Thu 30 Mar 2017, 6:20AM

ಹೆಚ್ಚಿನ ಸುದ್ದಿಗಳು

ಬೆಳ್ತಂಗಡಿ : ಗುರುವಾಯನಕೆರೆ ಉಪಕೇಂದ್ರದಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಮಾ. 31ರಂದು ಗುರುವಾಯನಕೆರೆ ಉಪಕೇಂದ್ರದಿಂದ ಹೊರಹೊಮ್ಮುವ ಇಳಂತಿಲ, ಕುವೆಟ್ಟು, ವೇಣೂರು ಮತ್ತು ಆರಂಬೋಡಿ ಫೀಡರ್‌ಗಳಲ್ಲಿ ಹಾಗೂ ಏ. 1ರಂದು ವೇಣೂರು ಮತ್ತು ಆರಂಬೋಡಿ ಫೀಡರ್‌ಗಳಲ್ಲಿ ಬೆಳಿಗ್ಗೆ 9.00ರಿಂದ ಸಂಜೆ 5.00ರ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

icchuruಇಳಂತಿಲ : ಇಚ್ಚೂರು ಮಹತೋಭಾರ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಕಾಲಾವಧಿ ಉತ್ಸವ ಹಾಗೂ ದೈವಗಳಿಗೆ ನೇಮ ನಡಾವಳಿಗಳು ಮಾ. 28ರಂದು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಮುಖ್ಯ ಅತಿಥಿಗಳಾಗಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾ ಅಧ್ಯಕ್ಷ ಇ. ಕೃಷ್ಣಮೂರ್ತಿ ಕಲ್ಲೇರಿ, ಉದ್ಯಮಿ ಕೆ. ಶಿವಶಂಕರ ನಾಯಕ್, ಉದ್ಯಮಿ ರವಿರಾಜ ಉರುವಾಲು, ಯೋಗೀಶ್ ಕಡ್ತಿಲ ಉಪಸ್ಥಿತರಿದ್ದರು.

kolli 1

kolli 2

kolli 3

ಕೊಲ್ಲಿ ಶ್ರೀದುರ್ಗಾದೇವಿ ದೇವಸ್ಥಾನ ಜಾತ್ರೋತ್ಸವ ಇಂದು(ಮಾ.29) ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮತ್ತು ಅನ್ನಪೂರ್ಣ ಭೋಜನಾ ಶಾಲೆಯ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ, ಸಣ್ಣ ಕೈಗಾರಿಕಾ ನಿಗಮ ಅಧ್ಯಕ್ಷ ಕೆ. ವಸಂತ ಬಂಗೇರ ನೆರವೇರಿಸಿದರು. ಪಾಕಶಾಲೆಯನ್ನು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಪ್ರಮೀಳಾ ಎಂ.ಕೆ, ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಮುಂಡಾಜೆ ಶತಾಬ್ಧಿ ವಿದ್ಯಾಲಯ ಸಮಿತಿ ಅಧ್ಯಕ್ಷ ಶ್ರೀಧರ ಜಿ. ಭಿಡೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯೆ ಸೌಮ್ಯಲತಾ ಜಯಂತ ಗೌಡ, ತಾ.ಪಂ. ಸದಸ್ಯ ಜಯರಾಮ ಎಂ.ಕೆ, ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷ ನಾರಾಯಣ ಪಾಟಾಳಿ ಉಪಸ್ಥಿತರಿದ್ದರು. ಹಾಗೂ ದೇವಸ್ಥಾನದ ಅರ್ಚಕರಾದ ವೇ| ಶಂಕರನಾರಾಯಣ ತೋಡ್ತಿಲ್ಲಾಯರು, ವೇ| ಶ್ರೀಧರ ಉಪಾಧ್ಯಾಯರು, ವಿಲಯದವರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಮಂಜುನಾಥ ಕಾಮತ್, ಸಮಿತಿಯ ಸದಸ್ಯರಾದ ಕೃಷ್ಣಪ್ಪ ಪೂಜಾರಿ ಕಿಲ್ಲೂರು, ಪೂವಪ್ಪ ಗೌಡ ಕೊಂಡಮಲೆ, ಸುರೇಶ್ ಪೂಜಾರಿ ಅಡ್ಕದಕೆರೆ, ಅಣ್ಣಿ ಕುಲಾಲ್ ಕುಕ್ಕಾವು, ಪದ್ಮ ಎಂ.ಕೆ ಆಲಂಗಾರು, ಸೇಸಮ್ಮ ಕಿಲ್ಲೂರು, ಉಮೇಶ್ವರಿ ಬೆಡಿಗುತ್ತು ಉಪಸ್ಥಿತರಿದ್ದರು.

hdfcಬೆಳ್ತಂಗಡಿ : ಎಚ್.ಡಿ.ಎಫ್.ಸಿ ಬ್ಯಾಂಕ್ ಮಾ. 27ರಂದು ಸಂತೆಕಟ್ಟೆ ರಾಮನಗರದ ಬಳಿ ಪ್ರಜ್ವಲ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.
ಕಾರ್ಯಕ್ರಮವನ್ನು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಷೇಂದ್ರ ಕುಮಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್ ಅಧ್ಯಕ್ಷ ಎಂ. ನಾರಾಯಣ ರಾವ್ ಮುಗುಳಿ, ಬೆಳ್ತಂಗಡಿ ತಹಶೀಲ್ದಾರ್ ಹೆಚ್.ಕೆ. ತಿಪ್ಪೆ ಸ್ವಾಮಿ, ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ, ವಕೀಲ ಪ್ರಮೋದ್ ಆರ್. ನಾಯಕ್ ಹಾಗೂ ಬ್ಯಾಂಕ್ ಬ್ರಾಂಚ್ ಮ್ಯಾನೇಜರ್ ವಿಷ್ಣುಮೂರ್ತಿ ಪಿ, ಕ್ಲಸ್ಟರ್ ಮುಖ್ಯಸ್ಥ ಬಿಸ್ವದಿಪ್ ಪಾಲ್ ಉಪಸ್ಥಿತರಿದ್ದರು.

kuraya

kuraya1

kuraya2

kuraya3

kuraya4

kuraya5

ಬಂದಾರು ಕುರಾಯ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ. 29ರಂದು ಬೈಪಾಡಿ ಮತ್ತು ಕುರಾಯ ಗ್ರಾಮಸ್ಥರಿಂದ ಹೊರೆಕಾಣಿಕೆಯನ್ನು ಸಮರ್ಪಿಸಲಾಯಿತು.

karimanelu sports copyಕರಿಮಣೇಲು: ಕಂಬಳ ಕ್ರೀಡೆಯಂತೆ ಕಬಡ್ಡಿಯೂ ಗ್ರಾಮೀಣ ಮಕ್ಕಳ ಮಣ್ಣಿನ ಕ್ರೀಡೆ. ಮೈ ರೋಮಾಂಚನಗೊಳಿಸುವ ಕಬಡ್ಡಿಗೆ ಯುವ ಸಮಾಜ ನಿರಂತರ ಪ್ರೋತ್ಸಾಹ ನೀಡುವಂತಾಗಬೇಕು. ಕ್ರೀಡಾಪಟುಗಳಿಗೆ ಸ್ಪೂರ್ತಿ ನೀಡುವ ಶ್ರೀ ಗಣೇಶ್ ಸೌಜನ್ಯ ಗೆಳೆಯರ ಬಳಗದ ಕಾರ್ಯಸಾಧನೆ ಶ್ಲಾಘನೀಯ ಎಂದು ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ರಂಜನ್ ಜಿ. ಗೌಡ ಹೇಳಿದರು.
ಅವರು ಮಾ. 25ರಂದು ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆ ಮತ್ತು ವೇಣೂರು ಕೇಶವನಗರದ ಶ್ರೀ ಗಣೇಶ್ ಸೌಜನ್ಯ ಗೆಳೆಯರ ಬಳಗದ ವತಿಯಿಂದ ಕೇಶವನಗರದ ಮೈದಾನದಲ್ಲಿ ಜರಗಿದ ದ.ಕ. ಹಾಗೂ ಉಡುಪಿ ಜಿಲ್ಲಾ ಮಟ್ಟದ 70 ಕೆ.ಜಿ. ವಿಭಾಗದ ಹೊನಲು ಬೆಳಕಿನ 2ನೇ ವರ್ಷದ ಪ್ರೊ ಕಬಡ್ಡಿ ಪಂದ್ಯದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೇಣೂರು ತಾ.ಪಂ. ಸದಸ್ಯ ಕೆ. ವಿಜಯ ಗೌಡ ಅವರು ಮಾತನಾಡಿ, ಕಬಡ್ಡಿ. ಸಂಸ್ಕಾರ, ಸಂಸ್ಕೃತಿಯನ್ನು ಬಿಂಬಿಸುವ ಕ್ರೀಡೆ. ಎರಡನೇ ವರ್ಷಕ್ಕೆ ಅದ್ದೂರಿಯಾಗಿ ಕ್ರೀಡಾಕೂಟ ಆಯೋಜಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಹಾಗೂ ಅಭಿಮಾನಿಗಳಿಗೆ ಮನರಂಜನೆ ಒದಗಿಸುತ್ತಿರುವ ಗೆಳೆಯರ ಬಳಗದ ಸಾಧನೆ ನಿರಂತರವಾಗಿರಲಿ ಎಂದರು. ಸಮಾರಂಭದ ಉದ್ಘಾಟನೆಯನ್ನು ಬೆಳ್ತಂಗಡಿ ಎಪಿಎಂಸಿ ಸದಸ್ಯ ಅಶೋಕ್ ಗೋವಿಯಸ್ ನೆರವೇರಿಸಿ ಶುಭಹಾರೈಸಿದರು.
ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಮಾತನಾಡಿ, ತುಳು ಸಂಸ್ಕೃತಿಯನ್ನು ಬಿಂಬಿಸುವ ದೇಶದ ಅತ್ಯಂತ ಶ್ರೇಷ್ಠ ಕ್ರೀಡೆ ಕಬಡ್ಡಿ. ಪ್ರೊ ಕಬಡ್ಡಿಯ ಮೂಲಕ ಈ ಕ್ರೀಡೆಗೆ ವಿಶ್ವಮಾನ್ಯತೆ ಲಭಿಸಿದೆ. ಕಬಡ್ಡಿಯಿಂದ ಪರಸ್ಪರ ಒಗ್ಗಟ್ಟು, ಅನ್ಯೋನ್ಯತಾ ಭಾವನೆ ಬೆಳೆಯುತ್ತದೆ ಎಂದರು. ದ.ಕ. ಜಿಲ್ಲಾ ಕಬಡ್ಡಿ ತೀರ್ಪುಗಾರರ ಸಂಘದ ಸಂಚಾಲಕ ಫ್ರಾನ್ಸಿಸ್ ವಿ.ವಿ. ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಕಡ್ಡಾಯವಾಗಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕವನ್ನು ಸರ್ಕಾರ ಮಾಡಬೇಕೆಂದರು. ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ, ಧರ್ಮಸ್ಥಳ ಗ್ರಾ.ಯೋ. ವೇಣೂರು ವಲಯ ಮೇಲ್ವಿಚಾರಕ ಶ್ರೀನಿವಾಸ ಗೌಡ, ಪ್ರಶಾಂತ್ ಹೆಗ್ಡೆ ಕುಂಟಲ್ಮಾರ್, ಕೇಶವನಗರ ಪಂಚಮಿ ನಿವಾಸದ ವೆಂಕಪ್ಪ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಗಣೇಶ್ ಸೌಜನ್ಯ ಗೆಳೆಯರ ಬಳಗದ ಗೌರವಾಧ್ಯಕ್ಷ ಸತೀಶ್ ಕೊಂಬ ಕುಬಲಬೆಟ್ಟುಗುತ್ತು ಹಾಗೂ ಸರ್ವ ಸದಸ್ಯರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸಂಸ್ಕೃತಿ ಕಲಾವಿದರು ಪಡ್ಡಂದಡ್ಕ ಇವರಿಂದ ಹಾಸ್ಯ ಕಾರ್ಯಕ್ರಮ ಹಾಗೂ ಕೇಶವನಗರ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರಗಿತು.

