Sun 18 Jun 2017, 2:31AM

ಹೆಚ್ಚಿನ ಸುದ್ದಿಗಳು

ಉಜಿರೆ : ಧರ್ಮಸ್ಥಳದಲ್ಲಿ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಜೂ.16ರಂದು ನಡೆದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಮದ್ಯ ಮುಕ್ತ ಕರ್ನಾಟಕ ರೂಪಿಸುವ ಬಗ್ಗೆ ಸರ್ಕಾರಕ್ಕೆ ಒತ್ತಡ ಹೇರಲು ನಿರ್ಧರಿಸಲಾಯಿತು.
ರಾಜ್ಯದ 23 ವೇದಿಕೆಗಳ 120 ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.
ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ, ನಿರ್ದೇಶಕ ವಿವೇಕ್ ವಿ. ಪಾಯಸ್, ಕೆ. ವಸಂತ ಸಾಲಿಯಾನ್, ದೇವದಾಸ್ ಹೆಬ್ಬಾರ್ ಉಪಸ್ಥಿತರಿದ್ದರು.

swamiji betiತಮಿಳುನಾಡಿನ ನಾಗಪಟ್ನಂ ಜಿಲ್ಲೆಯ ಪೂಜ್ಯ ಶ್ರೀ ಅಂಬಾಲವನ ದೇಶಿಕ ಸ್ವಾಮೀಜಿ ಜೂ. 16 ರಂದು ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿದರು. ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಮೀಜಿಯರನ್ನು ಗೌರವಿಸಿದರು.

praneethಮಾಲಾಡಿ ಗ್ರಾಮದ ಉರೆಸಾಗು ಶ್ರೀದುರ್ಗಾ ಕೃಪಾ ಮನೆಯ ಶ್ರೀನಿವಾಸ ಮತ್ತು ಶ್ರೀಮತಿ ಸುಜಾತ ದಂಪತಿಗಳ ಪುತ್ರ ಪ್ರಣೀತ್ ನ 2ನೇ ವರ್ಷದ ಹುಟ್ಟುಹಬ್ಬವನ್ನು ಮೇ. 28ರಂದು ಆಚರಿಸಲಾಯಿತು.

sakshi sಧರ್ಮಸ್ಥಳ: ಇಲ್ಲಿನ ಗಿರಿಕೋರೆ ನಿವಾಸಿ ಸುರೇಂದ್ರ ಮತ್ತು ವಿದ್ಯಾ ದಂಪತಿ ಪುತ್ರಿ ಸಾಕ್ಷಿ ಎಸ್ ಅವರ ಎರಡನೇ ವರ್ಷದ ಹುಟ್ಟುಹಬ್ಬ ಜೂ. 16 ರಂದು ಜರುಗಲಿದೆ.

aashifa a rಮುಂಡಾಜೆ ಗ್ರಾಮದ ಮುಬಾರಕ್ ಕಾಟೇಜ್ ನಿವಾಸಿ, ಸುದ್ದಿ ಪತ್ರಿಕೆ ವರದಿಗಾರ ಅಚ್ಚು ಮುಂಡಾಜೆ ಮತ್ತು ಆಶಿಕಾ ದಂಪತಿ ಪುತ್ರಿ ಆಶಿಫಾ ಎ. ಆರ್ ಅವರ 5 ನೇ ವರ್ಷದ ಹುಟ್ಟುಹಬ್ಬವನ್ನು ಜೂ. 14 ರಂದು ಆಚರಿಸಲಾಯಿತು.

astinಹುಣ್ಸೆಕಟ್ಟೆ ಗ್ರಾಮದ ಸಾಲೊಮ್ ಮನೆಯ ಲ್ಯಾನ್ಸಿ ಸೀಸಿಲಿಯಾ ದಂಪತಿಯ ಪುತ್ರ ಆಸ್ಟಿನ್‌ನ 8ನೇ ವರುಷದ ಹುಟ್ಟುಹಬ್ಬವನ್ನು ಜೂ.9 ರಂದು ಆಚರಿಸಲಾಯಿತು.

surendra-bhavyaಪಡಂಗಡಿ ಗ್ರಾಮದ ಬೋಳ ಮನೆಯ ಕೃಷಿಕರಾದ ಚೆನ್ನಪ್ಪ ಅಂಚನ್ ಮತ್ತು ಶ್ರೀಮತಿ ಬೇಬಿ ದಂಪತಿಗಳ ಪುತ್ರ ಗುರುವಾಯನಕೆರೆ ಪಿಲಿಚಾಮುಂಡಿ ಕಲ್ಲು ಲುಕ್‌ಸ್ಮಾರ್ಟ್ ಟೈಲರ್ ಶಾಪ್‌ನ ಮಾಲಕ ಸುರೇಂದ್ರ ಕುಮಾರ್‌ರವರ ವಿವಾಹ ನಿಶ್ಚಿತಾರ್ಥವು ತೆಂಕಕಾರಂ ದೂರು ಗ್ರಾಮದ ಶಿವಾನುಗ್ರಹ ಮನೆಯ ರಮೇಶ್ ಬಂಗೇರ ಮತ್ತು ಶ್ರೀಮತಿ ವೇದಾವತಿ ಯವರ ಪುತ್ರಿ ಭವ್ಯರೊಂದಿಗೆ ವಧುವಿನ ಮನೆಯಲ್ಲಿ ಜೂ.11 ರಂದು ಜರಗಿತು.

prashanth1ಬೆಳ್ತಂಗಡಿ : ಜೂ. 8 ರಂದು ಬೈಕಿನಲ್ಲಿ ತೆರಳುತ್ತಿರುವ ಸಂದರ್ಭ ಗೇರುಕಟ್ಟೆ ಸಮೀಪ ಮಾರುತಿ ಶಿಫ್ಟ್ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಪ್ರಶಾಂತ್ ದೊಂಡೋಲೆ (24ವ) ಅವರು ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

jana samparka sabheಧರ್ಮಸ್ಥಳ : ಕ.ರಾ.ರ. ಸಾರಿಗೆ ಸಂಸ್ಥೆ ಧರ್ಮಸ್ಥಳ ಘಟಕದಲ್ಲಿ ಇಂದು (ಜೂ.16) ಧರ್ಮಸ್ಥಳ ಘಟಕ ವ್ಯಾಪ್ತಿಯ ಸಾರ್ವಜಿನಿಕರ ಜನಸಂಪರ್ಕ ಸಭೆ ನಡೆಯಿತು.

koyyuruಬೆಳ್ತಂಗಡಿ : ಲಾಯಿಲ ಕೊಯ್ಯೂರು ಕ್ರಾಸ್ ಬಳಿಯ ಮಹಾದೇವಿ ಮರದ ಮಿಲ್ಲಿನಲ್ಲಿ ಲಾರಿಯಿಂದ ಮರ ಇಳಿಸುತಿದ್ದ ಸಂದರ್ಭ ಲಾರಿಯ ಮೇಲಿಂದ ಜಾರಿ ಉಜಿರೆ  ಅತ್ತಾಜೆ ನಿವಾಸಿ ಕೊರಗಪ್ಪ (66ವ) ಎಂಬ ಕೂಲಿ ಕಾರ್ಮಿಕ ತಲೆಗೆ ಗಂಭೀರ ಗಾಯಗೂಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆ ಸಾವನ್ನಪ್ಪಿದ್ದಾರೆ.

shreesha - pavithraಉಜಿರೆ ಅಜಿತನಗರ ಸಪ್ತಮಿ ನಿವಾಸಿ, ಉಜಿರೆಯ ಶ್ರೀ.ಧ.ಮಂ.ಹಿ.ಪ್ರೌಡ ಶಾಲಾ ಶಿಕ್ಷಕ ಹರ್ಷ ಕೆದ್ಲಾಯ ಮತ್ತು ವಾರಿಜ ದಂಪತಿಗಳ ಪುತ್ರ ಶ್ರೀಶ ಅವರ ವಿವಾಹವು ತಮಿಳ್ನಾಡು ಥೇಣಿ ಜಿಲ್ಲೆಯ ಕೊಂಬೈ ಗ್ರಾಮದ ಶ್ರೀಮತಿ ಚಂದ್ರಿಕ ಮತ್ತು ವೆಂಕಟಾಚಲಂದ ದಂಪತಿಗಳ ಪುತ್ರಿ ಪವಿತ್ರ ರೊಂದಿಗೆ ಜೂ. 8 ರಂದು ಕೊಂಬೈ ಗ್ರಾಮದ ಶ್ರೀ ಆರ್ಯ ವೈಶ್ಯಕಲ್ಯಾಣಮಹಲ್ ಮತ್ತು ಆರತಕ್ಷತೆಯು ಜೂ.11 ರಂದು ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ನಡೆಯಿತು.

