Sat 16 Dec 2017, 9:16AM

ಹೆಚ್ಚಿನ ಸುದ್ದಿಗಳು

ಬೆಳ್ತಂಗಡಿ : ತುರ್ತು ಕಾಮಗಾರಿಯ ಪ್ರಯುಕ್ತ 110/ 11 ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರುಗಳಲ್ಲಿ ಡಿ. 16, 19, 21 ರಂದು ಬೆಳಿಗ್ಗೆ 7.00 ರಿಂದ 5.00 ಗಂಟೆ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Hemanthಬೆಳಾಲು ಗ್ರಾಮದ ಒಡಿಪ್ರೊಟ್ಟು ಗುರುರಾಜ್ ಮತ್ತು ಅರ್ಪಣಾ ದಂಪತಿ ಪುತ್ರ ಹೇಮಂತ್ ಕೋಟ್ಯಾನ್‌ನ 2ನೇ ವರ್ಷದ ಹುಟ್ಟುಹಬ್ಬವನ್ನು ಡಿ. 10ರಂದು ಆಚರಿಸಲಾಯಿತು.

sanvithನಾರಾವಿ : ಈದು ಗ್ರಾಮದ ಪಾಲಡ್ಕ ನಿವಾಸ ಸತೀಶ್ ಪೂಜಾರಿ ಮತ್ತು ಅಕ್ಷಿತ ದಂಪತಿ ಪುತ್ರ ಸನ್ವಿತ್‌ನ 3ನೇ ವರ್ಷದ ಹುಟ್ಟುಹಬ್ಬವನ್ನು ಡಿ.4 ರಂದು ಮುಂಬೈನ ನಾಸಿಕ್‌ನಲ್ಲಿ ಆಚರಿಸಲಾಯಿತು.

Sonaliಮೇಲಂತಬೆಟ್ಟು ಗ್ರಾಮ ಬಟ್ಯರಡ್ಡ ಮನೆಯ ಶ್ರೀಮತಿ ನಿಮಿತಾ ಮತ್ತು ಮೋಹನ್ ದಂಪತಿ ಪುತ್ರಿ ಸೋನಾಲಿಯ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಡಿ. 7ರಂದು ಆಚರಿಸಲಾಯಿತು.

suchitha-krianಬೆಳ್ತಂಗಡಿ ಅಶ್ವಥನಗರ ರೇಷ್ಮೆರೋಡ್ ಸಂಜೀವ ಶೆಟ್ಟಿಯವರ ಪುತ್ರಿ ಸುಚಿತಾರವರ ವಿವಾಹವು ಪಲ್ಲೆ ಮಜಲು ಗುತ್ತು (ಭಂಡಾರಪಾದೆ) ದಿ| ಸದಾಶಿವ ಶೆಟ್ಟಿಯವರ ಪುತ್ರ ಕಿರಣ್‌ರೊಂದಿಗೆ ಡಿ.7 ರಂದು ಬಿ.ಸಿ ರೋಡ್ ರಂಗೋಲಿಯ ರಾಜಾಂಗಣ ಸಭಾಭವನದಲ್ಲಿ ಜರುಗಿತು.

Umesh mamathaಮರೋಡಿ ದರ್ಖಾಸು ಗಿರಿಯಪ್ಪ ಪೂಜಾರಿಯವರ ಪುತ್ರ ಅಳದಂಗಡಿ ಮಾರುತಿ ಡ್ರೈವಿಂಗ್ ಸ್ಕೂಲ್‌ನ ಉಮೇಶ್‌ರವರ  ವಿವಾಹವು ಪುತ್ತೂರು ತಾಲೂಕು ಕಬಕ ಪಣೆಮಜಲು ಪದ್ಮನಾಭ ಅಮೀನ್‌ರವರ ಪುತ್ರಿ ದಿವ್ಯಾರೊಂದಿಗೆ ಅಳದಂಗಡಿ ಸ್ವರಾಜ್ ಟವರ್‍ಸ್‌ನ ಶ್ರೀಗುರು ಸಭಾಭವನದಲ್ಲಿ ನ. 26ರಂದು ಜರಗಿತು.

avinash-sushmithaಕರಂಬಾರು ಗ್ರಾಮದ ಮುಂಡೇಲು ದಿ| ಸಂಜೀವ ಮೂಲ್ಯರ ಪುತ್ರ ಅವಿನಾಶ್‌ರವರ ವಿವಾಹವು ಮಚ್ಚಿನ ಗ್ರಾಮದ ಮಾಯಿಲೋಡಿ ಸೂರಪ್ಪ ಮೂಲ್ಯರ ಪುತ್ರಿ ಸುಶ್ಮಿತಾರೊಂದಿಗೆ ಡಿ.3 ರಂದು ಮಡಂತ್ಯಾರು ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜರುಗಿತು.

muliya jewellers1

muliya jewellers
ಬೆಳ್ತಂಗಡಿ : ಇಲ್ಲಿನ ಸಂತೆಕಟ್ಟೆ ಸುವರ್ಣ ಆರ್ಕೇಡ್‌ನಲ್ಲಿ ಮುಳಿಯ ಚಿನ್ನದ ಮೇಳದ ಪ್ರದರ್ಶನ ಮತ್ತು ಮಾರಾಟ ಡಿ. 15, 16, 17, 18ರಂದು ನಡೆಯಲಿದ್ದು, ಇದರ ಉದ್ಘಾಟನೆಯು ಇಂದು(ಡಿ 15) ನಡೆಯಿತು.
ಬೆಳ್ತಂಗಡಿ ಬ್ಯೂಟಿ ಪಾರ್ಲರ್ ಅಸೋಸಿಯೇಶನ್ ಸದಸ್ಯೆ ಮತ್ತು ವೆಸ್ಟರನ್ ಬ್ಯೂಟಿ ಪಾರ್ಲರ್‌ನ ಮಾಲಕಿ ಶ್ರೀಮತಿ ಪಲ್ಲವಿ ರಾಜ್ ಉದ್ಘಾಟಿಸಿದರು.
ಸಂಸ್ಥೆಯ ಚೆರ್‌ಮೆನ್ ಮತ್ತು ಮ್ಯಾನೆಜಿಂಗ್ ಡೈರೆಕ್ಟರ್ ಮುಳಿಯ ಕೇಶವ ಪ್ರಸಾದ್ ಮುಳಿಯ ಸಂಸ್ಥೆಯ ವಿಶೇಷತೆಗಳನ್ನು ತಿಳಿಸಿದರು. ರಿಟಯರ್ಡ್ ಏರ್‌ಫೋರ್ಸ್ ಲೆಬರ್ ಆಫೀಸರ್ ರಾಮ ಭಟ್ ಸಂಸ್ಥೆಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯರಾದ ಸರಫ್ ಶ್ಯಾಮ್ ಭಟ್, ಪುತ್ತೂರು ಶಾಖೆಯ ಶಾಖಾ ಪ್ರಬಂದಕ ನಾಮದೇವ್ ಮಲ್ಯ ಉಪಸ್ಥಿತರಿದ್ದರು. ಪ್ರೂಕ್ಯೂರ್‌ಮೆಂಟ್ ಮ್ಯಾನೇಜರ್ ಗುರುರಾಜ್ ಅವಭೂತ್ ಕಾರ್ಯಕ್ರಮ ನಿರೂಪಿಸಿದರು.

sdm

sdm1ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ, ಉಜಿರೆ ಕಾಲೇಜಿನಲ್ಲಿ ಇಂದು(ಡಿ. 15) 24ನೇ ಪದವಿ ಪ್ರದಾನ ಸಮಾರಂಭ ಜರುಗಿತು.
ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನವದೆಹಲಿ ಆಯುಷ್ ಮಂತ್ರಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್, ಡಾ. ಬಿ ಯಶೋವರ್ಮ, ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್, ಉಪಸ್ಥಿತರಿದ್ದರು.

kshithi raiಬೆಳ್ತಂಗಡಿ : ಝಿ ಕನ್ನಡ ವಾಹಿನಿಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಸರಿಗಮಪ ಲಿಟ್ಲ್ ಚಾಂಪಿಯನ್ ಸೀಸನ್-14ಗೆ ಧರ್ಮಸ್ಥಳದ ಕು| ಕ್ಷಿತಿ ಕೆ. ರೈ ಆಯ್ಕೆಯಾಗಿದ್ದಾರೆ.
ಎಳವೆಯಿಂದಲೇ ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಕ್ಷಿತಿ ಕೆ. ರೈ ಸಂಗೀತದಲ್ಲಿ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಬಯಕೆ ಹೊಂದಿದ್ದರು. ಮಗಳಲ್ಲಿರುವ ಸಂಗೀತದ ಆಸಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಿದ ಇವರ ತಂದೆ ಕಿಶೋರ್ ರೈ ಹಾಗೂ ತಾಯಿ ಜಯಭಾರತಿ ರೈ ಮಗಳ ಸ್ವರಸ್ವರೂಪಕ್ಕೆ ಒಂದು ಅಡಿಪಾಯದ ರಚನೆಯನ್ನು ನೀಡಲು ಉತ್ಸುಕರಾಗಿ ಮಗಳಿಗೆ ಶಿಕ್ಷಣದ ಜೊತೆ ಬೆಳ್ತಂಗಡಿಯ ಕವಿತಾ ಕೋರ್ನಾಯ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಗೆ ಕಲಿಸಿದರು. ಬಳಿಕ ಸುಗಮ ಸಂಗೀತಕ್ಕಾಗಿ ಪುತ್ತೂರಿನ ಕಿರಣ್ ಕುಮಾರ್ ಅವರ ಹತ್ತಿರ ಕಲಿಸಿದರು.
ತಂದೆ-ತಾಯಿಯ ಪ್ರೋತ್ಸಾಹವನ್ನು ಸಮರ್ಥವಾಗಿಯೇ ಬಳಸಿಕೊಂಡ ಕ್ಷಿತಿ ಅಲ್ಲಲ್ಲಿ ಚಿಕ್ಕಪುಟ್ಟ ವೇದಿಕೆಗಳಲ್ಲಿ ತನ್ನ ಇಂಪಾದ ಧ್ವನಿಯಲ್ಲಿ ಅದ್ಭುತವಾಗಿ ಹಾಡಿ ಜನಮನಗೆದ್ದಿದ್ದಳು. ಇದೀಗ ಝೀ ಕನ್ನಡದ ರಿಯಾಲಿಟಿ ಶೋಗೆ ಆಯ್ಕೆಯಾಗಿರುವ ಈಕೆ ಮೆಗಾ ಅಡಿಷನ್‌ನಲ್ಲಿ ಹಾಡಿದ ಮೊದಲ ಹಾಡಿಗೆ ನಿರ್ಣಯಕರಾದ ಗಾಯಕ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಮತ್ತು ಸಂಗೀತ ಕ್ಷೇತ್ರದ ನಾದಬ್ರಹ್ಮ ಹಂಸಲೇಖ ಅವರಿಂದ ಭೇಷ್ ಎಣಿಸಿಕೊಂಡಿದ್ದಾಳೆ. ಧರ್ಮಸ್ಥಳದ ಎಸ್‌ಡಿಎಂ ಆಂಗ್ಲಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ಕಲಿಯುತ್ತಿರುವ ಕು| ಕ್ಷಿತಿ ಕೆ. ರೈ ಈ ರಿಯಾಲಿಟಿ ಶೋ ದ ಮೂಲಕ ಬೆಳ್ತಂಗಡಿ ತಾಲೂಕಿಗೆ ಹೆಸರು ತರಲಿ, ಸಂಗೀತ ಕ್ಷೇತ್ರದಲ್ಲಿ ಮಹತ್ತರದ ಸಾಧನೆ ಮಾಡುವಂತಾಗಲಿ, ಈಕೆಯ ಭವಿಷ್ಯ ಉಜ್ಜ್ವಲವಾಗಲಿ ಎಂಬುದು ನಮ್ಮೆಲ್ಲರ ಹಾರೈಕೆಯಾಗಿದೆ.

thannirupanrta police rige abhinandaneತಣ್ಣೀರುಪಂತ ಗ್ರಾಮದ ಕಲ್ಲೇರಿಯಲ್ಲಿ ನಡೆದ ಅಂಗಡಿಗೆ ಬೆಂಕಿ ಹಚ್ಚಿ ಕಳ್ಳತನ ನಡೆಸಿದ ಪ್ರಕರಣವನ್ನು ವಾರದೊಳಗೆ ಭೇದಿಸುವ ಮೂಲಕ ಊರಿನ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಂಡ ಪೊಲೀಸ್ ಇಲಾಖೆಗೆ ಕಲ್ಲೇರಿ ಹಾಗೂ ಕರಾಯ ಗ್ರಾಮಸ್ಥರ ವತಿಯಿಂದ ಡಿ. 7ರಂದು ಅಭಿನಂದನೆ ನಡೆಯಿತು.
ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರು ಹಾಗೂ ಉಪ್ಪಿನಂಗಡಿ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿ ಯನ್ನು ಅಭಿನಂದಿಸಿ ಮಾತನಾಡಿದ ತಣ್ಣೀರುಪಂತ ಸಿಎ ಬ್ಯಾಂಕ್ ಅಧ್ಯಕ್ಷ ನಿರಂಜನ್ ಬಾವಂತಬೆಟ್ಟು ಉಪ್ಪಿನಂಗಡಿ ಪೊಲೀಸರು ಯಾವುದೇ ಉಹಾಪೋಹಗಳಿಂದ ಸಮಾಜದ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗಲು ಅವಕಾಶ ನೀಡದೇ ವಾರದೊಳಗೆ ಈ ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಮೂಲಕ ಸಮಾಜದ ಅಭಿನಂದನೆಗೆ ಪಾತ್ರರಾಗಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷರ ಗೋಪಾಲ ನಾಯ್ಕ, ಕಳ್ಳತನ ನಡೆಸಿದ ಬಳಿಕ ಅಂಗಡಿಗೆ ಬೆಂಕಿ ಹಚ್ಚಿ ಅಂಗಡಿ ಸಂಪೂರ್ಣ ಭಸ್ಮಗೊಳಿಸುವ ಮೂಲಕ ಕಳ್ಳರು ಕಲ್ಲೇರಿಯಲ್ಲಿ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದರು. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ವಾರದೊಳಗೆ ಆರೋಪಿಗಳನ್ನು ಬಂಧಿಸಿದೆ ಎಂದರು.
ಉಪ್ಪಿನಂಗಡಿ ಠಾಣಾ ನಿರೀಕ್ಷಕ ನಂದ ಕುಮಾರ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಇಲ್ಲಿನ ಕರಾಯ ಗ್ರಾಮಕ್ಕೆ ಮೊದಲೇ ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಇದೆ. ಆದರೆ ಕಲ್ಲೇರಿ ಘಟನೆ ನಡೆದಾಗ ಹಲವು ಉಹಾಪೋಹಗಳು ಕೇಳಿಬಂದರೂ ಇಲ್ಲಿನ ಜನತೆ ಯಾವುದಕ್ಕೂ ಕಿವಿಗೊಡದೇ ಶಾಂತಿ ಕಾಪಾಡಿದ್ದಾರೆ ಎಂದರು.
ತಣ್ಣೀರುಪಂಥ ಗ್ರಾ.ಪಂ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಮಾತನಾಡಿದರು. ಅಭಿನಂದನೆ ಸಲ್ಲಿಸಿದರು. ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ಹರಿಶ್ಚಂದ್ರ, ಇರ್ಷಾದ್ ಪಡಂಗಡಿ, ಪ್ರವೀಣ್ ರೈ, ಶೇಖರ ಗೌಡ, ಸಲೀಂ, ಜೀಪು ಚಾಲಕ ನಾರಾಯಣ ಗೌಡ ಅವರನ್ನು ಅಭಿನಂದಿಸಲಾಯಿತು. ತಾ.ಪಂ ಸದಸ್ಯೆ ಕೇಶವತಿ, ತಣ್ಣೀರುಪಂತ ಗ್ರಾ.ಪಂ ಸದಸ್ಯರಾದ ನವೀನ್ ಕುಮಾರ್, ಆದಂ ಕೆ., ಡಿ.ಕೆ ಅಯೂಬ್, ಸೂರಪ್ಪ ಬಂಗೇರ, ಅಬ್ದುರ್ರಹ್ಮಾನ್, ತಾಜುದ್ದೀನ್, ಸುಮ, ಗೀತಾ ಉಪಸ್ಥಿತರಿದ್ದರು. ಗ್ರಾ.ಪಂ ಸದಸ್ಯ ಸದಾನಂದ ಶೆಟ್ಟಿ ಮಡಪ್ಪಾಡಿ ಸ್ವಾಗತಿಸಿ, ಪಿಡಿಒ ಪೂರ್ಣಿಮಾ ವಂದಿಸಿದರು.

nethre

Nethre1ಉಜಿರೆ : ಜೇಸಿಐ ಮಂಜುಶ್ರೀ ಬೆಳ್ತಂಗಡಿ, ಯುವವಾಹಿನಿ ಬೆಳ್ತಂಗಡಿ ಘಟಕ ಹಾಗೂ ಸುರೇಶ್ ಕೆ. ಪೂಜಾರಿ ಮುಂಬೈ ಇವರ ಪ್ರಾಯೋಜಕತ್ವದಲ್ಲಿ, ಶ್ರೀ ಗುರು ಮಿತ್ರ ಸಮೂಹ, ಬೆಳ್ತಂಗಡಿ ಹಾಗೂ ನವರಸ ಥಿಯೇಟರ್‍ಸ್, ಉಜಿರೆ ಇದರ ಕಲಾವಿದರು ಅಭಿನಯಿಸಿದ ನಾಟಕ ನೇತ್ರೆ ಇದರ ಉದ್ಘಾಟನಾ ಸಮಾರಂಭವು ಡಿ. 14ರಂದು ಉಜಿರೆ ಶಾರದಾ ಮಂಟಪದಲ್ಲಿ ನಡೆಯಿತು.
ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ನೆರವೇರಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಜೇಸಿಐ ಮಂಜುಶ್ರೀ ಅಧ್ಯಕ್ಷ ಜೇಸಿ ಕಿರಣ್ ಕುಮಾರ್ ಶೆಟ್ಟಿ, ಅಳದಂಗಡಿ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಪ್ರಶಾಂತ್ ಮಚ್ಚಿನ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಬೆಳ್ತಂಗಡಿ ಶ್ರೀ ಗುರು ಮಿತ್ರ ಸಮೂಹದ ಸ್ಥಾಪಕಾಧ್ಯಕ್ಷ ರಮಾನಂದ ಸಾಲಿಯಾನ್ ಮುಂಡೂರು, ಉದ್ಯಮಿ ಸುರೇಶ್ ಕೆ. ಪೂಜಾರಿ ಮುಂಬೈ, ಬೆಳ್ತಂಗಡಿ ಸ.ಪ್ರ.ದ ಕಾಲೇಜು ಪ್ರಾಧ್ಯಪಕ ಡಾ| ಟಿ.ಕೆ ಶರತ್ ಕುಮಾರ್, ಜೀ ಕನ್ನಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್ ಕುಮಾರ್ ಕಾಪಿನಡ್ಕ ಉಪಸ್ಥಿತರಿದ್ದರು. ಚಂದ್ರಹಾಸ ಬಳಂಜ ನಿರೂಪಿಸಿ, ಸ್ಮಿತೇಶ್ ಎಸ್. ಬಾರ್ಯ ಸ್ವಾಗತಿಸಿ, ಅನೀಶ್ ಅಮೀನ್ ವೇಣೂರು ಧನ್ಯವಾದವಿತ್ತರು.

maruthi auto workವೇಣೂರು : ಗೋಳಿಯಂಗಡಿ ಎಸ್.ಡಿ.ಎಂ ಐಟಿಐ ಬಳಿ ನೂತನವಾಗಿ ಆರಂಭಗೊಂಡ ಶ್ರೀ ಕಟೀಲ್ ಮಾರುತಿ ಆಟೋ ವರ್ಕ್ಸ್‌ನ್ನು ಡಿ. 14 ರಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂತೋಷ ಕುಮಾರ್ ಕಾಪಿನಡ್ಕ, ಹರೀಶ್ ಕಾರಿಂಜ, ರಾಮ್ ಪ್ರಸಾದ್ ಮರೋಡಿ, ರಾಜೇಶ್ ಪೂಜಾರಿ ಮೂಡುಕೋಡಿ, ಸತ್ಯೇಂದ್ರ ರಾವ್, ಅನಿಲ್ ಹೆಗ್ಡೆ, ಗುರುಸ್ವಾಮಿ ರಾಮ ಮೇಸ್ತ್ರಿ ನಿಟ್ಟಡೆ ಮೊದಲಾದವರು ಉಪಸ್ಥಿತರಿದ್ದು, ಶುಭಹಾರೈಸಿದರು.