WhatsApp Image 2017-03-29 at 12.07

WhatsApp Image 2017-03-29 at 12.42ಧರ್ಮಸ್ಥಳ ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರದಲ್ಲಿ 57ನೇ ವರ್ಷದ ಶ್ರೀರಾಮ ತಾರಕ ಮಂತ್ರ ಸಪ್ತಾಹ ಹಾಗೂ ಪ್ರತಿಷ್ಠಾ ಜಾತ್ರಾ ಮಹೋತ್ಸವು ಮಾ. 29ರಂದು ಪ್ರಾರಂಭಗೊಂಡಿತು. ಕ್ಷೇತ್ರದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ, ಬೆಳ್ತಂಗಡಿ ಶಾಸಕರು ಹಾಗೂ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ವಿಟ್ಲ ಮಾಜಿ ಶಾಸಕ ರುಕ್ಮಯ ಪೂಜಾರಿ ಶ್ರೀರಾಮ ಜಯ ರಾಮ ಜಯಜಯ ರಾಮ ತಾರಕ ನಾಮೋಚ್ಚಾರಣೆ ಮೂಲಕ ಭಜನೆ ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ರಾಷ್ಟೀಯ ಬಿಲ್ಲವ ಮಂಡಲದ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಬಂಟ್ವಾಳ ಬಿಜೆಪಿ ನಾಯಕ ರಾಜೇಶ್ ನಾಯಕ್, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ., ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಭಾ.ಜ.ಪ ಮುಖಂಡ, ವಕೀಲ ಪ್ರತಾಪ್ ಸಿಂಹ ನಾಯಕ್, ಅನಂತರಾವ್ ಚಾರ್ಮಾಡಿ, ಮಹಿಳಾ ಬಿಲ್ಲವ ಸ್ಥಾಪಕಾಧ್ಯಕ್ಷೆ ಸುಜಿತಾ ವಿ. ಬಂಗೇರ, ಎಪಿಎಂಸಿ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷ ಚಂದನ್ ಪ್ರಸಾದ್ ಕಾಮತ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರುಗಳಾದ ಶೈಲೇಶ್ ಕುಮಾರ್, ಧರಣೇಂದ್ರ ಕುಮಾರ್, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಪಿ.ಕೆ ರಾಜು ಪೂಜಾರಿ, ಟ್ರಸ್ಟಿಗಳಾದ ಮೋಹನ್ ಉಜ್ಜೋಡಿ, ತುಕರಾಮ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

dharmasthala shudda ganga gataka copy

dharmasthala shudda ganga gataka udhgatane copyಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕರ್ನಾಟಕ ರಾಜ್ಯದ ಅತೀ ಪ್ಲೋರೈಡ್ ಯುಕ್ತ ಜಿಲ್ಲೆಗಳಲ್ಲಿ ಶುದ್ಧ ಗಂಗಾ ಕುಡಿಯುವ ನೀರಿನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. 2009 ರಲ್ಲಿ ಈ ಕಾರ್ಯಕ್ರಮವು ಪ್ರಾರಂಭಗೊಂಡಿದ್ದು, ಕಳೆದ 8 ವರ್ಷಗಳಿಂದ ಕರ್ನಾಟಕ ರಾಜ್ಯದಾದ್ಯಂತ ಶ್ರೀ ಕ್ಷೇತ್ರ ಧರ್ಮಸ್ಥಳ ಶುದ್ಧಗಂಗಾ ಕುಡಿಯುವ ನೀರಿನ ಘಟಕಗಳು ಕಾರ್ಯಾಚರಿಸುತ್ತಿವೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿಯಲ್ಲಿ ರಾಜ್ಯದಲ್ಲಿಯೇ ಮೊದಲ ಶುದ್ಧಗಂಗಾ ಘಟಕವನ್ನು ಪ್ರಾರಂಭಿಸಲಾಗಿತ್ತು. ಈ ಕಾರ್ಯಕ್ರಮದ ಯಶಸ್ವಿನ ಪರಿಣಾಮದಿಂದಾಗಿ ಇದೀಗ ರಾಜ್ಯದಲ್ಲಿ ಒಟ್ಟು 284 ಶುದ್ಧಗಂಗಾ ಘಟಕಗಳು ಕಾರ್ಯಾಚರಿಸುತ್ತಿವೆ. ಕರ್ನಾಟಕ ರಾಜ್ಯದ ಚಿಕ್ಕಮಗಳೂರು – 37, ಹಾಸನ -7, ತುಮಕೂರು -39, ಬೆಳಗಾಂ -4, ಹಾವೇರಿ- 13, ಧಾರವಾಡ- 04, ಚಿತ್ರದುರ್ಗ -27, ಬಳ್ಳಾರಿ -3, ದಾವಣಗೆರೆ- 22, ಆನೆಕಲ್ಲು- 01, ಕೊಪ್ಪಳ – 19, ರಾಯಚೂರು- 2, ಕೋಲಾರ- 3, ಮೈಸೂರು, ಚಾಮರಾಜನಗರ- 3, ಗದಗಜಿಲ್ಲೆಯಲ್ಲಿ- 16 ಘಟಕಗಳು ಹೀಗೆ ಒಟ್ಟು 200 ಘಟಕಗಳು ಶುದ್ಧನೀರನ್ನು ಒದಗಿಸಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಇದರಿಂದಾಗಿ ರಾಜ್ಯದ 33,908 ಕುಟುಂಬಗಳ ಸದಸ್ಯರು ಪ್ರತಿನಿತ್ಯ 10,87,480 ಲೀ. ಶುದ್ಧಕುಡಿಯುವ ನೀರನ್ನು ಬಳಕೆ ಮಾಡುತ್ತಿದ್ದಾರೆ. ಅತಿಯಾದ ಪ್ಲೋರೈಡ್‌ನಿಂದ ನರಮಂಡಲಕ್ಕೆ, ಕ್ಯಾನ್ಸರ್, ಪ್ಲೋರೋಸಿಸ್, ಕೀಲುನೋವು, ಕಿಡ್ನಿಕ್ಯಾನ್ಸರ್, ಕರುಳು ನೋವು, ವಾಂತಿ ಬೇಧಿ, ಹೃದಯದ ಕಾಯಿಲೆಗಳಂತ ಭೀಕರರೋಗ ಭಾದೆಗೆ ತುತ್ತಾಗುವುದನ್ನು ಮನಗಂಡ ಸಂಸ್ಥೆಯ ಅಧ್ಯಕ್ಷರಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಶುದ್ಧಗಂಗಾ ಕುಡಿಯುವ ನೀರಿನ ಘಟಕವನ್ನು ಅನುಷ್ಠಾನಗೊಳಿಸುವ ಮೂಲಕ ಪರಿಹಾರೋಪಾಯವನ್ನು ಕಂಡುಕೊಂಡರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಎಚ್. ಮಂಜುನಾಥ್‌ರವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ. ಪ್ರಸ್ತುತ ವರ್ಷರಾಜ್ಯದ ಹಾಸನ ಜಿಲ್ಲೆಯ- 50 ಘಟಕಗಳು, ದಾವಣಗೆರೆ- 17, ಕಡೂರು -1, ದೊಡ್ಡಬಳ್ಳಾಪುರ – 1, ಚಾಮರಾಜನಗರ- 2, ಚಿಕ್ಕಮಗಳೂರು -3, ದೇವನಹಳ್ಳಿ – 4, ಹೀಗೆ ಒಟ್ಟು 84 ಶುದ್ಧಗಂಗಾ ಘಟಕಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಘಟಕಗಳು ನಿರ್ಮಾಣ ಹಂತದಲ್ಲಿವೆ. ಅವುಗಳಲ್ಲಿ 30 ಘಟಕಗಳಿಂದ ಶುದ್ಧ ಕುಡಿಯುವ ನೀರು ವಿತರಣೆ ಮಾಡಲು ಚಾಲನೆ ನೀಡಲಾಗಿದ್ದು, ಇದುವರೆಗೂ ಒಟ್ಟು 230 ಘಟಕಗಳಿಂದ ಶುದ್ಧಕುಡಿಯುವ ನೀರನ್ನು ವಿತರಿಸಲಾಗುತ್ತಿದೆ.

hindu rudrabhoomi 1 copyಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಳೆದ 20 ವರ್ಷದಿಂದ ರುದ್ರಭೂಮಿ ಕಾರ್ಯಕ್ರಮಕ್ಕೆ ಪೂರಕ ಅನುದಾನ ನೀಡಲಾಗುವುದರೊಂದಿಗೆ, ರುದ್ರಭೂಮಿ ರಚನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ರುದ್ರಭೂಮಿ ಬಗ್ಗೆ ಧಾರ್ಮಿಕ ಭಾವನೆ ಸಾಮಾನ್ಯ ಜನರಲ್ಲಿ ಬರಬೇಕು. ಇಲ್ಲಿ ನಡೆಯುವ ಅಗ್ನಿ ದಹನದಿಂದ ಸಂಸ್ಕಾರಗಳಿಂದ ಮೃತ ತಂದೆ ತಾಯಿಗಳಿಗೆ ಮಕ್ಕಳಿಂದ ಗೌರವ ಸಲ್ಲಬೇಕು. ಶ್ರದ್ಧೆಗೆ ಅನುಗುಣವಾಗಿ ಹಿತಕರ ವಾತಾವರಣದಲ್ಲಿ ಅವಶ್ಯಕ ಸೌಲಭ್ಯ ಹಾಗೂ ಸ್ವಚ್ಛತೆಯಿಂದ ರುದ್ರಭೂಮಿ ನಿರ್ಮಾಣ ಮಾಡಬೇಕು ಎಂಬುದು ಸಂಸ್ಥೆಯ ಅಧ್ಯಕ್ಷ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಕನಸು. ಅದಕ್ಕಾಗಿಯೇ ಈ ಕಾರ್ಯಕ್ರಮವನ್ನು ಭಾರತದ ಸ್ವಾತಂತ್ರೋತ್ಸವದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳಲಾಯಿತು.
ಸ್ಥಳೀಯರು, ಗ್ರಾಮ ಪಂಚಾಯತ್, ಸರಕಾರಿ ಅನುದಾನಗಳಿಂದ, ವಿವಿಧ ಸಂಘ-ಸಂಸ್ಥೆಗಳಿಂದ, ಗ್ರಾಮ ಪಂಚಾಯತ್ ಮೂಲಕ ರುದ್ರಭೂಮಿ ನಿರ್ಮಿಸುವುದಾದಲ್ಲಿ ಯೋಜನೆಯಿಂದ ಸಿಲಿಕಾನ್ ಛೇಂಬರ್ ಮತ್ತು ಪೂರಕ ಅನುದಾನವನ್ನು ಒದಗಿಸಿಕೊಡಲಾಗುತ್ತಿದೆ ಎಂದು ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ತಿಳಿಸಿದ್ದಾರೆ.
ಪ್ರಸ್ತುತ ಆರ್ಥಿಕ ವರ್ಷದಲ್ಲಿ ಹೊನ್ನಾಳಿ, ಉಡುಪಿ, ಮುಧೋಳ, ಸವದತ್ತಿ, ಭಟ್ಕಳ, ಮಂಗಳೂರು, ರಾಣೆಬೆನ್ನೂರು, ಗಂಗಾವತಿ, ರಾಯಭಾಗ್, ಕೊರಟಗೆರೆ, ಪಾವಗಡ, ಬಂಟ್ವಾಳ, ಗುಬ್ಬಿ, ರಾಯಚೂರು, ಮಡಿಕೇರಿ, ಸುಳ್ಯ, ಕಾರ್ಕಳ, ಹಾನಗಲ್ ಮುಂತಾದ ವಿವಿಧ ತಾಲೂಕಿನಲ್ಲಿ ರುದ್ರಭೂಮಿ ಅಭಿವೃದ್ಧಿ ಸಮಿತಿಗೆ ಈ ಸೌಕರ್ಯವನ್ನು ಒದಗಿಸಿಕೊಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ, ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಸೂಕ್ತ ಮಾಹಿತಿ ಮಾರ್ಗದರ್ಶನಗಳನ್ನು ಒದಗಿಸಲಾಗುತ್ತಿದೆ. ಪ್ರಸ್ತುತ ವರ್ಷ 42 ರುದ್ರಭೂಮಿ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ.63 ಲಕ್ಷ ಮೊತ್ತವನ್ನು ವಿನಿಯೋಗಿಸಲಾಗಿದೆ.
ಆವರಣ ರಚನೆ, ಗೇಟ್‌ಗಳ ನಿರ್ಮಾಣ, ಕಟ್ಟಿಗೆ ದಾಸ್ತಾನುಗಳ ಶೆಡ್‌ಗಳ ರಚನೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ನೀರಾವರಿ ವ್ಯವಸ್ಥೆ, ಉತ್ತಮ ರಸ್ತೆ, ಸ್ನಾನ ಗೃಹದ ವ್ಯವಸ್ಥೆ, ತುಳಸಿ ವನ ನಿರ್ಮಾಣ ಮುಂತಾದ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳುವಂತೆ ಮಾಹಿತಿ ನೀಡಲಾಗುತ್ತಿದೆ.

