Sat 16 Dec 2017, 11:13PM

ಹೆಚ್ಚಿನ ಸುದ್ದಿಗಳು

ಬೆಳ್ತಂಗಡಿಯಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ ನಮ್ಮ ಕೊಡುಗೆ ಸಮಾಜದ ನಿರೀಕ್ಷೆ ಈಡೇರಿಸಬೇಕು: ಡಾ.ಯಶೋವರ್ಮ

Thursday, December 7th, 2017 | Suddi Belthangady | no responses

lions club kanasuಬೆಳ್ತಂಗಡಿ : ನಾವು ಗಳಿಸಿದ ಸಂಪತ್ತಿನ ಸ್ವಲ್ವ ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ನೀಡಿ ಸಮಾಜದ ಕಣ್ಣುಗಳಾಗಬೇಕು. ನಾವು ನೀಡುವ ಕೊಡುಗೆ ಸಮಾಜಕ್ಕೆ ಉಪಯೋಗವಾಗಬೇಕು. ಸಮಾಜ ಏನನ್ನು ನಿರೀಕ್ಷಿಸುತ್ತದೆ ಅದನ್ನು ಕೊಡಬೇಕೇ ಹೊರತು ನಮಗೆ ಅನಿಸಿದ್ದನ್ನು ನೀಡಿದರೆ ಹೆಚ್ಚಿನ ಫಲದೊರೆಯದು ಎಂದು ಉಜಿರೆ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರೊ| ಡಾ.ಬಿ. ಯಶೋವರ್ಮ ಹೇಳಿದರು.
ಅವರು ಡಿ.3ರಂದು ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ವಠಾರದಲ್ಲಿ ನಡೆದ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಲಯನ್ಸ್ ಜಿಲ್ಲೆ 317ಡಿ ಪ್ರಾಂತ್ಯ 10 ಇದರ ಪ್ರಾಂತೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, `ನಿರೀಕ್ಷೆ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ನಮ್ಮ ಬದುಕಿಗೆ ಉದಾತ್ತವಾದ ಧ್ಯೇಯ ಇರುವಂತೆ ಸಂಘ-ಸಂಸ್ಥೆಗಳಿಗೂ ಇದು ಅನ್ವಯಿಸುತ್ತದೆ. ನಾವು ಸಮಾಜಕ್ಕೆ ಏನು ಕೊಡುಗೆ ನೀಡಬಹುದು ಎಂಬ ಬಗ್ಗೆ ಚಿಂತನೆ ಮಾಡಿ, ನಮ್ಮ ಪರಿಧಿಯನ್ನು ವಿಸ್ತರಿಸಬೇಕು. ಸಂಸ್ಥೆಯ ಧ್ಯೇಯವನ್ನು ಉಳಿಸಿ, ಬೆಳೆಸಿದಾಗ, ನಾವು ಅದರಲ್ಲಿ ಸದಸ್ಯರಾಗಿರುವುದು ಸಾರ್ಥಕವಾ ಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಮಾಜಿ ರಾಜ್ಯಪಾಲ ಲ| ಎಂ.ಬಿ ಸದಾಶಿವ ದಿಕ್ಸೂಚಿ ಭಾಷಣ ಮಾಡಿ, ನಮ್ಮ ಮುಂದೆ ಅನೇಕ ಆದರ್ಶ ವ್ಯಕ್ತಿಗಳು ಕನಸ್ಸನ್ನು ಬಿತ್ತುತ್ತಾರೆ ಅದನ್ನು ಬೆನ್ನತ್ತಿ ನಾವು ಹೋಗಿ ಗುರಿ ಸಾಧಿಸಬೇಕು. ಇದರಲ್ಲಿ ನಮಗೆ ಹೆಚ್ಚಿನ ಜವಾಬ್ದಾರಿಯೂ ಇರುತ್ತದೆ. ನಮ್ಮ ಕನಸಿನ ಮೂಲಕ ಸಮಾಜವನ್ನು ಗಟ್ಟಿಗೊಳಿಸುವ ದೀಕ್ಷೆ ತೆಗೆದುಕೊಳ್ಳಬೇಕು. ಭಾವನೆಗಳು ಇದ್ದಾಗ ಕನಸು ಶೀಘ್ರವಾಗಿ ನನಸಾಗುತ್ತದೆ ಎಂದರು. ಲಯನ್ಸ್ ಅಂಧತ್ವ ನಿವಾರಣೆಗೆ ಹೆಚ್ಚು ಆದ್ಯತೆ ನೀಡಿ ಪ್ರಪಂಚದಾದ್ಯಂತ ಯೋಜನೆಗಳನ್ನು ಅನುಷ್ಠಾನ