Vanishreeನಿಡ್ಲೆ ಗ್ರಾಮದ ಬೂಡುಜಾಲು ಶ್ರೀಮತಿ ರತ್ನಾವತಿ ಮತ್ತು ಎ. ಜಿನ್ನಪ್ಪ ಗೌಡರ ಪುತ್ರಿ ವಾಣಿಶ್ರೀ ಬಿ. ಇವರ ವಿವಾಹವು ಪುತ್ತೂರು ತಾಲೂಕು 102ನೇ ನೆಕ್ಕಿಲಾಡಿ ಗ್ರಾಮದ ಕೋರಿಯಾರ್ ಶ್ರೀಮತಿ ಗಿರಿಜಾ ಮತ್ತು ಗುಡ್ಡಪ್ಪ ಗೌಡರ ಪುತ್ರ ಸುರೇಶ್ ರೊಂದಿಗೆ ಜೂ. 14ರಂದು ಕಡಬದ ಅನುಗ್ರಹ ಸಭಾಭವನದಲ್ಲಿ ಜರುಗಿತು.

pathanjali 1

pathanjaliಉಜಿರೆ : ಪತಂಜಲಿ ಯೋಗ ಸಮಿತಿ, ಪತಂಜಲಿ ಚಿಕಿತ್ಸಾಲಯ, ಉಜಿರೆ ರೋಟರಿ ಕ್ಲಬ್, ಬೆಳ್ತಂಗಡಿ, ಜೆಸಿಐ ಬೆಳ್ತಂಗಡಿ ಮಂಜುಶ್ರೀ, ಶ್ರೀ ಶಾರಾದಾ ಸೇವಾ ಟ್ರಸ್ಟ್ ಉಜಿರೆ ಹಾಗೂ ದ.ಕ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಮಂಗಳೂರು ಇವರ ಸಹಭಾಗಿತ್ವದಲ್ಲಿ ಹರಿದ್ವಾರ ಅಂತರಾಷ್ಟ್ರೀಯ ಯೋಗ ಗುರು ಬಾಬಾ ಶ್ರೀ ರಾಮ್‌ದೇವ್ ಗುರೂಜಿಯವರ ಅನುಭವಿ ಯೋಗ ಶಿಕ್ಷಕರಿಂದ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಉಚಿತ ಯೋಗ ಹಾಗೂ ಪ್ರಾಣಾಯಾಮ ತರಬೇತಿ ಶಿಬಿರವು ಜೂ. 15 ರಿಂದ ಜೂ. 21 ರವರೆಗೆ ನಡೆಯಲಿದ್ದು ಇದರ ಉದ್ಘಾಟನೆಯು ಜೂ. 15 ರಂದು ಶ್ರೀ ಶಾರದಾ ಮಂಟಪ ಉಜಿರೆಯಲ್ಲಿ ನಡೆಯಿತು.

maddadka 1

maddadkaಮದ್ದಡ್ಕದಲ್ಲಿ ಇಂದು ಬೆಳಿಗ್ಗೆ ಸುರಿದ ಮಳೆಗೆ ಅ0ಗಡಿ ಹೋಟೆಲ್ ಒಳಗೆ ನುಗ್ಗಿದ ನೀರು.

jci manjushree kutumbosavaಬೆಳ್ತಂಗಡಿ : ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ವತಿಯಿಂದ ಜೆಸಿ ಸದಸ್ಯ ಗುರುರಾಜ್ ಗುರಿಪಳ್ಳ ಇವರ ಪೊರ್ಲು ನಿವಾಸದಲ್ಲಿ ಜೂ-10 ರಂದು ಕುಟುಂಬೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ಸಂತೋಷ ಪಿ. ಕೋಟ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಡ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಸುಂದರ ಪೂಜಾರಿ ಉಪಸ್ಥಿತರಿದ್ದು ಮಾತನಾಡಿ ಹಿಂದಿನ ಕಾಲದಲ್ಲಿ ಕೂಡು ಕುಟುಂಬವಿದ್ದು ಎಲ್ಲರು ಒಟ್ಟಗೆ ಬದುಕುತ್ತಿದ್ದರು. ಈಗ ಅಂತಹ ಕುಟುಂಬ ತುಂಬಾ ವಿರಳವಾಗಿದೆ. ಈ ನಿಟ್ಟಿನಲ್ಲಿ ಇಂತಹ ಕುಟುಂಬೋತ್ಸವ ಕಾರ್ಯಕ್ರಮ ಆಯೋಜಿಸುವುದರಿಂದ ನಮ್ಮ ಸಂಬಂಧಗಳು, ಗೌರವ, ಇನ್ನಷ್ಟು ಗಟ್ಟಿಯಾಗುತ್ತದೆ ಎಂದರು.
ವೇದಿಕೆಯಲ್ಲಿ ನಿಕಟಪೂರ್ವಧ್ಯಕ್ಷ ವಲಯಾಧಿಕಾರಿ ವಸಂತ ಶೆಟ್ಟಿ ಶ್ರದ್ದಾ, ವಲಯಾಧಿಕಾರಿ ಚಿದಾನಂದ ಇಡ್ಯಾ, ಕಾರ್ಯದರ್ಶಿ ರಂಜಿತ್ ಎಚ್.ಡಿ, ಜೆಸಿರೆಟ್ ಅಧ್ಯಕ್ಷೆ ಅಮೃತಾ, ಜೂನಿಯರ್ ಜೇಸಿ ಅಧ್ಯಕ್ಷ ಮನೋಜ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುಂದರ ಪೂಜಾರಿ ಮತ್ತು ಶ್ರೀಮತಿ ಸುನಂದ, ಗುರುರಾಜ್ ಹಾಗೂ ಅರುಣ್ ಕುಮಾರ್ ಇವರನ್ನು ಜೆಸಿ ವತಿಯಿಂದ ಸನ್ಮಾನಿಸಲಾಯಿತು. ಪೂರ್ವಧ್ಯಕ್ಷರಾದ ಪ್ರಮೋದ್ ಆರ್ ನಾಯಕ್, ಕೇಶವ ಪೈ, ಶ್ರೀನಾಥ್ ಕೆ.ಎಂ, ಸಂತೋಷ್ ಸಾಲಿಯನ್ ಕಾಪಿನಡ್ಕ, ರವೀಂದ್ರ ಶೆಟ್ಟಿ ಬಳಂಜ, ನಾರಾಯಣ ಶೆಟ್ಟಿ, ತುಕರಾಮ್ ಬಿ, ಉಪಸ್ಥಿತರಿದ್ದು ಕುಟುಂಬೋತ್ಸವ ಆಚರಣೆಯ ಮಹತ್ವವನ್ನು ತಿಳಿಸಿದರು.
ಘಟಕದ ಉಪಾಧ್ಯಕ್ಷ ಪ್ರಸಾದ್ ಬಿ.ಎಸ್ ವೇದಿಕೆ ಆಹ್ವಾನ ಮಾಡಿ, ಸದಸ್ಯ ವಿಜಯ ನಿಡಿಗಲ್ ಜೆಸಿವಾಣಿ ಉದ್ಘೋಷಿಸಿ, ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಸ್ವಾಗತಿಸಿ, ಕಾರ್ಯದರ್ಶಿ ರಂಜಿತ್ ಎಚ್.ಡಿ ಧನ್ಯವಾದವಿತ್ತರು, ಬಳಿಕ ಬಹುಮುಖ ಪ್ರತಿಭೆ ಚಂದ್ರಹಾಸ್ ಬಳಂಜರವರು ವಿವಿಧ ಮನೋರಂಜನ ಸ್ಪರ್ಧಾ ಕಾರ್ಯಕ್ರಮ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜೆಸಿ ಮಿತ್ರರು, ಊರವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ujire rakthadana shibiraಉಜಿರೆ : ಇಲ್ಲಿನ ಉಜಿರೆ ಗ್ರಾಮ ಪಂಚಾಯತಿಯಲ್ಲಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖಾಧಿಕಾರಿಗಳು ಮತ್ತು ನೌಕರರ ಸಂಘ, ಬೆಳ್ತಂಗಡಿ ತಾ. ಗ್ರಾಮ ಪಂಚಾಯತು ಸದಸ್ಯರ ಒಕ್ಕೂಟ ಬೆಳ್ತಂಗಡಿ ತಾ. ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ ಜಿಲ್ಲೆ ಹಾಗೂ ಗ್ರಾಮ ಪಂಚಾಯತ್ ಉಜಿರೆ ಇವುಗಳ ಸಂಯುಕ್ತ ಅಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉಜಿರೆ ಗ್ರಾ.ಪಂ.ನ ಸುವರ್ಣ ಸೌಧದಲ್ಲಿ ಜೂ. 10ರಂದು ನಡೆಯಿತು.
ಬೆಳ್ತಂಗಡಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ನರೇಂದ್ರರವರು ಶಿಬಿರವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತು ಅಧ್ಯಕ್ಷ ಕೆ ಶ್ರೀಧರ ಪೂಜಾರಿಯವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂತಹ ಶಿಬಿರಗಳಿಂದ ಸಮಾಜಸೇವೆಯನ್ನು ಮಾಡುವ ಅವಕಾಶ ಸಿಗುತ್ತದೆ ಹಾಗೂ ಈ ಅವಕಾಶವನ್ನು ಬಳಸಿಕೊಂಡಲ್ಲಿ ಸತ್ಕಾರ್ಯ ಮಾಡಿದ ಸಾರ್ಥಕತೆ ನಮಗೆ ಲಭಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ವಿನುತ ರಜತ್ ಗೌಡ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖಾಧಿಕಾರಿಗಳು ಮತ್ತು ನೌಕರರ ಸಂಘ, ದ.ಕ ಜಿಲ್ಲೆಯ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ತಾಲೂಕು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖಾಧಿಕಾರಿಗಳು ಮತ್ತು ನೌಕರರ ಸಂಘದ ಅಧ್ಯಕ್ಷ ನಿಡ್ಲೆ ಪಂಚಾಯತು ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ಉಜಿರೆ ಗ್ರಾಮ ಪಂಚಾಯತು ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ಗ್ರಾಮ ಪಂಚಾಯತಿ ಸದಸ್ಯ ಬಾಲಕೃಷ್ಣ ಗೌಡ, ಗ್ರಾ.ಪಂ ಸದಸ್ಯರು, ಗ್ರಾ.ಪಂ ನೌಕರರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಬೊಳ್ಮ, ವಿವಿಧ ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಲೆಕ್ಕಸಹಾಯಕರು, ನೌಕರರು, ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಬ್ಲಡ್ ಬ್ಯಾಂಕ್ ಸಿಬ್ಬಂದಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ತಾಲೂಕು ಪಂಚಾಯತ್ ಸಂಯೋಜಕ ಜಯಾನಂದರವರು ಕಾರ್ಯಕ್ರಮ ನಿರೂಪಿಸಿ, ಉಜಿರೆ ಗ್ರಾಮ ಪಂಚಾಯತು ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ಸ್ವಾಗತಿಸಿ ಮುಂಡಾಜೆ ಅಭಿವೃದ್ಧಿ ಅಧಿಕಾರಿ ಸಂಜೀವ ನಾಕ ವಂದನಾರ್ಪಣೆಗೈದರು.

