Thu 14 Dec 2017, 4:18PM

ಹೆಚ್ಚಿನ ಸುದ್ದಿಗಳು

ಡಾ. ಕೆ.ಎಸ್. ಮೋಹನ ನಾರಾಯಣರಿಗೆ ಬೀಳ್ಕೊಡುಗೆ

Thursday, December 7th, 2017 | Suddi Belthangady | no responses

mohan narayana bilkodugeಗೌರವ ಸ್ವೀಕರಿಸಿ ಮಾತನಾಡಿದ ಡಾ.ಕೆ.ಎಸ್.ಮೋಹನನಾರಾಯಣ ಸಂಸ್ಥೆಯೊಂದಿಗಿನ ವೃತ್ತಿಪರ ಬಾಂಧವ್ಯದ ಕುರಿತು ಪ್ರಸ್ತಾಪಿಸಿದರು. ಹಿರಿಯರ ಮಾರ್ಗದರ್ಶನದ ನೆರವಿನೊಂದಿಗೆ ಸಂಸ್ಥೆಯ ಬೆಳವಣಿಗೆಯ ಹೆಜ್ಜೆಗಳೊಂದಿಗೆ ಕ್ರಮಿಸಿದ್ದನ್ನು ಉಲ್ಲೇಖಿಸಿದರು. ಆರಂಭದಿಂದಲೂ ನಿವೃತ್ತಿಯಾಗು ವವರೆಗೂ ಲಭ್ಯವಾದ ಸಹೋದ್ಯೋಗಿ ಗಳ ಸಹಕಾರ-ಬೆಂಬಲವನ್ನು ಸ್ಮರಿಸಿದರು.
ಸಂಸ್ಥೆಗಾಗಿ ಕಾರ್ಯನಿರ್ವಹಿಸಿದ ಆತ್ಮತೃಪ್ತಿ ನನ್ನೊಂದಿಗಿದೆ. ಪ್ರಾಮಾಣಿಕತೆ ಯಿಂದ ದುಡಿದ ತೃಪ್ತಿಯಿದೆ. ಪ್ರಾಂಶುಪಾಲ ಹುದ್ದೆಯ ನಿರ್ವಹಣೆಯ ವೇಳೆ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ನೀಡಿ ವೃತ್ತಿಪರ ಮತ್ತು ಸಾಂಸ್ಥಿಕ ಸಾಧನೆಗೆ ಮಹತ್ವ ನೀಡಿದೆ. ಅದಕ್ಕನುಗುಣವಾಗಿ ಎಲ್ಲರೂ ಸ್ಪಂದಿಸಿದ್ದು ಕಾರ್ಯನಿರ್ವಹಣೆಯ ಉತ್ಸಾಹವನ್ನು ಹೆಚ್ಚಿಸಿತು ಎಂದು ಹೇಳಿದರು.

ಉಜಿರೆ : ಎಸ್.ಡಿ.ಎಂ ಕಾಲೇಜಿನ ಬೆಳವಣಿಗೆಗೆ ಮೌಲಿಕ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಂಶುಪಾಲ ಡಾ.ಕೆ.ಎಸ್. ಮೋಹನನಾರಾಯಣ ಅವರಿಗೆ ಇತ್ತೀಚೆಗೆ ಹೃತ್ಪೂರ್ವಕ ಬೀಳ್ಕೊಡುಗೆ ನೀಡಲಾಯಿತು.
ಡಾ.ಕೆ.ಎಸ್.ಮೋಹನನಾರಾಯಣ ಅವರ ಅವಧಿಯಲ್ಲಿ ಸಂಸ್ಥೆಗೆ ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯದ ಎನ್‌ಆರ್‌ಐಎಫ್ ಮನ್ನಣೆ ದೊರಕಿರುವುದು ಸಂತಸದ ಸಂಗತಿ. ನಿರಂತರ ಕಾರ್ಯಬದ್ಧತೆಯೊಂದಿಗಿನ ಪ್ರಜ್ಞೆಯು ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುತ್ತದೆ. ಅಲ್ಲದೇ ಶೈಕ್ಷಣಿಕ ವಲಯದಲ್ಲಿ ವೃತ್ತಿಪರ ಘನತೆಯನ್ನು ಕಾಯ್ದುಕೊಳ್ಳುವುದಕ್ಕೂ ನೆರವಾಗುತ್ತದೆ. ಅದಕ್ಕೆ ಎನ್‌ಆರ್‌ಐಎಫ್ ಮನ್ನಣೆಯೇ ಸಾಕ್ಷಿ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರು ಅಭಿಪ್ರಾಯಪಟ್ಟರು.
ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ದಿನೇಶ್ ಚೌಟ ಅವರು ಡಾ.ಕೆ.ಎಸ್.ಮೋಹನನಾರಾಯಣ ಅವರ ವೃತ್ತಿಪರ ಬದುಕು ಮತ್ತು ವ್ಯಕ್ತಿತ್ವದ ವಿಶೇಷತೆಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕ ಪ್ರೊ.ಎಸ್.ಎನ್. ಕಾಕತ್ಕರ್ ಅವರು ಮಾತನಾಡಿ ಡಾ.ಕೆ.ಎಸ್. ಮೋಹನನಾರಾಯಣ ಅವರದ್ದು ಸಾರ್ಥಕ ಬದುಕು ಎಂದರು. ಮೃದು ಮನಸಿನೊಂದಿಗಿನ ವ್ಯಕ್ತಿತ್ವ ಅವರದ್ದು ಎಂದು ಗುರುತಿಸಿದರು.
ನಿವೃತ್ತರಾದ ಪ್ರಾಂಶುಪಾಲ ಡಾ.ಕೆ.ಎಸ್. ಮೋಹನನಾರಾಯಣ ಅವರಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷರಾದ ಪ್ರೊ.ಕೆ.ಎಸ್.ಪ್ರಭಾಕರ್ ಗೌರವ ಸಮರ್ಪಿಸಿ ಮಾತನಾಡಿದರು.
ಮೋಹನನಾರಾಯಣ ಅವರು ಆರಂಭದಿಂದಲೂ ನಿವೃತ್ತಿಯಾಗು ವವರೆಗೆ ಕಾರ್ಯನಿರ್ವಹಿಸಿದ ವಿವರಗಳನ್ನು ನೆನಪಿಸಿಕೊಂಡರು. ನಿವೃತ್ತಿ ಜೀವನದ ಯಶಸ್ಸು ಹಾರೈಸಿದರು.
ಇದೇ ಸಂದರ್ಭದಲ್ಲಿ ಪ್ರೊ.ಟಿ.ಎನ್.ಕೇಶವ್ ಅವರನ್ನು ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ರನ್ನಾಗಿ ನಿಯೋಜಿಸಿದ್ದನ್ನು ಘೋಷಿಸ ಲಾಯಿತು. ಡಾ.ಕೆ.ಎಸ್. ಮೋಹನ ನಾರಾಯಣ ಅವರ ಪತ್ನಿ ಪೂರ್ಣಿಮಾ ಮೋಹನನಾರಾಯಣ ಉಪಸ್ಥಿತರಿದ್ದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top