Mon 27 Feb 2017, 10:00AM

ಹೆಚ್ಚಿನ ಸುದ್ದಿಗಳು

vnr 1

vnr

  ವೇಣೂರು: ಮಂಗಳೂರಿನಲ್ಲಿ ನಡೆದ ಕೋಮು ಸೌಹಾರ್ದ ರ‍್ಯಾಲಿಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸುವುದನ್ನು ವಿರೋಧಿಸಿ ಸಂಘ ಪರಿವಾರದ ಸಂಘಟನೆಗಳು ಕರೆ ನೀಡಿದ ಹರತಾಳಕ್ಕೆ ವೇಣೂರು ಸಂಪೂರ್ಣ ಸ್ಥಬ್ಧಗೊಂಡಿತ್ತು.

ಆಸ್ಪತ್ರೆ, ಕ್ಲೀನಿಕ್, ಮೆಡಿಕಲ್ ಶಾಪ್ ಹಾಗೂ ಪೆಟ್ರೋಲ್ ಪಂಪ್‌ಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ವೇಣೂರು ರಾಜ್ಯ ಹೆದ್ದಾರಿ 70ರಲ್ಲಿ ಯಾವುದೇ ಸರ್ಕಾರಿ ಅಥವಾ ಖಾಸಗಿ ಬಸ್‌ಗಳ ಓಡಾಟ ಇರಲಿಲ್ಲ. ಆದರೆ ವೇಣೂರು ಸರ್ಕಾರಿ ಪ.ಪೂ. ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಗೆ ಎಲ್ಲಾ ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ. ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ವೇಣೂರು ಪೊಲೀಸರು ಬಂದೋಬಸ್ತ್‌ನಲ್ಲಿ ತೊಡಗಿದ್ದರು.

ratha 1

ratha 2

ratha 3

ratha

ಉಜಿರೆ: ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಫೆ.25ರಂದು ಬೆಳಿಗ್ಗಿನ ಜಾವ ರಥೋತ್ಸವ ನಡೆಯಿತು. ಸಾವಿರಾರು ಮಂದಿ ಭಕ್ತಾದಿಗಳು ಅದನ್ನು ವೀಕ್ಷಿಸಿ ಪುಣ್ಯ ಭಾಗಿಗಳಾದರು.

kokkada copy
ಕೊಕ್ಕಡ: ಇಲ್ಲಿಯ ಹಿಂದೂ ಜಾಗರಣಾ ವೇದಿಕೆ, ಮತ್ತು ಶ್ರೀ ಶನೈಶ್ಚರ ಪೂಜಾ ಸಮಿತಿ, ಕೊಕ್ಕಡ ಇದರ ಆಶ್ರಯದಲ್ಲಿ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂತರ್ಿ ದೇವಸ್ಥಾನದ ಹರಿಹರ ಮಂಟಪದಲ್ಲಿ ವೇದಮೂತರ್ಿ ಶ್ರೀ ಬಾಲಕೃಷ್ಣ ಕೆದಿಲಾಯರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಕಲ್ಪೋಕ್ತ ಪೂಜೆಯು ಫೆ.25ರಂದು ಜರುಗಿತು.
ಈ ಸಂದರ್ಭ ನಡೆದ ಧಾಮರ್ಿಕ ಸಭೆಯ ಅಧ್ಯಕ್ಷತೆಯನ್ನು ಈಶ್ವರ ಭಟ್ ಹಿತ್ತಿಲು ವಹಿಸಿದ್ದರು. ಧಾಮರ್ಿಕ ಉಪನ್ಯಾಸಕರಾಗಿ ವಿಟ್ಲ ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಚಾಲಕರಾದ ಬಿ. ಗಣರಾಜ್ ಕೆದಿಲ ಭಾಗವಹಿಸಿ ಉಪನ್ಯಾಸ ನೀಡಿದರು.
ಗೌರವ ಉಪಸ್ಥಿತರಾಗಿ ಕೊಕ್ಕಡ ಹಿಂದೂ ಜಾಗರಣ ವೇದಿಕೆಯ ವಲಯ ಅಧ್ಯಕ್ಷ ಬಾಲಕೃಷ್ಣ ಕೆದಿಲಾಯ, ನೆಲ್ಯಾಡಿ ಹಿಂದೂ ಜಾಗರಣ ವೇದಿಕೆಯ ರವಿಶಂಕರ ಶೆಟ್ಟಿ ಭಾಗವಹಿಸಿದ್ದರು.
ಸಮಿತಿಯ ಅಧ್ಯಕ್ಷರಾದ ರುಕ್ಮಯ ಮಡಿವಾಳ ಸ್ವಾಗತಿಸಿ, ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ತಾ.ಪಂ. ಸದಸ್ಯ ಲಕ್ಷ್ಮೀನಾರಾಯಣ ಪಿ.ಎಂ. ಧನ್ಯವಾದವಿತ್ತರು

Rasthe   ಬಜಿರೆ : ವೇಣೂರು ಗ್ರಾ.ಪಂ. ವ್ಯಾಪ್ತಿಯ ಬಜಿರೆ ಪೆರ್ಮಾಣು ರಸ್ತೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ರೂ. 5 ಲಕ್ಷ ಮೊತ್ತದಲ್ಲಿ ನಿರ್ಮಾಣವಾಗಲಿರುವ 100 ಮೀಟರ್ ಉದ್ದದ ರಸ್ತೆ ಕಾಂಕ್ರಿಟೀಕರಣಕ್ಕೆ ಪೆರ್ಮಾಣುಗುತ್ತು ಸುರೇಶ್ ಆರಿಗ ಅವರು ಶಿಲಾನ್ಯಾಸ ನೆರವೇರಿಸಿದರು.
ವೇಣೂರು ತಾ.ಪಂ. ಸದಸ್ಯ ಕೆ. ವಿಜಯ ಗೌಡ, ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ, ಮಾಜಿ ಅಧ್ಯಕ್ಷ ಸತೀಶ್ ಹೆಗ್ಡೆ, ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪಂ. ಅಭಿವೃದ್ಧಿ ಅಧಿಕಾರಿ ಕೆ. ವೆಂಕಟಕೃಷ್ಣರಾಜ ಸ್ವಾಗತಿಸಿ ವಂದಿಸಿದರು.

RAJESHcar

ಕೊಕ್ರಾಡಿ: ಮಾರುತಿ 800 ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿಯೋರ್ವರು ಮೃತಪಟ್ಟ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ರಾಡಿಯಲ್ಲಿ ಫೆ. 22ರಂದು ನಡೆದಿದೆ.
ಕೊಕ್ರಾಡಿ ಗ್ರಾಮದ ಮಾನ್ಯೋಡಿಕಟ್ಟೆ ನಿವಾಸಿ ಚಂಪಾರವರ ಪುತ್ರ ರಾಜೇಶ್ (32) ಮೃತಪಟ್ಟವರು. ಕೂಲಿ ಕೆಲಸ ಮಾಡಿಕೊಳ್ಳುತ್ತಿದ್ದ ಇವರು ಮನೆ ಸಮೀಪದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ನಾರಾವಿ ಕಡೆಯಿಂದ ಅಂಡಿಂಜೆ ಕಡೆಗೆ ಬರುತ್ತಿದ್ದ (ಕೆಎ 22 ಎಂ 6850) ಮಾರುತಿ 800 ಕಾರು ರಾಜೇಶ್ ಅವರಿಗೆ ಡಿಕ್ಕಿಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಕಾರು ಚಾಲಕನ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

06 copy 01 copy 02 copy 03 copy 04 copy 05 copy

ಧರ್ಮಸ್ಥಳದಲ್ಲಿ ಶುಕ್ರವಾರ ಶಿವರಾತ್ರಿ ಪ್ರಯುಕ್ತ ನಡೆಯುವ ಆಹೋ ರಾತ್ರಿ ಶಿವ ಪಂಚಾಕ್ಷರಿ ಪಠಣವನ್ನು ಧರ್ಮಸ್ಥಳದ ಧಮರ್ಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.
ಉಜಿರೆ: ನಮ್ಮ ದೇಹದಲ್ಲಿ ಆತ್ಮ ಇದ್ದರೆ ಶಿವ, ಇಲ್ಲದಿದ್ದರೆ ಅದು ಶವ. ನಿರಾಕಾರವಾದ ಪರಶಿವನ ಮಹಿಮೆ ಅಪಾರವಾಗಿದ್ದು ಪ್ರಾರ್ಥನೆ, ಧ್ಯಾನ, ವ್ರತೋಪಾಸನೆಯಿಂದ ಆತ್ಮ ಧ್ಯಾನದಿಂದ ಶಿವ ದರ್ಶನವಾಗುತ್ತದೆ. ಶಿವ ಕಾರುಣ್ಯದ ಫಲ ಅನುಭವಿಸಬಹುದು. ಶಿವ ಕ್ಷೇತ್ರದಲ್ಲಿ ಮೂಲ ಸಾನ್ನಿಧ್ಯವಿದೆ. ವಿಶೇಷ ಶಕ್ತಿ ಇದೆ. ಶಿವ ಕ್ಷೇತ್ರ ದರ್ಶನದಿಂದ ದೇಹ, ಮನಸ್ಸು ಪವಿತ್ರವಾಗುತ್ತದೆ ಎಂದು ಧರ್ಮಸ್ಥಳದ ಧಮರ್ಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶಿವರಾತ್ರಿ ಪ್ರಯುಕ್ತ ಅಹೋರಾತ್ರಿ ನಡೆಯುವ ಶಿವ ಪಂಚಾಕ್ಷರಿ ಪಠಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಕ್ತರ ಪಾಲಿಗೆ ಶಿವನು ಪರಮೇಶ್ವರನಾಗಿರುತ್ತಾನೆ. ಜೀವನ ಸಂಬಂಧವಾದ ದುಃಖವನ್ನು, ಕಷ್ಟಗಳನ್ನು ದೂರ ಮಾಡುವವನೇ ರುದ್ರ. ದೃಢ ಸಂಕಲ್ಪದೊಂದಿಗೆ ಶ್ರದ್ಧಾ, ಭಕ್ತಿಯಿಂದ ದೇವರ ಧ್ಯಾನ, ಆರಾಧನೆ ಮಾಡಿದರೆ ನಮಗೆ ಅಂತರಂಗ ದರ್ಶನವಾಗುತ್ತದೆ. ವೇದ ಪ್ರಿಯನೂ, ನಾದಪ್ರಿಯನೂ ಆದ ಶಿವನು ಭಕ್ತ ಪ್ರಿಯನಾಗಿರುತ್ತಾನೆ. ಶಿವ ರಾತ್ರಿಯಂದು ಪರಿಶುಧ್ಧ ಭಾವ ಮತ್ತು ಭಕ್ತಿಯಿಂದ ನಮ್ಮನ್ನು ನಾವು ಶುದ್ಧೀಕರಿಸಿಕೊಳ್ಳಬಹುದು. ಬಾಹ್ಯ ಸೌಂದರ್ಯದ ಜೊತೆಗೆ ಅಂತರಂಗ ಸೌಂದರ್ಯಕ್ಕೂ ಮಹತ್ವ ನೀಡಿ ದೇವರು ಕೊಟ್ಟ ಅಮೂಲ್ಯ ಜೀವನವನ್ನು ಪಾವನವಾಗಿ ಮಾಡಬೇಕು ಎಂದು ಅವರು ಹೇಳಿದರು.
ಶ್ರದ್ಧೆಯಿಂದ ಶ್ರಮವಿಲ್ಲ. ನಂಬಿಕೆಯಿಂದ ಸೋಲಿಲ್ಲ. ಭಕ್ತಿಯಿಂದ ಭಯವಿಲ್ಲ ಎಂದು ಹೆಗ್ಗಡೆಯವರು ಕಿವಿಮಾತು ಹೇಳಿದರು.
ಪಾದಯಾತ್ರಿಗಳು ಶಿಸ್ತಿನಿಂದ ಧ್ಯಾನ ಮಾಡುತ್ತಾ ಬರಬೇಕು ಎಂದು ಅವರು ಸಲಹೆ ನೀಡಿದರು.
ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಸುಪ್ರಿಯಾ ಹಷರ್ೆಂದ್ರ ಕುಮಾರ್, ಡಿ. ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್ ಉಪಸ್ಥಿತರಿದ್ದರು.

