Mon 18 Dec 2017, 9:50PM

ಹೆಚ್ಚಿನ ಸುದ್ದಿಗಳು

ಪರವೂರಲ್ಲಿ ನಮ್ಮವರು : ಸಿಲಿಕಾನ್ ಇಂಡಿಯಾ-2017 ಸರ್ವೆ ದೇಶದ ಪ್ರತಿಷ್ಠಿತ ಹತ್ತು ಕ್ಯಾಟರಿಂಗ್ ಸರ್ವಿಸ್‌ಗೆ ಶಶಿಧರ ಶೆಟ್ಟಿಯವರ `ಶಶಿ ಕ್ಯಾಟರಿಂಗ್’ ಆಯ್ಕೆ

Thursday, December 7th, 2017 | Suddi Belthangady | no responses

Shashi shettyಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಶಕ್ತಿ ನಗರ ನಿವಾಸಿ ಪ್ರಸ್ತುತ ಗುಜರಾತಿನ ಬರೋಡದಲ್ಲಿ ಉದ್ಯಮಿಯಾಗಿರುವ ಶಶಿಧರ ಶೆಟ್ಟಿ ಇವರ ಸಂಸ್ಥೆ `ಶಶಿ ಕ್ಯಾಟರಿಂಗ್ ಸರ್ವಿಸ್’ ಇದು ದೇಶದ ಪ್ರತಿಷ್ಠಿತ ಹತ್ತು ಕ್ಯಾಟರಿಂಗ್ ಸರ್ವಿಸ್ ಸಂಸ್ಥೆಗಳಲ್ಲಿ ಸ್ಥಾನ ಪಡೆದುಕೊಂಡಿದೆ.
ಸಿಲಿಕಾನ್ ಇಂಡಿಯಾ ಎಂಬ ಹೆಸರಾಂತ ಪತ್ರಿಕೆ ದೇಶದಾದ್ಯಂತ ಕಾರ್ಪೋರೇಟ್ ಕ್ಯಾಟರಿಂಗ್‌ಸರ್ವಿಸ್ ಪ್ರೋವೈಡರ್-2017 ಎನ್ನುವ ಸರ್ವೆಯನ್ನು ನಡೆಸಿದ್ದು, ಇದರಲ್ಲಿ ಶಶಿಧರ ಶೆಟ್ಟಿ ಇವರ ಸಂಸ್ಥೆ ದೇಶದ ಹತ್ತು ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದು ಎಂಬ ಪ್ರತಿಷ್ಠಿತ ಸ್ಥಾನವನ್ನು ಪಡೆದುಕೊಂಡು ಬೆಳ್ತಂಗಡಿ ತಾಲೂಕಿಗೆ ಕೀರ್ತಿಯನ್ನು ತಂದಿದೆ. ಶಶಿಧರ ಶೆಟ್ಟಿಯವರು ಗುಜರಾತಿನ ಬರೋಡದಲ್ಲಿ ಶಶಿ ಕ್ಯಾಟರಿಂಗ್ ಸರ್ವಿಸ್ ಎಂಬ ಸಂಸ್ಥೆಯನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಈ ಸಂಸ್ಥೆ ಗ್ರಾಹಕರಿಗೆ ನೀಡುತ್ತಿರುವ ಅತ್ಯುತ್ತಮ ಪ್ರೀತಿ-ವಿಶ್ವಾಸದ ಸೇವೆ ಮತ್ತು ಗುಣಮಟ್ಟದ ಆಹಾರ, ಸುಮಾರು ಆರು ಸಾವಿರಕ್ಕೂ ಹೆಚ್ಚು ಮಂದಿ ಯುವಕರಿಗೆ ಉದ್ಯೋಗ ನೀಡಿ ಅವರ ಜೀವನಕ್ಕೆ ಆಧಾರವಾಗಿರುವುದು ಹಾಗೂ ಈ ಸಂಸ್ಥೆ ಅನೇಕ ಆಧುನಿಕ ಸವಲತ್ತು ಹೊಂದಿರುವುದು, ಜನರು ಉತ್ತಮ ಭರವಸೆಯನ್ನು ಹೊಂದಿರುವುದು ಮೊದಲಾದ ಅಂಶಗಳನ್ನು ಸರ್ವೆಯಲ್ಲಿ ಪರಿಗಣಿಸಿ ಈ ಸಂಸ್ಥೆಯನ್ನು ರಾಷ್ಟ್ರದ ಅತ್ಯುತ್ತಮ ಸಂಸ್ಥೆ ಎಂಬ ಸಾಲಿಗೆ ಆಯ್ಕೆಮಾಡಲಾಗಿದೆ. ಈ ಸಂಸ್ಥೆ ಅನೇಕ ಬಾರಿ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಗುಜರಾತ್, ಹರಿಯಾಣ, ದೆಹಲಿ, ಕೊಲ್ಕತ್ತಾ, ಅಸ್ಸಾಂ, ಪಂಜಾಬ್, ಮಧ್ಯಪ್ರದೇಶ್, ರಾಜಸ್ತಾನ, ಕರ್ನಾಟಕ ಹಾಗೂ ದೇಶದ ಹಲವು ಭಾಗಗಳಲ್ಲಿ ತಮ್ಮ ಸಂಸ್ಥೆಯನ್ನು ಹೊಂದಿದ್ದಾರೆ. ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶವಾದ ಗುರುವಾಯನಕೆರೆಯಿಂದ ಗುಜರಾತ್‌ಗೆ ತೆರಳಿ ತನ್ನ ಸರಳ ವ್ಯಕ್ತಿತ್ವ ಮತ್ತು ಎಲ್ಲರೊಡನೆಯೂ ಬೆರೆಯುವ ಸ್ವಭಾವ ಹೊಂದಿರುವ ಶಶಿಧರ್ ಶೆಟ್ಟಿ ಅವರ ಸಾಧನೆ ಎಲ್ಲ ಯುವಕರಿಗೆ ಆದರ್ಶವಾಗಿದೆ.
ಇವರು ಕುವೆಟ್ಟು ಗ್ರಾಮದ ಗುರುವಾಯನಕೆರೆ ನವಶಕ್ತಿ ದಿ| ಬಾಬು ಶೆಟ್ಟಿ ಮತ್ತು ಶ್ರೀಮತಿ ಕಾಶಿಶೆಟ್ಟಿ ಇವರ ಪುತ್ರರಾಗಿರುತ್ತಾರೆ.

Leave a Reply


ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

December 2017
M T W T F S S
« Nov    
 123
45678910
11121314151617
18192021222324
25262728293031

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top