Sat 29 Apr 2017, 12:53PM

ಹೆಚ್ಚಿನ ಸುದ್ದಿಗಳು

basava jayanthiಬಸವೇಶ್ವರ ಜಯಂತಿಯನ್ನು ಇಂದು(ಎ.29) ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ತಾ.ಪಂ ಅಧ್ಯಕ್ಷೆ ಶ್ರೀಮತಿ ದಿವ್ಯಜ್ಯೋತಿ ಭಾಗವಹಿಸಿದ್ದರು. ಶ್ರೀ.ಧ.ಮಂ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ| ರಾಜಶೇಖರ ಹಳೆಮನೆ ವಿಶೇಷ ಉಪನ್ಯಾಸ ನೀಡಿದರು. ರಾಷ್ಟ್ರೀಯ ಕ್ರೀಡಾ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕು| ಪ್ರಿಯಾಂಕ ರವರನ್ನು ಸನ್ಮಾನಿಸಲಾಯಿತು.
ಇ.ಒ ಸಿ. ಆರ್ ನರೇಶ್, ತಹಶೀಲ್ದಾರ ತಿಪ್ಪೇಸ್ವಾಮಿ, ವೀರಶೈವ ಲಿಂಗಾಯುತ ಸಂಘದ ಅಧ್ಯಕ್ಷ ಶೇಖರ್ ಟಿ. ಮೊದಲಾದವರು ಉಪಸ್ಥಿತರಿದ್ದರು.

ann silkಬೆಳ್ತಂಗಡಿ : ಇಲ್ಲಿನ ಸಂತೆಕಟ್ಟೆಯ ಮುಖ್ಯರಸ್ತೆಯ ಜೆ.ಎಂ. ಕಾಂಪ್ಲೆಕ್ಸ್‌ನಲ್ಲಿ ಆನ್ ಸಿಲ್ಕ್‌ನಲ್ಲಿ ಪ್ರಥಮ ವರ್ಷ ಪೂರೈಸಿದ ವಾರ್ಷಿಕೋತ್ಸವವು ಎ. 28ರಂದು ನಡೆಯಿತು.
ಫಾ| ಬಿನೋಯ್‌ರವರು ದೀಪ ಬೆಳಗಿಸಿ ಶುಭ ಹಾರೈಸಿದರು.
ವಧೂ ವರರ ಹೆಮ್ಮೆಯ ವಸ್ತ್ರ ವಿನ್ಯಾಸದ ಲೋಕ, ಪುರುಷರ ಹಾಗೂ ಮಹಿಳೆಯರ ವೈವಿಧ್ಯಮಯ ವಸ್ತ್ರಾಲಂಕಾರ, ಮಕ್ಕಳ ಸಿದ್ಧ ಉಡುಪುಗಳ ಭಂಡಾರ, ರಾಷ್ಟ್ರದ ಸಾವಿರಾರು ಗ್ರಾಮಗಳಿಂದ ಆಯ್ದ ನೇಯ್ಗೆ ವಸ್ತ್ರಗಳು, ವಸ್ತ್ರ ಲೋಕದ ನೈಪುಣ್ಯ, ವೈವಿಧ್ಯ, ವಿಶೇಷಗಳ ಪ್ರಸ್ತುತಿ ಮಾಡಲಾಗುತ್ತಿದೆ. ಕಣ್ಮನ ಸೆಳೆಯುವ ರೇಷ್ಮೆ ವಸ್ತ್ರಗಳ ಅನಾವರಣ ಇದೆ. ಗ್ರಾಹಕರ ನಿರ್ದಿಷ್ಟ ಆಯ್ಕೆಯ ವಸ್ತ್ರಗಳ ಪೂರೈಕೆಗೆ ಕ್ರಮ ವಹಿಸಲಾಗಿದೆ. ರಾಜಸ್ಥಾನ ಶೈಲಿಯಲ್ಲಿ ರೇಷ್ಮೆ ಸೀರೆಗಳ ಪ್ರದರ್ಶನ ಮಾಡಲಾಗಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ. ಹವಾನಿಯಂತ್ರಿತ ಮಳಿಗೆ ಇದಾಗಿದ್ದು, ಉತ್ತಮ ಗುಣಮಟ್ಟದ ವಸ್ತ್ರಗಳನ್ನು ಗ್ರಾಹಕರಿಗೆ ನೀಡುತ್ತಿದ್ದೇವೆ ಎಂದು ಮಳಿಗೆ ಮಾಲಕ ಯೇಸುದಾಸ್ ಎನ್.ಜೆ. ತಿಳಿಸಿದರು.
ಮಾಲಕ ಎನ್.ಜೆ ಯೇಸುದಾಸ್, ಡೈನಾ ಯೇಸುದಾಸ್ ಸ್ವಾಗತಿಸಿದರು. ಮಾಲಕರ ಮಕ್ಕಳಾದ ಜೀವನ್, ಜೀಸನ್, ಜಿಸ್ನಾ ಮೊದಲಾದವರು ಉಪಸ್ಥಿತರಿದ್ದರು.

ranga mandira copyಹೊಸಪಟ್ಣ: ಶ್ರೀ ಸತ್ಯ ನಾರಾಯಣ ಪೂಜಾ ಸೇವಾ ಸಮಿತಿ ಹೊಸಪಟ್ಣ-ಬಜಿರೆ ಹಾಗೂ ಶ್ರೀ ಸತ್ಯನಾರಾಯಣ ರಂಗಮಂದಿರ ನಿರ್ಮಾಣ ಸಮಿತಿ ಹಾಗೂ ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಸಹಕಾರದೊಂದಿಗೆ 38ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ನೂತನ ರಂಗ ಮಂದಿರದ ಉದ್ಘಾಟನಾ ಸಮಾರಂಭ, ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮವು ಮೇ 3ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ಪೂಜಾ ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಜಾರಿಗೆದಡಿ ಹಾಗೂ ರಂಗಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ಕಿಶೋರ್ ಪೂಜಾರಿ ನಾಯರ‍್ಮೇರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಪೂ. 10 ಗಂಟೆಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಲಿದ್ದು, ವಿವಿಧ ಅತಿಥಿ ಗಣ್ಯರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ ನೂತನ ರಂಗಮಂದಿರದ ಲೋಕಾರ್ಪಣೆ ಬಳಿಕ ಸಭಾ ಕಾರ್ಯಕ್ರಮ ಜರಗಲಿದೆ. ಉದ್ಘಾಟನೆಯನ್ನು ಪೆರಿಂಜೆ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಧರ್ಮದರ್ಶಿ ಎ. ಜೀವಂಧರ ಕುಮಾರ್ ಅವರು ನೆರವೇರಿಸಲಿದ್ದು, ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಅರಣ್ಯ ಸಚಿವ ಬೆಳ್ಳಿಪ್ಪಾಡಿಗುತ್ತು ಬಿ. ರಮಾನಾಥ ರೈ ನಾಮಫಲಕದ ಅನಾವರಣ ನೆರವೇರಿಸಲಿದ್ದು, ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಛಾಯಚಿತ್ರ ಫಲಕದ ಅನಾವರಣ ಮಾಡಲಿದ್ದಾರೆ. ಹಲವು ಅತಿಥಿ ಗಣ್ಯರು ಭಾಗವಹಿಸಲಿದ್ದು, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವಿದೆ ಎಂದು ಅವರು ತಿಳಿಸಿದ್ದಾರೆ. ರಾತ್ರಿ ಸಭಾ ಕಾರ್ಯಕ್ರಮದ ಮೊದಲು ಹೊಸಪಟ್ಣ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದ್ದು, ಬಳಿಕ ನಮ್ಮ ಟಿವಿ ರಿಯಾಲಿಟಿ ಶೋ ‘ಡ್ಯಾನ್ಸ್ ಮಮ್ಮಿ ಡ್ಯಾನ್ಸ್ ವಿಜೇತೆ ಶ್ರೀಮತಿ ಸುಮಗುರುಪ್ರಸಾದ್ ಕಾವೂರು ಇವರ ನೇತೃತ್ವದ ತಂಡದವರಿಂದ ಡ್ಯಾನ್ಸ್ ಧಮಾಕಾ, ನಮ್ಮ ಟಿವಿ ಬಲೆ ತೆಲಿಪಾಲೆ ಖ್ಯಾತೀಯ ಉಮೇಶ್ ಮಿಜಾರ್ ತಂಡದವರಿಂದ ‘ತೆಲಿಕೆದ ಗೊಂಚಿಲ್, ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಝೀ ಕನ್ನಡ ಕಾಮಿಡಿ ಕಿಲಾಡಿಗಳು ಖ್ಯಾತೀಯ ಹಿತೇಶ್ ಕಾಪಿನಡ್ಕ ಮತ್ತು ಅನೀಶ್ ಅಮೀನ್ ವೇಣೂರು ಇವರಿಂದ ‘ಕಾಮಿಡಿ ಷೋ, ಬಳಿಕ ಪಿಂಗಾರ ಕಲಾವಿದರು ಬೆದ್ರ ಇವರಿಂದ ತುಳು ರಂಗಭೂಮಿ ಯಲ್ಲಿ ಪ್ರಥಮ ಬಾರಿಗೆ ಭಾಗವತರಾದ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಹಾಡಿರುವ ‘ಪುದರ್ ಎಂಚ ದೀವೋಡು…? ಎಂಬ ತುಳು ವಿಭಿನ್ನ ಶೈಲಿಯ ಹಾಸ್ಯ ನಾಟಕ ಜರಗಲಿದೆ.

ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ರಾಮನಗರದ ಕುತ್ಯಾರು ರಸ್ತೆಯಲ್ಲಿರುವ ನಾಗಬ್ರಹ್ಮ ದೇವರ ಪುನಾರ್ ಪ್ರತಿಷ್ಠಾ ಮಹೋತ್ಸವ ಹಾಗೂ ಆಶ್ಲೇಷಾ ಬಲಿ ಸೇವಾ ಕಾರ್ಯಕ್ರಮಗಳು ಬ್ರಹ್ಮಶ್ರೀ ಕೊಯ್ಯೂರು ನಂದ ಕುಮಾರ್ ತಂತ್ರಿಗಳ ನೇತೃತ್ವದಲ್ಲಿ ಎ.30ರಂದು ಜರಗಲಿರುವುದು ಎಂದು ಟ್ರಸ್ಟಿಗಳಾದ ಪ್ರಮೋದ್ ಆರ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತ್ಯಂತ ಪುರಾತನ ಈ ಕ್ಷೇತ್ರವು 1942 ರಿಂದ ದಿ. ಕೆ.ರಾಮನಾಯಕ್ ರವರ ಆಡಳಿತಕ್ಕೊಳಪಟ್ಟು, ನಾಗರ ಪಂಚಮಿಯೊಂದಿಗೆ ಇನ್ನಿತರ ನಾಗಾರಾಧನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿಕೊಂಡು 2002ರಲ್ಲಿ ಪರಿಸರದ ಭಕ್ತಾದಿಗಳ ಸಹಕಾರದೊಂದಿಗೆ ಪುನರ್ ಪ್ರತಿಷ್ಠಾ ಕಾರ್ಯಕ್ರಮಗಳು ಜರಗಿರುತ್ತದೆ.
ಪ್ರಸ್ತುತ ರಾಧಾಕೃಷ್ಣ ನಾಯಕ್‌ರವರ ಹಿಶೆಗೆ ಬಂದ ಭೂಮಿಯಲ್ಲಿ ಅವರ ಮಗಳು ಶ್ರೀಮತಿ ಶಶಿಪ್ರಭಾ ಸುರೇಶ್‌ರವರು ತಮ್ಮ ತಂದೆಯಿಂದ ಬಂದ ಜಾಗದಲ್ಲಿ ಐದೂವರೆ ಸೆಂಟ್ಸ್ ಸ್ಥಳವನ್ನು ಕುತ್ಯಾರು ಶ್ರೀ ನಾಗಬ್ರಹ್ಮ ಸೇವಾ ಟ್ರಸ್ಟಿಗೆ ದಾನವಾಗಿ ನೀಡಿದ ಸ್ಥಳದಲ್ಲಿ ಇದೀಗ ನವೀಕರಣಗೊಂಡು ,ನಗರ ಪಂಚಾಯತ್ ವ್ಯಾಪ್ತಿಯ ಏಕೈಕ ನಾಗಬ್ರಹ್ಮ ಕ್ಷೇತ್ರವಾಗಿ ರೂಪುಗೊಂಡು ವೈದಿಕ ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. ನಾಗಬ್ರಹ್ಮ ಸೇವಾ ಟ್ರಸ್ಟ್‌ನ ಅಧ್ಯಕ್ಷರಾಗಿ ಮುಗುಳಿ ನಾರಾಯಣ ರಾವ್, ಟ್ರಸ್ಟಿಗಳಾಗಿ ವಿಶ್ವನಾಥ್ ಆರ್ ನಾಯಕ್, ಸಂತೋಷ್ ಕುಮಾರ್ ಜೈನ್, ಡಿ. ಜಗದೀಶ್, ಮಾಧವ ಗೌಡ, ಶಂಕರ್ ಹೆಗ್ಡೆ, ಪ್ರಮೋದ್ ಆರ್. ನಾಯಕ್, ವಿಜಯ ಕುಮಾರ್‌ರವರು ಆಯ್ಕೆಯಾಗಿರುತ್ತಾರೆ.

Paladka copyಪಾಲಡ್ಕ : ಮಚ್ಚಿನ ಗ್ರಾಮದ ಪಾಲಡ್ಕ ಶ್ರೀ ಬ್ರಹ್ಮಮುಗೇರು, ಕೊರಗಜ್ಜ, ಪಂಜುರ್ಲಿ ಕ್ಷೇತ್ರದ ನೂತನ ಆಲಯ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಎ.25 ರಂದು ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಮೊಕ್ತೇಸರರಾದ ಹರ್ಷ ಸಂಪಿಗೆತ್ತಾಯ ಬಿಡುಗಡೆಗೊಳಿಸಿದರು. ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅನಂತ್ರಾಮ ಗೌಡ, ಕಾರ್ಯದರ್ಶಿ ವಸಂತ ಗೌಡ ಗುಂಡೆಜಾಲು, ಕೋಶಾಧಿಕಾರಿ ವಸಂತ ಗೌಡ ಮರಕಡ, ಜೊತೆ ಕಾರ್ಯದರ್ಶಿ ಕುಮಾರಯ್ಯ ಎಂ.ಎನ್. ಹಾಗೂ ಸದಸ್ಯರಾದ ಲಕ್ಷ್ಮಣ ಗೌಡ, ಚೇತನ್ ಕೋಡಿ, ಯೋಗೀಶ್ ಮೈಲೋಡಿ, ಚಂದ್ರಕಾಂತ ನಿಡ್ಡಾಜೆ ಮತ್ತಿತರರು ಉಪಸ್ಥಿತರಿದ್ದರು.

Ballamanja Ratha copyಬಳ್ಳಮಂಜ: ಇತಿಹಾಸ ಪ್ರಸಿದ್ಧ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಎ.23 ರಿಂದ ಮೇ 2ರ ವರೆಗೆ ಮೇಷ ಜಾತ್ರೆಯು ನಡೆಯುತ್ತಿದ್ದು. ಎ.29ರಂದು ಬ್ರಹ್ಮಕಲಶ ದಿನಾಚರಣೆ ಪ್ರಯುಕ್ತ ಗಣಯಾಗ, ಏಕದಶಾರುದ್ರಾಭಿಷೇಕ, ಪವಮಾನ ಹೋಮ, ಆಶ್ಲೇಷಾ ಬಲಿ, ಶ್ರೀ ಅನಂತೇಶ್ವರ ಸ್ವಾಮಿಗೆ ವಿಶೇಷ ಕಲಶಾಭಿಷೇಕ, ಶ್ರೀ ಗಣಪತಿ ದೇವರಿಗೆ ಕಟಾಹ ಅಪೂಪ ನೈವೇದ್ಯ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಚಂದ್ರಮಂಡಲೋತ್ಸವ ನಡೆಯಲಿದೆ.
ಎ.30ರಂದು ಬೆಳಿಗ್ಗೆ 7ರಿಂದ ದರ್ಶನ ಬಲಿ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6ರಿಂದ ಮಹಾ ರಥೋತ್ಸವ, ಮಹಾಪೂಜೆ, ಶ್ರೀ ಭೂತಬಲಿ ನಡೆಯಲಿದೆ.

vivitha-sanathraj copyಪಾಂಡವರಕಲ್ಲು ಕೆ. ಜಯ ಬಂಗೇರರವರ ಪುತ್ರ ಸನತ್‌ರಾಜ್ ರವರ ವಿವಾಹ ನಿಶ್ಚಿತಾರ್ಥವು ಪಡಂತ್ರಬೆಟ್ಟು ದಿ. ವಿವೇಕ್‌ರವರ ಪುತ್ರಿ ವಿವಿತಾಳೊಂದಿಗೆ ಎ.21ರಂದು ಪಡಂತ್ರಬೆಟ್ಟು ಕರಂಬಾರು ಕೋಟಿಮುತ್ತು ವೇದಿಕೆಯಲ್ಲಿ ಜರುಗಿತು.

Vanishree - Suresh2 copyನಿಡ್ಲೆ ಗ್ರಾಮದ ಬೂಡುಜಾಲು ಮನೆ ಶ್ರೀಮತಿ ರತ್ನಾವತಿ ಮತ್ತು ಎ. ಜಿನ್ನಪ್ಪ ಗೌಡರ ಪುತ್ರಿ ವಾಣಿಶ್ರೀ ರವರ ವಿವಾಹ ನಿಶ್ಚಿತಾರ್ಥವು ಪುತ್ತೂರು ತಾಲೂಕು 102ನೇ ನೆಕ್ಕಿಲಾಡಿ ಗ್ರಾಮದ ಕೋರಿಯಾರ್ ಶ್ರೀಮತಿ ಗಿರಿಜಾ ಮತ್ತು ಗುಡ್ಡಪ್ಪ ಗೌಡರ ಪುತ್ರ ಸುರೇಶ್ ರವರೊಂದಿಗೆ ಎ. 23ರಂದು ವಧುವಿನ ಮನೆಯಲ್ಲಿ ನಡೆಯಿತು.

lasya-ajay copyಅಳದಂಗಡಿ ಕೆದ್ದು ರತ್ನಗಿರಿ ನಿವಾಸದ ಶ್ರೀಮತಿ ಜಯಶ್ರೀ ರಾಧಾಕೃಷ್ಣ ಸುವರ್ಣ ಅಡೂರು ಇವರ ಪುತ್ರಿ ಲಾಸ್ಯರವರ ವಿವಾಹವು ಕಲ್ಲಡ್ಕ ಮುಲಾರು ಭೋಜರಾಜ್‌ರವರ ಪುತ್ರ ಅಜೇಯ್‌ರೊಂದಿಗೆ ಎ.20ರಂದು ಸಂಘ ನಿಕೇತನ ಹಾಲ್ ಗಾಂಧಿನಗರ ಮಂಗಳೂರಿನಲ್ಲಿ ನಡೆಯಿತು.

mohan rohini copyಮಿತ್ತಬಾಗಿಲು ಗ್ರಾಮದ ಪಗರೆ ದಿ. ಡೀಕಯ್ಯ ಗೌಡರ ಪುತ್ರ ಮೋಹನ ಅವರ ವಿವಾಹವು ಕಳೆಂಜ ಗ್ರಾಮದ  ನಡುಜಾರು ಕಿಟ್ಟು ಗೌಡರ ಪುತ್ರಿ ರೋಹಿಣಿ ಅವರೊಂದಿಗೆ ಎ.20 ರಂದು ಕೊಲ್ಲಿ ಶ್ರೀ ದುರ್ಗಾದೇವಿ ಕಲಾ ಮಂಟಪದಲ್ಲಿ ಜರಗಿತು.

namitha-rajesh copyಗರ್ಡಾಡಿ ಗ್ರಾಮದ ನಾಗಿಲ್ದಡಿ ಮನೆಯ ರವಿ ಪೂಜಾರಿಯವರ ಪುತ್ರಿ ನಮಿತಾರ ವಿವಾಹವು ಕೊರಂಟಬೆಟ್ಟು ದಿ| ಬೋಜ ಪೂಜಾರಿಯವರ ಪುತ್ರ ರಾಜೇಶ್‌ರೊಂದಿಗೆ  ಎ.17 ರಂದು ವಾಮದಪದವು ಕರಿಮಲೆ ರಮೇಶ್ ಪೈ ಸಭಾಭವನದಲ್ಲಿ ಜರುಗಿತು.