ಮಾಡಿ ಇದರಲ್ಲಿ ಯಶಸ್ಸು ಕಂಡಿದೆ ಎಂದು ತಿಳಿಸಿದರು.
ಅತಿಥಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರೊ| ಪೀತಾಂಬರ ಹೆರಾಜೆ ಮಾತನಾಡಿ, ಲಯನ್ಸ್‌ನಂತಹ ಸೇವಾ ಸಂಸ್ಥೆಗಳು ಸಮಾಜಕ್ಕೆ ನಾಯಕತ್ವವನ್ನು ಕೊಡುವುದರೊಂದಿಗೆ, ನಮಗೆ ಶಿಸ್ತು ಬದ್ಧ ಜೀವನಕ್ಕೆ ಬೇಕಾದ ಅವಕಾಶಗಳನ್ನು ನಿರ್ಮಿಸಿಕೊಡುತ್ತದೆ. ಇಂತಹ ಸಂಸ್ಥೆಗಳಲ್ಲಿ ಯುವಕರು ಹೆಚ್ಚು ತೊಡಗಿಸಿಕೊಳ್ಳುವುದರ ಜೊತೆಗೆ ಜನರ ಸಹಭಾಗಿತ್ವವೂ ಬೇಕು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಉದ್ಘಾಟನೆಯನ್ನು ಲಯನೆಸ್ ಪುಷ್ಪಾವತಿ ಎನ್. ನಾವರ ದೀಪ ಬೆಳಗಿಸಿ ಉದ್ಘಾಟಿಸಿ, ಲಯನ್ಸ್ ಸಂಸ್ಥೆ ಸೇವಾ ಮನೋಭಾವದ ಸಂಸ್ಕಾರವನ್ನು ಕಲಿಸಿದೆ ಎಂದರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂತೀಯ ಅಧ್ಯಕ್ಷ ಲ| ನಿತ್ಯಾನಂದ ನಾವರ ಅವರು ಮಾತನಾಡಿ ಪ್ರಾಂತೀಯ ಸಮ್ಮೇಳನ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಮಡಂತ್ಯಾರಿನಲ್ಲಿ ಲಯನ್ಸ್ ಕ್ಲಬ್ ಆಗಬೇಕು. ಈಗಾಗಲೇ ಮೂಡಬಿದ್ರೆಯಲ್ಲಿ ಕ್ಲಬ್ ಆರಂಭಿಸಿ ಮಡಂತ್ಯಾರಿಗೆ ಬಂದಿರುವ ಫಾ| ಬೇಸಿಲ್‌ವಾಸ್‌ರಲ್ಲಿ ವಿನಂತಿಸಿದರು. ಲಯನ್ಸ್ ರಾಜ್ಯಪಾಲ ಹೆಚ್.ಆರ್. ಹರೀಶ್, ಪ್ರಾಂತೀಯ ಸಮ್ಮೇಳನ ಸಮಿತಿ ಅಧ್ಯಕ್ಷ ಲ| ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮಕ್ಕೆ ಶುಭ ಕೋರಿದರು.
ವೇದಿಕೆಯಲ್ಲಿ ಪ್ರಾಂತೀಯ ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಲ| ಪ್ರವೀಣ್ ಕುಮಾರ್ ಇಂದ್ರ, ಕೋಶಾಧಿಕಾರಿ ಲ| ಬಿ.ಕೆ. ಸೀತಾರಾಮ ರಾವ್, ಬೆಳ್ತಂಗಡಿ ಲಯನ್ಸ್ ಕ್ಲಬ್ ಸ್ಥಾಪಕ ಸದಸ್ಯರಾದ ಲ| ಎಂ.ಜಿ. ಶೆಟ್ಟಿ, ಲ| ವಿ.ಆರ್. ನಾಯಕ್, ಹಿರಿಯ ಸದಸ್ಯ ಲ| ಬಿ. ರಘುರಾಮ ಗಾಂಭೀರ, ರಾಜ್ಯಪಾಲರ ಪ್ರತಿನಿಧಿ ಲ| ಕೆ. ಶಿವಪ್ರಸಾದ್ ಹೆಗ್ಡೆ, ವಲಯಾಧ್ಯಕ್ಷ-| ಲ| ವಾಸು ಎಸ್, ವಲಯಾಧ್ಯಕ್ಷ -|| ಲ| ವೆಂಕಟೇಶ್ ಎಂ.