Fri 13 Jan 2017, 8:22AM

ಹೆಚ್ಚಿನ ಸುದ್ದಿಗಳು

Periyadka Hithesh abhinandane copyಪೆರಿಯಡ್ಕ: ಸ.ಕಿ.ಪ್ರಾ. ಶಾಲೆ ಪೆರಿಯಡ್ಕ (ಬಿ) ಬೆಳಾಲಿನಲ್ಲಿ ನಡೆದ ಸೈಂಟ್ ಥೋಮಸ್ ಪದವಿ ಕಾಲೇಜು ಹಳೆಕೋಟೆ ಬೆಳ್ತಂಗಡಿ ಇಲ್ಲಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ, ಝೀ ಕನ್ನಡ ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕುಮಾರ್ ಕಾಪಿನಡ್ಕ ಇವರನ್ನು ಶಾಲಾ ಹಾಗೂ ಎನ್.ಎಸ್.ಎಸ್. ಶಿಬಿರ ವ್ಯವಸ್ಥಾಪನಾ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.
ಅಧ್ಯಕ್ಷತೆಯನ್ನು ಬೆಳಾಲು ಗ್ರಾ.ಪಂ. ಅಧ್ಯಕ್ಷ ದಿನೇಶ್ ಕೋಟ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೆ|ಫಾ| ಜೋಸ್ ವಲಿಯ ಪರಂಬಿಲ್, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ಪ್ರಾಂಶುಪಾಲರಾದ ಪ್ರೊ| ಫಾತುಮಾಬಿ ಸಾಹಿರ, ಬೆಳಾಲು ಸಿ.ಎ. ಬ್ಯಾಂಕ್ ಅಧ್ಯಕ್ಷ ಹೆಚ್. ಪದ್ಮಗೌಡ, ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಮೋದರ ಗೌಡ ಸುರುಳಿ, ಬೆಳಾಲು ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿ, ಗ್ರಾ.ಪಂ. ಸದಸ್ಯರುಗಳಾದ ಸತೀಶ್ ಗೌಡ ಎಳ್ಳುಗದ್ದೆ, ಜಯಂತ ಗೌಡ, ವಿಮಲಾ, ಕುಸುಮಾವತಿ, ಹಿರಿಯರಾದ ಬಾಬು ಗೌಡ ಅಲಕೆದಡ್ಡ, ಸಮಿತಿಯ ಸಂಚಾಲಕ ಶ್ರೀನಿವಾಸ ಗೌಡ ಗಣಪನಗುತ್ತು, ಎಸ್.ಡಿ.ಎಂ.ಸಿ. ಅಧ್ಯಕ್ಷ ಕುಶಾಲಪ್ಪ ಗೌಡ, ಶೇಖರ ಗೌಡ ಕೊಲ್ಲಿಮಾರ್ ಭಾಗವಹಿಸಿದ್ದರು.

maya swacha shradda kendra copyಬೆಳಾಲು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಮಸ್ತ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛ ಭಾರತ-ಸ್ವಚ್ಛ ಶ್ರದ್ಧಾ ಕೇಂದ್ರ ಯೋಜನೆಯಡಿಯಲ್ಲಿ ಜ.8ರಂದು ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಾಲು ವಿಭಾಗದ ಪ್ರಗತಿಬಂಧು ಒಕ್ಕೂಟ, ಸ್ವಸಹಾಯ ಸಂಘ, ಜ್ಞಾನವಿಕಾಸ ಕೇಂದ್ರ ಜನಜಾಗೃತಿ ವೇದಿಕೆ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ನೆರವಿನೊಂದಿಗೆ ದೇವಸ್ಥಾನದ ವಠಾರದಲ್ಲಿ ಶುಚಿತ್ವ ಮಾಡುವ ಕೆಲಸವನ್ನು ಶ್ರಮದಾನದ ಮೂಲಕ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ನಾರಾಯಣ ಸುವರ್ಣ, ಬೆಳಾಲು ಗ್ರಾ.ಪಂ ಅಧ್ಯಕ್ಷ ದಿನೇಶ್ ಕೋಟ್ಯಾನ್, ಮಾಯಾಗುತ್ತು ಪುಷ್ಪದಂತ ಜೈನ್, ಗ್ರಾ.ಪಂ ಸದಸ್ಯ ದಯಾನಂದ ಪಿ, ಮಾಯಾ ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ಹಾಗೂ ಶ್ರೀ ಮಾಯಾ ಮಹೇಶ್ವರ ಭಜನಾ ಮಂಡಳಿ ಅಧ್ಯಕ್ಷ ಗಂಗಾಧರ ಸಾಲಿಯಾನ್, ಸೇವಾ ಪ್ರತಿನಿಧಿ ಕು| ಆಶಾ, ಬೆಳಾಲು ಒಕ್ಕೂಟದ ಅಧ್ಯಕ್ಷ ಜನಾರ್ದನ ಪೂಜಾರಿ, ಬೆಳಾಲು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ರುಕ್ಮಯ್ಯ ಗೌಡ, ಸುದ್ದಿ ಬಿಡುಗಡೆಯ ಸಹಾಯಕ ವ್ಯವಸ್ಥಾಪಕ ಪಿ.ಜಾರಪ್ಪ ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶೇಖರ ಗೌಡ ಕೊಲ್ಲಿಮಾರು, ನವಜೀವನ ಸಮಿತಿ ಅಧ್ಯಕ್ಷ ರತ್ನಾಕರ ಆಚಾರ್ಯ, ಕೃಷ್ಣಪ್ಪ ಗೌಡ ಬೆರ್ಕೆಜಾಲು, ರಮೇಶ್ ಪೂಜಾರಿ ಗುಂಡ್ಯ, ಜ್ಞಾನ ವಿಕಾಸ ಹಾಗೂ ಸ್ವಸಹಾಯ ಸಂಘದ ಸದಸ್ಯರುಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಒಂದು ದಿನದ ಶ್ರಮದಾನದ ಮೂಲಕ ದೇವಸ್ಥಾನ ವಠಾರ ಶುಚಿತ್ವಗೊಳಿಸಲಾಯಿತು. ಆಡಳಿತಾಧಿಕಾರಿ ನಾರಾಯಣ ಸುವರ್ಣ ಕೃತಜ್ಞತೆ ಸಲ್ಲಿಸಿದರು.

billava sanga bajana tarabeti copy

billava sanga bajana tarabeti udhgatane copy

ಬೆಳ್ತಂಗಡಿ : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ, ಬಿಲ್ಲವ ಮಹಿಳಾ ವೇದಿಕೆ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಗುರುನಾರಾಯಣ ಸಂಕೀರ್ಣದ ಸಭಾ ಭವನದಲ್ಲಿ ಭಜನಾ ತರಬೇತಿ ಶಿಬಿರ ಜ.10 ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ದೇವದಾಸ ಪ್ರಭು ಭಾಗವಹಿಸಿ ಒಂದು ದಿನದ ಭಜನಾ ತರಬೇತಿಯನ್ನು ನಡೆಸಿಕೊಟ್ಟರು. ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ. ಭಜನಾ ತರಬೇತಿ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಬಿಲ್ಲವ ಮಹಿಳಾ ವೇದಿಕೆ ಮಾಜಿ ಅಧ್ಯಕ್ಷೆ ಶ್ರೀಮತಿ ವಿನೋದಿನಿ ರಾಮಪ್ಪ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಚಿದಾನಂದ ಇಡ್ಯ, ಸಂಘದ ನಿರ್ದೇಶಕರಾದ ಶ್ರೀಮತಿ ಸುಜಾತ ಅಣ್ಣಿ ಪೂಜಾರಿ, ಚಂದ್ರಶೇಖರ ಇಂದಬೆಟ್ಟು, ಗೋಪಾಲಕೃಷ್ಣ ಸಾಲಿಯಾನ್, ಭಜನಾ ಸಮಿತಿಯ ಮಾಜಿ ಅಧ್ಯಕ್ಷ ಎಚ್.ರಾಮಪ್ಪ, ನವೀನ್ ಕುಮಾರ್, ಶ್ರೀಮತಿ ಸುಮತಿ ಪ್ರಮೋದ್, ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಶಾಂತಾ ಬಂಗೇರ, ಸದಸ್ಯರುಗಳು ಉಪಸ್ಥಿತರಿದ್ದರು. ಶ್ರೀಮತಿ ಸುಧಾಮಣಿ ಆರ್ ಕಾರ್ಯಕ್ರಮ ನಿರೂಪಿಸಿದರು.

sdm puc Sanskrit samaropa copyಉಜಿರೆ : ಪ್ರಾಚೀನ ಹಸ್ತ ಪ್ರತಿಗಳ ಗ್ರಂಥದಲ್ಲಿ ಅತ್ಯಮೂಲ್ಯ ಜ್ಞಾನರಾಶಿಯೇ ಅಡಗಿದೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಇಂತಹ ಸಾವಿರಾರು ಪ್ರಾಚೀನ ಹಸ್ತಪ್ರತಿ ಗ್ರಂಥಗಳಿವೆ. ಇನ್ನೂ ಈ ಬಗ್ಗೆ ವಿಫುಲ ಸಂಶೋಧನೆ ಆಗಬೇಕಾಗಿದೆ. ಒಟ್ಟಾರೆ ಪ್ರಾಚೀನ ಹಸ್ತಪ್ರತಿ ಗ್ರಂಥಗಳ ರಕ್ಷಣೆ ಅತ್ಯವಶ್ಯವಾಗಿದ್ದು, ಪ್ರಾಚೀನ ಕಾಲದ ಸಾಹಿತ್ಯ, ವೈಜ್ಞಾನಿಕ ವಿಷಯಗಳನ್ನು ನಾವು ಈ ಮೂಲಕ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ಸಂಶೋಧಕ ಡಾ. ಎಸ್.ಆರ್ ವಿಘ್ನರಾಜ್ ಹೇಳಿದರು.
ಅವರು ಉಜಿರೆಯ ಶ್ರೀ ಧ.ಮಂ.ಪ.ಪೂ ಕಾಲೇಜಿನ ಸಂಸ್ಕೃತ ಸಂಘದ ಸಮಾರೋಪ ಸಮಾರಂಭದಲ್ಲಿ ಹಸ್ತಪ್ರತಿಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಎಸ್.ಡಿ.ಎಂ. ಸನಿವಾಸ ಪ.ಪೂ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಮಹೇಶ್‌ಭಟ್‌ರವರು ಸಂಸ್ಕೃತ ಸಂಘದ ಸಮಾರೋಪ ಭಾಷಣ ಮಾಡಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ್ ಐತಾಳ್ ಅಧ್ಯಕ್ಷತೆ ವಹಿಸಿದ್ದರು.ಸಂಸ್ಕೃತ ಸಂಘದ ಅಧ್ಯಕ್ಷ ಸಂದೇಶ್‌ಭಟ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೀರ್ತನ್ ಶಬರಾಯ ಸ್ವಾಗತಿಸಿ, ಪ್ರಜ್ಞಾಶ್ರೀ ನಿರೂಪಿಸಿ, ಸಂದೇಶ್‌ಭಟ್ ವಂದಿಸಿದರು.

  ಕ್ಯಾಶ್‌ಲೆಸ್ ಅಭಿಯಾನದಲ್ಲಿ ಭಾಗವಹಿಸಿ 10 ಕುಟುಂಬವನ್ನು ಕ್ಯಾಶ್‌ಲೆಸ್ ಸೊಸೈಟಿಗೆ ಬದಲಾಯಿಸಿದರೆ ಅವರಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಮಣಿಪಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 10 ಕುಟುಂಬವನ್ನು ಕ್ಯಾಶ್‌ಲೆಸ್ ಸೊಸೈಟಿಗೆ ಬದಲಾಯಿಸಿದ ವೀಡಿಯೋ ತುಣುಕು ಅಥವಾ ಇನ್ನತರೆ ಯಾವುದೇ ದಾಖಲೆಯನ್ನು ಅಪ್‌ಲೋಡ್ ಮಾಡಿದವರಿಗೆ ಮಾನವ ಸಂಪನ್ಮೂಲ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

  ಶೂನ್ಯ ಮೊತ್ತದ ಖಾತೆ ಹಾಗೂ ಜನಧನ್ ಖಾತೆಗಳನ್ನು ಹೊರತುಪಡಿಸಿ ಇನ್ನುಳಿದ ಬ್ಯಾಂಕ್ ಖಾತೆದಾರರಿಂದ ಪಾನ್‌ಕಾರ್ಡು ಪಡೆಯುವಂತೆ ಕೇಂದ್ರ ಸರಕಾರ ಆದೇಶ ನೀಡಿದೆ. ಫೆ.28ರೊಳಗೆ ಪಾನ್ ಸಂಖ್ಯೆ ಅಥವಾ ಫಾರ್ಮ್ ೬೦ ಪಡೆಯಬೇಕು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧಿಸೂಚನೆ ಹೊರಡಿಸಿದೆ. ಈ ಹಿನ್ನೆಲೆ ಆದಾಯ ತೆರಿಗೆ ನಿಯಮಗಳಲ್ಲೂ ಬದಲಾವಣೆ ಮಾಡಲಾಗಿದ್ದು, ಈವರೆಗೆ ಪಾನ್ ಅಥವಾ ಫಾರ್ಮ್ 60 ಸಲ್ಲಿಸದ ಗ್ರಾಹಕರು ಈಗ ಸಲ್ಲಿಸಬೇಕು ಎಂದು ಹೇಳಿದೆ. ಆದರೆ, ಈ ನಿಯಮ ಕನಿಷ್ಠ ಉಳಿತಾಯ ಬ್ಯಾಂಕ್ ಠೇವಣೀ ಖಾತೆ (ಬಿ.ಎಸ್.ಬಿ.ಡಿ.ಎ) ಗಳಿಗೆ ಅನ್ವಯಿಸುವುದಿಲ್ಲ.

  ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸದ್ಯದಲ್ಲಿಯೇ ಕನ್ನಡ ಭಾಷೆಯಲ್ಲಿ ವೆಬ್‌ಸೈಟ್‌ವೊಂದನ್ನು ಆರಂಭಿಸಲಿದೆ. ನ್ಯಾಶನಲ್ ಇಂಟರ್ನೆಟ್ ಎಕ್ಸ್ ಚೇಂಜ್ ಆಫ್ ಇಂಡಿಯಾ, ಭಾರತೀಯ ಭಾಷೆಗಳಲ್ಲಿ ವೆಬ್‌ಸೈಟ್ ನಿರ್ಮಿಸುವ ಅಧಿಕೃತ ಕೇಂದ್ರವಾಗಿದ್ದು ಇದೀಗ ಕನ್ನಡದಲ್ಲಿ ತಯಾರು ಮಾಡುತ್ತಿದೆ. ಆಧುನಿಕ ತಂತ್ರಜ್ಞಾನ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಬಹುಪಾಲು ಜನರಲ್ಲಿರುವ ಕಂಪ್ಯೂಟರ್ ಅನಕ್ಷರತೆ, ಇಂಗ್ಲಿಷ್ ಭಾಷೆಯ ಸಮಸ್ಯೆಯಿದ್ದು, ಇವೆರಡರ ನಡುವಣ ಅಂತರವನ್ನು ಕಡಿಮೆ ಮಾಡಲು ಸ್ಥಳೀಯ ಭಾಷೆಯಲ್ಲಿ ಇದನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ನಿಕ್ಸಿಯ ಅಧಿಕಾರಿಗಳು ತಿಳಿಸಿದ್ದಾರೆ.

 ಬಡತನ ರೇಖೆಗಿಂತ ಕೆಳಗಿರುವ ಅಂದರೆ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ರಾಜ್ಯ ಸರ್ಕಾರ ಉಚಿತವಾಗಿ ಗ್ಯಾಸ್ ಸ್ಟೌವ್ ಮತ್ತು ರೆಗ್ಯುಲೇಟರ್ ನೀಡಲು ಮುಂದಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್ ಈ ಕುರಿತು ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ಒಂದು ಸಿಲಿಂಡರ್ ಸೌಲಭ್ಯವುಳ್ಳ ಅಡುಗೆ ಅನಿಲ ಸಂಪರ್ಕ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಉತ್ತಮ ಗುಣಮಟ್ಟದ ಸ್ಟೌವ್ ಮತ್ತು ರೆಗ್ಯುಲೇಟರ್ ನೀಡಲಿದೆ ಎಂದಿದ್ದು, ಕರ್ನಾಟಕದಲ್ಲಿ ಉಜ್ವಲ ಯೋಜನೆಯಡಿ ಸಿಲಿಂಡರ್ ಪಡೆಯಲು ಸುಮಾರು 3 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ ಎಂದಿದ್ದಾರೆ.

  ಬೆಳ್ತಂಗಡಿ : ಬಿಎಸ್‌ಎನ್‌ಎಲ್ ಸಂಸ್ಥೆಯಲ್ಲಿ 2 ದಶಕಕ್ಕೂ ಹೆಚ್ಚು ಕಾಲ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಸೇರಿದಂತೆ ವಿವಿಧ ಸವಲತ್ತುಗಳನ್ನು ನೀಡುವಂತೆ ಒತ್ತಾಯಿಸಿ ಜ. 12ರಿಂದ ಮಂಗಳೂರಿನ ಕಾರ್ಮಿಕ ಆಯುಕ್ತರ ಕಚೇರಿ ಎದುರು ಅನಿರ್ಧಿಷ್ಠಾವದಿ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ದಿನೇಶ್ ಗೌಡ ತಿಳಿಸಿದ್ದಾರೆ.

sajikumar copyಬೆಳ್ತಂಗಡಿ : ನೆಲ್ಯಾಡಿ, ಆಲಂಕಾರು ಶಾಖಾ ಕಛೇರಿ ಮತ್ತು ನೆಲ್ಯಾಡಿ ಸಬ್ ಸ್ಟೇಷನ್ ನಲ್ಲಿ ಜೆ.ಇ. ಆಗಿ ಕಳೆದ ಎರಡುವರೆ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಇಚಿಲಂಪಾಡಿ ಮೂಲದ ಸಜಿಕುಮಾರ್ ಇವರಿಗೆ ಭಡ್ತಿಯಾಗಿ ಬೆಳ್ತಂಗಡಿ ನಗರ ಸಹಾಯಕ ಇಂಜಿನಿಯರ್ ಆಗಿ ಭಡ್ತಿ ಹೊಂದಿದ್ದಾರೆ. ನೆಲ್ಯಾಡಿಯ ಜವಾಬ್ದಾರಿ ಯಲ್ಲದೆ ಹೆಚ್ಚುವರಿಯಾಗಿ ಕಡಬ ವಿಭಾಗದ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ತಾಂತ್ರಿಕ ಸಹಾಯಕ ಇಂಜಿನಿಯರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದ ಇವರು ಭಡ್ತಿಗೊಂಡು ಬೆಳ್ತಂಗಡಿಗೆ ವರ್ಗಾವಣೆಯಾಗಿದ್ದಾರೆ.

viveka 1

viveka 2

viveka 4

viveka

ಬೆಳ್ತಂಗಡಿ : ಇಂದು ತಾಲೂಕು ಪಂಚಾಯತಿ ಸಭಾಭವನದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ-2017ನ್ನು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ರಾಜಗುರು ಹೆಬ್ಬಾರ್ ನೆರವೇರಸಿದರು.
ಸಭಾಧ್ಯಕ್ಷತೆಯನ್ನು ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸಿ.ಆರ್ ನರೇಂದ್ರ ಆಗಮಿಸಿದ್ದರು. ಬೆಳ್ತಂಗಡಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಲಕ್ಷ್ಮಣ ಶೆಟ್ಟಿ ಪ್ರಧಾನ ಭಾಷಣಕಾರರಾಗಿದ್ದರು. ಈ ಸಂದರ್ಭದಲ್ಲಿ ಅನೇಕ ಗಣ್ಯರು ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

thungappa bangera pressmeet copyಪುಂಜಾಲಕಟ್ಟೆ : ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ, ಜೆ.ಸಿ.ಐ. ಮಡಂತ್ಯಾರು ಇದರ ಸಂಯುಕ್ತ ಆಶ್ರಯದಲ್ಲಿ ಮಾ.5ರಂದು 9ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮತ್ತು ಫೆ.26ರಿಂದ ಮಾ.4ರ ತನಕ ದಿ| ಶಿಶಿರ್ ಕುಮಾರ್ ಪಿ.ಎಸ್. ಇವರ ಸ್ಮರಣಾರ್ಥ ದ.ಕ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಫ್ರೆಂಡ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ತಿಳಿಸಿದ್ದಾರೆ.
ಅವರು ಬಂಟ್ವಾಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. 33ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ 33 ವರ್ಷಗಳಿಂದ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿ, ವಿವಿಧ ಸಾಧಕರಿಗೆ ಸ್ವಸ್ತಿಕ್ ಪುರಸ್ಕಾರ ರಾಜ್ಯ ಪ್ರಶಸ್ತಿ ನೀಡುವ ಉತ್ತಮ ಕಾರ್ಯ ಮಾಡುತ್ತಿದೆ. ಎಂ. ತುಂಗಪ್ಪ ಬಂಗೇರರು ೧೯೮೩ರಲ್ಲಿ ಸಮಾನ ಮನಸ್ಕ ಯುವಕರೊಂದಿಗೆ ಸ್ವಸ್ತಿಕ್ ಕ್ರಿಕೆಟ್ ತಂಡವನ್ನು ಕಟ್ಟಿಕೊಂಡು ಕ್ಲಬ್‌ನ್ನು ಸ್ಥಾಪನೆಗೊಳಿಸಿ ನಿರಂತರ ಕಬಡ್ಡಿ ಪಂದ್ಯಾಟ ಆಯೋಜಿಸುತ್ತಿರುವುದು ಕ್ಲಬ್‌ನ ಹೆಗ್ಗಳಿಕೆ ಎಂದರು.
ಇದರ ಜೊತೆಗೆ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳ ಜೊತೆಗೆ ಸ್ವಸ್ತಿ ಸಿರಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ಸಾಮೂಹಿಕ ವಿವಾಹದೊಂದಿಗೆ ಅದ್ದೂರಿಯಾಗಿ ಆಚರಿಸಿ ನಾಡಿನ ಗಮನ ಸೆಳೆದಿದೆ ಉಚಿತ ಸಾಮೂಹಿಕ ವಿವಾಹಕ್ಕೆ ಸಂಬಂಧಿಸಿದಂತೆ 10 ಜೋಡಿಗಿಂತ ಮೇಲ್ಪಟ್ಟು ಪ.ಜಾತಿಯ ವಧುವರರು ಭಾಗವಹಿಸಿದ್ದಲ್ಲಿ ಸರಕಾರದಿಂದ ತಲಾ ರೂ. 5೦ಸಾವಿರ ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದರು. ನಾಟಕದಲ್ಲಿ ಆಯ್ದ 7 ತಂಡಗಳಿಗೆ ಮಾತ್ರ ಅವಕಾಶವಿದ್ದು, ಪ್ರಥಮ ರೂ.30ಸಾವಿರ, ದ್ವೀತಿಯ ರೂ.20ಸಾವಿರ, ತೃತೀಯ ಮತ್ತು ಚತುರ್ಥ ತಲಾ ರೂ.10ಸಾವಿರ ಬಹುಮಾನ ಜೊತೆಗೆ ವೈಯಕ್ತಿಕ ಬಹುಮಾನಗಳಿವೆ. ಸ್ಪರ್ಧಾ ತಂಡಕ್ಕೆ ರೂ.10 ಸಾವಿರ ಭತ್ಯೆ ನೀಡಲಾಗುವುದು ಹೆಚ್ಚಿನ ಮಾಹಿತಿಗೆ 9901098038ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಲಬ್‌ನ ಅಧ್ಯಕ್ಷ ಪ್ರಶಾಂತ್ ಎಂ., ಕಾರ್ಯದರ್ಶಿ ಜಯರಾಜ್, ಹೆಚ್.ಕೆ. ನಯನಾಡು, ಪ್ರಭಾಕರ ಪಿ.ಎಂ, ರಾಜೇಶ್ ಪುಳಿಮಜಲು ಉಪಸ್ಥಿತರಿದ್ದರು.

bdy varshikothsava copyಬೆಳ್ತಂಗಡಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರದ ಸಹಯೋಗದೊಂದಿಗೆ ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ ಯಲಹಂಕದ 20ನೇ ವಾರ್ಷಿಕೋತ್ಸವ ಜ.08ರಂದು ಬೆಂಗಳೂರು ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಸಭಾಂಗಣದ ಯಲಹಂಕದಲ್ಲಿ ನಡೆಯಿತು.
ಈ ಕಾರ‍್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರು ಉದ್ಯಮಿ ಗೋವಿಂದೂರು ವೆಂಕಪ್ಪ ಹೆಗ್ಡೆ ಉದ್ಘಾಟಿಸಿ, ದಕ್ಷಿಣ ಕನ್ನಡದವರು ಹೃದಯ ಶ್ರೀಮಂತಿಕೆ ಉಳ್ಳವರು. ಬುದ್ದಿ ಜೀವಿಗಳು. 20 ವರ್ಷದಿಂದ ಈ ಸಂಘವನ್ನು ಕಟ್ಟಿ ಜನರನ್ನು ಒಗ್ಗೂಟಿಸಿದ್ದೀರಿ. ಈ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರು ಸಾಹಿತಿಗಳಾದ ಬೊಳುವಾರು ಮಹಮ್ಮದ್ ಕುಂಞಿ, ಕನ್ನಡದ ಹಿರಿಯ ಚಲನಚಿತ್ರ ನಟಿ ಶ್ರೀಮತಿ ಸತ್ಯಭಾಮ ಆರೂರು, ರಾಜು ಬಲ್ಲಾಲ್ ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ದಯಾನಂದ ಕೊಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಚಿತ್ರಕಲಾ ರಘುನಾಥ ರೈ, ಕೋಶಾಧಿಕಾರಿಯಾದ ಅಲಂಗಾರು ಜಯರಾಮ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷರುಗಳಾದ ಕೆ.ವಿಠಲ ಶೆಟ್ಟಿ, ಆನಂದ ಶೆಟ್ಟಿ, ಕೆ.ಲಕ್ಷ್ಮೀ ನಾರಾಯಣ ಆಳ್ವ, ಪರಿಕಾ ಭಾಸ್ಕರ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ಕನ್ನಡದ ಹಿರಿಯ ಚಲನಚಿತ್ರ ನಟಿ ಸತ್ಯಭಾಮ ಇವರನ್ನು ಸಂಘದಿಂದ ಸನ್ಮಾನಿಸಲಾಯಿತು. ಚಿತ್ರಕಲಾ ರಘುನಾಥ ರೈ ವರದಿ ಮಂಡಿಸಿದರು. ರಾಮಚಂದ್ರ ಮಿಚಾರು ಕಾರ‍್ಯಕ್ರಮ ನಿರೂಪಿಸಿ, ಸಂಘದ ಉಪಾಧ್ಯಕ್ಷರಾದ ಬಾಬು ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿಯಾದ ಚಿತ್ರಕಲಾ, ರಘುನಾಥ ರೈ ಧನ್ಯವಾದವಿತ್ತರು.
ನಂತರ ಶ್ರೀನಿವಾಸ ನಿರ್ದೇಶನದಲ್ಲಿ ಸಮಿತಿ ಸದಸ್ಯರಿಂದ ಯಕ್ಷಗಾನ ನಡೆಯಿತು. ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ujire janardhana temple 1 copy