shrisaksha 1 copyಗೇರುಕಟ್ಟೆ ಪಂಜಿರ್ಪು ನಿವಾಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುವಿಧಾ ಯೋಜನಾಧಿಕಾರಿ ಸತೀಶ್ ಸುವರ್ಣ ಮತ್ತು ಜಯಶ್ರೀ ದಂಪತಿ ಪುತ್ರ ಶ್ರೀಶಾಕ್ಷ ಎಸ್.ಸುವರ್ಣರ ಹುಟ್ಟುಹಬ್ಬವು ಫೆ.21ರಂದು ಜರಗಿತು.

shagrithraya1ಕೊಕ್ಕಡ : ಪತ್ರಕರ್ತ ಸುಬ್ರಹ್ಮಣ್ಯ ಶಗ್ರಿತ್ತಾಯ ಮೇಲೆ ನಡೆದ ಹಲ್ಲೆಯ ಬಗ್ಗೆ ಧರ್ಮಸ್ಥಳ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲುಗೊಂಡಿದೆ. ಆರೋಪಿಯನ್ನು ಕೂಡಲೇ ತನಿಖೆಗೆ ಒಳಪಡಿಸಬೇಕೆಂದು ಬೆಳ್ತಂಗಡಿ ಪತ್ರಕರ್ತ ಸಂಘ ವತಿಯಿಂದ ತುರ್ತು ಸಭೆ ನಡೆಸಿ, ರಾಜ್ಯಪಾಲರಿಗೆ ತಹಸೀಲ್ದಾರರ ಮೂಲಕ ಇಂದು(ಫೆ.24) ಮನವಿಯನ್ನು ಸಲ್ಲಿಸಲಾಯಿತು. ಪತ್ರಕರ್ತ ಸಂಘದ ಅಧ್ಯಕ್ಷ ದೇವಿಪ್ರಸಾದ್, ಕಾರ್ಯದರ್ಶಿ ಹೃಷಿಕೇಶ್, ಮಾಜಿ ಅಧ್ಯಕ್ಷ ಬಿ.ಎಸ್ ಕುಲಾಲ್, ಪುಷ್ಪರಾಜ್ ಶೆಟ್ಟಿ, ಮಂಜುನಾಥ್ ರೈ, ಭುವನೇಶ್ ಸದಸ್ಯರಾದ ಲಕ್ಷ್ಮೀ ಮಚ್ಚಿನ, ಮನು ಬಳಂಜ, ಆಚು ಬಾಂಗೇರು, ಧನಕೀರ್ತಿ ಅರಿಗರ್ ಉಪಸ್ಥಿತರಿದ್ದರು.

29

aಬೆಳ್ತಂಗಡಿಯ ಚರ್ಚ್ ರೋಡ್ ಬಳಿ ಅಳವಡಿಸಲಾಗಿದ್ದ ಸಿಪಿಐ (ಎಂ) ಸೌಹಾರ್ದ ಸಮಾವೇಶದ ಬ್ಯಾನರ್‌ಗೆ ಮಸಿ ಬಳಿದು ತಮ್ಮ ವಿಕೃತ ಮನಸ್ಥಿತಿಯನ್ನು ಬಹಿರಂಗ ಪಡಿಸಿದ್ದಾರೆ. ಈ ಘಟನೆಯನ್ನು ಕಟು ಶಬ್ದಗಳಿಂದ ಟೀಕಿಸಿರುವ ಸಿಪಿಐ (ಎಂ) ಬೆಳ್ತಂಗಡಿ ತಾಲೂಕು ಸಮಿತಿ, ಬ್ಯಾನರ್, ಪೊಸ್ಟರ್ ಹರಿದು, ಬೆಂಕಿ ಹಚ್ಚುವುದರಿಂದ ಮಸಿ ಬಳಿಯುವುದರಿಂದ, ಕಛೇರಿಗೆ ಬೆಂಕಿ ಹಚ್ಚುವುದರಿಂದ ಸೌಹಾರ್ದ ಸಮಾವೇಶ ಮತ್ತು ಪಿಣರಾಯಿ ವಿಜಯನ್ ಬರುವುದನ್ನು ತಡೆಯಲಾಗದು ಎಂದಿದ್ದಾರೆ. ಪಕ್ಷವನ್ನು ಸೈದ್ಧಾಂತಿಕವಾಗಿ ಎದುರಿಸಲು ತಾಕತ್ತಿಲ್ಲದ ಸಂಘಪರಿವಾರ, ಬಿಜೆಪಿಯವರು ಬ್ಯಾನರ್, ಪೊಸ್ಟರ್ ಹರಿಯುವ ನೀಚ ರಾಜಕೀಯ ನಡೆಸುತ್ತಿದೆ ಎಂದು ಪಕ್ಷದ ತಾಲೂಕು ಕಾರ್ಯದರ್ಶಿ, ನ್ಯಾಯವಾದಿ ಶಿವಕುಮಾರ್ ಎಸ್. ಎಂ ಆರೋಪಿಸಿದರು.

Sanidhya copyನಾವರ ಇಲ್ಲಿಯ ಆನಂದ ಆಚಾರ್ಯ ಮತ್ತು ಶಶಿಕಲಾ ದಂಪತಿಯ ಪುತ್ರಿ ಸಾನಿಧ್ಯ ಇವರ 1ನೇ ವರ್ಷದ ಹುಟ್ಟುಹಬ್ಬವನ್ನು ಫೆ.10ರಂದು ಆಚರಿಸಲಾಯಿತು.

VINAYA-MAMTHA copyತೆಂಕಕಾರಂದೂರು ಪರಬೆಟ್ಟು ದಿ| ಸೇಸಪ್ಪ ನಾಕರವರ ಪುತ್ರ ವಿನಯ ರವರ ನಿಶ್ಚಿತಾರ್ಥವು ಕದಂದಲೆ ಪಾಲಡ್ಕ ಹೊಸಬೆಟ್ಟು  ದಿ| ಚಂದಯ್ಯ ನಾಕರವರ  ಪುತ್ರಿ ಮಮತಾ ರವರೊಂದಿಗೆ ಫೆ.16ರಂದು ವಧುವಿನ ಮನೆಯಲ್ಲಿ ನಡೆಯಿತು.

narayana-jayalakshmi copyವೇಣೂರು ಗ್ರಾಮದ ಮಾರು ಶಾಂತಿಗುಡ್ಡೆ ದಿ| ಹೊನ್ನಯ್ಯ ಪೂಜಾರಿಯವರ ಪುತ್ರ ನಾರಾಯಣ ರವರ ವಿವಾಹವು ಪುಂಜಾಲಕಟ್ಟೆ ಊರ್ಲಮನೆ ದಿ| ಜಿನ್ನಪ್ಪ ಪೂಜಾರಿ ಯವರ ಪುತ್ರಿ ಜಯಲಕ್ಷ್ಮೀಯ ವರೊಂದಿಗೆ   ಫೆ.6 ರಂದು ವೇಣೂರು ಗಾರ್ಡನ್ ವ್ಯೂವ್ ಹಾಲ್ನಲ್ಲಿ ಜರುಗಿತು.

Shobha weds Rithish copyತೋಟತ್ತಾಡಿ ಗ್ರಾಮದ ಬರೆಮೇಲು ಶಿವಪ್ಪ ಪೂಜಾರಿಯವರ ಪುತ್ರಿ ಶೋಭಾ ರವರ ವಿವಾಹವು ಪಡೀಲು ಕನ್ನಗುಡ್ಡ ದಿ| ಕೊರಗಪ್ಪ ಅಮೀನ್‌ರವರ ಪುತ್ರ ಲತೀಶ್‌ರೊಂದಿಗೆ ಫೆ.15 ರಂದು ಬಂಟ್ವಾಳ ತಾಲೂಕು ಪಾಣೆಮಂಗಳೂರು ಗಾಣಿಗ ಸೌಧದ ಸುಮಂಗಲಾ ಕಲ್ಯಾಣ ಮಂಟಪದಲ್ಲಿ ಜರುಗಿತು.

Naveen weds Pramila copyಪೆರ್ಮುಡ ಕೂಟೇಲು ಮನೆ ಪಿಜಿನ ಪೂಜಾರಿಯವರ ಪುತ್ರ ನವೀನರವರ ವಿವಾಹವು ಕಲ್ಲೋಡಿ ಡೊಂಬಯ್ಯ ಪೂಜಾರಿಯವರ ಪುತ್ರಿ ಪ್ರಮೀಳಾರೊಂದಿಗೆ ಫೆ.18 ರಂದು ವೇಣೂರು ಗೋಳಿಯಂಗಡಿ ದೇವಾಡಿಗರ ಸಮುದಾಯ ಭವನದಲ್ಲಿ ಜರುಗಿತು.

prashanth-apoorva copyಕೊಯ್ಯೂರು ಗ್ರಾಮದ ಕಾಂತಾಜೆ ಜಯರಾಮ ಇವರ ಪುತ್ರಿ ಹಾಗೂ ಕಾಂತಾಜೆ ಈಶ್ವರ ಭಟ್ಟರ ಮೊಮ್ಮಗಳು ಅಪೂರ್ವ ಇವರ ವಿವಾಹವು ಮಂಗಳೂರು ಕದ್ರಿ ಕೈಂತಜೆ ಕೃಷ್ಣಮೂರ್ತಿಯವರ ಪುತ್ರ ಪ್ರಶಾಂತ ಇವರೊಂದಿಗೆ ಫೆ.17ರಂದು ಗುರುವಾಯನಕೆರೆ ನಮ್ಮ ಮನೆ ಹವ್ಯಕ ಭವನದಲ್ಲಿ ಜರಗಿತು.

tಫೆ. 25ರಂದು ಸಿಪಿಎಂನ ಸೌಹಾರ್ದ ರ‍್ಯಾಲಿಯಲ್ಲಿ ಭಾಗವಹಿಸಲು ಕೇರಳ ಸಿಎಂ ಪಿಣರಾಯಿ ವಿಜಯನ್ ಮಂಗಳೂರಿಗೆ ಆಗಮಿಸುತ್ತಿರುವುದನ್ನು ವಿರೋಧಿಸಿ ಕೆಲ ಕಿಡಿಕೇಡಿಗಳು ಬ್ಯಾನರ್‌ಗೆ ಮಸಿ ಬಳೆದಿದ್ದಾರೆ.

