Thu 17 Aug 2017, 12:34AM

ಹೆಚ್ಚಿನ ಸುದ್ದಿಗಳು

LiCಬೆಳ್ತಂಗಡಿ : ವಿಮಾ ಇನ್ಸೂರೆನ್ಸ್ ಕನ್ಸಲ್ಟೆಂಟ್ಸ್ ನೂತನ ಕಛೇರಿ ಇಂದು (ಆ.15) ಬೆಳ್ತಂಗಡಿ ಬಸ್ ಸ್ಟ್ಯಾಂಡ್ ಎದುರುಗಡೆ ಉದ್ಘಾಟನೆಗೊಂಡಿತು.
ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿದರು. ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್‌ನ ಪ್ರಧಾನ ಧರ್ಮಗುರು ಫಾ| ಬೊನವೆಂಚರ್ ನಜ್ರೆತ್ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಎಂ. ನಾರಾಯಣ ರಾವ್, ಬೆಳ್ತಂಗಡಿ ಭಾರತೀಯ ಜೀವವಿಮಾ ನಿಗಮದ ಶಾಖಾಧಿಕಾರಿ ಯೋಗೇಂದ್ರ ಡಿ., ಮಂಗಳೂರು ಸ್ವಾರ್ ಹೆಲ್ತ್ ಆಂಡ್ ಅಲೈಟ್ ಇನ್ಸೂರೆನ್ಸ್ ಕಂಪನಿಯ ಹಿರಿಯ ಶಾಖಾಧಿಕಾರಿ ಗಜಾನನ ಭಟ್, ಬೆಳ್ತಂಗಡಿ ಶಾಖೆ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಆಡಳಿತಾಧಿಕಾರಿ ಶೇಕುಂಞ, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಧರಣೇಂದ್ರ ಕೆ. ಜೈನ್, ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಲ್ಯಾನ್ಸಿ ಎ. ಪಿರೇರಾ, ನ್ಯಾಶನಲ್ ಇನ್ಸೂರೆನ್ಸ್ ಕಂಪನಿಯ ನಿವೃತ್ತ ಶಾಖಾಧಿಕಾರಿ ಶ್ರೀಮತಿ ಸೆಲಿನ್ ನೊರೊನ್ಹಾ ಭಾಗವಹಿಸಿದ್ದರು.
ಬಂದಂತಹ ಅತಿಥಿಗಳನ್ನು ವಿನ್ಸೆಂಟ್ ಟಿ. ಡಿಸೋಜಾ ಸ್ವಾಗತಿಸಿದರು.

indipendce day171ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಪಾಂಗಳದ ಶ್ರೀ ಮಾರಿಗುಡಿ ಬಳಿಯ ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು.
ಧ್ವಜಾರೋಹಣ ಕಾರ್ಯಕ್ರಮವನ್ನು ಮಾರಿಗುಡಿ ಸಮಿತಿಯ ಅಧ್ಯಕ್ಷತುಕರಾಮ ಗೌಡ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಬಾಬುಗೌಡ ಪಾಂಗಳ, ಮೋನಪ್ಪ ಪೂಜಾರಿ ಡಿಡಿಂಬಿ, ಹಾಗೂ ಊರಿನ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.

  Indipendce dayಸವಣಾಲು ಬದ್ರಿಯಾ ಜುಮಾ ಮಸೀದಿ ಮತ್ತು ಹಿಮಾಯತುಲ್ ಇಸ್ಲಾಮ್ ಮದರಸ ಸವಣಾಲು ಇದರ ಅಂಗವಾಗಿ ಮಸೀದಿ ವಠಾರದಲ್ಲಿ 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಊರಿನ ಎಲ್ಲಾ ಧರ್ಮದೊಂದಿಗೆ ಸೌಹಾರ್ದತೆಯೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಲ .ರಘುರಾಮ್ ಗಂಭೀರ, ಶ್ರೀ. ಬಾಲಕೃಷ್ಣ ವಿ ಶೆಟ್ಟಿ ಸಾಲಿಗ್ರಾಮ, ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕ ಮಂಜುನಾಥ್ ಆಡಳಿತ ಮಂಡಳಿ ಅಧ್ಯಕ್ಷ ಡಿ .ರಫೀಕ್, ಮಲ್ಜಾ ಸಾಲಾತ್ ಕಮಿಟಿ ಅಧ್ಯಕ್ಷ ಸಿ ಮ್ ಇಬ್ರಾಹಿಂ , ಹಾಗೂ ಮದ್ರಸ ವಿದ್ಯಾರ್ಥಿಗಳು ಕಮಿಟಿಯ ಎಲ್ಲ ಪದಾಧಿಕಾರಿಗಳು , ಜಮಾಅತಿನ ಎಲ್ಲ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಎಂ .ಜಿ .ತಲ್ಹತ್ ಸವಣಾಲು ಇವರು ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು .

   karunya

karunya1ಕಕ್ಕಿಂಜೆ ಕಾರುಣ್ಯ ಸ್ಕೂಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

  youngಯಂಗ್ ಚಾಲೆಂಜರ್ಸ್ ಮುಂಡಾಜೆ ಇದರ ವತಿಯಿಂದ ಗ್ರಾ.ಪಂ ಮುಂಡಾಜೆ , ಲಯನ್ಸ್ ಕ್ಲಬ್ ಬೆಳ್ತಂಗಡಿ ಸಕಕಾರದೊಂದಿಗೆ ಸ್ವಾತಂತ್ರ ಉತ್ಸವ ಮತ್ತು ಯೋಧರಿಗೆ ನಮನ ಕಾರ್ಯಕ್ರಮ ವನ್ನು ಲ. ಅಶ್ರಫ್ ಆಲಿಕುಂಞಿ ಅವರು ಆಯೋಜಿಸಿದರು.

  belaluಹಿದಾಯತುಲ್ ಇಸ್ಲಾಂ ಮದ್ರಸಾ ಪಳ್ಳಿತ್ತಡ್ಕ, ಬೆಳಾಲು ಇಲ್ಲಿ 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಹ್ಮದುಲ್ ಬದವೀ ಮಸೀದಿಯ ಆವರಣದಲ್ಲಿ ಆಚರಿಸಲಾಯಿತು. ಆಡಳಿತ ಸಮಿತಿಯ ಅದ್ಯಕ್ಷ ,ಉಮರಬ್ಬ ರವರು ಧ್ವಜಾರೋಹಣಗೈದರು ಮದ್ರಸಾ ಅದ್ಯಾಪಕ ಯಾಕೂಬ್ ಗೌಸಿ ದುಆ ನೆರವೇರಿಸಿಕೊಟ್ಟರು
ಸಂಶುದ್ದೀನ್ ಅಶ್ರಫಿ ಸ್ವಾಗತಿಸಿದರು ಮಾಜಿ ಅಧ್ಯಕ್ಷ ಇಬ್ರಾಹಿಂ ವಲಚ್ಚಿಲ್ ಸದಸ್ಯ ಅಬ್ದುರ್ರಹ್ಮಾನ್ ಅಲ್ ಬದ್ರಿಯಾ ಸ್ವಲಾತ್ ಕಮಿಟಿಯ ಅದ್ಯಕ್ಷ ಸಂಶುದ್ದೀನ್ ಕೇರಾರಿ ಉಪಾಧ್ಯಕ್ಷ ಅಝೀಝ್ ಉಪಸ್ಥಿತರಿದ್ದರು.

  anugrahaಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿಯಲ್ಲಿ 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಸ್ಥೆಯ ಅಧ್ಯಕ್ಷ ಮತ್ತು ಕಾಲೇಜಿನ   ಪ್ರಾಂಶುಪಾಲ ಎಂ.ಜಿ. ತಲ್ಹತ್ ಸವಣಾಲು ನಡೆಸಿಕೊಟ್ಟರು.

  sanjaya nagaraಬೆಳ್ತಂಗಡಿ ಸಂಜಯ ನಗರ ನಾಗರಿಕ ಸಮಿತಿ ವತಿಯಿಂದ ವಿಜೃಂಭಣೆಯ ಸ್ವಾತಂತ್ರ್ಯ ದಿನಾಚರಣೆಯು ಸಂಜಯ ನಗರ ಜಂಕ್ಷನ್ ನಲ್ಲಿ ಬಿ.ಎಂ. ಹನೀಪ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು, ನಗರ ಪಂಚಾಯತ್ ಸದಸ್ಯ ಮುಸ್ತಾರ್ ಜಾನ್ ಮೆಹಬೂಬ್ ಧ್ವಜಾರೋಹಣಗೈದರು. ಮುಖ್ಯ ಅತಿಥಿಗಳಾಗಿ ಅಕ್ಬರ್, ಹಾಗೂ ಮೆಹಬೂಬ್ ಸ್ವಾತಂತ್ರ್ಯ ಸಂದೇಶವನ್ನು ನೀಡಿದರು. ನಿಹಾಲ್ ಸ್ವಾಗತಿಸಿ ಶರೀಪ್ ವಂದಿಸಿದರು ಕಾರ್ಯಕ್ರಮ ನಿರೂಪಣೆಯನ್ನು ಬಶೀರ್ ಸಂಜಯ ನಗರ ನೆರವೇರಿಸಿದರು.

bike2

bike

bike1ಬಳ್ಳಮಂಜ : ನ್ಯೂ ಫ್ರೆಂಡ್ಸ್ ಸ್ಪೋರ್ಟ್ ಕ್ಲಬ್ ಬಳ್ಳಮಂಜ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಆ.14 ರಂದು ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಕ್ರೀಡಾಕೂಟಗಳು ನಡೆಯಿತು.

