Sun 19 Feb 2017, 4:03PM

ಹೆಚ್ಚಿನ ಸುದ್ದಿಗಳು

jp hall 1

antara copyಬಂದಾರು ಗ್ರಾಮದ ಅಂತರ ಮನೆ ದಿ| ತನಿಯಪ್ಪ ಗೌಡರ ಪುತ್ರ ವಸಂತರವರ ವಿವಾಹವು ತೋಟತ್ತಾಡಿ ಗ್ರಾಮದ ಜಾಕೇಡಿ ಮನೆ ಬಾಬು ಗೌಡರ ಪುತ್ರಿ ನಮಿತಾರೊಂದಿಗೆ ಮತ್ತು ಬಂದಾರು ಗ್ರಾಮದ ಅಂತರ ಮನೆ ದಿ| ತನಿಯಪ್ಪ ಗೌಡರ ಪುತ್ರ ನಾಗೇಶ್‌ರವರ ವಿವಾಹವು ಬೆಳಾಲು ಗ್ರಾಮದ ಕಡೆಂಬಿಲ ಮನೆ ಬಾಲಕೃಷ್ಣ ಗೌಡರ ಪುತ್ರಿ ಸರಿತರೊಂದಿಗೆ ಪೆಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆ.2ರಂದು ಜರುಗಿ ನಂತರ ಮಧ್ಯಾಹ್ನ ಅಂತರ ವರರ ಮನೆಯಲ್ಲಿ ಔತಣಕೂಟ ನಡೆಯಿತು.

surendra-rajani copyಕೊಯ್ಯೂರು ಗ್ರಾಮದ ಕುಳೆಂಜಿಲೋಡಿ ಸುದೈವ ನಿಲಯ ದಿ| ಧರ್ಣಪ್ಪ ಪೂಜಾರಿಯವರ ಪುತ್ರ ಸುರೇಂದ್ರರವರ ವಿವಾಹವು ಕಣಿಯೂರು ಗ್ರಾಮದ ಅಡೆಂಜ ಮಂಜುಶ್ರೀ ನಿಲಯ ವಿಠಲ ಪೂಜಾರಿಯವರ ಪುತ್ರಿ ರಜನಿಯವರೊಂದಿಗೆ ಫೆ.6 ರಂದು ಬೆಳ್ತಂಗಡಿ ಸಿ.ವಿ.ಸಿ ಹಾಲ್‌ನಲ್ಲಿ ಜರುಗಿತು.

eshhhhhhh

eshhhh

esh

eshh

  ಮಲವಂತಿಗೆ : ಮಲವಂತಿಗೆ ಗ್ರಾಮ ಪಂಚಾಯತ್‌ನಲ್ಲಿ ಗ್ರಾಮ ಸಭೆಯು ಇಂದು(ಫೆ.18) ಕರಿಯಾಲು ದ.ಕ.ಜಿ.ಪಂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಇಬ್ಬರು ವಿಕಲಚೇತನರಾದ ಶೀನಪ್ಪ ಗೌಡ ಪೆರ್ಲ ಇವರಿಗೆ ವೀಲ್ ಚೇರ್ ಮತ್ತು ಕಾಂತಪ್ಪ ಪೂಜಾರಿ ಇವರಿಗೆ ಹ್ಯಾಂಡ್‌ಸ್ಟಿಕ್ ನೀಡಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಕೃಪಿ ನಿರ್ದೇಶಕರು ತಿಲಕ್  ಪ್ರಸಾದ್ ಜಿ. ಮಾರ್ಗದರ್ಶಿ ಅಧಿಕಾರಿಯಾಗಿ ಆಗಮಿಸಿದ್ದರು. ನೂತನ ಪಿಡಿಒ ಚೆನ್ನಪ್ಪ ನಾಯ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಜೀವ ನಾಯ್ಕ, ಅಧ್ಯಕ್ಷ ಭಾಸ್ಕರ್ ಪೂಜಾರಿ, ಉಪಾಧ್ಯಕ್ಷೆ ಶ್ರೀಮತಿ ಲೀಲಾ, ಸರ್ವಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

thenkakarandooru akrama marada dimmi copyತೆಂಕಕಾರಂದೂರು : ತೆಂಕಕಾರಂದೂರು ಗ್ರಾಮದ ಗುಂಡೇರಿ ಎಂಬಲ್ಲಿ ಅಕೇಶಿಯಾ ಜಾತಿಯ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನ ಸಂಖ್ಯೆ ಕೆ.ಎ.21 ಬಿ 5249ನ್ನು ಫೆ.14ರಂದು ರಾತ್ರಿ 10.30ರ ವೇಳೆ ವಾಹನ ಸಹಿತ ಅಂದಾಜು 8 ಲಕ್ಷ ಸೊತ್ತನ್ನು ಅಳದಂಗಡಿ ಉಪ ವಲಯ ಅರಣ್ಯಾಧಿಕಾರಿ ರಾಜೇಶ್ ಇವರ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಾದ ನಾವೂರು ಗ್ರಾಮದ ಕೊಡೇಲು ಮನೆಯ ಸಂಜೀವ ಪೂಜಾರಿಯವರ ಪುತ್ರ ರಮಾನಂದ ಸಾಲಿಯಾನ್, ಮುಂಡೂರು ಗ್ರಾಮದ ಪರಂಬುಡೆ ಮನೆ ಸಾಂತಪ್ಪ ಬಂಗೇರರವರ ಪುತ್ರ ಸುರೇಶ್, ಮುಂಡೂರು ಗ್ರಾಮದ ಬಲ್ಲಿದಡ್ಡ ಮನೆ, ಧರ್ಣಪ್ಪ ಸಾಲಿಯಾನ್‌ರವರ ಪುತ್ರ ವಸಂತರವರ ಮೇಲೆ ಅರಣ್ಯ ತಕ್ಷೀರು ದಾಖಲಿಸಿಕೊಳ್ಳಲಾಗಿರುತ್ತದೆ.
ಸೊತ್ತನ್ನು ವಶಪಡಿಸಿಕೊಳ್ಳುವಲ್ಲಿ ಅರಣ್ಯ ರಕ್ಷಕರಾದ ಶಶಿಕಾಂತ್, ಜನಾರ್ಧನ ಗೌಡ ಹಾಗೂ ಅರಣ್ಯ ವೀಕ್ಷಕರಾದ ಸಂತೋಷ್, ವೆಂಕಪ್ಪ ನಾಯ್ಕರವರ ಸಹಕಾರದಿಂದ ಹಾಗೂ ವೇಣೂರು ವಲಯಯ ವಲಯ ಅರಣ್ಯಧಿಕಾರಿಯಾದ ಸುಬ್ರಹ್ಮಣ್ಯ ಆಚಾರ್ ಇವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿದ್ದಾರೆ.
ಸದರಿ ಪ್ರಕರಣವನ್ನು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಂ.ವಿ ಅಮರನಾಥ್ ಐಎಫ್‌ಎಸ್ ಇವರ ನಿರ್ದೇಶನದಂತೆ ಸುಬ್ರಹ್ಮಣ್ಯ ಹೆಚ್.ಆರ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮೂಡಬಿದ್ರೆ ಉಪವಿಭಾಗ ಇವರು ಸದರಿ ಪ್ರಕರಣದ ತನಿಖೆಯನ್ನು ಕೈಗೊಂಡಿರುತ್ತಾರೆ.

 ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯಲು, ಆಧಾರ್ ಸಂಖ್ಯೆ ಹಾಗೂ ಅಂಚೆ/ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳಾದ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾಸುರಕ್ಷಾ ವೇತನ, ನಿರ್ಗತಿಕ ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ ಹಾಗೂ ಮೈತ್ರಿ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಯು ಆಧಾರ್ ಸಂಖ್ಯೆ, ಬ್ಯಾಂಕ್/ಅಂಚೆ ಖಾತೆ ವಿವರ ಮತ್ತು ಒಪ್ಪಿಗೆಯನ್ನು 2017ನೇ ಮಾರ್ಚ್ ಅಂತ್ಯದೊಳಗೆ ಸಲ್ಲಿಸಬೇಕು ಇಲ್ಲವಾದಲ್ಲಿ ಪಿಂಚಣಿಯನ್ನು ಸ್ಥಗಿತಗೊಳಿಸಲಾಗುವುದು ಎಂದು ದ.ಕ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