karthik enterpize1

karthik enterprizeಉಜಿರೆ : ಬೆಳ್ತಂಗಡಿ ತಾಲೂಕಿನ ಅಲ್ಟ್ರಾಟೆಕ್ ಸಿಮೆಂಟ್ ದಾಸ್ತಾನುಗಾರರು, ವಿತರಕರು, ಬಿರ್ಲಾವೈಟ್ ಸಿಮೆಂಟ್ ಮಾರಾಟಗಾರರು ಹಾಗೂ ವಿತರಕರಾದ ಕಾರ್ತಿಕ್ ಎಂಟರ್ ಪ್ರೈಸಸ್‌ನಲ್ಲಿ ಜೆ.ಎಸ್.ಡಬ್ಲೂ ಸ್ಟೀಲ್ ಸಂಸ್ಥೆಯವರ ಜೆ.ಎಸ್.ಡಬ್ಲೂ ಕನೆಕ್ಟ್ ಸೆಂಟರ್ ಫೆ. 23ರಂದು ಕರ್ನಾಟಕ ಸರಕಾರದ ಯುವ ಜನ ಸೇವಾ ಮತ್ತು ಕ್ರೀಡಾ ಮಾಜಿ ಸಚಿವರಾದ ಹಾಗೂ ಪ್ರಸನ್ನ ವಿದ್ಯಾಸಂಸ್ಥೆಗಳ ಚೆಯರ್‌ಮೆನ್ ಕೆ. ಗಂಗಾಧರ ಗೌಡರು ಉದ್ಘಾಟಿಸಿ ಸಂಸ್ಥೆಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಕಾರ್ತಿಕ್ ಎಂಟರ್‌ಪ್ರೈಸಸ್‌ನ ಆಡಳಿತ ಪಾಲುದಾರರಾದ ಕೆ. ಧರ್ಮಣ್ಣ ಗೌಡ ಮತ್ತು ಶ್ರೀಮತಿ ಧರ್ಣಣ್ಣ ಗೌಡ, ಜೆ.ಎಸ್.ಡಬ್ಲೂ ಸಂಸ್ಥೆಯ ಅಧಿಕಾರಿಗಳಾದ ಎ.ಬಿ.ಎಫ್ ಮಹಮ್ಮದ್ ಫಾರಿದ್‌ಖಾಝಿ, ಏರ್ಯ ಸೇಲ್ಸ್ ಮ್ಯಾನೇಜರ್ ಮಯೂರು ಕಾಮತ್, ಹೆಚ್.ಆರ್ ಹರಿಕೃಷ್ಣ ಪೂಜಾರಿ, ಡೆಪ್ಯೂಟಿ ಆಫೀಸ್ ಸಚಿನ್, ಸಿನಿಯರ್ ಸೇಲ್ಸ್ ವಿಭಾಗದ ರಾಖೇಶ್ ರೈ, ಕಂಟ್ರಾಕ್ಟರ್, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

(more…)

  1 copy ವಿವಿಧ ಸೇವಾ ಕಾರ‍್ಯಾಗಾರ ಲೋಕಾರ್ಪಣೆ :
ಇದೇ ಸಂದರ್ಭದಲ್ಲಿ ತಾಲೂಕಿನ 41 ಗ್ರಾಮಗಳ ಆಯ್ದ 37 ಸರಕಾರಿ ಶಾಲೆಗಳ ಗ್ರಂಥಾಲಯಕ್ಕೆ ರೂ 1.83 ಲಕ್ಷ ಮೌಲ್ಯದ ಪುಸ್ತಕಗಳನ್ನು ಸಾಂಕೇತಿಕವಾಗಿ 5 ಶಾಲೆಗಳಿಗೆ ವಿತರಿಸಲಾಯಿತು.. ತಾಲೂಕಿನ 10 ಅರ್ಹ ಮನೆಗಳಿಗೆ ರೂ 10,000 ವೆಚ್ಚದ ಉಚಿತ ಸೋಲಾರ್ ವಿದ್ಯುತ್ ಘಟಕಗಳನ್ನು ವಿತರಿಸಲಾಯಿತು. ಬೆನ್ನು ಮೂಳೆ ಮುರಿತಕ್ಕೊಳಗಾದ 10 ಮಂದಿ ದಿವ್ಯಾಂಗರಿಗೆ ಮತ್ತು ಕನ್ಯಾನದ ಭಾರತ ಸೇವಾಶ್ರಮಕ್ಕೆ ಗಾಲಿ ಕುರ್ಚಿ ವಿತರಿಸಲಾಯಿತು. ತಾಲೂಕಿನ 241 ಸರಕಾರಿ ಶಾಲೆಗಳ 606 ಅಡುಗೆ ಸಹಾಯಕಿಯರಿಗೆ ಬೇಳ್ತಂಗಡಿ ತಾ.ಪಂ. ಅಕ್ಷರದಾಸೋಹ ಬಿಸಿಯೂಟ ಯೋಜನೆಯ ನಿರ್ದೇಶಕ ಕೆ.ಜಿ ಲಕ್ಷಣ ಶೆಟ್ಟಿ ಉಚಿತ ರಕ್ಷಾಕವಚ (ಏಫ್ರನ್) ಸಾಂಕೇತಿಕವಾಗಿ ವಿತರಿಸಿ ಸೇವಾಭಾರತಿಯ ವಿಸ್ವಾರ್ಥ ಸೋಲಿಲ್ಲದ ಸೇವಾಕಾರ್ಯ ರಾಷ್ಟ್ರವ್ಯಾಪ್ತಿಯಾಗಿ ಬೆಳೆದು ಸಂಸ್ಥೆಗೆ ನೋಬೆಲ್ ಪಾರಿತೋಷಕ ಪ್ರಾಪ್ತವಾಗಲೆಂದು ಶುಭ ನುಡಿದರು. ತಾಲೂಕಿನ ವಿವಿಧ ಗ್ರಾಮಗಳ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಆಯಾ ಗ್ರಾಮಗಳಲ್ಲಿ ಕಂಪ್ಯೂಟರ್ ತರಬೇತಿ ಶಿಕ್ಷಣ ಯೋಜನೆಯ ಶುಭಾರಂಭಕ್ಕೆ ಸಾಂಕೇತಿಕವಾಗಿ ಕಂಪ್ಯೂಟರ್ ವಿತರಿಸಲಾಯಿತು.

ಉಜಿರೆ: ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಅದ್ಭುತ ಶಕ್ತಿಯನ್ನಾಗಿ ಬೆಳೆಸಲು ಏಕಾಗ್ರತೆಯೇ ಪ್ರಮುಖ ಸಾಧನ.ಜೀವನದಲ್ಲಿ ಏನನ್ನಾದರೂ ತ್ಯಾಗ ಮಾಡುವವರಿಗೆ ಮಾತ್ರ ಸೇವೆ ಮಾಡಲು ಸಾದ್ಯ. ಸೇವೆ ಮಾಡಲು ಯಾವುದೇ ಪದವಿಯ ಅರ್ಹತೆ ಬೇಕಾಗಿಲ್ಲ.. ಬೇಕಾಗಿರುವುದು ಕೇವಲ ಹೃದಯ ಶ್ರೀಮಂತಿಕೆ ಮಾತ್ರ.. ನಾವು ಹಣ; ಕೀರ್ತಿಗಾಗಿ ದುಡಿಯದೆ ಜೀವನ ಸಾರ್ಥಕತೆಗಾಗಿ ದುಡಿಯಬೇಕು. ನಾವು ಯಾವುತ್ತೂ ಕೇಡಿಯಾಗುವುದಿಲ್ಲವೆಂಬ ಸಂಕಲ್ಪ ಮಾಡುವುದೇ ಅತಿ ದೊಡ್ಡ ದೇಶ ಸೇವೆಯೆಂದು ಕರ್ನಾಟಕ ಯುವ ಭಾರತ್ ರಾಜ್ಯ ಪ್ರಭಾರಿ ನಿಕೇತ್‌ರಾಜ್ ನುಡಿದರು.
ಅವರು ಫೆ.18ರಂದು ಧರ್ಮಸ್ಥಳ ಗ್ರಾಮದ ಕನ್ಯಾಡಿಯ ಹಿ.ಪ್ರಾ.ಶಾಲಾ ವಠಾರದ ಜ್ಞಾನಗಂಗಾ ಸಭಾಂಗಣದಲ್ಲಿ ಸೇವಾ ಭಾರತಿಯ 14ನೇ ವಾರ್ಷಿಕ ಸಮಾರಂಭದಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಲೋಕಾರ್ಪಣೆಗೊಳಿಸಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು ಬದುಕಿನಲ್ಲಿ ಸೇವೆಯನ್ನು ಉಸಿರಾಗಿಸಿ ಕೊಂಡವರು ಸ್ವಾಮಿ ವಿವೇಕಾನಂದರು; ಮನಸ್ಸು ಮಾಡಿದರೆ ನಮ್ಮಲ್ಭೊಬ್ಬರು ಭಗತ್‌ಸಿಂಗ್,ಅಬ್ದುಲ್‌ಕಲಾಂ ಮೊದಲಾದ ನೇತಾರರು ಹುಟ್ಟಿಬರಲು ಸಾದ್ಯವೆಂದು ಅಬ್ದುಲ್ ಕಲಾಂ ಅವರ ಆದರ್ಶ ವ್ಯಕ್ತಿತ್ವವನ್ನು ಮಕ್ಕಳಿಗೆ ಮನದಟ್ಟಾಗುವಂತೆ ಕಥೆಯ ಮೂಲಕ ತಿಳಿಸಿದರು. ಕಾರ್ಯಕ್ರಮವನ್ನು ಉದ್ಟಾಟಿಸಿದ ನ್ಯಾಯವಾದಿ, ಸೇವಾ ಭಾರತಿಯ ಪೋಷಕ ಬಿ.ಕೆ.ಧನಂಜಯರಾವ್ ಮನಷ್ಯ ಸಹಜ ಬೆಳೆಯುವ ಮಕ್ಕಳಲ್ಲಿ ಸೇವಾ ಮನೋಭಾವ ಸ್ವಯಂಪ್ರೇರಣೆಯಿಂದ ಮೂಡಿ ಬರಬೇಕು. ಸೇವಾ ಕೈಂಕರ್ಯಗಳು ನಿರಂತರವಾಗಿ ; ಅರ್ಥಪೂರ್ಣವಾಗಿ ನಡೆಯುವ ಮೂಲಕ ಸುಖ ಶಾಂತಿ ನೆಮ್ಮದಿ ಸಂಸ್ಕೃತಿ ಬೆಳಗಲಿ ಎಂದು ಆಶಿಸಿ ಶುಭಕೋರಿದರು.
ಬಂಟ್ವಾಳ ತಾಲೂಕಿನ ಕನ್ಯಾನ ಭಾರತ ಸೇವಾಶ್ರಮ ಸಂಸ್ಥೆಯ ಪರವಾಗಿ ಈಶ್ವರ ಭಟ್ ದಂಪತಿಗಳು ಮತ್ತು ಬಂಗಾಡಿಯ ಪ್ರಗತಿ ಪರ ಭತ್ತದ ತಳಿ ಕೃಷಿ ಸಾಥಕ ಬಿ.ಕೆ ದೇವರಾವ್ ದಂಪತಿಗಳನ್ನು ವಿಶೇಷವಾಗಿ ಸಮ್ಮಾನಿಸಿ ಗೌರವಿಸಲಾಯಿತು. ಸೇವಾಭಾರತಿ ಅಧ್ಯಕ್ಷ ಬಿ.ಕೃಷ್ಣಪ್ಪ ಗುಡಿಗಾರ್ ಸ್ವಾಗತಿಸಿ : ಕಾರ್ಯದರ್ಶಿ ವಿನಾಯಕರಾವ್ ಕನ್ಯಾಡಿ ಪ್ರಸ್ತಾವಿಸಿ ಸಾರ್ವಜನಿಕರು ಸೇವಾಭಾರತಿ ಗೆ ನೀಡುವ ಕೊಡುಗೆ ದೇಣಿಗೆಗಳಿಗೆ 8೦ಜಿ ಅನ್ವಯ ಕರ ವಿನಾಯಿತಿಯಿದೆಯೆಂದು ತಿಳಿಸಿದರು. ಈಶ್ವರಭಟ್ ಸಮ್ಮಾನಕ್ಕೆ ಉತ್ತರಿಸಿ ಸೇವಾಭಾರತಿಯ ಸೇವಾ ಕಾರ್ಯಗಳ ಬಗೆಗೆ ಶ್ಲಾಘನೆ ವ್ಯಕ್ತಪಡಿಸಿದರು. ಹರೀಶ್‌ರಾವ್ ಮುಂಡ್ರುಪ್ಪಾಡಿ ವಾರ್ಷಿಕ ವರದಿ ಮಂಡಿಸಿ : ಮಹೇಶ ಕನ್ಯಾಡಿ ಮತ್ತು ಶ್ರೀಧರ ಕೆ.ವಿ ಸಮ್ಮಾನಿತರನ್ನು ಪರಿಚಯಿಸಿದರು. ವೇದಿಕೆಯಲ್ಲಿ ಸಹ ಸಂಸ್ಥೆಗಳ ಪದಾಧಿಕಾರಿಗಳಾದ ಹರಿದಾಸ ಗಾಂಭೀರ. ದಿವಾಕರ ಆಚಾರ್ಯ, ವಸಂತಿ ಗೌಡ, ಸವಿತಾ ಎಂ ರಾವ್.ಪಿ ರಾಜಶೇಖರ ಹೆಬ್ಬಾರ್,ಕೆ.ಕುಸುಮಕರ ಗೌಡ, ಡಿ.ಸದಾಶಿವ, ಕೆ.ಈಶ್ವರಭಟ್. ಅರುಣ ಶಿಬೆಲ್ಲೊ, ಕೇಶವ ಎಂ, ಮುರಲೀಧರ ದಾಸ್ ಮೊದಲಾದವರು ಉಪಸ್ಥಿತರಿದ್ದರು. ಕರ್ನೋಡಿ ಶಾಲೆಯ ವಿಕಲಾಂಗ ಗೈಡ್ಸ್ ಪ್ರತಿಭೆ ಪಾವನಾ ಕೆ.ಎಸ್. ಅವರನ್ನು ವೇದಿಕೆಯಲ್ಲಿ ಗುರುತಿಸಿ ಗೌರವಿಸಲಾಯಿತು. ರಾಜಪ್ರಸಾದ್ ಪೋಳ್ನಾಯ ಮತ್ತು ಸ್ವರ್ಣಗೌರಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಜ್ಞಾನಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ವಂದಿಸಿದರು.
ಚಿತ್ರ/ವರದಿ: ಸಾಂತೂರು ಶ್ರೀನಿವಾಸ ತಂತ್ರಿ

