Mon 18 Dec 2017, 9:45PM

ಹೆಚ್ಚಿನ ಸುದ್ದಿಗಳು

ತೋಟತ್ತಾಡಿ ಸಂತ ಅಂತೋನಿ ಚರ್ಚ್‌ನ ಸದಸ್ಯರ ಸಹಕಾರದಿಂದ ಅಪಘಾತದಲ್ಲಿ ಮೃತರಾದ ಟೋಮಿ ಕುಟುಂಬಕ್ಕೆ ಉಚಿತ ಮನೆ

Thursday, December 7th, 2017 | Suddi Belthangady | no responses

maneತಮ್ಮ ವ್ಯಾಪ್ತಿಯಲ್ಲೇ ಇರುವ ಅರ್ಹರಿಗೆ ಸಹಾಯ ಮಾಡೋಣ : ಬಿಷಪ್ ಲಾರೆನ್ಸ್ ಮುಕ್ಕುಯಿ
ಸೇವಾ ಚಟುವಟಿಕೆ ಮಾಡಲು ಊರಿಡೀ ಅಲೆಯಬೇಕಾಗಿಲ್ಲ, ತಮ್ಮ ವ್ಯಾಪ್ತಿಯಲ್ಲಿ, ಅಕ್ಕ ಪಕ್ಕದಲ್ಲಿ ಯಾರು ಸಹಾಯ ಪಡೆಯಲು ಅರ್ಹರಿದ್ದಾರೆ ಅಂತವರನ್ನು ನಾವೇ ಮನಗಂಡು ನೆರವು ನೀಡುವ ಮೂಲಕ ಸಮಾಜ ಸೇವೆ ಮಾಡಬೇಕು. ಶೈಲಾ ಅವರಿಗೆ ಮನೆ ನಿರ್ಮಿಸಿಕೊಡುವ ಮೂಲಕ ಅಂತಹಾ ಮಹತ್ಕಾರ್ಯಕ್ಕೆ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಶುಭ ಕೋರಿದರು. ಇದಕ್ಕೆ ನೆರವು ನೀಡಿದ ಎಲ್ಲರೂ ಅಭಿನಂದನಾರ್ಹರು ಎಂದೂ ತಿಳಿಸಿದರು.

ತೋಟತ್ತಾಡಿ: ಇತ್ತೀಚೆಗೆ ಸೋಮಂತಡ್ಕ ಎಂಬಲ್ಲಿ ರಸ್ತೆ ಅಪಘಾತದಲ್ಲಿ ಮರಣವನ್ನಪ್ಪಿದ ತೋಟತ್ತಾಡಿ ಗ್ರಾಮದ ಕುತ್ರಿಜಾಲು ನಿವಾಸಿ ಟೋಮಿ ಮೂಲನ್ ಅವರ ಮನೆಯವರ ಸಂಕಷ್ಟವನ್ನು ಅರಿತು ತೋಟತ್ತಾಡಿ ಸಂತ ಅಂತೋನಿ ಚರ್ಚ್‌ನ ಸದಸ್ಯರ ಸಹಕಾರದಿಂದ ನೂತನವಾಗಿ ಮನೆ ನಿರ್ಮಿಸಿಕೊಟ್ಟು ಆದರ್ಶ ಮೆರೆಯಲಾಗಿದೆ.
ಈ ನೂತನ ಮನೆಯ ಕೀಲಿಕೈ ಹಸ್ತಾಂತರ ಕಾರ್ಯಕ್ರಮ ನ. 29 ರಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ, ದಿ. ಟೋಮಿ ಅವರ ಧರ್ಮಪತ್ನಿ ಶೈಲಾ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ತೋಟತ್ತಾಡಿ ಸಂತ ಅಂತೋನಿ ಚರ್ಚ್‌ನ ಧರ್ಮಗುರುಗಳಾದ ರೆ. ಫಾ. ತೋಮಸ್ ಪಾರೆಕ್ಕಾಟಿಲ್, ಸಹದರ್ಮ ಗುರುಗಳಾದ ರೆ. ಫಾ. ಜೋಸೆಫ್ ಮುಕ್ಕಾಟ್, ಟ್ರಸ್ಟಿಗಳಾದ ಸಂತೋಷ್ ಕೆ.ಜೆ, ಆಂಟನಿ ಐಕರ, ಆಂಟನಿ ವಾಳೂಕಾರನ್, ಸನ್ನಿ ನಿರ್ಮಲ, ಗ್ರಾ.ಪಂ. ಸದಸ್ಯ ಶಾಜಿ ತೋಪಿಲ್, ಧರ್ಮ ಭಗಿನಿಯರು ಮತ್ತು ಊರವರು ಉಪಸ್ಥಿತರಿದ್ದರು. ರೆ. ಫಾ. ತೋಮಸ್ ಪಾರೇಕ್ಕಾಟಿಲ್ ಅವರು ಧನ್ಯವಾದವಿತ್ತರು.

Leave a Reply


ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

December 2017
M T W T F S S
« Nov    
 123
45678910
11121314151617
18192021222324
25262728293031

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top