  ಭಾರತೀಯ ರೈಲ್ವೇ 18ಸಾವಿರ ಖಾಲಿ ಹುದ್ದೆಗಳಿಗೆ ಆನ್ಲೈನ್ ಪರೀಕ್ಷೆ ಆಯೋಜಿಸಿತ್ತು. ಇದು ಜಗತ್ತಿನ ಪ್ರಥಮ ಅತಿದೊಡ್ಡ ಆನ್ಲೈನ್ ಪರೀಕ್ಷೆಯಾಗಿತ್ತು. ಪರೀಕ್ಷಾ ಅವ್ಯವಹಾರ ತಡೆಗಟ್ಟುವ ನಿಟ್ಟಿನಲ್ಲಿ ರೈಲ್ವೇ ಇಲಾಖೆ ಕಳೆದ ತಿಂಗಳ 17ರಿಂದ 19ರವರೆಗೆ ಆನ್ಲೈನ್ ಪರೀಕ್ಷೆ ನಡೆಸಿತ್ತು. ಪ್ರಥಮ ಹಂತದಲ್ಲಿ ಉತ್ತೀರ್ಣರಾಗಿದ್ದ 2.73 ಲಕ್ಷ ಅಭ್ಯರ್ಥಿಗಳಿಗೆ ಆನ್ಲೈನ್ ಪ್ರವೇಶ ಪರೀಕ್ಷೆ ನಡೆಸಿದ್ದೆವು ಎಂದು ರೈಲ್ವೇ ಸಚಿವಾಲಯ ತಿಳಿಸಿದೆ. ರೈಲ್ವೇ ನೇಮಕಾತಿ ಪ್ರಾಧಿಕಾರವು ಗ್ರೂಪ್-ಸಿ ಹುದ್ದೆಗಳಿಗಾಗಿ ಪರೀಕ್ಷೆ ನಡೆಸಿತ್ತು. ಈವರೆಗೂ ರೈಲ್ವೇ ಪರೀಕ್ಷೆಗಳನ್ನು ಕೈಬರಹದಲ್ಲಿ ನಡೆಸುತ್ತಿದ್ದ ಇಲಾಖೆ ಇದೀಗ ಡಿಜಿಟಲ್‌ಮಯವಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆ, ಪಾರದರ್ಶಕತೆ ಕಾಪಾಡುವುದು ಮತ್ತು ಇನ್ನಿತರ ಅವ್ಯವಹಾರಗಳಿಗೆ ಕಡಿವಾಣ ಹಾಕಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹಿರಿಯ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಡಿಜಿಟಲ್ ಪೇಮೆಂಟ್ ಯೋಜನೆಯಡಿ ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಆರಂಭಿಸಿದ್ದ ಲಕ್ಕಿ ಗ್ರಾಹಕ್ ಯೋಜನಾ ಹಾಗೂ ಡಿಜಿ ಧನ್ ವ್ಯಾಪಾರ್ ಯೋಜನೆಯ ಈ ವರೆಗೆ ಸುಮಾರು 8 ಲಕ್ಷ ಅದೃಷ್ಟವಂತ ಗ್ರಾಹಕರಿಗೆ 133ರೂ ಗಳಷ್ಟು ಬಹುಮಾನ ವಿತರಿಸಲಾಗಿದೆ ಎಂದು ಕೇಂದ್ರ ನೀತಿ ಆಯೋಗ ತಿಳಿಸಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ನೀತಿ ಆಯೋಗ, ಡಿಜಿ ಧನ್ ಮೇಳದ ಅಡಿಯಲ್ಲಿ ನೂರು ದಿನಗಳ ಕಾಲ ಲಕ್ಕಿ ಗ್ರಾಹಕರಿಗೆ ಬಹುಮಾನ ವಿತರಿಸುವ ಯೋಜನೆಯನ್ನು ಆರಂಭಿಸಿ 50 ದಿನಗಳಾಗಿವೆ. ಇಷ್ಟು ದಿನಗಳಲ್ಲಿ 8 ಲಕ್ಷ ಗ್ರಾಹಕರು ಆಯೋಗ ನೀಡುವ ಬಹುಮಾನಕ್ಕೆ ಭಾಜನರಾಗಿದ್ದಾರೆ ಎಂದು ತಿಳಿಸಿದೆ.

  ಸಾರ್ವಜನಿಕ ಸ್ಥಳಗಳಲ್ಲಿ ನಿಯಮಗಳನ್ನು ಮೀರಿ, ಬಸ್ಸು, ಆಸ್ಪತ್ರೆ, ಚಿತ್ರಮಂದಿರ, ಗ್ರಂಥಾಲಯ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು, ಬೀಡಿ, ಚುಟ್ಟಾ ಸೇದುವವರಿಗೆ ಕಡಿವಾಣ ಹಾಕಲು ನಿರ್ಧರಿಸಿರುವ ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ದುಬಾರಿ ದಂಡ ವಿಧಿಸಲು ಸಜ್ಜಾಗಿದೆ. ಇನ್ನು ಮುಂದೆ ಇಂಥ ಪ್ರಕರಣಗಳಲ್ಲಿ ಸಿಕ್ಕಿಬೀಳುವ ವ್ಯಕ್ತಿಗಳಿಗೆ ಸಾವಿರ ರೂ.ದಂಡ ವಿಧಿಸಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದ್ದು, ಈ ಮೊದಲು ನಿಯಮ ಉಲ್ಲಂಘನೆಗೆ 200ರೂ.ದಂಡ ವಿಧಿಸಲಾಗುತ್ತಿತ್ತು.

  ರಾಜ್ಯದಲ್ಲಿ ಈಗಾಗಲೇ ಮೈಸೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್ ಸೇವೆಯನ್ನು ಒದಗಿಸಲಾಗುತ್ತಿದ್ದು, ಸದ್ಯವೇ ಇನ್ನೂ ನಾಲ್ಕು ನಗರಗಳ ಪ್ರಧಾನ ಅಂಚೆ ಕಛೇರಿಗಳಲ್ಲಿ ಈ ಸೇವೆ ಆರಂಭಗೊಳ್ಳಲಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಅಂಚೆ ಇಲಾಖೆ ವಿವಿಧ ರಾಜ್ಯಗಳಲ್ಲಿ ಪ್ರಧಾನ ಅಂಚೆ ಕಚೇರಿಗಳನ್ನು ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದು, ಈಗಾಗಲೇ ಪ್ರಾಯೋಗಿಕವಾಗಿ 2 ಅಂಚೆಕಛೇರಿಗಳಲ್ಲಿ ಈ ಸೇವೆ ಆರಂಭಗೊಂಡಿದೆ. ಸದ್ಯವೇ ರಾಜ್ಯದ ಬೆಳಗಾವಿ, ದಾವಣಗೆರೆ, ಹಾಸನ ಮತ್ತು ಗುಲ್ಬರ್ಗಾ ಸೇರಿದಂತೆ ವಿವಿಧ ರಾಜ್ಯಗಳ ಇನ್ನೂ 56 ಪ್ರಧಾನ ಅಂಚೆ ಕಚೇರಿಗಳಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಆರಂಭಿಸಲು ವಿದೇಶಾಂಗ ವ್ಯವಹಾರಗಳ ಕಚೇರಿಯು ನಿರ್ಧರಿಸಿದೆ.

  ಕೃಷಿ, ಮಾಹಿತಿ ತಂತ್ರಜ್ಞಾನ, ಫಾರ್ಮೆಸಿ ಮತ್ತು ಮೆಡಿಕಲ್ ವಲಯದಲ್ಲಿ ಹೊಸ ಕಂಪೆನಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದೇಶದ ಮೊಟ್ಟ ಮೊದಲ ಸ್ಟಾರ್ಟ್ ಅಪ್ ಜಿಲ್ಲೆಯಾಗಿ ಮಂಗಳೂರು ಆಯ್ಕೆಯಾಗಿದೆ. ಕರ್ನಾಟಕದ ರಾಜ್ಯಸಭಾ ಸದಸ್ಯೆ, ಕೇಂದ್ರ ಕೈಗಾರಿಕಾ ಸಚಿವೆ ನಿರ್ಮಲಾ ಸೀತರಾಮನ್ ಅವರ ಪ್ರಯತ್ನದ ಫಲವಾಗಿ ದೇಶದಲ್ಲೇ ಮೊದಲ ಸ್ಟಾರ್ಟ್ ಅಪ್ ಜಿಲ್ಲೆಯಾಗಿ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಮಂಗಳೂರನ್ನು ಆರಿಸಿಕೊಳ್ಳಲಾಗಿದೆ. ಸ್ಟಾರ್ಟ್ ಅಪ್ ಜಿಲ್ಲೆ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಒಂದು ಇಂಕ್ಯುಬೇಷನ್ ಸೆಂಟರ್ ಮತ್ತು ಜಿಲ್ಲೆಯ ಆಯ್ದ ಶಾಲಾ ಕಾಲೇಜುಗಳಲ್ಲಿ ಇಪ್ಪತ್ತು ಡಿಂಕರಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು. ಇಂಕ್ಯುಬೇಷನ್ ಸೆಂಟರ್ ಹೊಸ ಉದ್ದಿಮೆ ಅಥವಾ ಪ್ರಾಜೆಕ್ಟ್‌ಗಳಿಗೆ ಕಾವು ನೀಡಲಿದೆ ಎನ್ನಲಾಗಿದೆ.