maslak shilanyasa copyಮುಂಡಾಜೆ: ಮಸ್‌ಲಕ್ ಮುಂಡಾಜೆ ಇದರ ದಶವಾರ್ಷಿಕ ಕಾರ್ಯಕ್ರಮವು ಮುಂದಿನ ವರ್ಷ ನಡೆಯಲಿದ್ದು ಅದರ ಉದ್ಘಾಟನಾ ಕಾರ್ಯಕ್ರಮದ ಭಾಗವಾಗಿ ವರ್ಷವಿಡೀ ನಡೆಯಲಿರುವ ವಿವಿಧ 10 ಬಗೆಯ ಕಾರ್ಯಕ್ರಮಗಳ ಪ್ರಾರಂಭಿಕ ಹಂತ ಎಂಬಂತೆ ಫೆ. 18ರಂದು ಸಂಸ್ಥೆಯ ವಠಾರದಲ್ಲಿ ನೂತನ ಪ್ರಾರ್ಥನಾಲಯ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಅವರ ಧಾರ್ಮಿಕ ಮಾರ್ಗದರ್ಶನದಂತೆ ಮಸ್‌ಲಕ್ ಅಧ್ಯಕ್ಷ ಸಯ್ಯಿದ್ ಕಾಜೂರು ತಂಙಳ್, ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ಅಲ್‌ಹಾದಿ ತಂಙಳ್ ಉಜಿರೆ, ಮಸೀದಿ ಪ್ರಾಯೋಜಕರಾದ ಮುಹ್ಯುದ್ದೀನ್ ಮುಕ್ರಿ ಹಾಜಿ ಕನ್ನಂಗಾರ್, ಅವರ ಮೂವರು ಮಕ್ಕಳು ಜೊತೆಯಾಗಿ ಶಿಲಾನ್ಯಾಸ ನಡೆಸಿದರು.
ಈ ಸಂದರ್ಭ ಟಿ.ಹೆಚ್. ಕಾಸಿಂ ಮದನಿ ಕರಾಯ, ಅಬ್ದುಲ್ ಹಕೀಂ ಸರಳಿಕಟ್ಟೆ, ಉಮರ್‌ಕುಂಞಿ ನಾಡ್ಜೆ, ಬಿ. ಹೆಚ್. ಹಮೀದ್ ಕಿಲ್ಲೂರು, ಮುಹಮ್ಮದ್ ಹಾಜಿ ಕಲ್ಯಾಣ್‌ಪುರ, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ. ನಝೀರ್ ಬೆಳ್ತಂಗಡಿ, ಸುನ್ನೀ ಸಂಯುಕ್ತ ಜಮಾಅತ್ ಉಪಾಧ್ಯಕ್ಷ ಎಂ.ಕೆ. ಬದ್ರುದ್ದೀನ್ ಪರಪ್ಪು, ಮೋನು ಹಾಜಿ ಕಕ್ಕಿಂಜೆ, ಕೆಸಿಎಫ್ ಸಂಘಟಕ ಕೆ.ಎಮ್. ಇಕ್ಬಾಲ್ ಕಾಜೂರು, ಖಾಲಿದ್ ಮುಸ್ಲಿ ಯಾರ್ ಉಜಿರೆ, ಅನುಗ್ರಹ ಟ್ರೈನಿಂಗ್ ಕಾಲೇಜು ಪ್ರಾಂಶುಪಾಲ ತಲ್‌ಹತ್ ಎಂ.ಜಿ, ಅನುಗ್ರಹ ಸ್ಕೂಲ್ ಬುಕ್ ಕಂಪೆನಿ ಯ ಅಶ್ರಫ್ ಫೈಝಿ, ಬಿ.ಎ. ಯೂಸುಫ್ ಶರೀಫ್, ನಿಡಿಗಲ್ ಮಸೀದಿ ಅಧ್ಯಕ್ಷ ಮುಜೀಬ್ ಸಾಹೇಬ್, ಹನೀಫ್ ಮುಸ್ಲಿಯಾರ್, ಅಬ್ದುಲ್ ಹಮೀದ್, ಅಬ್ದುಲ್ ಅಝೀಝ್, ಜೆ.ಹೆಚ್. ಅಬ್ಬಾಸ್ ಕಾಜೂರು, ಕಾಜೂರು ಎಸ್‌ವೈಎಸ್ ಅಧ್ಯಕ್ಷ ಅಬ್ದುಲ್ ರಝಾಕ್ ಮುಸ್ಲಿಯಾರ್, ರಶೀದ್ ಬಲಿ ಪಾಯ, ಕೆರೀಮ್ ಕೆ, ಎಸ್. ಹಾಜಬ್ಬ, ಶಬೀರ್, ಎಸ್. ಅಬ್ದುಲ್ಲ ರೋಝ, ಅಬ್ದುಲ್ ಖಾದರ್, ಪುತ್ತಾಕ ಕೂಳೂರು, ಇಬ್ರಾಹಿಂ ದರ್ಖಾಸು, ರಮ್ಲಾ, ಮುಝಮ್ಮಿಲ್, ಲೆತೀಫ್, ಉಸ್ಮಾನ್ ಮೂಡಿಗೆರೆ, ಅಯೂಬ್ ಆಲಿಕುಂಞಿ, ಅಬ್ಬಾಸ್ ಸಿ, ಹಮೀದ್ ನೆಕ್ಕರೆ, ಉಸ್ಮಾನ್ ಕೂಳೂರು, ಎಸ್‌ವೈಎಸ್ ಅಧ್ಯಕ್ಷ ಅಬ್ದುಲ್ ಮಜೀದ್, ಕಾರ್ಯದರ್ಶಿ ಇಬ್ರಾಹಿಂ ಕನ್ಯಾಡಿ, ಮೊದಲಾದ ಗಣ್ಯರು ಭಾಗಿಯಾಗಿದ್ದರು. ಮಸ್ ಲಕ್ ಖತೀಬ್ ಇಬ್ರಾಹಿಂ ಸಖಾಫಿ ಕಬಕ ಮಾರ್ಗ ದರ್ಶನ ನೀಡಿದರು. ಪ್ರ. ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಧನ್ಯವಾದವಿತ್ತರು.

rhydam copy

ridam copy

ಉಜಿರೆ : ನೃತ್ಯ ಅಭ್ಯಾಸದಿಂದ ಮಾನಸಿಕ ಆರೋಗ್ಯ, ಹೈದಯಕ್ಕೆ ಆಮ್ಲಜನಕ, ತೂಕ ಸಮತೋಲನ, ಮಾನಸಿಕ ಖಿನ್ನತೆ ದೂರ, ಶಕ್ತಿವರ್ಧನೆ, ದೇಹದ ಸಮತೋಲನ, ದೈಹಿಕ ಆರೋಗ್ಯ, ಅಂಗಾಂಗ ಚಲನೆ, ಆತ್ಮವಿಶ್ವಾಸ ಮತ್ತು ಚಟುವಟಿಕೆ ವೃದ್ಧಿಯ ದಶಾಂಶ ಸೂತ್ರಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆಯೆಂದು ಉಜಿರೆಯ ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ರೆ| ಫಾ| ಉದಯ ಫೆರ್ನಾಂಡೀಸ್ ನುಡಿದರು.
ಅವರು ಫೆ.18ರಂದು ಉಜಿರೆ ರಥಬೀದಿಯ ರಂಗವೇದಿಕೆಯಲ್ಲಿ ಉಜಿರೆ ಟಾಪ್ ಎಂಟರ್‌ಟೈನರ‍್ಸ್‌ನ 15ನೇ ವರ್ಷದ ರಿದಂ 2017ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಅಧ್ಯಕ್ಷತೆ ವಹಿಸಿದ್ದ ಹೈಕೊರ್ಟ್ ನ್ಯಾಯಾವಾದಿ ಹರೀಶ್ ಪೂಂಜ ಸಮಾಜದ ಯುವ ಪ್ರತಿಭೆಗಳನ್ನು ಗುರುತಿಸಿ ಕಲೆಗೆ ಪ್ರೋತ್ಸಾಹ ನೀಡುವ ಸಂಸ್ಥೆಯ ಪ್ರಯತ್ನ ಶ್ಲಾಘನೀಯ. ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಕೆತ್ತುವ ಶಿಲ್ಪಿಯಾಗಿ ಸಾಂಸ್ಕೃತಿಕ ಶಿಕ್ಷಣದ ಮೂಲಕ ಸಂಸ್ಕೃತಿ ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲೆಂದು ಆಶಿಸಿ ಶುಭ ಕೋರಿದರು. ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯರ ಕಾರ್ಯಕ್ರಮ ಉದ್ಘಾಟಿಸಿ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಯುವ ಉದ್ಯಮಿ ಉಮೇಶ ಶೆಟ್ಟಿ, ಜ್ಯೋತಿಷಿ ಎಸ್.ಆರ್ ಆಚಾರ್ಯ, ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ.ಕೋಟ್ಯಾನ್ ಬಳಂಜ, ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಸಾಂಸ್ಕೃತಿಕ ನಿರ್ದೇಶಕ ರಾಕೆಶ್ ಕುಮಾರ್ ಮೂಡುಕೋಡಿ ಸಮಾರಂಭಕ್ಕೆ ಶುಭ ಕೋರಿ ಪ್ರಾಯೋಜಕರು ಹಾಗೂ ವಿದ್ಯಾರ್ಥಿಗಳ ಪೋಷಕರಿಗೆ ಸ್ಮರಣಿಕೆ ವಿತರಿಸಿದರು. ನೃತ್ಯ ನಿರ್ದೇಶಕ ಕೃಷ್ಣ ಕುಮಾರ್ ಮತ್ತು ಸಹಾಯಕ ನಿರ್ದೇಶಕ ಉದಯ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೋಹನ ಮಾಚಾರು ನಿರೂಪಿಸಿ, ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಹರೀಶ ನಾಯ್ಕ ವಂದಿಸಿದರು. ಚೇತನ್ ನಿರೂಪಣೆಯಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ನಡೆಯಿತು.