ujire janardhana temple copy

ಉಜಿರೆ : ಇತಿಹಾಸ ಪ್ರಸಿದ್ಧ ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಶ್ರೀ ಜನಾರ್ದನ ದೇವರ ವಾರ್ಷಿಕ ಜಾತ್ರೆಯು ಜ.14 ಮಕರ ಸಂಕ್ರಾಂತಿಯಂದು ಪ್ರಾರಂಭಗೊಂಡು, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜ.24ರ ವರೆಗೆ ನಡೆಯಲಿದೆ.
ಜ.19ರಂದು ಸಂಜೆ 5 ಗಂಟೆಗೆ ಸದಾಶಿವ ಶೆಟ್ಟಿ ಮತ್ತು ಕುಟುಂಬಸ್ಥರು ದುರ್ಗಾನಿಲಯ, ಉಜಿರೆ ಇವರು ಸೇವಾ ರೂಪವಾಗಿ ಶ್ರೀ ಜನಾರ್ಧನ ದೇವರ ಸನ್ನಿಧಿಗೆ ನೂತನ ಚಂದ್ರಮಂಡಲ ರಥವನ್ನು ಸಮರ್ಪಿಸಲಿದ್ದಾರೆ. ಜ.೨೦ರಂದು ರಾತ್ರಿ ವಿಶಿಷ್ಟ ಕಾಷ್ಠಕಲೆಯಿಂದ ರಚಿಸಲಾದ ನೂತನ ಚಂದ್ರಮಂಡಲ ರಥದಲ್ಲಿ ಶ್ರೀ ಜನಾರ್ದನ ದೇವರ ಉತ್ಸವ ನಡೆಯಲಿದೆ.
ಜ.14ರಂದು ರಾತ್ರಿ ಧ್ವಜಾರೋಹಣ, ಭಂಡಾರ ಏರುವುದು. ಜ.15ರಂದು ರಾತ್ರಿ ಬದಿ ಮೇಲೆ ಉಳ್ಳಾಲ್ತಿ, ಪೊಸಲ್ತಾಯಿ ಕುಮಾರಸ್ವಾಮಿ ದೈವಗಳಿಗೆ ನೇಮ. ಜ.16ರಂದು ಸಾಯಂಕಾಲ ಬದಿ ಮೇಲೆ ನೆತ್ತರ ಮುಗುಳಿ ದೈವದ ನೇಮ, ರಾತ್ರಿ ಭಂಡಾರ ಇಳಿಯುವುದು. ದೇವಸ್ಥಾನದಲ್ಲಿ ಉತ್ಸವ, ಶ್ರೀ ಕೃಷ್ಣ ಮಂಟಪದಲ್ಲಿ. ಜ.18ರಂದು ರಾತ್ರಿ ಅಶ್ವತ್ಥಕಟ್ಟೆ ಉತ್ಸವ, ಜ.18ರಂದು ರಾತ್ರಿ ಪುಷ್ಕರಣಿ ಕಟ್ಟೆ ಉತ್ಸವ, ಜ.19ರಂದು ರಾತ್ರಿ ಶ್ರೀ ಜನಾರ್ದನ ದೇವರ ಪೇಟೆಸವಾರಿ ಉತ್ಸವ. ಜ.20ರಂದು ರಾತ್ರಿ ಚಂದ್ರಮಂಡಲ ರಥೋತ್ಸವ. 21ರಂದು ಬೆಳಿಗ್ಗೆ ದೇವರ ಉತ್ಸವ ದರ್ಶನಬಲಿ. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಶ್ರೀ ಮಹಾರಥೋತ್ಸವ, ಶ್ರೀ ಭೂತ ಬಲಿ, ಜ.22ರಂದು ಬೆಳಿಗ್ಗೆ ಕವಾಟೋದ್ಘಾಟನೆ. ಸಾಯಂಕಾಲ ಅವಭೃತ ರಾತ್ರಿ ಧ್ವಜಾವರೋಹಣ ನಡೆಯಲಿದೆ. 24ರಂದು ಬೆಳಿಗ್ಗೆ ಕಲಶಾಭಿಷೇಕ, ಸಂಪ್ರೋಕ್ಷಣೆ. ಜ.17ರಿಂದ 22ರವರೆಗೆ ಪ್ರತಿದಿನ ಸಾಯಂಕಾಲ ಗಂಟೆ 6.30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀ ಶಾರದಾ ಮಂಟಪದಲ್ಲಿ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಯು.ವಿಜಯರಾಘವ ಪಡ್ವೆಟ್ನಾಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

uruvalu camp copyಉರುವಾಲು : ಶ್ರೀ ಭಾರತಿ ವಿದ್ಯಾಸಂಸ್ಥೆ ಉರುವಾಲು ಇಲ್ಲಿ ಡಿ.24ರಿಂದ ಡಿ.30 ರವರೆಗೆ ಶ್ರೀ ಭಾರತಿ ಕಾಲೇಜು ನಂತೂರು ಇವರ ವತಿಯಿಂದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರವು ಏರ್ಪಟ್ಟಿತು.
ಡಿ.24ರಂದು ಉದ್ಘಾಟನಾ ಸಮಾರಂಭವು ಜರಗಿತು. ವೇದಿಕೆಯಲ್ಲಿ ಶ್ರೀ ಭಾರತಿ ಕಾಲೇಜು ನಂತೂರು ಇದರ ಅಧ್ಯಕ್ಷ, ಪ್ರಾಂಶುಪಾಲರು, ಯೋಜನಾಧಿಕಾರಿ ಗಳು ಹಾಗೂ ಶ್ರೀ ಭಾರತೀ ವಿದ್ಯಾಸಂಸ್ಥೇ ಉರುವಾಲು ಇದರ ಸೇವಾ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತಾಧಿಕಾರಿ ಗಳು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಕೊಡುಗೈ ದಾನಿ ರವಿರಾಜ ಉರುವಾಲು ಆಗಮಿಸಿದ್ದರು. ಈ ಯೋಜನೆಯ ವತಿಯಿಂದ ಡಿ.27ರಂದು ಶ್ರೀ ಭಾರತೀ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಎ.ಬಿ ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು ಇಲ್ಲಿನ ಶಿಕ್ಷಣಾರ್ಥಿಗಳು ಮಕ್ಕಳ ದಂತ, ಕಣ್ಣು, ಕಿವಿ, ನಾಲಗೆ ಹಾಗೂ ಆರೋಗ್ಯ ತಪಾಸಣೆ ಮಾಡಿದರು. ಏಳು ದಿನಗಳ ಕಾಲ ನಡೆದ ಶಿಬಿರದಲ್ಲಿ ಶಿಬಿರಾರ್ಥಿಗಳು ಶಾಲಾ ಆಟದ ಮೈದಾನ ಹಾಗೂ ಶಾಲಾ ಪರಿಸರ ವನ್ನು ಸ್ವಚ್ಛಗೊಳಿಸಿದರು. ಡಿ.೩೦ರಂದು ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ| ಜತ್ತಿ ಈಶ್ವರ ಭಟ್ ವಹಿಸಿದ್ದರು. ವೇದಿಕೆಯಲ್ಲಿ ಕಣಿಯೂರು ಗ್ರಾ.ಪಂ ಅಧ್ಯಕ್ಷ ಸುನೀಲ್ ಬೇಂಗಾ, ರೈತಬಂಧು ಮಾಲಕ ಶಿವಶಂಕರ ನಾಕ್, ಶಾಲಾ ಸೇವಾ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಹಾಗೂ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

patturu chinnara kalavara copyಪಟ್ಟೂರು : ಶ್ರೀ ರಾಮ ವಿದ್ಯಾಸಂಸ್ಥೆ ಪಟ್ಟೂರು ಇಲ್ಲಿನ ವಾರ್ಷಿಕೋತ್ಸವ ಚಿಣ್ಣರ ಕಲರವ 2016-17 ಈ ಕಾರ್ಯಕ್ರಮವು ಡಿ.31 ರಂದು ನಡೆಯಿತು.
ಬೆಳಿಗ್ಗೆ ಶ್ರೀ ರಾಮ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ನಾರಾಯಣ ಶಬರಾಯ ಧ್ವಜಾರೋಹಣವನ್ನು ನೆರವೇರಿಸಿದರು. ಸಭಾ ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಡ್ವ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಪಟ್ರಮೆ ಗ್ರಾ.ಪಂ. ಉಪಾಧ್ಯಕ್ಷೆ ಬಾಬಿ, ಶ್ರೀರಾಮ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ ಶೆಟ್ಟಿ ದೇರಾಜೆ, ಸದಸ್ಯರುಗಳಾದ ನಾರಾಯಣ ಶಬರಾಯ , ಶಿವರಾಮಭಟ್ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಥಮಿಕ ವಿಭಾಗದ ಶಿಕ್ಷಕಿ ಸೌಮ್ಯಶ್ರೀ ಕೆ. ಆರ್.ಸ್ವಾಗತಿಸಿದರು. ಪ್ರೌಢಶಾಲಾ ವಿಭಾಗದ ಶಿಕ್ಷಕಿ ಗುಣವತಿ ಕೆ.ಎನ್. ವಂದಿಸಿದರು. ಶಿಕ್ಷಕಿ ಕೋಮಲಾಂಗಿ ಕೆ. ನಿರೂಪಿಸಿದರು.
ಪುತ್ತೂರು ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ. ಪ್ರಭಾಕರ ಭಟ್ ಇವರು ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಹೃದಯವಂತನಾಗಲು ಸಾಧ್ಯವೆಂದು ಸಂಸ್ಕಾರಯುತ ಶಿಕ್ಷಣದ ಮಹತ್ವವನ್ನು ತಿಳಿಸಿದರು.
ಶ್ರೀರಾಮ ವಿದ್ಯಾ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಡ್ವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಮಾಜಿ ಸೈನಿಕ ಕೃಷ್ಣ ಸ್ವಾಮಿ ಬಿ.ಎಸ್., ಪಿಡಬ್ಲ್ಯುಡಿ ಗುತ್ತಿಗೆದಾರ ಪ್ರಕಾಶ್ ಟಿ. ಪಿಲಿಕ್ಕಭೆ, ಕಡಬ ಸರಸ್ವತೀ ವಿದ್ಯಾಲಯ ಸಂಚಾಲಕ ವೆಂಕಟ್ರಮಣ ರಾವ್, ಪಟ್ರಮೆ ಗ್ರಾ.ಪಂ. ಅಧ್ಯಕ್ಷ ನವೀನ್ ಕಜೆ, ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ದೇರಾಜೆ ಉಪಸ್ಥಿತರಿದ್ದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಚೆಂಡೆ ವಾದನದ ಮೂಲಕ ವೇದಿಕೆಗೆ ಕರೆತಂದು ದೀಪ ಪ್ರಜ್ವಲನ ಮಾಡಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಗೋಪೂಜೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಸಂಸ್ಥೆಯ ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ ನಡೆಯಿತು. ಶಾಲಾ ಮಕ್ಕಳಿಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಪ್ರೌಢಶಾಲಾ ಮುಖ್ಯ ಶಿಕ್ಷಕ ಉಮೇಶ್ ಬಿ. ವರದಿ ವಾಚಿಸಿದರು. ಪುರಂದರ ಕಡಿರ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಲಾ ವೈಭವಗಳು ಜರಗಿತು. ಪ್ರಾಥಮಿಕ ವಿಭಾಗದ ಶಿಕ್ಷಕಿ ಗೀತಾ ಕೆ ಸಾಂಸ್ಕೃತಿಕ ಕಲಾ ವೈಭವದ ನಿರೂಪಣೆ ಗೈದರು. ಮುಖ್ಯ ಶಿಕ್ಷಕ ಚಂದ್ರಶೇಖರ್ ಶೇಟ್ ವಂದಿಸಿದರು.

mundaje ca bank pan card abhiyana copy  ಪಾನ್‌ಕಾರ್ಡ್ ನೊಂದಾವಣೆ ಅಭಿಯಾನ ಕ್ಯಾಶ್‌ಲೆಸ್ ವ್ಯವಹಾರದ ಬಗ್ಗೆ ಮಾಹಿತಿ ಟ್ಯಾಕ್ಸ್ ವ್ಯವಹಾರ ಮಾಹಿತಿ