daravada kere samrakshane 1ಬೆಳ್ತಂಗಡಿ : ಪ್ರಾಕೃತಿಕ ಸಂಪನ್ಮೂಲಗಳ ಪೈಕಿ ನೀರು ಅತ್ಯಂತ ಅಮೂಲ್ಯವಾದುದು. ಆದುದರಿಂದ ನೀರಿನ ಎಚ್ಚರಿಕೆಯ ಬಳಕೆಯ ವಿಚಾರದಲ್ಲಿ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಬೇಕು. ನಮ್ಮ ಪೂರ್ವಜರಲ್ಲಿ ಕೆರೆ ಹೂಳೆತ್ತುವ ಜವಾಬ್ದಾರಿ ಸ್ಥಳೀಯರದ್ದು ಎಂಬ ಭಾವನೆ ಇತ್ತು ಗ್ರಾಮಸ್ಥರೆಲ್ಲ ಸೇರಿ ಕೆರೆಗಳ ಹೂಳೆತ್ತಿ ಕೆರೆಯನ್ನು ಸಂರಕ್ಷಣೆ ಮಾಡುತ್ತಿದ್ದರು. ಆದರೆ ಕಾಲ ಬದಲಾದಂತೆ ಕೆರೆ ಹೂಳೆತ್ತುವ ಹಾಗೂ ಸಂರಕ್ಷಿಸುವ ಜವಾಬ್ದಾರಿ ಸರಕಾರದ್ದು ಎಂಬ ಧೋರಣೆ ಗ್ರಾಮಸ್ಥರಲ್ಲಿ ಮೂಡಿದೆ. ಈ ಧೋರಣೆ ಬದಲಾಗಬೇಕು. ಸಾರ್ವಜನಿಕ ಸಂಘ ಸಂಸ್ಥೆಗಳು, ಉದ್ಯಮಿಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಆರ್ಥಿಕವಾಗಿ ಸಂಪನ್ನರಾದವರು ಸ್ವಯಂ ಪ್ರೇರಣೆಯಿಂದ ಕೆರೆಗಳ ಸಂರಕ್ಷಣೆಯಲ್ಲಿ ಗ್ರಾಮಸ್ಥರಿಗೆ ಸಹಾಯಹಸ್ತ ಚಾಚಬೇಕಾದ್ದು ಇಂದಿನ ಅವಶ್ಯಕತೆಯಾಗಿದೆ ಎಂಬುದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕರೆ ನೀಡಿದರು.
ಅವರು ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕೆರೆ ಅಭಿವೃದ್ಧಿ ಸಮಿತಿಯ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಹುಗ್ಗಿ ಕೆರೆ ಕಾಮಗಾರಿಯ ಹಸ್ತಾಂತರವನ್ನು ನೆರವೇರಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಯಾರಿಸಲಾದ ಬೀಜದುಂಡೆ (ಸೀಡ್‌ಬಾಲ್)ಗಳನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠದ ಸಿದ್ಧ ಶಿವಯೋಗಿ ಮಹಾಸ್ವಾಮಿಗಳು ವಿತರಿಸಿದರು.
ಧಾರವಾಡ ಜಿಲ್ಲಾ ನಿರ್ದೇಶಕ ದಿನೇಶ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಶ್ರೀಮತಿ ಮಂಜುಳಾ ಕೋಟಿ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಯೋಜನೆಯ ಧಾರವಾಡ ಪ್ರಾದೇಶಿಕ ನಿರ್ದೇಶಕ ಎನ್. ಜಯಶಂಕರ ಶರ್ಮ, ಜಿಲ್ಲಾ ಪಂಚಾಯತ್ ಸದಸ್ಯ ನಿಂಗಪ್ಪ ಮಾ. ಘಾಟಿನ, ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಪಕ್ಕೀರವ್ವ ನಾಯಕ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ ಗೌಡ ಕರಿಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯೋಜನಾಧಿಕಾರಿ ಉಲ್ಲಾಸ ಮೇಸ್ತ ಕಾರ್ಯಕ್ರಮ ನಿರೂಪಿಸಿದರು.

SDPI vathiyinda darmaguru betiಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕ್ರೈಸ್ತ ಧರ್ಮ ಕೇಂದ್ರ ಮಡಂತ್ಯಾರಿಗೆ ನೂತನ ಧರ್ಮಗುರುಗಳಾಗಿ ಅಧಿಕಾರ ವಹಿಸಿಕೊಂಡ ಫಾ| ಫಾದರ್ ಭಾಸಿಲ್‌ವಾಸ್ ಅವರನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ವತಿಯಿಂದ ಭೇಟಿ ಮಾಡಿ ಸ್ವಾಗತಿಸಲಾಯಿತು.
ಎಸ್‌ಡಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಆಲ್ಫೋನ್ಸ್ ಫ್ರಾಂಕೋ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾಧ್ಯಕ್ಷ ಅತಾವುಲ್ಲಾ ಪುಂಜಾಲಕಟ್ಟೆ ಹಾಗೂ ಎಸ್‌ಡಿಪಿಐ ಮಡಂತ್ಯಾರು ವಲಯ ಸಮಿತಿ ಸದಸ್ಯ ತಯ್ಯೂಬ್ ಪುಂಜಾಲಕಟ್ಟೆ, ಕ್ಯಾಂಪಸ್ ಫ್ರಂಟಿನ ಶಾಕೀರ್, ತಾಜುದ್ದೀನ್, ವಝೀರ್ ಇವರುಗಳು ನಿಯೋಗದಲ್ಲಿದ್ದರು.

car

car1ಬೆಳ್ತಂಗಡಿ : ಹಾಸನದಿಂದ ಮಂಗಳೂರಿಗೆ ಹೋಗುತ್ತಿದ್ದ ಸ್ಕಾರ್ಪಿಯೋ ಕಾರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಬಳಿ 400ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಆದರೆ ಅದೃಷ್ಟವಶಾತ್ ಕಾರಿನಲ್ಲಿದ್ದ ಸುಳ್ಯ ಮೂಲದ ಗುರುಪ್ರಸಾದ್ ಹಾಗೂ ಬೆಳ್ತಂಗಡಿ ಮೂಲದ ಲೋಹಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನೂ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರು 400 ಅಡಿಯ ಪ್ರಪಾತಕ್ಕೆ ಬೀಳಲು ಮಳೆ ಹಾಗೂ ದಟ್ಟವಾದ ಮಂಜು ಕವಿದಿದ್ದೇ ಕಾರಣ ಎಂದು ಅಂದಾಜಿಸಲಾಗಿದೆ. 400 ಅಡಿಯ ಪ್ರಪಾತಕ್ಕೆ ಬಿದ್ದ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ.

jodu

jodu1

jodu2

jodu3ಧರ್ಮಸ್ಥಳ: ಇಲ್ಲಿಯ ಜೋಡುಸ್ಥಾನದ ಶಿರಾಡಿ ಕಲ್ಕುಡ ದೈವಸ್ಥಾನದ ಜೀರ್ಣೋದ್ದಾರ ಪ್ರಯುಕ್ತ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮವು ಜೂ.15ರಂದು ಜರುಗಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಊರವರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಂತರ ಊರವರಿಂದ ಶ್ರಮದಾನ ಕಾರ್ಯಕ್ರಮವು ಜರುಗಿತು.