shagrithraya ಕೊಕ್ಕಡ : ಸುದ್ದಿ ಬಿಡುಗಡೆ ಪತ್ರಿಕೆಯ ಗೌರವ ವರದಿಗಾರ, ವಿಜಯ ಕರ್ನಾಟಕ ಪತ್ರಿಕೆಯ ಕೊಕ್ಕಡ, ನೆಲ್ಯಾಡಿ ವರದಿಗಾರ, ಸುಬ್ರಹ್ಮಣ್ಯ ಶಗ್ರಿತ್ತಾಯ ಅವರಿಗೆ ಫೆ. 22ರಂದು ರಾತ್ರಿ ಕೊಕ್ಕಡದಲ್ಲಿ ಹಲ್ಲೆ ನಡೆಸಲಾಗಿದೆ.
ಕೊಕ್ಕಡದ ಖಾಸಗಿ ವಾಣಿಜ್ಯ ಸಂಕೀರ್ಣವೊಂದರ ಮಾಲಿಕ ಸುರೇಶ್ ಯಾನೆ ನಾರಾಯಣ ಶಬರಾಯ ಎಂಬವರು ಕೈಯಿಂದ ಹೊಡೆದು, ದೂಡಿ ಹಾಕಿ ಹಲ್ಲೆ ನಡೆಸಿದ್ದು, ಹಲ್ಲೆಗೆ ಶ್ರೀಕಾಂತ್ ಆಚಾರ್ಯ ಎಂಬವರು ಪ್ರೇರಣೆ ನೀಡುರುವುದಾಗಿ ಶಗ್ರಿತ್ತಾಯರವರು ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೊಕ್ಕಡ ಜೋಡು ಮಾರ್ಗದ ಚರಂಡಿ ಸಮಸ್ಯೆಯ ಬಗ್ಗೆ ವರದಿ ಮಾಡಿದ್ದು, ಬಳಿಕ ಶಾಸಕರ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಬಗೆಹರಿಸಲಾಗಿತ್ತು.
ಅದೇ ವರದಿ ಕುರಿತು ಶ್ರೀಕಾಂತ್ ಆಕ್ಷೇಪವನ್ನು ಎತ್ತಿದ್ದು ಫೆ. 22ರಂದು ರಾತ್ರಿ ವೇಳೆ ಕೊಕ್ಕಡದಲ್ಲಿ ಮಾತಿಗೆಳೆದಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ನಾರಾಯಣ ಶಬರಾಯ ಇದೇ ವಿಚಾರದಲ್ಲಿ ದೋಷಾರೋಪ ಮಾಡುತ್ತಾ, ಬೈಯುತ್ತಾ ಮೈಮೇಲೆ ಕೈ ಹಾಕಿ, ತನ್ನ ಕಂಪೌಂಡ್ ಒಳಗೆ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆಂದು ದೂರು ನೀಡಿದ್ದಾರೆ.

Divyashree heraje copyಬೆಳ್ತಂಗಡಿ : ಮಂಗಳೂರು ವಿವಿ ಶೈಕ್ಷಣಿಕ ಸಾಲಿನ ಬಿಎಡ್ ಫಲಿತಾಂಶ ಹೊರಬಿದ್ದಿದ್ದು ಪ್ರಸನ್ನ ಬಿಎಡ್ ಕಾಲೇಜಿನ ದಿವ್ಯಶ್ರೀ ಕೆ. ಹೇರಾಜೆ ಅವರು 83 ಶೇ. ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದು, ವಿವಿ ಮಟ್ಟದಲ್ಲಿ 9ನೇ ರ‍್ಯಾಂಕ್ ಗಳಿಸಿದ್ದಾರೆ.
ಬಂಟ್ವಾಳ ತಾಲೂಕು ಕೆಮ್ಮಟೆ ಧರ್ಣಪ್ಪ ಪೂಜಾರಿ ಮತ್ತು ಶೋಭಾ ದಂಪತಿಯ ಪುತ್ರಿಯಾಗಿರುವ ದಿವ್ಯಶ್ರೀ ಅವರು ಬೆಳ್ತಂಗಡಿಯ ಚರಣ್‌ರಾಜ್ ಹೇರಾಜೆ ಅವರ ಧರ್ಮಪತ್ನಿಯಾಗಿದ್ದಾರೆ. ಸರಕಾರಿ ಪ್ರೌಢ ಶಾಲೆ ನಾವೂರಿನಲ್ಲಿ ಪ್ರೌಢ ಶಿಕ್ಷಣ, ಎಸ್‌ವಿಎಸ್ ಕಾಲೇಜು ಬಂಟ್ವಾಳದಲ್ಲಿ ಪದವಿ ಮತ್ತು ಮಂಗಳಗಂಗೋತ್ರಿಯಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಅಭ್ಯಸಿಸಿರುತ್ತಾರೆ.

sdmಉಜಿರೆ : ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ನವೆಂಬರ್/ಡಿಸೆಂಬರ್ 2015 ರಲ್ಲಿ ನಡೆಸಿದ ಬಿ.ಎಡ್. ಪರೀಕ್ಷೆ ಯಲ್ಲಿ ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು 3 ರ‍್ಯಾಂಕ್‌ಗಳನ್ನು ಪಡೆದಿರುತ್ತಾರೆ. ಸೌಮ್ಯನಾಯಕಿ ಎಂ ಆರ್ ಶೇ.84.80 ಅಂಕಗಳನ್ನು ಪಡೆದು 3ನೇ ರ‍್ಯಾಂಕನ್ನು, ಸಪ್ನ ಪಿ ಎ  ಶೇ.83.60 ಅಂಕಗಳನ್ನು ಪಡೆದು 6ನೇ ರ‍್ಯಾಂಕನ್ನು ಹಾಗೂ ಮಲ್ಲಿಕಾ ಕೆ ಆರ್ ಶೇ.83 ಅಂಕಗಳನ್ನು ಪಡೆದು 9ನೇ ರ‍್ಯಾಂಕ್‌ನ್ನು ಪಡೆದಿರುತ್ತಾರೆ.  ನವೆಂಬರ್/ಡಿಸೆಂಬರ್  2015ರಲ್ಲಿ ಬಿ.ಎಡ್. ಪಬ್ಲಿಕ್ ಪರೀಕ್ಷೆಗೆ ಹಾಜರಾದ ಒಟ್ಟು 99 ವಿದ್ಯಾರ್ಥಿಗಳಲ್ಲಿ 74 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲೂ, 25 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲೂ ತೇರ್ಗಡೆಯಾಗಿ ಶೇ.100 ಫಲಿತಾಂಶವನ್ನು ಪಡೆದಿರುತ್ತದೆ. ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ, ಅಧ್ಯಕ್ಷರು, ಕಾರ್ಯದರ್ಶಿಗಳು, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ.

dharmasthala sdm hospital uchitha seve copyಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಶಿವರಾತ್ರಿಯ ಸಂದರ್ಭದಲ್ಲಿ ರಾಜ್ಯದ ವಿವಿದೆಡೆಯಿಂದ ಸಾವಿರಾರು ಭಕ್ತರು ಪಾದಯಾತ್ರೆಯ ಮೂಲಕ ಬರುತ್ತಿದ್ದು, ಕಳೆದ ಮೂರು ವರ್ಷಗಳಿಂದ ಪಾದಯಾತ್ರಾರ್ಥಿಗಳಿಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ಮೂಲಕ ಉಚಿತ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತಿದೆ. ಫೆ.20ರಿಂದ 24ರವರೆಗೆ ಪಾದ ಯಾತ್ರಾರ್ಥಿಗಳ ಸೇವೆಗೆ 6 ಕಡೆಗಳಲ್ಲಿ ಶಿಬಿರ ತೆರೆಯಲಾಗಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶಿಬಿರಗಳಿಗೆ ಭೇಟಿ ನೀಡಿ ವ್ಯವಸ್ಥೆಯ ಪರಿಶೀಲನೆ ನಡೆಸಿದರು.
ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರಾರ್ಥಿಗಳು ಬರುವ ನಿರೀಕ್ಷೆಯಿದ್ದು, ಚಾರ್ಮಾಡಿ, ಸೋಮಂತ್ತಡ್ಕ, ಬೂಡುಜಾಲು, ಸತ್ಯನ್‌ಪಲ್ಕೆ ಹಾಗೂ ಧರ್ಮಸ್ಥಳಗಳಲ್ಲಿ ಪಾದಯಾತ್ರಾರ್ಥಿಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡಲು ಶಿಬಿರಗಳನ್ನು ಆಯೋಜಿಸಲಾಗಿದೆ.ಅದಲ್ಲದೆ ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ಸೇವೆ ನೀಡಲು ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಪಾದಯಾತ್ರಾರ್ಥಿಗಳ ಸುರಕ್ಷತೆಗಾಗಿ 2 ಆಂಬ್ಯುಲೆನ್ಸ್‌ಗಳನ್ನು ಕೂಡ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಸಂಚಾರಿ ಆಸ್ಪತ್ರೆಯ ಮೂಲಕ ವೈದ್ಯಕೀಯ ಸೇವೆ ದೊರೆಯಲಿದೆ.
ಪಾದಯಾತ್ರಾರ್ಥಿಗಳಿಗೆ ವೈದ್ಯಕೀ ಯ ಸೇವೆ ನೀಡಲು ಸೇವಾಮ ನೋಭಾವ ಹೊಂದಿರುವ ಬೆಂಗಳೂರಿನ ತಜ್ಞ ವೈದ್ಯರುಗಳಾದ ಡಾ| ಕೆ.ಎಲ್ ಪಂಚಾಕ್ಷರಿ, ಡಾ| ಎನ್. ಜಯಮ್ಮ, ಡಾ| ನಾಗರಾಜು, ಡಾ| ಚನ್ನೇಶ್, ಡಾ| ಮಂಜುನಾಥ ಬೆಟಗೇರಿ, ಡಾ| ಹೆಚ್.ವಿ ಪ್ರಾಣೇಶ್ ಇವರು ಉಚಿತ ವೈದ್ಯಕೀಯ ಸೇವೆ ನೀಡಲಿದ್ದಾರೆ ಎಂದು ಆಸ್ಪತ್ರೆಯ ಕಾರ್ಯನಿರ್ವಾಹಣಾಧಿಕಾರಿ ಎನ್ ಮನ್ಮಥ್ ಕುಮಾರ್ ಶಿಬಿರದ ವ್ಯವಸ್ಥೆಯ ಬಗ್ಗೆ ವಿವರಿಸಿದರು.
ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ ಪೂವಣಿ, ಎಸ್.ಡಿ. ಎಂ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಪ್ರಭಾಶ್ ಕುಮಾರ್, ವೈದ್ಯರಾದ ಡಾ| ಸಾತ್ವಿಕ್ ಜೈನ್ ಉಪಸ್ಥಿತರಿದ್ದರು.