  ಇನ್ಮುಂದೆ ವಿಮಾನ ನಿಲ್ದಾಣಗಳನ್ನು ಆಯಾ ಊರಿನ ಹೆಸರಿನಿಂದಲೇ ಕರೆಯಬೇಕು. ಇಷ್ಟು ದಿನ ಐತಿಹಾಸಿಕ ಪುರುಷರು ಅಥವಾ ಗಣ್ಯ ವ್ಯಕ್ತಿಗಳ ಹೆಸರಿನಿಂದ ಕರೆಯುತ್ತಿದ್ದ ವಿಮಾನ ನಿಲ್ದಾಣದ ಹೆಸರುಗಳು ಇತಿಹಾಸದ ಪುಟ ಸೇರಲಿವೆ. ಈ ಮೂಲಕ ಬೆಂಗಳೂರು ವಿಮಾನ ನಿಲ್ದಾಣವನ್ನು ಕೆಂಪೇಗೌಡ ಏರ್‌ಪೋರ್ಟ್ ಮಾಡಿದ್ದ ಮೋದಿ ಸರ್ಕಾರ, ಆ ಹೆಸರನ್ನ ಅಳಿಸೋಕೆ ಮುಂದಾಗಿದೆ. ಕೆಂಪೇಗೌಡ ಏರ್‌ಪೋರ್ಟ್, ಇಂದಿರಾಗಾಂಧಿ ಏರ್‌ಪೋರ್ಟ್, ರಾಜೀವ್ ಗಾಂಧಿ ಏರ್‌ಪೋರ್ಟ್, ಅಂಬೇಡ್ಕರ್ ಏರ್‌ಪೋರ್ಟ್ ಅನ್ನೋ ಹೆಸರುಗಳು ಇನ್ಮುಂದೆ ಮರೆಯಾಗಲಿದೆ. ಯಾಕಂದ್ರೆ ಕೇಂದ್ರ ಸರ್ಕಾರ ಹೊಸ ಮಸೂದೆಯೊಂದನ್ನ ಜಾರಿಗೆ ತರುತ್ತಿದ್ದು, ಯಾವುದೇ ವಿಮಾನ ನಿಲ್ದಾಣಗಳಿಗೆ ವ್ಯಕ್ತಿಗಳ ಹೆಸರನ್ನ ಇಡುವಂತಿಲ್ಲ ಅಂತ ಮಸೂದೆ ಸಿದ್ಧಪಡಿಸಿದೆ. ಅಷ್ಟೇ ಅಲ್ಲದೆ ಈ ಮಸೂದೆಯಲ್ಲಿ ಪ್ರಸ್ತ್ತುತ ಇರೋ ವಿಮಾನ ನಿಲ್ದಾಣಗಳ ಹೆರಸನ್ನು ಬದಲಾವಣೆ ಮಾಡುವಂತಹ ನಿಯಮಗಳನ್ನು ಅಳವಡಿಸಲಾಗಿದೆ.

  ಪ್ರಶ್ನೆಪತ್ರಿಕೆ ಸೋರಿಕೆ ಶಿಕ್ಷೆ ಹಾಗೂ ಪರೀಕ್ಷಾ ವೇಳೆ ನಕಲು ಶಿಕ್ಷೆ ವಿಚಾರಗಳಿಗೆ ಸಂಬಂಧಪಟ್ಟ ಮಂಡಿಸಲಾದ ನೂತನ ವಿಧೇಯಕವನ್ನು ವಿಧಾನಸಭೆ ಅನುಮೋದನೆ ನೀಡಿದೆ. ನೂತನ ಮಸೂದೆಯಂತೆ, ಪರೀಕ್ಷೆಯ ವೇಳೆ ನಕಲು ಮಾಡುವ ವಿದ್ಯಾರ್ಥಿಯನ್ನು ಮೂರು ವರ್ಷ ಡಿಬಾರ್ ಮಾಡುವ ಕಠಿಣ ಕ್ರಮವನ್ನೂ ಅಳವಡಿಸಲಾಗಿದೆ. ಇನ್ನು ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ಕಾಲೇಜಿನ ಮಾನ್ಯತೆಯನ್ನು ಮೂರು ವರ್ಷ ಡಿಬಾರ್ ಮಾಡುವ ಕಾಲೇಜಿನ ಮಾನ್ಯತೆಯನ್ನು ಮೂರು ವರ್ಷ ರದ್ದುಗೊಳಿಸಲಾಗುತ್ತದೆ. ಇತ್ತೀಚೆಗೆ, ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಹಿಂದೆಂದೂ ಕಾಣದ ಮಟ್ಟಕ್ಕೆ ಸೋರಿಕೆಯಾಗಿ ಇಡೀ ಸರ್ಕಾರವೇ ಸಾರ್ವಜನಿಕರ ಮುಂದೆ ತಲೆತಗ್ಗಿಸುವಂತಾಗಿತ್ತು. ಅತ್ಯುತ್ತಮ ಶೈಕ್ಷಣಿಕ ಪರಿಸರ ಹೊಂದಿರುವ ಕಾರಣಕ್ಕಾಗಿ ರಾಷ್ಟ್ರಮಟ್ಟದಲ್ಲಿ ಪ್ರತಿಷ್ಠೆ ಹೊಂದಿರುವ ಕರ್ನಾಟಕಕ್ಕೆ ಇದರಿಂದ ಮಸಿ ಬಳಿದಂತಾಗಿತ್ತು. ಈ ಹಿನ್ನೆಲೆಯಲ್ಲಿ, ಇಂಥ ಅಕ್ರಮಗಳನ್ನು ನಿಲ್ಲಿಸಲು ರಾಜ್ಯ ಸರ್ಕಾರ ನೂತನ ಮಸೂದೆಯನ್ನು ಮಂಡಿಸಲಾಗಿದೆ.

 ಮಲವಂತಿಗೆ : 2015ರಲ್ಲಿ ಕಿಲ್ಲೂರು ನದಿ ದಡದಲ್ಲಿ ಅತ್ಯಾಚಾರ ನಡೆದಿದ್ದು, ಈ ಕುರಿತು ಆರೋಪಿಯೋರ್ವನಿಗೆ 7 ವರ್ಷಗಳ ಕಾರಾಗೃಹ ವಾಸದ ಶಿಕ್ಷೆಯನ್ನು ಫೆ.16ರಂದು ನ್ಯಾಯಾಲಯವು ತೀರ್ಪು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಮಲವಂತಿಗೆ ಗ್ರಾಮದ ಕೆರೆಕೋಡಿ ಮನೆಯ ಪೂವಪ್ಪ ಪೂಜಾರಿಯವರ ಪುತ್ರ ಪ್ರವೀಣ್(29ವ) ರವರಿಗೆ ನ್ಯಾಯಾಲಯವು 7 ವರ್ಷಗಳ ಕಾಲ ಕಾರಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತದೆ.
ನ್ಯಾಯಾಲಯದಲ್ಲಿ ಎಸ್‌ಸಿ ನಂ: 09/2016 ರಂತೆ ವಿಚಾರಣೆ ನಡೆದು ಆರೋಪಿಯು ಮಾಡಿರುವ ಕೃತ್ಯವು ವಿಚಾರಣೆ ವೇಳೆ ಸಾಬೀತಾಗಿರುವುದರಿಂದ ಆರೋಪಿಗೆ ಕಲಂ: 376, 417 ಐಪಿಸಿ ಪ್ರಕಾರ 7 ವರ್ಷಗಳ ಕಾಲ ಕಾರಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತದೆ. ಈ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿಯಾಗಿರುವ ನಾಗೇಶ್ ಎಂಬಾತನ ವಿಚಾರಣೆಯು ಎಸ್‌ಸಿ ನಂ 043/2016 ರಂತೆ ಮಾನ್ಯ ನ್ಯಾಯಾಲಯದಲ್ಲಿ ಮುಂದುವರಿದಿರುತ್ತದೆ.

