Mon 20 Nov 2017, 4:53PM

ಹೆಚ್ಚಿನ ಸುದ್ದಿಗಳು

ವೇಣೂರು ಲಯನ್ಸ್ ಕ್ಲಬ್‌ಗೆ ವಲಯಾಧ್ಯಕ್ಷರ ಭೇಟಿ

Thursday, November 9th, 2017 | Suddi Belthangady | no responses

venur lions club vitaraneಸೇವಾ ಚಟುವಟಿಕೆ * ನವ ಚೇತನ ಬುದ್ದಿಮಾಂದ್ಯ ಶಾಲೆ ವೇಣೂರಿಗೆ ಲ.ನಿರಂಜನ್ ಕೆ.ಎಸ್ ಹಾಗೂ ಲ.ಜಗದೀಶ್ಚಂದ್ರ ಡಿ.ಕೆ ಧನ ಸಹಾಯವನ್ನು ನೀಡಿದರು * ಕುಕ್ಕೇಡಿ ಗ್ರಾಮದ ಅಬ್ಬುಲ್ ಖಾದರ್ ಹಾಗೂ ಅವ್ವಮ್ಮ ದಂಪತಿಗಳ ಪುತ್ರ ಹಫೀಜ್‌ರ ಕಿಡ್ನಿ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವನ್ನು ನೀಡಲಾಯಿತು.

ವೇಣೂರು : ಲಯನ್ಸ್ ಕ್ಲಬ್ ವೇಣೂರಿಗೆ ವಲಯಾಧ್ಯಕ್ಷರ ಹಾಗೂ ಪ್ರಾಂತೀಯ ಅಧ್ಯಕ್ಷರ ಅಧೀಕೃತ ಭೇಟಿ ಕಾರ್ಯಕ್ರಮವು ವೇಣೂರಿನ ಜೆ.ಪಿ ಟವರ್‌ನಲ್ಲಿ ನ.6 ರಂದು ನಡೆಯಿತು. ಮುಖ್ಯಅತಿಥಿಗಳಾಗಿ ಪ್ರಾಂತ್ಯ 10 ವಲಯ 2ರ ವಲಯಧ್ಯಕ್ಷ ಲ.ವೆಂಕಟೇಶ್ ಎಂ.ಬಿ ಅಧೀಕೃತ ಭೇಟಿ ನೀಡಿದ್ದು ವೇಣೂರು ಲಯನ್ಸ್ ಕ್ಲಬ್‌ನ ಕಾರ್ಯಚಟುವಟಿಕೆ ಯನ್ನು ಶ್ಲಾಘಿಸಿದರು. ಪ್ರಾಂತ್ಯ 10 ರ ಪ್ರಾಂತ್ಯಾಧ್ಯಕ್ಷ ಲ.ನಿತ್ಯಾನಂದ ನಾವರ ಅಧೀಕೃತ ಭೇಟಿ ನೀಡಿ ವೇಣೂರು ಲಯನ್ಸ್ ಕ್ಲಬ್‌ನ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಎಲ್.ಸಿ.ಐ.ಎಫ್ ಸಂಯೋಜಕ ಲ. ಪ್ರವೀಣ್ ಕುಮಾರ ಇಂದ್ರ ಪಿ.ಎಮ್.ಜೆ.ಎಫ್ ಈಕಾರ್ಯಕ್ರಮಕ್ಕೆ ಶುಭಾಶಂಶನೆಗೈದು ಸೂಕ್ತ ಸಲಹೆಗಳನ್ನು ನೀಡಿದರು. ರಾಜ್ಯಪಾಲರ ಪ್ರಾಂತೀಯ ಪ್ರತಿನಿಧಿ ಲ.ಶಿವಪ್ರಸಾದ್ ಹೆಗ್ಡೆ,  ವಲಯ 1 ರ ವಲಯಾಧ್ಯಕ್ಷ ಎಸ್. ವಾಸು, ಲ.ಡಾ ಗೀತಾ ಪ್ರಕಾಶ್, ಲ.ಕುಡ್ಪಿ ಅರವಿಂದ ಶೆಣೈ, ಪ್ರಕಾಶ್ ಶೆಟ್ಟಿ ನೊಚ್ಚ ಶುಭ ಹಾರೈಸಿದರು. ವೇದಿಕೆಯಲ್ಲಿ ವೇಣೂರು ಕ್ಲಬ್ ಅಧ್ಯಕ್ಷ ನಿತೀಶ್.ಎಚ್, ಬೆಳ್ತಂಗಡಿ ಕ್ಲಬ್‌ನ ಲ.ಧರಣೇಂದ್ರ ಜೈನ್, ಅಳದಂಗಡಿಯ ಲ.ವಿಜಯ ಕುಮಾರ್ ಜೈನ್, ಕಾರ್ಯದರ್ಶಿ ಲ.ಸುಧೀರ್ ಕುಮಾರ್, ಕೋಶಾಧಿಕಾರಿ ಲ.ಮಿತ್ರ ಕುಮಾರ್ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ವೇಣೂರಿನ ಎಲ್ಲಾ ಸದಸ್ಯರು ಹಾಜರಿದ್ದರು.  ಲ.ಜಗನ್ನಾಥ ದೇವಾಡಿಗ ಪ್ರಾರ್ಥಿಸಿ, ಲ.ನಿತೀಶ್.ಎಚ್ ಸ್ವಾಗತಿಸಿ,      ಲ.ಸುಧೀರ್ ಕುಮಾರ್ ವರದಿ ವಾಚಿಸಿ, ಲ.ಜಗದೀಶ್ಚಂದ್ರ ಡಿ.ಕೆ ಧ್ವಜವಂದನೆ ಮಾಡಿ, ಲ.ಸುಧೀರ್‌ಕುಮಾರ್ ನೀತಿ ಸಂಹಿತೆ ಮಾಡಿ, ಲ.ನಿರಂಜನ್‌ಕೆ.ಎಸ್ ಹಾಗೂ ಲ.ಜಗನ್ನಾಥ ದೇವಾಡಿಗ ಅತಿಥಿಗಳ ಪರಿಚಯ ಮಾಡಿ, ಲ.ವಿನಯ್‌ಕುಮಾರ್‌ಇಂದ್ರ ಕಾರ್ಯಕ್ರಮ ನಿರೂಪಿಸಿದರು.

Leave a Reply


ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

November 2017
M T W T F S S
« Oct    
 12345
6789101112
13141516171819
20212223242526
27282930  

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top