sambrama sanchike

sambrama sanchike1

sambrama sanchike2ಬೆಳ್ತಂಗಡಿ ಹೊಲಿ ರಿಡೀಮರ್ ಚರ್ಚ್ ವಠಾರದಲ್ಲಿ ಇಂದು(ಆ.12) ಚರ್ಚ್ ಪ್ರಧಾನ ಗುರುಗಳಾದ ವಂದನೀಯ ಫಾ| ಬೊನವೆಂಚರ್ ನಜ್ರೆತ್‌ರವರು ಸಂಭ್ರಮ ಸಂಚಿಕೆ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲ.ಧರಣೇಂದ್ರ ಕುಮಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಭ್ರಮ ಸಂಚಿಕೆ ನೇತಾರ ಕೃಷ್ಣ ಆಚಾರ್, ಪ್ರಾಂತ್ಯಾಧ್ಯಕ್ಷ ನಿತ್ಯಾನಂದ ನಾವರ, ಲ| ವಿನ್ಸೆಂಟ್ ಡಿಸೋಜ, ಸತೀಶ ಆಚಾರ್ಯ, ಮೇದಿನಿ ಡಿ ಗೌಡ, ಅಶ್ರಫ್ ಆಲಿಕುಂಞಿ, ಸೆರಾಫಿನ್ ಟೀಚರ್, ರಾಮಕೃಷ್ಣ ಗೌಡ, ಸುಶೀಲಾ ಹೆಗ್ಡೆ, ಅಶೋಕ್ ಕುಮಾರ್ ಬಿ.ಪಿ, ಇವರು ಭಾಗವಹಿಸಿದ್ದರು.

sahithya parishathಬೆಳ್ತಂಗಡಿ : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ಉದ್ಘಾಟನೆ ಮತ್ತು ಸಾಹಿತ್ಯ ಸಮ್ಮೇಳನವು ಆ.20 ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶ್ರೀ ಶಾರದಾ ಮಂಟಪದಲ್ಲಿ ನಡೆಯಲಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಶ್ರೀಧರ ಭಟ್ ಉಜಿರೆ ಇಂದು(ಆ.12) ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಕೆ. ಪ್ರತಾಪಸಿಂಹ ನಾಯಕ್ ಉಜಿರೆ, ಉಪಾಧ್ಯಕ್ಷ ಹರೀಶ್ ಕೊಳ್ತಿಗೆ ಕಲ್ಮಂಜ ಉಪಸ್ಥಿತರಿದ್ದರು.

gurudevaಬೆಳ್ತಂಗಡಿ : ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಆ. 20ರಂದು ಪೂರ್ವಾಹ್ನ 11.00ಕ್ಕೆ ನಡೆಯಲಿದೆ ಎಂದು ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎನ್ ಪದ್ಮನಾಭ ಮಾಣಿಂಜ ಇಂದು(ಆ.12) ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಿರ್ದೇಶಕ ಚಂದ್ರಶೇಖರ್, ವಿಶೇಷ ಅಧಿಕಾರಿ ಎಂ. ಮೋನಪ್ಪ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಉಪಸ್ಥಿತರಿದ್ದರು.

CITU 1

CITU 2

CITUಸಿ.ಐ.ಟಿ.ಯು ವತಿಯಿಂದ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಮಟ್ಟದ ಜಾಥ ಇಂದು(ಆ.12) ಬೆಳ್ತಂಗಡಿಗೆ ಆಗಮಿಸಿ, ತಾಲೂಕು ಪಂಚಾಯತ್ ಎದುರುಗಡೆ ಸಾರ್ವಜನಿಕ ಸಭೆ ನಡೆಯಿತು.

jci1

jci2

jicಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಆಶ್ರಯದಲ್ಲಿ ಜೆಸಿ ಸಪ್ತಾಹದ ಪ್ರಯುಕ್ತ ತಾಲೂಕು ಮಟ್ಟದ ಪುರುಷರ ಡಬಲ್ಸ್ ಶಟ್ಲ್ ಬಾಡ್ಮಿಂಟನ್ ಪಂದ್ಯಾಟ ಇಂದು(ಆ-12) ವಾಣಿ ಕಾಲೇಜು ಹಿಂಭಾಗ ಅನ್ನಪೂರ್ಣ ಮೆಟಲ್ಸ್ ಬೆಳ್ತಂಗಡಿಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಯುವ ಉದ್ಯಮಿ ರಾಘ್ನೇಶ್ ಬೆಳ್ತಂಗಡಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್.ಪಿ. ಕೋಟ್ಯಾನ್ ಬಳಂಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಲಕ್ಷ್ಮೀ ಮಚ್ಚಿನ, ಬೆಳ್ತಂಗಡಿ ನ.ಪಂ ಉಪಾಧ್ಯಕ್ಷ ಜಗದೀಶ್ ಡಿ., ನ.ಪಂ ಸದಸ್ಯ ಸಂತೋಷ್ ಕುಮಾರ್ ಜೈನ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಲಯಾಧಿಕಾರಿ ಚಿದಾನಂದ ಇಡ್ಯ, ವಲಯಾಧಿಕಾರಿ ವಸಂತ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ತುಕರಾಮ್ ಬಿ., ಮೊದಲಾದವರು ಉಪಸ್ಥಿತರಿದ್ದರು.

ಕೇಂದ್ರ ಸರಕಾರದ ಸ್ವಚ್ಛ ಪಾಕ್ಷಿಕ ಯೋಜನೆಯ ನಿರ್ದೇಶನದ ಅನ್ವಯ ಎಸ್.ಡಿ.ಎಮ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಆರಂಭಿಸಿದ್ದ ವಿಶೇಷ ಸ್ವಚ್ಛತಾ ಪಾಕ್ಷಿಕ ಅಭಿಯಾನದ ಭಾಗವಾಗಿ ಆಗಸ್ಟ್ 14ರಂದು ಉಜಿರೆಯಲ್ಲಿ ಬೃಹತ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಎಸ್‌ಡಿಎಂ ಕಾಲೇಜು ಸ್ವಚ್ಛತೆಗೆ ಸಂಬಂಧಿಸಿದಂತೆ ಮಹತ್ವದ ಸಂದೇಶ ಸಾರಲಿದೆ.
ಆ. 1 ರಂದು ಆರಂಭಗೊಂಡಿದ್ದ ಈ ಅಭಿಯಾನ 15ರಂದು ಸಮಾರೋಪಗೊಳ್ಳಲಿದೆ. ಇದಕ್ಕೂ ಮುಂಚೆ ಮುನ್ನಾದಿನ ೧೪ರಂದು ಸ್ವಚ್ಛತೆಯ ಪ್ರಜ್ಞೆಯನ್ನು ಪ್ರಚುರಪಡಿಸುವ ಉದ್ದೇಶದ ಜಾಗೃತಿ ಮೆರವಣಿಗೆ ನಡೆಯಲಿದೆ. ಪದವಿ ಕಾಲೇಜಿನಿಂದ ಚಾರ್ಮಾಡಿ ಮತ್ತು ಬೆಳ್ತಂಗಡಿ ರಸ್ತೆಗಳ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಈ ಮೆರವಣಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ಸ್ವಚ್ಛತೆಯ ಮಹತ್ವದ ಕುರಿತ ಉದ್ಘೋಷಗಳು ಮೊಳಗಲಿವೆ.
ಎಸ್‌ಡಿಎಂ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ 1500ಕ್ಕೂ ಹೆಚ್ಚಿನ ಜನರು ಬೃಹತ್ ರ್‍ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಭಿಯಾನದಡಿ ಎಸ್.ಡಿ.ಎಂ ಪದವಿ ಕಾಲೇಜಿನ ಆವರಣ ಮತ್ತು ಉಜಿರೆಯ ಸುತ್ತಮುತ್ತ ಎನ್‌ಎಸ್‌ಎಸ್ ಸ್ವಯಂಸೇವಕರು ಸ್ವಚ್ಛತೆಯ ಕಾರ್ಯನಿರ್ವಹಿಸಿದ್ದಾರೆ. ಈಗಾಗಲೇ ಉಜಿರೆಯ 318 ಮನೆಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಕಸ ವಿಂಗಡಣೆಯ ಕ್ರಮಗಳ ಬಗ್ಗೆ ಕುಟುಂಬಗಳ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.
ಸ್ವಚ್ಚತೆಯ ಅರಿವು ಮೂಡಿಸುವಲ್ಲಿ ಈ ರ್‍ಯಾಲಿ ಮಹತ್ವದ ಪಾತ್ರ ನಿರ್ವಹಿಸಲಿದ್ದು, ಇದರಲ್ಲಿ ಪಾಲ್ಗೊಂಡು ಸ್ವಚ್ಛತೆಯ ಪ್ರಜ್ಞೆ ಮೂಡಿಸಲು ಬೆಂಬಲಿಸಬೇಕು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Smitha birthdayಲಾಯಿಲ ಗ್ರಾಮದ ಪುತ್ರಬೈಲು ಸಂಕಪ್ಪ ಮತ್ತು ಶಾರದಾ ದಂಪತಿ ಪುತ್ರಿ ಸ್ಮಿತಾಳ 10ನೇ ವರ್ಷದ ಹುಟ್ಟುಹಬ್ಬವನ್ನು ಆ.8ರಂದು ಆಚರಿಸಲಾಯಿತು.

ಧರ್ಮಸ್ಥಳ ಗ್ರಾಮದ ದಿಡಿಂಬಿ ಮನೆ ಗೋಪಾಲಕೃಷ್ಣ ಮತ್ತು ಶ್ರೀಮತಿ ಶೋಭಾ ದಂಪತಿಯ ಪುತ್ರ ಪ್ರೇರಣ್.ಜಿ.ಎಸ್ ನ 6ನೇ ವರ್ಷದ ಹುಟ್ಟುಹಬ್ಬವನ್ನು ಆ.5 ರಂದು ಆಚರಿಸಲಾಯಿತು.

sathvika sಮುಂಡಾಜೆ ಗ್ರಾಮದ ಶ್ರೀಕರ ಆಚಾರ್ಯ ಮತ್ತು ಸಂಧ್ಯಾ ದಂಪತಿ ಪುತ್ರಿ ಸಾತ್ವಿಕಾ ಎಸ್ ಅವರ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಆ. 4 ರಂದು ಆಚರಿಸಲಾಯಿತು.