Jagannivasa rao sanmana copyಮುಂಡಾಜೆ : ಅರಣ್ಯ ಇಲಾಖೆಯಲ್ಲಿ ಸುದೀರ್ಘ ವರ್ಷಗಳ ಕರ್ತವ್ಯ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಪ್ರಾಮಾಣಿಕ ಧಕ್ಷ ಅಧಿಕಾರಿಯಾಗಿದ್ದ ಜಗನ್ನಿವಾಸ ರಾವ್ ಮುಂಡಾಜೆ ಅವರಿಗೆ ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘದ ವತಿಯಿಂದ ಎ. 23 ರಂದು ಸನ್ಮಾನ ನಡೆಯಿತು.
ಶಿಕ್ಷಣ ತಜ್ಞರಾಗಿದ್ದ ಕೀರ್ತಿ ಶೇಷ ಆರ್.ಎನ್. ಭಿಡೆ ಅವರ ಪುತ್ರ, ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಹಿರಿಯ ಅಧಿಕಾರಿಯಾಗಿದ್ದ ಹೇಮಂತ ಭಿಡೆ, ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಕರ್ನಾಟಕ ಮಾನವ ಹಕ್ಕುಪರಿಷತ್ ತಾ| ಅಧ್ಯಕ್ಷ ಪಿ.ಸಿ. ಸೆಬಾಸ್ಟಿಯನ್, ಮುಂಡಾಜೆ ಮಿಲ್ಕ್ ಸೊಸೈಟಿ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್ ಅವರು ಸನ್ಮಾನ ನಡೆಸಿ ನಿವೃತ್ತ ಜೀವನಕ್ಕೆ ಶುಭಾಶಯ ಕೋರಿದರು.
ಈ ಸಂದರ್ಭ ಕಾರ್ಯಕ್ರಮ ಆಯೋಜಕರಾದ ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘದ ಸಂಸ್ಥಾಪಕ ನಾಮದೇವ ರಾವ್, ಅಧ್ಯಕ್ಷ ಅಶ್ರಫ್ ಆಲಿಕುಂಞಿ, ಕಾರ್ಯದರ್ಶಿ ಶಶಿಧರ ಠೋಸರ್, ಕ್ರೀಡಾ ಕಾರ್ಯದರ್ಶಿ ಬಶೀರ್ ನೆಕ್ಕರೆ, ನಿರ್ದೇಶಕರಾದ ಪ್ರವೀಣ್ ಪೂಜಾರಿ, ಸಚಿನ್, ಕೃಷ್ಣಪ್ಪ, ಅಪ್ಪಾಜಿ ಗೌಡ, ಅಶ್ವಿರ್, ಗಫೂರ್ ಮೊದಲಾದವರು ಉಪಸ್ಥಿತರಿದ್ದರು.

machina setuve udhgatane 1 copyಮಚ್ಚಿನ : ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ರೂ.3.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮಚ್ಚಿನ ಗ್ರಾಮದ ನೇರೋಳ್ದಪಲ್ಕೆ-ಬದನೋಡಿ-ಜಿಮಗಿರಿಯ ನೂತನ ಸೇತುವೆ ಹಾಗೂ ರಸ್ತೆ ಕಾಮಗಾರಿಯನ್ನು ಎ.24ರಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಉದ್ಘಾಟಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವುಮಾಡಿದರು.
ನಂತರ ಮಾತನಾಡಿದ ಶಾಸಕರು ಕೆಲವು ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ಸರಿಯಾದ ಸೇತುವೆ, ವಿದ್ಯುತ್, ಟೆಲಿಪೋನ್, ಕುಡಿಯುವ ನೀರು, ಆಸ್ಪತ್ರೆ, ಶಿಕ್ಷಣಕ್ಕಾಗಿ ಶಾಲೆ, ಕಾಲೇಜು ಇರಲಿಲ್ಲ, ತಾಲೂಕಿನ 81 ಗ್ರಾಮಗಳಿಗೂ ಈ ಸೌಲಭ್ಯವನ್ನು ಮಂಜೂರು ಮಾಡಿಸಿ ಅಭಿವೃದ್ಧಿ ಮಾಡಿಸಿದ್ದೇನೆ. 1962ರಲ್ಲಿ ವೈಕುಂಠ ಬಾಳಿಗರು ಈ ತಾಲೂಕಿಗೆ ಪ್ರಥಮ ಬಾರಿಗೆ ವಿದ್ಯುತ್ ಮಂಜೂರು ಗೊಳಿಸಿ ತಂದರು. ಅದನ್ನು ತಾಲೂಕಿನ 81 ಗ್ರಾಮಗಳಿಗೂ ತಲುಪಿಸುವ ಭರವಸೆ ನೀಡಿ ಈ ವರ್ಷ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ ನೀಡುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
94ಸಿ ಮತ್ತು 94ಸಿಸಿಯಲ್ಲಿ ವಾರದಲ್ಲಿ ಒಂದು ದಿನ ಹಕ್ಕುಪತ್ರ ನೀಡುವ ಕೆಲಸ ಮಾಡುತ್ತಿದ್ದೇನೆ. ಇನ್ನೂ ಮುಂದೆ ವಾರದಲ್ಲಿ ಎರಡು ದಿನ ಈ ಕಾರ್ಯ ನಡೆಸಲಿದ್ದೇನೆ. ಇನ್ನು ಉಳಿದಿರುವ ಒಂದು ವರ್ಷದ ಅವಧಿಯಲ್ಲಿ ತಾಲೂಕಿನ ಎಲ್ಲರಿಗೂ ಹಕ್ಕುಪತ್ರ ನೀಡುವ ಕೆಲಸ ಮಾಡುತ್ತೇನೆ.
ಬೆಳ್ತಂಗಡಿ ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಮುಂದಿನ ತಿಂಗಳು ಡಯಾಲಿಸಿಸ್ ಯಂತ್ರ ಬರಲಿದ್ದು, ಇಲ್ಲಿ ಉಚಿತ ಸೇವೆ ಲಭ್ಯವಾಗಲಿದೆ ಎಂದು ಹೇಳಿದರು.
ಬಳ್ಳಮಂಜ ಶೇಷ-ನಾಗ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಸುಬ್ಬಯ್ಯ ಶೆಟ್ಟಿ ಕೋರಬೆಟ್ಟು ಅವರು ಮಾತನಾಡಿ ಈ ಭಾಗದ ಜನರ ಬಹುವರ್ಷಗಳ ಬೇಡಿಕೆಯಾಗಿದ್ದ ಸೇತುವೆ ನಿರ್ಮಿಸಿ ಕೊಡುವ ಭರವಸೆಯನ್ನು ಶಾಸಕರು ನೀಡಿದ್ದು, ಅದನ್ನು ಈಡೇರಿಸಿ ಕೊಟ್ಟಿದ್ದಾರೆ. ಮಚ್ಚಿನ ಗ್ರಾಮಕ್ಕೆ ಈ ಅವಧಿಯಲ್ಲಿ ರೂ.13 ಕೋಟಿ ಅನುದಾನ ದೊರಕಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಮಚ್ಚಿನ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಹರ್ಷಲತಾ ಅಧ್ಯಕ್ಷತೆ ವಹಿಸಿದ್ದರು. ಕುವೆಟ್ಟು ಜಿಲ್ಲಾ ಪಂಚಾಯತು ಸದಸ್ಯೆ ಶ್ರೀಮತಿ ಮಮತಾ ಎಂ. ಶೆಟ್ಟಿ, ತಾಲೂಕು ಪಂಚಾಯತು ಸದಸ್ಯೆ ವಸಂತಿ, ಕಣಿಯೂರು ಗ್ರಾಮ ಪಂಚಾಯತು ಅಧ್ಯಕ್ಷ ಸುನೀಲ್ ಸಾಲ್ಯಾನ್, ಸದಸ್ಯ ಯಶೋಧರ ಶೆಟ್ಟಿ, ಮಚ್ಚಿನ ಗ್ರಾಮ ಪಂಚಾಯತು ಉಪಾಧ್ಯಕ್ಷ ಚಂದ್ರಶೇಖರ್, ಸದಸ್ಯೆ ಸುಮಿತ್ರ, ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್, ಸುಧೀರ್ ಶೆಟ್ಟಿ, ದಾಮೋದರ ಆಚಾರ್ಯ, ಗುತ್ತಿಗೆದಾರ ನಾಗೇಶ್, ಜಯಾನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ರಾಮಕ್ಕೆ ಅನುದಾನ ಮಂಜೂರು ಮಾಡಿಕೊಟ್ಟ ಶಾಸಕ ಕೆ. ವಸಂತ ಬಂಗೇರ ಹಾಗೂ ಗಣ್ಯರಾದ ಕೂರಬೆಟ್ಟು ಸುಬ್ಬಯ್ಯ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸುಮಿತ್ರ ಸ್ವಾಗತಿಸಿದರು.
ಅನುಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡೊಟ್ಟಿ ಡಿ’ಸೋಜಾ ವಂದಿಸಿದರು. ಗೋಪಾಲ ಪೂಜಾರಿ ಸನ್ಮಾನ ಕಾರ್ಯಕ್ರಮ ನಿರೂಪಿಸಿದರು.