ಮುಂಡಾಜೆ : ಕೇಂದ್ರ ಸರಕಾರದ ಹೊಸ ಆರ್ಥಿಕ ಕ್ರಾಂತಿಯ ನಂತರದ ಬೆಳವಣಿಗೆಯಂತೆ ಸಹಕಾರಿ ಸಂಘದ ಸದಸ್ಯರಿಗೆ ಕ್ಯಾಶ್‌ಲೆಸ್ ವ್ಯವಹಾರ, ಟ್ಯಾಕ್ಸ್ ಬಗ್ಗೆ ಮಾಹಿತಿ, ಡಿಜಿಟಲೀಕರಣ ಆರ್ಥಿಕ ವ್ಯವಹಾರ ಮತ್ತು ಪಾನ್‌ಕಾರ್ಡ್ ನೊಂದಾವಣಾ ಮಾಹಿತಿ ಅಭಿಯಾನ ಜ.10 ರಂದು 3 ಕಡೆ ನಡೆಸಲಾಯಿತು. ಕಕ್ಕಿಂಜೆ ಶಾಖೆ, ನೆರಿಯ ಶಾಖೆ ಮತ್ತು ಮುಂಡಾಜೆಯಲ್ಲಿ ನಡೆದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಸಿ.ಎ. ವೆಂಕಟ್ರಮಣ, ಗಜಾನನ ವಝೆ, ಥೋಮಸ್ ನೆರಿಯ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ಎನ್.ಎಸ್. ಗೋಖಲೆ ವಹಿಸಿದ್ದು, ಬದಲಾದ ಸಮಾಜದಲ್ಲಿ ಬದಲಾವಣೆ ಅನಿವಾರ್ಯ. ಉಳಿದ ಸದಸ್ಯರುಗಳಿಗೆ ಜ. 17 ರ ವಿಶೇಷ ಸಭೆಯಲ್ಲಿ ಮಾಹಿತಿ ನೀಡಲಾಗುವುದು ಎಂದರು. ಉಪಾಧ್ಯಕ್ಷ ವಿ.ಟಿ. ಸೆಬಾಸ್ಟಿಯನ್, ನಿರ್ದೇಶಕರಾದ ಜ್ಯೋತಿ ಜೆ. ಫಡ್ಕೆ, ಮಿನಿ ಬೇಬಿ, ಲಿಂಗಪ್ಪ ಗೌಡ, ಗೋವಿಂದ ಚಿಪ್ಲೊನ್ಕರ್, ಪ್ರಕಾಶ್ ನಾರಾಯಣ ರಾವ್ ಭಾಗಿಯಾಗಿದ್ದರು. ಸುಮಾರು 250 ಮಂದಿ ಸದಸ್ಯರು, ಸಂಘದ ಸಿಬ್ಬಂದಿಗಳು ಇದರ ಪ್ರಯೋಜನ ಪಡೆದರು. ಚಾರ್ಟೆಡ್ ಎಕೌಂಟೆಂಟ್ ಗಾಯತ್ರಿ ಉಪಸ್ಥಿತರಿದ್ದರು. ಸಂಘದ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ ಕಾರ್ಯಕ್ರಮ ಸಂಯೋಜಿಸಿ ಸ್ವಾಗತಿಸಿ ವಂದಿಸಿದರು.
ಚಿತ್ರ: ನಾರಾಯಣ ಫಡ್ಕೆ.

prashanth copy

kishor copy

ಉಜಿರೆ : ಉಜಿರೆ ಯುವವಾಹಿನಿ ಗ್ರಾಮ ಸಮಿತಿಯ ರಚನೆಯು ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಪ್ರಶಾಂತ್ ಬರೆಮೇಲು, ಕಾರ್ಯದರ್ಶಿಯಾಗಿ ಕಿಶೋರ್ ಪೆರ್ಲ ಆಯ್ಕೆಯಾಗಿದ್ದಾರೆ. ಇತರ ಪದಾಧಿಕಾರಿಗಳಾಗಿ ಗೌರವ ಸಲಹೆಗಾರರಾಗಿ ರವಿಕುಮಾರ್ ಬರೆಮೇಲು, ಉಪಾಧ್ಯಕ್ಷರಾಗಿ ಚಂದ್ರಶೇಖರ್ ನಿನ್ನಿಕಲ್ಲು, ಕೋಶಾಧಿಕಾರಿಯಾಗಿ ಶರತ್ ಕುಂಜರ್ಪ, ಜೊತೆ ಕಾರ್ಯದರ್ಶಿಯಾಗಿ ಕೇಶವ ನಿನ್ನಿಕಲ್ಲು, ಮಹಿಳಾ ಪ್ರತಿನಿಧಿಯಾಗಿ ಲೀಲಾವತಿ ಅಜಿತ್ ನಗರ, ವಿದ್ಯಾರ್ಥಿ ಪ್ರತಿನಿಧಿಯಾಗಿ ಗುರುಪ್ರಸಾದ್ ಕೋಟ್ಯಾನ್, ಸಂಘ ಸಂಸ್ಥೆಗಳ ಪ್ರತಿನಿಧಿ ಧೀರಜ್ ಕುಂಜರ್ಪ, ಕ್ರೀಡಾ ಪ್ರತಿನಿಧಿಯಾಗಿ ರೀತೇಶ್ ಪೂಜಾರಿ, ಸಾಂಸ್ಕೃತಿಕ ಪ್ರತಿನಿಧಿಯಾಗಿ ಹರೀಶ್ ಪೂಜಾರಿ ಪೆರ್ಲ ಹಾಗೂ ನಿರ್ದೇಶಕರುಗಳಾಗಿ ಪ್ರವೀಣ್ ಪೂಜಾರಿ ಮೈಕಾಡಿ, ವಸಂತ ಪೂಜಾರಿ ಬಾಕ್ರೊಟ್ಟು, ಮಧುಕರ ಪೂಜಾರಿ ಬರೆಮೇಲು, ಸಂತೋಷ್ ಮಾಚಾರು, ದಿನೇಶ್ ಪೂಜಾರಿ ರಂಜಿತ್ ನರ್ಸರಿ, ನಿತೇಶ್ ಕಲ್ಲೆ, ಸಲಹೆಗಾರರಾಗಿ ಹರೀಶ್ ಕುಮಾರ್ ಬರೆಮೇಲು, ರಮೇಶ್ ಪೂಜಾರಿ ಮಾಚಾರು, ಉದಯ ಮಾಚಾರು, ಗಿರೀಶ್ ಪೆರ್ಲ, ರಮೇಶ್ ಪೂಜಾರಿ ಅಜಿತ್‌ನಗರ, ಸುರೇಶ್ ಪೂಜಾರಿ ಪೆರ್ಲ, ಉಮೇಶ್ ಪೂಜಾರಿ ಪಾರ ಉಜಿರೆ, ಸುರೇಶ್ ಪೂಜಾರಿ ವಿದ್ಯಾನಗರ, ಸಚಿನ್ ಕಲ್ಲೆ, ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕರಾದ ಸಂಪತ್ ಬಿ.ಸುವರ್ಣ, ಯುವ ವಾಹಿನಿಯ ತಾಲೂಕು ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಯುವವಾಹಿನಿಯ ಉಪಾಧ್ಯಕ್ಷ ಅಶ್ವಥ್ ಕುಮಾರ್, ಯುವವಾಹಿನಿ ಕಾರ್ಯದರ್ಶಿ ಪ್ರಶಾಂತ್ ಮಚ್ಚಿನ, ಯುವ ವಾಹಿನಿಯ ಮಾಜಿ ಅಧ್ಯಕ್ಷರಾದ ರಾಕೇಶ್ ಕುಮಾರ್ ಮೂಡುಕೋಡಿ, ಉಜಿರೆಯ ಉದ್ಯಮಿ ರವಿಕುಮಾರ್ ಬರೆಮೇಲು, ನಿರ್ದೇಶಕರುಗಳಾದ ಯಶೋಧರ ಚಾರ್ಮಾಡಿ, ಜಯರಾಜ್ ನಡಕ್ಕರ, ಪ್ರದೀಪ್ ಮಚ್ಚಿನ, ಮೊದಲಾವದರು ಉಪಸ್ಥಿತರಿದ್ದರು.

rudset tarabeti savanda copyಉಜಿರೆ : ರುಡ್‌ಸೆಟ್ ಸಂಸ್ಥೆಯ ತರಬೇತಿಯಿಂದ ನಿರುದ್ಯೋಗ ನಿವಾರಣೆ ಮಾತ್ರವಲ್ಲದೇ ಬದುಕಿನಲ್ಲಿ ಅನೇಕ ಜೀವನ ಮೌಲ್ಯಗಳನ್ನು ಕೂಡ ಅಳವಡಿಸಿಕೊಳ್ಳಬಹುದು. ರುಡ್‌ಸಂಸ್ಥೆಯಲ್ಲಿ ತರಬೇತಿಯನ್ನು ಪಡೆಯಲು ದೊರೆತ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬದುಕಿರಿ ಎಂದು ಸಿಂಡಿಕೇಟ್‌ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಸ್. ಮಲ್ಲಿಕಾರ್ಜುನ ರಾವ್ ಅಭಿಪ್ರಾಯಪಟ್ಟರು. ಅವರು ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ನಡೆಯುತ್ತಿರುವ ತರಬೇತಿ ಕಾರ್ಯಕ್ರಮದ ಶಿಬಿರಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಿಂಡಿಕೇಟ್‌ಬ್ಯಾಂಕಿನ ಉಪ ಮಹಾಪ್ರಬಂಧಕ ಎಸ್.ಎಮ್. ದೇಸಾಯಿ ಮತ್ತು ಆರ್‌ಸೆಟಿಗಳ ರಾಷ್ಟ್ರೀಯ ನಿರ್ದೇಶಕ ಕೆ.ಎನ್. ಜನಾರ್ಧನ್ ಉಪಸ್ಥಿತರಿದ್ದರು. ರುಡ್‌ಸೆಟ್ ಸಂಸ್ಥೆಯ ಕೇಂದ್ರ ಕಛೇರಿಯ ಕಾರ್ಯನಿರ್ವಾಹಕ ನಿರ್ದೇಶಕ ಅರುಣ್ ವಿ.ಜೆ  ಅತಿಥಿಗಳನ್ನು ಸ್ವಾಗತಿಸಿ, ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಶ್ರೀಮತಿ ಅನಸೂಯ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ನಿರ್ದೇಶಕ ಅಜಿತ್ ಕೆ. ರಾಜಣ್ಣವರ್ ವಂದಿಸಿದರು. ಉಪನ್ಯಾಸಕ ಅಬ್ರಹಾಂ ಜೇಮ್ಸ್ ಸಹಕರಿಸಿದರು.

Ujire jilla sahithya sabhe copyಸರಕಾರಿ ಅಧಿಕಾರಿಗಳು, ಸಂಘ ಸಂಸ್ಥೆ ಪದಾಧಿಕಾರಿಗಳು, ಸಮಿತಿಯ ಪದಾಧಿಕಾರಿಗಳ ಜಂಟಿ ಸಭೆ

ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು

* ರವೀಂದ್ರ ಒಪ್ಪಂತಾಯ ಮಾತನಾಡಿ, ಸಮ್ಮೇಳನದ ದಿನಗಳಲ್ಲಿ ಗುರುವಾಯನಕೆರೆಯಿಂದ ಉಜಿರೆ ವರೆಗೆ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಪೊಲೀಸ್ ಕ್ರಮ ಆಗಬೇಕು ಮತ್ತು ಬೆಳಾಲಿನಿಂದ ಉಜಿರೆಗೆ ಬರುವ ರಸ್ತೆ ತೀರಾ ನಾದುರಸ್ಥಿಯಲ್ಲಿದ್ದು ಗುಂಡಿ ಮುಚ್ಚುವ ಕೆಲಸ ಆಗಬೇಕು ಎಂದರು. ಎರಡಕ್ಕೂ ಕ್ರಮ ಕೈಗೊಳ್ಳುವು ದಾಗಿ ಶಾಸಕರು ಭರವಸೆ ನೀಡಿದರು.
* ಶಾಲಾ ಮಕ್ಕಳ ಭಾಗವಹಿಸುವಿಕೆಯ ಅನುಕೂಲಕ್ಕಾಗಿ ಬಸ್ಸಿನ ವ್ಯವಸ್ಥೆ ಬಂದರೆ ಒಳ್ಳೆದು.
* ಸಮ್ಮೇಳನದ ದಿನಗಳಲ್ಲಿ ಉಜಿರೆಯಲ್ಲಿ ಸ್ವಚ್ಚತೆಗೆ ಆಧ್ಯತೆ ಕೊಡಬೇಕು. ಪ್ರತೀ ಸರಕಾರಿ ನೌಕರರೂ (ಎ ಇಂದಿ ಡಿ ವರೆಗೆ) ಸಮ್ಮೇಳನ ಸದಸ್ಯತ್ವವನ್ನು ಪಡೆಯುವುದನ್ನು ಕಡ್ಡಾಯಗೊಳಿಸಿದಲ್ಲಿ ಸಂಪನ್ಮೂಲ ಕ್ರೂಢೀಕರಣ ಸುಲಭ ಸಾಧ್ಯವಾಗಲಿದೆ ಎಂದು ಗಮಕ ಪರಿಷತ್ ಅಧ್ಯಕ್ಷರೂ ಆಗಿರುವ ಸುರೇಶ್ ಕುದ್ರಂತಾಯ ಹೇಳಿದರು.
* ತಾಲೂಕಿನಲ್ಲಿ 680 ಶಿಕ್ಷಕರಿದ್ದು ಕನಿಷ್ಠ ತಲಾ ೧೦೦ ರೂ. ನಂತೆ ದೇಣಿಗೆ ಸಂಗ್ರಹಿಸಿ ಕೊಡುತ್ತೇವೆ. ಮಕ್ಕಳನ್ನು ಸಮ್ಮೇಳನಕ್ಕೆ ಕರೆತರುವುದು ಮತ್ತು ಮಕ್ಕಳಿಂದ ತಲಾ 10 ರೂ. ಗಳಂತೆ ದೇಣಿಗೆ ಸಂಗ್ರಹಿಸುವ ಬಗ್ಗೆ ವಲಯವಾರು ಮಟ್ಟದಲ್ಲಿ ವಿಂಗಡಿಸಿ ಮಾಡಿದಲ್ಲಿ ಅನುಕೂಲವಾಗಲಿದೆ. ಸಮ್ಮೇಳನದಲ್ಲಿ ಭಾಗವಹಿಸಲು ಓಓಡಿ ನೀಡಲಾಗಿದೆ. ಶನಿವಾರ ಒಂದು ದಿನ ಜಿಲ್ಲೆಯಲ್ಲಿ ಶಾಲೆ ರಜೆ ಘೋಷಿಸಿದರೆ ಮಕ್ಕಳನ್ನು ಕರೆತರಲು ಸುಲಭ ಎಂದು ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಹೆಗ್ಡೆ ಹಟ್ಟಾಜೆಗುತ್ತು ಹೇಳಿದರು. ಈ ಬಗ್ಗೆ ಕ್ರಮಕೈಗೊಳ್ಳು ವುದಾಗಿ ಶಾಸಕರು ಭರವಸೆ ನೀಡಿದರು.
* ಸಹಕಾರಿ ಸಂಘದಿಂದ ಸಹಕಾರ ನೀಡಲಾಗುವುದು. ಯೋಗೀಶ್ ಕುಮಾರ್ ಕೆ. ಎಸ್.
* ಮಕ್ಕಳ ಸಾಹಿತ್ಯ ಸಮ್ಮೇಳನದ ಬಗ್ಗೆ ಸೋಮಶೇಖರ ಶೆಟ್ಟಿ ಮಾಹಿತಿ ನೀಡಿದರು.
* ಲಯನ್ಸ್ ಕ್ಲಬ್‌ನ ಸಹಕಾರದ ಬಗ್ಗೆ ಅಧ್ಯಕ್ಷೆ ಸುಶೀಲಾ ಎಸ್. ಹೆಗ್ಡೆ ಅವರು ಸಮಿತಿ ಜೊತೆ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಬೆಳ್ತಂಗಡಿ : ಸುಮಾರು 20 ವರ್ಷಗಳ ನಂತರ ನಮ್ಮ ತಾಲೂಕಿನಲ್ಲಿ ಮತ್ತೊಮ್ಮೆ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮಹಾಭಾಗ್ಯ ನಮ್ಮ ಪಾಲಿಗೆ ದೊರೆತಿದ್ದು ಈ ಕಾರ್ಯಕ್ರಮವನ್ನು ನಾವೆಲ್ಲರೂ ನಮ್ಮ ಮನೆಯ ವೈಯುಕ್ತಿ ಕಾರ್ಯಕ್ರಮವೆಂದೇ ಪರಿಗಣಿಸಿ, ಶ್ರಮ ಪಟ್ಟು ಕಾರ್ಯನಿರ್ವಹಿಸಿ ಯಶಸ್ವಿಗೊಳಿಸಬೇಕು ಎಂದು ಶಾಸಕ ವಸಂತ ಬಂಗೇರ ಹೇಳಿದರು.
ಜನವರಿ 27, 28, 29 ರಂದು ಉಜಿರೆಯಲ್ಲಿ ನಡೆಯುವ ದ.ಕ.ಜಿಲ್ಲಾ ಮಟ್ಟದ 21ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ ಜ. 9 ರಂದು ಬೆಳ್ತಂಗಡಿ ಎಸ್‌ಡಿಎಂ ಕಲಾಭವನದಲ್ಲಿ ಕರೆಯಲಾಗಿದ್ದ ಸ್ವಾಗತ ಸಮಿತಿ ಪದಾಧಿಕಾರಿಗಳು, ಸರಕಾರಿ ಇಲಾಖಾ ಮುಖ್ಯಸ್ಥರುಗಳು, ಶಿಕ್ಷಕರ ಸಂಘ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಚ್ಚ ಭಾಷೆ, ಸ್ವಚ್ಚ ಜೀವನ, ಸ್ವಚ್ಚ ಸಮಾಜ ಸಮ್ಮೇಳನದ ಧ್ಯೇಯ: ಕಲ್ಕೂರ
ಸಮ್ಮೇಳನದ ಆಶಯದ ಮಾತುಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಅವರು, ಈ ಬಾರಿ ಸ್ವಚ್ಚ ಭಾಷೆ- ಸ್ವಚ್ಚ ಜೀವನ- ಸ್ವಚ್ಚ ಸಮಾಜ ಎಂಬ ಪ್ರಮುಖ ಪರಿಕಲ್ಪನೆಯಡಿ ಸಮ್ಮೇಳನ ನಡೆಸಲು ಉದ್ಧೇಶಿಸಿದ್ದೇವೆ. ಮೈಸೂರು ಒಡೆಯರಾಗಿದ್ದ ಕೃಷ್ಣ ರಾಜ ಒಡೆಯರ್ ಅವರು ಪ್ರಾರಂಭಿಸಿದ ಸಾಹಿತ್ಯ ಸಮ್ಮೇಳನ ಪರಿಕಲ್ಪನೆ ಇಂದು ಇಲ್ಲಿವರೆಗೆ ಮುಂದುವರಿದುಕೊಂಡು ಬಂದಿದೆ. 1998ರಲ್ಲಿ ಬೆಳ್ತಂಗಡಿ ಸಿವಿಸಿ ಸಭಾಂಗಣದಲ್ಲಿ ಅಮೃತ ಸೋಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆದಿತ್ತು. ದೀರ್ಘ ಅವಧಿಯ ಬಳಿಕ ಇದೀಗ ಮತ್ತೊಮ್ಮೆ ಬೆಳ್ತಂಗಡಿ ತಾಲೂಕಿಗರಿಗೆ ಅವಕಾಶ ಕೂಡಿ ಬಂದಿದೆ. ಇಲ್ಲಿ ಏನೇ ಕಾರ್ಯಕ್ರಮ ಆದರೂ ಅದು ಪರಿಪೂರ್ಣ ನೆಲೆಗಟ್ಟು ಹೊಂದಿರುತ್ತದೆ. ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರ ಗೌರವಾಧ್ಯಕ್ಷತೆಯಲ್ಲಿ ಉಜಿರೆಯ ದಣಿಗಳಾದ ವಿಜಯರಾಘವ ಪಡುವೆಟ್ನಾಯ ಅವರ ಮುತ್ಸದ್ದಿತನದಲ್ಲಿ ಕಾರ್ಯಕ್ರಮ ನಡೆಯಲಿದೆ. ಹಳೆ ಬೇರು ಹೊಸ ಚಿಗುರು ಎಂಬಂತೆ ಪ್ರತಾಪಸಿಂಹ ನಾಯಕ್ ಆದಿಯಾಗಿ ಯುವಕರನ್ನೂ ಸಮಿತಿಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ತಿಳಿಸಿದರು. ಎಲ್ಲರೂ ಈ ಕನ್ನಡದ ಕೈಂಕರ್ಯ ಒಂದಾಗಿ ಕೈ ಜೋಡಿಸಬೇಕು ಎಂದು ಕೇಳಿಕೊಂಡರು. ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ| ಎಂ.ಪಿ. ಶ್ರೀನಾಥ್ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ವಿಜಯರಾಘವ ಪಡುವೆಟ್ನಾಯ ಅವರು ಮಾತನಾಡಿ, ಉಳಿದ ಕಡೆಗಳಲ್ಲಿ ವ್ಯವಸ್ಥೆಯ ದೃಷ್ಟಿಯಿಂದ ಸಮ್ಮೇಳನವನ್ನು ಅಳೆಯುವ ಕೆಲಸವಾದರೆ ಇಲ್ಲಿ ಅರ್ಥಪೂರ್ಣತೆಯ ರೀತಿಯಲ್ಲಿ ಎಲ್ಲರೂ ಕೊಂಡಾಡುವಂತಾಗಬೇಕು ಎಂದು ಇಂಗಿತ ವ್ಯಕ್ತಪಡಿಸಿದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಪ್ರತಾಪಸಿಂಹ ನಾಯಕ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಮ್ಮೇಳನದ ದೃಷ್ಟಿಯಿಂದ ಕೇವಲ ಸ್ವಾಗತ ಸಮಿತಿ ಮತ್ತು ಪರಿಷತ್ ಮಾತ್ರ ಎಂಬುದು ಆಗದೆ ತಾಲೂಕಿನ ಪ್ರತೀ ಮನೆಯಿಂದ 2 ತೆಂಗಿನಕಾಯಿಯಾದರೂ ಸರಿ ಎಲ್ಲರೂ ಇದರಲ್ಲಿ ಸಣ್ಣ-ದೊಡ್ಡ ದೇಣಿಗೆ ನೀಡಿ ಸಂಭ್ರಮಿಸುವಂತಾಗಬೇಕು ಎಂದರು.
ಸಭೆಯಲ್ಲಿ ಜೆಸಿಐ ಉಜಿರೆ ಮತ್ತು ಬೆಳ್ತಂಗಡಿ ಪದಾಧಿಕಾರಿಗಳು, ಲಯನ್ಸ್ ಕ್ಲಬ್, ಮಾಜಿ ಸೈನಿಕರ ಸಂಘ, ಗಮಕ ಕಲಾ ಪರಿಷತ್, ಜಿ.ಪಂ. ಸದಸ್ಯರಾದ ಸೌಮ್ಯಲತಾ ಮತ್ತು ಮಮತಾ ಎಂ. ಶೆಟ್ಟಿ, ಎಸ್.ಡಿ.ಎಂ. ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಕೆ.ಎಸ್. ಮೋಹನ್‌ನಾರಾಯಣ್, ಶ್ರೀಧರ ಜಿ. ಭಿಡೆ, ಯದುಪತಿ ಗೌಡ, ಸಂಪತ್ ಬಿ. ಸುವರ್ಣ, ಟಿ.ಕೆ. ಶರತ್, ಜಗದೀಶ್ ಇಂಜಿನಿಯರ್, ಅನಿಲ್ ನಾಯ್ಗ, ಶಿವಶಂಕರ ಭಟ್, ಶರತ್‌ಕೃಷ್ಣ ಪಡುವೆಟ್ನಾಯ, ಬಾಬು ಮುಗೇರ ಎರ್ನೋಡಿ, ಸವಿತಾ ಜಯದೇವ್, ಲೋಕೇಶ್ವರೀ ವಿನಯಚಂದ್ರ, ಎಂ.ಜಿ. ಶೆಟ್ಟಿ, ಕಾಂಚೋಡು ಗೋಪಾಲಕೃಷ್ಣ ಭಟ್, ರೂಪಾ ಜಿ. ಜೈನ್, ಮೋಹನ್ ಶೆಟ್ಟಿಗಾರ್, ಬಿ.ಎಂ. ಹಮೀದ್ ಉಜಿರೆ, ಲಕ್ಷ್ಮಣ ಸಪಲ್ಯ, ರಾಘವೇಂದ್ರ ಬೈಪಡಿತ್ತಾಯ, ರಮೇಶ್ ಮಯ್ಯ, ರಘುರಾಮ ಶೆಟ್ಟಿ ಸಾಧನ, ಟಿ.ಕೆ. ಶರತ್, ನಾಮದೇವ ರಾವ್ ಮುಂಡಾಜೆ, ಚಿದಾನಂದ ಇಡ್ಯ, ಸಂತೋಷ್ ಪಿ. ಕೋಟ್ಯಾನ್, ವಸಂತ ಶೆಟ್ಟಿ ಶ್ರದ್ಧಾ, ಪ್ರೋ. ಕೃಷ್ಣಪ್ಪ ಪೂಜಾರಿ, ಸುಧಾಮಣಿ ಆರ್, ಮೊದಲಾ ದವರೂ ಸೇರಿದಂತೆ ವಿವಿಧ ಸರಕಾರಿ ಇಲಾಖಾ ಅಧಿಕಾರಿಗಳು, ಗಣ್ಯರು ಭಾಗಿಯಾಗಿದ್ದರು. ವಾಣಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ತಾ| ಕಸಾಪ ಗೌರವ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ನಿರೂಪಿಸಿ, ಶಿಕ್ಷಕ ದೇವುದಾಸ್ ನಾಯಕ್ ಧನ್ಯವಾದವಿತ್ತರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