Nandan A Sಬೆಳ್ತಂಗಡಿ ಹುಣ್ಸೆಕಟ್ಟೆ ಆನಂದ ಗೌಡ ಮತ್ತು ಶ್ರೀಮತಿ ಸುಧಾ ದಂಪತಿಯ ಪುತ್ರ ನಂದನ್ ಎ.ಎಸ್. ಈತನ 6ನೇ ವರ್ಷದ ಹುಟ್ಟುಹಬ್ಬವು ಆ.6ರಂದು ಆಚರಿಸಲಾಯಿತು.

abdul saleemಉಜಿರೆ ಮಲ್‌ಜಅ ದಅವಾ ಏಂಡ್ ರಿಲೀಫ್ ಸೆಂಟರ್ ಕಾಶಿಬೆಟ್ಟು ಇಲ್ಲಿನ ಜನರಲ್ ಮೆನೇಜರ್, ಪುಂಜಾಲಕಟ್ಟೆ ಬೆರ್ಕಳ ನಿವಾಸಿ ಮುಹಮ್ಮದ್ ಶರೀಫ್ ಅವರ ಸಹೋದರಿ ಜಮೀಲಾ ಫರ್ಝಾನಾ ಅವರ ವಿವಾಹವು ಕೆಸಿಎಫ್ ಮುಸಫ್ಫರ್ ಸೆಕ್ಟರ್ ಅಬ್ದುಲ್ ಸಲೀಂ ಕಾವಳಕಟ್ಟೆ ಅವರ ಜೊತೆ ಜು. 30 ರಂದು ಗುರುವಾಯನಕೆರೆ ಮಸ್ಜಿದ್ ಹಾಲ್‌ನಲ್ಲಿ ಜರುಗಿತು.

shareef berkalaಉಜಿರೆ ಮಲ್‌ಜಅ ದಅವಾ ಏಂಡ್ ರಿಲೀಫ್ ಸೆಂಟರ್ ಕಾಶಿಬೆಟ್ಟು ಇಲ್ಲಿನ ಜನರಲ್ ಮೆನೇಜರ್, ಪುಂಜಾಲಕಟ್ಟೆ ಬೆರ್ಕಳ ನಿವಾಸಿ, ಎಸ್ಸೆಸ್ಸೆಫ್ ಡಿವಿಷನ್ ಮಾಜಿ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಅವರ ವಿವಾಹವು ಗೇರುಕಟ್ಟೆ ಪರಪ್ಪು ಅಬ್ದುಲ್ ಹಕೀಂ ಅವರ ಪುತ್ರಿ ಸಂಶಾದ್ ಎ ಅವರ ಜೊತೆ ಜು. 30 ರಂದು ಗುರುವಾಯನಕೆರೆ ಮಸ್ಜಿದ್ ಹಾಲ್‌ನಲ್ಲಿ ಜರುಗಿತು. ಸಯ್ಯಿದ್ ಮಲ್‌ಜಅ ತಂಙಳ್ ನಿಖಾಹ್ ನೆರವೇರಿಸಿದರು.

mahesh-varsha newsಉಜಿರೆ ಭಾರತ್ ಅಯರ್‍ನ್ ವರ್ಕ್ಸ್ ಮಾಲಕ ಬಿ.ಪಾಂಡುರಂಗ ಬಾಳಿಗಾ ಮತ್ತು ಶ್ರೀಮತಿ ದೀಪಾ ದಂಪತಿ ಪುತ್ರ ಮಹೇಶ್‌ರವರ ವಿವಾಹ ಬಂಟ್ವಾಳ ಆರ್ಲ ದಾಮೋದರ ಪ್ರಭು ಮತ್ತು ಶ್ರೀಮತಿ ಅನಿತಾರವರ ಪುತ್ರಿ ವರ್ಷಾ ರೊಂದಿಗೆ  ಆ.6 ರಂದು ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ಕಲ್ಯಾಣ ಮಂಟಪ ದಲ್ಲಿ ಜರಗಿತು. ಆ.9 ರಂದು ಉಜಿರೆ ಶ್ರೀ ರಾಮ ಭಜನಾ ಮಂದಿರದ ಸೀತಾರಾಮ ಕಲಾ ಮಂದಿರದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಔತಣ ಕೂಟ ನಡೆಯಿತು.

sdpi copyಉತ್ತರ ಕರ್ನಾಟಕದ ಪ್ರವಾಸದಲ್ಲಿರುವ ಎಸ್.ಡಿ.ಪಿ.ಐ ರಾಜ್ಯ ನಾಯಕರುಗಳು ನಿಯೋಗ ಆ.10ರಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಖಮರುಲ್ ಇಸ್ಲಾಂರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಪ್ರಸಕ್ತ ರಾಜಕಾರಣದ ಬಗ್ಗೆ ಹಾಗೂ ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಅಕ್ರಂ ಹಸನ್, ಆಲ್ಫೊನ್ಸೊ ಫ್ರಾಂಕೋ, ಅಪ್ಸರ್ ಕೊಡ್ಲಿಪೇಟೆ ಹಾಗೂ ಜಿಲ್ಲಾ ಸಮಿತಿ ಸದಸ್ಯ ಅಲೀಮ್ ಇಲಾಹಿ ನಿಯೋಗದಲ್ಲಿದ್ದರು.

Madanthyar atidonji dinaಮಡಂತ್ಯಾರು : ಮಹಿಳಾ ಮಂಡಲದ ಶಿಶುವಿಹಾರದಲ್ಲಿ ಆ. 2 ರಂದು ಆಟಿಡೊಂಜಿ ದಿನ ಕಾರ್ಯಕ್ರಮವು ನಡೆಯಿತು. ಉದ್ಘಾಟನೆಯನ್ನು ಮಹಿಳಾ ಮಂಡಲದ ಹಿರಿಯ ಸದಸ್ಯೆ ಶ್ರೀಮತಿ ಗುಲಾಬಿ ಟೀಚರ್ ನೆರವೇರಿಸಿ ಆಷಾಡದ ಮಹತ್ವವನ್ನು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಮಡಂತ್ಯಾರು ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ಜಯಂತಿ, ಹಾರಬ್ಬೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಉಪಾಧ್ಯಕ್ಷೆ ಶ್ರೀಮತಿ ಲೂಸಿ ಕಾರ್‍ಲ, ಕೋಶಾಧಿಕಾರಿ ಶ್ರೀಮತಿ ಸವಿತಾ, ಸದಸ್ಯರಾದ ಮಾಲಿನಿ, ಶ್ರೀದೇವಿ, ಸಂಗೀತಾ, ಭಾರತಿ, ಬೆನಡಿಕ್ಟ, ಎಪ್ರೋಸಿನ್, ಪ್ರಮೀಳಾ ಜೈನ್, ಜೂಲಿಯೆಟ್, ಐರಿನ್, ಆಶಾ, ಚಂದ್ರಕಲಾ, ಶೋಭಾ, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಹೆತ್ತವರು ಪಾಲ್ಗೊಂಡಿದ್ದರು ಹಾಗೂ ಹೆತ್ತವರ ಸಭೆಯನ್ನು ನೆರವೇರಿಸಲಾಯಿತು. ಆಟಿಯ ವಿಶೇಷ ತಿಂಡಿ ತಿನಿಸುಗಳಿದ್ದವು. ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಪ್ರಫುಲ್ಲಾ ಸ್ವಾಗತಿಸಿ, ಸವಿತಾ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಶ್ರೀಮತಿ ರೋಹಿಣಿ ವರದಿ ವಾಚಿಸಿ ಧನ್ಯವಾದವಿತ್ತರು.

Bc road

Bc road1ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳ ಬಿಸಿಯೂಟದ ಅನುದಾನವನ್ನು ಕಡಿತಗೊಳಿಸಿದ ರಾಜ್ಯಸರಕಾರದ ಧೋರಣೆಯನ್ನು ಖಂಡಿಸಿ ಬಿ.ಸಿ ರೋಡಿನ ತಾಲೂಕು ಕಚೇರಿ ಮುಂಭಾಗದಲ್ಲಿ  ಬೃಹತ್ ಪ್ರತಿಭಟನೆ ನಡೆಯಿತು.