Dharmasthala nowkara samalochana sabheಧರ್ಮಸ್ಥಳ : ಕರ್ನಾಟಕ ರಾಜ್ಯ ಗ್ರಾ.ಪಂ. ಗ್ರಾಮ ನೌಕರರ ಸಂಘ (ಆರ್.ಡಿ.ಪಿ.ಆರ್) ರಾಜ್ಯ ಸಮಿತಿಯ ಆಶ್ರಯದಲ್ಲಿ ರಾಜ್ಯ ಮಟ್ಟದ ಗ್ರಾಮ ಪಂಚಾಯತ್ ನೌಕರರ ಕುಂದು ಕೊರತೆ ಮತ್ತು ಸಮಾಲೋಚನಾ ಸಭೆ ಡಿ. 9ರಂದು ಧರ್ಮಸ್ಥಳದ ಮಹೋತ್ಸವ ಸಭಾಂಗಣದಲ್ಲಿ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಬೊಳ್ಮ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನೌಕರರ ಹತ್ತು ಹಲವು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಗ್ರಾ.ಪಂ. ನೌಕರರ ಬೇಡಿಕೆ ಮತ್ತು ಸಮಸ್ಯೆಗಳು :
1. ಗ್ರಾಮ ಪಂಚಾಯತ್ ನೌಕರರಿಗೆ ನಗರ ಮತ್ತು ಪಟ್ಟಣ ಪಂಚಾಯತ್ ಸಿಬ್ಬಂದಿಗಳಂತೆ ಸೇವಾನಿಯಮಾವಳಿ ಪಂಚಾಯತ್ ರಾಜ್ ಇಲಾಖೆಯಡಿ ರೂಪಿಸಬೇಕು. 2. ವರ್ಗಾವಣೆ ಸವಲತ್ತು ನೀಡಬೇಕು. 3. ವೇತನ ಶ್ರೇಣಿ ಇಲ್ಲದೆ ಕಳೆದ 20 ವರ್ಷ ಸೇವೆ ಸಲ್ಲಿಸಿದ ನೌಕರರಿಗೂ ಈಗ ಸೇರಿದ ನೌಕರರಿಗೂ ಒಂದೇ ರೀತಿಯಲ್ಲಿ ಕನಿಷ್ಠ ವೇತನ ನೀಡುತಿದ್ದು, ಇದು ಅವೈಜ್ಞಾನಿಕ ಪದ್ದತಿಯಾಗಿದ್ದು ಇದರ ಬದಲು ಗ್ರಾಮ ಪಂಚಾಯತ್ ನೌಕರರಿಗೆ ಹುದ್ದೆಗಳ ನ್ವಯ ಸೂಕ್ತ ವೇತನ ಶ್ರೇಣಿ ನಿಗದಿಪಡಿಸಬೇಕು. 4. ೨೦೦೮ ರಲ್ಲಿಯೇ ಭವಿಷ್ಯನಿದಿಯ ಕುರಿತು ಆದೇಶವಾಗಿದ್ದು, ಆದರೆ ಸದ್ರಿ ಆದೇಶ ಆದೇಶವಾ ಗಿಯೇ ಉಳಿದಿದ್ದು ಇಲ್ಲಿಯವರೆಗೂ ಕಾರ್ಯ ರೂಪಕ್ಕೆ ಬರದೆ ಇರುವುದು ಕಳೆದ 9 ವರ್ಷಗಳಿಂದ ಗ್ರಾಮ ಪಂಚಾ ಯತ್ ನೌಕರರಿಗೆ ಅನ್ಯಾಯವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. 5. ಸೂಕ್ತ ವೈದ್ಯಕೀಯ ಭದ್ರತೆಯ ಇಎಸ್‌ಐ ಸೌಲಭ್ಯವಿಲ್ಲ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. 6. ಕಳೆದ ಹಲವು ವರ್ಷಗಳಿಂದ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಮಂಜೂರಾದ ಹುದ್ದೆಗಳಿಗೆ (ಪಂಪುಚಾಲಕ, ನೀರುಗಂಟಿ, ಜವಾನ, ಶುಚಿತ್ವನೌಕರ, ಕರವಸೂಲಿಗಾರ ಮತ್ತು ವಾಹನ ಚಾಲಕ) ಗ್ರಾಮ ಪಂಚಾಯತ್ ಗಳು ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ಅವರಿಂದ ಕಾರ್ಯ ನಿರ್ವಹಿಸಿಕೊಳ್ಳುತ್ತಿದ್ದು, ಇಲ್ಲಿಯವರೆಗೂ ಜಿ.ಪಂ. ಅನುಮೋದನೆಯಾಗದೆ ಅತಂತ್ರ ಸ್ಥಿತಿಯಲ್ಲಿದ್ದು, ಸದ್ರಿ ಅನುಮೋದನೆ ಯಾಗದೆ ಇರುವ ಸಿಬ್ಬಂದಿಗಳಿಗೆ ಜಿ.ಪಂ. ಅನುಮೋದನೆ ನೀಡಬೇಕು. ಮತ್ತು ಸದ್ರಿ ಸಿಬ್ಬಂದಿಗಳ ಪೈಕಿ ಹಲವು ಸಿಬ್ಬಂದಿಗಳು ಈಗಾಗಲೇ ವಯೋಮಿತಿ ಮೀರಿದ್ದು ಮತ್ತು ಹಲವು ಸಿಬ್ಬಂದಿಗಳಿಗೆ ವಿದ್ಯಾರ್ಹ ತೆ ಕಡಿಮೆ ಇದ್ದು, ಇಂತಹ ಸಿಬ್ಬಂದಿ ಗಳಿಗೆ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಒಂದು ಸೂಕ್ತ ನಿದರ್ಶನ ಹೊರಡಿಸಿ ಅನುಮೋದನೆ ನೀಡಿ ಸೇವಾ ಭದ್ರತೆ ಒದಗಿಸಬೇಕು. 7. 2006-07 ನೇ ಸಾಲಿನಿಂದ ಗ್ರಾ.ಪಂ. ಕಚೇರಿಯಲ್ಲಿ ಹುದ್ದೆ ಮಂಜೂರಾಗದೆಯೇ ಅಂದಿನ ದಿನಗಳಲ್ಲಿ ಕಚೇರಿಯಲ್ಲಿ ನುರಿತ ಕಂಪ್ಯೂಟರ್ ಸಾಕ್ಷರತೆ ಹೊಂದಿರುವ ಸಿಬ್ಬಂದಿಗಳು ಇರದ ಕಾರಣ ಎಂ ಜಿ ಎನ್ ಆರ್ ಜಿ ಇ ಎ ಮತ್ತು ಪಂಚತಂತ್ರ ಹಾಗೂ ಇತರ ತಂತ್ರಾಂಶ ಆಧಾರಿತ ಕಂಪ್ಯೂಟರ್ ಮೂಲಕ ಡಾಟ ಎಂಟ್ರೀ ಕಾರ್ಯ ನಿರ್ವಹಿಸಲು ಅಪರೇಟರ್ ಸಿಬ್ಬಂದಿಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ನೇಮಕ ಮಾಡಿಕೊಂಡಿದ್ದು, ಸದ್ರಿ ಸಿಬ್ಬಂದಿಗಳಿಗೆ ಹುದ್ದೆ ಮಂಜೂರಾತಿಯಾಗದೆ ಇರುವ ಕಾರಣ ಸರಕಾರ 2014 ರ ಆದೇಶ ಹೊರಡಿಸುವರೆಗೂ ಯಾವುದೇ ಭದ್ರತೆಯಿಲ್ಲದೆ ಗ್ರಾಮ ಪಂಚಾಯತ್‌ಗಳು ನೀಡುತ್ತಿದ್ದ ಅತ್ಯಂತ ಕಡಿಮೆ ವೇತನದಲ್ಲಿಯೂ ಕಾರ್ಯ ನಿರ್ವಹಿಸಿ ಪಂಚಾಯತ್ ರಾಜ್ ಇಲಾಖೆಯ ತಂತ್ರಾಂಶಗಳ ಅನುಷ್ಠಾನದಲ್ಲಿ ಪ್ರಥಮ ಸ್ಥಾನ ಪಡೆಯುವಲ್ಲಿ ಸೇವೆ ಸಲ್ಲಿಸಿದ ಸರಿಸುಮಾರು ಶೇ ೫೦ ಸಿಬ್ಬಂದಿಗಳು ಸದ್ರಿ ಆದೇಶದನ್ವಯ ಯಾವ ಪಂಚಾಯತಿನಲ್ಲಿ ಗುಮಾಸ್ತ/ಬೆರಳಚ್ಚುಗಾರ ಹುದ್ದೆ ಖಾಲಿ ಇತ್ತೋ ಅಂತಹ ಪಂಚಾಯತ್ ಗಳಲ್ಲಿ ಪದನಾಮ ಬದಲಾದ ಕ್ಲರ್ಕ್ ಕಮ್ ಡಾಟ ಎಂಟ್ರೀ ಅಪರೇಟರ್ ಹುದ್ದೆಗೆ ಅವರು ಈ ಹಿಂದೆ ಸಲ್ಲಿಸಿದ ಮೂರು ವರ್ಷ ಸೇವೆಗೆ ಪ್ರಥಮ ಆಧ್ಯತೆ ನೀಡಿ ಜಿಲ್ಲಾ ಪಂಚಾಯತ್ ಅನುಮೋದನೆ ನೀಡಿ ಅವರಿಗೆ ಸೇವಾ ಭದ್ರತೆಯನ್ನು ಸರಕಾರ ಒದಗಿಸಿದ್ದು, ಆದರೆ ಉಳಿದ ಶೇ ೫೦ ಕ್ಕೂ ಅಧಿಕ ಇಂತಹ ಸಿಬ್ಬಂದಿಗಳಿಗೆ ಇನ್ನೂ ಕೂಡ ಸೇವಾ ಭದ್ರತೆ ದೊರಕದೆ ಅತಂತ್ರ ಸ್ಥಿತಿಯಲ್ಲಿದ್ದು ಇಂತಹ ಸಿಬ್ಬಂದಿಗಳಿಗೂ ಈ ಹಿಂದೆ 2014ರ ಆದೇಶದಂತೆ ಅವರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಸಹೋದ್ಯೋಗಿಗಳಿಗೆ ಸರಕಾರ ನೀಡಿದ ಸೇವಾ ಭದ್ರತೆಯನ್ನು ನೀಡಬೇಕು. ಸೇರಿಂದತೆ 14 ಬೇಡಿಕೆಗಳನ್ನು ಮಂಡಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ಧಿ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಉದಯ ಶೆಟ್ಟಿ ಪೆರ್ಡೂರು, ದ.ಕ. ಜಿಲ್ಲಾಧ್ಯಕ್ಷೆ ಶ್ರೀಮತಿ ರೋಹಿಣಿ ಶೆಟ್ಟಿ ಕುಕ್ಕೇಡಿ, ಕೋಲಾರ ಜಿಲ್ಲಾ ಪ್ರತಿನಿಧಿ ಯೋಗೀಶ್ ಎಂ ಹುತ್ತೂರು, ಡಾವಣಗೆರೆ ಜಿಲ್ಲಾ ಪ್ರತಿನಿಧಿ ಬಸವರಾಜು, ಮಂಡ್ಯ ಜಿಲ್ಲಾ ಪ್ರತಿನಿಧಿ ಕುಮಾರೇಶ್ ಮಳವಳ್ಳಿ, ಕೊಡಗು ಜಿಲ್ಲಾ ಪ್ರತಿನಿಧಿ ರವೀಂದ್ರ ಸೋಮವಾರಪೇಟೆ, ತುಮಕೂರು ಜಿಲ್ಲಾ ಪ್ರತಿನಿಧಿ ನಾಗರಾಜ್ ಸಿ.ಕೆ.ಪುರ, ವಿಜಾಪುರ ಜಿಲ್ಲಾ ಪ್ರತಿನಿಧಿ ಈರಗಂಟೆಪ್ಪ ಕಲಕೇರಿ, ಶಿವಮೊಗ್ಗ ಜಿಲ್ಲಾ ಪ್ರತಿನಿಧಿ ಸಾವಿತ್ರಿ ಎಂ ಎಸ್ ಅರಮನೆಕೊಪ್ಪ, ಉತ್ತರ ಕನ್ನಡ ಜಿಲ್ಲಾ ಪ್ರತಿನಿಧಿ ಆನಂದ ಅಂಕೋಲ, ಚಿಕ್ಕಮಗಳೂರು ಜಿಲ್ಲಾ ಪ್ರತಿನಿಧಿ ಚಂದ್ರಶೇಖರ, ಚಿತ್ರದುರ್ಗ ಜಿಲ್ಲಾ ಪ್ರತಿನಿಧಿ ಗುರುಮೂರ್ತಿ, ಹಾಸನ ಜಿಲ್ಲಾ ಪ್ರತಿನಿಧಿ ಲಿಂಗೇಶ್, ಮೈಸೂರು ಜಿಲ್ಲಾ ಪ್ರತಿನಿಧಿ ಮೋಹನ್ ಸಿ, ಹಾವೇರಿ ಜಿಲ್ಲಾ ಪ್ರತಿನಿಧಿ ಪ್ರಶಾಂತ್ ಪಿ ಜೋಶಿ ಕಾಗಿನೆಲೆ ಉಪಸ್ಥಿತರಿದ್ದರು.
ಬೆಳ್ತಂಗಡಿ ತಾಲೂಕು ಸಮಿತಿಯ ಉಪಾಧ್ಯಕ್ಷ ಕಾಸಿಂ ಪದ್ಮುಂಜ ಸ್ವಾಗತಿಸಿ, ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್ ಕುಲಾಲ್ ಮುದ್ರಾಡಿ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

dharmasthala sdm prathiba dinacharaneಧರ್ಮಸ್ಥಳ: ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ 2017-18ನೇ ಶೈಕ್ಷಣಿಕ ವರ್ಷದ ಪ್ರತಿಭಾ ದಿನಾಚರಣೆಯು ಡಿ.9ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಜರುಗಿತು. ಶಾಲಾ ಸಂಚಾಲಕ ಅನಂತ ಪದ್ಮನಾಭ ಭಟ್ ದ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಧರ್ಮಾಧಿಕಾರಿ, ಡಾ. ಡಿ.ವೀರೇಂದ್ರ ಹೆಗ್ಗಡೆಯವರು ದೀಪ ಪ್ರಜ್ವಲಿಸಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ, ಬಳಿಕ ಶಾಲೆಯ ವಾರ್ಷಿಕ ಪತ್ರಿಕೆಗಳಾದಂತಹ ಕನಸು ಹಾಗೂ ಹೊಂಗನಸು ಬಿಡುಗಡೆಗೊಳಿಸಿ, ಪಠ್ಯ ಚಟುವಟಿಕೆಗಳೊಂದಿಗೆ ಸಹಪಠ್ಯ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅತ್ಯಾವಶ್ಯಕ ಎಂದು ನುಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳಾ ಎಂ.ವಿ.ರವರು ಉಪಸ್ಥಿತರಿದ್ದರು. ಪುಟಾಣಿಗಳ ನೃತ್ಯದೊಂದಿಗೆ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನೇಕ ನೃತ್ಯಪ್ರಕಾರಗಳು ವಿವಿಧ ಭಾಷೆಗಳಲ್ಲಿ ಮೂಡಿಬಂದವು. ಅಂತೆಯೇ ಸಮೂಹಗೀತೆಗಳು ಅಗಾಗ್ಗೆ ಬಿತ್ತರಗೊಂಡು ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿದವು. ಸದ್ರಿ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಗೊಪಾಲ ಕೃಷ್ಣ ಭಟ್, ಉಜಿರೆಯ ಸಿಬಿಎಸ್ಸಿ ಶಾಲಾ ಪ್ರಾಂಶುಪಾಲ ಮನಮೋಹನ್ ನಾಯಕ್, ಬಿ.ಎಡ್. ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು ಮತ್ತು ವಿದ್ಯಾರ್ಥಿಗಳಿಗೆ ಮೆಚ್ಚುಗೆ ಸೂಚಿಸಿ ಹಾರೈಸಿದರು. ಕುಮಾರಿ ರಕ್ಷಿತಾದಾಸ್ ಮತ್ತು ದಿವಿತರಿಂದ ಆರಂಭಿಸಲ್ಪಟ್ಟ ಸದ್ರಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅನ್ವಿತಾ, ಸುಪ್ರೀತಾ, ಚಿನ್ಮಯಿ, ಕೃಪಾ ಎನ್, ಅನ್ವೇಷ್, ವಿಲಾಸ್, ಚಿದ್ವಿಲಾಸ್, ಆಶಿತಾ, ನಮಿತಾ, ಲೋಕೇಶ್ ಶಾಲಾನಾಯಕ ಶೋಧನ್‌ಶಾಲಾ ವಾರ್ಷಿಕ ವರದಿಯನ್ನು ಹಂತ-ಹಂತವಾಗಿ ವಾಚಿಸಿದರು. ಈ ಸಂದರ್ಭದಲ್ಲಿ ಕಳೆದ ಸಾಲಿನ 10ನೇ ತರಗತಿಯಲ್ಲಿ ಉನ್ನತ ದರ್ಜೆ ಪಡೆದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು. ಪ್ರಸಕ್ತ ವರ್ಷದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನೂ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಸಹಶಿಕ್ಷಕಿ ಶ್ರೀಮತಿ ಕಮಲಾ ಜಿ ಹೆಗ್ಡೆ ಧನ್ಯವಾದವಿತ್ತರು.

abdul rahiman 11ಮಡಂತ್ಯಾರು: ಹಿಂದೆ ಆಶಾ ಸ್ಪೋರ್ಟ್ಸ್ ಕ್ಲಬ್ ಪಾರೆಂಕಿ ಎಂದು ಕಾರ್ಯಾಚರಿಸುತ್ತಿದ್ದ ಸಂಘದ ಪುನಶ್ಚೇತನದ ಬಗ್ಗೆ ಆಸಕ್ತ ಯುವ ಸದಸ್ಯರುಗಳ ಸಮಾಲೋಚನಾ ಸಭೆಯನ್ನು ಕರೆದು, ಮತ್ತೊಮ್ಮೆ ಸಂಘಟನೆಯನ್ನು ಗಟ್ಟಿಗೊಳಿಸಿ ಸೌಹಾರ್ದ ಫ್ರೆಂಡ್ಸ್ ಎಂಬುದಾಗಿ ನಾಮಾಂಕಿತಗೊಳಿಸಿ ಅಧಿಕೃತ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
ಹುಪ್ಪ ಅಂಗನವಾಡಿ ಕೇಂದ್ರದ ಬಳಿ ಡಿ. 3 ರಂದು ನಡೆದ ಸಮಾಲೋಚನಾ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಮಡಂತ್ಯಾರು ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಅಬ್ದುಲ್ ರಹಿಮಾನ್ ಪಡ್ಪು ಅವರನ್ನು ಸರ್ವಾನುಮತದಿಂದ ಆರಿಸಲಾಯಿತು. ಗೌರವಾಧ್ಯಕ್ಷರಾಗಿ ಸಿರಿಲ್ ಡಿಕುನ್ನ ಹುಪ್ಪ, ಮಡಂತ್ಯಾರು, ಉಪಾಧ್ಯಕ್ಷರಾಗಿ ಪ್ರಭಾಕರ ಶೆಟ್ಟಿ ಪರನೀರು, ಅಶ್ರಫ್ ಕೆರೆಕೋಡಿ, ಮೆಲ್ವಿನ್ ಡಿಸೋಜಾ ಅರ್ತಿಲ, ಪ್ರ. ಕಾರ್ಯದರ್ಶಿಯಾಗಿ ಅಬ್ದುಲ್ ರಶೀದ್ ಪರನೀರು ಮಡಂತ್ಯಾರು, ಕಾರ್ಯದರ್ಶಿ ಪ್ರವೀಣ್ ಪಾಯಿಸ್ ಹುಪ್ಪ, ಜೊತೆ ಕಾರ್ಯದರ್ಶಿಯಾಗಿ ಶಬೀರ್ ಎಂ, ಕೋಶಾಧಿಕಾರಿಯಾಗಿ ಶರ್ವನ್ ಹುಪ್ಪ ಮಡಂತ್ಯಾರು, ಸಂಘಟನಾ ಕಾರ್ಯದರ್ಶಿಯಾಗಿ ಶೇಕ್‌ಮುಹಮ್ಮದ್ ನವೀದ್ ಪಡ್ಪು, ಕ್ರೀಡಾ ಕಾರ್ಯದರ್ಶಿಯಾಗಿ ಬಶೀರ್ ಪಿಕಪ್, ರೋಹಿತ್ ಪೂಜಾರಿ ಮತ್ತು ಮುಸ್ತಫಾ ಪರನೀರು, ಕಾರ್ಯಕ್ರಮ ಸಂಯೋಜಕರಾಗಿ ಚಂದ್ರಶೇಖರ ಪೂಜಾರಿ, ಜಲೀಲ್ ಮತ್ತು ನವೀದ್ ಅರ್ತಿಲ, ಗೌರವ ಸಲಹೆಗಾರರಾಗಿ ನಝೀರ್ ಟಿಂಬರ್ ಮರ್ಚೆಂಟ್, ಪುರಂದರ ಶೆಟ್ಟಿ ಮೂಡಾಯೂರು, ಪಿ.ಎಮ್. ಇಸ್ಮಾಯಿಲ್ ಪರನೀರು, ಉಸ್ಮಾನ್ ಮೇಸ್ತ್ರಿ ಹುಪ್ಪ, ಜಯಾನಂದ ಆಚಾರ್ಯ ಅರ್ತಿಲ ಮತ್ತು ಗಣೇಶ್ ಕೃಷ್ಣ ಕ್ಯಾಂಟೀನ್ ಮಡಂತ್ಯಾರು, ಲಿಯೋ ಡಿಕುನ್ಹಾ ಉಪ್ಪಾ ಮತ್ತು ಬಾಝಿಲ್ ಫೆನಾಂಡಿಸ್ ಮೂಡಾಯೂರು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹನೀಫ್ ಹುನಿಲ, ನದೀಮ್, ರಿಯಾಝ್ ಪರನೀರು, ಇರ್ಫಾನ್, ಶರೀಫ್, ನಾಸಿರ್, ನೌಷಾದ್, ಇರ್ಷಾದ್, ಅನ್ವರ್ ಮತ್ತು ಶಮೀರ್ ಹುಪ್ಪ ಇವರನ್ನು ಆರಿಸಲಾಯಿತು. ಸಂಘಟನೆಯ ವತಿಯಿಂದ ಮುಂದಕ್ಕೆ ಹುಪ್ಪ ಅಂಗನವಾಡಿ ಕೇಂದ್ರಕ್ಕೆ ನೆರವು, ಸಮಾಜ ಸೇವೆ, ಕ್ರೀಡೆ ಮತ್ತು ಶೈಕ್ಷಣಿಕ ಪ್ರೋತ್ಸಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.

IDYASHRAYA udhgataneಬೆಳ್ತಂಗಡಿ : ಇಡ್ಯಾಶ್ರಯ ಸಭಾಭವನದ ಉದ್ಘಾಟನೆಯನ್ನು ಡಿ.9 ರಂದು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿ ಮಾತನಾಡುತ್ತಾ ಸಣ್ಣ ವಯಸ್ಸಿನಲ್ಲಿ ಪ್ರಭಾಕರ ಭಟ್ ಇಡ್ಯರವರು ಮಹಾರಾಷ್ಟ್ರದ ದಾಭೋಲಿ ಮಠದಲ್ಲಿ ವೇದಾಭ್ಯಾಸ ಪೂರೈಸಿ, ಕರ್ನಾಟಕ, ಗೋವಾ, ಮಹಾರಾಷ್ಟ್ರ ದಲ್ಲಿ ಪೌರೋಹಿತ್ಯ ಮಾಡಿ ಜನ ಮೆಚ್ಚುಗೆ ಪಡೆದು ಈಗ ತಮ್ಮ ಹುಟ್ಟೂರಲ್ಲಿ ಇಡ್ಯಾಶ್ರಯ ನಿರ್ಮಿಸಿ ಜನತೆಗೆ ಕೈಗೆಟಕುವ ದರದಲ್ಲಿ ಧಾರ್ಮಿಕ, ವೈದಿಕ, ಜ್ಯೋತಿಷ್ಯ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಮಾಡಿದ ಈ ಪ್ರಯತ್ನಕ್ಕೆ ಶುಭ ಹಾರೈಸಿದರು.
ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಬಿ.ಜೆ.ಪಿ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜರವರು ಸಮಾಜಕ್ಕೆ ಹಿರಿಯರ ಮಾರ್ಗದರ್ಶನದ ಅವಶ್ಯಕತೆ ಇದ್ದು, ಈ ಸಂದರ್ಭದಲ್ಲಿ ಯುವ ಪುರೋಹಿತರೊಬ್ಬರು ಜನರಿಗೆ ಸೇವಾ ರೂಪದಲ್ಲಿ ಇಂತಹ ಶ್ಲಾಘನೀಯ ಕೆಲಸವನ್ನು ಮಾಡುತ್ತಿರುವುದು ಅತ್ಯಂತ ಸ್ತುತ್ಯಾರ್ಹ ಎಂದು ಹೇಳಿದರು.
ರೋಟರಿ ಅಧ್ಯಕ್ಷ ರೊ. ಡಾ| ಸುಧೀರ್ ಪ್ರಭುರವರು ಮಾತನಾಡಿ ಓರ್ವ ಪ್ರತಿಭಾವಂತ ಹಾಗೂ ತನ್ನ ವೃತ್ತಿಯಲ್ಲಿ ಪ್ರಾಜ್ಞತೆಯನ್ನು ಪಡೆದ ಪ್ರಭಾಕರ ಭಟ್ ಇವರ ಮಾರ್ಗದರ್ಶನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು, ಜ್ಯೋತಿಷ್ಯ ಫಲ ಚಿಂತನೆಗಳು ಫಲಪ್ರದವಾಗಲಿ ಎಂದು ಹಾರೈಸಿದರು. ವೇದಿಕೆಯಲ್ಲ್ಲಿ ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಜಿಲ್ಲಾ ಸಂಘದ ಅಧ್ಯಕ್ಷ ಗಣಪತಿ ಶೆಣೈ ಡೆಚ್ಚಾರು, ಕುವೆಟ್ಟು ಗ್ರಾಮ ಪಂಚಾಯತಿ ಅಧ್ಯಕ್ಷ ಅಶೋಕ್ ಕೋಟ್ಯಾನ್, ಮಂಜುಶ್ರೀ ಜೇಸೀ ಪೂರ್ವಾಧ್ಯಕ್ಷ ಚಿದಾನಂದ ಇಡ್ಯ, ತಾಲೂಕು ಪಂಚಾಯತ್ ಸದಸ್ಯರಾದ ಗೋಪಿನಾಥ ನಾಯಕ್ ಹಾಗೂ ಪೂವಪ್ಪ ಭಂಡಾರಿ ಉಪಸ್ಥಿತರಿದ್ದರು. ಪ್ರಭಾಕರ ಭಟ್ ಹಾಗೂ ಶಾಮಣ್ಣ ಪ್ರಭು ದಂಪತಿಗಳು ಸ್ವಾಗತಿಸಿ ಸತ್ಕರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ರೊಟೇರಿಯನ್ ದಯಾನಂದ ನಾಯಕ್ ನಡೆಸಿಕೊಟ್ಟರು.

hosangadi suryanarayana garbagudi shilanyasaಬೆಳ್ತಂಗಡಿ: ಸೃಷ್ಟಿಯನ್ನು ದೇವರು ಮಾಡಿದಾಗ ಯಾರಿಗೂ ತಾರತಮ್ಯ ಮಾಡಿಲ್ಲ. ಹೀಗಾಗಿ ಅದೇ ಸೃಷ್ಟಿಯಲ್ಲಿರುವ ನಾವು ತಾರತಮ್ಯದಿಂದ ಇರುವುದನ್ನು ಬಿಡಬೇಕು ಎಂದು ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಹೊಸಂಗಡಿ ಗ್ರಾಮದ ಪೆರಿಂಜೆ ಸನಿಹದ ಬಲ್ಲಂಗೇರಿ-ಅಂಗರಕರಿಯ ಎಂಬಲ್ಲಿ ಡಿ.7 ರಂದು ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ನೂತನ ಗರ್ಭಗುಡಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಸಕಾರಾತ್ಮಕ ಚಿಂತನೆ ಸದಾ ನಮ್ಮಲ್ಲಿದ್ದರೆ ಎಲ್ಲವೂ ಒಳಿತಾಗಿಯೇ ಹೋಗುತ್ತದೆ. ನಮ್ಮಲ್ಲಿನ ಕೊರತೆಯನ್ನು ಹೋಗಲಾಡಿಸುವ ಬದಲು ಇನ್ನೊಬ್ಬರ ಕೊರತೆಯ ಬಗ್ಗೆ ಬೊಟ್ಟು ಮಾಡುವುದನ್ನು ನಿಲ್ಲಿಸಬೇಕು. ಇದ್ದುದರಲ್ಲಿಯೇ ತೃಪ್ತಿಪಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಕರಿಂಜೆಶ್ರೀ ಶಕ್ತಿಗುರುಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಅವರು, ಪ್ರತ್ಯಕ್ಷ ದೇವ೦ರಾಗಿರುವ ಸೂರ್ಯ ನಾರಾಯಣನ ಕ್ಷೇತ್ರವು ಫಲ್ಗುಣಿ ನದಿ ತೀರದಲ್ಲಿರುವುದರಿಂದ ಪ್ರಸಿದ್ಧ ತೀರ್ಥಕ್ಷೇತ್ರ ವಾಗುವುದರಲ್ಲಿ ಸಂದೇಹವಿಲ್ಲ. ಭಗವಂತನಲ್ಲಿ ಅಚಲ ನಂಬಿಕೆ, ಶ್ರದ್ಧೆ ಇದ್ದರೆ ನವೀಕರಣ ಕಾರ್ಯಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ ಎಂದ ಅವರು ಕ್ಷೇತ್ರದಲ್ಲಿ ಗೋಪೂಜೆಯನ್ನು ಆರಂಭಿಸಬೇಕು ಎಂದು ಸಲಹೆ ನೀಡಿದರು. ಉದ್ಯಮಿ ಹರೀಶ್ ಪೂಂಜ ಅವರು, ಹಿರಿಯರ ಆಶೀರ್ವಾದ, ಯುವಕರ ಶಕ್ತಿ ಮೇಳೈಸಿದರೆ ಯಾವುದೇ ಕೆಲಸ ದೊಡ್ಡದಲ್ಲ. ಜಾತಿ, ಮತ, ಪಕ್ಷ ಬಿಟ್ಟು ಏಕ ಮನಸ್ಸಿನಿಂದ ಮುಂದೆ ನಡೆಯುವ ಇಲ್ಲಿನ ಕ್ಷೇತ್ರದ ನವೀಕರಣದಲ್ಲಿ ಪಾಲ್ಗೊಳ್ಳೋಣ ಎಂದರು. ಉದ್ಯಮಿಗಳಾದ ಮೂಡಬಿದರೆಯ ಕೆ. ಶ್ರೀಪತಿ ಭಟ್, ವೇಣೂರು ಭಾಸ್ಕರ ಪೈ, ಮೂಡಬಿದ್ರೆಯ ದೇವಿಪ್ರಸಾದ ಶೆಟ್ಟಿ ವೇದಿಕೆಯಲ್ಲಿದ್ದರು. ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲ ಅವರು ಶಿಲಾನ್ಯಾಸ ನೆರವೇರಿಸಿದರು. ವೇ| ಮೂ| ಉದಯ ಪಾಂಗಾಣ್ಣಾಯ ತಂತ್ರಿಗಳು ಶಿಲಾನ್ಯಾಸದ ವಿಧಿವಿಧಾನಗಳನ್ನು ನೆರವೇರಿಸಿದರು. ಮುಷ್ಠಿ ಹಣ ಸಮರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ದೇಗುಲ ಅರ್ಚಕ ಸುಬ್ರಹ್ಮಣ್ಯ ಉಡುಪ, ಶ್ರೀ ಸೂರ್ಯನಾರಾಯಣ ಕ್ಷೇತ್ರ ಪುನರ್‌ನಿರ್ಮಾಣ ಸಮಿತಿ ಕಾರ್ಯದರ್ಶಿ ಪಿ. ಹರಿಪ್ರಸಾದ ಬಜೆ, ಶ್ರೀ ಸೂರ್ಯನಾರಾಯಣ ಆರಾಧನಾ ಸೇವಾ ಟ್ರಸ್ಟ್ ಅಧ್ಯಕ್ಷ ಉದಯಕುಮಾರ್, ಕೋಶಾಧಿಕಾರಿ ಸತೀಶ್ ಶೆಟ್ಟಿ, ಕಾರ್ಯದರ್ಶಿ ಎ. ಗಣರಾಜ ಭಟ್ ಉಪಸ್ಥಿತರಿದ್ದರು.
ಕರುಣಾಕರ ಸ್ವಾಗತಿಸಿ, ಪುನರ್‌ನಿರ್ಮಾಣ ಸಮಿತಿ ಅಧ್ಯಕ್ಷ ಯನ್. ಸೀತಾರಾಮ ರೈ ಪ್ರಸ್ತಾವಿಸಿ ದರು. ಕಿರಣ್‌ಕುಮಾರ್ ವಂದಿಸಿ, ಸುಧಾಕರ ನೂಯಿ ಕಾರ್ಯಕ್ರಮ ನಿರ್ವಹಿಸಿದರು.
ಫಲ್ಗುಣಿ ನದಿ ಈಶಾನ್ಯದಿಂದ ಪ್ರದಕ್ಷಿಣಾಕಾರವಾಗಿ ಹರಿಯುತ್ತಿರುವ ಸಂಗಮ ಸ್ಥಳವಾಗಿರುವ ಅಂಗರಕರಿ ಯದಲ್ಲಿ ಸುಮಾರು 700 ವರ್ಷಗಳ ಹಿಂದಿನಿಂದಲೂ ಈ ಪ್ರದೇಶ ಅದೆಷ್ಟೋ ಋಷಿಮುನಿಗಳ, ಸಾಧು, ಸಂತರ ತಪೋಭೂಮಿಯಾಗಿ ಇದ್ದದ್ದು ಕಂಡು ಬಂದಿದೆ. ಪುರಾತನ ದೇವಸ್ಥಾನದ ಕುರುಹುಗಳೂ ಜೀರ್ಣಾವಸ್ಥೆಯಲ್ಲಿರುವ ದೇಗುಲದ ಕಟ್ಟಡದ ತಳಪಾಯವೂ ಗೋಚರಿಸಿದ್ದರಿಂದ ಸ್ಥಳೀಯರು ದೇವಾಲಯ ವನ್ನು ಪುನರುತ್ಥಾನಗೊಳಿಸುವ ಸಂಕಲ್ಪವನ್ನು ಕೈಗೊಂಡಿದ್ದಾರೆ.