anathodi shadadhara copyಬೆಳಾಲು : ಇಲ್ಲಿಯ ಅನಂತೋಡಿಯಲ್ಲಿ ಜೀರ್ಣೋದ್ಧಾರ ಗೊಳ್ಳುತ್ತಿರುವ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಧರ್ಮದರ್ಶಿ ಯು. ವಿಜಯರಾಘವ ಪಡ್ವೆಟ್ನಾಯರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಎ.21ರಂದು ಷಢಾಧಾರ ಪ್ರತಿಷ್ಠೆ, ನಿಧಿ ಕುಂಭ ಸಮರ್ಪಣೆ ಮತ್ತು ಗರ್ಭನ್ಯಾಸ ನಡೆಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ಜೀವಂಧರ ಕುಮಾರ್ ಜೈನ್, ಕಾರ್ಯಾಧ್ಯಕ್ಷ ತಿಮ್ಮಪ್ಪ ಗೌಡ ಬನಂದೂರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ ವಕೀಲರು, ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಭಟ್, ಕಾರ್ಯದರ್ಶಿ ಸತೀಶ್ ಗೌಡ ಎಳ್ಳುಗದ್ದೆ, ಸದಾಶಿವ ಒಡಿಪ್ರೊಟ್ಟು, ಜೊತೆ ಕಾರ್ಯದರ್ಶಿಗಳಾದ ಡೀಕಯ್ಯ ಗೌಡ, ಸೇವಾ ಪ್ರತಿನಿಧಿ ಕು| ಆಶಾ, ಗೌರವ ಸಲಹೆಗಾರರಾದ ಎನ್.ಜತ್ತನ್ನ ಗೌಡ, ಉದಿತ್ ಕುಮಾರ್ ಜೈನ್, ದೇಜಪ್ಪ ಗೌಡ ಎಳ್ಳುಗದ್ದೆ, ದೇಜಪ್ಪ ಗೌಡ ಅರಣೆಮಾರು, ಲಿಂಗಪ್ಪ ಪೂಜಾರಿ ಬನಂದೂರು, ಬಾಬು ಗೌಡ ಅಲಕ್ಕೆದಡ್ಡ, ಶ್ರೀನಿವಾಸ ಗೌಡ ಗಣಪನಗುತ್ತು, ಆನಂದ ಆಚಾರ್ಯ ಶಾಂತರಾಮ ಜ್ಯುವೆಲರ‍್ಸ್, ಪಿ.ಡಿ.ಓ ಮೋಹನ ಬಂಗೇರ, ಮುಖ್ಯೋಪಾಧ್ಯಯ ರಾಮಕೃಷ್ಣ ಭಟ್, ಶಿಕ್ಷಕ ಧರ್ಮೇಂದ್ರ ಕುಮಾರ್, ತಾಲೂಕು ಗೌಡ ಯಾನೆ ಒಕ್ಕಲಿಗ ಸಂಘದ ಅಧ್ಯಕ್ಷ ಜಿ. ಸೋಮೆ ಗೌಡ, ಸೀತಾರಾಮ ಬಿ.ಎಸ್, ಭಜನಾ ಮಂಡಳಿಯ ಅಧ್ಯಕ್ಷ ಸುಂದರ ಎಂ.ಕೆ, ಅರ್ಚಕ ಗಿರೀಶ್ ಬಾರಿತ್ತಾಯ ಎಲ್ಲಾ ಬೈಲುವಾರು ಸಮಿತಿಗಳ ಸಂಚಾಲಕರು ಗಳು, ಸಹ ಸಂಚಾಲಕರುಗಳು, ಆರ್ಥಿಕ ಸಮಿತಿಯ ಸಂಚಾಲಕ ಮೋಹನ ಗೌಡ ಎಸ್, ನಿತಿನ್ ಬನಂದೂರು, ದಿನೇಶ್ ಪೂಜಾರಿ ಉಪ್ಪಾರು ಹಾಜರಿದ್ದು ಸಹಕರಿಸಿದ್ದರು. ಮಾಯಾ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹೆಚ್.ಪದ್ಮ ಗೌಡ, ಶೇಖರ ಗೌಡ ಕೊಲ್ಲಿಮಾರು, ಗ್ರಾ.ಪಂ ಸದಸ್ಯ ಜಯಂತ ಗೌಡ, ಬೆಳಾಲು ಪ್ರಾ.ಕೃ.ಪ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ. ರುಕ್ಮಯ್ಯ ಗೌಡ, ಹಾ.ಉ.ಸ ಸಂಘದ ಅಧ್ಯಕ್ಷ ಯೋಗೀಶ್ ಗೌಡ, ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ರತ್ನಾಕರ ಆಚಾರ್ಯ, ಗುರುರಾಜ ಒಡಿಪ್ರೊಟ್ಟು, ಹರೀಶ್ ಮುಂಡತ್ಯಾರು, ಚೀಂಕ್ರ ಗೌಡ ಕಂಬಳದಡ್ಡ, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಜನಾ ಮಂಡಳಿಯ ಸದಸ್ಯರುಗಳು, ಊರವರು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Sebastin new copyಬೆಳ್ತಂಗಡಿ : ಮಾನವ ಹಕ್ಕುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಜನಜಾಗೃತಿಯ ದೃಷ್ಟಿಕೋನದಿಂದ ಈಗಾಗಲೇ ರಾಜ್ಯಾಧ್ಯಂತ ಕಾರ್ಯಾಚರಿಸುತ್ತಿರುವ ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಇದರ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷರಾಗಿ ಮುಂಡಾಜೆ ಅನ್ನಾ ಕಲೆಕ್ಷನ್ಸ್ ಮಾಲಿಕ, ಲೂನಾರ‍್ಸ್ ವಿತರಕ ಪಿ.ಸಿ. ಸೆಬಾಸ್ಟಿಯನ್ ಅವರು ನೇಮಕಗೊಂಡಿದ್ದಾರೆ. ಸಮಿತಿಯ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ಅವರು ಈ ಆಯ್ಕೆಯನ್ನು ಪುರಸ್ಕರಿಸಿ ನೇಮಕಾತಿ ನೀಡಿದ್ದಾರೆ. ಸಮಿತಿ ಸದಸ್ಯರಾಗಿ ಪ್ರೊಫಸರ್ ಜಯಕುಮಾರ್ ಶೆಟ್ಟಿ, ನ್ಯಾಯವಾದಿ ಫ್ರಾನ್ಸಿಸ್, ಯಂಗ್ ಚಾಲೆಂಜರ‍್ಸ್ ಸಂಸ್ಥಾಪಕ ನಾಮದೇವ ರಾವ್ ಮುಂಡಾಜೆ, ಅಬ್ರಾಹಾಂ ಜೇಮ್ಸ್ ಪಿ.ವಿ, ಜೈಸನ್ ವಿ.ವಿ, ಜೋಸೆಫ್ ಕೆ. ಜೆ, ವಿ.ಟಿ ಆಂಟೊನಿ, ಪತ್ರಕರ್ತ ಅಶ್ರಫ್ ಆಲಿಕುಂಞಿ  ಮತ್ತು ಪಿ.ಸಿ ಮೆಲ್ಬಿ ಇವರು ಆಯ್ಕೆಯಾಗಿದ್ದಾರೆ.

milkಮಡಂತ್ಯಾರು : ಮಡಂತ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಎ.23ರಂದು ನಡೆದ ಚುನಾವಣೆಯಲ್ಲಿ 13ರಲ್ಲಿ 13ನಿರ್ದೇಶಕರು ಸಹಕಾರಿ ಭಾರತಿ ಬೆಂಬಲಿತರು ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಗಿರಿಯಪ್ಪ ನಾಯ್ಕ, ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಸಂಜೀವ ಮೂಲ್ಯ ಮತ್ತು ಅಶೋಕ್ ಕುಮಾರ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಶ್ರೀಮತಿ ವಿಜಯ ಅವಿರೋಧವಾಗಿ ಆಯ್ಕೆಯಾದರೆ, ಉಳಿದ ಕ್ಷೇತ್ರಕ್ಕೆ ಎ.23ರಂದು ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ ಸಹಕಾರಿ ಭಾರತಿ ಬೆಂಬಲಿತ ನಿವೃತ್ತ ಸೇನಾಧಿಕಾರಿ ಹೆಚ್. ಕಾಂತಪ್ಪ ಗೌಡ ಎಂ. ಮಂಜಯ್ಯ ಶೆಟ್ಟಿ, ರವಿರಾಜ ಶೆಟ್ಟಿ, ಎಂ. ರಾಮಕೃಷ್ಣ ಹೆಬ್ಬಾರ್, ಸದಾಶಿವ ಶೆಟ್ಟಿ, ಸಂಜೀವ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಮಹಿಳಾ ಮೀಸಲು ಕ್ಷೇತ್ರದಿಂದ ಶ್ರೀಮತಿ ಆಗ್ನೇಸ್ ಎಂ. ಪ್ರಾಂಕ್ ಮತ್ತು ಶ್ರೀಮತಿ ಸೌಮ್ಯ ಇವರು ಅತ್ಯಧಿಕ ಮತದಿಂದ ಚುನಾಯಿತರಾಗಿ ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ. ಇವರೆಲ್ಲರೂ ಸಹಕಾರಿ ಭಾರತಿ ಬೆಂಬಲಿತ ಅಭ್ಯರ್ಥಿಗಳಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ರಿಟರ್ನಿಂಗ್ ಅಧಿಕಾರಿಯಾಗಿ ಸತೀಶ್ ನಾಯ್ಕ್ ಎಲ್ ಭಾಗವಹಿಸಿ ಚುನಾವಣೆಯನ್ನು ನಡೆಸಿಕೊಟ್ಟರು.

ballamanja nema copyಬಳ್ಳಮಂಜ : ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜದಲ್ಲಿ ಎ.23 ರಿಂದ ಮೇ.2ರ ವರೆಗೆ ನಡೆಯುವ ಮೇಷ ಜಾತ್ರೆಯ ಪ್ರಯುಕ್ತ ಎ.25 ರಂದು ಪೂರ್ವಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 4 ರಿಂದ ಶ್ರೀ ದೇವಳದಿಂದ ಭಂಡಾರ ಹೊರಟು ಪಿಲಿಚಾಮುಂಡಿ ದೈವದ ನೇಮ ಜರಗಿತು. ರಾತ್ರಿ ಮಹಾಪೂಜೆ, ಉತ್ಸವ ಜರಗಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆನುವಂಶಿಯ ಆಡಳಿತ ಮೊಕ್ತೇಸರರಾದ ಡಾ| ಯಂ. ಹರ್ಷ ಸಂಪಿಗೆತ್ತಾಯ ಹಾಗೂ ತಂತ್ರಿಗಳು, ಊರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

kadirudyava amanthrana pathrike bidugade copyಧರ್ಮಸ್ಥಳ : ಕಡಿರುದ್ಯಾವರ ಮಠ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ, ನೂತನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಭಾ ಮಂಟಪದ ಉದ್ಘಾಟನೆಯು ಮೇ 5ರಿಂದ ಮೇ 10ರವರೆಗೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಎ.25ರಂದು ಬೀಡಿನಲ್ಲಿ ಸಮಿತಿಯ ಸದಸ್ಯರು ನೀಡಿದರು.
ಈ ಸಂದರ್ಭದಲ್ಲಿ ಆಡಳಿತ ಮೋಕ್ತೇಸರ ಕಿಶೋರ್ ಕುಮಾರ್ ವಳಂಬ್ರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಂಜನ್ ಜಿ. ಗೌಡ, ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ಮಠ, ಜೋಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಗೌಡ ವಳಂಬ್ರ, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ವಿನಯಚಂದ್ರ ವಳಂಬ್ರ, ಕಾರ್ಯಾಧ್ಯಕ್ಷ ತೀರ್ಥಪ್ರಸಾದ್ ವಳಂಬ್ರ, ಕೋಶಾಧಿಕಾರಿ ಆನಂದ ಗೌಡ, ಮೋಹನ ಗೌಡ ಬಾಯಿತ್ಯಾರು, ಆನಂದ ಗೌಡ ನಡುಮನೆ, ಧರ್ಣಪ್ಪ ಸಾಲ್ಯಾನ್ ಕಾನರ್ಪ, ಗೋಪಾಲ ಗೌಡ ಉದ್ಧಾರ, ಲೋಕಯ್ಯ ಗೌಡ ಕಾನರ್ಪ, ಪ್ರವೀಣ್ ಕೊಲ್ಪೆ ಉಪಸ್ಥಿತರಿದ್ದರು.

skv

skv1ಬೆಳ್ತಂಗಡಿ : ಸಿರಿಯನ್ ಕ್ಯಾಥೋಲಿಕ್ ವಿವಿದೋದ್ಧೇಶ ಸಹಕಾರ ಸಂಘವು ಸುವರ್ಣ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎ. 27(ಇಂದು) ಬೆಳ್ತಂಗಡಿ ಬಸ್‌ನಿಲ್ದಾಣ ಬಳಿ ಇರುವ ಸಾಂತೋಮ್ ಟವರ್‌ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಚಾನ್ಸಲರ್ ಫಾ. ಟೋಮಿ ಕಲ್ಲಿಕಾಟ್ ಆಶೀರ್ವಚನ ನೀಡಿದರು.
ಅಧ್ಯಕ್ಷ ವಿ.ಟಿ ಸೆಬಾಸ್ಟಿನ್, ಉಪಾಧ್ಯಕ್ಷ ಅಗಸ್ಟಿನ್ ಕೆ.ಜಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೋಸೆಫ್ ಸಿ., ಆಡಳಿತ ಮಂಡಳಿ ಸದಸ್ಯರಾದ ಮ್ಯಾಥ್ಯು ಪಿ.ಜೆ., ಜೋಸ್ ಕೆ.ಜೆ., ಜಾರ್ಜ್ ಎಂ.ವಿ., ಅನಿಲ್ ಎ.ಜೆ., ಪ್ರಾನ್ಸಿಸ್ ಕೆ.ವಿ., ರಾಜೇಶ್ ಕೆ.ವಿ., ಜೋಸ್ ಇ.ಎಂ., ಅಲ್ಫಸ್ಸಾ ಲಾರೆನ್ಸ್, ಡೈಸಿ ಬೈಜು, ಬ್ಯಾಂಕಿನ ಗ್ರಾಹಕ ಐ.ಎಲ್ ಪಿಂಟೋ, ಸಿಬ್ಬಂದಿಗಳಾದ ಫಾ. ಬಿನೊಯ್, ಸಿಸ್ಟರ್ ನಿಮ್ಮಿ ರೋಸ್ ಮೊದಲಾದರವರು ಉಪಸ್ಥಿತರಿದ್ದರು.