Nagara panchayath sabhe copyಬೆಳ್ತಂಗಡಿ: 2017-18ನೇ ಎಸ್.ಎಫ್.ಸಿ. ಯೋಜನೆಯಲ್ಲಿ ನಗರ ಪಂಚಾಯತಕ್ಕೆ ಮಂಜೂರಾದ ರೂ.60 ಲಕ್ಷದ ಅನುದಾನಕ್ಕೆ ಕರಡು ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ಮಾ.28ರಂದು ನಡೆದ ನಗರ ಪಂಚಾಯತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್ ವಹಿಸಿದ್ದರು. ಉಪಾಧ್ಯಕ್ಷ ಜಗದೀಶ್.ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್‌ಕುಮಾರ್ ಜೈನ್, ಯೋಜನಾಧಿಕಾರಿ ವೆಂಕಟ್ರಮಣ ಶರ್ಮ, ಇಂಜಿನಿಯರ್ ಮಹಾವೀರ ಜೈನ್, ನಾಮನಿರ್ದೇಶನ ಸದಸ್ಯರಾದ ಲ್ಯಾನ್ಸಿ ಎ. ಪಿರೇರಾ, ರಮೇಶ್ ಪೂಜಾರಿ ಉಪಸ್ಥಿತರಿದ್ದರು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಧ್ಯಕ್ಷ ನಾರಾಯಣ ರಾವ್ ಅವರು ಎಸ್.ಎಫ್.ಸಿ. ಯೋಜನೆಯಲ್ಲಿ 60 ಲಕ್ಷ ರೂ. ಮಂಜೂರಾಗಿದ್ದು, ಇದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲು ಇಡಬೇಕಾದ ಅನುದಾನ ಹಾಗೂ ಉಳಿಯುವ ರೂ.39 ಲಕ್ಷ ಅನುದಾನದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ವಿವರ ನೀಡಿದರು. ಇದರ ಬಗ್ಗೆ ಚರ್ಚಿಸಿ ಕ್ರಿಯಾ ಯೋಜನೆ ತರಿಸಲು ನಿರ್ಧರಿಸಲಾಯಿತು.
ಸರಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೌಲಭ್ಯ: ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಸೌಲಭ್ಯದ ವ್ಯವಸ್ಥೆಯಿದೆ. ಎ.ಪಿ.ಎಲ್, ಬಿ.ಪಿ.ಎಲ್. ಎನ್ನದೆ ಎಲ್ಲರಿಗೂ ಉಚಿತವಾಗಿದೆ ಎಂದು ಆಡಳಿತಾಧಿಕಾರಿ ಡಾ| ಆದಂ ಸಭೆಗೆ ಮಾಹಿತಿ ನೀಡಿದರು. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ಗೆ ಹಣ ತೆಗೆದುಕೊಳ್ಳುತ್ತಾರೆ ಎಂದು ಸದಸ್ಯರು ಹೇಳಿದಾಗ ಅಲ್ಲಗಳೆದ ವೈದ್ಯಾಧಿಕಾರಿಯವರು ಇದು ಉಚಿತವಾಗಿರುತ್ತದೆ ಎಂದು ಹೇಳಿದರು. ಸಂತೆ ದಿನ ಸರಕಾರಿ ಆಸ್ಪತ್ರೆಗೆ ತಿರುಗುವ ರಸ್ತೆ ಬದಿ ವ್ಯಾಪಾರಕ್ಕೆ ಅವಕಾಶ ನೀಡಿರುವುದರಿಂದ ಆಸ್ಪತ್ರೆಗೆ ಬರುವ ವಾಹನಗಳಿಗೆ ತೊಂದರೆಯಾಗುತ್ತದೆ ಎಂದು ವೈದ್ಯರು ತಿಳಿಸಿದಾಗ ಸಂತೆಕಟ್ಟೆಯೊಳಗೆ ರೂ.1 ಕೋಟಿ ವೆಚ್ಚದಲ್ಲಿ ವಾಣಿಜ್ಯ ಸಂಕಿರ್ಣ ನಿರ್ಮಾಣವಾಗುತ್ತಿದ್ದು, ರಸ್ತೆ ಬದಿಯ ವ್ಯಾಪಾರವನ್ನು ಸಂತೆಕಟ್ಟೆಯೊಳಗೆ ಸ್ಥಳಾಂತರಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಮೆಸ್ಕಾಂನಿಂದ ನಗರ ವ್ಯಾಪ್ತಿಯಲ್ಲಿ 13 ಟಿ.ಸಿ ಹಾಗೂ 35 ರಿಕಂಡೆಕ್ಟಿಂಗ್ ಮಾಡಲು ರೂ.90 ಲಕ್ಷ ಅನುದಾನ ಮಂಜೂರಾಗಿದೆ. ಇದನ್ನು ಖಾಸಗಿ ಕಂಪೆನಿಯವರು ವಹಿಸಿಕೊಂಡಿದ್ದು, ಕಾಮಗಾರಿ ಆರಂಭವಾಗಲಿದೆ ಎಂದು ಸಹಾಯಕ ಅಭಿಯಂತರ ಸಜಿಕುಮಾರ್ ಮಾಹಿತಿ ನೀಡಿದರು. 13 ಟಿ.ಸಿ. ಯಾವ ಜಾಗದಲ್ಲಿ ಮಾಡಬೇಕು ಎಂಬುದು ಇನ್ನೂ ಆಗಲಿಲ್ಲ, ಜಾಗದ ಹೆಸರನ್ನು ಪಂಚಾಯತದಿಂದ ನೀಡಿದರೆ ಶೀಘ್ರವಾಗಿ ಕೆಲಸ ಆರಂಭಿಸುವುದಾಗಿ ಅವರು ಹೇಳಿದರು.
ಬೆಳ್ತಂಗಡಿ ನಗರದಲ್ಲಿ ಖಾಸಗಿ ಸಂಸ್ಥೆಯವರು ಆಧಾರ್ ಕಾರ್ಡ್‌ಗೆ 5 ವರ್ಷದೊಳಗಿನ ಮಕ್ಕಳಿಗೂ ವಾಸ್ತವ್ಯ ದೃಢಪತ್ರ ಕೇಳುತ್ತಾರೆ. ಇದನ್ನು ನಗರ ಪಂಚಾಯತದಿಂದ ನೀಡುವಾಗ ರೂ.250 ಕಟ್ಟಬೇಕಾಗುತ್ತದೆ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಆದರೆ ಸರಕಾರದಿಂದ ನಡೆಯುತ್ತಿರುವ ಆಧಾರ ಕೇಂದ್ರದಲ್ಲಿ ತಂದೆ, ತಾಯಿ, ಅಥವಾ ಷೋಷಕರ ಯಾವುದಾದರೂ ದಾಖಲೆ ಅಥವಾ ಮಗುವಿನ ಜನನ ಪ್ರಮಾಣ ಪತ್ರ ಸಾಕಾಗುತ್ತದೆ ಎಂದು ತಹಶೀಲ್ದಾರ್ ಹೇಳುತ್ತಾರೆ. ಇದರ ಬಗ್ಗೆ ಸಂಸ್ಥೆಯವರಲ್ಲಿ ಕೇಳಿದಾಗ ನಮ್ಮಲ್ಲಿ ಟ್ಯಾಬ್ ಇಲ್ಲ ಎನ್ನುತ್ತಾರೆ ಇದು ಸರಿಯಲ್ಲ ಎಂದು ಉಪಾಧ್ಯಕ್ಷ ಜಗದೀಶ್ ಸಭೆಗೆ ವಿವರಿಸಿದರು.
ತಾಲೂಕು ಕೇಂದ್ರದಲ್ಲಿ ಇದ್ದ ಆಧಾರ್ ಕೇಂದ್ರ ಈಗ ಮುಚ್ಚಿದೆ. ನಾವು ವೇಣೂರು ಕೇಂದ್ರಕ್ಕೆ ಅನೇಕ ಮಂದಿಯನ್ನು ಕಳುಹಿಸಿದ್ದು, ಅಲ್ಲಿ ವಾಸ್ತವ್ಯ ದೃಢಪತ್ರ ಇಲ್ಲದೆಯೇ, ಪೋಷಕರ ದಾಖಲೆ ಪಡೆದು ಮಾಡಿದ್ದಾರೆ ಎಂದು ಜಗದೀಶ್ ಮಾಹಿತಿ ಇತ್ತರು. ಈ ಸಂದರ್ಭ ಮಾತನಾಡಿದ ಅಧ್ಯಕ್ಷ ನಾರಾಯಣ ಭಟ್ ಅವರು ಖಾಸಗಿಯವರು ಸರಕಾರದ ಅನುಮತಿ ಪಡೆದು ಕೇಂದ್ರ ನಡೆಸುತ್ತಿದ್ದಾರೆ. ಕಂಪ್ಯೂಟರ್‌ನಲ್ಲಿ ಕೇಳಿದ ದಾಖಲೆಗಳನ್ನು ಅವರು ಕೊಡಬೇಕು, ಅದಕ್ಕಾಗಿ ಅವರು ವಾಸ್ತವ್ಯ ದೃಢಪತ್ರ ಕೇಳುತ್ತಿರಬಹುದು ಇದರ ಬಗ್ಗೆ ನಾವು ಕ್ರಮಕೈಗೊಳ್ಳಲು ಸಾಧ್ಯವಿಲ್ಲ ಎಂದರು. ಈ ಬಗ್ಗೆ ಚರ್ಚೆ ನಡೆದು 5 ವರ್ಷದ ಕೆಳಗಿನ ಮಕ್ಕಳ ವಾಸ್ತವ್ಯ ಧೃಡಪತ್ರ ಕೇಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಇದನ್ನು ರದ್ದು ಪಡಿಸಿ ಆದೇಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕೇಳಿಕೊಳ್ಳಲು ನಿರ್ಣಯಿಲಾಯಿತು. ನ.ಪಂ. ವ್ಯಾಪ್ತಿಯ ಗುರುವಾಯನಕೆರೆ ಬಳಿ ಹನೀಫ್ ಇವರ ಮರದ ಮಿಲ್ಲಿನ ಕಾರ್ಖಾನೆಯಿಂದ ಪರಿಸರ ಹಾನಿಯಾಗುತ್ತಿದೆ ಎಂಬ ಧರ್ಣಪ್ಪ ಪೂಜಾರಿಯವರ ದೂರಿನ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಹನೀಫ್ ಅವರು ಸ್ಥಳೀಯ ಮನೆಗಳಿಂದ ಎನ್.ಒ.ಸಿ. ತಂದರೆ ಮಾತ್ರ ಅವರ ಪರವಾನಿಗೆ ನವೀಕರಣ ಮಾಡಲು ನಿರ್ಧರಿಸಲಾಯಿತು. ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಪ್ಲಾಸ್ಟಿಕ್ ಬ್ಯಾನರ್ ಹಾಕಬಾರದು ಬಟ್ಟೆಯಿಂದ ಬರೆದ ಬ್ಯಾನರ್ ಹಾಕಲು ಮಾತ್ರ ಅವಕಾಶ ಈಗಾಗಲೇ ಎರಡು ಬ್ಯಾನರ್‌ಗಳಿದ್ದು, ಇದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವು ದಾಗಿ ಅಧ್ಯಕ್ಷರು ಪ್ರಕಟಿಸಿದರು.
ಪಂಚಾಯತು ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ಹಾಗೂ ವಿದ್ಯುತ್ ಕಾಮಗಾರಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಯೋಜನಾಧಿಕಾರಿ ವೆಂಕಟ್ರಮಣ ಶರ್ಮ ಸ್ವಾಗತಿಸಿ, ಧನ್ಯವಾದವಿತ್ತರು.