UP Shivananda press meet copyಬೆಳ್ತಂಗಡಿ : ಸಾಮಾಜಿಕ ತಾಣಗಳಾದ ವಾಟ್ಸ್‌ಪ್ ಮತ್ತು ಫೇಸ್ಬುಕ್‌ಗಳಲ್ಲಿ ಒಳ್ಳೆಯ ಸಂದೇಶವನ್ನು ಸ್ವಾಗತಿಸುವ, ಆದರೆ ಇನ್ನೊಬ್ಬರ ಬಗ್ಗೆ ಅವಹೇಳನ, ಅಪಪ್ರಚಾರದ ಸಂದೇಶಗಳು ಬಂದಾಗ ಇದರ ಸತ್ಯಾಸತ್ಯತೆಯನ್ನು ತಿಳಿದು ವಿಮರ್ಶೆ ಮಾಡಬೇಕು, ಇದು ಸುಳ್ಳಾದರೆ ಸಂದೇಶ ಕಳುಹಿಸಿದವರ ಮನ ಪರಿವರ್ತನೆ ಮಾಡಿ ಅವರನ್ನು ಸರಿದಾರಿಗೆ ತರುವ ಸ್ವಾಸ್ಥ್ಯ ಸಮಾಜ ನಿರ್ಮಾಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸುದ್ದಿ ವೇದಿಕೆಯಿಂದ ಮಾಡಲಾಗುತ್ತಿದೆ ಎಂದು ವೇದಿಕೆಯ ನಿರ್ದೇಶಕ ಡಾ| ಯು.ಪಿ. ಶಿವಾನಂದ ಹೇಳಿದರು.
ಅವರು ಜ.೬ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ‘ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಹೇಗೆ? ಎಂಬ ಬಗ್ಗೆ ಮಾತನಾಡಿ, ನಾವು ಸಾಧ್ಯವಾದಷ್ಟು ವಾಟ್ಸಪ್ ಮತ್ತು ಫೇಸ್ಬುಕ್‌ಗಳಲ್ಲಿ ಸೇರಿಕೊಳ್ಳುವುದು ಉತ್ತಮ. ಇದರಿಂದ ನಮಗೆ ಹಲವು ಉತ್ತಮ ಮಾಹಿತಿ ದೊರೆಯುತ್ತದೆ. ಅಲ್ಲದೆ ತನ್ನ, ತನ್ನ ಸಂಸ್ಥೆಯ, ಸ್ನೇಹಿತರ, ಸಂಬಂಧಿಕರ ಬಗ್ಗೆ ಬಂದಿರುವ ಒಳ್ಳೆಯ ನ್ಯೂಸ್‌ಗಳು ಮಾತ್ರವಲ್ಲ ಅಪಪ್ರಚಾರದ ನ್ಯೂಸ್‌ಗಳ ಮಾಹಿತಿಯು ಲಭ್ಯವಾಗುತ್ತದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಸಂದೇಶ ಬಂದರೆ ಸ್ವೀಕರಿಸುವ, ಆದರೆ ಅದರಲ್ಲಿ ಬೇರೆಯವರ ಬಗ್ಗೆ ಅಪಪ್ರಚಾರದ, ಅವಹೇಳನ ಸಂದೇಶಗಳು ಎಂದು ಕಂಡು ಬಂದರೆ ಅದನ್ನು ರವಾನಿಸದೇ, ಈ ಸಂದೇಶ ಕಳುಹಿಸಿದವರಲ್ಲಿ ವಿಚಾರಿಸುವುದು, ಸಂದೇಶ ಕಳುಹಿಸಿದ ಉದ್ದೇಶ ಕೇಳುವುದು ಅಥವಾ ಯಾರ ಬಗ್ಗೆ ಸಂದೇಶವಿದೆಯೋ ಅವರ ಪರಿಚಯ ವಿದ್ದರೇ ಅವರಲ್ಲೇ ವಿಚಾರಿಸಿ, ಸತ್ಯಾಸತ್ಯಾತೆಯನ್ನು ತಿಳಿದುಕೊಳ್ಳು ವುದು ಅವಶ್ಯ. ಒಂದು ವೇಳೆ ಅಪಪ್ರಚಾರಕ್ಕಾಗಿ, ಅವಹೇಳನ ಕ್ಕಾಗಿ ಬ್ಲ್ಯಾಕ್‌ಮೇಲ್ ಸಂದೇಶವೆಂದು ಕಂಡು ಬಂದರೆ ಕಳುಹಿಸಿದವರನ್ನು ಗುರುತಿಸಿ ಅದರಿಂದ ತೊಂದರೆಗೊಳಗಾಗುವ ವರಿಗೆ ತಿಳಿಸುವುದು, ಜೊತೆಗೆ ಅವರ ರಕ್ಷಣೆಗೆ, ಬೆಂಬಲಕ್ಕೆ ಕೈಜೋಡಿಸುವುದು. ಅಂತಹ ಸಂದೇಶ ಕಳುಹಿಸಿದವರನ್ನು ತಮ್ಮ ಗ್ರೂಪ್‌ನಿಂದ ತೆಗೆದು ಇತರರಿಗೆ ತಿಳಿಸುವುದು. ಹೀಗೆ ಮಾಡಿದರೆ ತಮ್ಮ ಬಗ್ಗೆ ಅಥವಾ ಯಾರ ಬಗ್ಗೆಯಾದರೂ ಅಪಪ್ರಚಾರ, ಅವಹೇಳನವಾದಾಗ ರಕ್ಷಣೆ ದೊರೆಕು ವಂತಾಗುತ್ತದೆ ಎಂದರು. ಅವಹೇಳನ, ಅಪಪ್ರಚಾರ, ಬ್ಲ್ಯಾಕ್‌ಮೇಲ್ ಮಾಡು ವವರ ಮನಃಪರಿವರ್ತನೆಗೆ ಪ್ರಯತ್ನಿಸು ವುದು ಅವರು ಸರಿಯಾಗದಿದ್ದರೆ ಅವರನ್ನು ಸಾಧ್ಯವಾದಷ್ಟು ದೂರವಿಟ್ಟು ತಮ್ಮ ತಮ್ಮ ಸಾಮಾಜಿಕ ಚಟುವಟಿಕೆಗಳಿಂದ ಬಹಿಷ್ಕರಿಸುವುದು, ಅಪಪ್ರಚಾರ ಮಾಡಿದ್ದು ಯಾರೆಂದು ತಿಳಿಯದಿದ್ದರೆ, ಅದನ್ನು ಪರಿಚಯದವರ ಹತ್ತಿರ ಕೇಳುತ್ತಾ ಹೋದಾಗ ಅದನ್ನು ಕಳುಹಿಸಿ ದವರ ಮೂಲ ಮತ್ತು ಉದ್ದೇಶ ಗೊತ್ತಾಗುತ್ತದೆ. ಆ ಸಂದೇಶದಿಂದ ತೊಂದರೆಗೊಳಗಾದವರು ಮತ್ತು ಆ ಸಂದೇಶವನ್ನು ಸ್ವೀಕರಿಸಿದ ಎಲ್ಲರೂ ಮತ್ತು ಜನತೆ ಅಪಪ್ರಚಾರಕ್ಕೆ ಕಾರಣನಾದವನನ್ನು ಬಹಿರಂಗವಾಗಿ ಪ್ರಶ್ನಿಸಿ ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಮಾಡುವುದು. ಇದರಿಂದ ಮುಂದಕ್ಕೆ ಯಾವುದೇ ಅಪಪ್ರಚಾರಗಳು ನಡೆಯಲಾರದು. ನಡೆದರೂ ಅವರು ಹರಡಲಾರರು ಕೇಸು ಆಗುವುದಿಲ್ಲ ಎಂಬ ನಂಬಿಕೆಯಿಂದ ಅದನ್ನು ಮಾಡುವವರಿಗೆ ಶಿಕ್ಷೆ ಆಗದಿದ್ದರೂ ಜನರ ತಿರಸ್ಕಾರದ ಶಿಕ್ಷೆ ದೊರೆತರೆ ಅವರು ಪರಿವರ್ತನೆಯಾಗುವುದು ಖಂಡಿತ ಎಂದು ಹೇಳಿದರು. ಸುದ್ದಿ ವೇದಿಕೆಯ ಈ ಜನಜಾಗೃತಿ ಕಾರ್ಯಕ್ರಮಕ್ಕೆ ಎಲ್ಲಾ ಸಂಘ-ಸಂಸ್ಥೆಯವರು, ತಾಲೂಕಿನ ನಾಗರಿಕರು ಬೆಂಬಲ ನೀಡಬೇಕು ಎಂದು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸುದ್ದಿ ವೇದಿಕೆಯ ಸಂತೋಷ್ ಶಾಂತಿನಗರ, ಸುದ್ದಿ ಬೆಳ್ತಂಗಡಿ ಕಚೇರಿ ವ್ಯವಸ್ಥಾಪಕ ಮಂಜುನಾಥ ರೈ ಉಪಸ್ಥಿತರಿದ್ದರು.

 ಗುರುವಾಯನಕೆರೆ, ಬೆಳ್ತಂಗಡಿ, ಧರ್ಮಸ್ಥಳ ವಿದ್ಯುತ್ ಲೈನ್‌ನಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಜ.13ರಂದು ಬೆಳಿಗ್ಗೆ 9.30ರಿಂದ ಸಂಜೆ 5.30ರ ತನಕ ಬೆಳ್ತಂಗಡಿ, ಧರ್ಮಸ್ಥಳ ಮತ್ತು ವಗ್ಗ (ಬಂಟ್ವಾಳ ತಾಲೂಕು) ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ ಫೀಡರ್‌ಗಳಲ್ಲಿ ಹಾಗೂ ಮಡಂತ್ಯಾರ್ ಹಾಗೂ ಬಳ್ಳಮಂಜ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

lanchana bidugade copyಉಜಿರೆ: ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ಜನವರಿ 27, 28, 29 ರಂದು ಸ್ವಚ್ಛ ಭಾಷೆ-ಸ್ವಚ್ಛ ಜೀವನ-ಸ್ವಚ್ಛ ಸಮಾಜ ಎಂಬ ಆಶಯದೊಂದಿಗೆ, ಡಾ. ಕೆ. ಚಿನ್ನಪ್ಪ ಗೌಡರ ಸರ್ವಾಧ್ಯಕ್ಷತೆಯಲ್ಲಿ ಜರಗಲಿರುವ 21ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆ ಜ.10 ರಂದು ಅನಾವರಣಗೊಳಿಸಿದರು.
ಈ ಸಂದರ್ಭ ಸಮ್ಮೇಳನ ಸ್ವಾಗತ ಸಮತಿ ಅಧ್ಯಕ್ಷ ವಿಜಯರಾಘವ ಪಡ್ವೆಟ್ನಾಯ, ಕಾರ್ಯದರ್ಶಿ ಡಾ. ಎಂ. ದಯಾಕರ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಗೌರವ ಕಾರ್ಯದರ್ಶಿ ಡಾ. ಎಂ.ಪಿ. ಶ್ರೀನಾಥ್ ಮತ್ತು ಪೊಳಲಿ ನಿತ್ಯಾನಂದ ಕಾರಂತ ಉಪಸ್ಥಿತರಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶಾಸಕ ವಸಂತ ಬಂಗೇರ ಅವರ ನೇತೃತ್ವದಲ್ಲಿ, ಡಾ| ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ವಿವಿಧ ಸಮಿತಿಗಳ ದುಡಿಮೆಯೊಂದಿಗೆ ಸಮ್ಮೇಳನದ ಪೂರ್ವಸಿದ್ದತೆ ಭರದಿಂದ ನಡೆಯುತ್ತಿದೆ.

chandrahas balanja' copyಬೆಳ್ತಂಗಡಿ : ಪುತ್ತೂರು ತಾಲೂಕಿನ ಕಾಣಿಯೂರು ನಲ್ಲಿ  ಜ.7 ರಂದು ನಡೆದ 2016-17ನೇ ಸಾಲಿನ ಜಿಲ್ಲಾ ಯುವಜನ ಮೇಳದ ಲಾವಣಿ ಹಾಡು ಸ್ಪರ್ಧೆಯಲ್ಲಿ ಬಹುಮುಖ ಪ್ರತಿಭೆ ಚಂದ್ರಹಾಸ ಬಳಂಜ ದ್ವಿತೀಯ ಸ್ಥಾನವನ್ನು ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಚಂದ್ರಹಾಸ ಬಳಂಜರವರು ಎಸ್.ಡಿ.ಎಮ್. ಕಾಲೇಜು ಉಜಿರೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಇದೀಗ ಪೂರೈಸಿದ್ದು ಯುವ ಸಾಹಿತಿಯಾಗಿದ್ದು, ಗಾಯನ, ಬರವಣಿಗೆ, ನಾಟಕ, ಚಿತ್ರಕಲೆ ಹೀಗೆ ಬಹುಮುಖ ಪ್ರತಿಭಾವಂತರಾಗಿದ್ದಾರೆ.