kolliಮಿತ್ತಬಾಗಿಲು : ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಇಂದು(ಫೆ.17) ನಿರಂತರ ಸ್ವಚ್ಛತಾ ಅಭಿಯಾನದ ಅಂಗವಾಗಿ ಜೀರ್ಣೋದ್ಧಾರ ಸಮಿತಿಯವರು ಶ್ರೀ ಕ್ಷೇತ್ರದ ಪಾವಿತ್ರ್ಯತೆ ಶುಚಿತ್ವ ಮತ್ತು ಅಭಿವೃದ್ಧಿಯ ಸಂಕಲ್ಪದೊಂದಿಗೆ ಜೀರ್ಣೋದ್ಧಾರ ಪ್ರಕ್ರಿಯೆಯನ್ನು ಶುಭಾರಂಭಗೊಳಿಸಿದರು.
ಅಭಿಯಾನದ ಉದ್ಘಾಟನೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೆ.ದಾಸಪ್ಪ ಗೌಡ ನೆರವೇರಿಸಿದರು. ಉಜಿರೆ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಸತೀಶ್ ಯು ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.

danalakshmi 1

suvega motors 1

jp hall 1

manipal 1

  ಉಜಿರೆ : ಸೇವಾಭಾರತಿ(ರಿ) ಕನ್ಯಾಡಿ ಇದರ 14ನೇ ವರ್ಷದ ಸಂಭ್ರಮಾಚರಣೆ ಮತ್ತು ವಿವಿಧ ಸೇವಾ ಕಾರ್ಯಗಳ ಲೋಕಾರ್ಪಣಾ ಸಮಾರಂಭವು ಫೆ.18ರಂದು ಕನ್ಯಾಡಿಯ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ. ಸಮಾರಂಭವನ್ನು ಸೇವಾಭಾರತಿ ಪೋಷಕ ; ನ್ಯಾಯವಾದಿ ಬಿ.ಕೆ ಧನಂಜಯರಾವ್ ಉದ್ಘಾಟಿಸಲಿದ್ದು, ಸೇವಾ ಭಾರತಿ ಅಧ್ಯಕ್ಷ ಬಿ.ಕೃಷ್ಣಪ್ಪ ಗುಡಿಗಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಯುವ ಭಾರತ್ ರಾಜ್ಯ ಪ್ರಭಾರಿ ನಿಕೇತ್‌ರಾಜ್ ಸೇವಾ ದಿಕ್ಸೂಚಿ ಭಾಷಣ ಮಾಡಲಿದ್ದು ಬೆಳ್ತಂಗಡಿ ತಾ.ಪಂ ಅಕ್ಷರ ದಾಸೋಹ ಬಿಸಿಯೂಟ ಯೋಜನಾ ನಿರ್ದೇಶಕ ಕೆ.ಜಿ ಲಕ್ಷ್ಮಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಸೇವಾ ಭಾರತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್ ಮತ್ತು ಕಾರ್ಯದರ್ಶಿ ಕೆ. ವಿನಾಯಕ್ ರಾವ್ ತಿಳಿಸಿದ್ದಾರೆ.
ಸೇವಾಭಾರತಿ 14ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ವಿವಿಧ ಸೇವಾ ಕಾರ್ಯಗಳು ಲೋಕಾರ್ಪಣೆಗೊಳ್ಳಲಿವೆ. ತಾಲೂಕಿನ 41 ಗ್ರಾಮಗಳ ಆಯ್ದ 41 ಸರ್ಕಾರಿ ಶಾಲೆಗಳ ಗ್ರಂಥಾಲಯಕ್ಕೆ ರೂ 5ರಿಂದ 7 ಸಾವಿರ ಮೌಲ್ಯದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಗುವುದು. ತಾಲೂಕಿನ 10 ಅರ್ಹ ಮನೆಗಳಿಗೆ ರೂ 10,000/- ವೆಚ್ಚದ ಉಚಿತ ಸೋಲಾರ್ ವಿದ್ಯುತ್ ಅಳವಡಿಸಲಾಗುವುದು. ಬೆನ್ನುಮೂಳೆ ಮುರಿತಕ್ಕೊಳಗಾದ 10 ಮಂದಿ ದಿವ್ಯಾಂಗರಿಗೆ ಉಚಿತವಾಗಿ ಗಾಲಿಕುರ್ಚಿ ವಿತರಿಸಲಾಗುವುದು. ತಾಲೂಕಿನ 241 ಸರ್ಕಾರಿ ಶಾಲೆಗಳ 606 ಅಡುಗೆ ಸಹಾಯಕಿಯರಿಗೆ ರಕ್ಷಾ ಉಡುಗೆ(ಆಫ್ರನ್) ಉಚಿತವಾಗಿ ವಿತರಿಸಲಾಗುವುದು. ತಾಲೂಕಿನ ವಿವಿಧ ಗ್ರಾಮಗಳ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಆಯಾ ಗ್ರಾಮಗಳಲ್ಲಿ ಕಂಪ್ಯೂಟರ್ ತರಬೇತಿ ಶಿಕ್ಷಣ ಯೋಜನೆ ಆರಂಭಿಸಲಾಗುವುದು. ಬಂಟ್ವಾಳ ತಾಲೂಕು ಕನ್ಯಾನ ಭಾರತ ಸೇವಾಶ್ರಮ ಸೇವಾ ಸಂಸ್ಥೆ ಹಾಗೂ ಕಡಿರುದ್ಯಾವರ ಗ್ರಾಮದ ಭತ್ತದತಳಿ ಸಾವಯವ ಕೃಷಿಕ ಶಿವರಾವ್ ಅವರಿಗೆ ವಿಶೇಷ ಸಾಧನ ಪುರಸ್ಕಾರ ನಡೆಸಲಾಗುವುದೆಂದು ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್ ಮತ್ತು ಕಾರ್ಯದರ್ಶಿ ವಿನಾಯಕರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

  ತಣ್ಣೀರುಪಂತ: ಸರಕಾರದ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಆಲಿಸಿ ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರಕಾರದ ಆದೇಶದಂತೆ ಕೊಕ್ಕಡ ಹೋಬಳಿ ಮಟ್ಟದ ಜನಸಂಪರ್ಕ ಸಭೆ ಫೆ.18ರಂದು ಪೂರ್ವಾಹ್ನ 10.30ಕ್ಕೆ ತಣ್ಣೀರುಪಂತ ಗ್ರಾ.ಪಂ. ವ್ಯಾಪ್ತಿಯ ಕಲ್ಲೇರಿ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ತಹಶೀಲ್ದಾರ್ ತಿಪ್ಪೇಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ಶಾಸಕ ಕೆ.ವಸಂತ ಬಂಗೇರ ವಹಿಸಲಿದ್ದು, ಸಭೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಇತ್ಯರ್ಥಪಡಿಸಲಿದ್ದಾರೆ.

gejjegiri Nakashe copyಕ್ಷೇತ್ರ ಪುನರುತ್ಥಾನಕ್ಕೆ ಭಕ್ತ ಸಮುದಾಯದ ನಿಧಿ ಸಮರ್ಪಣೆಯಾಗಬೇಕೆಂದು ಅಷ್ಟಮಂಗಲ ಚಿಂತನೆಯಲ್ಲಿ ಗೋಚರಿಸಿದ ಕಾರಣ 2016ರ ನವೆಂಬರ್ 13ರಂದು ನಿಧಿ ಕುಂಭ ಸ್ಥಾಪನೆ ಮಾಡಿ ಪುಂಡಿ ಪಣವು ಸಮರ್ಪಣೆಗೆ ಚಾಲನೆ ನೀಡಲಾಗಿದೆ. ಶಿಲಾನ್ಯಾಸ ಸಂದರ್ಭದಲ್ಲೂ ಪುಂಡಿ ಪಣವು ಸಮರ್ಪಣೆಗೆ ಅವಕಾಶವಿದೆ. ಭಕ್ತಾದಿಗಳು ಧನ-ಕನಕಾದಿಗಳನ್ನು ಭಕ್ತಿ ರೂಪದಲ್ಲಿ ನಿಧಿ ಕುಂಭಕ್ಕೆ ಸಮರ್ಪಿಸಬಹುದು.
ಬೆಳಿಗೆ 8 ಗಂಟೆಗೆ ಗುರುವಾಯನಕೆರೆಯಿಂದ ಹೊರಡುವ ವಾಹನ ಜಾಥಾ ೯ ಗಂಟೆಗೆ ಪುತ್ತೂರು ತಲುಪಲಿದೆ ಎಂದು ಗೆಜ್ಜೆಗಿರಿ ನಂದನ ಬಿತ್ತ್‌ಲ್ ಕಾರ್ಯಾಧ್ಯಕ್ಷ ಪೀತಾಂಬರ ಹೇರಾಜೆ ತಿಳಿಸಿದ್ದಾರೆ.