suddi COLORpdf BLDY  2, 4, 6, 8, 10, 12, 14, 16, 18, 20, 22.p65ವೇಣೂರು: ಕರಾವಳಿಯಲ್ಲಿ ಮತ್ತು ಕಂಬಳ ಕೋಣಗಳ ಕಲರವ ಆರಂಭವಾಗಿದೆ. ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಹೊನಲು ಬೆಳಕಿನ ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳವು ಡಿ.16ರಂದು ನಡೆಯಲಿದೆ. ಸಣ್ಣ ಕೈಗಾರಿಕ ಅಭಿವೃದ್ಧಿ ನಿಗಮದ ಅಧ್ಯಕ್ಷರು ಶಾಸಕರು ಆದ ಕೆ. ವಸಂತ ಬಂಗೇರರವರ ಗೌರವಾಧ್ಯಕ್ಷತೆಯಲ್ಲಿ ಯುವ ಮುಂದಾಳು ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿ ಕೊಂಡಿರುವ ನಿತೀಶ್ ಹೆಚ್‌ರವರ ಅಧ್ಯಕ್ಷತೆಯಲ್ಲಿ ಕಂಬಳವು ಜರುಗಲಿದೆ. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಕಂಬಳದ ಉದ್ಘಾಟನೆಯನ್ನು ನೆರವೇರಿಸಿದ್ದಾರೆ. ಹಾಗೂ ವಿವಿಧ ರಾಜಕೀಯ ಮುಖಂಡರು, ವಿವಿಧ ಕ್ಷೇತ್ರದ ಗಣ್ಯರು, ಸಂಘ-ಸಂಸ್ಥೆಗಳ ಪ್ರಮುಖ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬಹುಮಾನಗಳು : ಕನೆ ಹಲಗೆ – 7 ಕೋಲು ನಿಶಾನಿಗೆ ನೀರು ಹಾಯಿಸಿದ ಕೋಣಗಳಿಗೆ-1 ಪವನು, 6 ಕೋಲು ನಿಶಾನಿಗೆ ನೀರು ಹಾಯಿಸಿದ ಕೋಣಗಳಿಗೆ-1/2 ಪವನು, ಹಗ್ಗ ಹಿರಿಯ ಪ್ರಥಮ-2 ಪವನು, ದ್ವಿತೀಯ-1 ಪವನು, ಹಗ್ಗ ಕಿರಿಯ ಪ್ರಥಮ – 1 ಪವನು, ದ್ವಿತೀಯ 1/2 ಪವನು, ನೇಗಿಲು ಹಿರಿಯ ಪ್ರಥಮ-2 ಪವನು, ದ್ವಿತೀಯ-1 ಪವನು, ನೇಗಿಲು ಕಿರಿಯ ಪ್ರಥಮ-1 ಪವನು, ದ್ವಿತೀಯ-1/2 ಪವನು, ಅಡ್ಡ ಹಲಗೆ ಪ್ರಥಮ-1 ಪವನು, ದ್ವಿತೀಯ-1/2 ಪವನು.

suddi COLORpdf BLDY  2, 4, 6, 8, 10, 12, 14, 16, 18, 20, 22.p65ಬೆಳ್ತಂಗಡಿ : ಯುವ ಜನತೆಯಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ, ವ್ಯಕ್ತಿತ್ವ ವಿಕಸನ, ತರಬೇತಿ, ಉದ್ಯಮ ಶೀಲತೆಗಳನ್ನು ಬೆಳೆಸುವ ಜಗತ್ತಿನ ಏಕೈಕ ಅಂತರಾಷ್ಟ್ರೀಯ ಸಂಸ್ಥೆ ಜೆಸಿಐ ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 2018ನೇ ಸಾಲಿನ ಅಧ್ಯಕ್ಷರಾಗಿ ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರೀಯರಾಗಿರುವ ಏರ್‌ಟೆಲ್‌ನ ತಾಲೂಕು ಮ್ಯಾನೇಜರ್ ಆಗಿರುವ ಕಿರಣ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ನಿಕಟ ಪೂರ್ವಾಧ್ಯಕ್ಷರಾಗಿ 2017ರ ಯಶಸ್ವಿ ಅಧ್ಯಕ್ಷ ಸುದ್ದಿಬಿಡುಗಡೆ ವಾರ ಪತ್ರಿಕೆಯ ಉದ್ಯೋಗಿ ಸಂತೋಷ್.ಪಿ. ಕೋಟ್ಯಾನ್ ಬಳಂಜ, ಕಾರ್ಯದರ್ಶಿ ಯಾಗಿ ವಿಶಾಲ್ ಅಗಸ್ಟಿನ್ ನಡ, ಕೋಶಾಧಿಕಾರಿಯಾಗಿ ಗುರುರಾಜ್ ಗುರಿಪಳ್ಳ, ಉಪಾಧ್ಯಕ್ಷರಾಗಿ ಪ್ರಶಾಂತ್ ಲಾಯಿಲ, ಸತೀಶ್ ಸುವರ್ಣ ಗೇರು ಕಟ್ಟೆ, ಪ್ರಸಾದ್ ಬಿ.ಎಸ್ ಕಕ್ಕಿಂಜೆ, ರಂಜಿತ್ ಎಚ್.ಡಿ ಬಳಂಜ, ಅಭಿನಂದನ್ ಹರೀಶ್ ಕುಮಾರ್ ನಡ ಆಯ್ಕೆಯಾಗಿರುತ್ತಾರೆ.
ಜೇಸಿರೆಟ್ ಅಧ್ಯಕ್ಷೆಯಾಗಿ ದೀಪಾ ಕಿರಣ್, ಜೊತೆಕಾರ್ಯದರ್ಶಿಯಾಗಿ ಸಂತೋಷ್ ಶೆಟ್ಟಿ, ಜೇಸಿರೆಟ್ ಸಂಯೋಜಕಿಯಾಗಿ ಅಮೃತ ಎಸ್.ಕೋಟ್ಯಾನ್, ಜೂನಿಯರ್ ಜೇಸಿ ಅಧ್ಯಕ್ಷರಾಗಿ ಸುಹಾಸ್ ಶೆಟ್ಟಿ, ಜೂನಿಯರ್ ಜೇಸಿ ಸಂಯೋಜಕರಾಗಿ ಸ್ವಾತಿ, ಮೀಡಿಯ ಕವರೇಜ್ ಸಂಯೋಜಕರಾಗಿ ಗಣೇಶ್ ಶಿರ್ಲಾಲು, ದಾಮೋದರ್, ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾಗಿ ವಿಜಯ್ ನಿಡಿಗಲ್, ಸ್ಪೇಷಲ್ ಪ್ರೊಜೆಕ್ಟ್‌ನ ನಿರ್ದೇಶಕರಾಗಿ ಪ್ರೀತಮ್ ಶೆಟ್ಟಿ, ಎಂಪವರಿಂಗ್ ಯೂತ್ ನಿರ್ದೇಶಕರಾಗಿ ಚಿದಾನಂದ, ಹೇಮಾವತಿ, ಸಾಂಸ್ಕೃತಿಕ ವಿಭಾಗದ ನಿರ್ದೇಶಕರಾಗಿ ಸ್ಮಿತೇಶ್, ಜಿತೇಶ್.
ಕಮ್ಯುನಿಟಿ ಡೆವಲಪ್‌ಮೆಂಟ್ ವಿಭಾಗದ ನಿರ್ದೇಶಕರಾಗಿ ಶಿವಪ್ರಸಾದ್, ಸದಾಶಿವ್ ಕಕ್ಕಿಂಜೆ, ಆಶಾ ಪ್ರಶಾಂತ್, ಟುವಿತ್, ವಿನ್ಸೆಂಟ್ ಲೋಬೋ, ದಯಾನಂದ, ಕಾರ್ಯಕ್ರಮ ವಿಭಾಗದ ನಿರ್ದೇಶಕರಾಗಿ ಸ್ವರೂಪ್, ಜಯರಾಜ್ ನಡಕ್ಕರ, ಗಣೇಶ್ ಚಾರ್ಮಾಡಿ, ಸುರೇಶ್ ಗೌಡ, ವಿನೋದ್ ಚಾರ್ಮಾಡಿ, ಅಕ್ಷತ ನವೀನ್, ತರಬೇತಿ ವಿಭಾಗದ ನಿರ್ದೇಶಕರಾಗಿ ಸಂತೋಷ್ ಬಳಂಜ, ಜನಾರ್ಧನ ಕಾನರ್ಪ, ತನ್ಸೀಫ್ ಕಿಲ್ಲೂರು, ಜಗದೀಶ್ ನಾಲ್ಕೂರು, ಹರಿಪ್ರಸಾದ್ ಐಎಸ್, ವ್ಯವಹಾರ ವಿಭಾಗದ ನಿರ್ದೇಶಕರಾಗಿ ರಕ್ಷಿತ್ ಶೆಟ್ಟಿ, ಯಶವಂತ್ ಗೌಡ, ಯತೀಶ್ ಕೆ.ಎಸ್, ಗುರುರಾಜ್ ಕಿಲ್ಲೂರು, ರತೀಶ್ ರಾವ್, ಜೇಸಿ ಬುಲೆಟಿಂಗ್ ಸಂಪಾದಕರಾಗಿ ಚಂದ್ರಹಾಸ್ ಬಳಂಜ ಆಯ್ಕೆ ಯಾಗಿರುತ್ತಾರೆ. ಹಾಗೂ ಘಟಕದ ಎಲ್ಲಾ ಪೂರ್ವಾಧ್ಯಕ್ಷರುಗಳು ಗೌರವ ಸಲಹೆಗಾರ ಮಂಡಳಿಯಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಅಧ್ಯಕ್ಷ ಸಂತೋಷ್.ಪಿ.ಕೋಟ್ಯಾನ್ ಬಳಂಜ, ವಲಯಾಧಿಕಾರಿ ನಿಕಟ ಪೂರ್ವಾಧ್ಯಕ್ಷ ವಸಂತ ಶೆಟ್ಟಿ, ವಲಯಾಧಿಕಾರಿ ಚಿದಾನಂದ ಇಡ್ಯಾ, ಪೂರ್ವಾಧ್ಯಕ್ಷರುಗಳು ಹಾಗೂ ಜೆಸಿಐನ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಪದಾಧಿಕಾರಿಗಳ ಸಮಿತಿಯನ್ನು ರಚಿಸಲಾಯಿತು.

sowthadka shilanyasaಕೊಕ್ಕಡ : ಶ್ರೀಕ್ಷೇತ್ರ ಸೌತಡ್ಕ ಕ್ಷೇತ್ರದಲ್ಲಿ ಬಯಲು ಆಲಯದ ಗಣೇಶನ ಕಟ್ಟೆಯ ಹಿಂಭಾಗದಲ್ಲಿ ಅಂದಾಜು ರೂ. ೫೦ ಲಕ್ಷ ವೆಚ್ಚದಲ್ಲಿ ಪಶ್ಚಿಮ ಭಾಗದ ನೂತನ ಗೋಪುರದ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆಯು ಡಿ.11 ರಂದು ನಡೆಯಿತು.
ಶಾಸಕ ಕೆ. ವಸಂತ ಬಂಗೇರ ನೂತನ ಗೋಪುರ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಶ್ರೀ ಕ್ಷೇತ್ರ ಸೌತಡ್ಕವು ಜಿಲ್ಲೆಯ ಎ ಗ್ರೇಡ್ ದೇವಳವಾಗಿದ್ದು ದಿನಂಪ್ರತಿ ಸಾವಿರಾರು ಊರ ಪರವೂರ ಭಕ್ತಾದಿಗಳು ಕ್ಷೇತ್ರವನ್ನು ಸಂದರ್ಶಿಸುತ್ತಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಈ ಅಭಿವೃದ್ದಿ ಕಾರ್ಯಗಳನ್ನು ದೇವಳದ ವತಿಯಿಂದ ನಡೆಸಲಾಗುತ್ತಿದ್ದು ಗೋಪುರದ ಕೆಲಸ ಕಾರ್ಯವು ಶೀಘ್ರವಾಗಿ ನಡೆಯಲು ಶ್ರೀ ಮಹಾಗಣಪತಿ ದೇವರು ಅನುಗ್ರಹಿಸಲಿ ಎಂದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಯವರು ಶುಭಹಾರೈಸಿದರು. ಅತಿಥಿಗಳಾಗಿ ಸೌತಡ್ಕ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ, ಸದಸ್ಯರುಗಳಾದ ಕೆ.ವಿಶ್ವನಾಥ ಕೊಲ್ಲಾಜೆ, ಪಿ. ವಿಶ್ವನಾಥ ಶೆಟ್ಟಿ, ಪ್ರಶಾಂತ್ ರೈ, ಅಣ್ಣಪ್ಪ ಗೌಡ ಕಾಶಿ, ಗಣೇಶ್ ಪಿ.ಕೆ., ಸಿನಿ ಗುರುದೇವನ್, ಸೌಮ್ಯ, ಅರ್ಚಕ ಸದಸ್ಯರಾದ ಸತ್ಯಪ್ರಿಯ ಕಲ್ಲೂರಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಡಾ. ಜಯಕೀರ್ತಿ ಜೈನ್, ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್, ಮಾಜಿ ಅಧ್ಯಕ್ಷ ಜಯಪ್ರಕಾಶ್ ಬಾಳ್ತಿಲ್ಲಾಯ ಉಪಸ್ಥಿತರಿದ್ದರು. ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ ಸ್ವಾಗತಿಸಿ ವಂದಿಸಿದರು.

dharmasthala skdrp ge prasastiಧರ್ಮಸ್ಥಳ : ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕಿರು ಆರ್ಥಿಕ ಕ್ಷೇತ್ರದ ಪ್ರಗತಿಗೆ ನೀಡಿದ ಕೊಡುಗೆಯನ್ನು ಮನ್ನಿಸಿ ಆಕ್ಸೆಸ್ ಸಂಸ್ಥೆ ನೀಡಿದ `ಇನ್‌ಕ್ಲೂಸಿವ್ ಫೈನಾನ್ಸ್ ಇಂಡಿಯಾ ಪ್ರಶಸ್ತಿ’ಯನ್ನು ಹೆಗ್ಗಡೆಯವರ ಪರವಾಗಿ ಅವರ ಸಹೋದರ ಡಿ. ಸುರೇಂದ್ರ ಕುಮಾರ್ ಮತ್ತು ಗ್ರಾಮಾಭಿವೃದ್ಧಿಯೋಜನೆಯ ಕಾರ್ಯಕರ್ತರು ಡಿ.11ರಂದು ದೆಹಲಿಯಲ್ಲಿ ಸ್ವೀಕರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿರು ಆರ್ಥಿಕ ವ್ಯವಹಾರದ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ರಾಷ್ಟ್ರದ ಪ್ರತಿಷ್ಠಿತ ಇನ್‌ಕ್ಲೂಸಿವ್ ಫೈನಾನ್ಸ್ ಇಂಡಿಯಾ ಪ್ರಶಸ್ತಿ ನೀಡಲಾಗಿದೆ. ಅನೇಕ ವಿಭಾಗಗಳಲ್ಲಿ ಸಂಸ್ಥೆಗಳು ಹಾಗೂ ವೈಯಕ್ತಿಕ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಭಾರತದಲ್ಲಿ ಆರ್ಥಿಕ ಸೇರ್ಪಡೆಗೆ ಬೆಂಬಲ ನೀಡುವ ಧೀರ್ಘಕಾಲದ ಕೊಡುಗೆ ನೀಡುವ ವ್ಯಕ್ತಿಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರನ್ನು ವೈಯಕ್ತಿಕ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
ಕಿರು ಆರ್ಥಿಕ ಕ್ಷೇತ್ರದ ಬೆಳವಣಿಗೆ, ಸ್ವಾವಲಂಬನೆ ಮೂಲಕ ಕಿರು ಆರ್ಥಿಕ ವ್ಯವಹಾರವನ್ನು ವಿಸ್ತರಿಸಿ ಅದನ್ನು ಸ್ಥಿರವಾಗಿಸಿ, ಅಡೆತಡೆಗಳ ಹೊರತಾಗಿಯೂ ಅವಿಶ್ರಾಂತ ಪ್ರಯತ್ನಗಳ ಮೂಲಕ ಸಾಧನೆಗೆ ಕಾರಣವಾಗುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ೨೦೦೯ರಿಂದ ನೀಡಲಾಗುತ್ತಿದೆ.

ballamanja kambaalaಮಚ್ಚಿನ: ಕಂಬಳ ಕ್ರೀಡೆಯನ್ನು ಸುಪ್ರಿಂ ಕೋರ್ಟ್ ಕೂಡ ಇತ್ತೀಚೆಗೆ ಮಾನ್ಯ ಮಾಡಿದ್ದು ಈ ಕ್ರೀಡೆಯನ್ನು ಯಾರಿಂದರೂ ತಡೆಯಲು ಸಾಧ್ಯವಿಲ್ಲ. ಕಂಬಳದ ಓಟದಲ್ಲಿ ಸಿದ್ದಹಸ್ತರೆನಿಸಿದವರು ಈಗಿನ ಯುವ ಪೀಳಿಗೆಗೆ ಓಟದ ತರಬೇತಿಯನ್ನು ನೀಡಿ ಅವರನ್ನು ಸದೃಢರನ್ನಾಗಿಸಬೇಕು. ಇಲ್ಲದಿದ್ದಲ್ಲಿ ನಿಮ್ಮ ತಲೆಮಾರು ಮುಗಿದ ನಂತರ ಕೌಶಲ್ಯ ತಿಳಿದ ಓಟಗಾರರಿಲ್ಲದೇ ಹೋದರೆ ಭವಿಷ್ಯದಲ್ಲಿ ಕಂಬಳ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಶಾಸಕ ವಸಂತ ಬಂಗೇರ ಹೇಳಿದರು.
ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ತೇರಬಾಕಿಮಾರು ಗದ್ದೆಯಲ್ಲಿ ಡಿ. 10 ರಂದು ನಡೆದ ದ.ಕ. ಜಿಲ್ಲೆಯ ಸುಪ್ರಸಿದ್ಧ ಶೇಷ ನಾಗ ಜೋಡುಕರೆ ಕಂಬಳದ ಸಮಾರೋಪದಲ್ಲಿ ಕಂಬಳಕ್ಕೆ ನೆರವು ನೀಡಿದವರಿಗೆ ಸ್ಮರಣಿಕೆ ಮತ್ತು ಕಂಬಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ೩೦ಕ್ಕೂ ಅಧಿಕ ಕಂಬಳ ಕ್ರೀಡಾಕೂಟಗಳು ನಡೆಯುತ್ತಿದ್ದು ಪ್ರಾಣಿದಯಾ ಸಂಘದವರು ಇದೆಲ್ಲವನ್ನೂ ವೀಕ್ಷಿಸುತ್ತಿದ್ದಾರೆ. ವರ್ಷಪೂರ್ತಿ ಕೋಣಗಳನ್ನು ಪ್ರೀತಿಯಿಂದ ಸಾಕಿದ ಯಜಮಾನರುಗಳ ಒಂದು ಪೆಟ್ಟು ಹೊಡೆದರೆಂದರೆ ಅದು ಹಿಂಸೆಯಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಕ್ರೀಡೆ ಅಳಿಯದಂತೆ ನೀವೂ ಕೂಡ ಮನಸ್ಸು ಮಾಡಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ಬಿಜೆಪಿ ಯುವ ಮೋರ್ಚಾ ತಾ| ಅಧ್ಯಕ್ಷ ಸಂಪತ್ ಬಿ. ಸುವರ್ಣ ಮಾತನಾಡಿ, ಕಂಬಳ ಮತ್ತು ಯಕ್ಷಗಾನ ಈ ಎರಡು ವಿಚಾರಗಳನ್ನು ಹೊರತುಪಡಿಸಿ ಕರಾವಳಿಯ ಇತಿಹಾಸ ಪೂರ್ಣವಾಗಲು ಸಾಧ್ಯವೇ ಇಲ್ಲ, ಅದರಲ್ಲೂ ಬಳ್ಳಮಂಜ ಕಂಬಳ ಕ್ರೀಡೆ ಬರೀ ಕ್ರೀಡೆಯಲ್ಲ, ಧಾರ್ಮಿಕ ನಂಬಿಕೆ ಕೂಡ, ಇಲ್ಲಿ ಶ್ರೀ ದೇವರಿಗೆ ಕಂಬಳವೇ ಮಧ್ಯಾಹ್ನದ ಪೂಜೆ ಇದ್ದಂತೆ ಎಂಬುದು ಶ್ರೇಷ್ಠ ಪರಂಪರೆ, ಜಿಲ್ಲೆಯ ಕಂಬಳದ ಕೂಟದಲ್ಲಿ ಜಾತಿ ಮತ ಬೇಧವಿಲ್ಲ, ಮುಸಲ್ಮಾನರು, ಕ್ರೈಸ್ತರೂ ಕೂಡ ಕಂಬಳದ ಕೋಣಗಳ ಯಜಮಾನರುಗಳಾಗಿದ್ದಾರೆ. ಮತ್ತು ಮುಕ್ತವಾಗಿ ಭಾಗವಹಿಸುತ್ತಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ಎಂ.ಆರ್. ಸುಪಾರಿ ಟ್ರೇಡರ್‍ಸ್ ಮಾಲಕ ಹೈದರ್ ಎಂ.ಆರ್. ಮಂಡಂತ್ಯಾರು, ಮಡಂತ್ಯಾರು ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಅಬ್ದುಲ್ ರಹಿಮಾನ್ ಪಡ್ಪು, ಉಪ್ಪಿನಂಗಡಿ ಶ್ರೀ ದೇವಿ ಮೋಟಾರ್‍ಸ್ ಮಾಲಕ ಚಂದ್ರಹಾಸ ಪಕಳ, ಮಚ್ಚಿನ ಗ್ರಾ. ಪಂ. ಉಪಾಧ್ಯಕ್ಷ ಚಂದ್ರಶೇಖರ ಬಿ.ಎಸ್, ಶುಭ ಕೋರಿದರು.
ವೇದಿಕೆಯಲ್ಲಿ ಮೆಸ್ಕಾಂ ನಿರ್ದೇಶಕಿ ಮಲ್ಲಿಕಾ ಪ್ರಶಾಂತ್ ಪಕಳ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಾಜಶೇಖರ್ ಶೆಟ್ಟಿ ಮಡಂತ್ಯಾರು, ಗ್ರಾ.ಪಂ. ಸದಸ್ಯೆ ಚಂಚಲಾ, ಶ್ರೀ ಅನಂತೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಹರ್ಷ ಸಂಪಿಗೆತ್ತಾಯ, ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್, ತಣ್ಣೀರುಪಂತ ಗ್ರಾ.ಪಂ. ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಕಂಬಳ ಸಮಿತಿ ಅಧ್ಯಕ್ಷ, ವಿಜಯ ಬ್ಯಾಂಕ್ ಹೌಸಿಂಗ್ ಫೈನಾನ್ಸ್ ಜನರಲ್ ಮೆನೇಜರ್ ಕೋರಬೆಟ್ಟು ಸುಬ್ಬಯ್ಯ ಶೆಟ್ಟಿಯವರು, ಶಾಸಕ ವಸಂತ ಬಂಗೇರರು ನನಗೆ ಕೊಟ್ಟಿದ್ದ ಭರವಸೆಯಂತೆ ಕಳೆದ ನಾಲ್ಕೂವರೆ ವರ್ಷದಲ್ಲಿ ಮಚ್ಚಿನ ಕ್ಷೇತ್ರಕ್ಕೆ 24 ಕೋಟಿ ರೂ. ಅನುದಾನ ತಂದಿದ್ದಾರೆ. ಅದಕ್ಕಾಗಿ ಅವರಿಗೆ ಗ್ರಾಮದ ಪರವಾಗಿ ಅಭಿನಂದಿಸುತ್ತೇನೆ ಎಂದರು. ಅಲ್ಲದೆ ಕಂಬಳ ಕೂಟದ ಯಶಸ್ವಿಗಾಗಿ ದೇಣಿಗೆ, ಅನ್ನದಾನ ಇತ್ಯಾದಿಯಾಗಿ ಪೂರ್ಣವಾಗಿ ಸಹಕಾರ ನೀಡಿದ ದಾನಿಗಳನ್ನೂ ಅಭಿನಂದಿಸಿ ಮಾತನಾಡಿದರು.
ಸಹಕಾರ ನೀಡಿದವರಿಗೆ ಸ್ಮರಣಿಕೆ ಶಾಲು ನೀಡಲಾಯಿತು. ಊಟದ ದಾನಿಗಳಾದ ಲಕ್ಷ್ಮಣ್ ಬಟ್ರಬೈಲು ತೆಕ್ಕಾರು, ಶಾಶ್ವತ ಫಲಕಗಳ ಪ್ರಾಯೋಜಕರಾದ ಚಂದ್ರಹಾಸ ಪಕಳ ಮತ್ತು ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನ ತಣ್ಣೀರುಪಂತದ ಅಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ ಮೊದಲಾದವರು ವೇದಿಕೆಯಲ್ಲಿದ್ದರು. ಕಂಬಳ ಸಮಿತಿಯ ಉಪಾಧ್ಯಕ್ಷ ಸುಧೀರ್ ಶೆಟ್ಟಿ, ಪ್ರ. ಕಾರ್ಯದರ್ಶಿ ಮೋಹನ ಗೌಡ ಪಳ್ಳತಳ, ಜೊತೆ ಕಾರ್ಯದರ್ಶಿ ಕುಮಾರ್, ಕೋಶಾಧಿಕಾರಿ ಸಂಜೀವ ಮಾಯಿಲೋಡಿ ಸಹಿತ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಹಕಾರ ನೀಡಿದರು. ಸದಾನಂದ ಕಾರ್ಯಕ್ರಮ ನಿರ್ವಹಿಸಿದರು.
ಉದ್ಘಾಟನಾ ಕಾರ್ಯಕ್ರಮ: ಪೂರ್ವಾಹ್ನ ನಡೆದ ಸಮಾರಂಭದಲ್ಲಿ ಅನಂತ್ರಾಮ ಜೋಗಿತ್ತಾಯ ಬಂಗಳಾಯಿ ಕಂಬಳದ ಉದ್ಘಾಟನೆ ನೆರವೇರಿಸಿದರು. ಮಚ್ಚಿನ ಗ್ರಾ.ಪಂ. ಅಧ್ಯಕ್ಷೆ ಹರ್ಷಲತಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ನವಚೇತನ ತೋಟಗಾರಿಕಾ ಕಂಪೆನಿ ತಣ್ಣೀರುಪಂತ ಇದರ ಅಧ್ಯಕ್ಷರೂ ಆಗಿರುವ ಮಚ್ಚಿನ ಸಹಕಾರಿ ಸಂಘದ ಮಾಜಿ ಸಿಇಒ ದುಗ್ಗಪ್ಪ ಗೌಡ ಪೊಸೊಂದೋಡಿ ಶುಭ ಕೋರಿದರು. ಕಂಬಳದ ಫ್ಲಾಗ್ ತೀರ್ಪುಗಾರರಾದ ಸಂಜೀವ ಶೆಟ್ಟಿ ಮುಗೆರೋಡಿ, ವಸಂತ (ಪದ್ಮನಾಭ) ಕಾರಂದೂರು ಮತ್ತು ಜನಾರ್ದನ ಕರ್ಪೆ ಹಾಗೂ ಎಲ್ಲಾ ತೀರ್ಪುಗಾರರೂ ಶ್ರದ್ಧಾ ಭಕ್ತಿಯಿಂದ ಸೇವೆ ನೀಡಿದರು.ತೀರ್ಪುಗಾರರಾಗಿ ರಾಜೀವ ಶೆಟ್ಟಿ ಎಡ್ತೂರು, ಸತೀಶ್ ಕುಮಾರ್ ಹೊಸ್ಮಾರ್, ಲ| ಧರಣೇಂದ್ರ ಕುಮಾರ್ ಜೈನ್ ಮದ್ದಡ್ಕ, ಮಹಾವೀರ ಜೈನ್ ವೇಣೂರು, ಪ್ರಕಾಶ್ ಕಜೆಕ್ಕಾರು, ವಸಂತ ಗೌಡ ಮರಕಡ ಇವರ ತಂಡ ಸಹಕಾರ ನೀಡಿತು.