savanalu

savanalu1ಮೇಲಂತಬೆಟ್ಟು ಗ್ರಾ.ಪಂ ವ್ಯಾಪ್ತಿಯ ಸವಣಾಲು- ಬೆಳ್ತಂಗಡಿ ಮುಖ್ಯ ರಸ್ತೆಯ ಸೇತುವೆ ಬಳಿ ರಸ್ತೆ ಬದಿಯಲ್ಲೇ ಕೊರೆದಿದ್ದ ಕೊಳವೆಬಾವಿಯಲ್ಲಿ ನೀರು ಅಲಭ್ಯವಾಗಿರುವುದರಿಂದ ಅದನ್ನು ಗ್ರಾ. ಪಂ ವತಿಯಿಂದ ಮುಚ್ಚಿ ಕ್ರಮ ಕೈಗೊಳ್ಳಲಾಗಿದೆ ಎಂದು ಪಿಡಿಒ ರಾಜಶೇಖರ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ರಸ್ತೆ ತಿರುವೊಂದರ ಸೇತುವೆ ದಾಟುತ್ತಿದ್ದಂತೆ ರಸ್ತೆ ಬದಿಯೇ ಅಂದಾಜು 3 ವಾರಗಳ ಹಿಂದೆ ಈ ಕೊಳವೆ ಬಾವಿ ಕೊರೆಯಲಾಗಿತ್ತು. ಆದರೆ ಅದರಲ್ಲಿ ನೀರು ಸಿಗದೇ ಇದ್ದುದರಿಂದ ಅದನ್ನು ಅಲ್ಲಿಗೇ ಬಿಟ್ಟು ಹೋಗಲಾಗಿತ್ತು.
ಆ ಬಳಿಕ ಜಿಲ್ಲಾಧಿಕಾರಿ ಡಾ| ಕೆ. ಜಿ ಜಗಧೀಶ್, ಜಿ.ಪಂ ಸಿಇಒ ಡಾ| ರವಿ ಅವರ ಆದೇಶದಂತೆ ತೆರೆದ ಕೊಳವೆ ಬಾವಿ ಮುಚ್ಚುವ ಬಗ್ಗೆ ಬಂದಿದ್ದ ಕಟ್ಟುನಿಟ್ಟಿನ ಆಜ್ಞಯಂತೆ ಸಕಾಲದಲ್ಲಿ ಸ್ಪಂದಿಸಿರುವ ಪಂಚಾಯತ್ ಆಡಳಿತ ಈ ಬಗ್ಗೆ ಕ್ರಮ ಜರುಗಿಸಿ ಬೋರ್‌ವೆಲ್ ಕೊಳವೆಯನ್ನು ಮುಚ್ಚಿಸಿ ಕ್ರಮ ಕೈಗೊಂಡಿದೆ.
ಸುದ್ದಿ ಬಿಡುಗಡೆ ಪತ್ರಿಕೆಯ ವತಿಯಿಂದ ಕೊಳವೆಬಾವಿ ಬಗ್ಗೆ ಜನಜಾಗೃತಿ ಅಭಿಯಾನ ಪ್ರಾರಂಭಿಸಿದ್ದು, ಆ ಹಿನ್ನೆಲೆಯಲ್ಲಿ ಈ ಬಗ್ಗೆ ಸಚಿತ್ರ ವರದಿ ಪ್ರಕಟಿಸಿತ್ತು.
ರಸ್ತೆಯ ಮೇಲೆಯೇ ಕಲ್ಲಿನ ಪುಡಿಯ ರಾಶಿ : ಕೊಳವೆ ಬಾವಿಯ ಕೊಳವೆಯೇನೋ ಮುಚ್ಚಲಾಗಿದೆ. ಆದರೆ ಕೊರೆಯುವ ಸಂದರ್ಭ ಹೊರಬಂದಿರುವ ಕಲ್ಲಿನ ಪುಡಿ ಸದ್ರಿ ಸ್ಥಳದ ರಸ್ತೆ ಮೇಲೆಯೇ ರಾಶಿ ಬಿದ್ದಿದ್ದು ಅದನ್ನು ಇನ್ನೂ ತೆರವುಗೊಳಿಸಲಾಗಿಲ್ಲ. ಇದು ಅಪಾಯಕಾರಿ ತಿರುವು ರಸ್ತೆಯ ಬದಿಯೇ ಇದ್ದು ಇಲ್ಲಿ ಮುಂದಕ್ಕೆ ಅಪಾಯ ಆಗುವ ಮೊದಲು ಆಡಳಿತ ಸ್ಪಂದಿಸಬೇಕಿದೆ.

Untitled-1 copy                                            ಮುಹಮ್ಮದ್ ರಫಿ            ಸುರೇಂದ್ರನ್                ಜಗದೀಶ್ಚಂದ್ರ

ಬೆಳ್ತಂಗಡಿ : ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಸರ್ವರ ಮೆಚ್ಚುಗೆಗೆ ಪಾತ್ರವಾಗಿರುವ ಬೆಳ್ತಂಗಡಿ ತಾಲೂಕು ಮಾಜಿ ಸೈನಿಕರ ಸಂಘದ ಮುಂದಿನ ಸಾಲಿನ ಅಧ್ಯಕ್ಷರಾಗಿ ಮುಹಮ್ಮದ್ ರಫಿ ಎಂ.ಡಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಂದ್ರನ್, ಕೋಶಾಧಿಕಾರಿಯಾಗಿ ಜಗದೀಶ್ಚಂದ್ರ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಮಿತಿಯ ಗೌರವಾಧ್ಯಕ್ಷರಾಗಿ ನಿವೃತ್ತ ಮೇಜರ್ ಜನರಲ್ ಎಂ. ವಿ ಭಟ್ ಮುಂಡಾಜೆ, ಉಪಾಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ, ಸಹಕಾರ್ಯ ದರ್ಶಿಯಾಗಿ ದಯಾನಂದ, ಸಹ ಕೋಶಾಧಿಕಾರಿಯಾಗಿ ಕೃಷ್ಣ ಭಟ್, ನಿರ್ದೇಶಕರಾಗಿ ಸುನಿಲ್ ಶೆಣೈ, ಮೋಹನ್ ಕೆ. ಎಚ್, ಕಾಂತಪ್ಪ ಗೌಡ, ರಾಮ್ ಭಟ್, ಎ. ಕೆ ಶಿವನ್, ಲೆಕ್ಕಪರಿಶೋಧಕರಾಗಿ ಎಸ್ ಗೋರೆ, ಮತ್ತು ವಿಠಲ್ ರಾವ್ ಇವರು ಆಯ್ಕೆಯಾಗಿದ್ದಾರೆ.

belthangady skdrdp ge prasasri copyವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2016-17ನೇ ಸಾಲಿನ ಹಸಿರು ಇಂಧನ ಘಟಕಗಳ ಜೈವಿಕ ಅನಿಲ ಘಟಕ ಅನುಷ್ಠಾನದಲ್ಲಿ ರಾಜ್ಯದಲ್ಲಿ ಬೆಳ್ತಂಗಡಿ ತಾಲೂಕು ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಉಡುಪಿಯ ಅಂಬಲಪಾಡಿ ರಾಷ್ಟ್ರೀಯ ಸ್ವಸಹಾಯ ಸಂಘಗಳ ತರಬೇತಿ ಸಂಸ್ಥೆಯ ಪ್ರಗತಿಸೌಧ ಸಭಾಂಗಣದಲ್ಲಿ ಜರಗಿದ ರಾಜ್ಯ ವ್ಯಾಪ್ತಿಯ ಕೃಷಿ ಮೇಲ್ವಿಚಾರಕರ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಧರ್ಮಸ್ಥಳ ಗ್ರಾ.ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಎಲ್.ಎಚ್. ಮಂಜುನಾಥ್ ಅವರು ಬೆಳ್ತಂಗಡಿ ಕೃಷಿ ಮೇಲ್ವಿಚಾರಕ
ರಾಮ್‌ಕುಮಾರ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು.
ಈ ವೇಳೆಯಲ್ಲಿ ಉಡುಪಿಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಧಾರಾವಾಡದ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮ, ಕೊಪ್ಪಳದ ಪ್ರಾದೇಶಿಕ ನಿರ್ದೇಶಕ ಗಂಗಾಧರ ರೈ, ಬೆಂಗಳೂರಿನ ಪ್ರಾ. ನಿರ್ದೇಶಕ ಆನಂದ ಸುವರ್ಣ, ಕಲ್ಬುರ್ಗಿಯ ಪ್ರಾ. ನಿರ್ದೇಶಕ ದುಗ್ಗೇ ಗೌಡ, ಕೃಷಿ ವಿಭಾಗದ ನಿರ್ದೇಶಕ ಮನೋಜ್ ಮಿನೇಜಸ್, ದ.ಕ. ಜಿಲ್ಲಾ ನಿರ್ದೇಶಕ ಚಂದ್ರಶೇಖರ ಕೆ., ಬೆಳ್ತಂಗಡಿ ಯೋಜನಾಧಿಕಾರಿ ರೂಪಾ ಜಿ. ಜೈನ್, ಕೃಷಿ ವಿಭಾಗದ ಯೋಜನಾಧಿಕಾರಿಗಳಾದ ಸುಧೀರ್ ಜೈನ್, ದೇವರಾಜ್ ಎಂ. ನಾಕ್ ಉಪಸ್ಥಿತರಿದ್ದರು.
ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 108 ಗೋಬರ್ ಗ್ಯಾಸ್ ಘಟಕಗಳ ಅನುಷ್ಠಾನ ಮಾಡಲಾಗಿದ್ದು, ಕಳೆದ 16 ವರ್ಷದಲ್ಲಿ 6230ಘಟಕಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಇದಕ್ಕಾಗಿ ತಾಲೂಕಿನ 10 ವಲಯದ ಮೇಲ್ವಿಚಾರಕರು ಮತ್ತು ಸೇವಾಪ್ರತಿನಿಧಿಗಳ ಸಹಕಾರದಿಂದ ಸಾಧ್ಯವಾಗಿದೆ ಎನ್ನುತ್ತಾರೆ ಬೆಳ್ತಂಗಡಿ ಕೃಷಿ ಮೇಲ್ವಿಚಾರಕ ರಾಮ್‌ಕುಮಾರ್.