jain mlilanಬೆಳ್ತಂಗಡಿ : ಸಂಘಟಿತ ಹೋರಾಟ, ಸೇರುವಿಕೆ, ಪರಸ್ಪರ ಸಂಪರ್ಕ ಇವುಗಳು ಸಮಾಜದ ಅಭಿವೃದ್ಧಿಗೆ ಪೂರಕ ಸಹಕಾರಿಯಾಗುತ್ತದೆ. ಸಂಸ್ಕಾರ, ಸಂಸ್ಕೃತಿ, ಉಳಿಸುವ ನಿಟ್ಟಿನಲ್ಲೂ ಇದು ಪ್ರೇರಣೆ ಮತ್ತು ವೇದಿಕೆಯಾಗುತ್ತದೆ. ಹೊಸ ಚಿಂತನೆಯ ಕಾರ್ಯಕ್ರಮಗಳ ಮೂಲಕ ಸಮಾಜವನ್ನು ಆಕರ್ಷಿಸುವ, ಯುವ ಮಿಲನ್‌ಗಳನ್ನೂ ಸೇರಿಸಿಕೊಂಡು ಪರಸ್ಪರ ಸಂಬಂಧ ಬೆಸೆದು ಕೆಲಸ ನಿರ್ವಹಿಸಬೇಕಾಗಿದೆ ಎಂದು ಜೈನ್‌ಮಿಲನ್ ವಲಯ 8 ರ ಉಪಾಧ್ಯಕ್ಷ, ಉದ್ಯಮಿ ಪುಷ್ಪರಾಜ್ ಜೈನ್ ಹೇಳಿದರು.
ಜೈನ್ ಮಿಲನ್ ಬೆಳ್ತಂಗಡಿ ಇದರ 2017-18 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಪ್ರಮಾಣವಚನ ಬೋಧಿಸಿ ಮಾತನಾಡಿ ದರು. ಅಧ್ಯಕ್ಷತೆಯನ್ನು ಉಪಾಧ್ಯಕ್ಷ ಡಾ| ಜಯಕುಮಾರ್ ಶೆಟ್ಟಿ ವಹಿಸಿದ್ದರು.
ವಿಶೇಷ ಅಧಿಕಾರಿಯಾಗಿ ಭಾಗವಹಿಸಿದ್ದ ಜೈನ್ ಮಿಲನ್ ವಲಯ ೮ ರ ನಿರ್ದೇಶಕ ಸೋಮಶೇಖರ್ ಶೆಟ್ಟಿ ಮಾತನಾಡಿ ಸಾಂಘಿಕ ಮಾರ್ಗದರ್ಶನ ನೀಡಿದರು. ಸಂವಾದ ರೀತಿಯಲ್ಲಿ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಸ್ಥಾಪಕಾಧ್ಯಕ್ಷ ಭೋಜರಾಜ ಹೆಗ್ಡೆ ಪಡಂಗಡಿ ಉಪಸ್ಥಿತರಿದ್ದರು. ನೂತನ ಅಧ್ಯಕ್ಷ ಪಾರ್ಶ್ವನಾಥ್ ಜೈನ್, ಉಪಾಧ್ಯಕ್ಷ ನಮಿರಾಜ್ ಕೊಂಡೆ ಮತ್ತು ಪ್ರೇಮಾ ಜೀವಂಧರ ಜೈನ್, ಕಾರ್ಯದರ್ಶಿ ಮುನಿರಾಜ್ ಅಜ್ರಿ ಬೋಳಿಯಂಜಿ, ಕೋಶಾಧಿಕಾರಿ ಸುದರ್ಶನ ಹೆಗ್ಡೆ ಕಣಿಯೂರುಗುತ್ತು ಇವರು ಅಧಿಕಾರ ಸ್ವೀಕರಿಸಿದರು. ನೂತನ ಪದಾಧಿಕಾರಿಗಳನ್ನು ಅತಿಥಿಗಳು ಗೌರವಿಸಿದರು. ನಿಕಟಪೂರ್ವ ಕಾರ್ಯದರ್ಶಿ ವೃಷಭ ಆರಿಗ ವರದಿ ಮಂಡಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸುದರ್ಶನ ಹೆಗ್ಡೆ ಸ್ವಾಗತಿಸಿದರು. ಡಾ| ಬಿ. ಯಶೋವರ್ಮ ಅವರ ಸಂದೇಶವನ್ನು ನೂತನ ಕಾರ್ಯದರ್ಶಿ ಮುನಿರಾಜ್ ಅಜ್ರಿ ವಾಚಿಸಿ, ಈ ವರ್ಷದ ಕಾರ್ಯಯೋಜನೆ ಪ್ರಕಟಿಸಿ ಸಹಕಾರ ಕೋರಿದರು.

vnr mice innogrationವೇಣೂರು: ಇಲ್ಲಿಯ ಜೆಪಿ ಟವರ್‌ನಲ್ಲಿ ಖ್ಯಾತ ಮೈಸ್ ಕಂಪ್ಯೂಟರ್ ಎಜ್ಯುಕೇಶನ್‌ನ ಶ್ರೀ ಗುರು ಕಂಪ್ಯೂಟರ್‍ಸ್ ತರಬೇತಿ ಕೇಂದ್ರವು ಜೂ.8 ರಂದು ಉದ್ಘಾಟನೆಗೊಂಡಿತು. ಜಗನ್ನಾಥ ಶೆಟ್ಟಿ ಮತ್ತು ಶ್ರೀಮತಿ ಇಂದಿರಾ ದಂಪತಿಯವರು ನೂತನ ತರಬೇತಿ ಕೇಂದ್ರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಜೆಪಿ ಟವರ್ ಮಾಲಕರಾದ ಪ್ರವೀಣ್ ಕುಮಾರ್ ಇಂದ್ರ, ಜಗದೀಶ್ಚಂದ್ರ ಡಿ.ಕೆ., ಉದ್ಯಮಿ ವಿಜಯ ರೈ ಆರ್ಲಪದವು, ವೇಣೂರಿನ ಉದ್ಯಮಿಗಳು, ವಿವಿಧ ಸಂಸ್ಥೆಯ ಪದಾಧಿಕಾರಿಗಳು ಆಗಮಿಸಿದ್ದರು. ಮೈಸ್ ಕಂಪ್ಯೂಟರ್ ಎಜ್ಯುಕೇಶನ್‌ನಲ್ಲಿ ವಿಶೇಷವಾಗಿ ತರಬೇತಿ ಕೇಂದ್ರಕ್ಕೆ ದಾಖಲಾಗುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಇದೆ ಎಂದು ಸಂಸ್ಥೆಯ ಮಾಲಕ ಗುರುನಾಥ ಶೆಟ್ಟಿ ತಿಳಿಸಿದ್ದಾರೆ.

LIC kishor bilkodugeಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖೆಯಲ್ಲಿ 2 ವರ್ಷಗಳಿಂದ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಮಂಗಳೂರು ಶಾಖೆಗೆ ವರ್ಗಾವಣೆಗೊಂಡ ಕಿಶೋರ್ ರವರಿಗೆ ಉಪಗ್ರಹ ಶಾಖಾ ವತಿಯಿಂದ ಬೀಳ್ಕೊಡುಗೆ ಸಮಾರಂಭ ಜೂ. 10ರಂದು ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಖೆಯ ಹಿರಿಯ ಶಾಖಾಧಿಕಾರಿ ಡಿ. ಬಾಲಕೃಷ್ಣ ವಹಿಸಿ ಶುಭ ಹಾರೈಸಿದರು. ಅನಂತರ ಜೀವ ವಿಮಾ ಪ್ರತಿನಿಧಿಗಳಿಗೆ ನೂತನ ವ್ಯವಹಾರದ ಬಗ್ಗೆ ಮಾಹಿತಿ ನೀಡಿದರು. ಉಪಗ್ರಹ ಶಾಖಾಧಿಕಾರಿ ಆರ್.ಡಿ. ಯೋಗೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿವೃದ್ಧಿ ಅಧಿಕಾರಿಗಳಾದ ಎಂ.ವಿ.ಶೆಟ್ಟಿ, ಎ. ಜಯದೇವ, ವಿಮಾ ಪ್ರತಿನಿಧಿಗಳ ಪರವಾಗಿ ಹರೀಶ್ ಶೆಟ್ಟಿ ಮಾತನಾಡಿ ಶುಭಕೋರಿದರು. ಮಂಗಳೂರು ಶಾಖೆಯಿಂದ ವರ್ಗಾವಣೆಯಾಗಿ ಬಂದಿರುವ ಆಡಳಿತಾಧಿಕಾರಿ ಶ್ರೀನಿವಾಸ್ ಕದ್ರಿ, ಎ.ಎ.ಓ. ಕೇಶವ ಎಂ., ಸಿಬ್ಬಂದಿ ವರ್ಗದವರು ವಿಮಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಉದಯಶಂಕರ್ ವಂದಿಸಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಜೀವವಿಮಾ ಪ್ರತಿನಿಧಿ ಐವನ್ ಮಸ್ಕರೇನ್ಹಸ್ ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

venur udhgataneವೇಣೂರು: ಸಂಘ ಸಂಸ್ಥೆಗಳಿಗೂ ಸಾಮಾಜಿಕ ಜವಾಬ್ದಾರಿ ಮುಖ್ಯ. ಈ ನಿಟ್ಟಿನಲ್ಲಿ ಎಂಸಿಎಫ್ ಆರೋಗ್ಯ ಶಿಬಿರಗಳ ಜೊತೆಗೆ ವಿವಿಧ ಕೊಡುಗೆಗಳನ್ನು ಅಕ್ಷರಪಾತ್ರ ಕಾರ್ಯಕ್ರಮದಡಿ ನೀಡುತ್ತಿದೆ. ನೈರ್ಮಲ್ಯಕ್ಕೂ ಆದ್ಯತೆ ನೀಡುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಸಂಸ್ಥೆ ವತಿಯಿಂದ ಶೌಚಾಲಯಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಂಗಳೂರು ಎಂಸಿಎಫ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಭಾಕರ ರಾವ್ ಹೇಳಿದರು.
ಅವರು ವೇಣೂರು ಸ.ಪ.ಪೂ. ಕಾಲೇಜಿನಲ್ಲಿ ರೂ. 4 ಲಕ್ಷ ವೆಚ್ಚದಲ್ಲಿ ಎಂಸಿಎಫ್ ವತಿಯಿಂದ ನಿರ್ಮಾಣ ಮಾಡಲಾದ ಶೌಚಾಲಯದ ಕೀಯನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸಿ ಮಾತನಾಡಿದರು.
ಗ್ರಾಮೀಣ ಮಕ್ಕಳ ಕಾಳಜಿ ಎಂಸಿಎಫ್ ಸಂಸ್ಥೆಗೆ ಇದೆ. ಕಲಿಕೆಯಲ್ಲಿ ಮಕ್ಕಳು ಕೀಳರಿಮೆ ಇಟ್ಟುಕೊಳ್ಳದೆ ಛಲವಾದಿಗಳಾಗಿ ವಿದ್ಯಾರ್ಜನೆ ಮಾಡಿದಾಗ ಭವಿಷ್ಯ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ಮಾತನಾಡಿ, ಶಿಕ್ಷಣದ ಜೊತೆಗೆ ಮಕ್ಕಳ ಮಧ್ಯೆ ಭಾವನಾತ್ಮಕ ಸಂಬಂಧವನ್ನು ಇಲ್ಲಿನ ಉಪನ್ಯಾಸಕರು ಬೆಳೆಸುತ್ತಿದ್ದಾರೆ. ಮೊಬೈಲ್, ಟಿವಿ ವೀಕ್ಷಣೆಯನ್ನು ನಿಯಂತ್ರಿಸಿ ವಿದ್ಯಾರ್ಜನೆಗೆ ಹೆಚ್ಚಿನ ಆಸಕ್ತಿ ನೀಡಿದಾಗ ಮಕ್ಕಳು ಮುಂದಿನ ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ ಎಂದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಚಂದ್ರು ಎಂ.ಎನ್. ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನ ಅಗತ್ಯತೆಯನ್ನು ಮನಗಂಡು ಎಂಸಿಎಫ್ ಶೌಚಾಲಯ ಕೊಡುಗೆ ನೀಡಿರುವುದಕ್ಕೆ ಸಂಸ್ಥೆಯನ್ನು ಅಭಿನಂದಿಸಿದರು. ಕಾಲೇಜಿನ ಸುರಕ್ಷತೆಯ ದೃಷ್ಟಿಯಿಂದ ಸಿಸಿಟಿವಿ ಹಾಗೂ ಕಂಪೌಂಡ್ ಗೋಡೆ ತುರ್ತಾಗಿ ರಚನೆಯಾಗಬೇಕಿದೆ. ಇದಕ್ಕಾಗಿ ಸಂಬಂಧಿತ ಜನಪ್ರತಿನಿಧಿಗಳಿಗೆ ಹಾಗೂ ಇಲಾಖೆಗೆ ಮನವಿ ನೀಡಲಾಗಿದೆ. ವಿದ್ಯಾರ್ಥಿಗಳ ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಸಹಕಾರ ನೀಡಬೇಕಾಗಿದೆ ಎಂದರು. ಎಂಸಿಎಫ್ ಸಂಸ್ಥೆಯ ಅಧಿಕಾರಿಗಳಾದ ರಾಘವೇಂದ್ರ, ಪಿ. ಸುರೇಶ್, ಡಾ| ಯೋಗೀಶ್, ಜಯರಾಮ ಕಾರಂದೂರು, ನಾಗೇಶ್ ಎಂ., ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕ ವೆಂಕಟೇಶ್ ಪಿ. ನಿರೂಪಿಸಿ ಉಪನ್ಯಾಸಕಿ ಸೆಲಿನಾ ಪಿ.ಜೆ. ವಂದಿಸಿದರು.