nalike samudaya bhavanaಬೆಳ್ತಂಗಡಿ : ಇಲ್ಲಿನ ನಲಿಕೆಯವರ ಸಮುದಾಯ ಭವನದ ಉದ್ಘಾಟನೆಯು ಡಿ. 10ರಂದು ನಡೆಯಿತು.
ಸಮುದಾಯ ಭವನದ ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ, ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೆ. ನಲಿಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಸುರೇಶ್ ಬಾಬು ಪಣೆಜಾಲು, ಮಂಗಳೂರು ಭಾರತೀಯ ತೈಲ ನಿಗಮದ ಬಿ.ಎಸ್ ಸುಂದರ್, ಜಿಲ್ಲಾ ನಲಿಕೆಯವರ ಯುವ ವೇದಿಕೆಯ ಅಧ್ಯಕ್ಷ ಸುಬ್ರಾಯ ಕಲ್ಮಂಜ, ಸಂಘದ ಕೋಶಾಧಿಕಾರಿ ಸುರೇಶ್ ಬಿ.ಕೆ., ಕಾರ್ಯದರ್ಶಿ ಸತೀಶ್ ಪಿ., ಉಪಾಧ್ಯಕ್ಷ ಎಸ್ ಪ್ರಭಾಕರ ಮೊದಲಾವರು ಉಪಸ್ಥಿತರಿದ್ದರು.

kotichennayaಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಕೋಟಿ ಚೆನ್ನಯ ಕ್ರೀಡಾಕೂಟವು ಡಿ. 31 ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಸಂಘದ ಗೌರವಾಧ್ಯಕ್ಷ ಶಾಸಕ ಕೆ. ವಸಂತ ಬಂಗೇರರವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ, ಹಾಗೂ ಸಂಘದ ಎಲ್ಲಾ ನಿರ್ದೇಶಕರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

marody shanipooje

marody shanipooje1ಮರೋಡಿ : ಮರೋಡಿ ಉಮಾಮಹೇಶ್ವರ ದೇವಸ್ಥಾನ ಇದರ ಸಹಕಾರದಲ್ಲಿ ಶ್ರೀ ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ಇದರ 4ನೇ ವರ್ಷದ ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಶನಿಪೂಜೆಯು ಸುಬ್ರಹ್ಮಣ್ಯ ಪ್ರಸಾದ್ ಭಟ್ ಅವರ ನೇತೃತ್ವದಲ್ಲಿ ಡಿ. 9ರಂದು ದೇವಸ್ಥಾನದ ವಠಾರದಲ್ಲಿ ಜರಗಿತು.
ಧಾರ್ಮಿಕ ಸಭೆಯಲ್ಲಿ ರಾಜ್ಯ ಸಂಸ್ಕಾರ ಭಾರತಿ ಲೋಕ ಕಲಾವಿದ ಪ್ರಮುಖ್, ತುಳುವ ಬೊಳ್ಳಿ ದಯಾನಂದ ಕತ್ತಲ್‌ಸಾರ್ ಧಾರ್ಮಿಕ ಉಪನ್ಯಾಸ ನೀಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಕೊಡಂಗೆ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜಯಂತ ಕೋಟ್ಯಾನ್, ತಾ.ಪಂ. ಸದಸ್ಯೆ ರೂಪಲತಾ, ಕೇಳ ಮಾಗಣೆ ಬಸದಿಯ ಆಡಳಿತ ಮೊಕ್ತೇಸರ ಡಾ.ಆಶೀರ್ವಾದ್, ಮುಂಬೈ ಉದ್ಯಮಿ ನಾರಾಯಣ ಸುವರ್ಣ, ಉದ್ಯಮಿ ರತ್ನಾಕರ ಬುಣ್ಣಾನ್ ಮರೋಡಿ, ಸಾವ್ಯ ಗುಜ್ಜೊಟ್ಟು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಗೌರವಾಧ್ಯಕ್ಷ ಶ್ರೀಧರ ಪೂಜಾರಿ ಭೂತಡ್ಕ, ಮುಂಬೈ ಉದ್ಯಮಿ ಸುರೇಶ್ ಅಂಚನ್  ಹಾಗೂ ಮೊದಲಾದವರು ಭಾಗವಹಿಸಿದ್ದರು.

gurujayanthi

gurujayanthi1

gurujayanthi2

gurujayanthi3

gurujayanthi4ಕುಕ್ಕೆಡಿ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಮಿತಿ ಕುಂಡದಬೆಟ್ಟು -ಕುಕ್ಕೇಡಿ-ನಿಟ್ಟಡೆ, ಬಿಲ್ಲವ ಮಹಿಳಾ ವೇದಿಕೆ ಮತ್ತು ಯುವ ಬಿಲ್ಲವ ವೇದಿಕೆ, ಹಾಗೂ ಯುವವಾಹಿನಿ ಸಂಚಾಲನ ಸಮಿತಿ, ಕುಂಡದಬೆಟ್ಟು -ಕುಕ್ಕೇಡಿ-ನಿಟ್ಟಡೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಿ. 10 ರಂದು ಡಾ| ಬಿ.ಆರ್. ಅಂಬೇಡ್ಕರ್ ಭವನ, ಕುಕ್ಕೇಡಿ-ಕುಂಡದಬೆಟ್ಟು ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಗುರುಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ನಿಟ್ಟಡೆ ಗ್ರಾಮದ ಗೋಳಿಯಂಗಡಿ ಪಾಣೂರು ಬಳಿ ಕುಕ್ಕೇಡಿ ಗ್ರಾಮ ಪಂಚಾಯತು ವತಿಯಿಂದ ನಿರ್ಮಿಸಲ್ಪಟ್ಟ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿದರು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ. ಸುಂದರ ಪೂಜಾರಿ ಅಮೇಯಿ ವಹಿಸಿದ್ದರು.
ಈ ಸಂದರ್ಭದಲ್ಲಿ ಮಂಗಳೂರು ಬ್ರಹ್ಮಶ್ರೀ ನಾರಾಯಣಗುರು ಅಧ್ಯಾಯನ ಪೀಠ ವಿಶ್ವವಿದ್ಯಾನಿಲಯದ ನಿರ್ದೇಶಕ ಮುದ್ದು ಮೂಡುಬೆಳ್ಳೆ, ಸರಕಾರಿ ಪ್ರೌಢ ಶಾಲೆ, ಕಲ್ಲಾಡಿ ಮಂಗಳೂರು ಮುಖ್ಯೋಪಾಧ್ಯಾಯಿನಿ ಸುರೇಖಾ ಕೆ.ಇ.ಎಸ್, ಬೆಳ್ತಂಗಡಿ ಶ್ರೀ.ಗು.ನಾ.ಸ್ವಾ.ಸೇ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ನಿಕಟಪೂರ್ವ ಅಧ್ಯಕ್ಷ ಭಗೀರಥ ಜಿ. ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಂತೋಷ್ ಕುಮಾರ್ ಉಪ್ಪಾರು, ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ರಾಜಶ್ರೀ ರಮಣ್, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷೆ ತೇಜಾಕ್ಷಿ, ಕುಕ್ಕೇಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಎಚ್, ಬಿಲ್ಲವ ವೇದಿಕೆ ಅಧ್ಯಕ್ಷೆ ಲೀಲಾವತಿ ನಿಟ್ಟಡೆ ಯುವವಾಹಿನಿ ಅಧ್ಯಕ್ಷ ಎಚ್.ಎಲ್. ಉದಯ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

ಆಕಾಶವಾಣಿ ಮಂಗಳೂರು ಇಲ್ಲಿ ಶ್ರೀ ಮದವೂರ ವಿಘ್ನೇಶ ಕಲಾ ಸಂಘ ಗೇರುಕಟ್ಟೆ ಇದರ ಸದಸ್ಯರಿಂದ ಡಿ.10 ರಂದು ಮಧ್ಯಾಹ್ನ 2.35 ಕ್ಕೆ ಯಕ್ಷಗಾನ ತಾಳಮದ್ದಳೆ ಶ್ರೀ ಮಹಿಷ ಮರ್ಧಿನಿ ಪ್ರಸಾರವಾಗಲಿದೆ.
ಹಿಮ್ಮೆಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಗುರು ಪ್ರಸಾದ, ಚೈತನ್ಯ ಕೃಷ್ಣ ಪದ್ಯಾಣ, ಮುಮ್ಮೇಳದಲ್ಲಿ ಪ್ರೋ. ಮಧೂರು ಮೋಹನ ಕಲ್ಲೂರಾಯ, ದಿವಾಕರಾಚಾರ್ಯ ಗೇರುಕಟ್ಟೆ, ಉದಯಶಂಕರ್ ಭಟ್, ಸುಂದರ ಕೃಷ್ಣ ಮಧೂರು, ದಿನೇಶ ಬಳಂಜ, ಸುರೇಶ ಕಲ್ಲೂರಾಯ, ಶ್ರೀಮತಿ ಕೆ.ಆರ್ ಸುವರ್ಣ ಕುಮಾರಿ ಭಾಗವಹಿಸಲಿದ್ದಾರೆ. ಮಧೂರ ಮೋಹನ ಕಲ್ಲೂರಾಯ ಸಂಯೋಜಿಸಿದ್ದಾರೆ.

ಕೊಕ್ಕಡ : ಶ್ರೀಕ್ಷೇತ್ರ ಸೌತಡ್ಕ ಕ್ಷೇತ್ರದಲ್ಲಿ ಬಯಲು ಆಲಯದ ಗಣೇಶನ ಕಟ್ಟೆಯ ಹಿಂಭಾಗದಲ್ಲಿ ಅಂದಾಜು 50 ಲಕ್ಷ ವೆಚ್ಚದಲ್ಲಿ ಪಶ್ಚಿಮ ಭಾಗದ ನೂತನ ಗೋಪುರದ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆಯು ಡಿ.11 ರಂದು ಬೆಳಗ್ಗೆ 10.30 ಕ್ಕೆ ನಡೆಯಲಿದೆ. ಬೆಳ್ತಂಗಡಿಯ ಶಾಸಕ ಕೆ. ವಸಂತ ಬಂಗೇರ ಶಂಕುಸ್ಥಾಪನೆ ನೆರವೇರಿಸಲಿದ್ದು ಈ ಸಂದರ್ಭ ಕುಕ್ಕೆ ಸುಬ್ರಹ್ಮಣ್ಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸೌತಡ್ಕ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ, ಸದಸ್ಯರುಗಳಾದ ಕೆ.ವಿಶ್ವನಾಥ ಕೊಲ್ಲಾಜೆ, ಪಿ. ವಿಶ್ವನಾಥ ಶೆಟ್ಟಿ, ಪ್ರಶಾಂತ್ ರೈ, ಅಣ್ಣಪ್ಪ ಗೌಡ ಕಾಶಿ, ಗಣೇಶ್ ಪಿ.ಕೆ., ಸಿನಿ ಗುರುದೇವನ್, ಸೌಮ್ಯ , ಅರ್ಚಕ ಸದಸ್ಯರಾದ ಸತ್ಯಪ್ರಿಯ ಕಲ್ಲೂರಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಮುಂತಾದವರು ಭಾಗವಹಿಸಲಿದ್ದಾರೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

Ladru D'sozaನಡ : ಮಂಜೊಟ್ಟಿ ಕೊಲ್ಯೊಟ್ಟು ನಿವಾಸಿ ಲಾದ್ರು ಡಿಸೋಜ(58ವ)ರವರು ಡಿ. 7ರಂದು ತೋಟದಲ್ಲಿ ತೆಂಗಿನಕಾಯಿ ಕೀಳುತ್ತಿದ್ದಾಗ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.
ಮೃತರು ನಡ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾಗಿದ್ದರು.
ಮೃತರು ಪತ್ನಿ ಸೆಲಿನ್ ಡಿಸೋಜ, ಪುತ್ರಿಯರಾದ ಜಾನೆಟ್, ಲಿನೆಟ್, ವೈಲೆಟ್ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

ಆರ್‌ಸೆಟಿಗಳ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಕ್ಕೆ ರಾಷ್ಟ್ರೀಯ ಉದ್ಯಮಶೀಲತಾ ಅಭಿವೃದ್ಧಿ ಪುರಸ್ಕಾರ

Thursday, August 17th, 2017 | Suddi Belthangady | no responses ಧರ್ಮಸ್ಥಳ : ಕೇಂದ್ರ ಸರ್ಕಾರದ ಉದ್ಯಮಶೀಲತಾ ಅಭಿವೃದ್ಧಿ ಮಂತ್ರಾಲಯದ 2016-17ನೇ ಸಾಲಿನ ರಾಷ್ಟ್ರೀಯ… ಮುಂದೆ ಓದಿ

ಮುಂಡಾಜೆ-ಕಲ್ಮಂಜ-ಧರ್ಮಸ್ಥಳ ರಸ್ತೆಗೆ  7ಕೋಟಿ ರೂ. ಮಂಜೂರು: ಶಾಸಕ ಬಂಗೇರ

Thursday, July 27th, 2017 | Suddi Belthangady | no responses ಎರಡು ರಸ್ತೆಗಳಿಗೆ 18 ಕೋಟಿ ರೂ. ಮಂಜೂರು
ಉಜಿರೆ – ಬೆಳಾಲು- ಕುಪ್ಪೆಟ್ಟಿ… ಮುಂದೆ ಓದಿ

ನಾರಾವಿ ಗ್ರಾಮ ಸಭೆ

ನಾರಾವಿ ಗ್ರಾಮ ಸಭೆ

Tuesday, July 25th, 2017 | Suddi Belthangady | no responses ನಾರಾವಿ ಗ್ರಾಮ ಪಂಚಾಯತಿನ 2017-18ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಇಂದು(ಜು.25)… ಮುಂದೆ ಓದಿ

ಅಳದಂಗಡಿ: ಜೂ.4: ಉಚಿತ ಪುಸ್ತಕ ವಿತರಣೆ-ಪ್ರತಿಭಾ ಪುರಸ್ಕಾರ ವೀರಪ್ಪ ಮೊಲಿ, ಸುಕೇಶ್ ಹೆಗ್ಡೆ ಅಳದಂಗಡಿಗೆ

Saturday, June 3rd, 2017 | Suddi Belthangady | no responses ಅಳದಂಗಡಿ : ಶ್ರೀ ಸತ್ಯದೇವತೆ(ಕಲ್ಲುರ್ಟಿ) ದೈವಸ್ಥಾನ ಅಳದಂಗಡಿ ಇದರ ವತಿಯಿಂದ 13ನೇ ವರ್ಷದ… ಮುಂದೆ ಓದಿ

ಅರಣ್ಯ-ಕಂದಾಯ ಇಲಾಖೆ ನಡುವೆ ಜಾಗದ ಗೊಂದಲ : ಉದ್ಯಾನವನದಿಂದ ಹೊರಬಂದ ನಾರಾವಿ ನೂಜೋಡಿಯ ೨೫ ಮಲೆಕುಡಿಯ ಕುಟುಂಬಗಳಿಗೆ ದೊರೆಯದ ಹಕ್ಕುಪತ್ರ

Thursday, April 6th, 2017 | suddiblt | no responses ನಾರಾವಿ: ಕಂದಾಯ ಇಲಾಖೆ ಹಾಗೂ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಇದರ… ಮುಂದೆ ಓದಿ

ಗ್ರಾ.ಪಂ ವ್ಯಾಪ್ತಿಯಲ್ಲಿ ಕೋಳಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ

Thursday, March 30th, 2017 | Suddi Belthangady | no responses ಗ್ರಾಮಸ್ಥರ ಬೇಡಿಕೆ
ಕೋಳಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ
ರುದ್ರ ಭೂಮಿಯನ್ನು ಸಾರ್ವಜನಿಕರಿಗೆ ಮುಂದೆ ಓದಿ

ವ್ಯವಸ್ಥಿತ ರೀತಿಯಲ್ಲಿ ಗ್ರಾಮಸಭೆ ನಡೆಸಲು ಅನುವುಮಾಡಿಕೊಟ್ಟ ಗ್ರಾಮಸ್ಥರಿಗೆ ಅಭಿನಂದನೆ: ರವೀಂದ್ರ ಪೂಜಾರಿ

Friday, March 17th, 2017 | Suddi Belthangady | no responses ಬೇಡಿಕೆಗಳು
ಮನೆಕಟ್ಟಲು ಮರಗಳನ್ನು ತೆಗೆಯಲು ಅರಣ್ಯ ಇಲಾಖೆಯಿಂದ ಪರವಾನಿಗೆ.
ಉದ್ಯೋಗಖಾತರಿ ಮೊತ್ತ ಶೀಘ್ರ ಮುಂದೆ ಓದಿ

ಬಂದಾರು ಗ್ರಾ.ಪಂ. ಮಹಿಳಾ ಗ್ರಾಮಸಭೆ

ಬಂದಾರು ಗ್ರಾ.ಪಂ. ಮಹಿಳಾ ಗ್ರಾಮಸಭೆ

Monday, February 27th, 2017 | Suddi Belthangady | no responses ಬಂದಾರು :  ಮಹಿಳೆಯರು ಸಾಮಾಜಿಕವಾಗಿ ಆರ್ಥಿಕವಾಗಿ ಜಾಗೃತಗೊಳ್ಳುವ ಮೂಲಕ ಹಾಗೂ ಉದ್ಯೋಗದಿಂದ ಸಂಘಟಿತರಾಗುವ… ಮುಂದೆ ಓದಿ

ಮಲವಂತಿಗೆ ಗ್ರಾಮ ಸಭೆ, ಇಬ್ಬರು ವಿಕಲಚೇತನರಿಗೆ ಪರಿಕರ ವಿತರಣೆ

Saturday, February 18th, 2017 | Suddi Belthangady | no responses ಮಲವಂತಿಗೆ : ಮಲವಂತಿಗೆ ಗ್ರಾಮ ಪಂಚಾಯತ್‌ನಲ್ಲಿ ಗ್ರಾಮ ಸಭೆಯು ಇಂದು(ಫೆ.18) ಕರಿಯಾಲು ದ.ಕ.ಜಿ.ಪಂ… ಮುಂದೆ ಓದಿ

ಗ್ರಾಮ ಸಭೆಗೆ ಗ್ರಾಮಸ್ಥರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದರೆ ಗ್ರಾಮದ ಅಭಿವೃದ್ಧಿ ಸಾಧ್ಯ : ಸತೀಶ್

Thursday, February 16th, 2017 | Suddi Belthangady | no responses ಉದ್ಯೋಗ ಖಾತರಿ ಯೋಜನೆಯಲ್ಲಿ ರೂ. 54 ಲಕ್ಷ ಬಳಕೆ- ಜಿಲ್ಲೆಗೆ ಪ್ರಥಮ *ಖಾತರಿ ಮುಂದೆ ಓದಿ

ಉಜಿರೆ ಅನುಗ್ರಹ ವಿವಿಧೊದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Saturday, September 24th, 2016 | Suddi Belthangady | no responses ಉಜಿರೆ ಅನುಗ್ರಹ ವಿವಿಧೊದ್ದೇಶ ಸಹಕಾರಿ ಸಂಘ ಸಂಕರ್ಷಣಾ ಕಾಂಪ್ಲೆಕ್ಸ್ ಜನಾರ್ದನ ದೇವಸ್ಥಾನದ ಹತ್ತಿರ… ಮುಂದೆ ಓದಿ

ಕೊಕ್ಕಡ ಗ್ರಾಮ ಪಂಚಾಯತ್ ಗ್ರಾಮ ಸಭೆ

ಕೊಕ್ಕಡ ಗ್ರಾಮ ಪಂಚಾಯತ್ ಗ್ರಾಮ ಸಭೆ

Friday, September 23rd, 2016 | Suddi Belthangady | no responses ಗ್ರಾಮ ಪಂಚಾಯತ್ ಕೊಕ್ಕಡದ ವತಿಯಿಂದ ಕೊಕ್ಕಡ ಅಂಬೇಡ್ಕರ್ ಭವನದಲ್ಲಿ  2016-17ನೇ ಸಾಲಿನ ಪ್ರಥಮ… ಮುಂದೆ ಓದಿ

ಮುಂಡಾಜೆ : ವಿಶೇಷ ಗ್ರಾಮ ಸಭೆ

ಮುಂಡಾಜೆ : ವಿಶೇಷ ಗ್ರಾಮ ಸಭೆ

Thursday, May 5th, 2016 | Suddi Belthangady | no responses ಮುಂಡಾಜೆ : ಮುಂಡಾಜೆ ಗ್ರಾಮ ಪಂಚಾಯತ್‌ದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ವಿಶೇಷ… ಮುಂದೆ ಓದಿ

ದಿಡುಪೆ ಎಳನೀರು ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರ ಆಗ್ರಹ

Thursday, May 5th, 2016 | Suddi Belthangady | no responses ಎಳನೀರು: ಮಲವಂತಿಗೆ ಗ್ರಾಮ ಪಂಚಾಯತಿನ ಗ್ರಾಮ ಸಭೆಯು ಎಳನೀರು ಪ್ರದೇಶದ ಉಕ್ಕುಡ ಸಮುದಾಯ… ಮುಂದೆ ಓದಿ

ಗ್ರಾ. ಪಂ. ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳಿಗೆ ನೀರಿಂಗಿಸುವ ಯೋಜನೆ

Thursday, May 5th, 2016 | Suddi Belthangady | no responses ಮಡಂತ್ಯಾರು : ಮಡಂತ್ಯಾರು ಗ್ರಾಮ ಪಂಚಾಯತದ ಗ್ರಾಮ ಸಭೆ ಪಂಚಾಯತದ ಅಧ್ಯಕ್ಷ ಗೋಪಾಲಕೃಷ್ಣ… ಮುಂದೆ ಓದಿ

ಬೆಳಾಲು ಗ್ರಾಮಸಭೆ: ಕುಡಿಯುವ ನೀರಿಗೆ ಮೊದಲ ಆಧ್ಯತೆ

Tuesday, May 3rd, 2016 | Suddi Belthangady | no responses ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಸೇರಿದಂತೆ ದ. ಕ ಜಿಲ್ಲೆಯಲ್ಲಿ ಕುಡಿಯುವ ನೀರಿನ… ಮುಂದೆ ಓದಿ

ಅಂಡಿಂಜೆ: ವಿಶೇಷ ಗ್ರಾಮ ಸಭೆ

ಅಂಡಿಂಜೆ: ವಿಶೇಷ ಗ್ರಾಮ ಸಭೆ

Friday, April 29th, 2016 | Suddi Belthangady | no responses ಅಂಡಿಂಜೆ : ಗ್ರಾಮೋದಯದಿಂದ ಭಾರತ ಉದಯ ಅಭಿಯಾನ ರಾಷ್ಟ್ರೀಯ ಪಂಚಾಯತು ದಿವಸ ನಮ್ಮ… ಮುಂದೆ ಓದಿ

ನೀರು ನೈರ್ಮಲ್ಯ ಸಮಿತಿ ಅನುರ್ಜಿತಗೊಳಿಸಿ... ಸಿಸಿ ಟಿವಿ ಸರಿಪಡಿಸಿ... ನೀರಿನ ಸಂಪರ್ಕ ಕಡಿತದಲ್ಲಿ ಪಕ್ಷಪಾತ ತಡೆಯಿರಿ... ಕ್ರಿಯಾ ಯೋಜನೆಗಳು ಗ್ರಾಮ ಸಭೆಯಲ್ಲೇ ನಡೆಯಲಿ...

