Fri 15 Dec 2017, 2:04PM

ಹೆಚ್ಚಿನ ಸುದ್ದಿಗಳು

ಮಗುವಿನ ನಾಮಕರಣವನ್ನು ಅತ್ಯಂತ ವಿಶಿಷ್ಠವಾಗಿ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಘಟನೆ

Monday, November 20th, 2017 | Suddi Belthangady | no responses

namakarana

namakarana1ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಸುಜೀತ್ ಮತ್ತು ಎಸ್.ಡಿ.ಎಂ ಆಂಗ್ಲ ಮಾದ್ಯಮ ಪ್ರೌಢಶಾಲಾ ಅಧ್ಯಾಪಕಿ ಆಶಾ ಅವರ ಮಗು ಅರುಷಿ ನಾಮಕರಣ ನ 19 ರಂದು ಉಜಿರೆ ಅತ್ತಾಜೆಯಲ್ಲಿ ನಡೆಯಿತು. ಬೆಳಗ್ಗೆ ಯುವ ಕಲಾವಿದ ಮಣಿನಾಲ್ಕೂರು ಅವರ ಗಾಯನದ ಮೂಲಕ ಆರಂಭಗೊಂಡಿತು. ಬಳಿಕ ಅಖಿಲ ಭಾರತ ವಿಚಾರವಾದಿ ಸಂಘದ ರಾಷ್ಟ್ರೀಯ ಅಧ್ಯಕ್ಷ ಪ್ರೋ. ನರೇಂದ್ರ ನಾಯಕ್ ಅವರಿಂದ ವೈಜ್ಞಾನಿಕ ಮನೋಭಾವ ಬೆಳೆಸುವ ವಿವಿಧ ಕಾರ್ಯಕ್ರಮಗಳು ನಡೆದವು. ಜೊತೆಗೆ ಖ್ಯಾತ ಸಂಗೀತ ಕಲಾವಿದ ಶೀನಾ ನಾಡೋಲಿ ಅವರಿಂದ ಕೊಳಲಿನ ಮೂಲಕ ವಿವಿಧ ಹಾಡುಗಳನ್ನು ಹಾಡಿ ಮನರಂಜಿಸಿದರು.
ಮಗುವಿನ ನಾಮಕರಣವನ್ನು ಪವಾಡಗಳ ರಹಸ್ಯ ಬಯಲು ಮಾಡುವ ಮೂಲಕ ಆಚರಿಸಿರುವುದು ಶ್ಲಾಘನೀಯ. ಇತ್ತೀಚೆಗೆ ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾದ ಮೌಢ್ಯ ನಿಷೇಧ ಕಾಯ್ದೆ ಜನರಲ್ಲಿ ಬೇರೂರಿರುವ ಮೌಢ್ಯವನ್ನು ತೊಲಗಿಸುವುದಾಗಿದೆ. ಇಂತಹ ಕಾಯ್ದೆ ಜ್ಯಾರಿಯಾದ ಈ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಸಿರುವ ಸುಜೀತ್ ದಂಪತಿಗಳ ಕಾರ್ಯ ಅಭಿನಂದನೀಯ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾಗವಹಿಸಿದ ಜನರನ್ನು ಉಪಯೋಗಿಸಿಕೊಂಡು ವೈಜ್ಞಾನಿಕ ಮನೋಭಾವ ಬೆಳೆಸುವ ಕಾರ್ಯಕ್ರಮವನ್ನು ನರೇಂದ್ರ ನಾಯಕ್ ನಡೆಸಿಕೊಟ್ಟರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top