SDM Press meetಉಜಿರೆ : ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಭಾಗ್ಯ ಲಭಿಸಬೇಕು ಎಂಬ ಉದ್ದೇಶದಿಂದ 2013 ಮೇ 1 ರಂದು ಆರಂಭಗೊಂಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆಯಲ್ಲಿ ಇದುವರೆಗೆ 2.22 ಲಕ್ಷ ರೋಗಿಗಳು ಚಿಕಿತ್ಸೆ ಪಡೆದುಕೊಂಡು ಗುಣಮುಖ ರಾಗಿದ್ದು, ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ತಪಾಸಣೆ, ಔಷಧ ಸೇರಿದಂತೆ ಒಟ್ಟು ರೂ. 2,52,95,000 ವೆಚ್ಚದ ಚಿಕಿತ್ಸೆ ಯನ್ನು ಉಚಿತವಾಗಿ ನೀಡಲಾಗಿದೆ ಎಂದು ಆಸ್ಪತ್ರೆಯ ಕಾರ್ಯನಿರ್ವಾಹ ಣಾಧಿಕಾರಿ ಮನ್ಮಥ್ ಕುಮಾರ್ ಎನ್. ತಿಳಿಸಿದ್ದಾರೆ.
ಅವರು ಜೂ.14ರಂದು ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. 200 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಯಲ್ಲಿ 16 ಮಂದಿ ತಜ್ಞ ವೈದ್ಯರು, 7 ಮಂದಿ ಸಹಾಯಕ ವೈದ್ಯರು, 7 ಮಂದಿ ಸಂದರ್ಶಕ ವೈದ್ಯರು ದಿನದ 24 ಗಂಟೆಯೂ ಚಿಕಿತ್ಸೆಗೆ ಲಭ್ಯರಿರುತ್ತಾರೆ. ಆಸ್ಪತ್ರೆಯಲ್ಲಿ ಪೇಪರ್ ರಹಿತ ದಾಖಲೆ ಗಳ ನಿರ್ವಹಣೆಯ ಉದ್ದೇಶದಿಂದ ಡಿಜಿಟಲ್ ವೈದ್ಯಕೀಯ ದಾಖಲೆ ಅಳವಡಿಸಲಾಗಿದೆ. ದೇಶದಲ್ಲಿಯೇ ಡಿಜಿಟಲ್ ಎಂ.ಆರ್.ಡಿ ವ್ಯವಸ್ಥೆ ಹೊಂದಿರುವ 2ನೇ ಆಸ್ಪತ್ರೆ ಇದಾಗಿದೆ ಎಂದರು. ಹೊರ ರೋಗಿ ವಿಭಾಗದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ, ಮೆಡಿಸಿನ್, ಮಕ್ಕಳ ಚಿಕಿತ್ಸೆ, ಸರ್ಜರಿ, ಎಲುಬು ಮತ್ತು ಕೀಲು, ಇಎನ್‌ಟಿ, ಪೆಥಾಲಜಿ, ಅನಸ್ತೇಶಿಯ, ಭೌತಚಿಕಿತ್ಸೆ ಮೊದಲಾದ ವಿಭಾಗಗಳಲ್ಲಿ ಸೇವೆ, 24 ಗಂಟೆಗಳ ಸೇವೆಯಲ್ಲಿ ಅಪಘಾತ ಮತ್ತು ತುರ್ತು ಚಿಕಿತ್ಸೆ, ತೀವ್ರ ನಿಗಾ ಘಟಕ, ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ, ಔಷಧಾಲಯ, ಡಯಾಗ್ನಾಸ್ಟಿಕ್ ಅತ್ಯಾಧುನಿಕ ಮೆಡಿಕಲ್ ಲ್ಯಾಬೋರೇಟರಿ, ಸಿ.ಟಿ. ಸ್ಕ್ಯಾನಿಂಗ್, ಎಕ್ಸ್-ರೇ, ಹೃದಯರೋಗಿಗಳಿಗೆ ಟಿ.ಎಂ.ಟಿ. ಟೆಸ್ಟ್, ಅಲ್ಟ್ರಾಸೌಂಡ್ ವ್ಯವಸ್ಥೆ ಇದೆ ಎಂದು ತಿಳಿಸಿದರು. ಬೆಳ್ತಂಗಡಿ ತಾಲೂಕಿನಲ್ಲಿ ಸಿ.ಟಿ. ಸ್ಕ್ಯಾನಿಂಗ್ ವ್ಯವಸ್ಥೆ ಇರುವ ಪ್ರಪ್ರಥಮ ಆಸ್ಪತ್ರೆ ಇದಾಗಿದ್ದು, ವಿವಿಧ ವಿಮೆಗಳ ಸೌಲಭ್ಯಗಳು, ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಸುಮಾರು 60ಕ್ಕಿಂತಲೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ನಡೆಸಿ 1572 ಯೂನಿಟ್ ರಕ್ತ ಸಂಗ್ರಹಿಸಿ ರೋಗಿಗಳ ಸದ್ಬಳಕೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ವಿಶೇಷ ವೈದ್ಯಕೀಯ ಶಿಬಿರ, ಕೀ-ಹೋಲ್ ಸರ್ಜರಿ ಮೊದಲಾದ ಸೌಲಭ್ಯಗಳಿವೆ. ಆಸ್ಪತ್ರೆ ಸೇರಿದಂತೆ ಐದು ಕಡೆ ಆರೋಗ್ಯ ಕೇಂದ್ರ ತೆರೆದು 44,242 ಪಾದಯಾತ್ರಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ ಎಂದರು.
ಮುಂದಿನ ಯೋಜನೆ : ವಿಮಾ ಆರೋಗ್ಯ ವ್ಯವಸ್ಥೆಗಳ ವಿಸ್ತರಣೆ, ಮನೆಬಾಗಿಲಿಗೆ ವೈದ್ಯಕೀಯ ಸೇವೆ, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ರಿಯಾಯಾತಿ ದರದಲ್ಲಿ ವೈಧ್ಯಕೀಯ ಸೇವೆ, ಡಯಾಲಿಸಿಸ್ ಸೆಂಟರ್ ಆರೋಗ್ಯ ತಪಾಸಣಾ ಪ್ಯಾಕೇಜ್ ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಎಂ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ ಪೂವಣಿ, ವೈದ್ಯಾಧಿಕಾರಿ ಡಾ|ಪ್ರಭಾಶ್ ಕುಮಾರ್, ಸರ್ಸಿಂಗ್ ಸೂಪರಿಂಟೆಂಡೆಂಟ್ ಜೀತಾ ರೋಡ್ರಿಗಸ್ ಉಪಸ್ಥಿತರಿದ್ದರು.