Bhagavathi devathana kola copy

Bhagavathi kola copyಮೇಲಂತಬೆಟ್ಟು : ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನ ಮೇಲಂತಬೆಟ್ಟುವಿನಲ್ಲಿ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವದ 8ನೇ ವರ್ಷದ ವಾರ್ಷಿಕೋತ್ಸವ ಹಾಗೂ ಅಗ್ನಿಗುಳಿಗೆ ದೈವಕ್ಕೆ ‘ಸಿರಿ ಸಿಂಗಾರದ ಕೋಲ’ ಎ.17ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ ಗಣಹೋಮ, ದೇವಿಗೆ ಪಂಚಾಮೃತ ಅಭಿಷೇಕ, ಕಲಶಾಭಿಷೇಕ 9.05 ಕ್ಕೆ ಗುರುಪೂಜೆ ಬಳಿಕ ದುರ್ಗಾ ಹೋಮ, 11.05 ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12.05 ಕ್ಕೆ ದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಸಂಜೆ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮಹಾಸಂಸ್ಥಾನಂ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಕ್ಷೇತ್ರಕ್ಕೆ ಭೇಟಿ ನೀಡಿದಾಗ ಪೂರ್ಣಕುಂಭ ದೊಂದಿಗೆ ಸ್ವಾಗತಿಸಲಾಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿಯವರು ಶಕ್ತಿ ಸ್ವರೂಪಿನಿ ಭಗವತಿ ದೇವಿಯನ್ನು ಯೋಗೀಶ್‌ರವರು ಶ್ರದ್ಧಾ-ಭಕ್ತಿಯಿಂದ ನಂಬಿಕೊಂಡು ತನ್ನ ಮನೆಯಲ್ಲಿ ಆರಾಧನೆ ಮಾಡಿ, ಈಗ ದೇವಸ್ಥಾನ ನಿರ್ಮಿಸಿ ಪೂಜಿಸಿಕೊಂಡು ಬರುತ್ತಿದ್ದಾರೆ. ಪ್ರತಿವರ್ಷ ವಾರ್ಷಿಕ ಉತ್ಸವ, ಕ್ಷೇತ್ರದಲ್ಲಿ ಅನ್ನದಾನದ ಸೇವೆ ದೇವಿ ಭಗವತಿ ಹಾಗೂ ಅಗ್ನಿಗುಳಿಗನ ಅನುಗ್ರಹದಿಂದ ಇಲ್ಲಿ ನಡೆದು ಕೊಂಡು ಬರುತ್ತಿದೆ. ಈ ದೇವಸ್ಥಾನ ಇನ್ನಷ್ಟು ಅಭಿವೃದ್ಧಿಯಾಗ ಬೇಕು, ಇದಕ್ಕೆ ಭಕ್ತರು ಸಹಕಾರ ನೀಡಬೇಕು, ಈ ಕ್ಷೇತ್ರದ ಸಾನಿಧ್ಯದಲ್ಲಿ ಅಪಾರವಾಗಿರುವ ಶಕ್ತಿ ಇಲ್ಲಿ ಆಗಮಿಸುವ ಭಕ್ತರಿಗೆ ಹಾಗೂ ಊರಿಗೆ ಬೆಳಕನ್ನು ನೀಡುತ್ತಿದೆ ಎಂದರು. ಬಳಿಕ ಶ್ರೀ ದೇವಿಗೆ ಮಹಾ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ರಾತ್ರಿ 10 ರಿಂದ ಕ್ಷೇತ್ರದ ಕಾರಣಿಕ ದೈವ ಅಗ್ನಿಗುಳಿಗನ ‘ಸಿರಿ ಸಿಂಗಾರದ ಕೋಲ’ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಸದ್ಭಕ್ತರ ಉಪಸ್ಥಿತಿಯಲ್ಲಿ ನಡೆಯಿತು. ಸಂಜೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಸ್ಥಳೀಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ವೈದಿಕ ಕಾರ್ಯಕ್ರಮವನ್ನು ನಾರಾಯಣ ಶಾಂತಿ ಪಟ್ಲಕೆರೆ ಸರಪಾಡಿ, ರಘುನಾಥ ಶಾಂತಿ, ಮಹೇಶ್ ಶಾಂತಿ, ರಾಜೇಶ್ ಶಾಂತಿ, ಪ್ರಧಾನ ಅರ್ಚಕ ಯಶವಂತ ಶಾಂತಿ ಇವರು ನಡೆಸಿದರು. ಆಡಳಿತ ಮೊಕ್ತೇಸರ ಯೋಗೀಶ ಪೂಜಾರಿ, ಪೂಜಾ ಸಮಿತಿ ಅಧ್ಯಕ್ಷ ಹಾಗೂ ಸರ್ವ ಸದಸ್ಯರು, ಭಜನಾ ಸಮಿತಿ ಅಧ್ಯಕ್ಷ ಹಾಗೂ ಸರ್ವ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘ ಮತ್ತು ಊರ ಹಾಗೂ ಪರವೂರ ಹತ್ತು ಸಮಸ್ತರು ಕಾರ್ಯಕ್ರಮಕ್ಕೆ ಪೂರ್ಣ ಸಹಕಾರ ನೀಡಿದರು. ಅಪಾರ ಸಂಖ್ಯೆಯಲ್ಲಿ ಊರ ಹಾಗೂ ಪರವೂರ ಭಕ್ತರು, ಪ್ರಗತಿ ಬಂಧು ತಂಡದವರು, ಸರಕಾರಿ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು, ಸಂಘ-ಸಂಸ್ಥೆಯವರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

kashipatna bangera sanmana copy

kashipatna sanmana copyಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ತಪಸ್ಸು, ಧ್ಯಾನದಷ್ಟೇ ಪುಣ್ಯ ಕಾರ್ಯ: ಅನಂತ ಪದ್ಮನಾಭ ಅಸ್ರಣ್ಣ

ಅಭಿವೃದ್ಧಿ ನಿಗಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿಯವರು ನೀಡಿದಾಗ ನಾನು ಅದನ್ನು ತಿರಸ್ಕರಿಸಿ ನನ್ನ ಕ್ಷೇತ್ರದ ಅಭಿವೃದ್ಧಿಗೆ ರೂ. 500 ಕೋಟಿ ಅನುದಾನ ಒದಗಿಸುವಂತೆ ಒತ್ತಾಯಿಸಿದ್ದೆ. ಆದರೆ ಅದಕ್ಕೆ ಮುಖ್ಯಮಂತ್ರಿಗಳು ಒಪ್ಪಲಿಲ್ಲ. ನಿಗಮದ ಅಧಿಕಾರವನ್ನು ವಹಿಸಿಕೊಂಡರೆ 100 ಕೋಟಿ ರೂ. ಅನುದಾನವನ್ನು 4 ಕಂತಿನಲ್ಲಿ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದು, ಅದಕ್ಕಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದೇನೆ. – ಕೆ. ವಸಂತ ಬಂಗೇರ

ಸನ್ಮಾನದ ಮಹಾಪೂರಕ್ಕೆ ಸಾಕ್ಷಿಯಾಯಿತು ಕಾಶಿಪಟ್ಣ…
ಜಾತಿ, ಧರ್ಮ ಮರೆತು ರಾಜಕೀಯ ಕ್ಷೇತ್ರದ ಸಾಧಕರಿಗೆ ದೊರೆತ ಸನ್ಮಾನದ ಮಹಾಪೂರಕ್ಕೆ ಕಾಶಿಪಟ್ಣ ಸಾಕ್ಷಿಯಾಯಿತು. ಮುಸ್ಸಂಜೆ ವೇಳೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. ನಿಗಧಿತ ನಾಗರಿಕ ಸಮಾಜದಿಂದ ಮಾತ್ರವಲ್ಲದೆ ವಿವಿಧ ಸಂಘ-ಸಂಸ್ಥೆಗಳಿಂದ ಹಾಗೂ ವೈಯುಕ್ತಿಕವಾಗಿ ಜನರು ವೇದಿಕೆಗೆ ಆಗಮಿಸಿ ಹೂಹಾರ, ಮಾಲೆಗಳನ್ನು ಶಾಸಕ ಬಂಗೇರರಿಗೆ ಸತೀಶ್ ಕಾಶಿಪಟ್ಣರಿಗೆ ಹಾಕಿ ಅಭಿನಂದಿಸಿದರು.

