Wed 22 Nov 2017, 4:25AM

ಹೆಚ್ಚಿನ ಸುದ್ದಿಗಳು

ಕೊಲ್ಲಿ ಶ್ರೀ ದುರ್ಗಾದೇವಿಯ ಜೀರ್ಣೋದ್ಧಾರಕ್ಕೆ ಪೂರ್ವ ಪ್ರಕ್ರಿಯೆ ಆರಂಭ

Friday, November 3rd, 2017 | Suddi Belthangady | no responses

kolli durgadevi jinordhara arambaಕೊಲ್ಲಿ : ಶ್ರೀ ದುರ್ಗಾದೇವಿ ದೇವಸ್ಥಾನ ಕೊಲ್ಲಿ ಸುಮಾರು 800 ವರ್ಷಗಳ ಇತಿಹಾಸವುಳ್ಳ ದೇವಸ್ಥಾನದ ಶಿಲಾಮಯ ಗರ್ಭಗುಡಿಗೆ ತೀರ್ಥ ಮಂಟಪ ಇತರ ಸಮಗ್ರ ಜೀರ್ಣೋ ದ್ಧಾರದ ಪ್ರಕ್ರಿಯೆಯು ಆರಂಭಗೊಂಡಿದ್ದು ಪೂರ್ವಭಾವಿಯಾಗಿ, ಆಲಂಪಾಡಿ ನೀಲೇಶ್ವರ ಪದ್ಮನಾಭ ತಂತ್ರಿಯವರ ಉಪಸ್ಥಿತಿಯಲ್ಲಿ ಅ.29 ರಂದು ಬಾಲಾಲಯದಲ್ಲಿ ಮೂರು ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ನೆಲೆನಿಂತ ದೈವದೇವರುಗಳ ಅನುಗ್ರಹಕ್ಕೆ ಸಾಮೂಹಿಕ ಪ್ರಾರ್ಥನೆ ನೆರವೇರಿತು.
ತದನಂತರ ನಡೆದ ಭಕ್ತರ ಮಹಾಸಭೆಯಲ್ಲಿ ಧಾರ್ಮಿಕ ಪರಿಷತ್ ಸದಸ್ಯ ಮುಕುಂದ ಸುವರ್ಣ ದೀಪ ಬೆಳಗಿಸಿ, ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಭೆಯ ಅಧ್ಯಕ್ಷತೆಯನ್ನು ಉಜಿರೆ ರಬ್ಬರ್ ಸೊಸೈಟಿಯ ಅಧ್ಯಕ್ಷರಾದ ಶ್ರೀಧರ ಜಿ. ಭಿಡೆ ವಹಿಸಿದ್ದರು. ಬೆಳ್ತಂಗಡಿಯ ವಕೀಲರಾದ ಧನಂಜಯ ರಾವ್, ಎನ್.ಕೆ ಫಡಕೆ ಕೊಡ್ಡೋಳು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ. ದಾಸಪ್ಪ ಗೌಡ ಕಾಂಜಾನು, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಕಾಮತ್ ಉಪಸ್ಥಿತರಿದ್ದರು. ಪೂವಪ್ಪ ಗೌಡ ಕೊಂಡಮಲೆ, ಕೇಶವ ಫಡಕೆ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ, ಬಾಲಕೃಷ್ಣ .ಕೆ, ಮೋಹನ್ ಕಿಲ್ಲೂರು, ಊರ ಪರವೂರ ಭಕ್ತಾಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply


ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

November 2017
M T W T F S S
« Oct    
 12345
6789101112
13141516171819
20212223242526
27282930  

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top