ನೀರು ನೈರ್ಮಲ್ಯ ಸಮಿತಿ ಅನುರ್ಜಿತಗೊಳಿಸಿ… ಸಿಸಿ ಟಿವಿ ಸರಿಪಡಿಸಿ… ನೀರಿನ ಸಂಪರ್ಕ ಕಡಿತದಲ್ಲಿ ಪಕ್ಷಪಾತ ತಡೆಯಿರಿ… ಕ್ರಿಯಾ ಯೋಜನೆಗಳು ಗ್ರಾಮ ಸಭೆಯಲ್ಲೇ ನಡೆಯಲಿ…

Thursday, April 28th, 2016 | Suddi Belthangady | no responses ನೀರು ಮತ್ತು ನೈರ್ಮಲ್ಯ ಸಮಿತಿಯನ್ನು ಗ್ರಾಮ ಸಭೆಯಲ್ಲಿ ರಚಿಸಬೇಕೆಂಬ ನಿಯಮವಿದ್ದರೂ ಅದನ್ನು ಮೀರಿ… ಮುಂದೆ ಓದಿ

ಕಣಿಯೂರು ಗ್ರಾಮ ಪಂಚಾಯತ್‌ನ ವಿಶೇಷ ಗ್ರಾಮ ಸಭೆ

ಕಣಿಯೂರು ಗ್ರಾಮ ಪಂಚಾಯತ್‌ನ ವಿಶೇಷ ಗ್ರಾಮ ಸಭೆ

Thursday, April 28th, 2016 | Suddi Belthangady | no responses ಪದ್ಮುಂಜ ಇಲ್ಲಿಯ ಕಣಿಯೂರು ಗ್ರಾಮ ಪಂಚಾಯತಿಯಲ್ಲಿ ರಾಷ್ಟ್ರೀಯ ಪಂಚಾಯತ್‌ರಾಜ್ ದಿವಸ್ ಆಚರಿಸುವ ಬಗ್ಗೆ… ಮುಂದೆ ಓದಿ

ಹೊಸಂಗಡಿ   ಗ್ರಾಮಸಭೆ - ಗೈರಾಗಿದ್ದ ಕಂದಾಯ ಇಲಾಖಾಧಿಕಾರಿಯನ್ನು ಕರೆಸಿದ ಶಾಸಕರು!

ಹೊಸಂಗಡಿ ಗ್ರಾಮಸಭೆ – ಗೈರಾಗಿದ್ದ ಕಂದಾಯ ಇಲಾಖಾಧಿಕಾರಿಯನ್ನು ಕರೆಸಿದ ಶಾಸಕರು!

Thursday, April 28th, 2016 | Suddi Belthangady | no responses ವೇಣೂರು: ರಾಷ್ಟ್ರೀಯ ಪಂಚಾಯತ್‌ರಾಜ್ ದಿನಾಚರಣೆ ಅಂಗವಾಗಿ ಹೊಸಂಗಡಿ ಗ್ರಾ.ಪಂ. ಆವರಣದಲ್ಲಿ ಕರೆಯಲಾಗಿದ್ದ ಗ್ರಾಮಸಭೆಗೆ… ಮುಂದೆ ಓದಿ

ಕಡಿರುದ್ಯಾವರ ಗ್ರಾ.ಪಂ.ದಲ್ಲಿ ರಾಷ್ಟ್ರಧಜ ಯಾಕೆ ಹಾರಿಸುವುದಿಲ್ಲ: ಗ್ರಾಮಸ್ಥರ ಪ್ರಶ್ನೆ

Thursday, April 21st, 2016 | Suddi Belthangady | no responses ಕಡಿರುದ್ಯಾವರ : ಕಡಿರುದ್ಯಾವರ ಗ್ರಾಮ ಪಂಚಾಯತ್‌ನ ೨೦೧೫-೧೬ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ… ಮುಂದೆ ಓದಿ

ಪದವು-ಪುದುವೆಟ್ಟು ರಸ್ತೆ ಡಾಮರೀಕರಣಕ್ಕೆ ಗ್ರಾಮಸ್ಥರ ಆಗ್ರಹ

Thursday, April 21st, 2016 | Suddi Belthangady | no responses ಪುದುವೆಟ್ಟು : ಪುದುವೆಟ್ಟು ಗ್ರಾಮ ಪಂಚಾಯತದ ಗ್ರಾಮ ಸಭೆ ಪಂಚಾಯತದ ಅಧ್ಯಕ್ಷೆ ಶ್ರೀಮತಿ… ಮುಂದೆ ಓದಿ

ಕೊಯ್ಯೂರು ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾತಿಗೆ ಗ್ರಾಮಸ್ಥರ ಆಗ್ರಹ

Thursday, April 21st, 2016 | Suddi Belthangady | no responses ಕೊಯ್ಯೂರು : ಕೊಯ್ಯೂರು ಗ್ರಾಮ ಪಂಚಾಯತದ ಗ್ರಾಮ ಸಭೆ ಪಂಚಾಯತದ ಅಧ್ಯಕ್ಷೆ ಶ್ರೀಮತಿ… ಮುಂದೆ ಓದಿ

ರಸ್ತೆ ಮಾರ್ಜಿನ್ ಅತಿಕ್ರಮಿಸಿರುವ ಕಟ್ಟಡಗಳು ಸರ್ವೇಗೆ ಆಗ್ರಹ

Friday, April 15th, 2016 | Suddi Belthangady | no responses ಉಜಿರೆ: ಉಜಿರೆ ಗ್ರಾಮ ಪಂಚಾಯತದ ೨೦೧೫-೧೬ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ… ಮುಂದೆ ಓದಿ

ಪಂಚಾಯತ್ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ಕಾಮಗಾರಿಗಳು...

ಪಂಚಾಯತ್ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ಕಾಮಗಾರಿಗಳು…

Friday, April 8th, 2016 | suddiblt | no responses ಮಿತ್ತಬಾಗಿಲು ಗ್ರಾ. ಪಂ. ದ್ವಿತೀಯ ಸುತ್ತಿನ ಸಾಮಾನ್ಯ ಸಭೆಯು ಮಾ.೨೮ ರಂದು ಪಂಚಾಯತ್… ಮುಂದೆ ಓದಿ

ಮುರ ಬಳಿ ಕುಸಿಯುವ ಹಂತದಲ್ಲಿ ಸೇತುವೆ : ದುರಸ್ಥಿಗೆ ಒತ್ತಾಯ

Friday, April 8th, 2016 | suddiblt | no responses ನಾವೂರು : ನಾವೂರು ಗ್ರಾಮ ಪಂಚಾಯತದ ಗ್ರಾಮ ಸಭೆ ಪಂಚಾಯತದ ಅಧ್ಯಕ್ಷೆ ಶ್ರೀಮತಿ… ಮುಂದೆ ಓದಿ

ಕರಂಬಾರು ರೂ. 48ಲಕ್ಷದ ಎರಡು ಕೆರೆಗಳ ಕಾಮಗಾರಿ ಅಪೂರ್ಣ

Friday, April 8th, 2016 | suddiblt | no responses ಶಿರ್ಲಾಲು : ಶಿರ್ಲಾಲು ಗ್ರಾಮ ಪಂಚಾಯತದ ಗ್ರಾಮ ಸಭೆ ಪಂಚಾಯತದ ಅಧ್ಯಕ್ಷೆ ಶ್ರೀಮತಿ… ಮುಂದೆ ಓದಿ

ಕಲ್ಮಂಜ ಗ್ರಾ.ಪಂನಲ್ಲಿ ವಿವಿಧ ಸೌಲಭ್ಯಗಳ ವಿತರಣೆ

Saturday, April 2nd, 2016 | Suddi Belthangady | no responses ಕಲ್ಮಂಜ: ಗ್ರಾ. ಪಂಚಾಯತ್‌ನ ಶೇ. 3 ಅನುದಾನದಲ್ಲಿ ಬರುವ ಸೌಲಭ್ಯಗಳನ್ನು ಗ್ರಾಮ ಸಭೆಯಲ್ಲೇ… ಮುಂದೆ ಓದಿ

ಘನ-ದ್ರವ ತ್ಯಾಜ್ಯ ವಿಲೇ : ಸಮರ್ಪಕ ವ್ಯವಸ್ಥೆಗೆ ಆಗ್ರಹ

Thursday, September 3rd, 2015 | suddiblt | no responses ಉಜಿರೆ : ಉಜಿರೆ ಗ್ರಾಮ ಪಂಚಾಯತದ ಗ್ರಾಮ ಸಭೆ ಪಂಚಾಯದ ಅಧ್ಯಕ್ಷ ಶ್ರೀಧರ… ಮುಂದೆ ಓದಿ

ಮರದ ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡಲು ಗ್ರಾಮಸ್ಥರ ಆಗ್ರಹ

Thursday, September 3rd, 2015 | suddiblt | no responses ಮಾಲಾಡಿ : ಮಾಲಾಡಿ ಗ್ರಾಮ ಪಂಚಾಯತ್‌ನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ಬೇಬಿ… ಮುಂದೆ ಓದಿ

ಬೆಳ್ತಂಗಡಿ : ತುರ್ತು ಕಾಮಗಾರಿಯ ಪ್ರಯುಕ್ತ 110/ 11 ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರುಗಳಲ್ಲಿ ಡಿ. 16, 19, 21 ರಂದು ಬೆಳಿಗ್ಗೆ 7.00 ರಿಂದ 5.00 ಗಂಟೆ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Hemanthಬೆಳಾಲು ಗ್ರಾಮದ ಒಡಿಪ್ರೊಟ್ಟು ಗುರುರಾಜ್ ಮತ್ತು ಅರ್ಪಣಾ ದಂಪತಿ ಪುತ್ರ ಹೇಮಂತ್ ಕೋಟ್ಯಾನ್‌ನ 2ನೇ ವರ್ಷದ ಹುಟ್ಟುಹಬ್ಬವನ್ನು ಡಿ. 10ರಂದು ಆಚರಿಸಲಾಯಿತು.

sanvithನಾರಾವಿ : ಈದು ಗ್ರಾಮದ ಪಾಲಡ್ಕ ನಿವಾಸ ಸತೀಶ್ ಪೂಜಾರಿ ಮತ್ತು ಅಕ್ಷಿತ ದಂಪತಿ ಪುತ್ರ ಸನ್ವಿತ್‌ನ 3ನೇ ವರ್ಷದ ಹುಟ್ಟುಹಬ್ಬವನ್ನು ಡಿ.4 ರಂದು ಮುಂಬೈನ ನಾಸಿಕ್‌ನಲ್ಲಿ ಆಚರಿಸಲಾಯಿತು.

Sonaliಮೇಲಂತಬೆಟ್ಟು ಗ್ರಾಮ ಬಟ್ಯರಡ್ಡ ಮನೆಯ ಶ್ರೀಮತಿ ನಿಮಿತಾ ಮತ್ತು ಮೋಹನ್ ದಂಪತಿ ಪುತ್ರಿ ಸೋನಾಲಿಯ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಡಿ. 7ರಂದು ಆಚರಿಸಲಾಯಿತು.

suchitha-krianಬೆಳ್ತಂಗಡಿ ಅಶ್ವಥನಗರ ರೇಷ್ಮೆರೋಡ್ ಸಂಜೀವ ಶೆಟ್ಟಿಯವರ ಪುತ್ರಿ ಸುಚಿತಾರವರ ವಿವಾಹವು ಪಲ್ಲೆ ಮಜಲು ಗುತ್ತು (ಭಂಡಾರಪಾದೆ) ದಿ| ಸದಾಶಿವ ಶೆಟ್ಟಿಯವರ ಪುತ್ರ ಕಿರಣ್‌ರೊಂದಿಗೆ ಡಿ.7 ರಂದು ಬಿ.ಸಿ ರೋಡ್ ರಂಗೋಲಿಯ ರಾಜಾಂಗಣ ಸಭಾಭವನದಲ್ಲಿ ಜರುಗಿತು.

Umesh mamathaಮರೋಡಿ ದರ್ಖಾಸು ಗಿರಿಯಪ್ಪ ಪೂಜಾರಿಯವರ ಪುತ್ರ ಅಳದಂಗಡಿ ಮಾರುತಿ ಡ್ರೈವಿಂಗ್ ಸ್ಕೂಲ್‌ನ ಉಮೇಶ್‌ರವರ  ವಿವಾಹವು ಪುತ್ತೂರು ತಾಲೂಕು ಕಬಕ ಪಣೆಮಜಲು ಪದ್ಮನಾಭ ಅಮೀನ್‌ರವರ ಪುತ್ರಿ ದಿವ್ಯಾರೊಂದಿಗೆ ಅಳದಂಗಡಿ ಸ್ವರಾಜ್ ಟವರ್‍ಸ್‌ನ ಶ್ರೀಗುರು ಸಭಾಭವನದಲ್ಲಿ ನ. 26ರಂದು ಜರಗಿತು.

avinash-sushmithaಕರಂಬಾರು ಗ್ರಾಮದ ಮುಂಡೇಲು ದಿ| ಸಂಜೀವ ಮೂಲ್ಯರ ಪುತ್ರ ಅವಿನಾಶ್‌ರವರ ವಿವಾಹವು ಮಚ್ಚಿನ ಗ್ರಾಮದ ಮಾಯಿಲೋಡಿ ಸೂರಪ್ಪ ಮೂಲ್ಯರ ಪುತ್ರಿ ಸುಶ್ಮಿತಾರೊಂದಿಗೆ ಡಿ.3 ರಂದು ಮಡಂತ್ಯಾರು ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜರುಗಿತು.

muliya jewellers1

muliya jewellers
ಬೆಳ್ತಂಗಡಿ : ಇಲ್ಲಿನ ಸಂತೆಕಟ್ಟೆ ಸುವರ್ಣ ಆರ್ಕೇಡ್‌ನಲ್ಲಿ ಮುಳಿಯ ಚಿನ್ನದ ಮೇಳದ ಪ್ರದರ್ಶನ ಮತ್ತು ಮಾರಾಟ ಡಿ. 15, 16, 17, 18ರಂದು ನಡೆಯಲಿದ್ದು, ಇದರ ಉದ್ಘಾಟನೆಯು ಇಂದು(ಡಿ 15) ನಡೆಯಿತು.
ಬೆಳ್ತಂಗಡಿ ಬ್ಯೂಟಿ ಪಾರ್ಲರ್ ಅಸೋಸಿಯೇಶನ್ ಸದಸ್ಯೆ ಮತ್ತು ವೆಸ್ಟರನ್ ಬ್ಯೂಟಿ ಪಾರ್ಲರ್‌ನ ಮಾಲಕಿ ಶ್ರೀಮತಿ ಪಲ್ಲವಿ ರಾಜ್ ಉದ್ಘಾಟಿಸಿದರು.
ಸಂಸ್ಥೆಯ ಚೆರ್‌ಮೆನ್ ಮತ್ತು ಮ್ಯಾನೆಜಿಂಗ್ ಡೈರೆಕ್ಟರ್ ಮುಳಿಯ ಕೇಶವ ಪ್ರಸಾದ್ ಮುಳಿಯ ಸಂಸ್ಥೆಯ ವಿಶೇಷತೆಗಳನ್ನು ತಿಳಿಸಿದರು. ರಿಟಯರ್ಡ್ ಏರ್‌ಫೋರ್ಸ್ ಲೆಬರ್ ಆಫೀಸರ್ ರಾಮ ಭಟ್ ಸಂಸ್ಥೆಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯರಾದ ಸರಫ್ ಶ್ಯಾಮ್ ಭಟ್, ಪುತ್ತೂರು ಶಾಖೆಯ ಶಾಖಾ ಪ್ರಬಂದಕ ನಾಮದೇವ್ ಮಲ್ಯ ಉಪಸ್ಥಿತರಿದ್ದರು. ಪ್ರೂಕ್ಯೂರ್‌ಮೆಂಟ್ ಮ್ಯಾನೇಜರ್ ಗುರುರಾಜ್ ಅವಭೂತ್ ಕಾರ್ಯಕ್ರಮ ನಿರೂಪಿಸಿದರು.

sdm

sdm1ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ, ಉಜಿರೆ ಕಾಲೇಜಿನಲ್ಲಿ ಇಂದು(ಡಿ. 15) 24ನೇ ಪದವಿ ಪ್ರದಾನ ಸಮಾರಂಭ ಜರುಗಿತು.
ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನವದೆಹಲಿ ಆಯುಷ್ ಮಂತ್ರಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್, ಡಾ. ಬಿ ಯಶೋವರ್ಮ, ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್, ಉಪಸ್ಥಿತರಿದ್ದರು.

kshithi raiಬೆಳ್ತಂಗಡಿ : ಝಿ ಕನ್ನಡ ವಾಹಿನಿಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಸರಿಗಮಪ ಲಿಟ್ಲ್ ಚಾಂಪಿಯನ್ ಸೀಸನ್-14ಗೆ ಧರ್ಮಸ್ಥಳದ ಕು| ಕ್ಷಿತಿ ಕೆ. ರೈ ಆಯ್ಕೆಯಾಗಿದ್ದಾರೆ.
ಎಳವೆಯಿಂದಲೇ ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಕ್ಷಿತಿ ಕೆ. ರೈ ಸಂಗೀತದಲ್ಲಿ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಬಯಕೆ ಹೊಂದಿದ್ದರು. ಮಗಳಲ್ಲಿರುವ ಸಂಗೀತದ ಆಸಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಿದ ಇವರ ತಂದೆ ಕಿಶೋರ್ ರೈ ಹಾಗೂ ತಾಯಿ ಜಯಭಾರತಿ ರೈ ಮಗಳ ಸ್ವರಸ್ವರೂಪಕ್ಕೆ ಒಂದು ಅಡಿಪಾಯದ ರಚನೆಯನ್ನು ನೀಡಲು ಉತ್ಸುಕರಾಗಿ ಮಗಳಿಗೆ ಶಿಕ್ಷಣದ ಜೊತೆ ಬೆಳ್ತಂಗಡಿಯ ಕವಿತಾ ಕೋರ್ನಾಯ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಗೆ ಕಲಿಸಿದರು. ಬಳಿಕ ಸುಗಮ ಸಂಗೀತಕ್ಕಾಗಿ ಪುತ್ತೂರಿನ ಕಿರಣ್ ಕುಮಾರ್ ಅವರ ಹತ್ತಿರ ಕಲಿಸಿದರು.
ತಂದೆ-ತಾಯಿಯ ಪ್ರೋತ್ಸಾಹವನ್ನು ಸಮರ್ಥವಾಗಿಯೇ ಬಳಸಿಕೊಂಡ ಕ್ಷಿತಿ ಅಲ್ಲಲ್ಲಿ ಚಿಕ್ಕಪುಟ್ಟ ವೇದಿಕೆಗಳಲ್ಲಿ ತನ್ನ ಇಂಪಾದ ಧ್ವನಿಯಲ್ಲಿ ಅದ್ಭುತವಾಗಿ ಹಾಡಿ ಜನಮನಗೆದ್ದಿದ್ದಳು. ಇದೀಗ ಝೀ ಕನ್ನಡದ ರಿಯಾಲಿಟಿ ಶೋಗೆ ಆಯ್ಕೆಯಾಗಿರುವ ಈಕೆ ಮೆಗಾ ಅಡಿಷನ್‌ನಲ್ಲಿ ಹಾಡಿದ ಮೊದಲ ಹಾಡಿಗೆ ನಿರ್ಣಯಕರಾದ ಗಾಯಕ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಮತ್ತು ಸಂಗೀತ ಕ್ಷೇತ್ರದ ನಾದಬ್ರಹ್ಮ ಹಂಸಲೇಖ ಅವರಿಂದ ಭೇಷ್ ಎಣಿಸಿಕೊಂಡಿದ್ದಾಳೆ. ಧರ್ಮಸ್ಥಳದ ಎಸ್‌ಡಿಎಂ ಆಂಗ್ಲಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ಕಲಿಯುತ್ತಿರುವ ಕು| ಕ್ಷಿತಿ ಕೆ. ರೈ ಈ ರಿಯಾಲಿಟಿ ಶೋ ದ ಮೂಲಕ ಬೆಳ್ತಂಗಡಿ ತಾಲೂಕಿಗೆ ಹೆಸರು ತರಲಿ, ಸಂಗೀತ ಕ್ಷೇತ್ರದಲ್ಲಿ ಮಹತ್ತರದ ಸಾಧನೆ ಮಾಡುವಂತಾಗಲಿ, ಈಕೆಯ ಭವಿಷ್ಯ ಉಜ್ಜ್ವಲವಾಗಲಿ ಎಂಬುದು ನಮ್ಮೆಲ್ಲರ ಹಾರೈಕೆಯಾಗಿದೆ.

thannirupanrta police rige abhinandaneತಣ್ಣೀರುಪಂತ ಗ್ರಾಮದ ಕಲ್ಲೇರಿಯಲ್ಲಿ ನಡೆದ ಅಂಗಡಿಗೆ ಬೆಂಕಿ ಹಚ್ಚಿ ಕಳ್ಳತನ ನಡೆಸಿದ ಪ್ರಕರಣವನ್ನು ವಾರದೊಳಗೆ ಭೇದಿಸುವ ಮೂಲಕ ಊರಿನ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಂಡ ಪೊಲೀಸ್ ಇಲಾಖೆಗೆ ಕಲ್ಲೇರಿ ಹಾಗೂ ಕರಾಯ ಗ್ರಾಮಸ್ಥರ ವತಿಯಿಂದ ಡಿ. 7ರಂದು ಅಭಿನಂದನೆ ನಡೆಯಿತು.
ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರು ಹಾಗೂ ಉಪ್ಪಿನಂಗಡಿ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿ ಯನ್ನು ಅಭಿನಂದಿಸಿ ಮಾತನಾಡಿದ ತಣ್ಣೀರುಪಂತ ಸಿಎ ಬ್ಯಾಂಕ್ ಅಧ್ಯಕ್ಷ ನಿರಂಜನ್ ಬಾವಂತಬೆಟ್ಟು ಉಪ್ಪಿನಂಗಡಿ ಪೊಲೀಸರು ಯಾವುದೇ ಉಹಾಪೋಹಗಳಿಂದ ಸಮಾಜದ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗಲು ಅವಕಾಶ ನೀಡದೇ ವಾರದೊಳಗೆ ಈ ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಮೂಲಕ ಸಮಾಜದ ಅಭಿನಂದನೆಗೆ ಪಾತ್ರರಾಗಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷರ ಗೋಪಾಲ ನಾಯ್ಕ, ಕಳ್ಳತನ ನಡೆಸಿದ ಬಳಿಕ ಅಂಗಡಿಗೆ ಬೆಂಕಿ ಹಚ್ಚಿ ಅಂಗಡಿ ಸಂಪೂರ್ಣ ಭಸ್ಮಗೊಳಿಸುವ ಮೂಲಕ ಕಳ್ಳರು ಕಲ್ಲೇರಿಯಲ್ಲಿ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದರು. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ವಾರದೊಳಗೆ ಆರೋಪಿಗಳನ್ನು ಬಂಧಿಸಿದೆ ಎಂದರು.
ಉಪ್ಪಿನಂಗಡಿ ಠಾಣಾ ನಿರೀಕ್ಷಕ ನಂದ ಕುಮಾರ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಇಲ್ಲಿನ ಕರಾಯ ಗ್ರಾಮಕ್ಕೆ ಮೊದಲೇ ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಇದೆ. ಆದರೆ ಕಲ್ಲೇರಿ ಘಟನೆ ನಡೆದಾಗ ಹಲವು ಉಹಾಪೋಹಗಳು ಕೇಳಿಬಂದರೂ ಇಲ್ಲಿನ ಜನತೆ ಯಾವುದಕ್ಕೂ ಕಿವಿಗೊಡದೇ ಶಾಂತಿ ಕಾಪಾಡಿದ್ದಾರೆ ಎಂದರು.
ತಣ್ಣೀರುಪಂಥ ಗ್ರಾ.ಪಂ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಮಾತನಾಡಿದರು. ಅಭಿನಂದನೆ ಸಲ್ಲಿಸಿದರು. ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ಹರಿಶ್ಚಂದ್ರ, ಇರ್ಷಾದ್ ಪಡಂಗಡಿ, ಪ್ರವೀಣ್ ರೈ, ಶೇಖರ ಗೌಡ, ಸಲೀಂ, ಜೀಪು ಚಾಲಕ ನಾರಾಯಣ ಗೌಡ ಅವರನ್ನು ಅಭಿನಂದಿಸಲಾಯಿತು. ತಾ.ಪಂ ಸದಸ್ಯೆ ಕೇಶವತಿ, ತಣ್ಣೀರುಪಂತ ಗ್ರಾ.ಪಂ ಸದಸ್ಯರಾದ ನವೀನ್ ಕುಮಾರ್, ಆದಂ ಕೆ., ಡಿ.ಕೆ ಅಯೂಬ್, ಸೂರಪ್ಪ ಬಂಗೇರ, ಅಬ್ದುರ್ರಹ್ಮಾನ್, ತಾಜುದ್ದೀನ್, ಸುಮ, ಗೀತಾ ಉಪಸ್ಥಿತರಿದ್ದರು. ಗ್ರಾ.ಪಂ ಸದಸ್ಯ ಸದಾನಂದ ಶೆಟ್ಟಿ ಮಡಪ್ಪಾಡಿ ಸ್ವಾಗತಿಸಿ, ಪಿಡಿಒ ಪೂರ್ಣಿಮಾ ವಂದಿಸಿದರು.

