Wed 13 Dec 2017, 10:45PM

ಹೆಚ್ಚಿನ ಸುದ್ದಿಗಳು

ಸರಳಿಕಟ್ಟೆ-ಈದ್ ಮೀಲಾದ್ ಆಚರಣೆ

Saturday, December 2nd, 2017 | Suddi Belthangady | no responses

saralikatte

saralikatte1ಬೆಳ್ತಂಗಡಿ : ಇಲ್ಲಿನ ಬಾರ್ಯ ಗ್ರಾಮದ ಸರಳಿಕಟ್ಟೆ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮವು ನಡೆಯಿತು. ಸುಬಹಿ ನಮಾಝ್‌ನ ನಂತರ ಶೈಖುನಾ ಅಬ್ಬಾಸ್ ಉಸ್ತಾದ್ ನೇತ್ರತ್ವದಲ್ಲಿ ಮೌಲಿದ್ ಮಜ್ಲಿಸ್ ನೊಂದಿಗೆ ಪ್ರಾರಂಭವಾದ ಕಾರ್ಯಕರ್ಮವು ಇಡೀ ದಿನ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಬದ್ರಿಯಾ ಜುಮ್ಮಾ ಮಸೀದಿ-ಸರಳಿಕಟ್ಟೆ ಅಧ್ಯಕ್ಷ ಬಹು ಅಬ್ದುಲ್ ಹಮೀದ್ ಹಾಜಿಯವರು ಧ್ಜಜಾರೋಹಣ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಖತೀಬ್ ಉಸ್ತಾದರಾದ ಬಹು ಬಹು ಮುತ್ತಲಿಬ್ ಸಖಾಫಿ ಉಸ್ತಾದ್, ಎಸ್.ಎಸ್.ಎಫ್ ಅಧ್ಯಕ್ಷ ಬಹು ಅಬ್ದುಲ್ ಲತೀಫ್ ಮಾಸ್ಟರ್ ಸರಳಿಕಟ್ಟೆ, ಸ್ಥಳೀಯ ಮದರಸಾ ಸದರ್ ಉಸ್ತಾದರಾದ ಬಹು ಅಬ್ಬಾಸ್ ಮದನಿ ಉಸ್ತಾದ್, ಸ್ಥಳೀಯ ಮದ್ರಸಾ ಅಧ್ಯಾಪಕ ಬಹು ಇಬ್ರಾಹಿಂ ಖಲೀಲ್ ಸ ಅದಿ ಉಸ್ತಾದ್, ಸ್ವಾಲಿಹ್ ಹನೀಫಿ, ಶರೀಫ್ ಮುಸ್ಲಿಯಾರ್, ಜಮಾ ಅತ್ ಕಾರ್ಯದರ್ಶಿ ಬಹು ಅಬ್ದುಲ್ ಲತೀಫ್ ಹಾಜಿ, ಉಪಾಧ್ಯಕ್ಷರುಗಳಾದ ಬಹು ಉಸ್ಮಾನ್ ಹಾಜಿ ಸರಳಿಕಟ್ಟೆ, ಯೂಸುಫ್ ಹಾಜಿ ಕುರುಬರ ಪಾಲು, ಮೀಲಾದ್ ಸ್ವಾಗತ ಸಮಿತಿಯ ಅಧ್ಯಕ್ಷ ಬಹು ಅಹ್ಮದ್ ಕುಂಞ ಸರಳಿಕಟ್ಟೆ, ಕೋಶಾಧಿಕಾರಿಗಳಾದ ಬಹು ಅಬ್ದುಲ್ ಖಾದರ್ ಪುಯಿಲ, ಯೂಸುಫ್ ಹಾಜಿ ಸರಳಿಕಟ್ಟೆ, ಎಸ್.ವೈ.ಎಸ್. ನೇತಾರರಾದ ಅಬ್ದುಲ್ ಹಮೀದ್ ಮಿಸ್ಬಾಹಿ ಉಸ್ತಾದ್, ಬಹುಅಬ್ದುಲ್ ಸಮದ್. ಎಸ್ ಅಬ್ದುಲ್ ನಾಸಿರ್.ಎಸ್, ಮುಸ್ತಫಾ ಕುರುಬರ ಪಾಲು, ಅಬ್ದುಲ್ ರವೂಫ್.ಪಿ.ಎಸ್, ಎಸ್.ಎಸ್.ಎಫ್. ಪ್ರಧಾನ ಕಾರ್ಯದರ್ಶಿಗಳಾದ ಬಹು ನೌಶಾದ್.ಎಸ್, ನೌಫಲ್ ಪಿ.ಎಮ್, ಎಸ್.ಎಸ್.ಎಫ್ ಉಪಾಧ್ಯಕ್ಷರುಗಳಾದ ಝಕರಿಯಾ ಪಿ.ಎಸ್, ಅಬ್ದುಲ್ ನಾಸಿರ್ ಮುಈನಿ ಸೇರಿದಂತೆ ಜಮಾ ಅತ್ ನ ಪ್ರಮುಖರು, ಎಸ್.ಎಸ್.ಎಫ್ ಹಾಗೂ ಎಸ್.ಎಸ್.ಎಫ್.ನ ಪದಾಧಿಕಾರಿಗಳು, ಮುತ ಅಲ್ಲಿಮರು, ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top