Ramesh Bangera copy ಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮದ ಚೇರ್‌ಮೆನ್ ಕ್ಲಬ್ ಸದಸ್ಯ ಪ್ರತಿನಿಧಿ ಕೆ.ರಮೇಶ್ ಬಂಗೇರರವರು 2017ನೇ ಸಾಲಿನ ಎಂಡಿಆರ್‌ಟಿ ಆಯ್ಕೆಯಾಗಿದ್ದಾರೆ.  ಜೀವ ವಿಮಾ ಪ್ರತಿನಿಧಿಯಾಗಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಇವರು ಉತ್ತಮ ವ್ಯವಹಾರದೊಂದಿಗೆ ಬಂಟ್ವಾಳ ಶಾಖೆಯ ಬೆಳ್ತಂಗಡಿ ಉಪಗ್ರಹ ಶಾಖೆಯಿಂದ ಈ ವರ್ಷದ ಎರಡನೇ ಎಂಡಿಆರ್‌ಟಿಯಾಗಿ ಹೊರಹೊಮ್ಮಿದ್ದಾರೆ. ಫೆಬ್ರವರಿಯಲ್ಲಿ ಯುಎಸ್‌ಎಯಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದ್ದಾರೆ ಎಂದು ಬೆಳ್ತಂಗಡಿ ಉಪಗ್ರಹ ಶಾಖಾಧಿಕಾರಿ ಟಿ.ಆರ್ ಯೋಗೇಂದ್ರ ತಿಳಿಸಿದ್ದಾರೆ.

4ಉಜಿರೆ: ಇಲ್ಲಿಯ ಸಂತ ಅಂತೋನಿ ಚರ್ಚ್‌ನ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಹಾಗೂ ಉದ್ಯಮಿ ಅರುಣ್ ರೆಬೆಲ್ಲೊ ಕನ್ಯಾಡಿ ಇವರು ಹಾಗೂ ಕಾರ್ಯದರ್ಶಿಯಾಗಿ ಉಜಿರೆ ಅನುಗ್ರಹ ಕೋ-ಆಪರೇಟಿವ್ ಸೊಸೈಟಿ ಹಾಗೂ ಬೆಳ್ತಂಗಡಿ ತಾಲೂಕು ಟೈಲರ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿರುವ ವಲೇರಿಯಾನ್ ರೊಡ್ರಿಗಸ್ ಆಯ್ಕೆಯಾಗಿದ್ದಾರೆ.

santhara padayathre copyಧರ್ಮ ರಕ್ಷಾ ಸಮಿತಿ ವತಿಯಿಂದ ಮೇಲಂತಬೆಟ್ಟು ಕೆಲ್ಲಕೆರೆ ಕಾಲನಿಯಲ್ಲಿ ಸಂತರ ಪಾದಯಾತ್ರೆ

ಉಚಿತ ಶಿಕ್ಷಣ: ಕಾಲನಿಯ ಅಥವಾ ಇದೇ ರೀತಿ ಆರ್ಥಿಕ ತೊಂದರೆಯಲ್ಲಿರುವ ಹಿಂದೂ ಕುಟುಂಬಗಳ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ತೆಗೆದುಕೊಂಡು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಧರ್ಮ ಜಾಗರಣ ವಿಭಾಗ ಸಿದ್ದವಿದ್ದು ಶಾಲಾ ಕಾಲೇಜು ಆರಂಭಕ್ಕೂ ಮುನ್ನ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಸಂಪರ್ಕಿಸಿದರೆ ಅಂತಹ ಮಕ್ಕಳಿಗೆ ಎಲ್ಲಾ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು ಎಂದು ಮುನಿಯಪ್ಪ ಪ್ರಕಟಿಸಿದರು.

ಬೆಳ್ತಂಗಡಿ : ಹಿಂದೂಗಳಾದ ನಾವೆಲ್ಲಾ ಜಾತಿಗಳ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತೇವೆ. ಧರ್ಮದಲ್ಲಿ ಸಂಪ್ರದಾಯ ಬದ್ಧತೆ ಹೊರತಾಗಿ ಜಾತಿಯ ವ್ಯತ್ಯಾಸಗಳಿಲ್ಲ. ಪ್ರತಿಯೊಬ್ಬರೂ ಕರ್ತವ್ಯವನ್ನು ಮಾಡುವುದೇ ಧರ್ಮ. ಧರ್ಮದಲ್ಲಿ ಅಸ್ಪೃಷ್ಯತೆ ಎಂಬ ಶಬ್ಧವೇ ಇಲ್ಲ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.
ಧರ್ಮರಕ್ಷಾ ಸಮಿತಿ ಮೆಲಂತಬೆಟ್ಟು ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಜ.8 ರಂದು ನಡೆದ ಮೇಲಂತಬೆಟ್ಟು ಗ್ರಾಮದ ಕೆಲ್ಲಕೆರೆ ಕಾಲನಿಯಲ್ಲಿ ಸಂತರ ಪಾದಯಾತ್ರೆ ಮತ್ತು ಧಾರ್ಮಿಕ ಜನಜಾಗೃತಿ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಜೀವ-ದೇಹ-ಮನಸ್ಸು ಅನ್ಯೋನ್ಯವಾಗಿರಬೇಕು. ದುಶ್ಚಟಗಳಿಂದ ನಾವು ಅಸ್ತಿತ್ವ ಕಳೆದುಕೊಳ್ಳುತ್ತಿದ್ದೇವೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸನ ಮುಕ್ತಿಗೆ ಪ್ರಯತ್ನಗಳು ಈ ಭಾಗದಲ್ಲಿ ನಡೆಯುತ್ತಿದೆ. ನಮ್ಮ ಮನೆ ಮನಸ್ಸು ಸ್ವಚ್ಚ ಇರಬೇಕು. ಧರ್ಮ ರಕ್ಷಣೆಯ ನಿಟ್ಟಿನಲ್ಲಿ ನಮ್ಮಲ್ಲಿ ಒಗ್ಗಟ್ಟು ಮುಖ್ಯವಾಗಿದೆ. ಸಂಪ್ರದಾಯಗಳು ಬದುಕಿಗೆ ಪೂರಕವಾದುದು. ಧರ್ಮ ಜಾಗೃತಿಯ ಒಟ್ಟಿಗೆ ನಮ್ಮ ಮನದಲ್ಲಿ ಧರ್ಮವನ್ನು ಉದ್ದೀಪನಗೊಳಿಸುವುದು ಮತ್ತು ಕಾಲನಿಯ ನಿವಾಸಿಗಳ ಮನೆಗಳಿಗೆ ಬೇಟಿ ನೀಡಿ ಅವರ ಕಷ್ಟ ಸುಖಗಳನ್ನು ತಿಳಿದು ಸ್ಪಂದಿಸುವ ಭಾವನೆಯಿಂದಾಗಿ ಈ ಪಾದಯಾತ್ರೆ ಎಂದವರು ಹೇಳಿದರು.
ಸಾಂಸ್ಕೃತಿಕ ರಾಷ್ಟ್ರವಾದ ನಿರ್ಮಾಣವಾಗಲಿ: ಕರ್ನಾಟಕ ದಕ್ಷಿಣ ಪ್ರಾಂತದ ಧರ್ಮ ಜಾಗರಣ ಪ್ರಾಂತ ಪ್ರಮುಖ್ ಮುನಿಯಪ್ಪ ಧಾರ್ಮಿಕ ಜಾಗೃತಿ ಭಾಷಣ ನೆರವೇರಿಸಿ, ಪ್ರತಿಯೊಬ್ಬರ ಮನಸ್ಸಿನಲ್ಲಿ ಧರ್ಮದ ಬೆಳಕು ಹಚ್ಚುವುದೇ ಧರ್ಮ ರಕ್ಷಾ ಸಮಿತಿ ಉದ್ಧೇಶ. ಅಸ್ಪೃಶ್ಯತೆ ಎನ್ನುವುದು ಕ್ಯಾನ್ಸರ್‌ಗಿಂದ ಅಪಾಯಕಾರಿ. ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125 ಜನ್ಮಜಯಂತಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅಸ್ಪೃಶ್ಯತೆ ಆದಿಯಾಗಿ ಶೋಷಣೆಗಳು ತೊಲಗಿ ಸಾಂಸ್ಕೃತಿಕ ರಾಷ್ಟ್ರವಾದ ನಿರ್ಮಾಣವಾಗಬೇಕು. ಹಿಂದೂ ಧರ್ಮ ಯಾವ ಧರ್ಮದ ಮೇಲೂ ದಬ್ಬಾಳಿಕೆ ಮಾಡಿಲ್ಲ. ಉಳಿದ ಧರ್ಮಗಳು ತಾವು ಪ್ರತಿಪಾದಿಸುವ ವ್ಯಕ್ತಿಯೇ ದೇವರು ಎಂದು ಹೇಳುತ್ತದೆ. ಆದರೆ ಹಿಂದೂ ಧರ್ಮ ಎಲ್ಲರನ್ನೂ ದೇವರು ಎಂದು ಸ್ವೀಕರಿಸುವ ಮಹತ್ ಚಿಂತನೆ ಹೊಂದಿದೆ. ಇಥಿಯೋಫಿಯಾದಂತಹ ಕ್ರೈಸ್ತ ಧರ್ಮ ಪ್ರಧಾನವಾಗಿರುವ ದೇಶಗಳಲ್ಲಿ ಇಂದೂ ಕಿತ್ತು ತಿನ್ನುವ ಬಡತನವಿದ್ದು, ಅಲ್ಲಿ ಕೆಲಸ ಮಾಡದ ಕ್ರೈಸ್ತ ಮಿಶನಿರಿಗಳು ನಮ್ಮ ದೇಶದ ಗಲ್ಲಿಗಲ್ಲಿಗಳಲ್ಲಿ ಆರ್ಥಿಕ ದುರ್ಬಲವಾಗಿರುವ, ತುಳಿತಕ್ಕೊಳಗಾಗಿರುವ ಸಮುದಾಯದವರನ್ನು ಗುರಿಯಾಗಿಸಿ ಮತಾಂತರ ಮಾಡುತ್ತಿರುವುದನ್ನು ನಾವು ಸಹಿಸುವುದಿಲ್ಲ. ಸೇವೆ ಮಾಡಿ ಆದರೆ ದೇವರನ್ನೇ ಬದಲಾಯಿಸುವುದು ವಿಶಾಲ ಮನೋಭಾವನೆ ಇರುವ ಹಿಂದೂ ಧರ್ಮದ ಮೇಲಿನ ಆಕ್ರಮಣಕಾರಿ ಪ್ರವೃತಿ ಎಂದರು.
ಉಪಸ್ಥಿತಿ: ಸ್ವಾಮೀಜಿಗಳ ಪಾದಯಾತ್ರೆಯುದ್ದಕ್ಕೂ ಬಿಜೆಪಿ ತಾ| ಅಧ್ಯಕ್ಷ ರಂಜನ್ ಜಿ. ಗೌಡ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಕುಶಾಲಪ್ಪ ಗೌಡ ಪೂವಾಜೆ, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ವಿಮಲಾ ಕಂಚಿಂಜ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಮಾಜಿ ಕಾರ್ಯದರ್ಶಿ ನಾರಾಯಣ ಆಚಾರ್, ಮೇಲಂತಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಭಾಕರ್ ಆಚಾರ್ಯ, ಚಂದ್ರರಾಜ್, ತಾ.ಪಂ. ಮಾಜಿ ಅಧ್ಯಕ್ಷ ಕೇಶವ ಎಂ, ಧರ್ಮ ರಕ್ಷಾ ಸಮಿತಿ ಅಧ್ಯಕ್ಷ ದಿನಕರ ಆದೇಲು, ಜಿ.ಪಂ. ಮಾಜಿ ಸದಸ್ಯೆ ಸಿ.ಕೆ. ಚಂದ್ರಕಲಾ, ರಾಘವ ಕಲ್ಮಂಜ, ಕುವೆಟ್ಟು ಗ್ರಾ.ಪಂ. ಅಧ್ಯಕ್ಷ ಅಶೋಕ್ ಕೋಟ್ಯಾನ್, ಮೋಹನ್‌ದಾಸ್, ಸಂಘಟನೆಯಲ್ಲಿ ಸಹಕಾರ ನೀಡಿದ ಪ್ರಜ್ವಲ್ ಮಡಂತ್ಯಾರು, ರಕ್ಷಿತ್ ಮಡಂತ್ಯಾರು, ಯತೀಶ್ ಮೇಲಂತಬೆಟ್ಟು, ಪ್ರಶಾಂತ್ ಮಡಂತ್ಯಾರು, ನೀಕ್ಷಿತ್, ಸಚಿನ್, ವಿಕ್ರಮ್ ಮೊದಲಾದವರು ಭಾಗಿಯಾಗಿ ಸಹಕಾರ ನೀಡಿದರು. ಧರ್ಮರಕ್ಷಾ ಗ್ರಾಮ ಸಮಿತಿ ಅಧ್ಯಕ್ಷ ಹಾಗೂ ಮೇಲಂತಬೆಟ್ಟು ಗ್ರಾ. ಪಂ. ಸದಸ್ಯ ಸತೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಕೋರಿದರು. ನಾಗೇಶ್ ಮಧ್ವ ಸ್ವಾಗತಿಸಿದರು. ನವೀನ್ ಕನ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಹಾಸ ಧನ್ಯವಾದವಿತ್ತರು.