kolli jathre copyಮಿತ್ತಬಾಗಿಲು : ಇಲ್ಲಿನ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ ಮಿತ್ತಬಾಗಿಲು ಇಲ್ಲಿ ಪ್ರತಿಷ್ಠಾ ವರ್ಧಂತಿ ಹಾಗೂ ವಾರ್ಷಿಕ ಜಾತ್ರೆ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ದೊರೆಯಿತು.
ಮಾ. 25 ರಂದು ವೇದಮೂರ್ತಿ ಪದ್ಮನಾಭ ತಂತ್ರಿಗಳ ದಿವ್ಯ ಉಪಸ್ಥಿತಿಯಲ್ಲಿ ಪ್ರತಿಷ್ಠಾ ವರ್ಧಂತಿ ನಡೆಯಿತು. ಮಾ. 28 ರಂದು ಜಾತ್ರಾ ಪ್ರಯುಕ್ತ ತೋರಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ಅಂಕಗುಂಟ, ಕೋಳಿಗುಂಟ, ಧ್ವಜಾರೋಹಣ, ಮಹಾಪೂಜೆಯೊಂದಿಗೆ ವೈಧಿಕ ಕಾರ್ಯಕ್ರಮಗಳು ನಡೆದು ಜಾತ್ರಾ ಮಹೋತ್ಸವ ಉದ್ಘಾಟನೆ ನಡೆಯಿತು. ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ ಉದ್ಘಾಟನೆ ನೆರವೇರಿಸಿದರು. ಬಳಿಕ ಭೀಷ್ಮವಿಜಯ ತಾಳಮದ್ದಳೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಉದ್ಘಾಟಿಸಿದರು. ಹಿಮ್ಮೇಳದಲ್ಲಿ ಮಹೇಶ್ ಕನ್ಯಾಡಿ ಮತ್ತು ಬಳಗ, ಮುಮ್ಮೇಳದಲ್ಲಿ
ಅಶೋಕ ಭಟ್ ಉಜಿರೆ, ಜಬ್ಬಾರ್ ಸಮೋ ಸಂಪಾಜೆ, ದಿನೇಶ್ ಶೆಟ್ಟಿ ಕಾವಳಕಟ್ಟೆ ಇವರು ಭಾಗಿಯಾಗಿದ್ದರು.
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಝೀ ಕನ್ನಡ ಕಿರುತೆರೆಯ ಕಾಮಿಡಿ ಕಿಲಾಡಿಗಳು ಕಲಾಸಾಧಕರಾದ ಹಿತೇಶ್ ಕುಮಾರ್ ಕಾಪಿನಡ್ಕ ಮತ್ತು ಅನೀಸ್ ಅಮೀನ್ ವೇಣೂರು ಅವರಿಗೆ ಸನ್ಮಾನ ನಡೆಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಮಂಜುನಾಥ ಕಾಮತ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ, ನ್ಯಾಯವಾದಿ ಭಗೀರಥ ಜಿ., ಕೃಷ್ಣಪ್ಪ ಪೂಜಾರಿ, ಸುರೇಂದ್ರ ಕೊಲ್ಲಿ, ಮೋಹನ್, ಕೇಶವ ಫಡಕೆ, ಉಮೇಶ್ ಸಹಿತ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು, ಜೀರ್ಣೋದ್ಧಾರ ಸಮಿತಿ ವಿಶೇಷ ಆಹ್ವಾನಿತರುಗಳು, ಸಲಹೆಗಾರರು, ಸಮಿತಿ ಸದಸ್ಯರುಗಳು, ಹಾಗೂ ಅರ್ಚಕವೃಂದದವರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗಿಯಾಗಿದ್ದರು. ಅನ್ನಸಂತರ್ಪಣೆ ನಡೆಯಿತು.
ನೂತನ ಕಟ್ಟಡಗಳ ಉದ್ಘಾಟನೆ:
ಮಾ.29 ರಂದು(ಇಂದು) ಶಾಸಕ ವಸಂತ ಬಂಗೇರ ಅವರ ಶಿಫಾರಸ್ಸಿನ ಮೇರೆಗೆ ಮಂಜೂರಾಗಿದ್ದ ಸುಮಾರು 32 ಲಕ್ಷ ರೂ ಅನುದಾನದಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡಗಳ ಉದ್ಘಾಟನೆ ನಡೆಯಲಿದೆ. ಸಣ್ಣಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ವಸಂತ ಬಂಗೇರ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಪ್ರಮೀಳಾ ಎಂ.ಕೆ, ಮುಂಡಾಜೆ ಶತಾಬ್ಧಿ ವಿದ್ಯಾಲಯ ಸಮಿತಿ ಅಧ್ಯಕ್ಷ ಶ್ರೀಧರ ಜಿ. ಭಿಡೆ, ಜಿ.ಪಂ. ಸದಸ್ಯೆ ಸೌಮ್ಯಲತಾ ಜಯಂತ ಗೌಡ, ತಾ.ಪಂ. ಸದಸ್ಯ ಜಯರಾಮ ಎಂ.ಕೆ, ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷ ನಾರಾಯಣ ಪಾಟಾಳಿ ಇವರು ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಲೋಕೋಪಯೋಗಿ ಗುತ್ತಿಗೆದಾರ ಗಿರಿರಾಜ ಬಾರಿತ್ತಾಯ ಅವರಿಗೆ ಸನ್ಮಾನ ನಡೆಯಲಿದೆ. ಹೀಗೆ ಏ.4ರ ವರೆಗೆ ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಂಜುನಾಥ ಕಾಮತ್ ತಿಳಿಸಿದ್ದಾರೆ.

laila 1 copy

laila 2 copyಕಾಮಗಾರಿ ಅಳತೆಯಲ್ಲಿ ಲೆಕ್ಕಕ್ಕಿಂತ ಕಡಿಮೆ ಕಾಂಕ್ರೀಟಿಕರಣ ಮಾಡಿದ್ದು ಪತ್ತೆ.
ತಾಂತ್ರಿಕ ವಿಚಾರವಾಗಿರುವುದರಿಂದ ಇಂಜಿನಿಯರ್ ಮೇಲೆ ವರದಿ ಸಾಧ್ಯತೆ.
ಒಂದೇ ಕಾಮಗಾರಿಗೆ ಎರಡು ಬಾರಿ ಹಣ ಪಾವತಿಸಿದ್ದಾರೆ ಎಂಬ ಪಿಡಿಒ ಪ್ರಕಾಶ್ ಶೆಟ್ಟಿ ಮೇಲಿನ ಆರೋಪ ನಿರಾಧಾರ.
ಮಾಹಿತಿ ಹಕ್ಕು ದಾಖಲೆ ನೀಡುವಾಗ ಎರಡೆರಡು ಬಾರಿ ಮುದ್ರಿಸಿ ಸಂದೇಹ ಮೂಡುವಂತೆ ಮಾಡಿದ್ದೇ ಅವಾಂತರಗಳಿಗೆ ಕಾರಣ.
ತಪ್ಪು ತಿಳಿದ ಬಳಿಕವೂ ಮಾಹಿತಿ ಪಡೆದವರಿಗೆ ಮರುಮಾಹಿತಿ, ಸ್ಪಷ್ಟೀಕರಣ ನೀಡದೆ ವಿಳಂಬ ಮಾಡಿದ್ದು ಪಂಚಾಯತ್‌ನ ಲೋಪ.
ಅಭಿವೃದ್ಧಿ ಅಧಿಕಾರಿ, ಕಾಮಗಾರಿ ಗುತ್ತಿಗೆದಾರರು, ತಾ.ಪಂ. ಇಒ, ಜಿ.ಪಂ. ಇಂಜಿನಿಯರ್, ದೂರುದಾರ ಎಸ್. ನಾಗರಾಜ್ ಹಾಗೂ ಊರವರ ಸಮ್ಮುಖ ಸ್ಥಳ ತನಿಖೆ. ಅಳತೆ ಮಾಡಿ ಎಂ.ಬಿ ಪುಸ್ತಕಕ್ಕೆ ತಾಳೆ ನೋಡಿ ಬಿರುಬಿಸಿಲಿನಲ್ಲೂ ಬಿರುಸಿನಿಂದ ಕಾರ್ಯಾಚರಿಸಿದ ಎಸಿಬಿ ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್ ಬಿ.ಸಿ.
ವಾರ್ಡ್‌ನ ಸದಸ್ಯರು, ಪಿಡಿಒ ರಿಂದ ಹೇಳಿಕೆ. ಅಗತ್ಯ ದಾಖಲೆ ಪತ್ರಗಳ ಜೆರಾಕ್ಸ್ ಪ್ರತಿ ವಶಪಡಿಸಿಕೊಂಡ ಎಸಿಬಿ.
ಪಂಚಾಯತ್‌ನ ಬೆಂಕಿ ಪ್ರಕರಣದ ಬಗ್ಗೆ ಕೆಲವರ ಮೇಲೆ ಸಂದೇಹ ವ್ಯಕ್ತಪಡಿಸಿದ ಆಡಳಿತ ಮಂಡಳಿ.
ತನಿಖೆ ಪ್ರಗತಿಯಲ್ಲಿರುವ ಮಧ್ಯೆಯೂ ದೂರುದಾರರು ಮಾಧ್ಯಮ ಹೇಳಿಕೆ, ಪತ್ರಿಕಾಗೋಷ್ಠಿ ನಡೆಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತ.