ಕಾಶಿಪಟ್ಣ: ಸಮಾಜ ಸೇವೆ ಅನ್ನುವುದು ದೇವರಿಗೂ ಇಷ್ಟವಾದ ಕಾರ್ಯ. ಇದಕ್ಕಿಂತ ಮಿಗಿಲಾದ ಸೇವೆ ಬೇರೆ ಇಲ್ಲ. ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದು ತಪಸ್ಸು, ಧ್ಯಾನದಷ್ಟೇ ಪುಣ್ಯ ಕಾರ್ಯವಾಗಿದೆ. ಸೋಲಿನ ಬಗ್ಗೆ ಅರಿವು ಹೊಂದಿರುವ ಸಮ್ಮಾನಿತರು ಸಾಧನೆಯ ಹಠವಾದಿಗಳಾಗಿದ್ದಾರೆ. ಸಮಾಜಸೇವೆಯ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿರುವ ಇವರ ಸಾಧನೆ ಎಲ್ಲರಿಗೂ ಸ್ಫೂರ್ತಿದಾಯಕ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕ ವೇ|ಮೂ| ಅನಂತ ಪದ್ಮನಾಭ ಅಸ್ರಣ್ಣ ನುಡಿದರು.
ಅವರು ಎ. 23ರಂದು ಕಾಶಿಪಟ್ಣ ಪ್ರೌಢ ಶಾಲಾ ಮೈದಾನದಲ್ಲಿ ಕಾಶಿಪಟ್ಣ, ಪೆರಾಡಿ ಮತ್ತು ಮರೋಡಿ ಗ್ರಾಮಸ್ಥರ ಸಹಯೋಗದಿಂದ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಶಾಸಕ ಕೆ. ವಸಂತ ಬಂಗೇರ ಹಾಗೂ ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷರಾಗಿ ಹಾಗೂ ರಾಜ್ಯ ಕೃಷಿ ಮಾರಾಟ ಮಂಡಳಿಗೆ ನಿರ್ದೇಶಕರಾಗಿ ಆಯ್ಕೆಯಾಗಿರುವ ಸತೀಶ್ ಕೆ. ಕಾಶಿಪಟ್ಣ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಸಮಾರಂಭವನ್ನು ಉದ್ಘಾಟಿಸಿದ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಯಶೋವರ್ಮ ಮಾತನಾಡಿ, ಅಭಿವೃದ್ಧಿ ಕಂಡಾಗ ಕಾಲೆಳೆಯುವವರು ಜಾಸ್ತಿಯಾಗುತ್ತಾರೆ. ಎನ್ನತ ಹುದ್ದೆಗೆ ಹೋದಂತೆಲ್ಲ ಮೈಲಿಗಲ್ಲಿನಂತೆ ಗಮನಿಸುವವರೂ ಜಾಸ್ತಿಯಾಗುತ್ತಾರೆ. ಅಧಿಕಾರದಲ್ಲಿ ಮೃದು ಹಾಗೂ ಕಠೋರ ಭಾವನೆ ಅಗತ್ಯ. ಆದರೆ ಅದನ್ನೆಲ್ಲ ಸಮತೋಲನದಲ್ಲಿಟ್ಟುಕೊಂಡು ಬದುಕನ್ನು ಸಮಾಜಸೇವೆಗೆ ಮೀಸಲಿಟ್ಟಿರುವ ಬಂಗೇರರ ಹಾಗೂ ಸತೀಶ್ ಕಾಶಿಪಟ್ಣರವರ ಕಾರ್ಯಸಾಧನೆ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಸರ್ವ ಧರ್ಮ ಹಾಗೂ ಜಾತಿಯವರು ಒಟ್ಟು ಸೇರಿ ಆಯೋಜಿಸಿದ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಜೀವನದಲ್ಲಿ ಆತ್ಮಸಂತೃಪ್ತಿ ಬೇಕು. ತೃಪ್ತಿ ಅನ್ನುವುದು ಸಿಗದಿದ್ದರೆ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ. ಸಮಾಜಸೇವೆಯಲ್ಲಿ ತೃಪ್ತಿ ಕಾಣುತ್ತಿರುವ ಇವರ ಬದುಕು ಉಜ್ವಳವಾಗಲಿ ಎಂದರು.
ಹೊಸತನದ ಯೋಜನೆಗಳ ಮೂಲಕ ಜನರ ಹೃದಯ ಗೆದ್ದಿರುವ ಸಮ್ಮಾನಿತರು ಸಮಾನ ಮನಸ್ಸಿನ ಸರ್ವ ಜಾತಿ, ಧರ್ಮೀಯರ ಪ್ರೀತಿಗೆ ಪಾತ್ರರಾಗಿದ್ದಾರೆ. ಈ ಸನ್ಮಾನ ಅವರ ಮತ್ತಷ್ಟು ಸಾಧನೆಗಳಿಗೆ ಪ್ರೇರಣೆಯಾಗಲಿ ಎಂದು ಶಿರ್ತಾಡಿ ಕಾರ್ಮೆಲ್ ಮಾತೆಯ ದೇವಾಲಯದ ಧರ್ಮಗುರು ವಂ|ಫಾ| ಫ್ರಾನ್ಸಿಸ್ ಕ್ರಾಸ್ತಾ ನುಡಿದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಕೆ. ವಸಂತ ಬಂಗೇರ, ಈವರೆಗೆ ತಾಲೂಕಿನಲ್ಲಿ ರೂ. 100 ಕೋಟಿಗೂ ಅಧಿಕ ಮೊತ್ತದ ಕಾಮಗಾರಿ ನಡೆದಿದೆ. ಎಪ್ರಿಲ್ ಅಂತ್ಯ ಅಥವಾ ಮೇ ತಿಂಗಳಲ್ಲಿ ಮುಖ್ಯಮಂತ್ರಿಯವರಿಂದ ಮೊದಲ ಕಂತಿನ 25 ಕೋಟಿ ರೂ. ಮೊತ್ತದ ಅನುದಾನ ಬರಲಿದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸತೀಶ್ ಕೆ. ಕಾಶಿಪಟ್ಣ ಅವರು ನಾಗರಿಕರ ಪ್ರೀತಿ, ಅಭಿಮಾನಕ್ಕೆ ಚಿರಋಣಿಯಾಗಿರುವುದಾಗಿ ತಿಳಿಸಿದರು.
ಸನ್ಮಾನ: ಕಾರ್ಯಕ್ರಮದಲ್ಲಿ ಬಸವಶ್ರೀ ಪ್ರಶಸ್ತಿ ಪುರಸ್ಕೃತ ಪಿ. ಧರಣೇಂದ್ರ ಕುಮಾರ್, ಎಂಸಿಜೆಯಲ್ಲಿ ಚಿನ್ನದ ಪದಕ ಪಡೆದ ದೀವಿತ್ ಕೋಟ್ಯಾನ್ ಪೆರಾಡಿ ಹಾಗೂ ಎಂಟೆಕ್‌ನಲ್ಲಿ ಬೆಳ್ಳಿಯ ಪದಕ ಪಡೆದ ಚಿಂತನ್ ಸಿಲ್ವನ್ ಲೋಬೋ ಅವರನ್ನು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಮೂಲ್ಕಿ ಮೂಡಬಿದಿರೆಯ ಶಾಸಕ ಕೆ. ಅಭಯಚಂದ್ರ ಜೈನ್, ದ.ಕ.ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರಧ್ಯಕ್ಷ ಕೆ. ಹರೀಶ್ ಕುಮಾರ್, ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್‌ಡಿ ಸಂಪತ್ ಸಾಮ್ರಾಜ್ಯ, ಮೂಡಬಿದಿರೆ ನಿಶ್ಮಿತಾ ಟವರ‍್ಸ್‌ನ ನಾರಾಯಣ ಪಿ.ಎಂ., ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಸದಸ್ಯ ಪಿ.ಕೆ. ರಾಜು ಪೂಜಾರಿ ಮಿತ್ತೊಟ್ಟುಗುತ್ತು, ತಾ.ಪಂ. ಸದಸ್ಯರಾದ ರೂಪಲತಾ, ಓಬಯ್ಯ ಆರಂಬೋಡಿ, ಕಾಶಿಪಟ್ಣ ದಾರೂನ್ನೂರು ಎಜುಕೇಶನ್ ಸೆಂಟರ್‌ನ ಜನರಲ್ ಮ್ಯಾನೇಜರ್ ಹಾಜಿ ಅಬ್ದುಲ್ ರಹಿಮಾನ್ ಹಾಸ್ಕೊ, ದ.ಕ. ಜಿಲ್ಲಾ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಎಸ್. ಕೋಟ್ಯಾನ್, ಬೆಳ್ತಂಗಡಿ ಎಪಿಎಂಸಿ ಉಪಾಧ್ಯಕ್ಷ ಗಣೇಶ್ ಕೆಮ್ಮಣ್ಣಾಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸ್ಥಳೀಯ ಜನಪ್ರತಿನಿಧಿ ಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಕಾಶಿಪಟ್ಣ ಮೂರು ಮಾರ್ಗದಿಂದ ಶಾಲಾ ಆವರಣದವರೆಗೆ ಭವ್ಯ ಮೆರವಣಿಗೆ ನಡೆಯಿತು. ಕು| ಸುಶ್ಮಿತಾ ಬಳಗ ಪ್ರಾರ್ಥಿಸಿ ಕಾಶಿಪಟ್ಣ ಗ್ರಾ.ಪಂ. ಸದಸ್ಯ ಮಹಮ್ಮದ್ ಶಾಫಿ ಸ್ವಾಗತಿಸಿ ಶಾಲಾ ಎಸ್‌ಡಿಎಂಸಿ ಸದಸ್ಯ ಅಬ್ದುಲ್ ರಹಿಮಾನ್ ವಂದಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಕುದ್ರೋಳಿ ಗಣೇಶ್ ತಂಡದವರಿಂದ ಜಾದೂ ಪ್ರದರ್ಶನ ಜರಗಿತು.

ಬೆಳ್ತಂಗಡಿ : ಗುರುವಾಯನಕೆರೆ ಉಪಕೇಂದ್ರದಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಎ. 26 ಮತ್ತು 28ರಂದು ಗುರುವಾಯನಕೆರೆ ಉಪಕೇಂದ್ರದಿಂದ ಹೊರಹೊಮ್ಮುವ ವೇಣೂರು ಮತ್ತು ಆರಂಬೋಡಿ ಫೀಡರ್‌ಗಳಲ್ಲಿ ಬೆಳಿಗ್ಗೆ 9.00ರಿಂದ ಸಂಜೆ 5.00ರ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

beo1

beoಬೆಳ್ತಂಗಡಿ: ಶಿಕ್ಷಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಶನ್ ವತಿಯಿಂದ ರಾಷ್ಟ್ರಾಧ್ಯಂತ ಹೋರಾಟಗಳನ್ನು ನಡೆಸಲಾಗುತ್ತಿದ್ದು ಅದರ ಎರಡನೇ ಹಂತದ ಕಾರ್ಯಕ್ರಮವಾಗಿ ಎ. 25 ರಂದು ದೇಶಾಧ್ಯಂತ ಎಲ್ಲಾ ಶಿಕ್ಷಣ ಇಲಾಖೇ ಕಚೇರಿ ಮುಂದೆ ಶಿಕ್ಷಕರ ಏಕದಿನ ಮೌನ ಧರಣಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಬಿಇಒ ಕಚೇರಿ ಎದುರು ಕೂಡ ನಡೆಯಿತು.
7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ತರಬೇಕು, ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೆ ತರಬೇಕು, ಪ್ರಾಥಮಿಕ ಶಿಕ್ಷಣ ಮಂಡಳಿ ರಚಿಸಬೇಕು, ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು, ಶಾಲೆಗೊಬ್ಬ ಮುಖ್ಯೋಪಾಧ್ಯಾಯ ನೇಮಕ, ಶಿಕ್ಷಕ ಶಿಕ್ಷಕಿ ವಿದ್ಯಾರ್ಥಿ ಅನುಪಾತ ಮಾಡಬೇಕು ಎಂಬಿತ್ಯಾಧಿ ಪ್ರಮುಖ ಬೇಡಿಕೆಗಳು ಈ ಬಾರಿಯ ಹೋರಾಟದಲ್ಲಿತ್ತು.

beet rokars copyಬೆಳ್ತಂಗಡಿ: ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡೆಮಿ ಬೆಳ್ತಂಗಡಿ ಇದರ 6ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಎ. 22 ರಂದು ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಬೆಳಕು ಶಬ್ಧತರಂಗದ ಅದ್ಭುತ ನೃತ್ಯ ಸಂಗೀತ ಸೆಲೆಬ್ರೆಟಿ ನೈಟ್ ವಿಶೇಷ ಕಾರ್ಯಕ್ರಮ, ರಾಜ್ಯ ಮಟ್ಟದ ಡ್ಯಾನ್ಸ್ ಸ್ಪರ್ಧೆಯೊಂದಿಗೆ ನಡೆಯಿತು.
ಅಧ್ಯಕ್ಷತೆಯನ್ನು ಕರಾವಳಿ ಕರ್ನಾಟಕ ಡ್ಯಾನ್ಸ್ ಅಕಾಡಮಿ ಯೂನಿಯನ್ ಅಧ್ಯಕ್ಷ ರಾಜೇಶ್ ಕಣ್ಣೂರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಅನುಗ್ರಹ ಟ್ರೈನಿಂಗ್ ಕಾಲೇಜಿನ ಪ್ರಾಂಶುಪಾಲ ತಲ್‌ಹತ್ ಎಂ. ಜಿ, ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ತುಳು ಚಲನಚಿತ್ರ ನಿರ್ಮಾಪಕ ಹರೀಶ್ ರಾವ್, ಸಕಲೇಶ್‌ಪುರದ ರಿದಂ ಕೀಪಝ್ ಡ್ಯಾನ್ಸ್ ಅಕಾಡಮಿ ಅಧ್ಯಕ್ಷ ಕೃಷ್ಣೇ ಗೌಡ, ರಾಜ್ಯ ಸರಕಾರಿ ನೌಕರರ ಸಂಘದ ಸದಸ್ಯ ಕೆ ಧರಣೇಂದ್ರ ಕುಮಾರ್ ಜೈನ್, ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಮುಖ್ಯೋಪಾಧ್ಯಾಯ ರೆ. ಫಾ ಅನಿಲ್ ಪ್ರಕಾಶ್ ಡಿಸಿಲ್ವ ಇವರುಗಳು ಶುಭ ಕೋರಿದರು.

