ ಕ್ಷತ್ರೀಯ ಸಂಘದ ಅಧ್ಯಕ್ಷ ಹಾಗೂ ಲಯನ್ಸ್ ಮಾಜಿ ಗವರ್ನರ್ ಜೆ ಕೃಷ್ಣಾನಂದ ರಾವ್ ಹೇಳಿದರು.
ಬೆಳ್ತಂಗಡಿ ತಾಲೂಕು ರಾಮ ಕ್ಷತ್ರೀಯ ಸಂಘ ರಾಮನಗರ ಬೆಳ್ತಂಗಡಿ ಇದರ 17 ನೇ ವಾರ್ಷಿಕೋತ್ಸವ ಪ್ರಯುಕ್ತ ಬೆಳ್ತಂಗಡಿ ಸುವರ್ಣ ಆರ್ಕೆಡ್‌ನಲ್ಲಿ ನಡೆದ ಕ್ಷತ್ರೀಯ ಚೈತನ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅಧ್ಯಕ್ಷತೆ ವಹಿಸಿದ್ದ ಸಂಘದ ತಾ| ಅಧ್ಯಕ್ಷ ವಿಜಯ ಕುಮಾರ್ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ರಾಮಕ್ಷತ್ರೀಯ ಯುವ ವೇದಿಕೆ ಬೆಂಗಳೂರು ಸ್ಥಾಪಕಾಧ್ಯಕ್ಷ ಅಶೋಕ್ ಕುಮಾರ್ ಕೆ, ರಾಮಕ್ಷತ್ರೀಯ ಮಾಸ ಪತ್ರಿಕೆ ಸಂಪಾದಕ ಬಿ.ಎಂ ನಾಥ್, ಕೊಲ್ಲೂರು ಮೂಕಾಂಬಿಕಾ ದೇವಾಲಯದ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಎನ್.ಟಿ.ಪಿ.ಸಿ ಬೆಂಗಳೂರು ಹಿರಿಯ ಅಧಿಕಾರಿ ಪಿ ಭುವನೇಶ್, ಹೆಬ್ರಿ ರಾಮ ಕ್ಷತ್ರೀಯ ಸಂಘದ ಅಧ್ಯಕ್ಷ ಶ್ರೀನಿವಾಸ ಸೇರ್ವೆಗಾರ್ ಭಾಗಿಯಾಗಿ ಶುಭ ಕೋರಿದರು.
ಅತಿಥಿಗಳ ಪರಿಚಯವನ್ನು ಕಾವ್ಯಾ, ರತ್ನಾಕರ ಮಾಸ್ಟ್ರ್, ಚೈತ್ರಾ, ವಿಜಯ ಮಾಸ್ಟರ್, ಬಾನುರೇಖಾ, ಮೈತ್ರಿ, ನಿಶ್ಮಿತಾ ನಡೆಸಿಕೊಟ್ಟರು. ನಿರುಪಮಾ, ಕಲಾವತಿ ಮತ್ತು ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಗೌರವಾಧ್ಯಕ್ಷ ಸಿ. ಎಚ್ ಪ್ರಭಾಕರ್, ಸ್ಥಾಪಕಾಧ್ಯಕ್ಷ ಲ| ವಿ. ಆರ್ ನಾಯಕ್, ಪ್ರ. ಕಾರ್ಯದರ್ಶಿ ಕೆ ರಾಘವೇಂದ್ರ ರಾವ್ ಅರಸಿನಮಕ್ಕಿ ವೇದಿಕೆಯಲ್ಲಿದ್ದರು. ಪ್ರಮೋದ್ ಆರ್ ನಾಯಕ್ ಸಹಿತ ಸಂಘದ ಪದಾಧಿಕಾರಿಗಳು ಸಹಕಾರ ನೀಡಿದರು.
ಸಮಾರಂಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಅಹಲ್ಯಾ ರಮಾನಂದ ಉಡುಪಿ ಜಿಲ್ಲೆಯ ಪರ್ಕಳ ಶಾಲೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ನಿಮಿತ್ತ ಸಮಾಜ ಬಂಧುಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳೂ ಸಾದರಗೊಂಡವು.

Leave a Reply


ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

October 2017
M T W T F S S
« Sep    
 1
2345678
9101112131415
16171819202122
23242526272829
3031  

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top