SDM ISTE prashasthi copyಉಜಿರೆ : ದಿಲ್ಲಿಯ ಭಾರತೀಯ ತಾಂತ್ರಿಕ ಶಿಕ್ಷಣ ಸಮಾಜ (ಐಎಸ್‌ಟಿಇ) ಇವರು ಕೊಡ ಮಾಡುವ ಅತ್ಯುತ್ತಮ ಐಎಸ್‌ಟಿಇ ಘಟಕ ಪ್ರಶಸ್ತಿಯನ್ನು ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲ ಯಕ್ಕೆ ನೀಡಿ ಗೌರವಿಸಿದೆ. ಪಂಜಾಬಿನ ಲೂದಿಯಾನದಲ್ಲಿ ನಡೆದ 46ನೇ ರಾಷ್ಟ್ರೀಯ ವಾರ್ಷಿಕ ಕಾರ್ಯಕಾರಿಣಿ ಯಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಿತು. ಕಾಲೇಜಿನ ಪ್ರಾಚಾರ್ಯ ಡಾ| ಕೆ. ಸುರೇಶ್ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಹಿಂದೆಯೂ ಎರಡು ಬಾರಿ ಈ ಕಾಲೇಜು ರಾಜ್ಯಮಟ್ಟದಲ್ಲಿ ಉತ್ತಮ ಘಟಕ ಪ್ರಶಸ್ತಿ ಪಡೆದಿದ್ದು ಇದೀಗ ಸತತ 2 ಬಾರಿ ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿಕೊಂಡಿದೆ. ಈ ಪ್ರಶಸ್ತಿಯ ಹಿಂದೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸಕ್ರೀಯವಾಗಿ ಶ್ರಮಿಸಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದರು.
ಈ ಸಂಬಂಧ ಫೆ. 19 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಅವರ ಸಮ್ಮುಖ ಎಸ್‌ಡಿಐ ಐಟಿ ಕಾಲೇಜಿನ ಪ್ರಾಚಾರ್ಯ ಡಾ| ಕೆ ಸುರೇಶ್ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು.
ಎಸ್‌ಡಿಎಂ ಐಟಿ ಕಾಲೇಜು 2007 ರಲ್ಲಿ ಸ್ಥಾಪನೆಯಾಗಿರುವ ಗ್ರಾಮೀಣ ಪ್ರದೇಶದ ಸಂಸ್ಥೆಯಾಗಿದ್ದು ಇಲ್ಲಿನ ವಿದ್ಯಾರ್ಥಿಗಳಿಗೆ ವಿಶ್ವದರ್ಜೆಯ ಉತ್ತಮ ತಾಂತ್ರಿಕ ಶಿಕ್ಷಣವನ್ನು ನೀಡುತ್ತಾ ಬರುತ್ತಿದೆ. ಉಪನ್ಯಾಸಕರಿಗೆ ಹಾಗೂ ವಿದ್ಯಾರ್ಥಿಗಳಿಗಾಗಿ ಉದ್ಯಮಶೀಲತಾ ಕೌಶಲ್ಯಾಭಿವೃದ್ಧಿ ಕಾರ್ಯಾಗಾರಗಳನ್ನು ನಿಯ ಮಿತವಾಗಿ ನಡೆಸಿಕೊಂಡು ಬರುತ್ತಿದ್ದು ಇದರ ಸದುಪಯೋಗವನ್ನು ರಾಜ್ಯಾಧ್ಯಂತ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕವೃಂದ ಪ್ರಯೋಜನ ಪಡೆಯುತ್ತಿದೆ.

belthangady patrakartara sanga bangera sanmana copyಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಐದು ಬಾರಿ ಶಾಸಕನಾಗಿ ಜನರ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ತಾಲೂಕಿನಲ್ಲಿ ದಾಖಲೆ ಮೊತ್ತದ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇನೆ. ಇನ್ನೂ ಒಂದು ವರ್ಷದ ಅವಕಾಶವಿದ್ದು, ಈ ಅವಧಿಯಲ್ಲಿ ರೂ. 150 ಕೋಟಿಗೂ ಮಿಕ್ಕಿ ಅನುದಾನದ ಕಾಮಗಾರಿ ತರಿಸಲು ಪ್ರಯತ್ನ ಮಾಡುವುದಾಗಿ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಅವರನ್ನು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಫೆ.21ರಂದು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಶಾಸಕರು ಪತ್ರಕರ್ತರು ರಾಜಕಾರಣಿಗಳಿಗೆ ಇದುವರೆಗೆ ಎಲ್ಲಿಯೂ ಸನ್ಮಾನಿಸಿಲ್ಲ. ಬೆಳ್ತಂಗಡಿ ತಾಲೂಕಿನ ಎಲ್ಲಾ ಪತ್ರಕರ್ತರು ಒಟ್ಟಾಗಿ ಮಾಡಿರುವ ಸನ್ಮಾನ ನನ್ನ ಜೀವನದ ಅತೀ ದೊಡ್ಡ ಸನ್ಮಾನವಾಗಿದೆ ಎಂದು ಅಭಿಪ್ರಾಯ ಪಟ್ಟರು.
1968ರಲ್ಲಿ ನನ್ನ ಅಣ್ಣ ಚಿದಾನಂದ ಶಾಸಕರಾದ ಅವಧಿಯಲ್ಲಿ ತಾನು ರಾಜಕೀಯ ಕ್ಷೇತ್ರಕ್ಕೆ ಬಂದಿದ್ದು, 2018ಕ್ಕೆ 50 ವರ್ಷಗಳಾಗುತ್ತದೆ. ನಾನು ರಾಜಕೀಯದಲ್ಲಿ ಗಳಿಸಿದ್ದು, ಏನೂ ಇಲ್ಲ, ಕಳೆದುಕೊಂಡದ್ದೇ ಜಾಸ್ತಿ, ಒಳ್ಳೆಯ ಕೆಲಸಕ್ಕೆ ದೇವರ ಆರ್ಶೀವಾದ ಇದೆ ಎಂಬುದಕ್ಕೆ ನಾನೇ ಸಾಕ್ಷಿ, ರಾಜಕೀಯದಲ್ಲಿ ಹಣ ಮಾಡುವುದಿದ್ದರೆ ಎಷ್ಟೋ ಮಾಡಬಹುದಿತ್ತು ಆದರೆ ಆ ಇರಾದೆ ನನ್ನಲ್ಲಿಲ್ಲ, ಇದರಿಂದಾಗಿ ನನ್ನ ಮೇಲೆ ಎಷ್ಟೋ ಆಪಾದನೆಗಳು, ಹಲವಾರು ಕಷ್ಟಗಳು ಎದುರಾದರೂ ದೇವರು ರಕ್ಷಣೆ ನೀಡಿದ್ದಾರೆ ಎಂದರು.
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ 11 ರಸ್ತೆಗಳಿಗೆ ರೂ.20 ಕೋಟಿ, ನನ್ನ ಶಾಸಕ ನಿಧಿಯಲ್ಲಿ 3 ಕೋಟಿ, ಪುದುವೆಟ್ಟು ಗ್ರಾಮದಲ್ಲಿ ಹಲವು ವರ್ಷಗಳ ಬೇಡಿಕೆಯಾದ ಸೇತುವೆಗೆ ರೂ.7.50 ಕೋಟಿ, ಬೆಳ್ತಂಗಡಿಯಲ್ಲಿ ಮಿನಿ ವಿಧಾನ ಸೌಧ ಸೇರಿದಂತೆ ರಸ್ತೆ, ಸೇತುವೆ, ವಿದ್ಯುತ್, ಕುಡಿಯುವ ನೀರು ಮೊದಲಾದ ಕಾಮಗಾರಿಗಳನ್ನು ಮಾಡಿಸಿದ್ದೇನೆ. ನಕ್ಸಲ್ ಬಾಧಿತ ಪ್ರದೇಶದಲ್ಲಿ 23 ಗೌರವ ಶಿಕ್ಷಕರ ನೇಮಕ ಮಾಡಿದ್ದು, ತಾಂತ್ರಿಕ ಕಾರಣದಿಂದ ಅವರಿಗೆ ವೇತನ ಸಿಗದಿದ್ದಾಗ ನನ್ನ ಕೈಯಿಂದ ರೂ.7.50 ಲಕ್ಷ ಕೊಟ್ಟಿದ್ದೇನೆ ಎಂದರು.
ಮೆಡಿಕಲ್ ಕಾಲೇಜಿಗೆ ಪ್ರಯತ್ನ: ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಮಂಜೂರಾಗಲಿದ್ದು, ಅದನ್ನು ಬೆಳ್ತಂಗಡಿಗೆ ತರುವ ಪ್ರಯತ್ನ ನಡೆಸುತ್ತಿದ್ದೇನೆ. ತಣ್ಣೀರುಪಂತಕ್ಕೆ ಪಾಲಿಟೆಕ್ನಿಕ್, ಬೆಳ್ತಂಗಡಿ ತಾಲೂಕಿಗೆ ರಬ್ಬರ್ ಕ್ಲಸ್ಟರ್ ಪ್ರಯತ್ನ, ಹೊಸಂಗಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರಾಗಿದೆ. ಮೇಲಂತಬೆಟ್ಟು ಪ್ರಥಮ ದರ್ಜೆ ಕಾಲೇಜಿನ ಬಳಿ ಕೈಗಾರಿಕಾ ಪ್ರದೇಶಕ್ಕೆ 9.98 ಜಾಗ ಹಿಂದೆ ಮೀಸಲಿಟ್ಟಿದ್ದು, ಅಲ್ಲಿಗೆ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಿ ಕೈಗಾರಿಕೆ ಮಾಡುವವರಿಗೆ ನೀಡಲಾಗುವುದು ಎಂದು ತಿಳಿಸಿದರು. ಪತ್ರಕರ್ತರ ಸಂಘದ ನೂತನ ಕಟ್ಟಡಕ್ಕೆ ತನ್ನ ನಿಧಿಯಿಂದ ರೂ.5ಲಕ್ಷ ಅನುದಾನ ನೀಡುವುದಾಗಿ ಭರವಸೆಯಿತ್ತರು.
ಅಧ್ಯಕ್ಷತೆಯನ್ನು ವಹಿಸಿದ್ದ ಪತ್ರಕರ್ತರ ಸಂಘದ ಅಧ್ಯಕ್ಷ ದೇವಿ ಪ್ರಸಾದ್ ತಾಲೂಕಿನಲ್ಲಿ ಕುಡಿಯುವ ನೀರಿನ ಬಹಳಷ್ಟು ಸಮಸ್ಯೆಯಿದ್ದು, ತಾಲೂಕಿಗೆ 100 ಕಿಂಡಿಅಣೆಕಟ್ಟು ಮಂಜೂರು ಮಾಡುವಂತೆ ಶಾಸಕರಲ್ಲಿ ವಿನಂತಿಸಿದರು.
ಪತ್ರಕರ್ತರಾದ ಪುಷ್ಪರಾಜ ಶೆಟ್ಟಿ ಸ್ವಾಗತಿಸಿದರು. ಲಕ್ಷ್ಮೀ ಮಚ್ಚಿನ ಸನ್ಮಾನಿತರನ್ನು ಪರಿಚಯಿಸಿದರು. ದೀಪಕ್ ಆಠವಳೆ ಸನ್ಮಾನ ಪತ್ರ ವಾಚಿಸಿದರು. ಶಿಬಿ ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿ, ಸಂಘದ ಕಾರ್ಯದರ್ಶಿ ಹೃಷಿಕೇಶ್ ಧರ್ಮಸ್ಥಳ ವಂದಿಸಿದರು. ಪತ್ರಕರ್ತರಾದ ಆರ್.ಎನ್. ಪೂವಣಿ, ಬಿ.ಎಸ್. ಕುಲಾಲ್, ಮಂಜುನಾಥ ರೈ, ಆಶ್ರಫ್‌ಆಲಿ ಕುಂಞ, ಪದ್ಮನಾಭ ವೇಣೂರು, ಮನೋಹರ ಬಳೆಂಜ, ರಾಜೇಶ್ ಪೆಂರ್ಬುಡ, ಭುವನೇಶ್, ಶ್ರೀನಿವಾಸ ತಂತ್ರಿ, ಆಚುಶ್ರೀ ಬಾಂಗೇರು, ಧನಕೀರ್ತಿ ಆರಿಗ, ಸಂಜೀವ ಎನ್.ಸಿ. ಉಪಸ್ಥಿತರಿದ್ದರು.

z copyಸಗುಣ, ಶೀನಪ್ಪ, ಅಶೋಕ್ ದೇವಾಡಿಗ, ಪ್ರತಾಪ್, ರಘುನಾಥ್ ಶೆಟ್ಟಿ, ಪ್ರಕಾಶ್ ಹೆಗ್ಡೆ, ನಾರಾಯಣ ಗೌಡ,, ರಮೇಶ್ ಕೋಟ್ಯಾನ್, ಜೋಯ್ ಕಿಶೋರ್ ಮೆಂಡೋನ್ಸಾ, ಜಯಂತಿ, ರೂಪಾ, ಮಾಧವ, ನಂದ ಕುಮಾರ್

