Mon 18 Dec 2017, 10:04PM

ಹೆಚ್ಚಿನ ಸುದ್ದಿಗಳು

ಕಳೆಂಜ ದೇವಸ್ಥಾನದ ನೂತನ ಸಭಾ ಭವನದ ಶಂಕುಸ್ಥಾಪನೆ

Friday, October 13th, 2017 | Suddi Belthangady | no responses

kalenja shri sadasiveshwara temple shanku sthapaneಕಳೆಂಜ : ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜ ಇಲ್ಲಿ ಅ. ೫ರಂದು ನೂತನ ಸಭಾ ಭವನದ ಶಂಕು ಸ್ಥಾಪನೆಯನ್ನು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ ನೆರವೇರಿಸಿ ಈ ಸಭಾಭವನದ ಕೆಲಸಕ್ಕೆ ಊರಿನ ಎಲ್ಲರೂ ಒಂದೇ ಮನಸ್ಸಿನಿಂದ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆಯನ್ನು ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷ ಅರವಿಂದ ಕುಡ್ವ ವಹಿಸಿ ಮಾತನಾಡಿ ಈ ಕೆಲಸವು ನಿರ್ವಿಘ್ನವಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಸಮುದಾಯ ಅಭಿವೃದ್ಧಿ ಅಧಿಕಾರಿ ಜಯರಾಮ ನೆಲ್ಲಿತ್ತಾಯ ಭಾಗವಹಿಸಿ ನಿಮ್ಮ ಸಮಿತಿಯಲ್ಲಿ ನಾನೂ ಕೂಡ ಒಬ್ಬ ಸದಸ್ಯ. ತಿಂಗಳ ಸಭೆಯಲ್ಲಿ ನಾನೂ ಕೂಡ ಭಾಗವಹಿಸುತ್ತೇನೆ ಎಂದರು.
ಕೇಶವ ಕಳೆಂಜ ನಿರೂಪಿಸಿ, ಜಯಂತ ಗೌಡ ಸ್ವಾಗತಿಸಿ, ರುಕ್ಮಯ್ಯ ಗೌಡ ಕಳೆಂಜ ಧನ್ಯವಾದವಿತ್ತರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top