Mon 20 Nov 2017, 5:23PM

ಹೆಚ್ಚಿನ ಸುದ್ದಿಗಳು

ತಾಲೂಕು ಮಟ್ಟದಲ್ಲಿ ಕನಕ ಜಯಂತಿ ಆಚರಣೆ ಕನಕದಾಸರು ಅಂತರಂಗದ ಮೌಲ್ಯಕ್ಕೆ ಒತ್ತು ನೀಡಿದವರು : ಚೊಕ್ಕಾಡಿ

Thursday, November 9th, 2017 | Suddi Belthangady | no responses

  Thaluku kanaka jayanthiಬೆಳ್ತಂಗಡಿ : ಹಬ್ಬಗಳ ಆಚರಣಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಕನಕ ಜಯಂತಿ ಆಚರಣೆ ಕಾರ್ಯಕ್ರಮವು ನ.೬ರಂದು ಬೆಳ್ತಂಗಡಿ ತಾಲೂಕು ಪಂಚಾಯತು ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಬೆಳ್ತಂಗಡಿ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ ದೀಪ ಬೆಳಗಿಸಿ ಉದ್ಘಾಟಿಸಿ, ಭಕ್ತಿ ಸಂಕೀರ್ತನೆ ಮೂಲಕ ದೇವರನ್ನು ಒಲಿಸಿಕೊಂಡ ಕನಕದಾಸರು ಕೀರ್ತನೆ ಮೂಲಕ ವಿಶ್ವಕ್ಕೆ ಧರ್ಮದ ಸಂದೇಶ ನೀಡಿದವರು. ಸಾಮಾನ್ಯ ವ್ಯಕ್ತಿಯೊಬ್ಬ ಸಾಧನೆ ಮಾಡಿದರೆ ಉನ್ನತಮಟ್ಟಕ್ಕೆ ಏರಬಹುದು ಎಂಬುದಕ್ಕೆ ಕನಕದಾಸರು ನಮಗೆಲ್ಲಾ ಆದರ್ಶರಾಗಿದ್ದಾರೆ ಎಂದರು.
ಮುಖ್ಯ ಭಾಷಣಗಾರರಾದ ಬೆಳಾಲು ಎಸ್.ಡಿ.ಯಂ. ಪ್ರೌಢ ಶಾಲಾ ಮುಖ್ಯ ಗುರುಗಳಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಕನಕ ದಾಸರ ಜೀವನ ಚರಿತ್ರೆಯನ್ನು ವಿವರಿಸಿ, ಭಕ್ತಿಪರಂಪರೆಯ ಮೂಲಕ ಜಗತ್ತಿಗೆ ಮಾನವೀಯತೆಯ ಮೌಲ್ಯದ ಸಂದೇಶ ನೀಡಿದ ಕನಕದಾಸರು ನಾಡು, ನುಡಿ, ಸಂಸ್ಕೃತಿಯ ಭಾಗವಾಗಿ ಬದುಕಿ, ಅಂತರಂಗದ ಮೌಲ್ಯಕ್ಕೆ ಒತ್ತು ನೀಡಿದವರು. ತನ್ನ ಕೃತಿಯ ಮೂಲಕ ಸಮಾಜವನ್ನು ತಿದ್ದಿ ಸರಿದಾರಿಗೆ ತರುವ ಪ್ರಯತ್ನ ಮಾಡಿ, ಸಮನ್ವಯತೆಯನ್ನು ಸಾರಿದವರು ಎಂದರು.
ಈ ದೇಶದಲ್ಲಿ ಎಲ್ಲಾ ಮಹಾನ್ ವ್ಯಕ್ತಿಗಳ, ಸಂತರ ದಿನಾಚರಣೆ ಮಾಡಿ ಎಂದು ಅವರು ಹೇಳಿಲ್ಲ. ಅವರು ಇದ್ದರೂ ಅದಕ್ಕೆ ಒಪ್ಪುತ್ತಿರಲಿಲ್ಲ. ನಾವು ಜಯಂತಿ ಆಚರಿಸುವ ಬದಲು ಅವರ ಜೀವನದ ಆದರ್ಶಗಳನ್ನು ತಿಳಿದುಕೊಂಡು ಅದನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ ಬಸವರಾಜ್ ಅಯ್ಯಣ್ಣನವರ್ ಮಾತನಾಡಿ ತನ್ನ ಊರಿನ ಸಮೀಪದ ಗ್ರಾಮದಲ್ಲಿ ಕನಕದಾಸರು ಜೀವಿಸಿದ್ದು, ಅವರ ಆದರ್ಶ ನಮಗೆಲ್ಲಾ ದಾರಿದೀಪವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿಯವರು ಮಾತನಾಡಿ ಕನಕದಾಸರು ತಮ್ಮ ಕೀರ್ತನೆ ಮೂಲಕ ಜಾತಿ ವ್ಯವಸ್ಥೆಯನ್ನು ಸಮಾಜದಿಂದ ಹೋಗಲಾಡಿಸಲು ಶ್ರಮಿಸಿದವರು. ಸ್ವಾರ್ಥದ ಕತ್ತಲೆಯನ್ನು ಹೊಡೆದೊಡಿಸಿ, ಜ್ಞಾನದ ಬೆಳಕನ್ನು ನೀಡಿದವರು ಎಂದರು.
ವೇದಿಕೆಯಲ್ಲಿ ತಹಶೀಲ್ದಾರ್ ಮಹಮ್ಮದ್ ಇಸಾಕ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯರಾದ ಗೋಪಿನಾಥ ನಾಯಕ್, ಕೃಷ್ಣಯ್ಯ ಆಚಾರ್, ತಾ.ಪಂ. ಸಹಾಯಕ ಲೆಕ್ಕಅಧೀಕ್ಷಕ ಗಣೇಶ್ ಪೂಜಾರಿ, ನ.ಪಂ. ಮುಖ್ಯಾಧಿಕಾರಿ ಜೆಸಿಂತಾ ಲೂವಿಸ್, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ಪಶುವೈದ್ಯಕೀಯ ಸಹಾಯಕ ನಿರ್ದೇಶಕ ಡಾ| ರತ್ನಾಕರ ಮಲ್ಯ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಲಕ್ಷ್ಮಣ ಶೆಟ್ಟಿ, ಶಿಕ್ಷಣ ಇಲಾಖೆಯ ಸುಭೋದ್ ಜಾದವ್, ಕಂದಾಯ ನಿರೀಕ್ಷ ರವಿ, ಬಿಸಿಎಂ ಇಲಾಖೆಯ ವಿಸ್ತರಣಾಧಿಕಾರಿ ಸುರೇಂದ್ರ, ಸಮಾಜ ಕಲ್ಯಾಣ ಇಲಾಖೆಯ ವಾರಿಜ ಮೊದಲಾದವರು ಉಪಸ್ಥಿತರಿದ್ದರು.
ಕಂದಾಯ ಇಲಾಖೆಯ ಶಂಕರ್ ಸ್ವಾಗತಿಸಿದರು. ತಾಲೂಕು ಸಂಯೋಜಕ ಜಯಾನಂದ ಕಾರ್ಯಕ್ರಮ ನಿರೂಪಿಸಿ, ಕಂದಾಯ ಇಲಾಖೆಯ ಹೇಮ ವಂದಿಸಿದರು.

Leave a Reply


ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

November 2017
M T W T F S S
« Oct    
 12345
6789101112
13141516171819
20212223242526
27282930  

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top