Wed 22 Nov 2017, 4:26AM

ಹೆಚ್ಚಿನ ಸುದ್ದಿಗಳು

ಉಜಿರೆ ನಿತ್ಯಾಧರ್ ವಾಳೆಯ ವಾರ್ಷಿಕ ಹಬ್ಬ

Friday, November 3rd, 2017 | Suddi Belthangady | no responses

nithyadar valeಉಜಿರೆ : ಉಜಿರೆ ಸಂತ ಅಂತೋನಿ ಚರ್ಚ್‌ನ ವಾಳೆಯಲ್ಲೊಂದಾದ ನಿತ್ಯಾಧರ್ ವಾಳೆಯ ವಾರ್ಷಿಕ ಹಬ್ಬವು ಅ.29 ರಂದು ಹಲಕ್ಕೆ ವಾಲ್ಟರ್ ಸಿಕ್ವೇರಾ ಇವರ ಮನೆಯ ವಠಾರದಲ್ಲಿ ಜರಗಿತು.
ಈ ವಾರ್ಷಿಕ ಹಬ್ಬದ ಅಧ್ಯಕ್ಷತೆಯನ್ನು ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂ.ಫಾ| ಜೊಸೆಫ್ ಮಸ್ಕರೇನ್ಹಸ್ ವಹಿಸಿ ವಾಳೆಯ ಎಲ್ಲರು ಸಂಘಟಿತರಾಗಬೇಕು ಆಗಿದ್ದಲ್ಲಿ ಯಾವುದೇ ಸಂಸ್ಥೆ ಬಲಿಷ್ಠವಾಗುತ್ತದೆ ಎಂದರು. ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಂ.ಫಾ| ಉದಯ್ ಜೋಸೆಫ್, ಮೇರಿ ಇಮ್ಯಾಕ್ಯೂಲೆಟ್ ಕಾನ್ವೆಂಟಿನ ಧರ್ಮಭಗಿನಿ ಸಿ| ಡೋರಾ, ಪಾಲನಾ ಮಂಡಳಿಯ ಉಪಾಧ್ಯಕ್ಷ ಅರುಣ್ ರೆಬೆಲ್ಲೊ ಉಪಸ್ಥಿತರಿದ್ದರು. ಈ ಮೊದಲು ಸೇವೆ ಸಲ್ಲಿಸಿದ ಮಾಜಿ ವಾಳೆಯ ಗುರಿಕಾರ ಪ್ರಾನ್ಸಿಸ್ ಫೆರ್ನಾಂಡಿಸ್, ಹಿರಿಯರಾದ ಶ್ರೀಮತಿ ದುಲ್ಸಿನ್ ಡಿಸೋಜ, ಶ್ರೀಮತಿ ಫಿಲೊಮಿನಾ ಪಿಂಟೊ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಬ್ಬದ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಾಳೆಯ ಗುರಿಕಾರ ಬೆಳ್ತಂಗಡಿ ಪ್ರಿಯಾ ಇಂಟರ್‌ನ್ಯಾಶನಲ್‌ನ ಆಂಟನಿ ಫೆರ್ನಾಂಡಿಸ್ ಸ್ವಾಗತಿಸಿದರು. ವಿಶಾಲ್ ಪಿಂಟೊ, ವಿನಿತಾ ಡಿಸೋಜ, ಮೊರ್ಲಿನ್ ಪಿರೇರಾ ಕಾರ್ಯಕ್ರಮ ನಿರೂಪಿಸಿದರು. ವಾಳೆಯ ಪ್ರತಿನಿಧಿ ಶ್ರೀಮತಿ ಮೆಬುಲ್ ವೇಗಸ್ ವಂದಿಸಿದರು. ಶ್ರೀಮತಿ ಲವಿನಾ ಫೆರ್ನಾಂಡಿಸ್ ವರದಿ ವಾಚಿಸಿದರು. ವಾಳೆಯ ಇನ್ನೋರ್ವ ಪ್ರತಿನಿಧಿ ವಲೇರಿಯನ್ ಪಿಂಟೊ ಸಹಕರಿಸಿ ದರು. ಶ್ರೀಮತಿ ಜಯ, ಶ್ರೀಮತಿ ಗ್ಲೋರಿಯಾ ಫೆರೀಸ್ ಭಟ್, ಶ್ರೀಮತಿ ಐರಿನ್, ವಲೇರಿಯನ್ ಡಿಸೋಜ ಸಹಕಾರ ನೀಡಿದರು.

Leave a Reply


ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

November 2017
M T W T F S S
« Oct    
 12345
6789101112
13141516171819
20212223242526
27282930  

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top