Wed 13 Dec 2017, 1:46PM

ಹೆಚ್ಚಿನ ಸುದ್ದಿಗಳು

ಗೇರುಕಟ್ಟೆ : ತಂಡದಿಂದ ಹಲ್ಲೆ

Tuesday, December 5th, 2017 | Suddi Belthangady | no responses

halle

halle1ಗೇರುಕಟ್ಟೆ : ಇಲ್ಲಿ ತಂಡವೊಂದು ತಮ್ಮದೇ ಕೋಮಿನ ಯುವಕರ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಘಟನೆ ಡಿ. 4 ರಂದು ನಡೆದಿದೆ. ಗೇರುಕಟ್ಟೆಯ ನಿವಾಸಿಗಳಾದ ತಸ್ಲೀಮ್, ಆರೀಸ್, ಶಿಹಾಬ್ ಗಾಯಗೊಂಡವರು. ತಸ್ಲೀಮ್ ಹಾಗೂ ಆರೀಸ್ ಸಹೋದರರಾಗಿದ್ದು, ಇವರು ಗೇರುಕಟ್ಟೆಯ ಬಸ್ ತಂಗುದಾಣದ ಸಮೀಪದ ಅಂಗಡಿಯೊಂದರಲ್ಲಿ ಕುಳಿತುಕೊಂಡಿದ್ದರು. ಈ ವೇಳೆ ಅಲ್ಲಿಗೆ ಬಂದ ತಮ್ಮದೇ ಕೋಮಿನ ಯಾಕೂಬ್, ಉಮರಬ್ಬ, ಇರ್ಫಾನ್, ರಿಸ್ವಾನ್, ಅಬೂಬಕ್ಕರ್, ಹೈದರ್, ಅಜೀಜ್, ರವೂಫ್, ಆದಂ ಬ್ಯಾರಿ ಇವರ ತಂಡ ತಸ್ಲೀಮ್ ಹಾಗೂ ಆರೀಸ್ ಮೇಲೆ ಹಲ್ಲೆ ನಡೆಸಿದೆ. ಹಲ್ಲೆ ಮಾಡುವುದನ್ನು ತಡೆಯಲು ಬಂದ ಶಿಹಾಬ್ ಮೇಲೂ ಹಲ್ಲೆ ನಡೆಸಿದೆ. ಹಳೆ ದ್ವೇಷದ ಹಿನ್ನಲೆಯಲ್ಲಿ ಹಲ್ಲೆ ನಡೆದಿದೆ ಎನ್ನಲಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top