Sat 16 Dec 2017, 7:25PM

ಹೆಚ್ಚಿನ ಸುದ್ದಿಗಳು

ಯುವವಾಹಿನಿ ವೇಣೂರು ಘಟಕದ ಉದ್ಘಾಟನಾ ಸಮಾರಂಭ

Friday, December 1st, 2017 | Suddi Belthangady | no responses

Yuvavahini

yuvavahini1ವೇಣೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು ಯುವವಾಹಿನಿಯ ೨೫ನೇ ನೂತನ ಘಟಕ ಯುವವಾಹಿನಿ ವೇಣೂರು ಘಟಕದ ಉದ್ಘಾಟನಾ ಸಮಾರಂಭವು ಇಂದು(ಡಿ. 1) ವೇಣೂರಿನ ಗಾರ್ಡನ್ ವ್ಯೂ ಹಾಲ್‌ನಲ್ಲಿ ನಡೆಯಿತು.
ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿದರು. ಅಧ್ಯಕ್ಷತೆಯನ್ನು ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ವಹಿಸಿದ್ದರು.
ವೇದಿಕೆಯಲ್ಲಿ ಅತಿಥಿಗಳಾಗಿ ಬೆಂಗಳೂರು ಖ್ಯಾತ ನ್ಯಾಯವಾದಿ ನವನೀತ್ ಡಿ. ಹಿಂಗಾಣಿ, ಬೆಳ್ತಂಗಡಿ ಶ್ರೀ ಗು.ಸ್ವಾ.ಸೇ. ಸಂಘ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ. ಸುವರ್ಣ, ವೇಣೂರು ಗು.ಸ್ವಾ.ಸೇ.ಸಂ. ಅಧ್ಯಕ್ಷ ಪೂವಪ್ಪ ಪೂಜಾರಿ ಪರನೀರು, ಬೆಳ್ತಂಗಡಿ ಗುರುದೇವ ಬ್ಯಾಂಕ್ ನಿರ್ದೇಶಕ
ಜಗದೀಶ್ಚಂದ್ರ ಡಿ.ಕೆ., ರಮಾನಂದ ಸಾಲ್ಯಾನ್ ಮುಂಡೂರು, ಬೆಳ್ತಂಗಡಿ ಯು.ಘಟಕ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ರಾಜಶ್ರೀ ರಮಣ್, ಪ್ರಶಾಂತ್ ಮಚ್ಚಿನ, ಸಂತೋಷ್ ಕುಮಾರ್ ಉಪ್ಪಾರು, ಕೃಷ್ಣಕುಮಾರ್ ಟಾಪ್ ಎಂಟರ್‌ಟ್ರೈನರ್‍ಸ್ ವೇಣೂರು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪೆರಾಡಿ ಕೋಟಿ-ಚೆನ್ನಯ ದರ್ಶನ ಪಾತ್ರಿ ಬಾಬು ಪೂಜಾರಿ, ಕಾಶಿಪಟ್ಣ ನಾಟಿ ವೈದ್ಯ ಮಾನ್ಯಪ್ಪ ಪೂಜಾರಿ, ಪ್ರತಿಭಾನ್ವಿತ ಚಿತ್ರ ಕಲಾವಿದ ಅಂಕಿತ್ ಬಂಗೇರ ದಡ್ಡಾಲ್‌ಪಲ್ಕೆ ಗುಂಡೂರಿ ಇವರುಗಳನ್ನು ಸನ್ಮಾನಿಸಲಾಯಿತು.

Leave a Reply


ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

December 2017
M T W T F S S
« Nov    
 123
45678910
11121314151617
18192021222324
25262728293031

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top