rastra dhvaja tharabhethiಮುಂಡಾಜೆ: ಯಂಗ್ ಚಾಲೆಂಜರ್‍ಸ್ ಕ್ರೀಡಾ ಸಂಘ (ರಿ.) ಮುಂಡಾಜೆ ಇದರ ವತಿಯಿಂದ ಮುಂಡಾಜೆ ಪ.ಪೂ. ಕಾಲೇಜು ಮುಂಡಾಜೆ, ಎನ್.ಎಸ್.ಎಸ್. ಘಟಕ ಮುಂಡಾಜೆ, ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಬೆಳ್ತಂಗಡಿ ಮತ್ತು ಅಂತಾರಾಷ್ಟ್ರೀಯ ರೋಟರಿ ಕ್ಲಬ್ ಬೆಳ್ತಂಗಡಿ, ಮಸ್‌ಲಕ್ ದಶಮಾನೋತ್ಸವ ಕಾರ್ಯಕ್ರಮಗಳ ಸಮಿತಿ ಇವರ ಸಹಕಾರದೊಂದಿಗೆ ಆ. 4 ರಂದು ಮುಂಡಾಜೆಯ ಕೀರ್ತಿಶೇಷ ಜಿ.ಎನ್. ಭಿಡೆ ಜನ್ಮಶತಮಾನೋತ್ಸವ ಸಭಾಂಗಣದಲ್ಲಿ ರಾಷ್ಟ್ರ ಧ್ವಜ ಮತ್ತು ರಾಷ್ಟ್ರ ಗೀತೆ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು.
ಭಾರತ್ ಸೇವಾದಲದ ರಾಜ್ಯ ತರಬೇತುದಾರ ಅಲ್ಫೋನ್ಸ್ ಪ್ರಾಂಕೋ, ಯೋಗ ಗುರು ಮತ್ತು ಭಾರತ್ ಸೇವಾದಲದ ಉಡುಪಿ ಜಿಲ್ಲಾ ಸಂಘಟಕ ಮಹೇಶ್ ಎನ್. ಪತ್ತರ್ ಸಂಪನ್ಮೂಲ ವ್ಯಕ್ತಿಗಳಾಗಿದ್ದು ತರಬೇತಿ ನಡೆಸಿಕೊಟ್ಟರು. ರಾಷ್ಟ್ರ ಧ್ವಜದ ವಿನ್ಯಾಸ, ವರ್ಣಗಳು, ರಾಷ್ಟ್ರ ಧ್ವಜದ ಕಲ್ಪನೆಗಳು, ಹುಟ್ಟಿಬಂದ ರೀತಿ, ಬದಲಾವಣೆಗಳು ಆಗಿರುವ ಪರಿ, ಅದನ್ನು ಬಳಸುವ ವಿಧಾನ, ಇಳಿಸುವ ಮತ್ತು ಏರಿಸುವ ರೀತಿ, ಧ್ವಜವನ್ನು ಕಟ್ಟುವ ಬಗೆ, ಗೌರವ ನೀಡಬೇಕಾದ ಅಂಶಗಳು, ರಾಷ್ಟ್ರ ಗೀತೆ ಹಾಡುವ ಕ್ರಮ, ಧ್ವನಿಯ ಏರಿಳಿತಗಳು, ಹಾಡಬೇಕಾದ ಸೆಕೆಂಡುಗಳು ಇತ್ಯಾದಿಯಾಗಿ ಪ್ರಾತ್ಯಕ್ಷಿಕೆ ಮತ್ತು ಚಿತ್ರಗಳ ಪ್ರದರ್ಶನದ ಮೂಲಕ ಮನಮುಟ್ಟುವಂತೆ ತರಬೇತಿಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಜ್ವಾಲಿ ಡಿಸೋಜಾ ನೆರವೇರಿಸಿದರು. ಅಧ್ಯಕ್ಷತೆಯನ್ನು ಯಂಗ್ ಚಾಲೆಂಜರ್‍ಸ್ ಕ್ರೀಡಾ ಸಂಘದ ಅಧ್ಯಕ್ಷ ಲ| ಅಶ್ರಫ್ ಆಲಿಕುಂಞಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ರೋಟರಿ ಕ್ಲಬ್ ಅಧ್ಯಕ್ಷ ರೊ. ಡಾ. ಸುಧೀರ್ ಪ್ರಭು, ಗ್ರಾ.ಪಂ. ಮುಂಡಾಜೆ ಅಧ್ಯಕ್ಷೆ ಶಾಲಿನಿ ವಿಜಯ ಕುಮಾರ್, ಮಸ್‌ಲಕ್ ಕಾರ್ಯದರ್ಶಿ ಶಬೀರ್ ಬಿ.ಕೆ.ಎಚ್, ಯಂಗ್ ಚಾಲೆಂಜರ್‍ಸ್ ಸಂಚಾಲಕ ಲ| ನಾಮದೇವ ರಾವ್, ಗ್ರಾ.ಪಂ. ಸದಸ್ಯರಾದ ನಾರಾಯಣ ಗೌಡ, ಸುಮನಾ ಗೋಖಲೆ, ಅಶ್ವಿನಿ ಹೆಬ್ಬಾರ್, ಸುರೇಶ್ ಹೆಗ್ಡೆ, ಯಂಗ್ ಚಾಲೆಂಜರ್‍ಸ್ ಪದಾಧಿಕಾರಿಗಳಾದ ರಂಜಿನಿ, ವಿಜಯ ಕುಮಾರ್, ರೊ. ಬಾಬು ಪೂಜಾರಿ ಕೂಳೂರು, ಅಬ್ದುಲ್ ಮಜೀದ್, ಇವರುಗಳು ಭಾಗಿಯಾಗಿದ್ದರು. ಉಪನ್ಯಾಸಕ ಪುರುಷೋತ್ತಮ ಶೆಟ್ಟಿ ಅಗರಿ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ಉಪನ್ಯಾಸಕಿ ವಸಂತಿ ಧನ್ಯವಾದವಿತ್ತರು. ಉಪನ್ಯಾಸಕ ವೃಂದ ಮತ್ತು ಸಮೂಹ ಸಂಘಟನೆಗಳು ಸಹಕಾರ ನೀಡಿದರು.

belthangadu mahila mandala atidonji dinaಬೆಳ್ತಂಗಡಿ: ಆಟಿದ ಕೂಟ ಕಾರ್ಯಕ್ರಮಗಳಿಂದ ಹಳೆಯ ಪದ್ಧತಿಯ ಆಟ, ಊಟೋಪಚಾರಗಳು ನೆನಪಿಗೆ ಬರುತ್ತದೆ. ನಶಿಸುತ್ತಿರುವ ತುಳುನಾಡ ಪರಂಪರೆಯ ಆಚರಣೆಯ ಮಹತ್ವವನ್ನು ನಮ್ಮ ಪೀಳಿಗೆಗೆ ತಿಳಿಯಪಡಿಸಬೇಕಿದೆ ಎಂದು ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅಭಿಪ್ರಾಯಪಟ್ಟರು.
ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 17ನೇ ವರ್ಷದ ಆಟಿದ ಕೂಟ ಕಾರ್ಯಕ್ರಮವನ್ನು ಚೆನ್ನೆಮಣೆ ಆಡುವ ಮೂಲಕ ಆ.8 ರಂದು ಒಕ್ಕೂಟದ ಸಭಾಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸರಸ್ವತಿ ಅವರು ಮಾತನಾಡಿ, ಸಮಾಜ ಇಷ್ಟು ಮುಂದುವರಿದರೂ ಈಗಲೂ ಮಹಿಳೆಯರ ಮೇಲಿನ ದೌರ್ಜನ್ಯ ಜೀವಂತವಾಗಿದೆ. ಅದನ್ನು ತಡೆಯಲು ಮಹಿಳೆಯರು ಸಂಘಟಿತರಾಗಿ ಸ್ತ್ರೀ ಶಕ್ತಿ ಏನೆಂದು ತೋರಿಸಬೇಕಾಗಿದೆ. ಆಟಿ ಆಚರಣೆ ಕೇವಲ ಮೂಢನಂಬಿಕೆಯಲ್ಲ, ವೈಜ್ಞಾನಿಕವಾಗಿ ಅದರಲ್ಲಿ ಆರೋಗ್ಯದ ಸೂತ್ರ ಅಡಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಸುದ್ದಿ ಪತ್ರಿಕೆ ವ್ಯವಸ್ಥಾಪಕ ಮಂಜುನಾಥ ರೈ ಮಾತನಾಡಿ, ನಮ್ಮ ಆಹಾರ ಪದ್ಧತಿ ನಮಗೆ 40 ವರ್ಷ ಪ್ರಾಯದಲ್ಲೇ ಮಧುಮೇಹ, ರಕ್ತದೊತ್ತಡದಂತಹಾ ಕಾಯಿಲೆಗಳನ್ನು ತಂದೊಡ್ಡುತ್ತಿದೆ, ವಿಷಕಾರಿ ಆಹಾರ ಸೇವನೆಯೇ ಇದಕ್ಕೆಲ್ಲಾ ಕಾರಣ, ನಮ್ಮ ಆಹಾರ ಶೈಲಿಯನ್ನು ಬದಲಾಯಿಸಿ ಪ್ರಕೃತಿದತ್ತವಾದ ಅಹಾರಕ್ಕೆ ಮನಸ್ಸು ಮಾಡಬೇಕಾಗಿದೆ. ಕಡಿರುದ್ಯಾವರದಂತಹಾ ಕುಗ್ರಾಮದಿಂದ ಪ್ರತಿದಿನ ಬೆಳ್ತಂಗಡಿಗೆ ಬಂದು ಈ ಮಹಿಳಾ ಒಕ್ಕೂಟವನ್ನು ಸಂಘಟಿಸುತ್ತಿರುವ ಲೋಕೇಶ್ವರಿ ವಿನಯಚಂದ್ರ ಮತ್ತು ಅವರ ಬಳಗ ಅಭಿನಂದನೆಗೆ ಅರ್ಹರು ಎಂದರು.
ಇನ್ನೋರ್ವ ಅತಿಥಿಯಾಗಿದ್ದ ತಾ.ಪಂ. ಸಂಯೋಜಕ ಜಯಾನಂದ ಲಾಲ ಮಾತನಾಡಿ, ಆಟಿ ಆಚರಣೆ ಮತ್ತು ತಾಲೂಕಿನಲ್ಲಿ ಸ್ತ್ರೀಶಕ್ತಿ ಸಂಘಟನೆಗಳು ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ಸಭೆಗೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಲೋಕೇಶ್ವರೀ ವಿನಯಚಂದ್ರ ಒಕ್ಕೂಟ ಬೆಳೆದುಬಂದ ರೀತಿ ವಿವರಿಸಿದರು. ಒಕ್ಕೂಟದ ಕಾರ್ಯದರ್ಶಿ ಶಾಂತಾ ಜೆ. ಬಂಗೇರ ಸ್ವಾಗತಿಸಿದರು. ಸವಿತಾ ಜಯ ದೇವ್ ವಂದಿಸಿದರು. ಆರತಿ ಹೆಬ್ಬಾರ್ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಉಷಾ ಲಕ್ಷ್ಮಣ ಗೌಡ ಪ್ರಸ್ತಾವನೆಗೈದರು. ಒಕ್ಕೂಟದ ಸದಸ್ಯೆಯರು ತಯಾರಿಸಿ ತಂದ ಸುಮಾರು 39 ಬಗೆಯ ವಿವಿದ ತಿಂಡಿ ತಿನಿಸುಗಳನ್ನು ಎಲ್ಲರೂ ಸವಿದರು.