raghaveshwara swamiಬೆಳ್ತಂಗಡಿ : ಕಾಂತಜೆ ಈಶ್ವರ ಭಟ್ಟರ ಮಗ ಗಣೇಶ್ ಅವರ ಪುತ್ರ ಅವನೀಶ ಕೃಷ್ಣ ಇವರ ಬ್ರಹ್ಮೋಪದೇಶ ಕಾರ್ಯಕ್ರಮವು ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ, ಬಂಧು ಮಿತ್ರರು, ಕುಟುಂಬಸ್ಥರ ಭಾಗವಹಿಸುವಿಕೆಯಲ್ಲಿ ಜೂ.12ರಂದು ಕಾಂತಜೆ ಮನೆಯಲ್ಲಿ ಜರುಗಿತು. ಜೂ.11ರಂದು ಸಂಜೆ 5ಕ್ಕೆ ಶ್ರೀ ರಾಘವೇಶ್ವರ ಸ್ವಾಮೀಜಿಯವರು ಆಗಮಿಸಿದಾಗ ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಬಳಿಕ ಧೂಳೀ ಪಾದಪೂಜೆ ನಡೆಯಿತು. ಸಂಜೆ ಸೂರ್ಯಸ್ತಕ್ಕೆ ಶ್ರೀಕರಾರ್ಚಿತ ಪೂಜೆ ಜರುಗಿತು. ಜೂ.12ರಂದು ಬೆಳಗ್ಗೆ 10ಕ್ಕೆ ಶ್ರೀಕರಾರ್ಚಿತ ಪೂಜೆ, ಶ್ರೀ ಗುರು ಪಾದಪೂಜೆ, ಶ್ರೀ ಗುರು ಭಿಕ್ಷಾಸೇವೆ ಮೊದಲಾದ ಕಾರ್ಯಕ್ರಮಗಳು ಭಕ್ತರ ಉಪಸ್ಥಿತಿಯಲ್ಲಿ ನಡೆಯಿತು.
ಬೆಳಗ್ಗೆ 10.50ರ ಶುಭ ಮುಹೂರ್ತದಲ್ಲಿ ಚಿ| ಅವನೀಶ ಕೃಷ್ಣ ಇವರ ಬ್ರಹ್ಮೋಪದೇಶ ವಿವಿಧ ಧಾರ್ಮಿಕ ವಿಧಿ-ವಿಧಾನದೊಂದಿಗೆ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಿತು. ಬಳಿಕ ಸ್ವಾಮೀಜಿಯವರು ಅನುಗ್ರಹಾಶೀರ್ವಚನ ಮಾಡಿ ಮಂತ್ರಾಕ್ಷತೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಂತಿಲ ನಾರಾಯಣ ಭಟ್ಟ, ಈಶ್ವರಿ ಮತ್ತು ಕಾಂತಜೆ ಈಶ್ವರ ಭಟ್ಟ ಹಾಗೂ ಸಹೋದರರು, ರಾಜೇಶ್ವರಿ ಮತ್ತು ಶ್ರೀ ಗಣೇಶ ಕಾಂತಜೆ, ಸುಮಂಗಲಾ ಮತ್ತು ಶ್ರೀಕೃಷ್ಣ, ಆಶಾ ಜಯರಾಮ್, ಡಾ| ವಿದ್ಯಾ ಗೌರಿ ಮತ್ತು ಡಾ| ಶ್ರೀ ಹರಿ, ಸರಸ್ವತಿ ಮತ್ತು ಅರವಿಂದ, ವೀಣಾ ಮತ್ತು ಜಯಗೋವಿಂದ ಪೆರುವಾಜೆ ಹಾಗೂ ಬಂಧು, ಮಿತ್ರರು ಕುಟುಂಬಸ್ಥರು ಉಪಸ್ಥಿತರಿದ್ದರು.

krshi ilakhe (3)ಬೆಳ್ತಂಗಡಿ ತಾಲೂಕಿನಲ್ಲಿ ಭತ್ತದ ಬೆಳೆಯ ಪ್ರಮಾಣ ಗಣನೀಯ ಇಳಿಕೆಯಾಗಿದ್ದು ಕೇವಲ ನಾಲ್ಕೇ ವರ್ಷದಲ್ಲಿ 3790 ಹೆಕ್ಟೇರ್ ಬೆಳೆ ಕುಸಿದಿದ್ದು ಜನರ ಅನ್ನದ ಬಟ್ಟಲು ಬರಿದಾಗುತ್ತಿದೆಯೇ ಎಂಬ ಸಂದೇಹ ಮೂಡುತ್ತಿದೆ.
ಸರಕಾರ ಕೃಷಿ ಇಲಾಖೆ ಮೂಲಕ ಕೃಷಿ ಭಾಗ್ಯ,
ಭಿತ್ತನೆ ಬೀಜ, ಕೃಷಿ ಸುಣ್ಣ, ಯಂತ್ರ ಧಾರೆ ಮೂಲಕ ಯಾಂತ್ರೀಕೃತ ಕೃಷಿ ಪದ್ದತಿ, ಚಾಪೆ ನೇಜಿ, ಸೆಣಬಿನ ಬೀಜ ಇತ್ಯಾಧಿಯಾಗಿ ನಾನಾ ಬಗೆಯ ಸೌಲಭ್ಯಗಳನ್ನು ಒದಗಿಸಿಕೊಟ್ಟರೂ ಕೂಡ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಬೆಲೆ ಕುಸಿತ, ತೀವ್ರ ಕಾರ್ಮಿಕರ ಕೊರತೆ ಇತ್ಯಾಧಿ ಸಮಸ್ಯೆಗಳಿಂದಾಗಿ ಬೆಳೆಯ ಪ್ರಮಾಣ ಕುಸಿಯಲು ಕಾರಣವಾಗಿದೆ.
ಕುಸಿತವಾಗುತ್ತಾ ಬಂದಿರುವ ಲೆಕ್ಕಾಚಾರ ಈ ರೀತಿ ಇದೆ :
ಕೃಷಿ ಇಲಾಖೆಯಿಂದ 2013-14 ರಲ್ಲಿ ಮುಂಗಾರಿಗೆ 8500 ಹೆಕ್ಟೇರ್ ಗುರಿ ನಿಗಧಿಪಡಿಸಿಕೊಂಡಿದ್ದು ಆ ವರ್ಷ 8175 ಹೆಕ್ಟೇರ್ ಗುರಿ ಸಾಧಿಸಲಾಗಿದೆ. ಹಿಂಗಾರಿನಲ್ಲಿ 6500 ಹೆ. ಗುರಿ, 6100 ಹೆ. ಗುರಿ ಸಾಧನೆ ಮಾಡಲಾಗಿದೆ. ಉಳಿದಂತೆ ಬೇಸಿಗೆಯಲ್ಲಿ 320 ಹೆ. ಗುರಿ ಹೊಂದಿ 268 ಹೆಕ್ಟೇರ್ ಗುರಿ ಸಾಧಿಸಲಾಗಿತ್ತು.
ಇದರ ಪ್ರಮಾಣ 2014-15ರಲ್ಲಿ ಮುಂಗಾರಿನಲ್ಲಿ 8450 ಹೆ. ಗುರಿ, 7840 ಹೆ. ಗುರಿ ಸಾಧನೆ. ಹಿಂಗಾರಿನಲ್ಲಿ 6500 ಗುರಿ, 6060 ಗುರಿ ಸಾಧನೆ, ಬೇಸಿಗೆಯಲ್ಲಿ 320 ಹೆ. ಗುರಿ, 258 ಹೆ. ಗುರಿ ಸಾಧನೆ ಮಾಡಲಾಗಿದೆ.
2015-16ರಲ್ಲಿ ಮುಂಗಾರಿನಲ್ಲಿ 8450 ಹೆ. ಗುರಿ, 7570 ಹೆ. ಗುರಿ ಸಾಧನೆ, ಹಿಂಗಾರಿನಲ್ಲಿ 6500 ಹೆ. ಗುರಿ, 5900 ಹೆ. ಗುರಿ ಸಾಧನೆಯಾಗಿದೆ. ಬೇಸಿಗೆಯಲ್ಲಿ 320 ಹೆ. ಗುರಿ ಹೊಂದಿ 245 ಹೆ. ಗುರಿ ಸಾಧನೆಯಾಗಿದೆ.
ಇದರ ಪ್ರಮಾಣ 2016-17ರಲ್ಲಿ ಮುಂಗಾರಿನಲ್ಲಿ ಕಾಲಮಾನದ ಮಾನದಂಡದಂತೆ ಮುಂಗಾರಿಗೆ ಕಡಿಮೆ ಗುರಿ, ಅಂದರೆ 7900 ಹೆಕ್ಟೇರ್ ಗುರಿ ಹೊಂದಲಾಗಿತ್ತು. ಅದರಲ್ಲಿ 7850 ಹೆ. ಗುರಿ ಸಾಧಿಸಲಾಗಿದೆ. ಈ ಬಾರಿ ಹಿಂಗಾರಿಗೆ ತೀವ್ರ ಮಳೆಕೊರತೆಯಿದ್ದರೂ ಕೂಡ ಕೃಷಿ ಇಲಾಖೆ 6000 ಹೆ. ಗುರಿ ಹೊಂದಿ ವಿಶೇಷ ಪ್ರೋತ್ಸಾಹದಿಂದ 4385 ಹೆ. ಗುರಿ ಸಾಧಿಸಿದೆ. ಬೇಸಿಗೆಯಲ್ಲಿ ಮತ್ತಷ್ಟು ನೀರಿನ ಸಮಸ್ಯೆ ಇದ್ದರೂ 275 ಹೆ. ಗುರಿ ಹೊಂದಿ 180 ಹೆ. ಪೂರ್ತಿಗೊಳಿಸಿದೆ.
ಭತ್ತದ ಬೆಳೆಗೆ ಹೋಲಿಸಿದರೆ ಕಡಿಮೆ ಕಾರ್ಮಿಕರಲ್ಲಿ ಅಡಿಕೆ, ಕಾಳುಮೆಣಸು ಮುಂತಾದ ತೋಟಗಾರಿಕಾ ಬೆಳೆಗಳು ಸುಲಭದಾಯಕ ಎಂಬ ತೀರ್ಮಾನಕ್ಕೆ ರೈತರ ಮನಸ್ಥಿತಿ ಬದಲಾಗಿದೆ. ನಗರಕ್ಕೆ ಸಮೀಪದ ಗದ್ದೆ ಜಾಗಗಳು ಸೈಟ್‌ಗಳಾಗಿ ಮಾರ್ಪಾಟಾಗುತ್ತಿದ್ದು ಕಾಂಕ್ರೀಟ್ ಕಾಡುಗಳಾಗಿ, ಗಗನಚುಂಬಿ ಕಟ್ಟಡಗಳಾಗಿ ಪರಿವರ್ತನೆಯಾಗುತ್ತಿದೆ.
ಭತ್ತದ ಕೃಷಿಗೆ ಕೃಷಿ ಇಲಾಖೆ ಮೂಲಕ ಸೌಲಭ್ಯಗಳು:
ಕರಾವಳಿಯಲ್ಲಿರುವ ಹುಳಿ ಮಣ್ಣಿನ ಗುಣವನ್ನು ಬದಲಾಯಿಸಿ ಫಲವತ್ತತೆ ಮತ್ತು ತಾಂತ್ರಿಕ ಅಂಶಗಳನ್ನು ಸರಿದೂಗಿಸಲು ಕೃಷಿ ಸುಣ್ಣವನ್ನು ಶೇ. 50 ರ ಸಹಾಯಧನದಲ್ಲಿ ಒದಗಿಸಲಾಗುತ್ತಿದೆ. ಜಯಾ ಮತ್ತು ಎಂ.ಒ ೪ ಎಂಬ ಬಿತ್ತನೆ ಭೀಜವನ್ನು 8 ರೂ. ಸಬ್ಸಿಡಿಯಲ್ಲಿ (ಕೆ.ಜಿಗೆ ಬೆಲೆ 32 ರೂ.) ಒದಗಿಸಲಾಗುತ್ತಿದೆ. ಬೀಜೋಪಚಾರ ಮಾಡಿ ಬಿತ್ತನೇ ನಡೆಸಿದರೆ ಮುಂದಕ್ಕೆ ಗದ್ದೆಯಲ್ಲಿ ಕಾಣಿಸಿಕೊಳ್ಳುವ ಬೆಂಕಿ ರೋಗದಂತಹ ರೋಗಗಳನ್ನು ತಡೆಯಬಹುದು ಎಂಬುದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ತಿಲಕ್‌ಪ್ರದಾದ್‌ಜಿ ಅವರ ಅಭಿಪ್ರಾಯ. ಇತರ ಸೌಲಭ್ಯಗಳಾದ ಚಾಪೆನೇಜಿ ವಿಧಾನವನ್ನು ಪರಿಚಯಿಸಲಾಗಿದೆ. ಹಳ್ಳಿಹಳ್ಳಿಗಳಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳುವ ಮೂಲಕ ಜನರನ್ನು ಆಕರ್ಷಿಸಲಾಗಿದೆ. ಬೋರ್ಡೋ ದ್ರಾವಣ ಸಿಂಪಡಣೆ ಮತ್ತು ಅದರ ವೈಜ್ಞಾನಿಕ ಮಿಕ್ಸಿಂಗ್ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ಶೇ. 50 ರಿಯಾಯಿತಿ ದರದಲ್ಲಿ ಸೆಣಬಿನ ಬೀಜ ವನ್ನು ಇಲಾಖೆಯಿಂದ ಪೂರೈಸಲಾಗುತ್ತಿದ್ದು ಸಾಕಷ್ಟು ದಾಸ್ತಾನು ಇರಿಸಿಕೊಳ್ಳಲಾಗಿದೆ. ಸೆಣಬಿನ ಬೀಜವನ್ನು ಭತ್ತದ ಕೃಷಿಗಿಂತ ಮುಂಚಿತವಾಗಿ 50-60 ದಿನಗಳಿಗಿಂತ ಮುಂಚೆ ಬಿತ್ತಿದಲ್ಲಿ ಗದ್ದೆ ಪೂರ್ತಿ ಸೆಣಬಿನ ಗಿಡಗಳು ಬೆಳೆಯುತ್ತದೆ. ಅದನ್ನು ಗದ್ದೆ ಊಳುವುದರ ಜೊತೆಗೆ ಮಣ್ಣಿಗೆ ಸೇರಿಸಿದರೆ ಪ್ರಾಕೃತಿಕವಾಗಿಯೇ ಅದು ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಉಳಿದಂತೆ ಇಲಾಖೆಯಿಂದ ಪವರ್ ಟಿಲ್ಲರ್, ಟ್ರಾಕ್ಟರ್, ಚಾಪ್ ಕಟ್ಟರ್, ಸ್ಪಿಂಕ್ಲರ್ ಇತ್ಯಾಧಿ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತಿದೆ.
ಬೆಳ್ತಂಗಡಿ ಮತ್ತು ವೇಣೂರಿನಲ್ಲಿ ಕೃಷಿ ಯಂತ್ರಧಾರೆ
ಕಾರ್ಮಿಕರ ಕೊರತೆ ಎದುರಿಸಲು ಪೂರಕವಾಗುವಂತೆ ಈಗಾಗಲೇ ಸರಕಾರ ಕೃಷಿ ಇಲಾಖೆ ಮೂಲಕ ಜಾರಿಗೆ ತಂದಿರುವ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಕೇಂದ್ರ ಕೃಷಿ ಯಂತ್ರಧಾರೆ ಇದನ್ನು ಬೆಳ್ತಂಗಡಿ ಮತ್ತು ವೇಣೂರಿನಲ್ಲಿ ತೆರೆಯಲಾಗಿದೆ.
ಬೆಳ್ತಂಗಡಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯವರು ಈ ಕೇಂದ್ರವನ್ನು ನಡೆಸುತ್ತಿದ್ದು ವೇಣೂರಿನಲ್ಲಿ ಕಂಪೆನಿ ಕಡೆಯಿಂದ ನಡೆಸಲಾಗುತ್ತಿದೆ. ಸದ್ಯದಲ್ಲೇ ಕೊಕ್ಕಡ ಹೋಬಳಿಗೂ ಕೂಡ ಈ ಕೇಂದ್ರ ಬರಲಿದೆ.