nethre

Nethre1ಉಜಿರೆ : ಜೇಸಿಐ ಮಂಜುಶ್ರೀ ಬೆಳ್ತಂಗಡಿ, ಯುವವಾಹಿನಿ ಬೆಳ್ತಂಗಡಿ ಘಟಕ ಹಾಗೂ ಸುರೇಶ್ ಕೆ. ಪೂಜಾರಿ ಮುಂಬೈ ಇವರ ಪ್ರಾಯೋಜಕತ್ವದಲ್ಲಿ, ಶ್ರೀ ಗುರು ಮಿತ್ರ ಸಮೂಹ, ಬೆಳ್ತಂಗಡಿ ಹಾಗೂ ನವರಸ ಥಿಯೇಟರ್‍ಸ್, ಉಜಿರೆ ಇದರ ಕಲಾವಿದರು ಅಭಿನಯಿಸಿದ ನಾಟಕ ನೇತ್ರೆ ಇದರ ಉದ್ಘಾಟನಾ ಸಮಾರಂಭವು ಡಿ. 14ರಂದು ಉಜಿರೆ ಶಾರದಾ ಮಂಟಪದಲ್ಲಿ ನಡೆಯಿತು.
ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ನೆರವೇರಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಜೇಸಿಐ ಮಂಜುಶ್ರೀ ಅಧ್ಯಕ್ಷ ಜೇಸಿ ಕಿರಣ್ ಕುಮಾರ್ ಶೆಟ್ಟಿ, ಅಳದಂಗಡಿ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಪ್ರಶಾಂತ್ ಮಚ್ಚಿನ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಬೆಳ್ತಂಗಡಿ ಶ್ರೀ ಗುರು ಮಿತ್ರ ಸಮೂಹದ ಸ್ಥಾಪಕಾಧ್ಯಕ್ಷ ರಮಾನಂದ ಸಾಲಿಯಾನ್ ಮುಂಡೂರು, ಉದ್ಯಮಿ ಸುರೇಶ್ ಕೆ. ಪೂಜಾರಿ ಮುಂಬೈ, ಬೆಳ್ತಂಗಡಿ ಸ.ಪ್ರ.ದ ಕಾಲೇಜು ಪ್ರಾಧ್ಯಪಕ ಡಾ| ಟಿ.ಕೆ ಶರತ್ ಕುಮಾರ್, ಜೀ ಕನ್ನಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್ ಕುಮಾರ್ ಕಾಪಿನಡ್ಕ ಉಪಸ್ಥಿತರಿದ್ದರು. ಚಂದ್ರಹಾಸ ಬಳಂಜ ನಿರೂಪಿಸಿ, ಸ್ಮಿತೇಶ್ ಎಸ್. ಬಾರ್ಯ ಸ್ವಾಗತಿಸಿ, ಅನೀಶ್ ಅಮೀನ್ ವೇಣೂರು ಧನ್ಯವಾದವಿತ್ತರು.

maruthi auto workವೇಣೂರು : ಗೋಳಿಯಂಗಡಿ ಎಸ್.ಡಿ.ಎಂ ಐಟಿಐ ಬಳಿ ನೂತನವಾಗಿ ಆರಂಭಗೊಂಡ ಶ್ರೀ ಕಟೀಲ್ ಮಾರುತಿ ಆಟೋ ವರ್ಕ್ಸ್‌ನ್ನು ಡಿ. 14 ರಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂತೋಷ ಕುಮಾರ್ ಕಾಪಿನಡ್ಕ, ಹರೀಶ್ ಕಾರಿಂಜ, ರಾಮ್ ಪ್ರಸಾದ್ ಮರೋಡಿ, ರಾಜೇಶ್ ಪೂಜಾರಿ ಮೂಡುಕೋಡಿ, ಸತ್ಯೇಂದ್ರ ರಾವ್, ಅನಿಲ್ ಹೆಗ್ಡೆ, ಗುರುಸ್ವಾಮಿ ರಾಮ ಮೇಸ್ತ್ರಿ ನಿಟ್ಟಡೆ ಮೊದಲಾದವರು ಉಪಸ್ಥಿತರಿದ್ದು, ಶುಭಹಾರೈಸಿದರು.

Dharmasthala nowkara samalochana sabheಧರ್ಮಸ್ಥಳ : ಕರ್ನಾಟಕ ರಾಜ್ಯ ಗ್ರಾ.ಪಂ. ಗ್ರಾಮ ನೌಕರರ ಸಂಘ (ಆರ್.ಡಿ.ಪಿ.ಆರ್) ರಾಜ್ಯ ಸಮಿತಿಯ ಆಶ್ರಯದಲ್ಲಿ ರಾಜ್ಯ ಮಟ್ಟದ ಗ್ರಾಮ ಪಂಚಾಯತ್ ನೌಕರರ ಕುಂದು ಕೊರತೆ ಮತ್ತು ಸಮಾಲೋಚನಾ ಸಭೆ ಡಿ. 9ರಂದು ಧರ್ಮಸ್ಥಳದ ಮಹೋತ್ಸವ ಸಭಾಂಗಣದಲ್ಲಿ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಬೊಳ್ಮ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನೌಕರರ ಹತ್ತು ಹಲವು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಗ್ರಾ.ಪಂ. ನೌಕರರ ಬೇಡಿಕೆ ಮತ್ತು ಸಮಸ್ಯೆಗಳು :
1. ಗ್ರಾಮ ಪಂಚಾಯತ್ ನೌಕರರಿಗೆ ನಗರ ಮತ್ತು ಪಟ್ಟಣ ಪಂಚಾಯತ್ ಸಿಬ್ಬಂದಿಗಳಂತೆ ಸೇವಾನಿಯಮಾವಳಿ ಪಂಚಾಯತ್ ರಾಜ್ ಇಲಾಖೆಯಡಿ ರೂಪಿಸಬೇಕು. 2. ವರ್ಗಾವಣೆ ಸವಲತ್ತು ನೀಡಬೇಕು. 3. ವೇತನ ಶ್ರೇಣಿ ಇಲ್ಲದೆ ಕಳೆದ 20 ವರ್ಷ ಸೇವೆ ಸಲ್ಲಿಸಿದ ನೌಕರರಿಗೂ ಈಗ ಸೇರಿದ ನೌಕರರಿಗೂ ಒಂದೇ ರೀತಿಯಲ್ಲಿ ಕನಿಷ್ಠ ವೇತನ ನೀಡುತಿದ್ದು, ಇದು ಅವೈಜ್ಞಾನಿಕ ಪದ್ದತಿಯಾಗಿದ್ದು ಇದರ ಬದಲು ಗ್ರಾಮ ಪಂಚಾಯತ್ ನೌಕರರಿಗೆ ಹುದ್ದೆಗಳ ನ್ವಯ ಸೂಕ್ತ ವೇತನ ಶ್ರೇಣಿ ನಿಗದಿಪಡಿಸಬೇಕು. 4. ೨೦೦೮ ರಲ್ಲಿಯೇ ಭವಿಷ್ಯನಿದಿಯ ಕುರಿತು ಆದೇಶವಾಗಿದ್ದು, ಆದರೆ ಸದ್ರಿ ಆದೇಶ ಆದೇಶವಾ ಗಿಯೇ ಉಳಿದಿದ್ದು ಇಲ್ಲಿಯವರೆಗೂ ಕಾರ್ಯ ರೂಪಕ್ಕೆ ಬರದೆ ಇರುವುದು ಕಳೆದ 9 ವರ್ಷಗಳಿಂದ ಗ್ರಾಮ ಪಂಚಾ ಯತ್ ನೌಕರರಿಗೆ ಅನ್ಯಾಯವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. 5. ಸೂಕ್ತ ವೈದ್ಯಕೀಯ ಭದ್ರತೆಯ ಇಎಸ್‌ಐ ಸೌಲಭ್ಯವಿಲ್ಲ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. 6. ಕಳೆದ ಹಲವು ವರ್ಷಗಳಿಂದ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಮಂಜೂರಾದ ಹುದ್ದೆಗಳಿಗೆ (ಪಂಪುಚಾಲಕ, ನೀರುಗಂಟಿ, ಜವಾನ, ಶುಚಿತ್ವನೌಕರ, ಕರವಸೂಲಿಗಾರ ಮತ್ತು ವಾಹನ ಚಾಲಕ) ಗ್ರಾಮ ಪಂಚಾಯತ್ ಗಳು ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ಅವರಿಂದ ಕಾರ್ಯ ನಿರ್ವಹಿಸಿಕೊಳ್ಳುತ್ತಿದ್ದು, ಇಲ್ಲಿಯವರೆಗೂ ಜಿ.ಪಂ. ಅನುಮೋದನೆಯಾಗದೆ ಅತಂತ್ರ ಸ್ಥಿತಿಯಲ್ಲಿದ್ದು, ಸದ್ರಿ ಅನುಮೋದನೆ ಯಾಗದೆ ಇರುವ ಸಿಬ್ಬಂದಿಗಳಿಗೆ ಜಿ.ಪಂ. ಅನುಮೋದನೆ ನೀಡಬೇಕು. ಮತ್ತು ಸದ್ರಿ ಸಿಬ್ಬಂದಿಗಳ ಪೈಕಿ ಹಲವು ಸಿಬ್ಬಂದಿಗಳು ಈಗಾಗಲೇ ವಯೋಮಿತಿ ಮೀರಿದ್ದು ಮತ್ತು ಹಲವು ಸಿಬ್ಬಂದಿಗಳಿಗೆ ವಿದ್ಯಾರ್ಹ ತೆ ಕಡಿಮೆ ಇದ್ದು, ಇಂತಹ ಸಿಬ್ಬಂದಿ ಗಳಿಗೆ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಒಂದು ಸೂಕ್ತ ನಿದರ್ಶನ ಹೊರಡಿಸಿ ಅನುಮೋದನೆ ನೀಡಿ ಸೇವಾ ಭದ್ರತೆ ಒದಗಿಸಬೇಕು. 7. 2006-07 ನೇ ಸಾಲಿನಿಂದ ಗ್ರಾ.ಪಂ. ಕಚೇರಿಯಲ್ಲಿ ಹುದ್ದೆ ಮಂಜೂರಾಗದೆಯೇ ಅಂದಿನ ದಿನಗಳಲ್ಲಿ ಕಚೇರಿಯಲ್ಲಿ ನುರಿತ ಕಂಪ್ಯೂಟರ್ ಸಾಕ್ಷರತೆ ಹೊಂದಿರುವ ಸಿಬ್ಬಂದಿಗಳು ಇರದ ಕಾರಣ ಎಂ ಜಿ ಎನ್ ಆರ್ ಜಿ ಇ ಎ ಮತ್ತು ಪಂಚತಂತ್ರ ಹಾಗೂ ಇತರ ತಂತ್ರಾಂಶ ಆಧಾರಿತ ಕಂಪ್ಯೂಟರ್ ಮೂಲಕ ಡಾಟ ಎಂಟ್ರೀ ಕಾರ್ಯ ನಿರ್ವಹಿಸಲು ಅಪರೇಟರ್ ಸಿಬ್ಬಂದಿಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ನೇಮಕ ಮಾಡಿಕೊಂಡಿದ್ದು, ಸದ್ರಿ ಸಿಬ್ಬಂದಿಗಳಿಗೆ ಹುದ್ದೆ ಮಂಜೂರಾತಿಯಾಗದೆ ಇರುವ ಕಾರಣ ಸರಕಾರ 2014 ರ ಆದೇಶ ಹೊರಡಿಸುವರೆಗೂ ಯಾವುದೇ ಭದ್ರತೆಯಿಲ್ಲದೆ ಗ್ರಾಮ ಪಂಚಾಯತ್‌ಗಳು ನೀಡುತ್ತಿದ್ದ ಅತ್ಯಂತ ಕಡಿಮೆ ವೇತನದಲ್ಲಿಯೂ ಕಾರ್ಯ ನಿರ್ವಹಿಸಿ ಪಂಚಾಯತ್ ರಾಜ್ ಇಲಾಖೆಯ ತಂತ್ರಾಂಶಗಳ ಅನುಷ್ಠಾನದಲ್ಲಿ ಪ್ರಥಮ ಸ್ಥಾನ ಪಡೆಯುವಲ್ಲಿ ಸೇವೆ ಸಲ್ಲಿಸಿದ ಸರಿಸುಮಾರು ಶೇ ೫೦ ಸಿಬ್ಬಂದಿಗಳು ಸದ್ರಿ ಆದೇಶದನ್ವಯ ಯಾವ ಪಂಚಾಯತಿನಲ್ಲಿ ಗುಮಾಸ್ತ/ಬೆರಳಚ್ಚುಗಾರ ಹುದ್ದೆ ಖಾಲಿ ಇತ್ತೋ ಅಂತಹ ಪಂಚಾಯತ್ ಗಳಲ್ಲಿ ಪದನಾಮ ಬದಲಾದ ಕ್ಲರ್ಕ್ ಕಮ್ ಡಾಟ ಎಂಟ್ರೀ ಅಪರೇಟರ್ ಹುದ್ದೆಗೆ ಅವರು ಈ ಹಿಂದೆ ಸಲ್ಲಿಸಿದ ಮೂರು ವರ್ಷ ಸೇವೆಗೆ ಪ್ರಥಮ ಆಧ್ಯತೆ ನೀಡಿ ಜಿಲ್ಲಾ ಪಂಚಾಯತ್ ಅನುಮೋದನೆ ನೀಡಿ ಅವರಿಗೆ ಸೇವಾ ಭದ್ರತೆಯನ್ನು ಸರಕಾರ ಒದಗಿಸಿದ್ದು, ಆದರೆ ಉಳಿದ ಶೇ ೫೦ ಕ್ಕೂ ಅಧಿಕ ಇಂತಹ ಸಿಬ್ಬಂದಿಗಳಿಗೆ ಇನ್ನೂ ಕೂಡ ಸೇವಾ ಭದ್ರತೆ ದೊರಕದೆ ಅತಂತ್ರ ಸ್ಥಿತಿಯಲ್ಲಿದ್ದು ಇಂತಹ ಸಿಬ್ಬಂದಿಗಳಿಗೂ ಈ ಹಿಂದೆ 2014ರ ಆದೇಶದಂತೆ ಅವರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಸಹೋದ್ಯೋಗಿಗಳಿಗೆ ಸರಕಾರ ನೀಡಿದ ಸೇವಾ ಭದ್ರತೆಯನ್ನು ನೀಡಬೇಕು. ಸೇರಿಂದತೆ 14 ಬೇಡಿಕೆಗಳನ್ನು ಮಂಡಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ಧಿ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಉದಯ ಶೆಟ್ಟಿ ಪೆರ್ಡೂರು, ದ.ಕ. ಜಿಲ್ಲಾಧ್ಯಕ್ಷೆ ಶ್ರೀಮತಿ ರೋಹಿಣಿ ಶೆಟ್ಟಿ ಕುಕ್ಕೇಡಿ, ಕೋಲಾರ ಜಿಲ್ಲಾ ಪ್ರತಿನಿಧಿ ಯೋಗೀಶ್ ಎಂ ಹುತ್ತೂರು, ಡಾವಣಗೆರೆ ಜಿಲ್ಲಾ ಪ್ರತಿನಿಧಿ ಬಸವರಾಜು, ಮಂಡ್ಯ ಜಿಲ್ಲಾ ಪ್ರತಿನಿಧಿ ಕುಮಾರೇಶ್ ಮಳವಳ್ಳಿ, ಕೊಡಗು ಜಿಲ್ಲಾ ಪ್ರತಿನಿಧಿ ರವೀಂದ್ರ ಸೋಮವಾರಪೇಟೆ, ತುಮಕೂರು ಜಿಲ್ಲಾ ಪ್ರತಿನಿಧಿ ನಾಗರಾಜ್ ಸಿ.ಕೆ.ಪುರ, ವಿಜಾಪುರ ಜಿಲ್ಲಾ ಪ್ರತಿನಿಧಿ ಈರಗಂಟೆಪ್ಪ ಕಲಕೇರಿ, ಶಿವಮೊಗ್ಗ ಜಿಲ್ಲಾ ಪ್ರತಿನಿಧಿ ಸಾವಿತ್ರಿ ಎಂ ಎಸ್ ಅರಮನೆಕೊಪ್ಪ, ಉತ್ತರ ಕನ್ನಡ ಜಿಲ್ಲಾ ಪ್ರತಿನಿಧಿ ಆನಂದ ಅಂಕೋಲ, ಚಿಕ್ಕಮಗಳೂರು ಜಿಲ್ಲಾ ಪ್ರತಿನಿಧಿ ಚಂದ್ರಶೇಖರ, ಚಿತ್ರದುರ್ಗ ಜಿಲ್ಲಾ ಪ್ರತಿನಿಧಿ ಗುರುಮೂರ್ತಿ, ಹಾಸನ ಜಿಲ್ಲಾ ಪ್ರತಿನಿಧಿ ಲಿಂಗೇಶ್, ಮೈಸೂರು ಜಿಲ್ಲಾ ಪ್ರತಿನಿಧಿ ಮೋಹನ್ ಸಿ, ಹಾವೇರಿ ಜಿಲ್ಲಾ ಪ್ರತಿನಿಧಿ ಪ್ರಶಾಂತ್ ಪಿ ಜೋಶಿ ಕಾಗಿನೆಲೆ ಉಪಸ್ಥಿತರಿದ್ದರು.
ಬೆಳ್ತಂಗಡಿ ತಾಲೂಕು ಸಮಿತಿಯ ಉಪಾಧ್ಯಕ್ಷ ಕಾಸಿಂ ಪದ್ಮುಂಜ ಸ್ವಾಗತಿಸಿ, ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್ ಕುಲಾಲ್ ಮುದ್ರಾಡಿ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

dharmasthala sdm prathiba dinacharaneಧರ್ಮಸ್ಥಳ: ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ 2017-18ನೇ ಶೈಕ್ಷಣಿಕ ವರ್ಷದ ಪ್ರತಿಭಾ ದಿನಾಚರಣೆಯು ಡಿ.9ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಜರುಗಿತು. ಶಾಲಾ ಸಂಚಾಲಕ ಅನಂತ ಪದ್ಮನಾಭ ಭಟ್ ದ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಧರ್ಮಾಧಿಕಾರಿ, ಡಾ. ಡಿ.ವೀರೇಂದ್ರ ಹೆಗ್ಗಡೆಯವರು ದೀಪ ಪ್ರಜ್ವಲಿಸಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ, ಬಳಿಕ ಶಾಲೆಯ ವಾರ್ಷಿಕ ಪತ್ರಿಕೆಗಳಾದಂತಹ ಕನಸು ಹಾಗೂ ಹೊಂಗನಸು ಬಿಡುಗಡೆಗೊಳಿಸಿ, ಪಠ್ಯ ಚಟುವಟಿಕೆಗಳೊಂದಿಗೆ ಸಹಪಠ್ಯ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅತ್ಯಾವಶ್ಯಕ ಎಂದು ನುಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳಾ ಎಂ.ವಿ.ರವರು ಉಪಸ್ಥಿತರಿದ್ದರು. ಪುಟಾಣಿಗಳ ನೃತ್ಯದೊಂದಿಗೆ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನೇಕ ನೃತ್ಯಪ್ರಕಾರಗಳು ವಿವಿಧ ಭಾಷೆಗಳಲ್ಲಿ ಮೂಡಿಬಂದವು. ಅಂತೆಯೇ ಸಮೂಹಗೀತೆಗಳು ಅಗಾಗ್ಗೆ ಬಿತ್ತರಗೊಂಡು ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿದವು. ಸದ್ರಿ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಗೊಪಾಲ ಕೃಷ್ಣ ಭಟ್, ಉಜಿರೆಯ ಸಿಬಿಎಸ್ಸಿ ಶಾಲಾ ಪ್ರಾಂಶುಪಾಲ ಮನಮೋಹನ್ ನಾಯಕ್, ಬಿ.ಎಡ್. ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು ಮತ್ತು ವಿದ್ಯಾರ್ಥಿಗಳಿಗೆ ಮೆಚ್ಚುಗೆ ಸೂಚಿಸಿ ಹಾರೈಸಿದರು. ಕುಮಾರಿ ರಕ್ಷಿತಾದಾಸ್ ಮತ್ತು ದಿವಿತರಿಂದ ಆರಂಭಿಸಲ್ಪಟ್ಟ ಸದ್ರಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅನ್ವಿತಾ, ಸುಪ್ರೀತಾ, ಚಿನ್ಮಯಿ, ಕೃಪಾ ಎನ್, ಅನ್ವೇಷ್, ವಿಲಾಸ್, ಚಿದ್ವಿಲಾಸ್, ಆಶಿತಾ, ನಮಿತಾ, ಲೋಕೇಶ್ ಶಾಲಾನಾಯಕ ಶೋಧನ್‌ಶಾಲಾ ವಾರ್ಷಿಕ ವರದಿಯನ್ನು ಹಂತ-ಹಂತವಾಗಿ ವಾಚಿಸಿದರು. ಈ ಸಂದರ್ಭದಲ್ಲಿ ಕಳೆದ ಸಾಲಿನ 10ನೇ ತರಗತಿಯಲ್ಲಿ ಉನ್ನತ ದರ್ಜೆ ಪಡೆದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು. ಪ್ರಸಕ್ತ ವರ್ಷದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನೂ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಸಹಶಿಕ್ಷಕಿ ಶ್ರೀಮತಿ ಕಮಲಾ ಜಿ ಹೆಗ್ಡೆ ಧನ್ಯವಾದವಿತ್ತರು.

abdul rahiman 11ಮಡಂತ್ಯಾರು: ಹಿಂದೆ ಆಶಾ ಸ್ಪೋರ್ಟ್ಸ್ ಕ್ಲಬ್ ಪಾರೆಂಕಿ ಎಂದು ಕಾರ್ಯಾಚರಿಸುತ್ತಿದ್ದ ಸಂಘದ ಪುನಶ್ಚೇತನದ ಬಗ್ಗೆ ಆಸಕ್ತ ಯುವ ಸದಸ್ಯರುಗಳ ಸಮಾಲೋಚನಾ ಸಭೆಯನ್ನು ಕರೆದು, ಮತ್ತೊಮ್ಮೆ ಸಂಘಟನೆಯನ್ನು ಗಟ್ಟಿಗೊಳಿಸಿ ಸೌಹಾರ್ದ ಫ್ರೆಂಡ್ಸ್ ಎಂಬುದಾಗಿ ನಾಮಾಂಕಿತಗೊಳಿಸಿ ಅಧಿಕೃತ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
ಹುಪ್ಪ ಅಂಗನವಾಡಿ ಕೇಂದ್ರದ ಬಳಿ ಡಿ. 3 ರಂದು ನಡೆದ ಸಮಾಲೋಚನಾ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಮಡಂತ್ಯಾರು ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಅಬ್ದುಲ್ ರಹಿಮಾನ್ ಪಡ್ಪು ಅವರನ್ನು ಸರ್ವಾನುಮತದಿಂದ ಆರಿಸಲಾಯಿತು. ಗೌರವಾಧ್ಯಕ್ಷರಾಗಿ ಸಿರಿಲ್ ಡಿಕುನ್ನ ಹುಪ್ಪ, ಮಡಂತ್ಯಾರು, ಉಪಾಧ್ಯಕ್ಷರಾಗಿ ಪ್ರಭಾಕರ ಶೆಟ್ಟಿ ಪರನೀರು, ಅಶ್ರಫ್ ಕೆರೆಕೋಡಿ, ಮೆಲ್ವಿನ್ ಡಿಸೋಜಾ ಅರ್ತಿಲ, ಪ್ರ. ಕಾರ್ಯದರ್ಶಿಯಾಗಿ ಅಬ್ದುಲ್ ರಶೀದ್ ಪರನೀರು ಮಡಂತ್ಯಾರು, ಕಾರ್ಯದರ್ಶಿ ಪ್ರವೀಣ್ ಪಾಯಿಸ್ ಹುಪ್ಪ, ಜೊತೆ ಕಾರ್ಯದರ್ಶಿಯಾಗಿ ಶಬೀರ್ ಎಂ, ಕೋಶಾಧಿಕಾರಿಯಾಗಿ ಶರ್ವನ್ ಹುಪ್ಪ ಮಡಂತ್ಯಾರು, ಸಂಘಟನಾ ಕಾರ್ಯದರ್ಶಿಯಾಗಿ ಶೇಕ್‌ಮುಹಮ್ಮದ್ ನವೀದ್ ಪಡ್ಪು, ಕ್ರೀಡಾ ಕಾರ್ಯದರ್ಶಿಯಾಗಿ ಬಶೀರ್ ಪಿಕಪ್, ರೋಹಿತ್ ಪೂಜಾರಿ ಮತ್ತು ಮುಸ್ತಫಾ ಪರನೀರು, ಕಾರ್ಯಕ್ರಮ ಸಂಯೋಜಕರಾಗಿ ಚಂದ್ರಶೇಖರ ಪೂಜಾರಿ, ಜಲೀಲ್ ಮತ್ತು ನವೀದ್ ಅರ್ತಿಲ, ಗೌರವ ಸಲಹೆಗಾರರಾಗಿ ನಝೀರ್ ಟಿಂಬರ್ ಮರ್ಚೆಂಟ್, ಪುರಂದರ ಶೆಟ್ಟಿ ಮೂಡಾಯೂರು, ಪಿ.ಎಮ್. ಇಸ್ಮಾಯಿಲ್ ಪರನೀರು, ಉಸ್ಮಾನ್ ಮೇಸ್ತ್ರಿ ಹುಪ್ಪ, ಜಯಾನಂದ ಆಚಾರ್ಯ ಅರ್ತಿಲ ಮತ್ತು ಗಣೇಶ್ ಕೃಷ್ಣ ಕ್ಯಾಂಟೀನ್ ಮಡಂತ್ಯಾರು, ಲಿಯೋ ಡಿಕುನ್ಹಾ ಉಪ್ಪಾ ಮತ್ತು ಬಾಝಿಲ್ ಫೆನಾಂಡಿಸ್ ಮೂಡಾಯೂರು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹನೀಫ್ ಹುನಿಲ, ನದೀಮ್, ರಿಯಾಝ್ ಪರನೀರು, ಇರ್ಫಾನ್, ಶರೀಫ್, ನಾಸಿರ್, ನೌಷಾದ್, ಇರ್ಷಾದ್, ಅನ್ವರ್ ಮತ್ತು ಶಮೀರ್ ಹುಪ್ಪ ಇವರನ್ನು ಆರಿಸಲಾಯಿತು. ಸಂಘಟನೆಯ ವತಿಯಿಂದ ಮುಂದಕ್ಕೆ ಹುಪ್ಪ ಅಂಗನವಾಡಿ ಕೇಂದ್ರಕ್ಕೆ ನೆರವು, ಸಮಾಜ ಸೇವೆ, ಕ್ರೀಡೆ ಮತ್ತು ಶೈಕ್ಷಣಿಕ ಪ್ರೋತ್ಸಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.