good future school atidonji koota1ಪಿಲ್ಯ : ಗುಡ್‌ಪ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ಗಮ್ಮತ್‌ದ ಕೂಟ ಕಾರ್‍ಯಕ್ರಮವು ಆ. 5ರಂದು ಜರುಗಿತು.
ಕಾರ್ಯಕ್ರಮವನ್ನು ಪಿಲ್ಯದ ನಾಟಿ ವೈದ್ಯ ಬೇಬಿ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಆಟಿ ತಿಂಗಳ ಹಿಂದಿನ ಗತ ವರ್ಷಗಳ ವಿಶೇಷತೆ ಹಾಗೂ ನೆನಪುಗಳನ್ನು ಮರುಕಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕ ನಸೀರ್ ಅಹಮ್ಮದ್ ಖಾನ್ ಮಾತನಾಡಿ ತುಳುನಾಡ ಸಂಸ್ಕೃತಿ ಪರಂಪರೆ ಇತಿಹಾಸವನ್ನು ಈ ಮೂಲಕವಾಗಿ ಉಳಿಸಿ ಬೆಳೆಸಿ ಯುವ ಪೀಳಿಗೆಗೆ ತಿಳಿಯಪಡಿಸಿ, ಜೀವಂತವಾಗಿಡಬೇಕು ಎಂದು ಉದ್ದೇಶದಿಂದ, ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ನಾಟಿ ವೈದ್ಯ ಬೇಬಿ ಪೂಜಾರಿ ಮತ್ತು ರಾಜ್ಯ ಪ್ರಶಸ್ತಿ ವಿಜೇತೆ ಶ್ರೀಮತಿ ಕರ್ಗಿ ಶೆಟ್ಟಿ ಅಳದಂಗಡಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಶ್ರೀಮತಿ ಕರ್ಗಿ ಶೆಟ್ಟಿ ಪಾಡ್ದಾನ ಹಾಡಿ ರಂಜಿಸಿದರು. ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಮಾರ್ ಮಿತ್ತಮಾರು ಮಾತನಾಡಿ ಆಟಿಯ ತಿಂಗಳ ವಿಶೇಷತೆಯನ್ನು, ಮಹತ್ವವನ್ನು ಯುವ ಪೀಳಿಗೆಗೆ ತೋರಿಸುವ ಒಳ್ಳೆಯ ಕೆಲಸವನ್ನು ಶ್ಲಾಘಿಸಿದರು. ಪ್ರಗತಿಪರ ಕೃಷಿಕ ವಿಶ್ವನಾಥ ಕುದ್ಯಾಡಿಯವರು ಸಂದರ್ಭೊಚಿತವಾಗಿ ಮಾತನಾಡಿ ಸಂಚಾಲಕ ತೀರ್ಥರೂಪರಾದ ಅನ್ವರ್ ಖಾನ್ ಸಾಹೇಬರ ನೆನಪು ಮಾಡಿ ಅವರು ಒಬ್ಬ ಒಳ್ಳೆಯ ಸಚ್ಚಾರಿತ್ರ್ಯವುಳ್ಳ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು. ಅವರ ಹೆಸರಿನಲ್ಲಿ ಈ ಸಂಸ್ಥೆಯು ಉತ್ತಮ ರೀತಿಯಲ್ಲಿ ಬೆಳೆಯಲಿ ಎಂದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಾಜಿಕುರಿಯನ್ ಶುಭಹಾರೈಸಿದರು. ವೇದಿಕೆಯಲ್ಲಿ ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯ ರವಿ ಕೋಟ್ಯಾನ್, ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ನಿವೃತ್ತ ಕಾರ್ಯ ನಿರ್ವಾಹಣಾಧಿಕಾರಿ ಸುರೇಶ್ ಜೈನ್ ಪೆರಡಾಳು, ಮೊಹಮ್ಮದ್ ಆರೀಫ್ ಉಪಸ್ಥಿತರಿದ್ದರು. ಶಿಕ್ಷಕ ರಕ್ಷಕ ಸಂಘದ ಹರಿಣಾಕ್ಷಿ ಲತೀಶ್, ರಸಿಕ ಜೈನ್, ಶುಭ ವಿಥಲ ಕೋಟ್ಯಾನ್, ರೇಖಾ ವಸಂತ್, ಶಿಕ್ಷಕಿಯರಾದ ಶ್ರೀಮತಿ ವಜ್ರೇಶ್ವರಿ, ಶ್ರೀಮತಿ ಶ್ರೀದೇವಿ, ಶ್ರೀಮತಿ ಸೌಮ್ಯ, ಶ್ರೀಮತಿ ಅಕ್ಷಯ, ಶ್ರೀಮತಿ ಶರ್ವಾಣಿ ಶ್ರೀಮತಿ ಪವಿತ್ರ, ಕುಮಾರಿ ನಿಶ್ಮಿತ, ದೈಹಿಕ ಶಿಕ್ಷಕ ಹರ್ಷ ಸಹಕರಿಸಿದರು. ಲಯನ್ ವಿಜಯ ಕುಮಾರ್ ಜೈನ್ ಪ್ರಸ್ತಾವಿಸಿ, ಮುಖ್ಯ ಶಿಕ್ಷಕಿ ಶ್ರೀಮತಿ ನಿರ್ಮಲಾ ನಿರೂಪಿಸಿ, ಶಿಕ್ಷಕಿ ವಿಶಾಲಾಕ್ಷಿ ಸ್ವಾಗತಿಸಿ ವಂದಿಸಿದರು.

Prathibatane1

Prathibataneಬೆಳ್ತಂಗಡಿ : ದ.ಕ ಜಿಲ್ಲಾಧಿಕಾರಿ ಡಾ.ಕೆ.ಜಿ ಜಗದೀಶ್ ಆ.10 ರಂದು ಬೆಳ್ತಂಗಡಿ ತಾಲೂಕಿಗೆ ಅಧಿಕೃತ ಭೇಟಿ ನೀಡುವ ಅಧಿಕೃತ ಕಾರ್ಯಕ್ರಮವನ್ನು ದಲಿತ ಸಂಘಟನೆಗಳ ಪ್ರತಿಭಟನೆ ಹಿನ್ನಲೆಯಲ್ಲಿ ಹಠಾತ್ ರದ್ದುಗೊಳಿಸಲಾಯಿತು.
ಪ್ರತಿಭಟನೆ ಹಿನ್ನೆಲೆಯಲ್ಲಿ ತಾಲೂಕಿನ ನೂರಾರು ದಲಿತ ಕಾರ್ಯಕರ್ತರು ಬೆಳ್ತಂಗಡಿಗೆ ಆಗಮಿಸಿದರು, ಬಳಿಕ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸಭೆ ಸೇರಿ ನಂತರ ಜಿಲ್ಲಾಧಿಕಾರಿ ವರ್ಗಾವಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ತಾಲೂಕು ತಹಶಿಲ್ದಾರರ ಮೂಲಕ ಮುಖ್ಯಮಂತ್ರಿ, ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮನ್ವಯ ಸಮಿತಿಯ ಕಾರ್ಯದರ್ಶಿ ಬಿ.ಕೆ ವಸಂತ್ , ದ.ಸಂ.ಸ (ಅಂಬೇಡ್ಕರ್ ವಾದ) ತಾ.ಸಂಚಾಲಕ ವೆಂಕಣ್ಣ ಕೊಯ್ಯೂರು, ಸಂ ಸಂಚಾಲಕ ನೇಮಿರಾಜ್ ಕಿಲ್ಲೂರು, ನಾರಾಯಣ ಪುದುವೆಟ್ಟು, ಜಯಾನಂದ ಕೊಯ್ಯೂರು, ದಲಿತ ದೌರ್ಜನ್ಯ ತಡೆ ಕಾಯ್ದೆ ಸಮಿತಿ ಸದಸ್ಯ ಸಂಜೀವ ಎನ್.ಸಿ, ದ.ಸಂ.ಸ ಸಮಿತಿ ಸದಸ್ಯರಾದ ನಾಗರಾಜ್ ಎಸ್ ಲಾಯಿಲ, ಸುಂದರ ಎಸ್.ಎಂ.ಟಿ, ಆನಂದ ನೆಲ್ಲಿಂಗೇರಿ, ಕೂಸ ಅಳದಂಗಡಿ, ಸೇಸಪ್ಪ ನಲಿಕೆ, ಶಂಕರ್ ಮಾಲಾಡಿ, ಪ್ರಮೋದ್ ಕೆಲ್ಲಕೆರೆ, ಶ್ರೀನಿವಾಸ್ ಉಜಿರೆ, ಹರೀಶ್ ಎಲ್ ಲಾಯಿಲ, ಶ್ರೀಧರ್ ಪಡ್ಲಾಡಿ ಮೊದಲಾದವರು ಉಪಸ್ಥಿತರಿದ್ದರು.

suddi COLORpdf BLDY.p65ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ದ.ಕ – ಉಡುಪಿ ಜಿಲ್ಲೆ ಇದರ ಬೆಳ್ತಂಗಡಿ ವಲಯದ ನೂತನ ಗೌರವಾಧ್ಯಕ್ಷರಾಗಿ ಸುಂದರ್ ಕೆ. ಬೆಳ್ತಂಗಡಿ, ಅಧ್ಯಕ್ಷರಾಗಿ ಕಿರಣ್ ಕುಮಾರ್ ಅಳದಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ರವಿ ನಾರಾವಿ, ಉಪಾಧ್ಯಕ್ಷರಾಗಿ ದಾಮೋದರ (ದಾಮು) ಗುರುವಾಯನಕೆರೆ ಮತ್ತು ಅರುಣ್ ಪಾಸ್, ಕೋಶಾಧಿಕಾರಿಯಾಗಿ ಮಹಾವೀರ್, ಜೊತೆ ಕಾರ್ಯದರ್ಶಿಯಾಗಿ ಗಂಗಾಧರ ಉಜಿರೆ, ಕ್ರೀಡಾ ಕಾರ್ಯದರ್ಶಿಯಾಗಿ ವಿದ್ಯಾ ಕುಮಾರ್ ಪೆರಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಹರೀಶ ಕುಮಾರ್(ಹರ್ಷ) ಬಳ್ಳಮಂಜ, ಪತ್ರಿಕಾ ಪ್ರತಿನಿಧಿಯಾಗಿ ಉಮೇಶ ಮದ್ದಡ್ಕ ಆಯ್ಕೆಯಾಗಿದ್ದಾರೆ. ಉಳಿದಂತೆ ಗೌರವ ಸಲಹೆಗಾರರಾಗಿ ಪಾಲಾಕ್ಷ ಪಿ.ಸುವರ್ಣ, ಜಗದೀಶ್ ಜೈನ್, ಗೋಪಾಲ ಎನ್.ಎ., ವಿಲ್ಸನ್ ಗೋನ್ಸಾಲ್ವಿಸ್, ಸುಬ್ರಹ್ಮಣ್ಯ ಕೆ.ಜಿ., ಉಮೇಶ್ ಉಜಿರೆ, ಕೆ.ವಿ. ಶರ್ಮಾ ಉಜಿರೆ, ನಂದ ಕುಮಾರ್ ಉಜಿರೆ, ಮೌರಿಸ್ ಫೆರ್ನಾಂಡಿಸ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರವೀಣ್ ಕೆದ್ದು, ಗಣೇಶ್ ನರ್ಮದಾ ವೇಣೂರು, ಧನಂಜಯ್ ಕೊಲ್ಪೆದಬೈಲ್, ಸಿಲ್ವಿಯಾ ಬೆಳ್ತಂಗಡಿ, ಹರೀಶ್ ಚೇತನಾ ಉಜಿರೆ, ಕೆ.ಜೆ. ಬೋನಿ ಕಕ್ಕಿಂಜೆ, ಸಂದೇಶ ನಿಡ್ಲೆ, ಮಾಜಿ ಉಪಾಧ್ಯಕ್ಷರುಗಳು, ಮಾಜಿ ಕಾರ್ಯದರ್ಶಿಗಳು ಮತ್ತು ಮಾಜಿ ಕೋಶಾಧಿಕಾರಿಗಳು ಆಯ್ಕೆಯಾದರು.