  ಕೊಕ್ಕಡ: ಎಂಡೋಸಲ್ಫಾನ್ ಸಂತ್ರಸ್ಥರಿಗೆ ಕೇರಳ ಮಾದರಿಯಲ್ಲಿ ಪರಿಹಾರ ನೀಡುವುದಾಗಿ ಹಾಗೂ ಈ ದುರಂತಕ್ಕೆ ಕಾರಣರಾದವರು ಯಾರು ಎಂಬ ಮೂಲವನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿಯೇ ಸಿದ್ದ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ. ಅಧಿವೇಶನ ಮುಗಿದ ಬಳಿಕ ಎಂಡೋ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಾಗಿಯೂ ಹೇಳಿದ್ದಾರೆ. ಸಚಿವರ ಈ ಭರವಸೆ ತಾಲೂಕಿನ ಎಂಡೋಪೀಡಿತರಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
ಎಂಡೋ ಸಂತ್ರಸ್ಥರಿಗೆ ಕೇರಳ ಮಾದರಿ ಪರಿಹಾರ ನೀಡಬೇಕು ಸೇರಿದಂತೆ ಸುಮಾರು 20 ಬೇಡಿಕೆಗಳನ್ನು ಮುಂದಿಟ್ಟು ಮೇ 27 ಮತ್ತು 28 ರಂದು ಕೊಕ್ಕಡದಲ್ಲಿ ಎಂಡೋ ಸಂತ್ರಸ್ಥರ ಭಾರೀ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ನಡೆದಿದ್ದು ಈ ವೇಳೆ ಚಾಲನೆ ಸಿಕ್ಕದ ಮುಂದಿನ ಪ್ರಯತ್ನದ ಭಾಗವಾಗಿ ರಮೇಶ್ ಕುಮಾರ್ ಅವರು ಸದನದಲ್ಲಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಜೂ.7 ರಂದು ವಿಧಾನಸಭೆಯಲ್ಲಿ ನಿಯಮ 69ರಡಿ ನಡೆದ ಚರ್ಚೆಯ ವೇಳೆ ಬಿಜೆಪಿ ಶಾಶಕ ಸುನಿಲ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ರಮೇಶ್ ಕುಮಾರ್, ಎಂಡೋ ಸಂತ್ರಸ್ಥರಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಈ ಹಿಂದಿನ ಸರಕಾರಗಳ ಅವಧಿಯಲ್ಲಿ ಏನಾಗಿದೆಯೊ ಅದನ್ನು ಲೆಕ್ಕ ಹಾಕುವುದು ಬೇಡ. ಕೇರಳ ಮಾದರಿಯಲ್ಲಿಯೇ ರಾಜ್ಯದಲ್ಲಿನ ಎಂಡೋಪೀಡಿತರಿಗೆ ಪರಿಹಾರ ನೀಡಲಾಗುವುದು. ಸಂತ್ರಸ್ಥರಿಗೆ ಕೇರಳದಲ್ಲಿ ಯಾವ ರೀತಿ ಪರಿಹಾರ ನೀಡಲಾಗುತ್ತಿದೆ, ಹಿಂದೆ ನೀಡಿದ್ದಾರೆ ಎಂಬ ದಾಖಲೆ ತರಿಸಿಕೊಂಡು ರಾಜ್ಯದಲ್ಲಿಯೂ ಅದನ್ನೇ ಪಾಲಿಸಲಾಗುವುದು. ಬಸ್ ಹೋಗದೆ ಇರುವ ಹಳ್ಳಿಗಳಲ್ಲಿರುವ ಸಂತ್ರಸ್ಥರು ಆಸ್ಪತ್ರೆಗೆ ತೆರಳಲು ವಿಶೇಷ ಅಂಬುಲೆನ್ಸ್
ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರದೇಶಗಳಿಗೆ ಖುದ್ದು ಭೇಟಿ:
ವಿಧಾನ ಸಭೆ ಅಧಿವೇಶನ ಮುಗಿದ ಬಳಿಕ ಎಂಡೋಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿಕೊಟ್ಟು ಪರಿಶೀಲಿಸಿ ಅವರ ಕಲ್ಯಾಣಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳುತ್ತೇನೆ. ವಿರೋಧ ಪಕ್ಷದ ನಾಯಕರು, ಬಿಜೆಪಿಯ ಶಾಸಕರೂ ಬರಲಿ. ಎಲ್ಲರೂ ಒಟ್ಟಾಗಿ ಕುಳಿತು ಪರಿಹಾರ ಕ್ರಮದ ಬಗ್ಗೆ ಅಲ್ಲಿಯೇ ತೀರ್ಮಾಣ ಕೈಗೊಳ್ಳೋಣ ಎಂದು ರಮೇಶ್ ಕುಮಾರ್ ಹೇಳಿದರು. ಸಂತ್ರಸ್ಥ ಕುಟುಂಬಗಳಿಗೆ ನಿರೀಕ್ಷಿತ ಪರಿಹಾರ ದೊರಕಿಸಿಕೊಡಲು ಸಾಧ್ಯಾವಾಗದೆ ಇದ್ದಲ್ಲಿ ನಾನು ಈ ಸ್ಥಾನದಲ್ಲಿ ಕೂರಲು ಅರ್ಹನೇ ಅಲ್ಲ ಎಂದು ಬಾವುಕರಾಗಿ ಹೇಳಿದ ರಮೇಶ್ ಕುಮಾರ್, ಎಂಡೋ ಪೀಡಿತರ ಎಲ್ಲಾ ಸಮಸ್ಯೆಗಳನ್ನು ಮಾನವೀಯ ನೆಲೆಯಲ್ಲಿ ಪರಿಹರಿಸುವುದಾಗಿ ಭರವಸೆ ನೀಡಿದರು.
ಮೂಲಪತ್ತೆಗೆ ತನಿಖೆ :
ಇಷ್ಟಕ್ಕೇ ನನ್ನ ಪ್ರಯತ್ನ ಸೀಮಿತವಾಗಿಲ್ಲ. ಎಂಡೋಸಲ್ಫಾನ್ ವಿಷ ಪತ್ತೆ ಮಾಡಿದ ವಿಜ್ಞಾನಿಗೆ ಅದರ ಪರಿಣಾಮಗಳ ಅರಿವು ಗೊತ್ತಿರಬೇಕು.
ಇದನ್ನು ಉತ್ಪಾದನೆ ಮಾಡಿದವರು ಯಾರು? ಗೇರು ತೋಟಗಳಿಗೆ ಸಿಂಪಡಣೆ ಮಾಡಲು ಕಾರಣವೇನು? ಇದನ್ನು ಯಾರು ಮಾಡಲು ಹೇಳಿದರು ಮತ್ತು ಯಾಕೆ ಮಾಡಿದರು? ಆ ಬಗ್ಗೆ ಕೂಡ ಸಮಗ್ರ ತನಿಖೆ ನಡೆಸಿ ಸತ್ಯವನ್ನು ಹೊರ ಹಾಕುತ್ತೇವೆ, ಸಾರ್ವಜನಿಕ ಬದುಕಿನಲ್ಲಿ ಇದನ್ನು ಅಗ್ನಿಪರೀಕ್ಷೆಯಾಗಿ ಸ್ವೀಕರಿಸುತ್ತೇನೆ ಎಂದು ರಮೇಶ್ ಕುಮಾರ್ ಹೇಳಿದರು.
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷದ ಮುಖ್ಯ ಸಚೇತಕ ಸುನೀಲ್ ಕುಮಾರ್, ರಾಜ್ಯದಲ್ಲಿ ಎಂಡೋಸಲ್ಫಾನ್ ಸಂತ್ರಸ್ಥರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಸರಕಾರ ಈ ಬಗೆಗೆ ಸಮೀಕ್ಷೆ ನಡೆಸಿ ಬರೀ 6500 ಸಂತ್ರಸ್ಥರಿದ್ದಾರೆ ಎಂದು ಲೆಕ್ಕ ಹಾಕಿದೆ. ಆದರೆ 10 ಸಾವಿರಕ್ಕೂ ಅಧಿಕ ಮಂದಿ ಸಂತ್ರಸ್ಥರು ಇದ್ದಾರೆ. ಅಂಗವಿಕಲರು ಮತ್ತು ಭೀಕರ ರೋಗಕ್ಕೆ ತುತ್ತದವರನ್ನು ಈ ಪಟ್ಟಿಯಲ್ಲಿ ಸೇರಿಸಬೇಕು. ಕೇರಳ ಸರಕಾರ ಈಗಾಗಾಲೇ ಪ್ರತೀ ಎಂಡೋ ಪೀಡಿತ ಕುಟುಂಬಕ್ಕೆ 5ಲಕ್ಷ ರೂ. ಪರಿಹಾರ ಮತ್ತು 30 ಕೆ.ಜಿ ಪೌಷ್ಠಿಕ ಆಹಾರವನ್ನು ಪ್ರತಿ ತಿಂಗಳು ಕೊಡುವುದು ಸಹಿತ ಅವರ ಕಲ್ಯಾಣಕ್ಕೆ ಅನೇಕ ಕ್ರಮ ಕೈಗೊಂಡಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸುಳ್ಯ ಶಾಶಕ ಎಸ್. ಅಂಗಾರ ಮಾತನಾಡಿ, ಅಂಗವಿಕಲ ಮಕ್ಕಳನ್ನು ಸಾಕಲಾಗದೆ ಸಂತ್ರಸ್ಥ ಕುಟುಂಬಗಳು ಆತ್ಮಹತ್ಯೆ ಮಾಡಿಕೊಳ್ಳಲು ಆರಂಭಿಸಿದೆ. ಸರ್ಕಾರ ಇವರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು. ಬಿಜೆಪಿ ನಾಯಕ ಸಿ.ಟಿ.ರವಿ ಮಾತನಾಡಿ, ಎಂಡೋಸಲ್ಫಾನ್ ಅನ್ನು ಕೇಂದ್ರ ಸರಕಾರ ನಿಷೇಧಿಸಿದ ಬಳಿಕ ಕೇರಳ ಸರಕಾರ ಕರ್ನಾಟಕದ ಗಡಿಯಲ್ಲಿ ಬಾವಿ ತೊಡಿ 10 ಟನ್ ಎಂಡೋಸಲ್ಫಾನ್‌ನ್ನು ಸುರಿದಿದೆ. ಇದು ಅಂತರ್ಜಲಕ್ಕೆ ಸೇರಿ ದುಷ್ಪರಿಣಾಮ ಬೀರುವ ಮುನ್ನವೇ ಈ ಬಗ್ಗೆ ಸರಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