ಬಿ, ಲಯನ್ಸ್ ಅಧ್ಯಕ್ಷರುಗಳಾದ ಲ| ರಾಮಚಂದ್ರ ಆಚಾರ್ಯ ಮೂಡಬಿದ್ರೆ, ಲ| ವಿಶ್ವನಾಥ ಸಾಲ್ಯಾನ್ ಶಿರ್ತಾಡಿ, ಲ| ಜೆರಾಲ್ಡ್ ಲೋಬೊ ಆಲಂಗಾರು, ಲ| ರಮೇಶ್ ಶೆಟ್ಟಿ ತೋಡಾರ್-ಮಿಜಾರ್, ಲ| ವಿಜಯಕುಮಾರ್ ಜೈನ್ ಅಳದಂಗಡಿ, ಲ| ಮುರಳಿ ಬಿ. ನಾರಾವಿ, ಲ| ನಿತೇಶ್ ಹೆಚ್. ವೇಣೂರು, ಪ್ರಾಂತೀಯ ಅಧ್ಯಕ್ಷರುಗಳಾದ ನರೇಂದ್ರನಾಥ ಕಾಡೂರು, ಎಂ.ಪಿ. ಪೂವಯ್ಯ, ರತ್ನಚರ್ಮಣ, ಜಯರಾಮ ದೇರಪ್ಪಜ್ಜನ ಮನೆ, ಮೋಹನ್‌ದಾಸ್ ಶೆಟ್ಟಿ, ನರಸಿಂಹ ಶೆಟ್ಟಿ, ಕಡ್ಪು ಅರವಿಂದ ಶೆಣೈ, ಆಶಾ ಸಿ. ಶೆಟ್ಟಿ, ಓಸ್ವಾಲ್ಡ್ ಡಿ’ಸೋಜಾ ಉಪಸ್ಥಿತರಿದ್ದರು.
ಲ| ಸೀತಾಲಕ್ಷ್ಮೀ ದಿನೇಶ್‌ಕುಮಾರ್ ಇವರ ಪ್ರಾರ್ಥನೆ ಬಳಿಕ ಸಮ್ಮೇಳನ ಸಮಿತಿ ಕಾರ್‍ಯಾಧ್ಯಕ್ಷ ಲ| ರಾಜು ಶೆಟ್ಟಿ ಸ್ವಾಗತಿಸಿದರು. ಲ| ಜಗನ್ನಾಥ ಶೆಟ್ಟಿ ಉಜಿರೆ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು. ಧ್ವಜವಂದನೆಯನ್ನು ಲ| ಫ್ರಾಂಕ್ ಹಿಲಾರಿ ಡಿ’ಸೋಜಾ ನೆರವೇರಿಸಿದರು. ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಧರಣೇಂದ್ರ ಕೆ. ಜೈನ್ ಲಯನ್ಸ್‌ಗಳಾದ ಸುಶೀಲ ಎಸ್. ಹೆಗ್ಡೆ, ಮೇದಿನಿ ಡಿ. ಗೌಡ, ದೇವಿಪ್ರಸಾದ್, ವಿಜಯಕುಮಾರ್ ಜೈನ್, ವಸಂತ ಶೆಟ್ಟಿ ಶ್ರದ್ಧಾ, ಎಂ.ಜಿ. ಶೆಟ್ಟಿ, ಅಶ್ರಫ್ ಆಲಿ ಕುಂಞಿ, ಪಾಲಾಕ್ಷ ಸುವರ್ಣ, ಸುರೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ ನೊಚ್ಚ, ವಿನ್ಸೆಂಟ್ ಟಿ. ಡಿ’ಸೋಜಾ, ಹೆಚ್. ರಾಮಕೃಷ್ಣ ಗೌಡ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಶಿಕ್ಷಕ ಲ| ಅಜಿತ್‌ಕುಮಾರ್ ಕಾರ್ಯಕ್ರಮ ನಿರೂಪಿಸಿ, ಸಮ್ಮೇಳ ಸಮಿತಿ ಪ್ರಧಾನ ಕಾರ್ಯದರ್ಶಿ ಲ| ಕೆ. ಕೃಷ್ಣ ಆಚಾರ್ಯ ವಿಶೇಷ ಆಕರ್ಷಣೆಯಾಗಿ ಯಕ್ಷಗಾನ ಶೈಲಿಯಲ್ಲಿ ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Reply


ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

December 2017
M T W T F S S
« Nov    
 123
45678910
11121314151617
18192021222324
25262728293031

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top