ಲಾಯಿಲ: ಲಾಯಿಲ ಗ್ರಾಮ ಪಂಚಾಯತ್‌ನಲ್ಲಿ ಬೆಂಕಿ ಪ್ರಕರಣ, ಒಂದೇ ಕಾಮಗಾರಿಗೆ ಎರಡೆರಡು ಬಿಲ್ಲುಗಳನ್ನು ತಯಾರಿಸಿ ಪಾವತಿಸಲಾಗಿದೆ ಹಾಗೂ ಇನ್ನೂ ಅನೇಕ ಅವ್ಯವಹಾರಗಳು ನಡೆಯುತ್ತಿದೆ ಎಂಬ ಬಗ್ಗೆ ಗ್ರಾಮಸ್ಥ, ಡಿಎಸ್‌ಎಸ್ ತಾಲೂಕು ಸಮಿತಿ ಸದಸ್ಯ ಎಸ್. ನಾಗರಾಜ್ ಲಾಯಿಲ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಎಸಿಬಿ ವಿಭಾಗದ ಅಧಿಕಾರಿಗಳು ಮಾ.27 ರಂದು ಲಾಯಿಲ ಪಂಚಾಯತ್‌ಗೆ ಬೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ಮತ್ತು ಸ್ಥಳತನಿಖೆ ನಡೆಸಿದರು.
ಎಸಿಬಿ ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್ ಬಿ.ಸಿ, ಹೆಡ್ ಕಾನ್ಸ್‌ಟೇಬಲ್ ಹರಿಪ್ರಸಾದ್, ಕಾನ್ಸ್‌ಟೇಬಲ್ ಗಣೇಶ್ ಅವರ ತಂಡ, ಪ್ರವಾಸಿ ಬಂಗಲೆಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರದ ಬಳಿಕ ಲಾಯಿಲ ಪಂಚಾಯತ್‌ಗೆ ಬೇಟಿ ನೀಡಿದರು. ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸಿ.ಆರ್. ನರೇಂದ್ರ, ಪಂಚಾಯತ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು, ಪಿಡಿಒ ಪ್ರಕಾಶ್ ಶೆಟ್ಟಿ ಅವರು ಉಪಸ್ಥಿತರಿದ್ದು ಸ್ಥಳ ಮಹಜರು ಸೇರಿದಂತೆ ತನಿಖೆಗೆ ಸ್ಪಂದಿಸಿದರು.
ತನಿಖೆಯ ವೇಳೆ ಒಂದೇ ಕಾಮಗಾರಿಗೆ ಎರಡು ಬಿಲ್ಲುಗಳು ಮಂಜೂರುಗೊಳಿಸಿ ಭ್ರಷ್ಠಾಚಾರ ನಡೆಸಲಾಗಿದೆ ಎಂಬುದರ ಬಗ್ಗೆ ಕಡತ ಪರಿಶೀಲನೆ ನಡೆಸಿದಾಗ, ಆಡಿಟ್‌ನಲ್ಲಿ ಅಂತಹ ತಪ್ಪು ಆಗಿಲ್ಲ. ಆದರೆ ಮಾಹಿತಿ ಹಕ್ಕು ಅಧಿನಿಯಮದಂತೆ ನಾಗರಾಜ್ ಅವರಿಗೆ ನೀಡಿದ ಮಾಹಿತಿಯಲ್ಲಿ ಕಣ್ತಪ್ಪಿನಿಂದ ಒಂದೇ ಕಾಮಗಾರಿಯ ಹೆಸರು ಎರಡು ಬಾರಿ ದಾಖಲಾದ ಬಗ್ಗೆ ತಿಳಿದುಬಂತು. ಈ ವಿಚಾರನ್ನು ನಾಗರಾಜ್ ಅವರಿಗೆ ತಿಳಿಸಲಾಗಿದ್ದರೂ ಪಂಚಾಯತ್ ಅಧಿಕೃತವಾಗಿ ರಿಜಿಸ್ಟರ್ಡ್ ಅಂಚೆ ಮೂಲಕ ತಿದ್ದುಪಡಿ ಮರುಮಾಹಿತಿ ನೀಡಲು ಎಡವಿರುವುದೂ ತಿಳಿದುಬಂತು.
ಜ್ಯೋತಿ ಆಸ್ಪತ್ರೆ ಬಳಿ, ಬಜಕರೆ ಸಾಲು ಎಂಬಲ್ಲಿ ರಸ್ತೆ ಕಾಮಗಾರಿ ನಡೆದ ಸ್ಥಳ ಪರಿಶೀಲನೆ:
ನಾಗರಾಜ್ ಆರೋಪಿಸಿದಂತೆ ಲಾಯಿಲ ಜ್ಯೋತಿ ಆಸ್ಪತ್ರೆ ಬಳಿಯ ನಿರ್ಮಿತ ಒಂದೇ ರಸ್ತೆಗೆ ಕಾಂಕ್ರೀಟ್ ಹಾಕಿದ ಬಾಬ್ತು ತಾ.ಪಂ. ಮತ್ತು ಗ್ರಾ.ಪಂ. ನಿಂದ ಎರಡು ಬಿಲ್ಲುಗಳನ್ನು ನೀಡಲಾಗಿದೆ ಎಂಬುದಕ್ಕೂ ಸೂಕ್ತ ಪುರಾವೆ ದೊರೆಯಲಿಲ್ಲ. ಅದಕ್ಕಾಗಿ ಸ್ಥಳ ಪರಿಶೀಲನೆ ನಡೆಸಿ ಅಳತೆ ಮಾಡಿದಾಗ ಕಾಂಕ್ರೀಟ್ ಕಾಮಗಾರಿಯಲ್ಲಿ ಎಂ.ಬಿ. ಪುಸ್ತಕದಲ್ಲಿ ದಾಖಲಾಗಿದ್ದಕ್ಕಿಂತ 2 ಮೀಟರ್‌ನಷ್ಟು ಕಡಿಮೆ ಕಾಂಕ್ರೀಟ್ ಹಾಕಿರುವುದು ತಿಳಿಯಲು ಸಾಧ್ಯವಾಯಿತು.
ಜ್ಯೋತಿ ಆಸ್ಪತ್ರೆಯ ಬಳಿ ತಿರುಗುವ ರಸ್ತೆಗೆ ಸೇರಿಸಿ ಸ್ವಲ್ಪ ಕಾಂಕ್ರೀಟ್ ವಿಸ್ತರಿಸಲಾದ ಬಗ್ಗೆ ಗುತ್ತಿಗೆದಾರರು ತಿಳಿಸಿದಾಗ, ಅದನ್ನು ಅಳತೆ ಮಾಡಿ ಕಳೆದು ನೋಡಿದರೂ ಮತ್ತೂ ಎರಡೂವರೆ ಅಡಿಯಷ್ಟು ಕಡಿಮೆ ಕಾಂಕ್ರೀಟ್ ಹಾಕಿರುವುದು ಪತ್ತೆಯಾಯಿತು. ಆದರೆ ಇದಕ್ಕೆ ಆಗಿನ ಜಿ.ಪಂ. ಇಂಜಿನಿಯರ್ ತಿಪ್ಪೇಸ್ವಾಮಿ ಅವರು ಹೊಣೆಗಾರರಾಗಿದ್ದು ಪಿಡಿಒ ಪ್ರಕಾಶ್ ಶೆಟ್ಟಿ ಅವರು ಹೊಣೆಗಾರರಾಗುವುದಿಲ್ಲ. ಈ ಬಗ್ಗೆ ಸಂಬಂಧಿತ ಅಧಿಕಾರಿಯ ವಿರುದ್ಧ ವರದಿ ನೀಡುವುದಾಗಿ ತಿಳಿಸಿದರು.
ಬಜಕ್ರೆಸಾಲು ಎಂಬಲ್ಲಿ ರಸ್ತೆ ನಿರ್ಮಾಣ, ಅಗಲೀಕರಣ ಕಾಮಗಾರಿ ನಡೆಸಿದ ಬಾಬ್ತು ಅರ್ಧ ಕಿ.ಮೀ ನಷ್ಟನ್ನು ಅಳತೆ
ಮಾಡಿ ಪರಿಶೀಲನೆ ನಡೆಸಿದಾಗ ಲೆಕ್ಕಕ್ಕಿಂತ ಹೆಚ್ಚೇ ಕಾಮಗಾರಿ ನಡೆಸಿದ್ದು ತಿಳಿದುಬಂತು. ಅಲ್ಲದೆ 2004 ರಲ್ಲಿ ಆಗಿರುವ ಕಾಮಗಾರಿಯ ಬಗ್ಗೆ ತಡವಾಗಿ ದೂರು ನೀಡಿದ್ದರಿಂದ ಚರಂಡಿ ಕಾಮಗಾರಿಗಳನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗಿಲ್ಲವಾದರೂ ಲೋಪ ನಡೆದಿಲ್ಲ ಎಂಬುದು ದೃಢಪಟ್ಟಿತು.
ದಾಖಲೆಗಳ ಪ್ರತಿ ವಶಕ್ಕೆ:
ಆರೋಪಗಳ ಬಗ್ಗೆ ದೂರುದಾರರು ಮತ್ತು ಅಧಿಕಾರಿಗಳ ಸಮಕ್ಷಮ ದಾಖಲೆಪತ್ರಗಳ ಪ್ರತಿಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಮುಂದಿನ ತನಿಖೆಯ ನಂತರ ಸಂಬಂಧಿತರಿಗೆ ವರದಿ ನೀಡುವುದಾಗಿ ಹೇಳಿದರು.
ಪಂಚಾಯತ್ ಭೇಟಿ ಮತ್ತು ಸ್ಥಳ ಪರಿಶೀಲನೆ ಸಂದರ್ಭ ತಾ.ಪಂ. ಪ್ರಭಾರ ಇ.ಒ. ಸಿ.ಆರ್. ನರೇಂದ್ರ, ಜಿ.ಪಂ. ಇಂಜಿನಿಯರ್ ಕನಿಷ್ಕ, ತಾ.ಪಂ. ಸದಸ್ಯ ಸುಧಾಕರ ಬಿ.ಎಲ್, ಪಂಚಾಯತ್ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಮತ್ತು ಸದಸ್ಯರಾದ ಮೋಹನ್‌ದಾಸ್, ರುಕ್ಮಯ್ಯ ಆಚಾರ್, ಚಿದಾನಂದ ಶೆಟ್ಟಿ, ಫ್ರಾನ್ಸಿಸ್ ಡಿಸೋಜಾ, ಪಿಡಿಒ ಪ್ರಕಾಶ್ ಶೆಟ್ಟಿ, ದೂರು ಅರ್ಜಿದಾರ ನಾಗರಾಜ್ ಎಸ್, ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಾದ ವಿಶ್ವನಾಥ, ಜಗನ್ನಾಥ ಮತ್ತು ರಮೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

wine shop copyಬೆಳ್ತಂಗಡಿ : ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳ ಬದಿಯಲ್ಲಿರುವ ವೈನ್‌ಶಾಪ್‌ಗಳನ್ನು 500ಮೀಟರ್ ಒಳಕ್ಕೆ ಸ್ಥಳಾಂತರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಮುಖ್ಯರಸ್ತೆ ಬದಿಯ ವೈನ್ ಶಾಪ್‌ಗಳಿಗೆ ಅಬಕಾರಿ ಇಲಾಖೆ ನೋಟೀಸ್ ಜಾರಿ ಮಾಡಿರುವುದಾಗಿ ತಿಳಿದುಬಂದಿದೆ.
ಹೆದ್ದಾರಿಗಳ ಬದಿಯಲ್ಲಿ ಮದ್ಯ ಅಂಗಡಿಗಳು ಇರುವುದು ಅಪಘಾತಗಳಿಗೆ ಕಾರಣವಾಗಿದ್ದು, ಅವುಗಳನ್ನು ತೆರವುಗೊಳಿಸಬೇಕೆಂದು ಕೆಲ ನಾಗರಿಕರು, ಸಾರ್ವಜನಿಕ ಹಿತಾಶಕ್ತಿ ದಾವೆ ಹೂಡಿದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ವೈನ್ಸ್ ಶಾಪ್‌ಗಳನ್ನು 500ಮೀ ದೂರಕ್ಕೆ ಸ್ಥಳಾಂತರಿಸಲು ಆದೇಶಿಸಿತ್ತು. ಮೊದಲ ಈ ಆದೇಶದಲ್ಲಿ ಹೆದ್ದಾರಿ ಬದಿಯ ಬಾರ್ & ರೆಸ್ಟೋರೆಂಟ್ ಇದ್ದರೂ ಬಳಿಕ ಸುಪ್ರೀಂ ಕೋರ್ಟ್ ಮಾಡಿದ ಪರಿಷ್ಕೃತ ಆದೇಶದಲ್ಲಿ ಬಾರ್ & ರೆಸ್ಟೋರೆಂಟ್ ಗಳನ್ನು ತನ್ನ ಆದೇಶದಿಂದ ಹೊರಗಿಡಿಸಿತು. ಜೂನ್ ತಿಂಗಳ ಅಂತ್ಯಕ್ಕೆ ವೈನ್ಸ್ ಶಾಪ್‌ಗಳ ಲೈಸನ್ಸ್ ಅವಧಿ ಮುಗಿಯುವುದರಿಂದ ಎಪ್ರಿಲ್‌ನಿಂದ ಪರವಾನಗಿ ನಕವೀಕರಿಸಲು ಅಬಕಾರಿ ಇಲಾಖೆಗೆ ಅಸಾಧ್ಯವಾಗಲಿದೆ. ಈ ಹಿನ್ನಲೆಯಲ್ಲಿ ಅಬಕಾರಿ ಇಲಾಖೆ ವೈನ್ ಶಾಪ್‌ಗಳಿಗೆ ಸಮಜಾಯಿಸಿಕೆ ಕೇಳಿ ನೋಟೀಸು ಜಾರಿ ಮಾಡಿದೆ.
ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿಯ 3ಸ್ಟಾರ್ ವೈನ್ಸ್, ಲಾವಣ್ಯ ವೈನ್ಸ್, ಅನಿಲ್ ವೈನ್ಸ್, ಶ್ವೇತಾ ವೈನ್ಸ್, ಗುರುವಾಯನಕೆರೆಯ ಸ್ವಸ್ತಿಕ್ ವೈನ್ಸ್, ಮಡಂತ್ಯಾರಿನ ಅಶ್ವಿನಿ ವೈನ್ಸ್, ಉಜಿರೆಯ 7ಸ್ಟಾರ್ ವೈನ್ಸ್, ಜುಗಲ್ ವೈನ್ಸ್, ಪ್ರಿಯಾ ವೈನ್ಸ್, ಕಕ್ಕಿಂಜೆಯ ಸಾಲಿಯಾನ್ ವೈನ್ಸ್, ಸೋಮಂತಡ್ಕದ ವರಣ್ ವೈನ್ಸ್, ಲಾಲ ಶೀತಲ್ ವೈನ್ಸ್, ಕೊಕ್ಕಡ ಸಾಲಿಯಾನ್ ವೈನ್ಸ್, ಅಳದಂಗಡಿ ರೀಜೆಂಟ್ ವೈನ್ಸ್ ಗಳಿಗೆ ನೋಟೀಸು ಜಾರಿಯಾಗಿದೆ. ಈ ನಡುವೆ ವೈನ್ ಶಾಪ್ ಮಾಲಕರು ಕೂಡಾ ಸುಪ್ರೀಂ ಕೋರ್ಟಿಗೆ ತಮ್ಮ ಮೇಲ್ಮನವಿ ಸಲ್ಲಿಸಿದ್ದು ಮಾ. 31ಕ್ಕೆ ಇದರ ವಿಚಾರಣೆ ನಡೆಯಲಿದೆ. ಕೋರ್ಟಿನ ತೀರ್ಪಿನ ಆಧಾರದಲ್ಲಿ ಮುಂದಿನ ಕ್ರಮವನ್ನು ಇಲಾಖೆ ಕೈಗೊಳ್ಳುವ ಸಾಧ್ಯತೆ ಇದೆ.

