Sat 16 Dec 2017, 5:42PM

ಹೆಚ್ಚಿನ ಸುದ್ದಿಗಳು

ಶಿರ್ಡಿಸಾಯಿ ಸತ್ಯಸಾಯಿ ಸೇವಾಕ್ಷೇತ್ರದಲ್ಲಿ ಹರಿಕಥಾ ಕಾರ್ಯಕ್ರಮ

Thursday, November 23rd, 2017 | Suddi Belthangady | no responses

  Sathyasayi harikathartha kryakramaಬೆಳ್ತಂಗಡಿ: ನ.19 ರಂದು ವಾರ್ಷಿಕ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾಯಿ ಕ್ಷೇತ್ರದಲ್ಲಿ ಮಹಿಳೆಯರಿಂದ ಲಲಿತ ಸಹಸ್ರನಾಮ ಪಠಣ, ಸಾಯಿ ಸಹಸ್ರನಾಮ ಪಠಣ, ಪಾದುಕ ನಾಮಾವಳಿ ಭಜನೆ ಮತ್ತು ಹರಿಕಥಾ ಕಾರ್ಯಕ್ರಮ ಜರಗಿತು.
ಸತ್ವ ಪರೀಕ್ಷೆ ಎಂಬ ಹರಿಕಥಾ ಕಾಲಕ್ಷೇಪವನ್ನು ಶ್ರೀಮತಿ ಸುವರ್ಣ ಕುಮಾರಿ ಮೋಹನ್ ಕಲ್ಲುರಾಯ ಇವರು ನಡೆಸಿಕೊಟ್ಟು ಭಕ್ತರ ಮನಸೆಳೆದರು. ಇವರು ಯಕ್ಷಗಾನ ತಾಳಮದ್ದಳೆ, ಗಮಕ ಹಾಗೂ ಧಾರ್ಮಿಕ ಉಪನ್ಯಾಸ ಮಾಡುತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತು ಜೂನಿಯರ್ ಕಾಲೇಜು ಬೆಳ್ತಂಗಡಿ ಇಲ್ಲಿ ಉಪನ್ಯಾಸಕಿ ಆಗಿ ಸೇವೆ ಸಲ್ಲಿಸುತ್ತಾ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಇವರನ್ನು ಮಹಿಳಾ ಸದಸ್ಯರು ಗೌರವಿಸಿದರು. ಹಾರ್ಮೋನಿಯಂನಲ್ಲಿ ಮಧೂರು ಮೋಹನ್ ಕಲ್ಲುರಾಯ, ತಬಲಾದಲ್ಲಿ ಶಿವಾನಂದ ಯಾತನೂರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಮಹಿಳೆಯರನ್ನು ಸೀರೆ ಮತ್ತು ಪ್ರಸಾದ ನೀಡಿ ಗೌರವಿಸಲಾಯಿತು. ಮಕ್ಕಳಿಗೆ ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಮಾಡಲಾಯಿತು. ನಂತರ ನಾರಾಯಣ ಸೇವೆ ನೀಡಲಾಯಿತು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top