billava sanga varamahalashmi poojeಬೆಳ್ತಂಗಡಿ: ದಿನವೂ ಪೂಜೆ ಮಾಡಿದರೆ ಸಾಲುವುದಿಲ್ಲ, ಅದರ ಜೊತೆಗೆ ಸಮಯೋಜಿತ ಕೆಲಸ ಮಾಡಿದಾಗ ಮಾತ್ರ ಲಕ್ಷ್ಮೀಯ ಕೃಪಾಕಟಾಕ್ಷ ವಾಗುತ್ತದೆ. ಎಂದು ಬೆಳ್ತಂಗಡಿ ಸ.ಪ್ರ.ದ ಕಾಲೇಜಿನ ಅರ್ಥಶಾಸ್ತ ಉಪನ್ಯಾಸಕಿ ಶ್ರೀಮತಿ ಸುವರ್ಣ ಕುಮಾರಿ ಹೇಳಿದರು
ಇವರು ಅ.8ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವದಲ್ಲಿ ನಡೆದ ಬೆಳ್ತಂಗಡಿ ಶ್ರೀ ಗು.ನಾ.ಸ್ವಾ.ಸೇ.ಸಂಘ, ಬಿಲ್ಲವ ಮಹಿಳಾ ವೇದಿಕೆ ಮತ್ತು ಯುವ ಬಿಲ್ಲವ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವರಮಹಾಲಕ್ಷ್ಮೀ ಪೂಜೆಯ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ವರಮಹಾಲಕ್ಷೀ ವರಗಳನ್ನು ನೀಡುವವಳು. ವೃತಾಚರಣೆಯ ಮೂಲಕ ಆಕೆಯನ್ನು ಒಲಿಸಿಕೊಳ್ಳ ಬೇಕು. ಈ ಕಲಿಯುಗದಲ್ಲಿ ನಾವು ನಮ್ಮ ವೃತ್ತಿಯನ್ನೇ ಲಕ್ಷ್ಮೀ ಎಂದೇ ಭಾವಿಸಬೇಕು. ರೈತ ಭೂಮಿಯಲ್ಲಿ, ವ್ಯಾಪಾರಿ ಅವನ ವ್ಯಾಪಾರದಲ್ಲಿ ಲಕ್ಷ್ಮೀಯನ್ನು ಕಾಣಬೇಕು ಎಂದರು.
ಮಹಿಳಾ ಬಿಲ್ಲವ ವೇದಿಕೆಯ ಸ್ಥಾಪಕಾಧ್ಯಕ್ಷೆ ಸುಜಿತಾ ವಿ. ಬಂಗೇರ ಮಾತನಾಡಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ವೃತಧಾರಿಗಳನ್ನು ನೋಡಿ ಖುಷಿಯಾಗುತ್ತಿದೆ. ನಾವು ನಮ್ಮ ಆಚರಣೆಯನ್ನು ಮರೆಯದೆ ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಶ್ರೀ.ಗು.ನಾ.ಸ್ವಾ.ಸೇ ಸಂಘದ ಅಧ್ಯಕ್ಷ ಭಗೀರಥ ಜಿ. ಸಭೆಯನ್ನು ಉದ್ದೇಶಿಸಿ ಮಾತನಾಡಿ, ಇದು ಕೇವಲ ಆಚರಣೆಯಾಗಿರದೆ ಅದರ ಮಹತ್ವ ಎಲ್ಲರಿಗೂ ತಿಳಿಯುವಂತಾಗಬೇಕು, ಆಗ ಮಾತ್ರ ಅದನ್ನು ಮುಂದಿನ ಪೀಳಿಗೆಯವರು ಅನುಸರಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವಾಧ್ಯಕ್ಷೆ ವಿನೋದಿನಿ ರಾಮಪ್ಪ, ಯುವಬಿಲ್ಲವ ವೇದಿಕೆ ಅಧ್ಯಕ್ಷ ಚಿದಾನಂದ ಇಡ್ಯ ಉಪಸ್ಥಿತರಿದ್ದರು. ರಘುನಾಥ ಶಾಂತಿ ಬಳಗದವರಿಂದ ನಡೆದ ಪೂಜಾ ಕಾರ್ಯಕ್ರಮದಲ್ಲಿ ೧೪೬ ಮಹಿಳೆಯರು ವ್ರತಧಾರಿಗಳಾಗಿದ್ದರು. ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ತನುಜಾ ಶೇಖರ್ ಸ್ವಾಗತಿಸಿ, ಕಾರ್ಯದರ್ಶಿ ರಾಜಶ್ರೀ ರಮಣ್ ವಂದಿಸಿ, ಸುಧಾಮಣಿ ರಮಾನಂದ್ ಕಾರ್ಯಕ್ರಮ ನಿರೂಪಿಸಿದರು.

venur munishree rakshabandanaವೇಣೂರು: ಪೂರ್ವಕಾಲದಲ್ಲಿ 700 ದಿಗಂಬರ ಮುನಿಗಳ ರಕ್ಷಣೆಗಾಗಿ ಪೂಜ್ಯ ಅಕಂಪನಾಚಾರ್ಯರು ರಕ್ಷೆಯನ್ನು ಕಟ್ಟಿದರೆಂಬ ಪ್ರತೀತಿ ಇದೆ. ಧರ್ಮರಕ್ಷಣೆ, ಸಹೋದರ-ಸಹೋದರಿಯತೆ ಭಾವನೆಯೊಂದಿಗೆ ಸದಾಕಾಲ ಪ್ರೀತಿ, ವಾತ್ಸಲ್ಯ ಹಾಗೂ ಸಹಕಾರದಿಂದ ಬದುಕುವುದೆಂಬುವುದೇ ರಕ್ಷಾಬಂಧನದ ಸಂದೇಶ ಎಂದು ಪುಷ್ಪಗಿರಿ ಶ್ರೀ 108 ಮುನಿಶ್ರೀ ಪ್ರಸಂಗಸಾಗರ ಮಹಾರಾಜ ನುಡಿದರು.
ಅವರು ವೇಣೂರು ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ವರ್ಷಾಯೋಗದಲ್ಲಿ ಜು.೧೬ ರಂದು ಚಾತುರ್ಮಾಸ್ಯ ವ್ಯವಸ್ಥಾಪನ ಸಮಿತಿ ವತಿಯಿಂದ ಜರಗಿದ ಕಲಿಕುಂಡ ಯಂತ್ರಾರಾಧನೆ ಹಾಗೂ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಂಗಲ ಪ್ರವಚನ ನೀಡಿದರು.
೧೦೫ ಸುಧರ್ಮಗುಪ್ತ ಕ್ಷುಲ್ಲಕ ಮಹಾರಾಜ ಹಾಗೂ ಶ್ರೀ ಸೋಮದೇವ ಬೈಯ್ಯಾಜಿ ಮಾತನಾಡಿದರು. ಶ್ರೀ ಶ್ರೀಕಾಂತ ಬೈಯ್ಯಾಜಿ ಹಾಗೂ ಶ್ರೀ ಧರ್ಮನಾಥ ಬೈಯಾಜಿ ಉಪಸ್ಥಿತರಿದ್ದರು.
ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ್ ಅಜಿಲ ದಂಪತಿಗಳು ಹಾಗೂ ಪ್ರಧಾನ ಕಾರ್ಯದರ್ಶಿ ಮಹಾವೀರ ಜೈನ್ ಮೂಡುಕೋಡಿ ದಂಪತಿಗಳು ಪೂಜಾಕಾರ್ಯದಲ್ಲಿ ಪಾಲ್ಗೊಂಡು ಮುನಿಶ್ರೀಯವರ ಆಶೀರ್ವಾದ ಪಡೆದರು. ಶ್ರಾವಕ ಬಂಧುಗಳು ವಿವಿಧ ಮಾದರಿಯ ರಕ್ಷೆಗಳನ್ನು ಮುನಿಶ್ರೀಯವರ ಪಿಂಛಿಗೆ ಸಮರ್ಪಿಸಿ ಆಶೀರ್ವಾದ ಪಡೆದರು. ಬಳಿಕ ಮುನಿಶ್ರೀಯವರೊಂದಿಗೆ ಪ್ರಶ್ನಾಮಂಚ್ ಕಾರ್ಯಕ್ರಮ ಜರಗಿತು. ನವೀನ್‌ಚಂದ್ ಬಳ್ಳಾಲ್, ಚಾತುರ್ಮಾಸ್ಯ ವ್ಯವಸ್ಥಾಪನ ಸಮಿತಿ ಉಪಾಧ್ಯಕ್ಷರುಗಳಾದ ಉದಯ ಕುಮಾರ್ ಸೇಮಿತ, ಬಿ. ರತ್ಮವರ್ಮ ಇಂದ್ರ ಬಜಿರೆ, ವೇಣೂರು ಜೈನ್ ಮಿಲನ್, ಬಾಹುಬಲಿ ಯುವಜನ ಸಂಘ ಹಾಗೂ ಮಹಿಳಾ ಸಂಘದ ಪದಾಧಿಕಾರಿಗಳು ಸಹಕರಿಸಿದರು. ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರ್ವಹಿಸಿದರು.