11 ಮಂದಿ ಬಿಜೆಪಿ ಬೆಂಬಲಿತರ ಗೆಲುವು : ಮತ ಅಸಿಂಧುಗೊಳಿಸಿದ ಕ್ರಮಕ್ಕೆ ಕಾಂಗ್ರೆಸ್ ಆಕ್ಷೇಪ

ಶಿರ್ಲಾಲು : ಶಿರ್ಲಾಲು ಹಾಲು ಉತ್ಪಾದಕರ ಸಹಕಾರಿ ಸಂಘದ 11 ಮಂದಿ ನಿರ್ದೇಶಕರ ಸ್ಥಾನಕ್ಕೆ ಫೆ. ೧೮ ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಆದರೆ ಈ ಆಯ್ಕೆಯನ್ನು ವಿರೋಧಿಸಿದ ಕಾಂಗ್ರೆಸ್ ಬೆಂಬಲಿತರು ಮತ ಎಣಿಕೆ ಮತ್ತು ಚುನಾವಣೆ ನಡೆಸಿದ ಪ್ರಕ್ರೀಯೆ ಸರಿಯಾಗಿಲ್ಲ ಹಾಗೂ ಮತಪತ್ರದಲ್ಲಿ ಮೀಸಲಾತಿ ಸೇರಿದಂತೆ ಎಲ್ಲಾ ಅಭ್ಯರ್ಥಿಗಳ ಹೆಸರು ಒಂದೇ ಮತ ಪತ್ರದಲ್ಲಿ ಹಾಕಿ ಮತದಾರರಲ್ಲಿ ಗೊಂದಲ ಉಂಟುಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಮತ ಎಣಿಕೆ ಸ್ಥಳದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಜಮಾಯಿಸಿ ಹೊ ಕೈ ಮತ್ತು ಗೊಂದಲ ನಡೆದು ಮತ ಎಣಿಕೆ ಪ್ರಕ್ರೀಯೆ ಮುಗಿಯುವಾಗ ರಾತ್ರಿ 1 ಗಂಟೆ ದಾಟಿದ ಪ್ರಸಂಗವೂ ನಡೆದಿದೆ.
ಚುನಾವಣೆಯಲ್ಲಿ ಜಯಗಳಿಸಿದವರು ಯಾರ‍್ಯಾರು?
ಸಹಕಾರಿ ಸಂಘದ ಒಟ್ಟು 13 ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತರಾದ ಸಗುಣ ಪುಚ್ಚೆದೊಟ್ಟು ಮತ್ತು ಬಿಜೆಪಿ ಬೆಂಬಲಿತರಾದ ಶೀನಪ್ಪ ಮಲೆಕ್ಕಿಲ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಶೋಕ್ ದೇವಾಡಿಗ, ಪ್ರತಾಪ್, ರಘುನಾಥ್ ಶೆಟ್ಟಿ, ಪ್ರಕಾಶ್ ಹೆಗ್ಡೆ, ನಾರಾಯಣ ಗೌಡ, ರಮೇಶ್ ಕೋಟ್ಯಾನ್, ಜೋಯ್ ಕಿಶೋರ್ ಮೆಂಡೋನ್ಸಾ, ಜಯಂತಿ, ರೂಪಾ, ಮಾಧವ ಮತ್ತು ನಂದ ಕುಮಾರ್ ಅವರು ಜಯಗಳಿಸಿದ್ದಾರೆ. ಆಯ್ಕೆಯಾದ ಎಲ್ಲರೂ ಬಿ.ಜೆ.ಪಿ ಬೆಂಬಲಿತರು.
ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದವರು ಯಾರ‍್ಯಾರು?
ಒಟ್ಟು 11 ಸ್ಥಾನಗಳಿಗೆ ಕುಶಾಲಪ್ಪ ಗೌಡ, ಕೇಶವ ಬಂಗೇರ, ವಾಸು ಹೆಗ್ಡೆ, ಕೃಷ್ಣಪ್ಪ ಪೂಜಾರಿ, ಅಂತೋಣಿ, ಪ್ರೇಮಾ, ಗುಣಮ್ಮ ಆರ್ ಜೈನ್, ಹರ್ಷ ಆರ್ ಜೈನ್, ಗೋಪಾಲ ಪೂಜಾರಿ, ರಮಾನಂದ ಕೆ ಇವರು ಸ್ಪರ್ಧಾ ಕಣದಲ್ಲಿದ್ದರೂ ಎಲ್ಲರೂ ಪರಾಭವಗೊಂಡಿದ್ದಾರೆ. ಇನ್ನೋರ್ವ ಅಭ್ಯರ್ಥಿ ಸುರೇಶ್ ಸಪಲ್ಯ ಅವರೂ ಸ್ಪರ್ಧಿಸಿದ್ದು. ಅವರೂ ಕೂಡ ಪರಾಭವಗೊಂಡಿದ್ದಾರೆ.
ಗೊಂದಲದ ಏನು?
ಬಿಜೆಪಿ ಕಡೆಯಿಂದ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಚುನಾವಣೆ ನಡೆದ 11 ಸ್ಥಾನಗಳಲ್ಲಿ 7 ಸ್ಥಾನಗಳು ಸಾಮಾನ್ಯ ಮೀಸಲಾತಿ, 2 ಮಹಿಳೆ ಮತ್ತು 2 ಹಿಂದುಳಿದ ವರ್ಗಕ್ಕೆ ನಿಗಧಿಯಾಗಿತ್ತು. ಅಂತೆಯೇ ಚುನಾವಣೆ ಕೂಡ ನಡೆದು ಒಟ್ಟು268 ಮತಗಳು ಚಲಾವಣೆಗೊಂಡಿದ್ದವು. ರಾತ್ರಿಯೇ ಮತ ಎಣಿಕೆ ಪ್ರಕ್ರೀಯೆ ಪ್ರಾರಂಭವಾಗಿ, ಮತಪತ್ರಗಳನ್ನು 25 ರಂತೆ ಕಟ್ಟು ಮಾಡಿ ಇಡುವ ವೇಳೆ ಲೆಕ್ಕಕ್ಕಿಂತ ಜಾಸ್ತಿ ಮತಗಳು ಒತ್ತಲ್ಪಟ್ಟಿದ್ದ 138 ಮತಗಳು ಕುಲಗೆಟ್ಟದ್ದೆಂದು ಚುನಾವಣಾಧಿಕಾರಿ ಚಂದ್ರಶೇಖರ್ ಅವರು ತಿರ್ಮಾನಕ್ಕೆ ಬಂದು ಅದನ್ನು ಪ್ರತ್ಯೇಕಿಸಿಟ್ಟಿದ್ದರು. ಈ ಕ್ರಮವನ್ನು ಖಂಡಿಸಿದ ಕಾಂಗ್ರೆಸ್ ಬೆಂಬಲಿತರು, ಹಾಗಾದರೆ ಮೀಸಲಾತಿಗೆ ತಕ್ಕುದಾಗಿ ಪ್ರತ್ಯೇಕ ಮತ ಪತ್ರ ಮಾಡಬೇಕಾಗಿತ್ತು. ಒಂದೇ ಪತ್ರದಲ್ಲಿ ಎಲ್ಲಾ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮತ ಎಣಿಕೆ ಕೇಂದ್ರದಲ್ಲಿ ಕಾಂಗ್ರೆಸ್ ಬೆಂಬಲಿತರು ಮತ್ತು ಬಿಜೆಪಿ ಬೆಂಬಲಿತರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಜೋಯ್ ಕಿಶೋರ್ ಮೆಂಡೋನ್ಸಾ ಕಾಂಗ್ರೆಸ್ ಮುಖಂಡರಾದ ಗ್ರಾಮಾಂತರ ಪ್ರದೇಶ ರೈತ ಕಿಸಾನ್ ಘಟಕದ ಅಧ್ಯಕ್ಷರೂ ಆಗಿರುವ ಸಂಜೀವ ಪೂಜಾರಿ ಅವರ ನಡುವೆ ತಳ್ಳಾಟ ಕೂಡ ನಡೆಯಿತು.
ಒಂದು ಕಡೆಯವರು ಆರೋಪಿಸುವಂತೆ ಚುನಾವಣಾಧಿಕಾರಿ ಕೈಯಿಂದ ಮತಪತ್ರ ಎಳೆಯುವ ಯತ್ನ ಕೂಡ ನಡೆಯಿತು. ಬಳಿಕ ಪೊಲೀಸ್ ಅಧಿಕಾರಿಗಳು ದೌಡಾಯಿಸಿ ಪರಿಸ್ಥಿತಿಯನ್ನು ತಹಬಂದಿಗೆ ತಂದ ಬಳಿಕ ಗುಂಪನ್ನು ಚದುರಿಸಿ ನಿಯಮಾನುಸಾರ ಮತ ಎಣಿಕೆಗೆ ಅವಕಾಶ ಮಾಡಿಕೊಟ್ಟರು. ತಡ ರಾತ್ರಿವರೆಗೂ ಮತ ಎಣಿಕೆ ನಡೆದು ಮಧ್ಯ ರಾತ್ರಿ ವಿಜೇತರನ್ನು ಘೋಷಿಸಲಾಯಿತು.
ಮತ ಎಣಿಕೆ ಕೇಂದ್ರದಲ್ಲಿ ಗೊಂದಲ ಏರ್ಪಡುತ್ತಿದ್ದಂತೆ ಸ್ಥಳಕ್ಕೆ ಬಿಜೆಪಿ ಅಧ್ಯಕ್ಷ ರಂಜನ್ ಜಿ ಗೌಡ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ತಾಲೂಕು ಬಿಜೆಪಿ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ತಾ. ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ತಾ.ಪಂ. ಸದಸ್ಯ ವಿಜಯ ಗೌಡ, ಸದಾನಂದ ಪೂಜಾರಿ ಉಂಗಿಲಬೈಲು, ಮೋಹನ್‌ದಾಸ್ ಮೊದಲಾದವರು ಭೇಟಿ ನೀಡಿದರು. ಕಾಂಗ್ರೆಸ್ ಕಡೆಯಿಂದ ಜಿ.ಪಂ. ಸದಸ್ಯ ಶೇಖರ್ ಕುಕ್ಕೇಡಿ ಭೇಟಿ ನೀಡಿದರು. ಎರಡೂ ಪಕ್ಷದಿಂದ ಕಾರ್ಯಕರ್ತರು ಜಮಾವಣೆಗೊಂಡು ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಬೆಳ್ತಂಗಡಿ, ಪುಂಜಾಲಕಟ್ಟೆ, ವೇಣೂರು ಪೊಲೀಸರು ಸ್ಥಳಕ್ಕಾಗಮಿಸಿ ಸೂಕ್ತ ಭದ್ರತೆ ವ್ಯವಸ್ಥೆ ಮಾಡಿದರು.
ಪೊಲೀಸ್ ರಕ್ಷಣೆಯಲ್ಲಿ ಮತ ಎಣಿಕೆ:
ಗೊಂದಲ ಏರ್ಪಟ್ಟು ಮತ ಎಣಿಕೆ ಕಾರ್ಯ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಮುಂದುವರಿದಾಗ ಎಸ್.ಐ ರವಿ ಅವರು ಸ್ಥಳದಲ್ಲಿದ್ದು, ಅಭ್ಯರ್ಥಿಗಳು ಮತ್ತು ಅವರ ಏಜೆಂಟರು ಹೊರತುಪಡಿಸಿ ಉಳಿದೆಲ್ಲರನ್ನೂ ಹೊರತೆರಳುವಂತೆ ಸೂಚಿಸಿ ಕ್ರಮ ಕೈಗೊಂಡ ಬಳಿಕ ಮತ ಎಣಿಕೆ ನಡೆಯಿತು.
ಕಾಂಗ್ರೆಸಿಗರು ಏನೆನ್ನುತ್ತಾರೆ?
ಪ್ರಕರಣದ ಬಗ್ಗೆ ಆಕ್ಷೇಪವೆತ್ತಿರುವ ಕಾಂಗ್ರೆಸ್ ಬೆಂಬಲಿತರು, ಚುನಾವಣಾಧಿಕಾರಿ ಮಾಡಿದ ಕ್ರಮ ಸರಿಯಲ್ಲ. ಮೀಸಲಾತಿಯಂತೆ ಮತ ಹಾಕಬೇಕಾದರೆ ಅಂತೆಯೇ ಮತ ಪತ್ರ ಪ್ರತ್ಯೇಕ ಮಾಡಬೇಕಿತ್ತು. ಪಕ್ಕದ ಪಡಂಗಡಿಯಲ್ಲಿ ನಡೆದ ಚುನಾವಣೆಯಲ್ಲಿ ಈ ರೀತಿ ಮಾಡಲಾಗಿದೆ. ಈ ವಿಚಾರವಾಗಿ ಚುನಾವಣೆ ನಡೆಸುವ ಇಲಾಖೆಗೇ ಗೊಂದಲವಿದ್ದಂತಿದೆ. ನಮ್ಮ ಕಡೆಯಿಂದ ಹಿಂದುಳಿದ ವರ್ಗ ಒಂದು ಹೊರತುಪಡಿಸಿ 10 ಕ್ಷೇತ್ರಗಳಿಗೆ ಅಭ್ಯರ್ಥಿ ಹಾಕಿದ್ದೆವು. ಸುರೇಶ್ ಸಪಲ್ಯ ಅವರು ಸ್ವತಂತ್ರ್ಯವಾಗಿ ಕಣದಲ್ಲಿದ್ದರು. ಒಂದೇ ಮತ ಪತ್ರ ಇದ್ದುದರಿಂದ ಒಟ್ಟಿಗೆ ಮತ ಹಾಕಿದ್ದೇವೆ. ಮೀಸಲಾತಿ ಆಧಾರಿತವಾಗಿಯೇ ಮತ ಹಾಕಬೇಕಿತ್ತು ಎಂಬುದು ಎಷ್ಟು ಸರಿ ಎಂದಿದ್ದಾರೆ. 268ರಲ್ಲಿ 138ಮತಗಳನ್ನು ಅಧಿಕಾರಿ ತಿರಸ್ಕೃತ ಎಂದು ಬೇರ್ಪಡಿಸಿಟ್ಟಾಗಲೇ ನಾವು ಚುನಾವಣಾಧಿಕಾರಿ ಕ್ರಮವನ್ನು ಆಕ್ಷೇಪಿಸಿ ಲಿಖಿತ ದೂರು ಅರ್ಜಿ ನೀಡಿದ್ದೇವೆ. ಅಂತಿಮ ಘೋಷಣೆ ಕೂಡ ಸರಿಯಲ್ಲ. ಮುಂದಿನ ಕಾನೂನು ದಾವೆಯ ಬಗ್ಗೆ ನಾಯಕರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಿದ್ದೇವೆ ಎಂದಿದ್ದಾರೆ. ಬಿಜೆಪಿ ಕಡೆಯಿಂದ ಪ್ರತಿಕ್ರೀಯಿಸಿದ ಸ್ಥಳೀಯ ನಾಯಕರು, ಸಂಜೀವ ಪೂಜಾರಿ ಕೊಡಂಗೆಯವರು ಮತ ಎಣಿಕೆ ಕೇಂದ್ರಕ್ಕೆ ಅಕ್ರಮ ಪ್ರವೇಶಗೈದು ನಮ್ಮ ಅಭ್ಯರ್ಥಿಯ ಮೇಲೆ ಕೈ ಮಾಡಿದ್ದಾರೆ. ಚುನಾವಣಾಧಿಕಾರಿ ಕೈಯಿಂದ ಮತ ಪತ್ರ ಕಸಿಯುವ ಪ್ರಯತ್ನ ಕೂಡ ನಡೆದಿದೆ. ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ ಎಂದು ದೂರಿದ್ದಾರೆ. ಹಲ್ಲೆ ಯತ್ನದ ಬಗ್ಗೆ ಸಂಜೀವ ಪೂಜಾರಿ ಅವರ ಬಳಿ ಸುದ್ದಿ ಮಾತನಾಡಿಸಿದಾಗ, ಜೋಯ್ ಕಿಶೋರ್ ಮೆಂಡೋನ್ಸಾ ಅವರು ಪರಿಚಿತರೇ ಆಗಿದ್ದು ಪರಿಚಯದಿಂದಲೇ ಅವರ ಕೈ ಹಿಡಿದು ಮಾತನಾಡಿಸಿದ್ದೇನಷ್ಟೇ ಹೊರತು ಅಭ್ಯರ್ಥಿಯ ಮೇಲೆ ಕೈ ಮಾಡಿಲ್ಲ. ಮತಪತ್ರ ಕಸಿಯುವ ಪ್ರಯತ್ನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

