Wed 22 Nov 2017, 4:27AM

ಹೆಚ್ಚಿನ ಸುದ್ದಿಗಳು

ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ

Thursday, November 2nd, 2017 | Suddi Belthangady | no responses

Laila venkatramana vishwaroopa darshanaಬೆಳ್ತಂಗಡಿ : ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀ ದೇವರ ವಿಶ್ವರೂಪ ದರ್ಶನ ಕಾರ್ಯಕ್ರಮವು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಗವತ್‌ಭಕ್ತರ ಉಪಸ್ಥಿತಿಯಲ್ಲಿ ನ.1 ರಂದು ಪ್ರಾತಃಕಾಲ ವಿಜೃಂಭಣೆಯಿಂದ ನಡೆಯಿತು. ಅ.31ರಂದು ಬೆಳಗ್ಗೆ 6.45 ರಿಂದ ನ.1 ಬೆಳಗ್ಗೆ 7.30ರ ವರೆಗೆ ಏಕಾಹ ಭಜನಾ ಕಾರ್ಯಕ್ರಮ ಜರುಗಿತು. ರಾತ್ರಿ 2 ಗಂಟೆಗೆ ಆಗಮಿಸಿದ ಭಕ್ತರು ದೇವಸ್ಥಾನದ ಹೊರಗಿನ ಅಂಗಣದಲ್ಲಿ ಬಿಡಿಸಲಾದ ಹೂವಿನ ರಂಗೋಲಿ, ಗದಾ, ಪದ್ಮಾ ಹಾಗೂ ನಾಗದೇವರ ಕಟ್ಟೆ, ಶ್ರೀ ರಕ್ತೇಶ್ವರಿ ಸ್ಥಾನ, ಅಶ್ವಥಕಟ್ಟೆ ಮೇಲೆ ಹಣತೆ ದೀಪ ಹಚ್ಚಿ ದೇವರ ಸೇವೆ ಮಾಡಿದರು. ಬೆಳಗ್ಗೆ 4.30 ರಿಂದ ಬೆಳಗ್ಗೆ 6 ಗಂಟೆಯ ವರೆಗೆ ಸಹಸ್ರಾರು ಹಣತೆಗಳ ದೀಪಗಳಿಂದ ಶ್ರೀ ದೇವರ ವಿಶ್ವರೂಪ ದರ್ಶನ ಭಕ್ತರ ಭಕ್ತಿ ಭಾವವನ್ನು ಉಕ್ಕಿಹರಿಸಿತು. ತಾಲೂಕಿ ನಾದ್ಯಂತ ಭಕ್ತರು, ಸಮಸ್ತ ಹಿಂದೂ ಬಾಂಧವರು ಆಗಮಿಸಿ ಸ್ವತಃ ಹಣತೆ ದೀಪಗಳನ್ನು ಹಚ್ಚಿ ಶ್ರೀ ದೇವರ ಕೃಪೆಗೆ ಪಾತ್ರರಾದರು. ದೇವಸ್ಥಾನದ ಆಡಳಿತ ಸಮಿತಿಯವರು ಯಶಸ್ವಿಗೆ ಶ್ರಮಿಸಿದರು.

Leave a Reply


ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

November 2017
M T W T F S S
« Oct    
 12345
6789101112
13141516171819
20212223242526
27282930  

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top