matrushri mugera sanga indabettu udhgataneಇಂದಬೆಟ್ಟು : ಮಾತೃಶ್ರೀ ಮುಗೇರ ಸಂಘ ಇಂದಬೆಟ್ಟು ಇದರ ಉದ್ಘಾಟನಾ ಸಮಾರಂಭ ಮತ್ತು ಮುಗೇರ ಜನಾಂಗದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭವು ಜು. 30 ರಂದು ಗ್ರಾ. ಪಂ. ಸಭಾಂಗಣ ಇಂದಬೆಟ್ಟುವಿನಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸುರೇಶ ದೇವನಾರಿ ಅಧ್ಯಕ್ಷರು ಮುಗೇರ ಸಂಘ ಇಂದಬೆಟ್ಟು ಇವರು ವಹಿಸಿದ್ದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನಿರ್ವಹಿಸಿ, ಸಮುದಾಯವು ಶಿಕ್ಷಣ ಮತ್ತು ಸಂಘಟನೆ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ. ಶಿಕ್ಷಣದಲ್ಲಿ ಸಮಾಜದ ಉನ್ನತಿ ಅಡಗಿದೆ. ಶಿಕ್ಷಣ ಮತ್ತು ಸಂಘಟನೆಗೆ ಒತ್ತು ನೀಡುವ ಮೂಲಕ ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಶ್ರೀಮತಿ ಸಿ.ಕೆ.ಚಂದ್ರಕಲಾ ಮಾಜಿ ಅಧ್ಯಕ್ಷರು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ದ.ಕ. ಜಿಲ್ಲಾ ಪಂಚಾಯತ್ ಇವರು ಮಾತನಾಡುತ್ತಾ, ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಶಿಕ್ಷಣ ಪಡೆದು ಸಂಘಟಿತರಾಗಿ ಉನ್ನತ ಮಟ್ಟದ ಹುದ್ದೆಯನ್ನು ಅಲಂಕರಿಸಬೇಕು. ಮುಗೇರ ಜನಾಂಗದವರು ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಕೊಳ್ಳಬೇಕು. ಯುವಜನಾಂಗ ಸ್ಪೂರ್ತಿದಾಯಕರಾಗಿ ಕರ್ತವ್ಯ ನಿರ್ವಹಿಸಬೇಕೆಂದು ಕರೆನೀಡಿದರು. ಇನ್ನೋರ್ವ ಅತಿಥಿ ಗ್ರಾ.ಪಂ. ಅಧ್ಯಕ್ಷೆ ನೇತ್ರಾವತಿ ಮಾತನಾಡುತ್ತಾ ಜಾತಿ, ಅಸ್ಪ್ರಶ್ಯತೆಯ ಸಂಕೋಲೆಯನ್ನು ತೊರೆದು, ಕೀಳರಿಮೆ ಬಿಟ್ಟು ಉತ್ತಮ ಜೀವನ ನಡೆಸಬೇಕೆಂದರು.
ಇನ್ನೋರ್ವ ಅತಿಥಿ ಸೌರಭ ರತ್ನ, ರಾಮ ಪಿ.ಸಾಲ್ಯಾನ್, ಮುಗೇರ ಜನಾಂಗದ ಮುಖಂಡರಾದ ವಿಜಯ ವಿಕ್ರಮ್, ಗ್ರಾಮ ಪಂಚಾಯತು ಉಪಾಧ್ಯಕ್ಷ ಇಬ್ರಾಹಿಂ, ಸದಸ್ಯ ಸಂಜೀವ ಗೌಡ ಮನ್ನಡ್ಕ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಈ ಸಂದರ್ಭದಲ್ಲಿ ಮುಗೇರ ಸಮುದಾಯದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಸದಸ್ಯೆ ಶಿಲ್ಪಾ ಸ್ವಾಗತಿಸಿದರು.
ಕು| ಹರಿಣಾಕ್ಷಿ ತಂಡದವರಿಂದ ಪ್ರಾರ್ಥನೆ ನಡೆಯಿತು. ಸುರೇಶ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

SDPI Bus stendಗುರುವಾಯನಕೆರೆ: ಎಸ್‌ಡಿಪಿಐ ನ್ಯಾಯ ಮತ್ತು ಸಮಾನತೆಯ ಪಕ್ಷ, ನಮ್ಮ ಪಕ್ಷ ರಾಜ್ಯದ ಮೂರನೇ ಅತ್ಯಂತ ಪ್ರಮುಖ ಪಕ್ಷವಾಗಿ ಮೂಡಿಬರುತ್ತಿದ್ದು ಮುಂದಿನ ಚುನಾವಣೆಯಲ್ಲಿ ಭವಿಷ್ಯದ ಆಡಳಿತಗಾರರನ್ನು ನಿರ್ಧರಿಸುವ ಪಕ್ಷವಾಗಿ ಹೊರಹೊಮ್ಮಲಿದೆ. ನಮ್ಮ ಪಕ್ಷಕ್ಕೆ ಜಾತಿ, ಧರ್ಮ ಎಂಬ ತಾರತಮ್ಯವಿಲ್ಲ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಹೇಳಿದರು.
ಗುರುವಾಯನಕೆರೆಯ ರಾಷ್ಟ್ರೀಯ ಹೆದ್ದಾರಿ ಬಳಿ ಎಸ್‌ಡಿಪಿಐ ವತಿಯಿಂದ ನೂತನವಾಗಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣವನ್ನು ಆ. 6 ರಂದು ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭ ಮಾತನಾಡಿದ ರಾಜ್ಯ ಉಪಾಧ್ಯಕ್ಷ ದೇವನೀರು ಪುಟ್ನಂಜಯ್ಯ, ರಾಜ್ಯದ ರಾಜಕೀಯ ಸ್ಥಿತಿ ಹದಗೆಟ್ಟಿದೆ, ರಾಜಕೀಯ ಶಿಕ್ಷಣ ಆರೋಗ್ಯ ಕ್ಷೇತ್ರಗಳು ವ್ಯಾಪಾರಿ ದಂಧೆಗಳಾಗಿವೆ, ದಲಿತರ ಅಲ್ಪಸಂಖ್ಯಾತರ ಶೋಷಣೆ ನಡೆಯುತ್ತಿದೆ, ಅಧಿಕಾರ ಬಲಾಢ್ಯರ ಕೈಯ್ಯಲ್ಲಿದ್ದು ಕೋಮುವಾದಿ, ದೇಶದ್ರೋಹಿಗಳು ಜಿಲ್ಲೆಯಲ್ಲಿ ಅಟ್ಟಹಾಸ ಮೆರೆಯುತ್ತಿದ್ದಾರೆ. ಆದ್ದರಿಂದ ಎಸ್‌ಡಿಪಿಐ ಗೆ ಬೆಂಬಲಿಸಿದರೆ ಪರ್ಯಾಯ ಪರಿಶುದ್ಧ ರಾಜಕೀಯ ಬರಲಿದೆ ಎಂದರು.
ಸರಕಾರದ ಸಹಾಯವಿಲ್ಲದೆ ಕಾರ್ಯಕರ್ತರೇ ಚಂದಾ ಎತ್ತಿ ಇಲ್ಲಿ ಸಾಮಾಜಿಕ ಪ್ರಯೋಜನವಾಗುವ ಪ್ರಯಾಣಿಕರ ತಂಗುದಾಣ ನಿರ್ಮಿಸಿದ್ದಾರೆ ಎಂದು ರಾಜ್ಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ತಾ| ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಅಬ್ದುಲ್ ಲೆತೀಫ್ ಪುತ್ತೂರು, ರಿಯಾಝ್ ಪರೆಂಗಿಪೇಟೆ, ಅಬ್ರಹಾರ್ ಪಟೇಲ್, ಅಕ್ರಂ ಹಸನ್, ಅತಾವುಲ್ಲಾ ಜೋಕಟ್ಟೆ, ನವಾಝ್ ಪೆರಾಲ್ದರಕಟ್ಟೆ, ವನಾಝ್ ಉಲ್ಲಾಲ್, ರಿಯಾಝ್ ಮದ್ದಡ್ಕ, ಇಕ್ಬಾಲ್ ಬಂಗೇರಕಟ್ಟೆ, ಶುಕೂರ್ ಕುಪ್ಪೆಟ್ಟಿ, ಅಬ್ದುಲ್ ರಹಿಮಾನ್ ಗುರುವಾಯನಕೆರೆ, ಅಶ್ರಫ್ ಗುರುವಾಯನಕೆರೆ ಮೊದಲಾದವರು ಉಪಸ್ಥಿತರಿದ್ದರು. ತಂಗುದಾಣ ನಿರ್ಮಾಣಕ್ಕೆ ಕಾರ್ಯಕರ್ತರ ಜೊತೆಗೆ ಖಲಂದರ್ ಅವರೂ ಹೆಚ್ಚಿನ ಸಹಾಯ ಒದಗಿಸಿಕೊಟ್ಟಿದ್ದರು. ನಿಸಾರ್ ಕಾರ್ಯಕ್ರಮ ನಿರೂಪಿಸಿದರು.

hindu jana jagruthi vedikeyinda manaviಬೆಳ್ತಂಗಡಿ : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಧ್ವಜದ ಅವಮಾನ ಮತ್ತು ವಿಡಂಬಣೆಯನ್ನು ತಡೆಗಟ್ಟಲು ಕಾನೂನು ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ತಹಶೀಲ್ದಾರರಿಗೆ ಮತ್ತು ಪೋಲಿಸ್ ವೃತ್ತ ನಿರೀಕ್ಷಕರಿಗೆ ಮನವಿಯನ್ನು ಆ.7 ರಂದು ಸಲ್ಲಿಸಲಾಯಿತು.
ಪ್ಲಾಸ್ಟಿಕ್ ರಾಷ್ಟ್ರಧ್ವಜದ ಉತ್ಪಾದನೆ ಮತ್ತು ಮಾರಾಟ ಹಾಗೂ ಆಟಿಕೆ ವಸ್ತುಗಳಲ್ಲಿ ರಾಷ್ಟ್ರಧ್ವಜವನ್ನು ಚಿತ್ರಿಸುವುದು ಇತ್ಯಾದಿ ದುಷ್ಟಕೃತ್ಯಗಳು ರಾಷ್ಟ್ರಗೌರವದ ಸಂಕೇತವಾದ ರಾಷ್ಟ್ರಧ್ವಜವನ್ನು ಅವಮಾನಗೊಳಿಸುತ್ತದೆ. ಪ್ಲಾಸ್ಟಿಕ್ ನಿರ್ಮಿತ ಧ್ವಜಗಳು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ತುಳಿಯಲ್ಪಡುತ್ತವೆ. ಮತ್ತು ಅವಮಾನಕ್ಕೆ ಒಳಗಾಗುತ್ತವೆ. ರಾಷ್ಟ್ರಧ್ವಜದ ಹಿಂದೆ ಅನೇಕಾನೇಕ ರಾಷ್ಟ್ರಭಕ್ತರ, ಕ್ರಾಂತಿಕಾರಿಗಳ ಬಲಿದಾನದ ವೀರಗಾಥೆಯ ನೆನಪು ಮತ್ತು ಪ್ರೇರಣೆ ಇಂದಿನ ಪೀಳಿಗೆಯಲ್ಲಿ ಉಳಿಸಿ ಬೆಳೆಸಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವುದು ಅತ್ಯವಶ್ಯಕವಿರುತ್ತದೆ. ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಆಗ್ರಹಪೂರ್ವಕವಾಗಿ ವಿನಂತಿಸಲಾಯಿತು.
ವಿಶ್ವಹಿಂದೂ ಪರಿಷತ್ತಿನ ತಿಮ್ಮಪ್ಪ ಗೌಡ ಬೆಳಾಲು, ಸನಾತನ ಸಂಸ್ಥೆಯ ಆನಂದ ಗೌಡ, ಕರುಣಾಕರ ಅಭ್ಯಂಕರ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಮೇಶ ಕಾಮತ್, ಸುಂದರ ನಿಡ್ಲೆ, ರತ್ನಾಕರ ಆಚಾರ್ಯ, ಸೌ. ರೋಚನಾ ಆಚಾರ್ಯ ಮತ್ತು ಕು. ಜ್ಯೋತಿ ಉಪಸ್ಥಿತರಿದ್ದರು.