rajesh

uಕೊಕ್ರಾಡಿ : ಕೊಕ್ರಾಡಿ ಅಂಡಿಂಜೆ ರಸ್ತೆಯಲ್ಲಿ ವೀರಾಜ್ ಎಂಬವರು ಚಲಾಯಿಸುತ್ತಿದ್ದ ಕಾರು ಅಪಘಾತಕ್ಕಿಡಾಗಿ ದಿ| ರತ್ನಾಕರ ಪೂಜಾರಿಯವರ ಹಾಗೂ ಚಂಪಾವತಿ ದಂಪತಿಯ ಪುತ್ರ ಪಾದಚಾರಿ ರಾಜೇಶ್ (32ವ) ಮೃತಪಟ್ಟ ಘಟನೆ ಫೆ.22 ರಂದು ರಾತ್ರಿ ನಡೆದಿದೆ.
ಅಡಿಕೆ ಸುಳಿಯುವ ಕೆಲಸ ಮಾಡುತ್ತಿರುವ ರಾಜೇಶ್ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿರುವ ಸಂದರ್ಭ ಮನೆಯ ಎದುರಲ್ಲೆ ಜಂತಿಗೋಳಿ ಕೊಕ್ರಾಡಿಯಲ್ಲಿ ಶ್ರೀ ದುರ್ಗಾ ಆಟೋ ವರ್ಕ್ಸ್‌ನ ಮಾಲಕ ವೀರಾಜ್(23ವ) ವೇಗವಾಗಿ ಚಲಾಯಿಸುತ್ತಿದ್ದ ಕಾರು ಪಾದಚಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ವೀರಾಜ್ ಅವರ ವಿರುದ್ಧ ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಬಾಂಗ್ಲಾ ದೇಶದಿಂದ ಯಾವುದೇ ರಹದಾರಿ ಹೊಂದದೆ, ಯಾವುದೋ ರೀತಿಯಲ್ಲಿ ನುಸುಳಿ ಭಾರತಕ್ಕೆ ಬಂದು ಅನಧಿಕೃತವಾಗಿ ಭಾರತ ದೇಶದಲ್ಲಿದ್ದು ಬೆಳ್ತಂಗಡಿ ತಾಲೂಕು, ಕಾಶಿಪಟ್ಣ ಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸದಲ್ಲಿ ತೊಡಗಿದ್ದ 14 ಮಂದಿ ಬಾಂಗ್ಲಾ ದೇಶದವರನ್ನು ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಡಿವೈಎಸ್ ರವೀಶ್‌ರವರ ನೇತೃತ್ವದಲ್ಲಿ, ಸಿಪಿಐ ಬೆಳ್ತಂಗಡಿ, ವೇಣೂರು ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕ ಎಸ್.ಶೀನಪ್ಪ ಗೌಡ ರವರು ಸಿಬ್ಬಂದಿಗಳಾದ ಎಎಸ್‌ಐ ಓಡಿಯಪ್ಪ ಗೌಡ, ಹೆಚ್‌ಸಿ 1752 ಅಶೋಕ ಸಪಲ್ಯ, ಹೆಚ್‌ಸಿ 2006 ಶಿವರಾಮ, ಹೆಚ್‌ಸಿ 2175 ನೇ ಹರೀಶ್ ನಾಯ್ಕ್, ಹೆಚ್‌ಸಿ 577 ರೋಹಿನಾಥ್ ರವರೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ ಯಾವುದೇ ರಹದಾರಿಯಿಲ್ಲದೆ ಭಾರತ ದೇಶಕ್ಕೆ ಅಕ್ರಮವಾಗಿ ವಲಸೆ ಬಂದು ಕೆಲಸ ಮಾಡಿಕೊಂಡಿದ್ದ 14 ಮಂದಿಯನ್ನು ವಶಕ್ಕೆ ತೆಗೆದುಕೊಂಡಿರುವುದಾಗಿದೆ.
ಆರೋಪಿಗಳೆಲ್ಲರೂ ಬಾಂಗ್ಲಾ ದೇಶದ ಡಾಕಾ ರಾಜ್ಯದ ರಾಜಸೈ ಎಂಬಲ್ಲಿಯವರಾದ ಮಹಮ್ಮದ್ ಜಹಾಂಗೀರ್(26ವ), ಅಬ್ದುಲ್ ಹಾಕಿಂ (25ವ), ಮಹಮ್ಮದ್ ಆಲಂಗೀರ್ (27ವ), ಅಬ್ದುಲ್ ಹಾಲಿಂ (19ವ), ಎಮ್.ಡಿ ಮಹಮ್ಮದ್ ಅಜೀಜಲ್ಲ್ (19ವ), ಎಮ್ ಡಿ ಬಾಬು (20ವ), ಜೋಹರುಲ್ಲ್ ಇಸ್ಲಾಂ (24ವ), ಮಹಮ್ಮದ್ ಸೊಹಿದುಲ್ ಇಸ್ಲಾಂ (30ವ) ಮಹಮ್ಮದ್ ಇಕ್ಬಾಲ್ ಆಲಿ(19ವ), ಮಹಮ್ಮದ್ ಸೋಹೆಲ್ ರಾಣಾ (19ವ), ಜೋಹರುಲ್ಲಾ ಇಸ್ಲಾಂ (35ವ), ಮಹಮ್ಮದ್ ಸುಮನ್ ಆಲಿ (24ವ), ಮಹಮ್ಮದ್ ಮೋಮಿನ್ (20ವ), ಮಹಮ್ಮದ್ ಪುಲ್ಲಾಲ್ (19ವ), ಹಾಗೂ ಇವರಿಗೆ ಆಶ್ರಯ ನೀಡಿ ಕೆಲಸ ಮಾಡಿಸುತ್ತಿದ್ದ ಸ್ಥಳೀಯ ನಿಸಾರ್ ಅಹಮ್ಮದ್, ಮೂಡಬಿದ್ರೆ ಎಂಬಾತನನ್ನು ವಶಕ್ಕೆ ಪಡೆದು ಎಲ್ಲರನ್ನು ದಸ್ತಗಿರಿ ಮಾಡಲಾಗಿದೆ. ಇವರ ಮೇಲೆ ಕಲಂ: 370 (ಎ) (2) ಭಾ.ದಂ.ಸಂ ಮತ್ತು ಕಲಂ: 14 ವಿದೇಶಿಯರ ಅಧಿನಿಯಮ 1946 ರನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಹಾಗೂ ಆರೋಪಿಗಳನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಎಪಿಎಂಸಿ ಆನ್‌ಲೈನ್ ನೋಂದಣಿ ಮಾಹಿತಿ ಕಾರ್ಯಕ್ರಮ

Tuesday, March 15th, 2016 | Suddi Belthangady | no responses ವೇಣೂರು: ಕೃಷಿಕರು ಉತ್ಪಾಧಿಸಿದ ಉತ್ಪನ್ನಗಳಿಗೆ ಉತ್ತಮ ಬೆಲೆ ಲಭಿಸುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ… ಮುಂದೆ ಓದಿ

ಕೃಷಿ ಇಲಾಖೆಗಳು

ಕೃಷಿ ಇಲಾಖೆಗಳು

Thursday, August 13th, 2015 | suddiblt | no responses ಮುಂದೆ ಓದಿ

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top