IDYASHRAYA udhgataneಬೆಳ್ತಂಗಡಿ : ಇಡ್ಯಾಶ್ರಯ ಸಭಾಭವನದ ಉದ್ಘಾಟನೆಯನ್ನು ಡಿ.9 ರಂದು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿ ಮಾತನಾಡುತ್ತಾ ಸಣ್ಣ ವಯಸ್ಸಿನಲ್ಲಿ ಪ್ರಭಾಕರ ಭಟ್ ಇಡ್ಯರವರು ಮಹಾರಾಷ್ಟ್ರದ ದಾಭೋಲಿ ಮಠದಲ್ಲಿ ವೇದಾಭ್ಯಾಸ ಪೂರೈಸಿ, ಕರ್ನಾಟಕ, ಗೋವಾ, ಮಹಾರಾಷ್ಟ್ರ ದಲ್ಲಿ ಪೌರೋಹಿತ್ಯ ಮಾಡಿ ಜನ ಮೆಚ್ಚುಗೆ ಪಡೆದು ಈಗ ತಮ್ಮ ಹುಟ್ಟೂರಲ್ಲಿ ಇಡ್ಯಾಶ್ರಯ ನಿರ್ಮಿಸಿ ಜನತೆಗೆ ಕೈಗೆಟಕುವ ದರದಲ್ಲಿ ಧಾರ್ಮಿಕ, ವೈದಿಕ, ಜ್ಯೋತಿಷ್ಯ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಮಾಡಿದ ಈ ಪ್ರಯತ್ನಕ್ಕೆ ಶುಭ ಹಾರೈಸಿದರು.
ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಬಿ.ಜೆ.ಪಿ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜರವರು ಸಮಾಜಕ್ಕೆ ಹಿರಿಯರ ಮಾರ್ಗದರ್ಶನದ ಅವಶ್ಯಕತೆ ಇದ್ದು, ಈ ಸಂದರ್ಭದಲ್ಲಿ ಯುವ ಪುರೋಹಿತರೊಬ್ಬರು ಜನರಿಗೆ ಸೇವಾ ರೂಪದಲ್ಲಿ ಇಂತಹ ಶ್ಲಾಘನೀಯ ಕೆಲಸವನ್ನು ಮಾಡುತ್ತಿರುವುದು ಅತ್ಯಂತ ಸ್ತುತ್ಯಾರ್ಹ ಎಂದು ಹೇಳಿದರು.
ರೋಟರಿ ಅಧ್ಯಕ್ಷ ರೊ. ಡಾ| ಸುಧೀರ್ ಪ್ರಭುರವರು ಮಾತನಾಡಿ ಓರ್ವ ಪ್ರತಿಭಾವಂತ ಹಾಗೂ ತನ್ನ ವೃತ್ತಿಯಲ್ಲಿ ಪ್ರಾಜ್ಞತೆಯನ್ನು ಪಡೆದ ಪ್ರಭಾಕರ ಭಟ್ ಇವರ ಮಾರ್ಗದರ್ಶನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು, ಜ್ಯೋತಿಷ್ಯ ಫಲ ಚಿಂತನೆಗಳು ಫಲಪ್ರದವಾಗಲಿ ಎಂದು ಹಾರೈಸಿದರು. ವೇದಿಕೆಯಲ್ಲ್ಲಿ ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಜಿಲ್ಲಾ ಸಂಘದ ಅಧ್ಯಕ್ಷ ಗಣಪತಿ ಶೆಣೈ ಡೆಚ್ಚಾರು, ಕುವೆಟ್ಟು ಗ್ರಾಮ ಪಂಚಾಯತಿ ಅಧ್ಯಕ್ಷ ಅಶೋಕ್ ಕೋಟ್ಯಾನ್, ಮಂಜುಶ್ರೀ ಜೇಸೀ ಪೂರ್ವಾಧ್ಯಕ್ಷ ಚಿದಾನಂದ ಇಡ್ಯ, ತಾಲೂಕು ಪಂಚಾಯತ್ ಸದಸ್ಯರಾದ ಗೋಪಿನಾಥ ನಾಯಕ್ ಹಾಗೂ ಪೂವಪ್ಪ ಭಂಡಾರಿ ಉಪಸ್ಥಿತರಿದ್ದರು. ಪ್ರಭಾಕರ ಭಟ್ ಹಾಗೂ ಶಾಮಣ್ಣ ಪ್ರಭು ದಂಪತಿಗಳು ಸ್ವಾಗತಿಸಿ ಸತ್ಕರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ರೊಟೇರಿಯನ್ ದಯಾನಂದ ನಾಯಕ್ ನಡೆಸಿಕೊಟ್ಟರು.

hosangadi suryanarayana garbagudi shilanyasaಬೆಳ್ತಂಗಡಿ: ಸೃಷ್ಟಿಯನ್ನು ದೇವರು ಮಾಡಿದಾಗ ಯಾರಿಗೂ ತಾರತಮ್ಯ ಮಾಡಿಲ್ಲ. ಹೀಗಾಗಿ ಅದೇ ಸೃಷ್ಟಿಯಲ್ಲಿರುವ ನಾವು ತಾರತಮ್ಯದಿಂದ ಇರುವುದನ್ನು ಬಿಡಬೇಕು ಎಂದು ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಹೊಸಂಗಡಿ ಗ್ರಾಮದ ಪೆರಿಂಜೆ ಸನಿಹದ ಬಲ್ಲಂಗೇರಿ-ಅಂಗರಕರಿಯ ಎಂಬಲ್ಲಿ ಡಿ.7 ರಂದು ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ನೂತನ ಗರ್ಭಗುಡಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಸಕಾರಾತ್ಮಕ ಚಿಂತನೆ ಸದಾ ನಮ್ಮಲ್ಲಿದ್ದರೆ ಎಲ್ಲವೂ ಒಳಿತಾಗಿಯೇ ಹೋಗುತ್ತದೆ. ನಮ್ಮಲ್ಲಿನ ಕೊರತೆಯನ್ನು ಹೋಗಲಾಡಿಸುವ ಬದಲು ಇನ್ನೊಬ್ಬರ ಕೊರತೆಯ ಬಗ್ಗೆ ಬೊಟ್ಟು ಮಾಡುವುದನ್ನು ನಿಲ್ಲಿಸಬೇಕು. ಇದ್ದುದರಲ್ಲಿಯೇ ತೃಪ್ತಿಪಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಕರಿಂಜೆಶ್ರೀ ಶಕ್ತಿಗುರುಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಅವರು, ಪ್ರತ್ಯಕ್ಷ ದೇವ೦ರಾಗಿರುವ ಸೂರ್ಯ ನಾರಾಯಣನ ಕ್ಷೇತ್ರವು ಫಲ್ಗುಣಿ ನದಿ ತೀರದಲ್ಲಿರುವುದರಿಂದ ಪ್ರಸಿದ್ಧ ತೀರ್ಥಕ್ಷೇತ್ರ ವಾಗುವುದರಲ್ಲಿ ಸಂದೇಹವಿಲ್ಲ. ಭಗವಂತನಲ್ಲಿ ಅಚಲ ನಂಬಿಕೆ, ಶ್ರದ್ಧೆ ಇದ್ದರೆ ನವೀಕರಣ ಕಾರ್ಯಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ ಎಂದ ಅವರು ಕ್ಷೇತ್ರದಲ್ಲಿ ಗೋಪೂಜೆಯನ್ನು ಆರಂಭಿಸಬೇಕು ಎಂದು ಸಲಹೆ ನೀಡಿದರು. ಉದ್ಯಮಿ ಹರೀಶ್ ಪೂಂಜ ಅವರು, ಹಿರಿಯರ ಆಶೀರ್ವಾದ, ಯುವಕರ ಶಕ್ತಿ ಮೇಳೈಸಿದರೆ ಯಾವುದೇ ಕೆಲಸ ದೊಡ್ಡದಲ್ಲ. ಜಾತಿ, ಮತ, ಪಕ್ಷ ಬಿಟ್ಟು ಏಕ ಮನಸ್ಸಿನಿಂದ ಮುಂದೆ ನಡೆಯುವ ಇಲ್ಲಿನ ಕ್ಷೇತ್ರದ ನವೀಕರಣದಲ್ಲಿ ಪಾಲ್ಗೊಳ್ಳೋಣ ಎಂದರು. ಉದ್ಯಮಿಗಳಾದ ಮೂಡಬಿದರೆಯ ಕೆ. ಶ್ರೀಪತಿ ಭಟ್, ವೇಣೂರು ಭಾಸ್ಕರ ಪೈ, ಮೂಡಬಿದ್ರೆಯ ದೇವಿಪ್ರಸಾದ ಶೆಟ್ಟಿ ವೇದಿಕೆಯಲ್ಲಿದ್ದರು. ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲ ಅವರು ಶಿಲಾನ್ಯಾಸ ನೆರವೇರಿಸಿದರು. ವೇ| ಮೂ| ಉದಯ ಪಾಂಗಾಣ್ಣಾಯ ತಂತ್ರಿಗಳು ಶಿಲಾನ್ಯಾಸದ ವಿಧಿವಿಧಾನಗಳನ್ನು ನೆರವೇರಿಸಿದರು. ಮುಷ್ಠಿ ಹಣ ಸಮರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ದೇಗುಲ ಅರ್ಚಕ ಸುಬ್ರಹ್ಮಣ್ಯ ಉಡುಪ, ಶ್ರೀ ಸೂರ್ಯನಾರಾಯಣ ಕ್ಷೇತ್ರ ಪುನರ್‌ನಿರ್ಮಾಣ ಸಮಿತಿ ಕಾರ್ಯದರ್ಶಿ ಪಿ. ಹರಿಪ್ರಸಾದ ಬಜೆ, ಶ್ರೀ ಸೂರ್ಯನಾರಾಯಣ ಆರಾಧನಾ ಸೇವಾ ಟ್ರಸ್ಟ್ ಅಧ್ಯಕ್ಷ ಉದಯಕುಮಾರ್, ಕೋಶಾಧಿಕಾರಿ ಸತೀಶ್ ಶೆಟ್ಟಿ, ಕಾರ್ಯದರ್ಶಿ ಎ. ಗಣರಾಜ ಭಟ್ ಉಪಸ್ಥಿತರಿದ್ದರು.
ಕರುಣಾಕರ ಸ್ವಾಗತಿಸಿ, ಪುನರ್‌ನಿರ್ಮಾಣ ಸಮಿತಿ ಅಧ್ಯಕ್ಷ ಯನ್. ಸೀತಾರಾಮ ರೈ ಪ್ರಸ್ತಾವಿಸಿ ದರು. ಕಿರಣ್‌ಕುಮಾರ್ ವಂದಿಸಿ, ಸುಧಾಕರ ನೂಯಿ ಕಾರ್ಯಕ್ರಮ ನಿರ್ವಹಿಸಿದರು.
ಫಲ್ಗುಣಿ ನದಿ ಈಶಾನ್ಯದಿಂದ ಪ್ರದಕ್ಷಿಣಾಕಾರವಾಗಿ ಹರಿಯುತ್ತಿರುವ ಸಂಗಮ ಸ್ಥಳವಾಗಿರುವ ಅಂಗರಕರಿ ಯದಲ್ಲಿ ಸುಮಾರು 700 ವರ್ಷಗಳ ಹಿಂದಿನಿಂದಲೂ ಈ ಪ್ರದೇಶ ಅದೆಷ್ಟೋ ಋಷಿಮುನಿಗಳ, ಸಾಧು, ಸಂತರ ತಪೋಭೂಮಿಯಾಗಿ ಇದ್ದದ್ದು ಕಂಡು ಬಂದಿದೆ. ಪುರಾತನ ದೇವಸ್ಥಾನದ ಕುರುಹುಗಳೂ ಜೀರ್ಣಾವಸ್ಥೆಯಲ್ಲಿರುವ ದೇಗುಲದ ಕಟ್ಟಡದ ತಳಪಾಯವೂ ಗೋಚರಿಸಿದ್ದರಿಂದ ಸ್ಥಳೀಯರು ದೇವಾಲಯ ವನ್ನು ಪುನರುತ್ಥಾನಗೊಳಿಸುವ ಸಂಕಲ್ಪವನ್ನು ಕೈಗೊಂಡಿದ್ದಾರೆ.

suddi COLORpdf BLDY  2, 4, 6, 8, 10, 12, 14, 16, 18, 20, 22.p65ವೇಣೂರು: ಕರಾವಳಿಯಲ್ಲಿ ಮತ್ತು ಕಂಬಳ ಕೋಣಗಳ ಕಲರವ ಆರಂಭವಾಗಿದೆ. ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಹೊನಲು ಬೆಳಕಿನ ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳವು ಡಿ.16ರಂದು ನಡೆಯಲಿದೆ. ಸಣ್ಣ ಕೈಗಾರಿಕ ಅಭಿವೃದ್ಧಿ ನಿಗಮದ ಅಧ್ಯಕ್ಷರು ಶಾಸಕರು ಆದ ಕೆ. ವಸಂತ ಬಂಗೇರರವರ ಗೌರವಾಧ್ಯಕ್ಷತೆಯಲ್ಲಿ ಯುವ ಮುಂದಾಳು ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿ ಕೊಂಡಿರುವ ನಿತೀಶ್ ಹೆಚ್‌ರವರ ಅಧ್ಯಕ್ಷತೆಯಲ್ಲಿ ಕಂಬಳವು ಜರುಗಲಿದೆ. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಕಂಬಳದ ಉದ್ಘಾಟನೆಯನ್ನು ನೆರವೇರಿಸಿದ್ದಾರೆ. ಹಾಗೂ ವಿವಿಧ ರಾಜಕೀಯ ಮುಖಂಡರು, ವಿವಿಧ ಕ್ಷೇತ್ರದ ಗಣ್ಯರು, ಸಂಘ-ಸಂಸ್ಥೆಗಳ ಪ್ರಮುಖ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬಹುಮಾನಗಳು : ಕನೆ ಹಲಗೆ – 7 ಕೋಲು ನಿಶಾನಿಗೆ ನೀರು ಹಾಯಿಸಿದ ಕೋಣಗಳಿಗೆ-1 ಪವನು, 6 ಕೋಲು ನಿಶಾನಿಗೆ ನೀರು ಹಾಯಿಸಿದ ಕೋಣಗಳಿಗೆ-1/2 ಪವನು, ಹಗ್ಗ ಹಿರಿಯ ಪ್ರಥಮ-2 ಪವನು, ದ್ವಿತೀಯ-1 ಪವನು, ಹಗ್ಗ ಕಿರಿಯ ಪ್ರಥಮ – 1 ಪವನು, ದ್ವಿತೀಯ 1/2 ಪವನು, ನೇಗಿಲು ಹಿರಿಯ ಪ್ರಥಮ-2 ಪವನು, ದ್ವಿತೀಯ-1 ಪವನು, ನೇಗಿಲು ಕಿರಿಯ ಪ್ರಥಮ-1 ಪವನು, ದ್ವಿತೀಯ-1/2 ಪವನು, ಅಡ್ಡ ಹಲಗೆ ಪ್ರಥಮ-1 ಪವನು, ದ್ವಿತೀಯ-1/2 ಪವನು.

suddi COLORpdf BLDY  2, 4, 6, 8, 10, 12, 14, 16, 18, 20, 22.p65ಬೆಳ್ತಂಗಡಿ : ಯುವ ಜನತೆಯಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ, ವ್ಯಕ್ತಿತ್ವ ವಿಕಸನ, ತರಬೇತಿ, ಉದ್ಯಮ ಶೀಲತೆಗಳನ್ನು ಬೆಳೆಸುವ ಜಗತ್ತಿನ ಏಕೈಕ ಅಂತರಾಷ್ಟ್ರೀಯ ಸಂಸ್ಥೆ ಜೆಸಿಐ ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 2018ನೇ ಸಾಲಿನ ಅಧ್ಯಕ್ಷರಾಗಿ ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರೀಯರಾಗಿರುವ ಏರ್‌ಟೆಲ್‌ನ ತಾಲೂಕು ಮ್ಯಾನೇಜರ್ ಆಗಿರುವ ಕಿರಣ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ನಿಕಟ ಪೂರ್ವಾಧ್ಯಕ್ಷರಾಗಿ 2017ರ ಯಶಸ್ವಿ ಅಧ್ಯಕ್ಷ ಸುದ್ದಿಬಿಡುಗಡೆ ವಾರ ಪತ್ರಿಕೆಯ ಉದ್ಯೋಗಿ ಸಂತೋಷ್.ಪಿ. ಕೋಟ್ಯಾನ್ ಬಳಂಜ, ಕಾರ್ಯದರ್ಶಿ ಯಾಗಿ ವಿಶಾಲ್ ಅಗಸ್ಟಿನ್ ನಡ, ಕೋಶಾಧಿಕಾರಿಯಾಗಿ ಗುರುರಾಜ್ ಗುರಿಪಳ್ಳ, ಉಪಾಧ್ಯಕ್ಷರಾಗಿ ಪ್ರಶಾಂತ್ ಲಾಯಿಲ, ಸತೀಶ್ ಸುವರ್ಣ ಗೇರು ಕಟ್ಟೆ, ಪ್ರಸಾದ್ ಬಿ.ಎಸ್ ಕಕ್ಕಿಂಜೆ, ರಂಜಿತ್ ಎಚ್.ಡಿ ಬಳಂಜ, ಅಭಿನಂದನ್ ಹರೀಶ್ ಕುಮಾರ್ ನಡ ಆಯ್ಕೆಯಾಗಿರುತ್ತಾರೆ.
ಜೇಸಿರೆಟ್ ಅಧ್ಯಕ್ಷೆಯಾಗಿ ದೀಪಾ ಕಿರಣ್, ಜೊತೆಕಾರ್ಯದರ್ಶಿಯಾಗಿ ಸಂತೋಷ್ ಶೆಟ್ಟಿ, ಜೇಸಿರೆಟ್ ಸಂಯೋಜಕಿಯಾಗಿ ಅಮೃತ ಎಸ್.ಕೋಟ್ಯಾನ್, ಜೂನಿಯರ್ ಜೇಸಿ ಅಧ್ಯಕ್ಷರಾಗಿ ಸುಹಾಸ್ ಶೆಟ್ಟಿ, ಜೂನಿಯರ್ ಜೇಸಿ ಸಂಯೋಜಕರಾಗಿ ಸ್ವಾತಿ, ಮೀಡಿಯ ಕವರೇಜ್ ಸಂಯೋಜಕರಾಗಿ ಗಣೇಶ್ ಶಿರ್ಲಾಲು, ದಾಮೋದರ್, ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾಗಿ ವಿಜಯ್ ನಿಡಿಗಲ್, ಸ್ಪೇಷಲ್ ಪ್ರೊಜೆಕ್ಟ್‌ನ ನಿರ್ದೇಶಕರಾಗಿ ಪ್ರೀತಮ್ ಶೆಟ್ಟಿ, ಎಂಪವರಿಂಗ್ ಯೂತ್ ನಿರ್ದೇಶಕರಾಗಿ ಚಿದಾನಂದ, ಹೇಮಾವತಿ, ಸಾಂಸ್ಕೃತಿಕ ವಿಭಾಗದ ನಿರ್ದೇಶಕರಾಗಿ ಸ್ಮಿತೇಶ್, ಜಿತೇಶ್.
ಕಮ್ಯುನಿಟಿ ಡೆವಲಪ್‌ಮೆಂಟ್ ವಿಭಾಗದ ನಿರ್ದೇಶಕರಾಗಿ ಶಿವಪ್ರಸಾದ್, ಸದಾಶಿವ್ ಕಕ್ಕಿಂಜೆ, ಆಶಾ ಪ್ರಶಾಂತ್, ಟುವಿತ್, ವಿನ್ಸೆಂಟ್ ಲೋಬೋ, ದಯಾನಂದ, ಕಾರ್ಯಕ್ರಮ ವಿಭಾಗದ ನಿರ್ದೇಶಕರಾಗಿ ಸ್ವರೂಪ್, ಜಯರಾಜ್ ನಡಕ್ಕರ, ಗಣೇಶ್ ಚಾರ್ಮಾಡಿ, ಸುರೇಶ್ ಗೌಡ, ವಿನೋದ್ ಚಾರ್ಮಾಡಿ, ಅಕ್ಷತ ನವೀನ್, ತರಬೇತಿ ವಿಭಾಗದ ನಿರ್ದೇಶಕರಾಗಿ ಸಂತೋಷ್ ಬಳಂಜ, ಜನಾರ್ಧನ ಕಾನರ್ಪ, ತನ್ಸೀಫ್ ಕಿಲ್ಲೂರು, ಜಗದೀಶ್ ನಾಲ್ಕೂರು, ಹರಿಪ್ರಸಾದ್ ಐಎಸ್, ವ್ಯವಹಾರ ವಿಭಾಗದ ನಿರ್ದೇಶಕರಾಗಿ ರಕ್ಷಿತ್ ಶೆಟ್ಟಿ, ಯಶವಂತ್ ಗೌಡ, ಯತೀಶ್ ಕೆ.ಎಸ್, ಗುರುರಾಜ್ ಕಿಲ್ಲೂರು, ರತೀಶ್ ರಾವ್, ಜೇಸಿ ಬುಲೆಟಿಂಗ್ ಸಂಪಾದಕರಾಗಿ ಚಂದ್ರಹಾಸ್ ಬಳಂಜ ಆಯ್ಕೆ ಯಾಗಿರುತ್ತಾರೆ. ಹಾಗೂ ಘಟಕದ ಎಲ್ಲಾ ಪೂರ್ವಾಧ್ಯಕ್ಷರುಗಳು ಗೌರವ ಸಲಹೆಗಾರ ಮಂಡಳಿಯಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಅಧ್ಯಕ್ಷ ಸಂತೋಷ್.ಪಿ.ಕೋಟ್ಯಾನ್ ಬಳಂಜ, ವಲಯಾಧಿಕಾರಿ ನಿಕಟ ಪೂರ್ವಾಧ್ಯಕ್ಷ ವಸಂತ ಶೆಟ್ಟಿ, ವಲಯಾಧಿಕಾರಿ ಚಿದಾನಂದ ಇಡ್ಯಾ, ಪೂರ್ವಾಧ್ಯಕ್ಷರುಗಳು ಹಾಗೂ ಜೆಸಿಐನ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಪದಾಧಿಕಾರಿಗಳ ಸಮಿತಿಯನ್ನು ರಚಿಸಲಾಯಿತು.

sowthadka shilanyasaಕೊಕ್ಕಡ : ಶ್ರೀಕ್ಷೇತ್ರ ಸೌತಡ್ಕ ಕ್ಷೇತ್ರದಲ್ಲಿ ಬಯಲು ಆಲಯದ ಗಣೇಶನ ಕಟ್ಟೆಯ ಹಿಂಭಾಗದಲ್ಲಿ ಅಂದಾಜು ರೂ. ೫೦ ಲಕ್ಷ ವೆಚ್ಚದಲ್ಲಿ ಪಶ್ಚಿಮ ಭಾಗದ ನೂತನ ಗೋಪುರದ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆಯು ಡಿ.11 ರಂದು ನಡೆಯಿತು.
ಶಾಸಕ ಕೆ. ವಸಂತ ಬಂಗೇರ ನೂತನ ಗೋಪುರ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಶ್ರೀ ಕ್ಷೇತ್ರ ಸೌತಡ್ಕವು ಜಿಲ್ಲೆಯ ಎ ಗ್ರೇಡ್ ದೇವಳವಾಗಿದ್ದು ದಿನಂಪ್ರತಿ ಸಾವಿರಾರು ಊರ ಪರವೂರ ಭಕ್ತಾದಿಗಳು ಕ್ಷೇತ್ರವನ್ನು ಸಂದರ್ಶಿಸುತ್ತಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಈ ಅಭಿವೃದ್ದಿ ಕಾರ್ಯಗಳನ್ನು ದೇವಳದ ವತಿಯಿಂದ ನಡೆಸಲಾಗುತ್ತಿದ್ದು ಗೋಪುರದ ಕೆಲಸ ಕಾರ್ಯವು ಶೀಘ್ರವಾಗಿ ನಡೆಯಲು ಶ್ರೀ ಮಹಾಗಣಪತಿ ದೇವರು ಅನುಗ್ರಹಿಸಲಿ ಎಂದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಯವರು ಶುಭಹಾರೈಸಿದರು. ಅತಿಥಿಗಳಾಗಿ ಸೌತಡ್ಕ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ, ಸದಸ್ಯರುಗಳಾದ ಕೆ.ವಿಶ್ವನಾಥ ಕೊಲ್ಲಾಜೆ, ಪಿ. ವಿಶ್ವನಾಥ ಶೆಟ್ಟಿ, ಪ್ರಶಾಂತ್ ರೈ, ಅಣ್ಣಪ್ಪ ಗೌಡ ಕಾಶಿ, ಗಣೇಶ್ ಪಿ.ಕೆ., ಸಿನಿ ಗುರುದೇವನ್, ಸೌಮ್ಯ, ಅರ್ಚಕ ಸದಸ್ಯರಾದ ಸತ್ಯಪ್ರಿಯ ಕಲ್ಲೂರಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಡಾ. ಜಯಕೀರ್ತಿ ಜೈನ್, ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್, ಮಾಜಿ ಅಧ್ಯಕ್ಷ ಜಯಪ್ರಕಾಶ್ ಬಾಳ್ತಿಲ್ಲಾಯ ಉಪಸ್ಥಿತರಿದ್ದರು. ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ ಸ್ವಾಗತಿಸಿ ವಂದಿಸಿದರು.