ಬೆಳ್ತಂಗಡಿ : ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಡುಮಲೆಯ ಕೇಂದ್ರ ಭಾಗದಲ್ಲಿರುವ ಗೆಜ್ಜೆಗಿರಿ ನಂದನ ಬಿತ್ತ್‌ಲ್ ಅವಳಿ ವೀರರು ಕೋಟಿ-ಚೆನ್ನಯರ ಸ್ವಂತ ಮನೆ. ತಮ್ಮ ಅವತಾರದ ಮುಕ್ಕಾಲು ಭಾಗವನ್ನು ಅವರು ಕಳೆದಿದ್ದು ಈ ನೆಲದಲ್ಲಿ ಅವಳಿ ವೀರರ ಮಾವ ಗುರು ಸಾಯನ ಬೈದ್ಯರ ಮೂಲ ನೆಲೆಯಾದ ಈ ಮಣ್ಣು ಮಹಾ ಮಾತೆ ದೇಯಿ ಬೈದ್ಯತಿಗೆ ಪುನರ್ಜನ್ಮ ನೀಡಿದ ಪುಣ್ಯಭೂಮಿ. ಕೋಟಿ-ಚೆನ್ನಯರ ಸ್ವಂತ ಮನೆಯೂ, ತಾಯಿ, ಮಾವನವರಿದ್ದ ಕುಟುಂಬದ ಮೂಲ ಮನೆಯೂ, ಕುಟುಂಬದ ದೈವಗಳ ಆರಾಧನೆ ನಡೆದ ತರವಾಡು ನೆಲೆಯೂ ಆಗಿರುವ ಕಾರಣ ವೀರರ ಪಾಲಿಗಿದು ಮೂಲಸ್ಥಾನ. ಈ ಚಾರಿತ್ರಿಕ ಅಂಶಗಳನ್ನು ಮುಂದಿಟ್ಟುಕೊಂಡು ತುಳುನಾಡಿನ ಪರಂಪರೆಯ ಪ್ರಕಾರ ಈ ನೆಲದಲ್ಲಿ ದೇಯಿ ಬೈದ್ಯತಿ-ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರ ನಿರ್ಮಾಣವಾಗಲಿದೆ. ಗುರುಪೀಠದಲ್ಲಿ ಸಾಯನ ಬೈದ್ಯರ ಆರಾಧನೆಯೂ ನಡೆಯಲಿದೆ.
ಮಾತೆ ದೇಯಿ ಬೈದ್ಯತಿ ಮತ್ತು ಅವಳಿ ವೀರರು ಕೋಟಿ ಚೆನ್ನಯರ ಮೂಲಸ್ಥಾನವಾದ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ನಂದನ್ ಬಿತ್ತ್‌ಲ್‌ನಲ್ಲಿ ಧರ್ಮ ದೈವ ಧೂಮಾವತಿ ದೈವಸ್ಥಾನ, ಕುಪ್ಪೆ ಪಂಜುರ್ಲಿ ದೈವಸ್ಥಾನ, ಬೆರ್ಮೆರ್ ಗುಂಡ, ಗುರುಸಾಯನ ಬೈದ್ಯರು, ಮಾತೆ ದೇಯಿ ಬೈದ್ಯತಿ ಧರ್ಮ ಚಾವಡಿ, ಕೋಟಿ ಚೆನ್ನಯ ಮೂಲಸ್ಥಾನ ಗರಡಿ, ಮಾತೆ ದೇಯಿ ಬೈದ್ಯತಿ ಮಹಾ ಸಮಾಧಿ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ ಮೊದಲಾದ ಶ್ರದ್ಧಾ ಬಿಂದುಗಳ ಪುನರುತ್ಥಾನಕ್ಕೆ ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಶ್ರೀ ಲೋಕೇಶ್ ಶಾಂತಿ ಅವರ ಪೌರೋಹಿತ್ಯದಲ್ಲಿ ಶಿಲಾನ್ಯಾಸ ಕಾರ್ಯಕ್ರಮವು ಫೆ. 19ರಂದು 8.13ಕ್ಕೆ ಒದಗುವ ಮೀನ ಲಗ್ನ ಸುಮುಹೂರ್ತದಲ್ಲಿ ಜರುಗಲಿರುವುದು.
ಬೆಳಿಗ್ಗೆ 10 ರಿಂದ ಮಾತೆ ದೇಯಿ ಬೈದ್ಯೆತಿ ಚಾವಡಿಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದ್ದು, ಧರ್ಮಸ್ಥಳ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರ ಮಠಾಧೀಶರು ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮತ್ತು ಕೇರಳ ಶಿವಗಿರಿ ವರ್ಕಳ ಮಠಾಧೀಶರು ಶ್ರೀ ವಿಶುದ್ಧಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ದೇಯಿ ಬೈದ್ಯತಿ ಕೋಟಿ ಚೆನ್ನಯ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಶ್ರೀ ಚಿತ್ತರಂಜನ್ ಕಂಕನಾಡಿ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನೆರವೇರಿಸಲಿದ್ದಾರೆ. ಕ್ಷೇತ್ರದ ವೆಬ್‌ಸೈಟ್ ಲೋಕಾರ್ಪಣೆಯನ್ನು ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ನೆರವೇರಿಸಲಿದ್ದಾರೆ. ಗೆಜ್ಜೆಗಿರಿ ನಂದನ ಸಾಕ್ಷ್ಯಚಿತ್ರ ಬಿಡುಗಡೆಯನ್ನು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಅಧ್ಯಕ್ಷ ಜಯ ಸಿ. ಸುವರ್ಣ ಮಾಡಲಿದ್ದಾರೆ. ಶ್ರೀ ಕ್ಷೇತ್ರದ ವಿಜ್ಞಾಪಣಾ ಪತ್ರ ಬಿಡುಗಡೆಯನ್ನು ಪುತ್ತೂರು ಶಾಸಕಿ ಶ್ರೀಮತಿ ಶಕುಂತಳಾ ಟಿ. ಶೆಟ್ಟಿ ಮಾಡಲಿದ್ದಾರೆ. ನಿಧಿ ಸಮರ್ಪಣಾ ಪತ್ರ ಬಿಡುಗಡೆಯನ್ನು ಬೆಳ್ತಂಗಡಿ ಶಾಸಕ ವಸಂತ ಬಂಗೇರ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದ.ಕ ಸಂಸದ ನಳಿನ್ ಕುಮಾರ್ ಕಟೀಲ್, ದ.ಕ. ಜಿ. ಪಂ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಬೈಂದೂರು ಶಾಸಕ ಗೋಪಾಲ ಪೂಜಾರಿ, ಕಾರ್ಕಳ ಶಾಸಕ ಸುನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸೊರಬ ಶಾಸಕ ಮಧು ಬಂಗಾರಪ್ಪ, ಪುತ್ತೂರು ತಾ.ಪಂ ಅಧ್ಯಕ್ಷೆ ಭವಾನಿ ಚಿದಾನಂದ್, ಬಡಗನ್ನೂರು ಗ್ರಾ.ಪಂ ಅಧ್ಯಕ್ಷ ಕೇಶವ ಗೌಡ ಕನ್ನಾಯ, ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಅಧ್ಯಕ್ಷ ಸಂಜೀವ ರೈ. ಕೆ.ಪಿ. ರಾಜ್ಯಪ್ರಶಸ್ತಿ ಪುರಸ್ಕೃತ ಚಿತ್ರನಟ ಡಾ. ರಾಜಶೇಖರ್ ಕೋಟ್ಯಾನ್, ಖ್ಯಾತ ಬಹುಭಾಷಾ ಚಲನಚಿತ್ರ ನಟ ಸುಮನ್ ತಳ್ವಾರ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.