padmuja ayush shibira copyಪದ್ಮುಂಜ : ದ.ಕ.ಜಿ.ಪಂ ಆಯುಷ್ ಇಲಾಖೆ ಮಂಗಳೂರು, ಗ್ರಾಮ ಪಂಚಾಯತ್ ಕಣಿಯೂರು, ವ್ಯವಸಾಯ ಸಹಕಾರಿ ಬ್ಯಾಂಕ್ ಪದ್ಮುಂಜ ಇದರ ಸಹಕಾರದೊಂದಿಗೆ ಪದ್ಮುಂಜದಲ್ಲಿ ಉಚಿತ ಆಯುಷ್ ಚಿಕಿತ್ಸಾಶಿಬಿರವು ಕುಮಾರಿ ಹೇಮಲತಾ ರವರ ಪ್ರಾರ್ಥನೆಯೊಂದಿಗೆ, ಸಿ.ಎ ಬ್ಯಾಂಕ್ ಅಧ್ಯಕ್ಷ ರಾಜೀವ ರೈಯವರ ಅಧ್ಯಕ್ಷತೆಯಲ್ಲಿ ಮಾ. 27ರಂದು ಜರುಗಿತು. ಕಣಿಯೂರು ಗ್ರಾ.ಪಂ ಅಧ್ಯಕ್ಷ ಸುನೀಲ್ ಸಾಲ್ಯಾನ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರಕಾರದ ಉಚಿತ ಸೌಲಭ್ಯಗಳನ್ನು ನಾಗರಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. ವೈಧ್ಯದಾಧಿಕಾರಿ ಮಣಿಕರಣಿಕ ರವರು ಪ್ರಾಸ್ತಾವಿಕ ಭಾಷಣ ಮಾಡಿದರು. ತಾ.ಪಂ ಸದಸ್ಯೆ ಅಮಿತಾ ಮಾತನಾಡಿ ಶುಭ ಹಾರೈಸಿದರು.
ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಕುಮಾರಿ ಲಾವಣ್ಯರವರು ಮಾತನಾಡಿ ಆರೋಗ್ಯ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ವಿವರಿಸಿದರು. ಗ್ರಾ.ಪಂ ಸದಸ್ಯರಾದ ಕೃಷ್ಣ, ಕೇಶವ, ಲಲಿತಾ ಗಾಯತ್ರಿ, ಅಬ್ದುಲ್ ಶುಕುರ್, ಪಂಚಾಯತ್ ಕಾರ್ಯದರ್ಶಿ ಶಾರದ, ಮಾಜಿ ಉಪಾಧ್ಯಕ್ಷೆ ಶಾರದ ಆರ್. ರೈ, ಸಿ.ಎ ಬ್ಯಾಂಕ್ ಮ್ಯಾನೇಜರ್ ಉಮೇಶ್ ಪಡ್ಡಿಲ್ಲಾಯ, ವೈಧ್ಯಾಧಿಕಾರಿಗಳಾದ ಡಾ| ಸಹನಾ ಪಾಂಡುರಂಗ, ಡಾ| ಮಾನಸಿ, ಡಾ| ಶಿಲ್ಪಾ, ಡಾ| ಶ್ರೀನಿಧಿ ಉಪಸ್ಥಿತರಿದ್ದರು. ಶಿಬಿರದಲ್ಲಿ ವಾತಾವ್ಯಾಧಿ, ಗಂಟು ನೋವು, ಸ್ತ್ರೀ ರೋಗ ಹಾಗೂ ಇನ್ನಿತರ ಸಾಮಾನ್ಯ ಕಾಯಿಲೆಗಳಿಗೆ ತಪಾಸನೆ ನಡೆಸಿ ಉಚಿತವಾಗಿ ಔಷದವನ್ನು ನೀಡಲಾಯಿತು. ಪಿಲಿಗೂಡ್ ಆಯುಷ್ ಕೇಂದ್ರದ ವೈಧ್ಯಾಧಿಕಾರಿ ಸಹನಾ ರವರು ಕಾರ್ಯಕ್ರಮ ನಿರೂಪಿಸಿದರು. ಸಮಾಜ ಸೇವಕ ಕಾಸಿಂ ಪದ್ಮುಂಜರವರು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.

venurವೇಣೂರು : ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಸೂಚನೆಯಂತೆ ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೊಳಪಟ್ಟ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾ. 26ರಂದು ಆಡಳಿತಾಧಿಕಾರಿ ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶ್ರೀಮತಿ ರೂಪ ಜಿ. ಜೈನ್‌ರವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಸ್ವಚ್ಛತಾ ಕಾರ್ಯದಲ್ಲಿ ಯೋಜನೆಯ ಸದಸ್ಯರು, ವೇಣೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ಕೇಂದ್ರದ ವಿದ್ಯಾರ್ಥಿಗಳು ಹಾಗೂ ದೇವಸ್ಥಾನದ ಸಿಬ್ಬಂದಿಗಳು ಸಹಕರಿಸಿದರು.

otla

otla1

otla2ಶಿಶಿಲ : ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮ ಬೈದರ್ಕಳ ಹಾಗೂ ಪರಿವಾರ ದೈವಗಳ ಕ್ಷೇತ್ರ ಶಿಶಿಲ ಇಲ್ಲಿಗೆ ಬ್ರಹ್ಮ ಬೈದರ್ಕಳ ಪ್ರತಿಷ್ಠಾಪನೆಗೊಳ್ಳಲಿರುವ ಮೂರ್ತಿಯ ವೈಭವದ ಶೋಭಾಯಾತ್ರೆಯು ಮಾ. 26ರಂದು ಮಂಗಳೂರು ಕಂಕನಾಡಿಯಿಂದ ಹೊರಡಿತು.
ಬೆಳಿಗ್ಗೆ 9.ಕ್ಕೆ ಮಂಗಳೂರು ಕಂಕನಾಡಿ ಗರಡಿಯಿಂದ ಹೊರಟು ಮಂಗಳೂರು, ಬಿ.ಸಿ ರೋಡ್, ಪುಂಜಾಲಕಟ್ಟೆ, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಕೊಕ್ಕಡ, ಅರಸಿನಮಕ್ಕಿ, ಶಿಶಿಲ, ಒಟ್ಲ ಗರಡಿ ತಲುಪಿತು. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಸೇರಿ ಶೋಭಾಯಾತ್ರೆಯನ್ನು ಯಶಸ್ವಿಗೊಳಿಸಿದರು.

ಕೊಕ್ಕಡ ಸೀಮೆಯ ಪ್ರಖ್ಯಾತ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಮಾ.26 ರಂದು ಶ್ರೀ ದೇವಳದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಪ್ರತಿಷ್ಟಾ ವಾರ್ಷಿಕೋತ್ಸವದ ನಿಮಿತ್ತ ಬೆಳಗ್ಗೆ ಗಣಹೋಮ, ಶತರುದ್ರ, ಸೀಯಾಳ ಅಭಿಷೇಕ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರೆ ರಂಗಪೂಜೆ, ಉತ್ಸವಾದಿ ದೇವತಾ ಕಾರ್ಯಕ್ರಮಗಳು ನಡೆಯಲಿದೆ. ಈ ದಿನ ಸಂಜೆ 6 ರಿಂದ ದೇವಳದ ಹರಿಹರ ಮಂಟಪದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮತ್ತು ತುಳು ಶಿವಳ್ಳಿ ಸಭಾ ಕೊಕ್ಕಡ ವಲಯ ಇದರ ಸಹಯೋಗದಲ್ಲಿ ಉಡುಪಿಯ ಯಕ್ಷ ಸಂಗೀತ ನಾದ ವೈಭವಂ ಇದರ ಸಂಚಾಲಕ ಉಭಯ ತಿಟ್ಟುಗಳ ಖ್ಯಾತ ಭಾಗವತರಾದ ನಾರಾಯಣ ಶಬರಾಯರ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ ಶ್ರೀ ಹರಿದರ್ಶನ ಯಕ್ಷಗಾನ ಕಾರ್ಯಕ್ರಮವೂ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮದಲ್ಲಿ ದೇವಳದ ಭಕ್ತಾದಿಗಳು ಪಾಲ್ಗೊಳ್ಳುವಂತೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

nandana bithalಬೆಳ್ತಂಗಡಿ : ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ನಡೆದ ದೇಯಿ ಬೈದೆತಿ, ಕೋಟಿ-ಚೆನ್ನಯ ಮೂಲಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದವರಿಗೆ ಕೃತಜ್ಞತಾ ಕಾರ್ಯಕ್ರಮ ಮತ್ತು ಮನವಿ ಪತ್ರ ಬಿಡುಗಡೆ ಸಮಾರಂಭ ಮಾ. 25ರಂದು ಬೆಳ್ತಂಗಡಿ ಶ್ರೀ ನಾರಾಯಣ ಗುರು ಸಂಕೀರ್ಣದ ಆಶಾ ಸಾಲ್ಯಾನ್ ಕಲ್ಯಾಣ ಮಂಟಪದಲ್ಲಿ ಜರಗಿತು.
ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ, ಸೋಮನಾಥ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸುಜಿತಾ ವಿ. ಬಂಗೇರ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಾಧ್ಯಕ್ಷ ನಿವೃತ್ತ ಎಸ್.ಪಿ ಪೀತಾಂಬರ ಹೇರಾಜೆ, ಎ.ಪಿ.ಎಂ.ಸಿ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಮೂಲಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರ ಶ್ರೀಧರ ಪೂಜಾರಿ, ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಸುಧಾಕರ ಸುವರ್ಣ ತಿಂಗಳಾಡಿ, ಜನಾರ್ದನ ಪೂಜಾರಿ ಗೇರುಕಟ್ಟೆ, ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ, ಶ್ರೀಮತಿ ಸುಮತಿ ಪ್ರಮೋದ್, ರಾಜಶ್ರೀ ರಮಣ್, ವಿನೋದಿನಿ ರಾಮಪ್ಪ, ನಿತ್ಯಾನಂದ ನಾವರ ಮೊದಲಾದವರು ಉಪಸ್ಥಿತರಿದ್ದರು.