KDP sabheಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪಂಚಾಯತದ ಮಾಸಿಕ ಕೆಡಿಪಿ ಸಭೆ ಪಂಚಾಯತದ ಅಧ್ಯಕ್ಷೆ ಶ್ರೀಮತಿ ದಿವ್ಯಾಜ್ಯೋತಿ ಅವರ ಅಧ್ಯಕ್ಷತೆಯಲ್ಲಿ ಆ.7ರಂದು ತಾ.ಪಂ. ಸಭಾಂಗಣದಲ್ಲಿ ಜರುಗಿತು.
ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀರ್ ಆರ್.ಸುವರ್ಣ, ಕಾರ್ಯನಿರ್ವಾ ಹಣಾಧಿಕಾರಿ ಗುರುಪ್ರಸಾದ್, ವ್ಯವಸ್ಥಾಪಕಿ ಸುವರ್ಣ ಜೆ. ಕುಮಾರಿ, ಕಚೇರಿ ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ, ಸಂಯೋಜಕ ಜಯಾನಂದ ಲಾಯಿಲ ಉಪಸ್ಥಿತರಿದ್ದರು.
ಸರಕಾರದ ಕೃಷಿ ಹೊಂಡ ನಿರ್ಮಾಣ ಯೋಜನೆಗೆ ರೈತ ಕನಿಷ್ಠ ಪಕ್ಷ ಒಂದು ಎಕ್ರೆ ಜಾಗವನ್ನು ಹೊಂದಿರಬೇಕು, ಇದರಲ್ಲಿ ಇತರರಿಗೆ ಶೇ 80 ಹಾಗೂ ಪ.ಜಾತಿ, ಪಂಗಡದ ವರಿಗೆ ಶೇ 90 ಸಹಾಯಧನ ಇದೆ ಎಂದು ಸಹಾಯಕ ಕೃಷಿ ನಿರ್ದೇಶಕ ತಿಲಕ್‌ಪ್ರಸಾದ್ ತಿಳಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಳೆ ಬಂದ ದಿನಗಳು ಜಾಸ್ತಿ ಆದರೆ ಮಳೆ ಪ್ರಮಾಣ ಕಡಿಮೆ ಎಂದು ಅವರು ವಿವರ ನೀಡಿದರು.
ಶಿಶುಅಭಿವೃದ್ಧಿ ಯೋಜನಾಧಿಕಾರಿ ಸರಸ್ವತಿಯವರು ತಮ್ಮ ಇಲಾಖೆಯ ಪ್ರಗತಿ ನೀಡಿ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಕಾರ್ಡ್ ದೊರೆಯದ ಬಡವರಿಗೆ ಭಾಗ್ಯಲಕ್ಷ್ಮೀ ಯೋಜನೆ ಬಾಂಡ್ ದೊರೆಯುವಲ್ಲಿ ಸಮಸ್ಯೆಯಾಗಿದೆ. ಹಲವು ಮಂದಿ ಬಡವರು ಅರ್ಜಿ ನೀಡಿದ್ದಾರೆ. ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೂ ಅವರಿಗೆ ಇನ್ನೂ ಕಾರ್ಡ್ ಸಿಕ್ಕಿಲ್ಲ, ಅರ್ಜಿಯಲ್ಲಿ ಕಾರ್ಡ್‌ನ ನಂಬ್ರ ಎಂಟ್ರಿ ಮಾಡಬೇಕು. ಇದರಿಂದಾಗಿ ಹಲವು ಮಂದಿ ವಂಚಿತರಾಗುತ್ತಿದ್ದಾರೆ ಎಂದರು. ಮುಂದಿನ ಅ.2ರಿಂದ ಅಂಗನವಾಡಿಗಳ ಮೂಲಕ ಮಾತೃಪೂರ್ಣ ಯೋಜನೆ ಜಾರಿಯಾಗಲಿದ್ದು, ದ.ಕ ಜಿಲ್ಲೆಯಲ್ಲಿ ಇದರ ಅನುಷ್ಠಾನ ಸಮಸ್ಯೆಯಾಗಲಿದೆ ಎಂದು ತಿಳಿಸಿದರು.
ಬೆಳ್ತಂಗಡಿ ತಾಲೂಕಿನಲ್ಲಿ 12 ಮಲೇರಿಯಾ ಪ್ರಕರಣ ಪತ್ತೆಯಾಗಿದೆ. ಡೆಂಗ್ಯೂ, ಹೆಚ್1 ಎನ್1 ಪ್ರಕರಣ ಪತ್ತೆಯಾಗಿಲ್ಲ, ವೇಣೂರಿನ ಗ್ರಾ.ಪಂ ಸಿಬ್ಬಂದಿ ಗಂಜಿಮಠದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದು ತಾಲೂಕು ವ್ಯಾಪ್ತಿಗೆ ಬರುವುದಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು ತಿಳಿಸಿದರು. ಆ.10ರಂದು ಶಾಲಾ ಮಕ್ಕಳಿಗೆ ಜಂತುಹುಳು ಗುಳಿಗೆ ನೀಡುವ ಕಾರ್ಯಕ್ರಮವಿದ್ದು, ತಾಲೂಕಿನ ಪ್ರಾಥಮಿಕ ಶಾಲೆಗಳನ್ನು ಇದರಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ವಿವರಿಸಿದರು. ತಾಲೂಕಿನ ಪ್ರಾಥಮಿಕ ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳ ಕೊರತೆ ಇರುವ ಬಗ್ಗೆ ಅವರು ಮಾಹಿತಿ ನೀಡಿದರು.
ಇಂದಬೆಟ್ಟು ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳ ತಪಾಸಣೆ ಮಾಡುವುದಿಲ್ಲ ಎಂಬ ದೂರು ಇದೆ ಎಂದು ತಾ.ಪಂ ಉಪಾಧ್ಯಕ್ಷೆ ವೇದಾವತಿ ಸಭೆಗೆ ಮಾಹಿತಿ ನೀಡಿದರು. ರೋಗಿಗಳು ಬಂದಾಗ ಕನಿಷ್ಠ ಅವರ ಮುಖವನ್ನು ನೋಡುವುದಿಲ್ಲ, ಜ್ವರ ಬಂದವರನ್ನು ಪರೀಕ್ಷೆ ನಡೆಸುವುದಿಲ್ಲ, ಬಂದವರು ತಮ್ಮ ಕಾಯಿಲೆ ತಿಳಿಸಿದಾಗ ಔಷಧಿ ಚೀಟಿ ಕೊಡುತ್ತಾರೆ ಎಂದು ನಾಗರಿಕರು ಗ್ರಾಮ ಸಭೆಯಲ್ಲಿ ದೂರಿಕೊಂಡಿದ್ದಾರೆ ಎಂದರು. ಅವರು ಆಯುರ್ವೇದಿಕ್ ವೈದ್ಯರಾಗಿದ್ದು, ಸೂಚನೆ ನೀಡಲಾಗುವುದು ಎಂದು ಡಾ| ಕಲಾಮಧು ಹೇಳಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖಾ ಪ್ರಗತಿಯನ್ನು ನೀಡಿದರು.
ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ ಗುರುಪ್ರಸಾದ್ ಸ್ವಾಗತಿಸಿ, ತಾಲೂಕು ಸಂಯೋಜಕ ಜಯಾನಂದ ವಂದಿಸಿದರು.

ಜನೋಪಯೋಗಿ ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

Thursday, August 4th, 2016 | Suddi Belthangady | no responses   ಮಂಜೂರಾದ ಹುದ್ದೆ -129                                   ಭರ್ತಿಯಾದ ಹುದ್ದೆ-90                                      ಖಾಲಿ ಇರುವ ಹುದ್ದೆ-39   ಅಚ್ಚು ಮುಂಡಾಜೆಮುಂದೆ ಓದಿ

ಕಚೇರಿಯಲ್ಲಿ ಕಡತ ತಪ್ಪಿಸಿಟ್ಟರೆ ಕ್ರಿಮಿನಲ್ ಕೇಸು ದಾಖಲು : ಎ.ಡಿ.ಸಿ. ಕುಮಾರ್

Thursday, July 7th, 2016 | Suddi Belthangady | no responses ಬೆಳ್ತಂಗಡಿ ಕಂದಾಯ ಇಲಾಖೆ : ಪ್ರಗತಿ ಪರಿಶೀಲನಾ ಸಭೆ ಯಾವುದೇ ಕೆಲಸಕ್ಕೆ ಲಂಚ ಮುಂದೆ ಓದಿ

ಶಿರಸ್ತೆದಾರರ  ಕಂದಾಯ ನಿರೀಕ್ಷಕರ, ಗ್ರಾಮ ಕರಣಿಕರ, ಭೂಮಾಲುಕರುಗಳ ಹಾಗೂ ಆಹಾರ ನಿರೀಕ್ಷಕರ ಮೊಬೈಲ್ ಸಂಖ್ಯೆಗಳು

Thursday, August 13th, 2015 | suddiblt | no responses ಮುಂದೆ ಓದಿ

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top