   ಬೆಳ್ತಂಗಡಿ : ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ವೃದ್ದಾಪ್ಯ ವೇತನ ಹಾಗೂ ಮನಸ್ವಿನಿ ಯೋಜನೆಯಡಿಯಲ್ಲಿ ಬರುವ ಎಲ್ಲಾ ಫಲಾನುಭವಿಗಳಿಗೆ ಆಧಾರ್ ಮುಖಾಂತರ ಪಿಂಚಣಿ ಪಾವತಿಗೆ ಕ್ರಮ ವಹಿಸಲಾಗಿದ್ದು ಈವರೆಗೆ ಆಧಾರ್ ಸಂಖ್ಯೆ ನೀಡದೇ ಇರುವ ಫಲಾನುಭವಿಗಳು ಕೂಡಲೇ ಆಧಾರ್ ಸಂಖ್ಯೆ ನೀಡಬೇಕಾಗಿರುತ್ತದೆ. ಹಾಗೂ ಇನ್ನು ಮುಂದೆ ಬ್ಯಾಂಕ್ ಖಾತೆ ಮುಖಾಂತರ ವೇತನ ಪಾವತಿಯಾಗುವುದರಿಂದ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆ ಅಥವಾ ಅಂಚೆ ಖಾತೆ ನೀಡಬೇಕಾಗಿರುತ್ತದೆ. ಇಲ್ಲವಾದಲ್ಲಿ ಸದ್ರಿ ಫಲಾನುಭವಿಗಳ ಪಿಂಚಣಿ ರದ್ದತಿಯಾಗುತ್ತದೆ. ಆದ ಕಾರಣ ಎಲ್ಲಾ ಫಲಾನುಭವಿಗಳು ಕೂಡಲೇ ಗ್ರಾಮ ಕರಣಿಕರಿಗೆ ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್/ಅಂಚೆ ಖಾತೆಯ ವಿವರ ನೀಡಬೇಕೆಂದು ಬೆಳ್ತಂಗಡಿ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಗೇರುಕಟ್ಟೆ : ಫ್ರೆಂಡ್ಸ್ ಗೇರುಕಟ್ಟೆರವರು ನಡೆಸುವ ತಾಲೂಕು ವಾಲಿಬಾಲ್ ಅಯೋಸಿಯೇಶನ್ ಬೆಳ್ತಂಗಡಿ ಇದರ ಸಹಭಾಗಿತ್ವದಲ್ಲಿ ಬಿವಿಎಲ್ ತಾಲೂಕು ಮಟ್ಟದ ಪುರುಷರ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಲೀಗ್ ಪಂದ್ಯಾಟ ಫ್ರೆಂಡ್ಸ್ ಟ್ರೋಫಿ ಫೆ.18ರಂದು ಸರಕಾರಿ ಪ್ರೌಢಶಾಲೆ ಗೇರುಕಟ್ಟೆಯಲ್ಲಿ ನಡೆಯಲಿದೆ.

  ಬೆಳ್ತಂಗಡಿ : ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ ಅನ್ವಯ ದಕ್ಷಿಣ ಕನ್ನಡ ಜಿಲ್ಲಾ ಯೋಜನಾ ಸಮಿತಿಗೆ ಪಂಚಾಯತ್ ಮತ ಕ್ಷೇತ್ರದಿಂದ 25 ಮಂದಿ ಸದಸ್ಯರು ಹಾಗೂ ನಗರ ಸ್ಥಳೀಯ ಮತ ಕ್ಷೇತ್ರದಿಂದ 14 ಮಂದಿ ಸದಸ್ಯರನ್ನು ಆಯ್ಕೆ ಮಾಡಲು ಮಾ.6ರಂದು ಚುನಾವಣೆ ನಡೆಯಲಿದೆ.
ನಾಮಪತ್ರಗಳನ್ನು ಫೆ.17ರಿಂದ ಫೆ.23ರವರೆಗೆ ಜಿಲ್ಲಾ ಪಂಚಾಯತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿಯಿಂದ ಪಡೆದು ಸಲ್ಲಿಸಬಹುದು. ಫೆ.25ರಂದು ನಾಮಪತ್ರಗಳ ಪರಿಶೀಲನೆ, ಫೆ.28ರಂದು ಉಮೇದುದಾರಿಕೆ ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಮಾ.6ರಂದು ದ.ಕ ಜಿಲ್ಲಾ ಪಂಚಾಯತು ಸಭಾಂಗಣದಲ್ಲಿ ಮತದಾನ ನಡೆದು ಅಂದು ಸಂಜೆ 5 ಗಂಟೆಯ ಬಳಿಕ ಮತಗಳ ಎಣಿಕೆ ಪ್ರಕ್ರಿಯೆ ಜರುಗಲಿದೆ.

  ಬೆಳ್ತಂಗಡಿ : ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ/ಏಕಲವ್ಯ ವಸತಿ ಶಾಲೆಗಳ 6ನೇ ತರಗತಿಗೆ ಪ್ರವೇಶಾತಿಗಾಗಿ ಫೆ.19 ರಂದು ನಡೆಯಬೇಕಾಗಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ಪರೀಕ್ಷೆಯು ಮುಂದಿನ ಮಾರ್ಚ್ 5 ರಂದು ನಡೆಯಲಿದೆ ಎಂದು ಇಲಾಖೆಯ ತಾಲೂಕು ಪ್ರವೇಶ ಪರೀಕ್ಷೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಬೆಳ್ತಂಗಡಿ: ನ್ಯಾಯಬೆಲೆ ಅಂಗಡಿಗಳಿಂದ ಸಬ್ಸಿಡಿ ದರದಲ್ಲಿ ಪಡಿತರ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
ಎಲ್ಲಾ ಪಡಿತರ ಚೀಟಿಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಜೂ.30ರ ವರೆಗೆ ಕಾಲಾವಕಾಶ ನೀಡಿರುವ ಸರಕಾರ ಆ ಬಳಿಕ ಆಧಾರ್ ಲಿಂಕ್ ಇಲ್ಲದ ಪಡಿತರ ಚೀಟಿಗಳಿಗೆ ಪಡಿತರ ಸಿಗುವುದಿಲ್ಲ ಎಂದು ಎಚ್ಚರಿಸಿದೆ.
ಅಡುಗೆ ಅನಿಲ ಪಡೆಯಲು ಆಧಾರ್ ಕಡ್ಡಾಯ ಮಾಡಿದ ಬಳಿಕ ಇದೀಗ ಅತ್ಯಂತ ಹೆಚ್ಚು ಜನರು ಬಳಸುವ ಪಡಿತರಕ್ಕೂ ಅದನ್ನು ಅನ್ವಯಿಸಲಾಗಿದೆ. ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆಧಾರ್ ಕಾಯಿದೆಯಡಿ ಫೆ.8ರಂದು ಅಧಿಸೂಚನೆಯನ್ನು ಜಾರಿಗೊಳಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾನೂನು ಅಡಿ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಪಡೆಯಬೇಕಾದರೆ ಆಧಾರ್ ನಂಬರ್ ಹೊಂದಿರುವ ಬಗ್ಗೆ ದಾಖಲೆ ತೋರಿಸಬೇಕು ಇಲ್ಲವೇ ಆಧಾರ್ ದೃಢೀಕರಣ ಮಾಡಿಸಬೇಕು ಎಂದು ಸೂಚಿಸಿದೆ.
ಆಧಾರ್ ಕಾರ್ಡ್ ಸಿಗುವ ಮೊದಲು
ಒಂದೊಮ್ಮೆ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಅದು ಸಿಗದೆ ಇದ್ದರೂ ಪಡಿತರ ಪಡೆಯಲು ಅಡ್ಡಿಯಿಲ್ಲ. ಆದರೆ ಅದಕ್ಕೆ ಹೆಚ್ಚುವರಿ ದಾಖಲೆ ಬೇಕಾಗುತ್ತದೆ.
ಪಡಿತರ ಚೀಟಿಯ ಜೊತೆಗೆ ಆಧಾರ್‌ಗೆ ಅರ್ಜಿ ಸಲ್ಲಿಸಿದ ರಶೀದಿ ಅಥವಾ ನೋಂದಣಿಗಾಗಿ ರಾಜ್ಯ ಸರಕಾರಕ್ಕೆ ಮಾಡಿದ ಮನವಿಯ ರಸೀದಿ ನೀಡಬೇಕು. ಜೊತೆಗೆ ಮುಂದೆ ಹೇಳುವ ಎಂಟು ದಾಖಲೆಗಳಲ್ಲಿ ಒಂದನ್ನು ಒದಗಿಸಬೇಕು. ಎಂಟು ದಾಖಲೆಗಳು- ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್,. ಡ್ರೈವಿಂಗ್ ಲೈಸನ್ಸ್, ಗಜೆಟೆಡ್ ಅಧಿಕಾರಿ/ತಹಶೀಲ್ದಾರ್ ತನ್ನ ಅಧಿಕೃತ ಲೆಟರ್‌ಹೆಡ್‌ನಲ್ಲಿ ನೀಡಿದ ಪೋಟೋ ಐಡಿ ಕಾರ್ಡ್, ಕಿಸಾನ್ ಪೋಟೋ ಪಾಸ್ ಬುಕ್ ಮತ್ತು ರಾಜ್ಯ ಸರಕಾರ ನಿಗದಿಪಡಿಸಿದ ಇತರ ದಾಖಲೆಗಳನ್ನು ಸಲ್ಲಿಸಿ ಪಡಿತರವನ್ನು ಪಡೆದುಕೊಳ್ಳಬಹುದು.