Prakash devadiga 2 copyಬೆಳ್ತಂಗಡಿ: ಯುಗಾದಿ ಹಬ್ಬದ ಪ್ರಯುಕ್ತ ಬೆಂಗಳೂರು ಆಕಾಶವಾಣಿ ಕೇಂದ್ರ ಆಯೋಜಿಸಿರುವ ಚೈತ್ರ ಲಹರಿ ಎಂಬ ವಿಶೇಷ ಕಾರ್ಯಕ್ರಮದಲ್ಲಿ, ಜಿಲ್ಲೆಯ ಖ್ಯಾತ ಸ್ಯಾಕ್ಸೋಫೋನ್ ವಾದಕ, ಆಕಾಶವಾಣಿ ಎ ಗ್ರೇಡ್ ಕಲಾವಿದ ಡಿ.ಬಿ. ಪ್ರಕಾಶ್ ದೇವಾಡಿಗ, ಲಾಯಿಲ ಕನ್ನಾಜೆ ಹಾಗೂ ಬೆಂಗಳೂರಿನ ಖ್ಯಾತ ಕ್ಲಾರಿಯೋನೆಟ್ ವಾದಕ ವೆಂಕಟೇಶರಾಯ ವಡವಟಿ, ಇದರ ಸ್ಯಾಕ್ಸೋಫೋನ್ – ಕ್ಲಾರಿಯೋನೆಟ್ ಜುಗಲ್‌ಬಂದಿ ವಿಶೇಷ ಕಾರ್ಯಕ್ರಮವು ಮಾ.30ರಂದು ಗುರುವಾರ ಬೆಳಿಗ್ಗೆ 8.30ರಿಂದ 9.30ರ ವರೆಗೆ ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ಪ್ರಸಾರವಾಗಲಿದೆ. ಅಂತರ್‌ರಾಷ್ಟ್ರೀಯ ಖ್ಯಾತಿಯ ಕ್ಲಾರಿಯೋನೆಟ್ ಕಲಾವಿದ ಪಂಡಿತ್ ನರಸಿಂಹಲು ವಡವಟಿಯವರು ಈ ಕಾರ್ಯಕ್ರಮಕ್ಕೆ ನಿರ್ದೇಶನ ನೀಡಿದ್ದಾರೆ. ಈಗಾಗಲೇ ಬೆಂಗಳೂರು ಆಕಾಶವಾಣಿಯಲ್ಲಿ ಧ್ವನಿಮುದ್ರಣಗೊಂಡಿರುವ ಈ ಕಾರ್ಯಕ್ರಮದಲ್ಲಿ ಪಕ್ಕವಾದ್ಯದಲ್ಲಿ ಮೃದಂಗ-ಸುನಿಲ್ ಬೆಂಗಳೂರು, ತಬಲ – ವಿಕಾಸ್ ನರೆಗಲ್, ಖಂಜಿರ- ಆರ್. ಕಾರ್ತಿಕ್ ಬೆಂಗಳೂರು ಸಹಕರಿಸಿದ್ದಾರೆ. ಈ ಕಾರ್ಯಕ್ರಮವು ಡಿ.ಟಿ.ಎಚ್.ನ ರಾಗಂ ರೇಡಿಯೋ ಚಾನಲ್‌ನಲ್ಲಿ ಪ್ರಸಾರವಾಗಲಿದೆ.

gunduri varshikosava copyಗುಂಡೂರಿ: ಧಾರ್ಮಿಕ ಕೈಂಕಾರ್ಯಗಳಲ್ಲಿ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ನಾವು ಊಹಿಸಿರುವ ಸಾಧನೆಯ ಗುರಿಯನ್ನು ತಲುಪಬೇಕಾದರೆ ದೇವರ ಅನುಗ್ರಹ ಬೇಕು. ಅದಕ್ಕಾಗಿ ಗುರು-ಹಿರಿಯರನ್ನು ಪೂಜ್ಯಭಾವದಿಂದ ಕಾಣಬೇಕು ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲ ಹೇಳಿದರು.
ಅವರು ಶ್ರೀ ಸತ್ಯನಾರಾಯಣ ಪೂಜಾ ಭಜನಾ ಮಂಡಳಿ ಗುಂಡೂರಿ ತುಂಬೆದಲೆಕ್ಕಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ ಗುಂಡೂರಿ ಇವರ ಜಂಟಿ ಆಶ್ರಯದಲ್ಲಿ ಮಾ. 9ರಂದು ಭಜನಾ ಮಂದಿರದ ಸಭಾಂಗಣದಲ್ಲಿ ಜರಗಿದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಭಜನಾ ಮಂದಿರದ 43ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇಣೂರು ಶ್ರೀ ದಿಗಂಬರ ತೀರ್ಥ ಕ್ಷೇತ್ರ ಸಮಿತಿ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ ಧಾರ್ಮಿಕ ಉಪನ್ಯಾಸ ನೀಡಿ, ಬದುಕು ಬದುಕಲು ಬಿಡು ಎಂಬ ಸಂದೇಶ ಪ್ರತೀ ಧರ್ಮದಲ್ಲಿ ಹೇಳಿದೆ. ಸಂಸ್ಕಾರ, ಸಂಸ್ಕೃತಿ ಭೂಮಿ ಯಲ್ಲಿ ನೆಲೆಯಾಗಬೇಕಾದರೆ ಧರ್ಮ ಜಾಗೃತಿ ಆಗಬೇಕು. ಅದು ಇಂತಹ ಭಜನಾ ಮಂದಿರಗಳಿಂದ ಸಾಧ್ಯವಾಗಲಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಧರ್ಮಸ್ಥಳ ಗ್ರಾ.ಯೋ. ಸ್ವಸಹಾಯ ಸಂಘಗಳ ನಿರ್ವಹಣಾ ವಿಭಾಗದ ಪ್ರಾದೇಶಿಕ ನಿರ್ದೇಶಕ ಕೆ. ಬೂದಪ್ಪ ಗೌಡ ಮಾತನಾಡಿ, ವಿದ್ಯೆ ಎಂಬುದು ಶಾಶ್ವತ ಸಂಪತ್ತು. ಪೋಷಕರು ವಿದ್ಯೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಗುಂಡೂರಿ ಗ್ರಾಮ ಹಾಲು ಉತ್ಪಾದನೆಯ ತವರೂರು. ಜನತೆಯ ಹೈನುಗಾರಿಕೆಯಲ್ಲಿನ ಸಾಧನೆ ಇಲ್ಲಿನ ಅಭಿವೃದ್ಧಿಯ ಸಂಕೇತವಾಗಿದೆ ಎಂದರು. ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ಮಾತನಾಡಿ ಶುಭ ಹಾರೈಸಿದರು. ಭಜನಾ ಮಂಡಳಿ ಅಧ್ಯಕ್ಷ ಶಾಂತಿರಾಜ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮ್ಮಾನ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಪ್ರಭಾಕರ ಹೆಗ್ಡೆ ಹಟ್ಟಾಜೆ, ನಿವೃತ್ತ ಸೈನಿಕ ಉಮೇಶ್ ಕುಲಾಲ್ ಮಾಲಾಡಿ ಹಾಗೂ ಲೋಕಯ್ಯ ಮೂಲ್ಯ ತುಂಬೆದಲೆಕ್ಕಿ ಅವರನ್ನು ಸಮ್ಮಾನಿಸಲಾಯಿತು. ಕಳೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಮನವಿ: ಗುಂಡೂರಿ ಗ್ರಾಮದ ಬಹುಬೇಡಿಕೆಯಾದ ಕಜೆ-ತಜಂಕಬೆಟ್ಟು ಸೇತುವೆ, ಸಿದ್ದಕಟ್ಟೆ-ವೇಣೂರು ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಗೊಳಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿ.ಪಂ. ಸದಸ್ಯ ಧರಣೇಂದ್ರ ಕುಮಾರ್ ಅವರ ಮೂಲಕ ಗ್ರಾಮಸ್ಥರ ಪರವಾಗಿ ಗ್ರಾ.ಪಂ. ಸದಸ್ಯ ಹರೀಶ್ ಕುಮಾರ್ ಪೊಕ್ಕಿ ಮನವಿ ನೀಡಿ ಒತ್ತಾಯಿಸಿದರು.
ಮಾರೂರು ಖಂಡಿಗದ ವೇ|ಮೂ| ದಾಮದಾಸ ಅಸ್ರಣ್ಣರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನ ನೆರವೇರಿತು. ಭಜನಾ ಮಂಡಳಿ ಕಾರ್ಯದರ್ಶಿ ರಮೇಶ್ ಪೂಜಾರಿ ಪಡ್ಡಾಯಿಮಜಲು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಧರ್ಮಸ್ಥಳ ಗ್ರಾ.ಯೋಜ ನೆಯ ವೇಣೂರು ವಲಯ ಮೇಲ್ವಿಚಾರಕ ಶ್ರೀನಿವಾಸ ಗೌಡ ನಿರೂಪಿಸಿ ಹರೀಶ್ ಕುಮಾರ್ ಪೊಕ್ಕಿ ವಂದಿಸಿದರು. ಭಜನಾ ಮಂಡಳಿ ಕಾರ್ಯದರ್ಶಿ ರಾಜು ಪೂಜಾರಿ ಕಂಬಳದಡ್ಡ ಹಾಗೂ ಪದಾಧಿಕಾರಿಗಳು ಸಹಕರಿಸಿದರು. ರಾತ್ರಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ರೆ ಎಂಬ ಯಕ್ಷಗಾನ ಬಯಲಾಟ ಜರಗಿತು.

WhatsApp Image 2017-03-24 at 3.11ಬೆಳ್ತಂಗಡಿ : ಮಾ. 23ರಂದು ಬಂಟ್ವಾಳ ತಾಲೂಕಿನ ಸಾರಬಳಿ ಮನೆ, ಕಾವಳಕಟ್ಟೆ ಅಂಚೆ, ಕಾವಳ ಮೂಡೂರು ಗ್ರಾಮದ ಆರೋಪಿ ಬಾಲಕೃಷ್ಣ ಕುಲಾಲ್,(33ವ) ಎಂಬಾತನನ್ನು ಉಜಿರೆಯಲ್ಲಿ ದಸ್ತಗಿರಿ ಮಾಡಿ ಕಳ್ಳತನ ಮಾಡಿದ ಎಲ್ಲಾ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಬೆಳ್ತಂಗಡಿ ತಾಲೂಕಿನ ವಿದ್ಯಾನಗರ, ನಿಡಿಗಲ್, ಕಲ್ಮಂಜ ಗ್ರಾಮ, ಓಬಯ್ಯ ನಾಯ್ಕ(51ವ) ಎಂಬವರು ಧರ್ಮಸ್ಥಳ ಠಾಣೆಗೆ ನೀಡಿದ ದೂರಿನಂತೆ ಯಾರೋ ಕಳ್ಳರು ಮನೆಗೆ ನುಗ್ಗಿ ಮನೆಯ ಕಪಾಟಿನಲ್ಲಿದ್ದ ಸುಮಾರು 6 ರಿಂದ 8 ಪವನ್ ನಷ್ಟು ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
ಈ ಬಗ್ಗೆ ತನಿಖೆಯನ್ನು ಕೈಗೆತ್ತಿಕೊಂಡ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿಯವರ ತಂಡವು ಈ ಪ್ರಕರಣವನ್ನು ಪತ್ತೆ ಹಚ್ಚುವರೇ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಭೂಷಣ್ ಗುಲಾಬ್‌ರಾವ್ ಬೊರಸೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ| ವೇದಮೂರ್ತಿರವರ ನಿರ್ದೇಶನದಂತೆ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ಶ್ರೀ ರವೀಶ್ ಸಿ.ಆರ್ ರವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಶ್ರೀ ನಾಗೇಶ್ ಕದ್ರಿರವರ ನೇತ್ರತ್ವದಲ್ಲಿ ಧರ್ಮಸ್ಥಳ ಠಾಣಾ ಪಿ.ಎಸ್.ಐ ರಾಮ ನಾಯ್ಕ, ಬೆಳ್ತಂಗಡಿ ಠಾಣಾ ಪಿ.ಎಸ್.ಐ ರವಿ ಬಿ.ಎಸ್, ವೇಣೂರು ಠಾಣಾ ಏ.ಎಸ್.ಐ ದೇವಪ್ಪ, ಪ್ರವೀಣ್ ಎಂ, ವೆಂಕಟೇಶ್, ಬೆನ್ನಿಚ್ಚನ್, ಪ್ರಮೋಧ್, ವಿಜು ಹಾಗೂ ಪೌಲೋಸ್ ರವರು ಸಹಕರಿಸಿರುತ್ತಾರೆ.