dharmasthala skdrp ge prasastiಧರ್ಮಸ್ಥಳ : ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕಿರು ಆರ್ಥಿಕ ಕ್ಷೇತ್ರದ ಪ್ರಗತಿಗೆ ನೀಡಿದ ಕೊಡುಗೆಯನ್ನು ಮನ್ನಿಸಿ ಆಕ್ಸೆಸ್ ಸಂಸ್ಥೆ ನೀಡಿದ `ಇನ್‌ಕ್ಲೂಸಿವ್ ಫೈನಾನ್ಸ್ ಇಂಡಿಯಾ ಪ್ರಶಸ್ತಿ’ಯನ್ನು ಹೆಗ್ಗಡೆಯವರ ಪರವಾಗಿ ಅವರ ಸಹೋದರ ಡಿ. ಸುರೇಂದ್ರ ಕುಮಾರ್ ಮತ್ತು ಗ್ರಾಮಾಭಿವೃದ್ಧಿಯೋಜನೆಯ ಕಾರ್ಯಕರ್ತರು ಡಿ.11ರಂದು ದೆಹಲಿಯಲ್ಲಿ ಸ್ವೀಕರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿರು ಆರ್ಥಿಕ ವ್ಯವಹಾರದ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ರಾಷ್ಟ್ರದ ಪ್ರತಿಷ್ಠಿತ ಇನ್‌ಕ್ಲೂಸಿವ್ ಫೈನಾನ್ಸ್ ಇಂಡಿಯಾ ಪ್ರಶಸ್ತಿ ನೀಡಲಾಗಿದೆ. ಅನೇಕ ವಿಭಾಗಗಳಲ್ಲಿ ಸಂಸ್ಥೆಗಳು ಹಾಗೂ ವೈಯಕ್ತಿಕ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಭಾರತದಲ್ಲಿ ಆರ್ಥಿಕ ಸೇರ್ಪಡೆಗೆ ಬೆಂಬಲ ನೀಡುವ ಧೀರ್ಘಕಾಲದ ಕೊಡುಗೆ ನೀಡುವ ವ್ಯಕ್ತಿಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರನ್ನು ವೈಯಕ್ತಿಕ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
ಕಿರು ಆರ್ಥಿಕ ಕ್ಷೇತ್ರದ ಬೆಳವಣಿಗೆ, ಸ್ವಾವಲಂಬನೆ ಮೂಲಕ ಕಿರು ಆರ್ಥಿಕ ವ್ಯವಹಾರವನ್ನು ವಿಸ್ತರಿಸಿ ಅದನ್ನು ಸ್ಥಿರವಾಗಿಸಿ, ಅಡೆತಡೆಗಳ ಹೊರತಾಗಿಯೂ ಅವಿಶ್ರಾಂತ ಪ್ರಯತ್ನಗಳ ಮೂಲಕ ಸಾಧನೆಗೆ ಕಾರಣವಾಗುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ೨೦೦೯ರಿಂದ ನೀಡಲಾಗುತ್ತಿದೆ.

ballamanja kambaalaಮಚ್ಚಿನ: ಕಂಬಳ ಕ್ರೀಡೆಯನ್ನು ಸುಪ್ರಿಂ ಕೋರ್ಟ್ ಕೂಡ ಇತ್ತೀಚೆಗೆ ಮಾನ್ಯ ಮಾಡಿದ್ದು ಈ ಕ್ರೀಡೆಯನ್ನು ಯಾರಿಂದರೂ ತಡೆಯಲು ಸಾಧ್ಯವಿಲ್ಲ. ಕಂಬಳದ ಓಟದಲ್ಲಿ ಸಿದ್ದಹಸ್ತರೆನಿಸಿದವರು ಈಗಿನ ಯುವ ಪೀಳಿಗೆಗೆ ಓಟದ ತರಬೇತಿಯನ್ನು ನೀಡಿ ಅವರನ್ನು ಸದೃಢರನ್ನಾಗಿಸಬೇಕು. ಇಲ್ಲದಿದ್ದಲ್ಲಿ ನಿಮ್ಮ ತಲೆಮಾರು ಮುಗಿದ ನಂತರ ಕೌಶಲ್ಯ ತಿಳಿದ ಓಟಗಾರರಿಲ್ಲದೇ ಹೋದರೆ ಭವಿಷ್ಯದಲ್ಲಿ ಕಂಬಳ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಶಾಸಕ ವಸಂತ ಬಂಗೇರ ಹೇಳಿದರು.
ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ತೇರಬಾಕಿಮಾರು ಗದ್ದೆಯಲ್ಲಿ ಡಿ. 10 ರಂದು ನಡೆದ ದ.ಕ. ಜಿಲ್ಲೆಯ ಸುಪ್ರಸಿದ್ಧ ಶೇಷ ನಾಗ ಜೋಡುಕರೆ ಕಂಬಳದ ಸಮಾರೋಪದಲ್ಲಿ ಕಂಬಳಕ್ಕೆ ನೆರವು ನೀಡಿದವರಿಗೆ ಸ್ಮರಣಿಕೆ ಮತ್ತು ಕಂಬಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ೩೦ಕ್ಕೂ ಅಧಿಕ ಕಂಬಳ ಕ್ರೀಡಾಕೂಟಗಳು ನಡೆಯುತ್ತಿದ್ದು ಪ್ರಾಣಿದಯಾ ಸಂಘದವರು ಇದೆಲ್ಲವನ್ನೂ ವೀಕ್ಷಿಸುತ್ತಿದ್ದಾರೆ. ವರ್ಷಪೂರ್ತಿ ಕೋಣಗಳನ್ನು ಪ್ರೀತಿಯಿಂದ ಸಾಕಿದ ಯಜಮಾನರುಗಳ ಒಂದು ಪೆಟ್ಟು ಹೊಡೆದರೆಂದರೆ ಅದು ಹಿಂಸೆಯಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಕ್ರೀಡೆ ಅಳಿಯದಂತೆ ನೀವೂ ಕೂಡ ಮನಸ್ಸು ಮಾಡಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ಬಿಜೆಪಿ ಯುವ ಮೋರ್ಚಾ ತಾ| ಅಧ್ಯಕ್ಷ ಸಂಪತ್ ಬಿ. ಸುವರ್ಣ ಮಾತನಾಡಿ, ಕಂಬಳ ಮತ್ತು ಯಕ್ಷಗಾನ ಈ ಎರಡು ವಿಚಾರಗಳನ್ನು ಹೊರತುಪಡಿಸಿ ಕರಾವಳಿಯ ಇತಿಹಾಸ ಪೂರ್ಣವಾಗಲು ಸಾಧ್ಯವೇ ಇಲ್ಲ, ಅದರಲ್ಲೂ ಬಳ್ಳಮಂಜ ಕಂಬಳ ಕ್ರೀಡೆ ಬರೀ ಕ್ರೀಡೆಯಲ್ಲ, ಧಾರ್ಮಿಕ ನಂಬಿಕೆ ಕೂಡ, ಇಲ್ಲಿ ಶ್ರೀ ದೇವರಿಗೆ ಕಂಬಳವೇ ಮಧ್ಯಾಹ್ನದ ಪೂಜೆ ಇದ್ದಂತೆ ಎಂಬುದು ಶ್ರೇಷ್ಠ ಪರಂಪರೆ, ಜಿಲ್ಲೆಯ ಕಂಬಳದ ಕೂಟದಲ್ಲಿ ಜಾತಿ ಮತ ಬೇಧವಿಲ್ಲ, ಮುಸಲ್ಮಾನರು, ಕ್ರೈಸ್ತರೂ ಕೂಡ ಕಂಬಳದ ಕೋಣಗಳ ಯಜಮಾನರುಗಳಾಗಿದ್ದಾರೆ. ಮತ್ತು ಮುಕ್ತವಾಗಿ ಭಾಗವಹಿಸುತ್ತಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ಎಂ.ಆರ್. ಸುಪಾರಿ ಟ್ರೇಡರ್‍ಸ್ ಮಾಲಕ ಹೈದರ್ ಎಂ.ಆರ್. ಮಂಡಂತ್ಯಾರು, ಮಡಂತ್ಯಾರು ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಅಬ್ದುಲ್ ರಹಿಮಾನ್ ಪಡ್ಪು, ಉಪ್ಪಿನಂಗಡಿ ಶ್ರೀ ದೇವಿ ಮೋಟಾರ್‍ಸ್ ಮಾಲಕ ಚಂದ್ರಹಾಸ ಪಕಳ, ಮಚ್ಚಿನ ಗ್ರಾ. ಪಂ. ಉಪಾಧ್ಯಕ್ಷ ಚಂದ್ರಶೇಖರ ಬಿ.ಎಸ್, ಶುಭ ಕೋರಿದರು.
ವೇದಿಕೆಯಲ್ಲಿ ಮೆಸ್ಕಾಂ ನಿರ್ದೇಶಕಿ ಮಲ್ಲಿಕಾ ಪ್ರಶಾಂತ್ ಪಕಳ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಾಜಶೇಖರ್ ಶೆಟ್ಟಿ ಮಡಂತ್ಯಾರು, ಗ್ರಾ.ಪಂ. ಸದಸ್ಯೆ ಚಂಚಲಾ, ಶ್ರೀ ಅನಂತೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಹರ್ಷ ಸಂಪಿಗೆತ್ತಾಯ, ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್, ತಣ್ಣೀರುಪಂತ ಗ್ರಾ.ಪಂ. ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಕಂಬಳ ಸಮಿತಿ ಅಧ್ಯಕ್ಷ, ವಿಜಯ ಬ್ಯಾಂಕ್ ಹೌಸಿಂಗ್ ಫೈನಾನ್ಸ್ ಜನರಲ್ ಮೆನೇಜರ್ ಕೋರಬೆಟ್ಟು ಸುಬ್ಬಯ್ಯ ಶೆಟ್ಟಿಯವರು, ಶಾಸಕ ವಸಂತ ಬಂಗೇರರು ನನಗೆ ಕೊಟ್ಟಿದ್ದ ಭರವಸೆಯಂತೆ ಕಳೆದ ನಾಲ್ಕೂವರೆ ವರ್ಷದಲ್ಲಿ ಮಚ್ಚಿನ ಕ್ಷೇತ್ರಕ್ಕೆ 24 ಕೋಟಿ ರೂ. ಅನುದಾನ ತಂದಿದ್ದಾರೆ. ಅದಕ್ಕಾಗಿ ಅವರಿಗೆ ಗ್ರಾಮದ ಪರವಾಗಿ ಅಭಿನಂದಿಸುತ್ತೇನೆ ಎಂದರು. ಅಲ್ಲದೆ ಕಂಬಳ ಕೂಟದ ಯಶಸ್ವಿಗಾಗಿ ದೇಣಿಗೆ, ಅನ್ನದಾನ ಇತ್ಯಾದಿಯಾಗಿ ಪೂರ್ಣವಾಗಿ ಸಹಕಾರ ನೀಡಿದ ದಾನಿಗಳನ್ನೂ ಅಭಿನಂದಿಸಿ ಮಾತನಾಡಿದರು.
ಸಹಕಾರ ನೀಡಿದವರಿಗೆ ಸ್ಮರಣಿಕೆ ಶಾಲು ನೀಡಲಾಯಿತು. ಊಟದ ದಾನಿಗಳಾದ ಲಕ್ಷ್ಮಣ್ ಬಟ್ರಬೈಲು ತೆಕ್ಕಾರು, ಶಾಶ್ವತ ಫಲಕಗಳ ಪ್ರಾಯೋಜಕರಾದ ಚಂದ್ರಹಾಸ ಪಕಳ ಮತ್ತು ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನ ತಣ್ಣೀರುಪಂತದ ಅಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ ಮೊದಲಾದವರು ವೇದಿಕೆಯಲ್ಲಿದ್ದರು. ಕಂಬಳ ಸಮಿತಿಯ ಉಪಾಧ್ಯಕ್ಷ ಸುಧೀರ್ ಶೆಟ್ಟಿ, ಪ್ರ. ಕಾರ್ಯದರ್ಶಿ ಮೋಹನ ಗೌಡ ಪಳ್ಳತಳ, ಜೊತೆ ಕಾರ್ಯದರ್ಶಿ ಕುಮಾರ್, ಕೋಶಾಧಿಕಾರಿ ಸಂಜೀವ ಮಾಯಿಲೋಡಿ ಸಹಿತ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಹಕಾರ ನೀಡಿದರು. ಸದಾನಂದ ಕಾರ್ಯಕ್ರಮ ನಿರ್ವಹಿಸಿದರು.
ಉದ್ಘಾಟನಾ ಕಾರ್ಯಕ್ರಮ: ಪೂರ್ವಾಹ್ನ ನಡೆದ ಸಮಾರಂಭದಲ್ಲಿ ಅನಂತ್ರಾಮ ಜೋಗಿತ್ತಾಯ ಬಂಗಳಾಯಿ ಕಂಬಳದ ಉದ್ಘಾಟನೆ ನೆರವೇರಿಸಿದರು. ಮಚ್ಚಿನ ಗ್ರಾ.ಪಂ. ಅಧ್ಯಕ್ಷೆ ಹರ್ಷಲತಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ನವಚೇತನ ತೋಟಗಾರಿಕಾ ಕಂಪೆನಿ ತಣ್ಣೀರುಪಂತ ಇದರ ಅಧ್ಯಕ್ಷರೂ ಆಗಿರುವ ಮಚ್ಚಿನ ಸಹಕಾರಿ ಸಂಘದ ಮಾಜಿ ಸಿಇಒ ದುಗ್ಗಪ್ಪ ಗೌಡ ಪೊಸೊಂದೋಡಿ ಶುಭ ಕೋರಿದರು. ಕಂಬಳದ ಫ್ಲಾಗ್ ತೀರ್ಪುಗಾರರಾದ ಸಂಜೀವ ಶೆಟ್ಟಿ ಮುಗೆರೋಡಿ, ವಸಂತ (ಪದ್ಮನಾಭ) ಕಾರಂದೂರು ಮತ್ತು ಜನಾರ್ದನ ಕರ್ಪೆ ಹಾಗೂ ಎಲ್ಲಾ ತೀರ್ಪುಗಾರರೂ ಶ್ರದ್ಧಾ ಭಕ್ತಿಯಿಂದ ಸೇವೆ ನೀಡಿದರು.ತೀರ್ಪುಗಾರರಾಗಿ ರಾಜೀವ ಶೆಟ್ಟಿ ಎಡ್ತೂರು, ಸತೀಶ್ ಕುಮಾರ್ ಹೊಸ್ಮಾರ್, ಲ| ಧರಣೇಂದ್ರ ಕುಮಾರ್ ಜೈನ್ ಮದ್ದಡ್ಕ, ಮಹಾವೀರ ಜೈನ್ ವೇಣೂರು, ಪ್ರಕಾಶ್ ಕಜೆಕ್ಕಾರು, ವಸಂತ ಗೌಡ ಮರಕಡ ಇವರ ತಂಡ ಸಹಕಾರ ನೀಡಿತು.

nalike samudaya bhavanaಬೆಳ್ತಂಗಡಿ : ಇಲ್ಲಿನ ನಲಿಕೆಯವರ ಸಮುದಾಯ ಭವನದ ಉದ್ಘಾಟನೆಯು ಡಿ. 10ರಂದು ನಡೆಯಿತು.
ಸಮುದಾಯ ಭವನದ ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ, ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೆ. ನಲಿಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಸುರೇಶ್ ಬಾಬು ಪಣೆಜಾಲು, ಮಂಗಳೂರು ಭಾರತೀಯ ತೈಲ ನಿಗಮದ ಬಿ.ಎಸ್ ಸುಂದರ್, ಜಿಲ್ಲಾ ನಲಿಕೆಯವರ ಯುವ ವೇದಿಕೆಯ ಅಧ್ಯಕ್ಷ ಸುಬ್ರಾಯ ಕಲ್ಮಂಜ, ಸಂಘದ ಕೋಶಾಧಿಕಾರಿ ಸುರೇಶ್ ಬಿ.ಕೆ., ಕಾರ್ಯದರ್ಶಿ ಸತೀಶ್ ಪಿ., ಉಪಾಧ್ಯಕ್ಷ ಎಸ್ ಪ್ರಭಾಕರ ಮೊದಲಾವರು ಉಪಸ್ಥಿತರಿದ್ದರು.

kotichennayaಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಕೋಟಿ ಚೆನ್ನಯ ಕ್ರೀಡಾಕೂಟವು ಡಿ. 31 ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಸಂಘದ ಗೌರವಾಧ್ಯಕ್ಷ ಶಾಸಕ ಕೆ. ವಸಂತ ಬಂಗೇರರವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ, ಹಾಗೂ ಸಂಘದ ಎಲ್ಲಾ ನಿರ್ದೇಶಕರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

marody shanipooje

marody shanipooje1ಮರೋಡಿ : ಮರೋಡಿ ಉಮಾಮಹೇಶ್ವರ ದೇವಸ್ಥಾನ ಇದರ ಸಹಕಾರದಲ್ಲಿ ಶ್ರೀ ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ಇದರ 4ನೇ ವರ್ಷದ ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಶನಿಪೂಜೆಯು ಸುಬ್ರಹ್ಮಣ್ಯ ಪ್ರಸಾದ್ ಭಟ್ ಅವರ ನೇತೃತ್ವದಲ್ಲಿ ಡಿ. 9ರಂದು ದೇವಸ್ಥಾನದ ವಠಾರದಲ್ಲಿ ಜರಗಿತು.
ಧಾರ್ಮಿಕ ಸಭೆಯಲ್ಲಿ ರಾಜ್ಯ ಸಂಸ್ಕಾರ ಭಾರತಿ ಲೋಕ ಕಲಾವಿದ ಪ್ರಮುಖ್, ತುಳುವ ಬೊಳ್ಳಿ ದಯಾನಂದ ಕತ್ತಲ್‌ಸಾರ್ ಧಾರ್ಮಿಕ ಉಪನ್ಯಾಸ ನೀಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಕೊಡಂಗೆ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜಯಂತ ಕೋಟ್ಯಾನ್, ತಾ.ಪಂ. ಸದಸ್ಯೆ ರೂಪಲತಾ, ಕೇಳ ಮಾಗಣೆ ಬಸದಿಯ ಆಡಳಿತ ಮೊಕ್ತೇಸರ ಡಾ.ಆಶೀರ್ವಾದ್, ಮುಂಬೈ ಉದ್ಯಮಿ ನಾರಾಯಣ ಸುವರ್ಣ, ಉದ್ಯಮಿ ರತ್ನಾಕರ ಬುಣ್ಣಾನ್ ಮರೋಡಿ, ಸಾವ್ಯ ಗುಜ್ಜೊಟ್ಟು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಗೌರವಾಧ್ಯಕ್ಷ ಶ್ರೀಧರ ಪೂಜಾರಿ ಭೂತಡ್ಕ, ಮುಂಬೈ ಉದ್ಯಮಿ ಸುರೇಶ್ ಅಂಚನ್  ಹಾಗೂ ಮೊದಲಾದವರು ಭಾಗವಹಿಸಿದ್ದರು.

gurujayanthi

gurujayanthi1

gurujayanthi2

gurujayanthi3

gurujayanthi4ಕುಕ್ಕೆಡಿ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಮಿತಿ ಕುಂಡದಬೆಟ್ಟು -ಕುಕ್ಕೇಡಿ-ನಿಟ್ಟಡೆ, ಬಿಲ್ಲವ ಮಹಿಳಾ ವೇದಿಕೆ ಮತ್ತು ಯುವ ಬಿಲ್ಲವ ವೇದಿಕೆ, ಹಾಗೂ ಯುವವಾಹಿನಿ ಸಂಚಾಲನ ಸಮಿತಿ, ಕುಂಡದಬೆಟ್ಟು -ಕುಕ್ಕೇಡಿ-ನಿಟ್ಟಡೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಿ. 10 ರಂದು ಡಾ| ಬಿ.ಆರ್. ಅಂಬೇಡ್ಕರ್ ಭವನ, ಕುಕ್ಕೇಡಿ-ಕುಂಡದಬೆಟ್ಟು ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಗುರುಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ನಿಟ್ಟಡೆ ಗ್ರಾಮದ ಗೋಳಿಯಂಗಡಿ ಪಾಣೂರು ಬಳಿ ಕುಕ್ಕೇಡಿ ಗ್ರಾಮ ಪಂಚಾಯತು ವತಿಯಿಂದ ನಿರ್ಮಿಸಲ್ಪಟ್ಟ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿದರು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ. ಸುಂದರ ಪೂಜಾರಿ ಅಮೇಯಿ ವಹಿಸಿದ್ದರು.
ಈ ಸಂದರ್ಭದಲ್ಲಿ ಮಂಗಳೂರು ಬ್ರಹ್ಮಶ್ರೀ ನಾರಾಯಣಗುರು ಅಧ್ಯಾಯನ ಪೀಠ ವಿಶ್ವವಿದ್ಯಾನಿಲಯದ ನಿರ್ದೇಶಕ ಮುದ್ದು ಮೂಡುಬೆಳ್ಳೆ, ಸರಕಾರಿ ಪ್ರೌಢ ಶಾಲೆ, ಕಲ್ಲಾಡಿ ಮಂಗಳೂರು ಮುಖ್ಯೋಪಾಧ್ಯಾಯಿನಿ ಸುರೇಖಾ ಕೆ.ಇ.ಎಸ್, ಬೆಳ್ತಂಗಡಿ ಶ್ರೀ.ಗು.ನಾ.ಸ್ವಾ.ಸೇ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ನಿಕಟಪೂರ್ವ ಅಧ್ಯಕ್ಷ ಭಗೀರಥ ಜಿ. ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಂತೋಷ್ ಕುಮಾರ್ ಉಪ್ಪಾರು, ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ರಾಜಶ್ರೀ ರಮಣ್, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷೆ ತೇಜಾಕ್ಷಿ, ಕುಕ್ಕೇಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಎಚ್, ಬಿಲ್ಲವ ವೇದಿಕೆ ಅಧ್ಯಕ್ಷೆ ಲೀಲಾವತಿ ನಿಟ್ಟಡೆ ಯುವವಾಹಿನಿ ಅಧ್ಯಕ್ಷ ಎಚ್.ಎಲ್. ಉದಯ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

ಆಕಾಶವಾಣಿ ಮಂಗಳೂರು ಇಲ್ಲಿ ಶ್ರೀ ಮದವೂರ ವಿಘ್ನೇಶ ಕಲಾ ಸಂಘ ಗೇರುಕಟ್ಟೆ ಇದರ ಸದಸ್ಯರಿಂದ ಡಿ.10 ರಂದು ಮಧ್ಯಾಹ್ನ 2.35 ಕ್ಕೆ ಯಕ್ಷಗಾನ ತಾಳಮದ್ದಳೆ ಶ್ರೀ ಮಹಿಷ ಮರ್ಧಿನಿ ಪ್ರಸಾರವಾಗಲಿದೆ.
ಹಿಮ್ಮೆಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಗುರು ಪ್ರಸಾದ, ಚೈತನ್ಯ ಕೃಷ್ಣ ಪದ್ಯಾಣ, ಮುಮ್ಮೇಳದಲ್ಲಿ ಪ್ರೋ. ಮಧೂರು ಮೋಹನ ಕಲ್ಲೂರಾಯ, ದಿವಾಕರಾಚಾರ್ಯ ಗೇರುಕಟ್ಟೆ, ಉದಯಶಂಕರ್ ಭಟ್, ಸುಂದರ ಕೃಷ್ಣ ಮಧೂರು, ದಿನೇಶ ಬಳಂಜ, ಸುರೇಶ ಕಲ್ಲೂರಾಯ, ಶ್ರೀಮತಿ ಕೆ.ಆರ್ ಸುವರ್ಣ ಕುಮಾರಿ ಭಾಗವಹಿಸಲಿದ್ದಾರೆ. ಮಧೂರ ಮೋಹನ ಕಲ್ಲೂರಾಯ ಸಂಯೋಜಿಸಿದ್ದಾರೆ.

ಕೊಕ್ಕಡ : ಶ್ರೀಕ್ಷೇತ್ರ ಸೌತಡ್ಕ ಕ್ಷೇತ್ರದಲ್ಲಿ ಬಯಲು ಆಲಯದ ಗಣೇಶನ ಕಟ್ಟೆಯ ಹಿಂಭಾಗದಲ್ಲಿ ಅಂದಾಜು 50 ಲಕ್ಷ ವೆಚ್ಚದಲ್ಲಿ ಪಶ್ಚಿಮ ಭಾಗದ ನೂತನ ಗೋಪುರದ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆಯು ಡಿ.11 ರಂದು ಬೆಳಗ್ಗೆ 10.30 ಕ್ಕೆ ನಡೆಯಲಿದೆ. ಬೆಳ್ತಂಗಡಿಯ ಶಾಸಕ ಕೆ. ವಸಂತ ಬಂಗೇರ ಶಂಕುಸ್ಥಾಪನೆ ನೆರವೇರಿಸಲಿದ್ದು ಈ ಸಂದರ್ಭ ಕುಕ್ಕೆ ಸುಬ್ರಹ್ಮಣ್ಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸೌತಡ್ಕ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ, ಸದಸ್ಯರುಗಳಾದ ಕೆ.ವಿಶ್ವನಾಥ ಕೊಲ್ಲಾಜೆ, ಪಿ. ವಿಶ್ವನಾಥ ಶೆಟ್ಟಿ, ಪ್ರಶಾಂತ್ ರೈ, ಅಣ್ಣಪ್ಪ ಗೌಡ ಕಾಶಿ, ಗಣೇಶ್ ಪಿ.ಕೆ., ಸಿನಿ ಗುರುದೇವನ್, ಸೌಮ್ಯ , ಅರ್ಚಕ ಸದಸ್ಯರಾದ ಸತ್ಯಪ್ರಿಯ ಕಲ್ಲೂರಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಮುಂತಾದವರು ಭಾಗವಹಿಸಲಿದ್ದಾರೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

Ladru D'sozaನಡ : ಮಂಜೊಟ್ಟಿ ಕೊಲ್ಯೊಟ್ಟು ನಿವಾಸಿ ಲಾದ್ರು ಡಿಸೋಜ(58ವ)ರವರು ಡಿ. 7ರಂದು ತೋಟದಲ್ಲಿ ತೆಂಗಿನಕಾಯಿ ಕೀಳುತ್ತಿದ್ದಾಗ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.
ಮೃತರು ನಡ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾಗಿದ್ದರು.
ಮೃತರು ಪತ್ನಿ ಸೆಲಿನ್ ಡಿಸೋಜ, ಪುತ್ರಿಯರಾದ ಜಾನೆಟ್, ಲಿನೆಟ್, ವೈಲೆಟ್ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

December 2017
M T W T F S S
« Nov    
 123
45678910
11121314151617
18192021222324
25262728293031

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top