  ಹತ್ಯಡ್ಕ: ಇಲ್ಲಿಯ ಅರಸಿನಮಕ್ಕಿ, ಹತ್ಯಡ್ಕ ಗ್ರಾಮದ ಉಪ್ಪರಡ್ಕ ದೈವಗಳ ವಾರ್ಷಿಕ ಜಾತ್ರೆಯು ಫೆ.18ರಿಂದ ಫೆ.20ರ ವರೆಗೆ ಜರುಗಲಿದೆ.
ಫೆ.18ರಂದು ಕಾಪು ಸ್ಥಾನದಲ್ಲಿ ಗಣಹೋಮ, ತೋರಣ, ಭಂಡಾರ ಹಿಡಿಯುವುದು ಮತ್ತು ಬ್ರಹ್ಮರು, ಕುಮಾರ, ಬೊಳಾ, ಪಾಲೇಶರಾಯ, ಪಾಳೆದುಳ್ಳಾಲ್ತಿ, ಮುಗೇರ ಪಂಜುರ್ಲಿ ದೈವಗಳ ನೇಮೋತ್ಸವ ಜರುಗಲಿದೆ.
ಫೆ.19ರಂದು ಮಧ್ಯಾಹ್ನ ಮೆದಿನದಿಂದ ರುದ್ರಚಾಮುಂಡಿ ದೈವದ ಭಂಡಾರ ತರುವುದು, ಸಂಜೆ ಗುತ್ತುವಿನಿಂದ ಶಿರಾಡಿ ದೈವದ ಭಂಡಾರ ತರುವುದು ನಂತರ ಉಪ್ಪರಡ್ಕದಲ್ಲಿ ಕೊಡಮಣಿತ್ತಾಯ ದೈವದ ಭಂಡಾರ ಇಳಿಯುವುದು. ರಾತ್ರಿ ಸುರೇಂದ್ರನ ಸಂಗೀತ ಎಂಬ ತುಳು ಸಾಮಾಜಿಕ ನಾಟಕ ನಡೆಯಲಿದೆ. ರಾತ್ರಿ ಗಂಟೆ 10ರಿಂದ ಬೆಳಗ್ಗಿನ ತನಕ ಬ್ರಹ್ಮರು, ರುದ್ರಚಾಮುಂಡಿ, ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ ಇತ್ಯಾದಿ ದೈವಗಳ ನೇಮೋತ್ಸವ ಜರುಗಲಿದೆ. ಫೆ.20ರಂದು ಕೊಡಮಣಿತ್ತಾಯ, ಶಿರಾಡಿ, ಬಚ್ಚನಾಯ್ಕ, ಗುಳಿಗ ಇತ್ಯಾದಿ ದೈವಗಳ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಫೆ.21ರಂದು ಶುದ್ಧಕಲಶ, ತಂಬಿಲ ಜರುಗಲಿದೆ.

ujire

ಪ್ರೋ| ಎಂ. ಸೀತಾರಾಮ ಭಟ್    ಡಾ. ಎಂ. ಮಂಜುನಾಥ ನಾಯಕ್

ಬೆಳ್ತಂಗಡಿ: ಉಜಿರೆ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯ ಸ್ಥಾಪಕ ಮುಖ್ಯೋಪಾಧ್ಯಾಯರಾಗಿದ್ದ ದಿ| ಆರ್.ಎನ್. ಭಿಡೆಯವರ ಜನ್ಮ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಫೆ.೧೮ರಂದು ಉಜಿರೆಯಲ್ಲಿ ನಡೆಯಲಿರುವ ಪ್ರೌಢ ಶಾಲಾ ಮಕ್ಕಳ ‘ವಿಜ್ಞಾನ ಪ್ರದರ್ಶನ’ವನ್ನು ಇದೇ ಶಾಲೆಯಲ್ಲಿ ಕಲಿತ ಇಬ್ಬರು ವಿಜ್ಞಾನಿಗಳ ನೇತೃತ್ವದಲ್ಲಿ ಆಯೋಜಿಸಲಾಗಿದೆ.
1966-67ರಲ್ಲಿ ಧರ್ಮಸ್ಥಳ ಕರ್ನಾಟಕ ವಿದ್ಯಾಲಯ ಎಂಬ ಹೆಸರನ್ನು ಹೊಂದಿದ್ದ, ಉಜಿರೆ ಶ್ರೀ ಧ.ಮಂ. ಸೆಕೆಂಡರಿ ಅನುದಾನಿತ ಪ್ರೌಢ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಇಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಇನ್ಸಿಟ್ಯೂಟ್ ಆಪ್ ಸೈನ್ಸ್) ಯಲ್ಲಿ ವಿಜ್ಞಾನಿಗಳಾಗಿರುವ ಉಜಿರೆಯ ನಿವಾಸಿಗಳಾದ ಪ್ರೋ| ಎಂ. ಸೀತಾರಾಮ ಭಟ್ ಮತ್ತು ಡಾ. ಎಂ. ಮಂಜುನಾಥ ನಾಯಕ್ ಈ ವಿಜ್ಞಾನ ಪ್ರದರ್ಶನದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿರುವುದು ವಿಶೇಷವಾಗಿದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರೋ| ಎಂ. ಸೀತಾರಾಮ ಭಟ್ ಅವರು 1967ರಲ್ಲಿ ಉಜಿರೆ ಎಸ್.ಡಿ.ಎಂ. ಸೆಕೆಂಡರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ, 1968ರಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಪಿ.ಯು.ಸಿ.
ಶಿಕ್ಷಣ, 1972ರಲ್ಲಿ ಮಹಾವೀರ ಕಾಲೇಜು ಮೂಡಬಿದ್ರೆಯಲ್ಲಿ ಬಿಎಸ್‌ಸಿ ಪದವಿಯನ್ನು ಪಡೆದಿದ್ದರು. ನಂತರ 1975ರಲ್ಲಿ ಇಲೆಕ್ಟ್ರಿಕಲ್ ಕಮ್ಯೂನಿಕೇಶನ್‌ನಲ್ಲಿ ಬಿ.ಇ. ಪದವಿ, 1977ರಲ್ಲಿ ಏರೋನ್ಯೂಟಿಕಲ್‌ನಲ್ಲಿ ಎಂ.ಇ. ಪದವಿ ಹಾಗೂ 1982ರಲ್ಲಿ ಕಂಟ್ರೋಲ್ ಸಿಸ್ಟಮ್‌ನಲ್ಲಿ ಪಿ.ಹೆಚ್.ಡಿ.ಯನ್ನು ಪಡೆದು ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರಿನಲ್ಲಿ ವಿಜ್ಞಾನಿಯಾಗಿ ಉದ್ಯೋಗದಲ್ಲಿದ್ದು, ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಇವರು ಉಜಿರೆ ಅತ್ತಾಜೆಯ ಮಜಿ ಕೇಶವ ಭಟ್ ಮತ್ತು ಶ್ರೀಮತಿ ಸುಭದ್ರಮ್ಮ ಇವರ ಪುತ್ರ.
ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಪ್ ಸೈನ್ಸ್ ಸಂಸ್ಥೆಯಲ್ಲಿ ನ್ಯಾನೋ ಸೈನ್ಸ್ ಮತ್ತು ಇಂಜಿನಿಯರಿಂಗ್‌ನ ಸಂದರ್ಶಕ ಪ್ರೋಪೆಸರ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ. ಎಂ. ಮಂಜುನಾಥ್ ನಾಯಕ್ ಉಜಿರೆ ಅವರು ಉಜಿರೆ ಹಳೆಪೇಟೆಯ ಗುಂಡುರಾಯ ನಾಯಕ್ ಮತ್ತು ಶ್ರೀಮತಿ ರಮಾಭಾಯಿ ನಾಯಕ್ ಅವರ ಪುತ್ರ. ಇವರಿಬ್ಬರ ನೇತೃತ್ವದಲ್ಲಿ ಫೆ.18ರಂದು ನಡೆಯಲಿರುವ ವಿಜ್ಞಾನ ಪ್ರದರ್ಶನದಲ್ಲಿ ಒಟ್ಟು 40 ಮಂದಿ ವಿಜ್ಞಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇವರಲ್ಲಿ 7 ಮಂದಿ ವಿಜ್ಞಾನಿಗಳು ಬೆಳ್ತಂಗಡಿ ತಾಲೂಕಿನವರೇ ಆಗಿರುವುದು ವಿಶೇಷವಾಗಿದೆ. ಇವರು ವಿಜ್ಞಾನ ಪ್ರದರ್ಶ ನದ ಜೊತೆಗೆ ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿವಿಧ ಪ್ರಯೋಗಗಳನ್ನು ಮಕ್ಕಳಿಂದಲೇ ಮಾಡಿಸಲಿದ್ದಾರೆ.

pilya padagrahana copyಪಿಲ್ಯ ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ

ಪಿಲ್ಯ : ವೈಜ್ಞಾನಿಕ ಆವಿಷ್ಕಾರಗಳು ದೇಶದ ಅಭಿವೃದ್ಧಿಗೆ ಮಾರಕವಾಗದೆ ಪೂರಕವಾಗಿರಬೇಕು ಎಂದು ಅಳದಂಗಡಿ ವೈದ್ಯೆ ಡಾ| ಸುಷ್ಮಾ ಡೋಂಗ್ರೆ ಅಭಿಪ್ರಾಯಪಟ್ಟರು.
ಅವರು ಫೆ.12 ರಂದು ಪಿಲ್ಯ ಸ.ಪ್ರಾ.ಶಾಲೆಯಲ್ಲಿ ನಡೆದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಳದಂಗಡಿ ವಲಯದ ಪಿಲ್ಯ ಪ್ರಗತಿಬಂಧು, ಜ್ಞಾನವಿಕಾಸ ಮತ್ತು ಸ್ವಸಹಾಯ ಸಂಘಗಳ ನೂತನ ಒಕ್ಕೂಟದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ತಂತ್ರಜ್ಞಾನದ ಪ್ರಗತಿಯಿಂದ ಯುವಜನರು ಮೌಲ್ಯಗಳಿಂದ ದೂರ ಹೋಗುತ್ತಿರುವುದು ವಿಷಾದನೀಯ. ಹೀಗಾಗಿ ತಂದೆತಾಯಿಯರು ಎಳವೆಯಲ್ಲಿಯೇ ಮಕ್ಕಳನ್ನು ತಿದ್ದಿ ತೀಡಿ ಸರಿಯಾದ ದಿಕ್ಕಿನಲ್ಲಿ ನಡೆಯುವಂತೆ ಮಾಡಬೇಕು. ಸಶಕ್ತ ದೇಶದ ನಿರ್ಮಾಣದಲ್ಲಿ ಪೋಷಕರ ಪಾತ್ರ ಮಹತ್ವದ್ದು ಎಂದ ಅವರು ಒಕ್ಕೂಟ ಸಭೆಗಳಲ್ಲಿ ಆರೋಗ್ಯ ಮಾಹಿತಿ ನೀಡುತ್ತಿರಬೇಕು ಎಂದು ಸಲಹೆ ನೀಡಿದರು.
ಅತಿಥಿಯಾಗಿ ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ್ ಮಿತ್ತಮಾರು, ಅಳದಂಗಡಿ ವಲಯ ಜ.ಜಾ.ವೇದಿಕೆ ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಪಿಲ್ಯ ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯ ಕೊರಗಪ್ಪ ಪೂಜಾರಿ, ಅಳದಂಗಡಿ ವಲಯ ಮೇಲ್ವಿಚಾರಕ ಶಿವರಾಮ ಉಪಸ್ಥಿತರಿದ್ದು. ಸಮುದಾಯ ಅಭಿವೃದ್ಧಿ ವಿಭಾಗ ಯೋಜನಾಧಿಕಾರಿ ಸತೀಶ್ ನಾಯ್ಕ ಯೋಜನೆ ಯಶೋಗಾಥೆಯನ್ನು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟ ಅಧ್ಯಕ್ಷ ನಾರಾಯಣ ಸಾಲ್ಯಾನ್ ವಹಿಸಿದ್ದರು. ನಿರ್ಗಮನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದೀಪಕ್ ಆಠವಳೆ, ಉಪಾಧ್ಯಕ್ಷ ಕೃಷ್ಣರಾಜ ಭಟ್, ಕಾರ್ಯದರ್ಶಿಯಾಗಿ ಸುಜಾತಾ, ಜತೆ ಕಾರ್ಯದರ್ಶಿಯಾಗಿ ವಸುಂಧರಾ ಮರಾಠೆ ಕೋಶಾಧಿಕಾರಿ ರುಕ್ಮಯ ಪೂಜಾರಿ ಇವರಿಗೆ ಒಕ್ಕೂಟದ ಪುಸ್ತಕಗಳನ್ನು ಹಸ್ತಾಂತರಿಸುವುದರ ಮೂಲಕ ಅಧಿಕಾರ ನೀಡಿದರು.
ಒಕ್ಕೂಟ ತಾಂತ್ರಿಕ ತರಬೇತಿದಾರ ಶ್ರೀಕಾಂತ ಪಟವರ್ಧನ್ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಹರಿಣಾಕ್ಷಿ ಲತೀಶ್ ವರದಿ ಮಂಡಿಸಿದರು. ಕಾರ್ಯದರ್ಶಿ ಶೈಲೇಶ್ ವಂದಿಸಿದರು. ಪತ್ರಕರ್ತ ವಿಜಯಕುಮಾರ್ ನಾವುರ ಕಾರ್ಯಕ್ರಮ ನಿರ್ವಹಿಸಿದರು.

ನಾರಾವಿ: ಇಂದು ನಾರಾವಿ ಪಂಚಾಯಿತಿ ಕಟ್ಟಡ ಲೋಕಾರ್ಪಣೆ

Monday, August 29th, 2016 | Suddi Belthangady | no responses ನಾರಾವಿ : ದ.ಕ ಜಿ.ಪಂ ಮಂಗಳೂರು, ತಾ.ಪಂ ಬೆಳ್ತಂಗಡಿ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪವಿಭಾಗ,… ಮುಂದೆ ಓದಿ

ಸುಲ್ಕೇರಿ :   ಗ್ರಾ.ಪಂ ಸುಲ್ಕೇರಿಯಲ್ಲಿ ದೇವರಾಜು ಅರಸು 101ನೇ ಜನ್ಮದಿನಾಚರಣೆ

Saturday, August 20th, 2016 | Suddi Belthangady | no responses ಸುಲ್ಕೇರಿ : ಸುಲ್ಕೇರಿ ಗ್ರಾ.ಪಂ ನಲ್ಲಿ  ದೇವರಾಜು ಅರಸು 101ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.… ಮುಂದೆ ಓದಿ

ಬೆಳ್ತಂಗಡಿ : ಲಾಯಿಲ ಗ್ರಾ.ಪಂಗೆ ಬೀಗ ಜಡಿದು ಪ್ರತಿಭಟನೆ

Monday, July 11th, 2016 | Suddi Belthangady | no responses ಲಾಯಿಲ ಗ್ರಾಮ ಪಂಚಾಯತ್ ಸಿಬ್ಬಂದಿ ಬೀಗ ಹಾಕಿ ಮದುವೆಗೆ ಹೋಗಿ ಊರವರಿಗೆ ಸಂಕಟ.… ಮುಂದೆ ಓದಿ

ನಾರಾವಿ ಪಣಲು ರಸ್ತೆ ತೀರ್ವ ಹದಗೆಟ್ಟಿದ್ದು ಅಟೋ ಚಾಲಕರು, ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರಿಂದ ಗುಂಡಿಗಳನ್ನು ಮುಚ್ಚಲಾಯಿತು.

Friday, May 13th, 2016 | Suddi Belthangady | no responsesಮುಂದೆ ಓದಿ

ಕುಂಟಾಲಪಳಿಕೆ ಶಾಲೆ ರಸ್ತೆ ಕಾಂಕ್ರಿಟೀಕರಣ

ಕುಂಟಾಲಪಳಿಕೆ ಶಾಲೆ ರಸ್ತೆ ಕಾಂಕ್ರಿಟೀಕರಣ

Saturday, October 17th, 2015 | suddiblt | no responses ಕುಂಟಾಲಪಳಿಕೆ ಶಾಲೆಗೆ ಮುಖ್ಯ ರಸ್ತೆಯಿಂದ ಹೋಗುವ ದಾರಿಯು ತೀರಾ ಕಲ್ಲುಗಳಿಂದ ಕೂಡಿದ್ದು ಸಾರ್ವಜನಿಕರ… ಮುಂದೆ ಓದಿ

ಕುಕ್ಕೇಡಿ: ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ಬಂಗೇರರಿಂದ ಶಿಲಾನ್ಯಾಸ

Friday, October 16th, 2015 | suddiblt | no responses ಕುಕ್ಕೇಡಿ: ಕುಕ್ಕೇಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಬೋರ್ಡೇಲು ಪರಿಶಿಷ್ಟ ಜಾತಿ ಕಾಲನಿ ರಸ್ತೆ… ಮುಂದೆ ಓದಿ

ಗ್ರಾಮ ಪಂಚಾಯತ್ ಕಾಮಗಾರಿಗಳ ತಾಂತ್ರಿಕ ಅನುಷ್ಠಾನ ಜಿ.ಪಂ. ಇಂಜಿನಿಯರ್ ವಿಭಾಗ

Thursday, August 13th, 2015 | suddiblt | no responses ಮುಂದೆ ಓದಿ

ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

February 2017
M T W T F S S
« Jan    
 12345
6789101112
13141516171819
20212223242526
2728  

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top