Sat 25 Mar 2017, 1:01AM

ಹೆಚ್ಚಿನ ಸುದ್ದಿಗಳು

ವಾರ ಭವಿಷ್ಯ

ಮಾ. 23 ರಿಂದ ಮಾ. 29ರವರೆಗೆ

 ಮೇಷ

ಈ ವಾರದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಉದ್ಯೋಗದ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುವುದು. ಸಲಹೆಯಿಂದ ಸಂತಸ. ಹೊಸ ಯೋಜನೆಗಳ ಅನುಷ್ಠಾನಕ್ಕೆ ಸಕಾಲ.

 ವೃಷಭ

ಈ ವಾರದಲ್ಲಿ ವ್ಯಾಪಾರದ ಒಪ್ಪಂದಗಳು ನಿಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಲಿದೆ. ಭೂ ವಿವಾದಗಳು ಮುಗಿಯಲಿವೆ. ಮಿತ್ರರಿಂದ ಲಾಭವಿದೆ. ದೂರ ಪ್ರಯಾಣ.

 ಮಿಥುನ

ಈ ವಾರದಲ್ಲಿ ಮನೆಗಾಗಿ ಹೊಸ ವಸ್ತುಗಳ ಖರೀದಿ. ಬೆಲೆಬಾಳುವ ಉಡುಗೊರೆ ಖರೀದಿ. ಆರೋಗ್ಯದಲ್ಲಿ ಸಮಸ್ಯೆ. ಮಾನಸಿಕ ನೆಮ್ಮದಿ ಕಡಿಮೆ. ನಿಮ್ಮ ಇಷ್ಟು ದಿನದ ಶ್ರಮಕ್ಕೆ ಪ್ರತಿಫಲ ಸಿಗುವ ಸಮಯ.

 ಕರ್ಕಾಟಕ

ಈ ವಾರದಲ್ಲಿ ಹಳೆಯ ಬಂಧುಮಿತ್ರರ ಆಗಮನದಿಂದ ಸಂತಸ. ಪಾಲುದಾರಿಕೆಯಲ್ಲಿ ಉತ್ತಮ ಧನಲಾಭ. ಮಾನಸಿಕ ಶಾಂತಿ. ಹೊಸ ವಾಹನ ಖರೀದಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ದೂರ ಪ್ರಯಾಣದಿಂದ ಸಂತಸ.

 ಸಿಂಹ

ಈ ವಾರದಲ್ಲಿ ಸೌಹಾರ್ದಯುತ ವಾತಾವರಣ. ಶುಭ ಸುದ್ದಿ. ಕುಟುಂಬದಲ್ಲಿ ಉತ್ತಮ ಸ್ಥಾನಮಾನ. ದುಷ್ಟರ ಸಹವಾಸದಿಂದ ದೂರವಿರಿ.

 ಕನ್ಯಾ
ಈ ವಾರದಲ್ಲಿ ನಿರುದ್ಯೋಗಿಗಳಿಗೆ ಉತ್ತಮವಾದ ಉದ್ಯೋಗಾವಕಾಶ. ಸಾಮಾಜಿಕ ಸಮಾರಂಭದಲ್ಲಿ ಭಾಗವಹಿಸುವಿರಿ. ಅಪಘಾತ ಸಾಧ್ಯತೆಯಿದೆ. ಆರೋಗ್ಯದಲ್ಲಿ ಸಮಸ್ಯೆ. ಕೆಲಸ ಕಾರ್ಯಗಳು ನಿರೀಕ್ಷಿತ ಸಮಯದಲ್ಲಿ ಮುಕ್ತಾಯ.
 ತುಲಾ
ಈ ವಾರದಲ್ಲಿ ಮಿಶ್ರಫಲಗಳು ದೊರೆಯುವುದು. ಹೊಸ ವಸ್ತುಗಳ ಖರೀದಿಯಲ್ಲಿ ಮೋಸ. ಕೆಲಸದಲ್ಲಿ ಅಧಿಕ ಒತ್ತಡ. ಖರ್ಚುಗಳು ಜಾಸ್ತಿಯಾಗುವುದು. ರಾಜಕೀಯ ಸಮಾರಂಭಗಳಲ್ಲಿ ಭಾಗಿ.
 ವೃಶ್ಚಿಕ
ಈ ವಾರದಲ್ಲಿ ಶತ್ರುಗಳ ಆಕಸ್ಮಿಕ ದಾಳಿಯಿಂದ ಕಂಗಾಲಾಗುವಿರಿ. ಕುಟುಂಬದಲ್ಲಿ ಸಹಕಾರ. ಮಿತ್ರರೊಂದಿಗೆ ಸಂತಸದ ವಾತಾವರಣ. ವೇದಾಂತಿ ಯೊಬ್ಬರಿಂದ ಸೂಕ್ತ ಮಾರ್ಗದರ್ಶನ. ಜನಪ್ರಿಯತೆ.
 ಧನು
ಈ ವಾರದಲ್ಲಿ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಬೇಡದ ವಿಚಾರಗಳಲ್ಲಿ ಚರ್ಚೆ ಮಾಡಬೇಡಿ. ದೊಡ್ಡ ಹೂಡಿಕೆಗಳು ಸದ್ಯಕ್ಕೆ ಬೇಡ. ಮಕ್ಕಳ ಕಟು ಮಾತುಗಳಿಂದ ಮನಸ್ಸಿಗೆ ನೋವು. ದೂರ ಪ್ರಯಾಣ
 ಮಕರ
ಈ ವಾರದಲ್ಲಿ ಮಿತ್ರರ ಭೇಟಿಯಿಂದ ಸಾಮಾಜಿಕ ಗೌರವ ಎಲ್ಲಾ ಅಡೆತಡೆಗಳ ನಿವಾರಣೆ. ಆರ್ಥಿಕವಾಗಿ ಅಡೆತಡೆ. ವಿನಾಕಾರಣ ಚರ್ಚೆ. ಪ್ರಯಾಣದಿಂದ ಅನಾನುಕೂಲತೆ. ಕೆಲಸದ ಒತ್ತಡ ಜಾಸ್ತಿ.
 ಕುಂಭ
ಈ ವಾರದಲ್ಲಿ ಆರೋಗ್ಯದಲ್ಲಿ ತೊಂದರೆ. ಬಿಸಿಲಿಗೆ ಹೋಗಬೇಡಿ. ಸರ್ಕಾರಿ ಕೆಲಸಗಳಲ್ಲಿ ಜಯ. ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚೆ. ಶುಭ ಕಾರ್ಯಗಳ ನೆರವೇರಿಕೆ. ಖರ್ಚಿನ ಹೆಚ್ಚಳದಿಂದ ಮಾನಸಿಕ ಚಿಂತೆ.
ಮೀನ
ಈ ವಾರದಲ್ಲಿ ಉದ್ಯೋಗದಲ್ಲಿ ಹಳೆಯ ಒತ್ತಡ ಮಾಯವಾಗಲಿದೆ. ಅಪಾಯದ ಹಣಕಾಸಿನ ವ್ಯವಹಾರ ಬೇಡ. ಕುಟುಂಬದಲ್ಲಿ ಜವಾಬ್ದಾರಿ ಪೂರೈಸಿ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top