DV Heggade  new photos 1ನನಗೆ ಕ್ಷೇತ್ರದ ಮಂಜುನಾಥನ ಸೇವೆಗಿಂತ ದೊಡ್ಡ ಪದವಿ ಇನ್ನೊಂದಿಲ್ಲ. ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ಕ್ಷೇತ್ರದಲ್ಲಿ ಪೂರ್ವಜರಿಂದ ಪಟ್ಟಾಭಿಷಿಕ್ತನಾಗಿ ಅಧಿಕಾರ ವಹಿಸಿಕೊಂಡಿರುವ ಧರ್ಮಾಧಿಕಾರಿಯಾಗಿ ನನಗೆ ಇರುವ ಕರ್ತವ್ಯವೇ ಮುಖ್ಯ… ಡಾ. ಹೆಗ್ಗಡೆ

ಧರ್ಮಸ್ಥಳ: ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ರಂಗ, ಗ್ರಾಮೀಣಾಭಿವೃದ್ದಿ ಯೋಜನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರೀಯರಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಈ ಬಾರಿಯ ರಾಷ್ಟ್ರಪತಿ ಅಭ್ಯರ್ಥಿ ಎಂಬ ಬಗ್ಗೆ ಟಿವಿ ವಾಹಿನಿ, ವಿವಿಧ ಪತ್ರಿಕೆಗಳು ಹಾಗೂ ಸಮೂಹ ಮಾಧ್ಯಮಗಳು ಭಾರೀ ಪ್ರಚಾರವೆಬ್ಬಿಸಿವೆ.
ಪ್ರಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಆರ್ಥಿಕ ತಜ್ಞ ಎಂ.ಆರ್. ವೆಂಕಟೇಶ್ ಅವರು ಟ್ವೀಟರ್‌ನಲ್ಲಿ ಮಾಡಿದ ಟ್ವೀಟ್ ಈ ವದಂತಿ ಮತ್ತು ಪ್ರಚಾರಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಕಾಕತಾಳಿಯವೆಂಬಂತೆ ವಿಶ್ವ ಯೋಗ ದಿನಾಚರಣೆ ಬಗೆಗಿನ ಚರ್ಚೆ ಮತ್ತು ಮಾತುಕತೆಗಾಗಿ ಜೂ. 13 ರಂದು ಹೆಗ್ಗಡೆಯವರು ದೆಹಲಿಗೆ ಪ್ರಯಾಣಿಸಿದ್ದರಿಂದ, ಮೊದಲೇ ಆಗಿದ್ದ ಪ್ರಚಾರಗಳಿಗೆ ಮತ್ತಷ್ಟು ಪುಷ್ಠಿ ದೊರೆತಂತಾಗಿ ಸಾಧ್ಯಾಸಾಧ್ಯತೆಗಳ ಬಗ್ಗೆ ವಾಟ್ಸ್‌ಆಪ್, ಫೇಸ್‌ಬುಕ್, ಟ್ವೀಟರ್ ಸಹಿತ ಅಂತರ್ಜಾಲ ಮಾಧ್ಯಮಗಳಲ್ಲಿ ಇನ್ನಷ್ಟು ಚರ್ಚೆಯೂ ನಡೆಯಿತು.

panakaje

panakaje1ಪಣಕಜೆ ಸಮೀಪ ಧರ್ಮಸ್ಥಳ ಸಿರಿ ಸಂಸ್ಥೆಯ ಗಾಡಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ ಡಿಕ್ಕಿಯಾದ ಘಟನೆ ಸಂಭವಿಸಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಅಬಕಾರಿ ಇಲಾಖೆ ಫೋನ್ ನಂಬರ್

ಅಬಕಾರಿ ಇಲಾಖೆ ಫೋನ್ ನಂಬರ್

Monday, April 17th, 2017 | Suddi Belthangady | no responsesಮುಂದೆ ಓದಿ

ಅಬಕಾರಿ ಇಲಾಖೆ

ಅಬಕಾರಿ ಇಲಾಖೆ

Thursday, August 13th, 2015 | suddiblt | no responses ಮುಂದೆ ಓದಿ

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top