Sanmana  NAgraj poojari copyಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಪ್ರೋ| ನಾಗರಾಜ್ ಪೂಜಾರಿಯವರನ್ನು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಬಿ.ಟಿ.ಸಿ.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಉದ್ಯೋಗ ಮಾಹಿತಿ ಕಾರ್ಯಗಾರದಲ್ಲಿ ಸನ್ಮಾನಿಸಲಾಯಿತು.  ಈ ಸಂದರ್ಭದಲ್ಲಿ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿ ಮೈಸೂರಿನ ಮರಿ ಮಲ್ಲಪ್ಪ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಹರ್ಷಿತ್, ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದ ಸೋಮವಾರಪೇಟೆ ತಾಲೂಕಿನ ಬಿ.ಟಿ.ಸಿ.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕೆ.ಇ.ಐಪು, ಕಾಲೇಜಿನ ಉದ್ಯೋಗ ಮಾಹಿತಿ ಕೇಂದ್ರ ಮುಖ್ಯಸ್ಥರಾದ ಶ್ರೀಧರ್, ಪ್ರಧ್ಯಾಪಕರಾದ ಕಮಲಾಕ್ಷ ಬಲ್ಯಾಯ, ಹೆಚ್.ಎಸ್ ಶರಣ್ ಉಪಸ್ಥಿತರಿದ್ದರು.

devanari school copyಇಂದಬೆಟ್ಟು : ನವೋದಯ ಪ್ರಕಾಶನ ಚಿತ್ರದುರ್ಗ ಇವರು 2016-17ನೇ ಸಾಲಿನಲ್ಲಿ ನಡೆಸಿದ ರಾಜ್ಯಮಟ್ಟದ ನವೋದಯ ಕನ್ನಡ ಪರೀಕ್ಷೆಯಲ್ಲಿ ಸ.ಹಿ.ಪ್ರಾ ಶಾಲೆ ದೇವನಾರಿಯ ಮೂವರು ವಿದ್ಯಾರ್ಥಿಗಳು ರ‍್ಯಾಂಕ್ ಗಳಿಸಿರುತ್ತಾರೆ.
ಏಳನೇ ತರಗತಿಯ ಅಶ್ವಿತಾಳಿಗೆ ರಾಜ್ಯಮಟ್ಟದ ರ‍್ಯಾಂಕ್, ಆರನೇಯ ತರಗತಿಯ ಸುಹಾನಾಬಾನುಗೆ ಜಿಲ್ಲಾ ರ‍್ಯಾಂಕ್, ಐದನೇ ತರಗತಿಯ ಪ್ರತೀಕ್ಷಾಳಿಗೆ ತಾಲೂಕು ರ‍್ಯಾಂಕ್ ಬಂದಿರುತ್ತದೆ. ಮಾ.11 ರಂದು ಶಾಲೆಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ಪ್ರಧಾನ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಜಯಾನಂದ ಕೋಟ್ಯಾನ್, ಉಪಾಧ್ಯಕ್ಷೆ ಶ್ರೀಮತಿ ಆಶಾಲತಾ, ಸದಸ್ಯರಾದ ಅಬ್ದುಲ್ ಮುತ್ತಲಿಬ್ ಹಾಗೂ ವಿಶ್ವನಾಥ ಗುಡಿಗಾರ, ಶಾಲಾ ಮುಖ್ಯೋಪಧ್ಯಾಯರಾದ ಕಿಶೋರ್ ಕುಮಾರ್ ಹಾಗೂ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿತ್ಯಾನಂದ ನಾವರ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ಪ್ರಧಾನ ಮಾಡಿ ಸರಕಾರಿ ಶಾಲೆಯ ಮಕ್ಕಳ ಸಾಧನೆಯನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿದರು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದ ಕನ್ನಡ ಶಿಕ್ಷಕ ಕಿಶೋರ್ ಕುಮಾರ್‌ರವರಿಗೆ ಉತ್ತಮ ಮಾರ್ಗದರ್ಶನ ಶಿಕ್ಷಕ ಪ್ರಶಸ್ತಿ ಲಭಿಸಿದ್ದು ಎಸ್.ಡಿ.ಎಂ.ಸಿ ಅಧ್ಯಕ್ಷರು ಪ್ರಶಸ್ತಿ ಪತ್ರ ಹಾಗೂ ಪದಕವನ್ನು ಶಿಕ್ಷಕರಿಗೆ ಪ್ರಧಾನ ಮಾಡಿದರು. ಶಾಲಾ ಮುಖ್ಯೋಪಧ್ಯಾಯರು ಸ್ವಾಗತಿಸಿ, ಸಹಶಿಕ್ಷಕಿ ಶ್ರೀಮತಿ ಆಶಾ ವಂದಿಸಿದರು. ಏಳನೇ ತರಗತಿ ವಿದ್ಯಾರ್ಥಿನಿ ರಮ್ಲತ್ ಕಾರ‍್ಯಕ್ರಮ ನಿರೂಪಿಸಿದರು.

koyyur shalege parisara mithra prasasti copyಕೊಯ್ಯೂರು : ಸರಕಾರಿ ಪ್ರೌಢಶಾಲೆ ಕೊಯ್ಯೂರು ಇಲ್ಲಿಗೆ ದ.ಕ ಜಿಲ್ಲಾ ಮಟ್ಟದ ಹಸಿರು ಶಾಲೆ ಪ್ರಶಸ್ತಿಯನ್ನು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಪರಿಸರ ಮತ್ತು ಅರಣ್ಯ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರಿಂದ ಶಾಲಾ ಮುಖ್ಯೋಪಧ್ಯಾಯ ರಾಧಾಕೃಷ್ಣ ತಚ್ಚಮೆಯವರು ಪ್ರಶಸ್ತಿ ಸ್ವೀಕರಿಸಿದರು.
ಶಾಲೆಯಲ್ಲಿ ನಡೆಸಿದ ಪರಿಸರಕ್ಕೆ ಪೂರಕವಾದ ಕಾರ್ಯಕ್ರಮಗಳಿಗೆ ಈ ಪ್ರಶಸ್ತಿ ಲಭಿಸಿದೆ. ಶಾಲೆಯಲ್ಲಿ ನಡೆಸಿದ ಮಳೆಕೊಯ್ಲು, ಕೊಳವೆ ಬಾವಿಗೆ ಜೀವಜಲ ಮರುಪೂರಣ, ಇಂಗು ಗುಂಡಿ ರಚನೆ, ಶಾಲಾ ಆವರಣದಲ್ಲಿ ಲಭ್ಯವಿರುವ ಎಲ್ಲಾ ಗಿಡಮರಗಳನ್ನು ಗುರುತಿಸಿ ಅವುಗಳ ಸ್ಥಳೀಯ ಹೆಸರು ವೈಜ್ಞಾನಿಕ ಹೆಸರು ಬರೆದು ಗಿಡ ಮರಗಳಿಗೆ ನಾಮಫಲಕ ಹಾಕಲಾಗಿದೆ. ಅಪರೂಪದ ಸಸ್ಯಗಳಾದ ಕದಂಬ. ಅಶೋಕ. ಸೊರಗಿ ಖದಿರ, ಬಿಲ್ವ ಮುಂತಾದ ಸಸ್ಯಗಳನ್ನು ಬೆಳೆಸಲಾಗಿದೆ. ಕಸಗಳನ್ನು ಕ್ರಮಬಧ್ಧವಾಗಿ ವಿಲೆವಾರಿ ಮಾಡಲಾಗಿದೆ. ಶಾಲೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಗತಿಗಳನ್ನು ಆಯೋಜಿಸಲಾಗಿದೆ. ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ತಚ್ಚಮೆಯವರ ಮಾರ್ಗದರ್ಶನದಲ್ಲಿ ಪರಿಸರ ಕ್ಲಬ್ ಶಿಕ್ಷಕಿಯರಾದ ಶ್ರೀಮತಿ ಬೇಬಿ ಮಾಲಿನಿ ಹೆಗಡೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ. ಶಿಕ್ಷಕರಾದ ಸುಧಾಕರ ಶೆಟ್ಟಿ, ಅನಂತರಾಮ ನೂರಿತ್ತಾಯ, ರಾಮಚಂದ್ರ ದೊಡಮನಿ, ದೀಪಿಕಾ ಸಂತೋಷ್ ಕುಮಾರ ಸಹಕರಿಸಿರುತ್ತಾರೆ.

sampritha samprith copyನಿಟ್ಟಡೆ ಗ್ರಾಮದ ಬೂತೇರು ಮನೆಯ ಶ್ರೀಮತಿ ಯೋಗಿನಿ ರವಿ ಪೂಜಾರಿಯವರ ಅವಳಿ ಮಕ್ಕಳಾದ ಸಂಪ್ರಿತಾ ಮತ್ತು ಸಂಪ್ರಿತ್ ಪೂಜಾರಿಯವರ 3 ನೇ ವರ್ಷದ ಹುಟ್ಟುಹಬ್ಬವು ಮಾ. 12ರಂದು ನಿಟ್ಟಡೆ ಬೂತೇರು ಮನೆಯಲ್ಲಿ ನಡೆಯಿತು.

Akshatha copyಸುಲ್ಕೇರಿ ಅಕ್ಷತ ನಿವಾಸ ಮುಳ್ಳಗುಡ್ಡೆ ವಸಂತ ಮತ್ತು ಶ್ರೀಮತಿ ವಸಂತಿಯವರ ಪುತ್ರಿ ಅಕ್ಷತಳ 9ನೇ ವರ್ಷದ ಹುಟ್ಟುಹಬ್ಬವನ್ನು ಮಾ.20ರಂದು ಆಚರಿಸಲಾಯಿತು.

sameeksha copyಗೇರುಕಟ್ಟೆ ರೇಶ್ಮರೋಡ್ ಓಡಿಲ್ನಾಳ ಗ್ರಾಮದ ಉಪೇಂದ್ರ ಆಚಾರ್ಯ ಮತ್ತು ಮೀನಾಕ್ಷಿ ದಂಪತಿ ಪುತ್ರಿ ಸಮೀಕ್ಷಾ ಳ 8ನೇ ವರ್ಷದ ಹುಟ್ಟುಹಬ್ಬ ಮಾ. 17ರಂದು ಜರಗಿತು.

Hasthin4 copyವೇಣೂರು ಗ್ರಾಮದ ಮೂಡ್ಲ ಮನೆಯ ಸಂಧ್ಯಾ ಮತ್ತು ನಿತಿನ್ ಎಂ. ಸುವರ್ಣ ದಂಪತಿ ಪುತ್ರ ಹಸ್ತಿನ್. ಎನ್. ಸುವರ್ಣ ಇವರ 2ನೇ ವರ್ಷದ ಹುಟ್ಟುಹಬ್ಬ ಮಾ. 19ರಂದು ಜರುಗಿತು.

Praveen nishchitha copy1ನೆರಿಯ ಗ್ರಾಮದ ಬರೆಮೇಲು ಪೂವಪ್ಪ ಪೂಜಾರಿಯವರ ಪುತ್ರ ಪ್ರವೀಣ್ ಪಿ.ಬಿ.ಯವರ ವಿವಾಹ ನಿಶ್ಚಿತಾರ್ಥವು ಬಂಟ್ವಾಳ ತಾಲೂಕು ಬಡಗ-ಕಜೆಕಾರು ಗ್ರಾಮದ ಅಂಗಡಿದೊಟ್ಟು ಜಯ ಪೂಜಾರಿಯವರ ಪುತ್ರಿ ನಿಶ್ಚಿತ ಸುವರ್ಣ ರೊಂದಿಗೆ ಮಾ. 15ರಂದು ಜರಗಿತು.

Ganesh prameela copyಓಡಿಲ್ನಾಳ ಗ್ರಾಮದ ಉಳತ್ತೋಡಿ ಮನೆ ದಿ| ಮುತ್ತಪ್ಪ ಗೌಡರ ಪುತ್ರ ಗಣೇಶ್  ರವರ ನಿಶ್ಚಿತಾರ್ಥವು ಮಿತ್ತಬಾಗಿಲು ಗ್ರಾಮದ ಸೇನೆರೆಬೆಟ್ಟು ಮನೆ ದಿ! ಪೂವಪ್ಪ ಗೌಡರ ಪುತ್ರಿ ಪ್ರಮೀಳಾ ರವರೊಂದಿಗೆ ಮಾ. 6 ರಂದು ಜರಗಿತು.

ಬಳಂಜ : ಜೀವರಕ್ಷಕ್ ಅಂಬುಲೆನ್ಸ್ ಲೋಕಾರ್ಪಣೆ

ಬಳಂಜ : ಜೀವರಕ್ಷಕ್ ಅಂಬುಲೆನ್ಸ್ ಲೋಕಾರ್ಪಣೆ

Saturday, March 19th, 2016 | Suddi Belthangady | no responses ಬಳಂಜ: ವೀರಕೇಸರಿ ಹಿಂದೂಪುರ ಬಳಂಜ ಇದರ ಆಶ್ರಯದಲ್ಲಿ ಮಾ. ೬ರಂದು ನಡೆದ ಹಿಂದೂ… ಮುಂದೆ ಓದಿ

ಆಂಬ್ಯುಲೆನ್ಸ್‌ಗಳು

ಆಂಬ್ಯುಲೆನ್ಸ್‌ಗಳು

Friday, December 4th, 2015 | Suddi Belthangady | no responses ಮುಂದೆ ಓದಿ

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top