beet rokars karate copyಬೆಳ್ತಂಗಡಿ: ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡಮಿ ಮತ್ತು ಶ್ರೀ ಸಾಯಿ ಕಾಸ್ಟ್ಯೂಮ್ಸ್ ವರ್ಲ್ಡ್ ಎಂಬ ಹೆಸರಿನಲ್ಲಿ ಬೆಳ್ತಂಗಡಿಯಲ್ಲಿ ಕಳೆದ ೬ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಂಸ್ಥೆಯ ವತಿಯಿಂದ ಮುಂದಕ್ಕೆ ಅನುಭವಿ ಕರಾಟೆ ಶಿಕ್ಷಕರಿಂದ ಕರಾಟೆ ತರಬೇತಿ ನೀಡಲು ಮತ್ತು ಕಲಾಸಕ್ತ ವಿದ್ಯಾರ್ಥಿಗಳಿಗೆ ನಾಟಕ ಮತ್ತು ರಂಗ ಅಭಿನಯ ತರಬೇತಿ ನೀಡುವ ವಿಭಾಗವು ಎ. 22 ರಂದು ಉದ್ಘಾಟನೆಗೊಂಡಿತು.
ಜೇಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಪೂರ್ವಾಧ್ಯಕ್ಷ, ಸಂಘಟಕ ಹಾಗೂ ಉದ್ಯಮಿ ಪ್ರಮೋದ್ ಆರ್ ನಾಯಕ್ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭ ಜೇಸಿಐ ವಲಯಾಧ್ಯಕ್ಷ ಚಿದಾನಂದ ಇಡ್ಯ, ಸುದ್ದಿ ಬಿಡುಗಡೆ ವ್ಯವಸ್ಥಾಪಕ ಮಂಜುನಾಥ ರೈ, ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡಮಿ ಮುಖ್ಯಸ್ಥ ಜಿತೇಶ್ ಕುಮಾರ್, ಕರಾಟೆ ತರಬೇತುದಾರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

arasinamakki7

arasinamakki4 copy

arasinamakki5

arasinamakki6

arasinamakki

arasinamakki1

arasinamakki2

arasinamakki3ಅರಸಿನಮಕ್ಕಿ ಶ್ರೀನಿವಾಸ ಕಲ್ಯಾಣೋತ್ಸವವು ವಿಜೃಂಭಣೆಯಿಂದ ಎ. 22ರಂದು ನಡೆಯಿತು.

barengayaನಿಡ್ಲೆ : ನಿಸರ್ಗ ಯುವಜನೇತರ ಮಂಡಲ(ರಿ) ಬರೆಂಗಾಯ ಹಾಗೂ ದ.ಕ ಜಿಲ್ಲಾ ಅಮೆಚ್ಯೂರ್ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ (ರಿ) ಇದರ ಸಹಯೋಗದೊಂದಿಗೆ ದ.ಕ, ಉಡುಪಿ, ಕಾಸರಗೊಡು ಜಿಲ್ಲೆಯ ೭೦ಕೆ.ಜಿ ವಿಭಾಗದ ಪುರುಷರ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವು ಹಿ.ಪ್ರಾ ಶಾಲೆ ಬರೆಂಗಾಯದಲ್ಲಿ ಎ. 22ರಂದು ಜರಗಿತು.
ನಿಡ್ಲೆ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಶುಭ ದೇವಧರ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಹೈಕೋರ್ಟ್ ನ್ಯಾಯಾವಾದಿ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಪ್ರಭಾಕರ ನಾರಾವಿ, ಕಳೆಂಜ ಗ್ರಾ.ಪಂ ಸದಸ್ಯೆ ಶ್ರೀಮತಿ ಸುಶೀಲ ವಸಂತ ಗೌಡ, ನಿಡ್ಲೆ ಗ್ರಾ.ಪಂ ಉಪಾಧ್ಯಕ್ಷ ರುಕ್ಮಯ ಪೂಜಾರಿ ಪೊರ್ಕಳ, ನಿಡ್ಲೆ ಗ್ರಾ.ಪಂ ಸದಸ್ಯರಾದ ಹರೀಶ್ ಪೊಂರ್ದಿಲ, ಶ್ರೀಮತಿ ಲಲಿತಾ, ಬರೆಂಗಾಯ ನಿಸರ್ಗ ಯುವ ಜನೇತರ ಮಂಡಲ ಅಧ್ಯಕ್ಷರಾದ ಪುನೀತ್ ಪೊಂರ್ದಿಲ, ಬರೆಂಗಾಯ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣ ಕುಮಾರ್ ಕಾಟ್ಲ, ಬರೆಂಗಾಯ ಜ್ಯೋತಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೇಮಂತ್ ಗೌಡ ಕಜೆ, ಬರೆಂಗಾಯ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಪ್ರವೀಣ್ ಹೆಬ್ಬರ್ ಪೊಂರ್ದಿಲ ಆಗಮಿಸಿದ್ದರು. ವೇದಿಕೆಯಲ್ಲಿ ತಾ.ಪಂ ಮಾಜಿ ಉಪಾಧ್ಯಕ್ಷ ವಿಷ್ಣು ಮರಾಠೆ, ಸನ್ಮಾನಗೊಳ್ಳಲಿದ್ದ ಬರೆಂಗಾಯ ಹಿ.ಪ್ರಾ ಶಾಲಾ ಮುಖ್ಯೋಪಾಧ್ಯಾಯ ಗೋಪಾಲ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕನ್ನಡ ಉಪನ್ಯಾಸಕರಾದ ಚಂದ್ರಶೇಖರ್ ಗೌಡ ಕಜೆ ಉಪಸ್ಥಿತರಿದ್ದರು.

ನಿವೃತ್ತ ಅರಣ್ಯ ಅಧಿಕಾರಿ ಜಗನ್ನಿವಾಸ್ ರಾವ್‌ರಿಗೆ ಸನ್ಮಾನ

Friday, April 28th, 2017 | Suddi Belthangady | no responses ಮುಂಡಾಜೆ : ಅರಣ್ಯ ಇಲಾಖೆಯಲ್ಲಿ ಸುದೀರ್ಘ ವರ್ಷಗಳ ಕರ್ತವ್ಯ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ… ಮುಂದೆ ಓದಿ

ಅಳದಂಗಡಿ ಶಾಖೆಯ ಉಪವಲಯಾರಣ್ಯಾಧಿಕಾರಿ  ರಾಜೇಶ್ ವಲಯ ಅರಣ್ಯಾಧಿಕಾರಿಯಾಗಿ ಭಡ್ತಿ

Friday, April 21st, 2017 | Suddi Belthangady | no responses ವೇಣೂರು : ವೇಣೂರು ವಲಯದ ಅಳದಂಗಡಿ ಶಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಕಳೆದ 5… ಮುಂದೆ ಓದಿ

ತೆಂಕಕಾರಂದೂರು : ಅಕ್ರಮ ದಿಮ್ಮಿ ಸಾಗಿಸುತ್ತಿದ್ದ ಪಿಕಪ್ ವಶ

Saturday, February 18th, 2017 | Suddi Belthangady | no responses ತೆಂಕಕಾರಂದೂರು : ತೆಂಕಕಾರಂದೂರು ಗ್ರಾಮದ ಗುಂಡೇರಿ ಎಂಬಲ್ಲಿ ಅಕೇಶಿಯಾ ಜಾತಿಯ ಮರದ ದಿಮ್ಮಿಗಳನ್ನು… ಮುಂದೆ ಓದಿ

ಅಂಡಿಂಜೆ : ಮತ್ತೊಂದು ಕಾಡು ಕೋಣ ಮೃತ್ಯು

ಅಂಡಿಂಜೆ : ಮತ್ತೊಂದು ಕಾಡು ಕೋಣ ಮೃತ್ಯು

Monday, January 2nd, 2017 | Suddi Belthangady | no responses ಅಂಡಿಂಜೆ : ವೇಣೂರು ಸಮೀಪದ ಅಂಡಿಂಜೆ ಬಳಿ ಕಾಡು ಕೋಣ ಜ.೦1ರಂದು ಮೃತ… ಮುಂದೆ ಓದಿ

4.50 ಲಕ್ಷ ಮೌಲ್ಯದ ಕರ್ಮರ ಜಾತಿಯ ಕಟ್ಟಿಗೆ ಅಕ್ರಮ ಸಾಗಾಟ :  ಲಾರಿ ಚಾಲಕ ಹಾಗೂ ಇತರ ಇಬ್ಬರು ಪರಾರಿ

Monday, November 14th, 2016 | Suddi Belthangady | no responses ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಯಲ್ಲಿ ಗಸ್ತು ಸಂಚರಿಸುತ್ತಾ ಓಡಿಲ್ನಾಳ ಗ್ರಾಮದ ರೇಷ್ಮೆ ರೋಡ್ ಎಂಬಲ್ಲಿ ಸದ್ರಿ… ಮುಂದೆ ಓದಿ

ಚಾರ್ಮಾಡಿ : ಉಡ ಜಾತಿಯ ಕಾಡು ಪ್ರಾಣಿ ಭೇಟೆ, ಆರೋಪಿಗಳನ್ನು ಬಂಧನಕ್ಕೆ ಒಳಹಪಡಿಸುವಂತೆ ಆದೇಶ

Friday, November 4th, 2016 | Suddi Belthangady | no responses ಚಾರ್ಮಾಡಿ : ಉಡ ಜಾತಿಯ ಕಾಡು ಪ್ರಾಣಿಯನ್ನು ಮಾಂಸ ಮಾಡುವ ಉದ್ದೇಶದಿಂದ ಭೇಟೆಯಾಡಿ… ಮುಂದೆ ಓದಿ

ಮುಂಡಾಜೆ ತ್ಯಾಜ್ಯ ಘಟಕ : ದುಂಬೆಟ್ಟು ನಾಗರಿಕರಿಂದಲೂ ವಿರೋಧ

Saturday, June 4th, 2016 | Suddi Belthangady | no responses ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಳೂರು ಪ್ರದೇಶದಲ್ಲಿ ಪ್ರಸ್ತಾವನೆಯಾಗಿರುವ ತ್ಯಾಜ್ಯ ವಿಲೇವಾರಿ ಘಟಕವನ್ನು… ಮುಂದೆ ಓದಿ

ಅರಣ್ಯ ಇಲಾಖೆಗಳು

ಅರಣ್ಯ ಇಲಾಖೆಗಳು

Thursday, August 13th, 2015 | suddiblt | no responses ಮುಂದೆ ಓದಿ

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top