muguli ksthetrada raste udhgatane copyಉಜಿರೆ: ವಂದೇ ತದ್ಗುಣ ಲಬ್ದಯೇ ಎಂದು ಜೈನರು ದೇವರನ್ನು ಆರಾಧಿಸುತ್ತಾರೆ. ಅಂದರೆ ದೇವರಲ್ಲಿರುವ ಅನಂತ ಗುಣಗಳು ತಮಗೂ ಬರಲಿ ಎಂದು ಬೇಡಿಕೊಳ್ಳುತ್ತಾರೆ. ಧನ, ಧಾನ್ಯ, ಸಂಪತ್ತು ಯಾವುದನ್ನೂ ಬೇಡುವುದಿಲ್ಲ. ಏಕೆಂದರೆ ಎಲ್ಲವನ್ನೂ ತ್ಯಾಗ ಮಾಡಿದಾಗ ಮಾತ್ರ ತೀರ್ಥಂಕರರಾಗಬಹುದು. ಭಯದಿಂದ ಭಕ್ತಿ ಬರಬಾರದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಜ.5 ರಂದು ಮುಗುಳಿ ತೀರ್ಥ ಕ್ಷೇತ್ರದಲ್ಲಿ ಶೀತಲನಾಥ ತೀರ್ಥಂಕರರ ಸಾನ್ನಿಧ್ಯದಲ್ಲಿರುವ ಬ್ರಹ್ಮಯಕ್ಷ ದೇವರ ಬಸದಿಯಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವದ ಸಂದರ್ಭ ಶಾಸಕರ ಅನುದಾನದಿಂದ ನಿರ್ಮಿಸಲಾದ ನೂತನ ರಸ್ತೆಯನ್ನು ಉದ್ಘಾಟಿಸಿ, ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಜೈನ ಧರ್ಮದ ಶಕ್ತಿ ಮತ್ತು ಸತ್ವದಿಂದ ಕೆಲವು ಸಾನ್ನಿಧ್ಯಗಳಲ್ಲಿ ಅತಿಶಯಗಳು ನಡೆಯುತ್ತವೆ. ಬಂಗಾಡಿಯಲ್ಲಿ ನೀರಿನಲ್ಲಿ ಕಲ್ಲಿನ ಗುಂಡು ತೇಲುವುದು. (ಈಗ ಇದು ನಡೆಯುತ್ತಿಲ್ಲ) ಭಕ್ತರಲ್ಲಿ ಭಕ್ತಿ ಮಾಡಲು ಇಂತಹ ಪುರಾವೆಗಳು, ಅತಿಶಯಗಳು ಬೇಕಾಗುತ್ತವೆ. ಆಗ ಭಕ್ತರೂ ಶರಣಾಗುತ್ತಾರೆ. ಆದರೆ ಭಕ್ತರು ಜಿಜ್ಞಾಸುಗಳಾಗಬೇಕು. ಕುತೂಹಲದಿಂದ ದೆ ಯಾವುದನ್ನೂ ನಂಬಬಾರದು ಎಂದು ಅವರು ಸಲಹೆ ನೀಡಿದರು. ಜೈನ ಧರ್ಮದ ಪ್ರಕಾರ ಯಕ್ಷ-ಯಕ್ಷಿಯರು ಭಕ್ತರನ್ನು ದೇವರ ಕಡೆಗೆ ಆಕರ್ಷಿಸುವ ಕಾರ್ಯ ಮಾಡುತ್ತಾರೆ. ಆಗ ಧರ್ಮದ ರಕ್ಷಣೆಯಾಗಿ ಶಾಂತಿ, ನೆಮ್ಮದಿ ಸಿಗುತ್ತದೆ ಎಂದರು.
ಮುಗುಳಿ ಕ್ಷೇತ್ರದಲ್ಲಿ ನೀರಿನ ಕೊರತೆ, ಅಂತರ್ ಜಲದಮಟ್ಟ ಕುಸಿತದಿಂದಾಗಿ ತೀರ್ಥ ಹರಿದು ಬರುವುದು ನಿಂತಿದೆ. ಬಸದಿಯ ಸುತ್ತಲೂ ಒಂದೆರಡು ಕೆರೆಗಳನ್ನು ನಿರ್ಮಿಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.ಧರ್ಮಸ್ಥಳ ವತಿಯಿಂದ ಹಮ್ಮಿಕೊಳ್ಳಲಾದ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನಕ್ಕೆ ಈಗಾಗಲೇ ಮೂವತ್ತು ಸಾವಿರ ಶ್ರದ್ಧಾಕೇಂದ್ರಗಳ ಪ್ರತಿನಿಧಿಗಳು ಸಹಕಾರ ನೀಡಲು ಒಪ್ಪಿದ್ದಾರೆ. ಕೇರಳ ಗಡಿಭಾಗದ ಚರ್ಚ್, ಮಸೀದಿಗಳ ಪ್ರತಿನಿಧಿಗಳೂ ಬೆಂಬಲ ನೀಡಿದ್ದಾರೆ. ಇದೇ ೧೩ರೊಳಗೆ ರಾಜ್ಯದ ಎಲ್ಲಾ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನ ಪೂರ್ಣಗೊಳ್ಳಲಿದೆ ಎಂದರು. ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಬೆಳ್ತಂಗಡಿ ತಾಲೂಕಿನಲ್ಲಿ ಬಂಗಾಡಿ, ಸವಣಾಲು ಮತ್ತು ಮುಗುಳಿ ಎಂಬ ಮೂರು ಕ್ಷೇತ್ರಗಳಲ್ಲಿ ಬ್ರಹ್ಮಯಕ್ಷ ಸಾನ್ನಿಧ್ಯವಿದೆ. ಮುಗುಳಿ ಕ್ಷೇತ್ರದಲ್ಲಿ ನಡೆದ ನವೀಕರಣ ಹಾಗೂ ಪೂಜಾ ವಿಧಿ-ವಿಧಾನಗಳಿಂದ ಬ್ರಹ್ಮಯಕ್ಷ ಪ್ರಸನ್ನ ಗೊಂಡಿದ್ದು ಹೂ ಬೀಳುವ ಮೂಲಕ ಅಪ್ಪಣೆಯಾಗಿದೆ. ಮುಂದೆ ತೀರ್ಥ ಹರಿದು ಬಂದು ಇದು ಅತಿಶಯ ಕ್ಷೇತ್ರವಾಗಿ ಬೆಳಗಲಿದೆ ಎಂದು ಭವಿಷ್ಯ ನುಡಿದರು. ಶಾಸಕ ಕೆ. ವಸಂತ ಬಂಗೇರ ಮತ್ತು ಮುಗುಳಿ ನಾರಾಯಣ ಭಟ್ ಶುಭಾಶಂಸನೆ ಮಾಡಿದರು. ಬಳಕ್ಕ ಜೀವಂಧರ ಕುಮಾರ್ ಸ್ವಾಗತಿಸಿದರು. ಸುರೇಂದ್ರ ಜೈನ್ ಧರ್ಮಸ್ಥಳ ಧನ್ಯವಾದವಿತ್ತರು. ಸೋಮಶೇಖರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ujire 1

ujire 2

ujire 3

ujire 4

ujire

ಉಜಿರೆ : ಇಲ್ಲಿನ ಕಾಲೇಜು ರಸ್ತೆಯ ಪೈ ಶೋಪ್ಪಿ ಬಿಲ್ಡಿಂಗ್ಸ್‌ನಲ್ಲಿ ಸ್ಯೂ ಫಿಟ್ ಎಂಬ ಟೈಲರಿಂಗ್ ಸಂಸ್ಥೆಯು ಇಂದು(ಜ.12ರಂದು) ಉದ್ಘಾಟನೆಗೊಂಡಿತು.
ಶತಾಬ್ದಿ ವಿದ್ಯಾಲಯ ಸಮಿತಿಯ ಅಧ್ಯಕ್ಷರಾದ ಶ್ರೀಧರ ಜಿ ಭಿಡೆಯವರು ಉದ್ಘಾಟನೆಗೊಳಿಸಿ ನವನವೀನ ಮಾದರಿಯ, ಇಂದಿನ ಯುಗದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿದೆ. ಈ ಆವಿಷ್ಕಾರಗಳಲ್ಲಿ ಇನ್ನಷ್ಟು ವೈವಿಧ್ಯತೆ ಈ ಸಂಸ್ಥೆಯಿಂದ ಮೂಡಿ ಬರಲಿ ಎಂದು ಹೇಳಿದರು.
ಮುಂಡಾಜೆ ಗ್ರಾ.ಪಂ ಸದಸ್ಯೆ ಅಶ್ವಿನಿ ಎ ಹೆಬ್ಬಾರ್, ಅರೆಕಲ್ಲು ರಾಮಚಂದ್ರ ಭಟ್, ಶಶಿಧರ ಖಾಡಿಲ್ಕಾರ್, ಯೋಗೀಶ್ ಭಿಡೆ, ಮಾಲಿನಿ ಎಸ್ ಭಿಡೆ, ಸುಜಿತ್ ಎಂ.ಭಿಡೆ, ಪ್ರೊ| ಎನ್.ಜಿ ಪಡವರ್ಧನ್, ಕಟ್ಟಡದ ಮಾಲಕ ನಾರಾಯಣ ಪೈ, ಎಸ್.ಡಿ.ಎಂ ಎಜ್ಯುಕೇಶನಲ್ ಸೊಸೈಟಿಯ ಲಾರೆನ್ಸ್ ಪಿರೇರಾ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಸಂಸ್ಥೆಯ ಮಾಲಕಿ ಶ್ರೀಮತಿ ಸಂಜನಾ ಎಸ್.ಭಿಡೆ ಸ್ವಾಗತಿಸಿ, ಸುನೀಲ್ ಭಿಡೆ ವಂದಿಸಿದರು.

Harish kumar press meet copyಬೆಳ್ತಂಗಡಿ : ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳ ಕಾಂಗ್ರೆಸ್ ಆಡಳಿತದಿಂದ ಏನೂ ಪ್ರಗತಿಯಾಗಿಲ್ಲ ನಾವು ದೇಶವನ್ನೇ ಬದಲಾಯಿಸುತ್ತೇವೆ, ಪ್ರಜ್ವಲಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಎರಡು ವರ್ಷದ ಆಡಳಿತದ ಪರಿಣಾಮ ಈಗ ಬಡವರು ಕೃಷಿಕರು, ಕೂಲಿಕಾರ್ಮಿಕರು ಹಾಗೂ ಜನಸಾಮಾನ್ಯರು ತೀವ್ರ ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕೇಂದ್ರ ಸರಕಾರ ಬಡವರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಆರೋಪಿಸಿದರು.
ಅವರು ಜ.11ರಂದು ಬೆಳ್ತಂಗಡಿ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸ್ವಾತಂತ್ರ್ಯ ದೊರೆತಾಗ ದೇಶದ ಸ್ಥಿತಿ ಹೇಗಿತ್ತು. ನಂತರದ 70 ವರ್ಷಗಳ ಕಾಂಗ್ರೆಸ್ ಆಡಳಿತದಿಂದ ದೇಶದ ಪ್ರಗತಿ ಹೇಗಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಸರಕಾರದ ಕ್ರಾಂತಿಕಾರಕ ಯೋಜನೆಗಳಿಂದ, ಜನಪರ ಯೋಜನೆಗಳಿಂದ ಬಡವರು, ಕೃಷಿಕರು ಸೇರಿದ ದೇಶದ ಎಲ್ಲಾ ನಾಗರಿಕರು ನೆಮ್ಮದಿಯಿಂದ ಜೀವನ ನಡೆಸುವ ವಾತಾವರಣವಿತ್ತು. ಆದರೆ ಮೋದಿ ಸರಕಾರದ ಆಡಳಿತದಿಂದ ಜನಜೀವನ ದುಸ್ತರಗೊಂಡಿದೆ. ಲೀಟರಿಗೆ ರೂ.30 ಇದ್ದ ಪೆಟ್ರೋಲ್ ದರ ರೂ.70ಕ್ಕೆ ಏರಿದೆ. ಒಂದು ವರ್ಷದಲ್ಲಿ ಆರು ಬಾರಿ ಪೆಟ್ರೋಲ್ ಮತ್ತು ಡೀಸಿಲ್ ಬೆಲೆ ಏರಿಕೆ ಮಾಡಿದೆ. ಯು.ಪಿ.ಎ ಸರಕಾರದ ಅವಧಿಯಲ್ಲಿ ಆಧಾರ್ ಕಾರ್ಡ್, ಜಿ.ಎಸ್.ಟಿ ಮತ್ತು ಎಫ್.ಐ.ಡಿ ಮತ್ತು ಗ್ಯಾಸ್ ಸಬ್ಸಿಡಿಯನ್ನು ವಿರೋಧಿಸುತ್ತಿದ್ದ ಮೋದಿ ಹಾಗೂ ಬಿಜೆಪಿ ಪಕ್ಷ ಈಗ ಆಧಾರ್‌ನ್ನು ಎಲ್ಲದಕ್ಕೂ ಲಿಂಕ್ ಮಾಡುತ್ತಿದೆ ಈ ಸರಕಾರದ ಯಾವುದೇ ಹೊಸ ಕಾರ್ಯಕ್ರಮಗಳಿಲ್ಲ, ಯುಪಿಎ ಸರಕಾರದ ಕಾರ್ಯಕ್ರಮಗಳೇ ಈಗ ಮುಂದುವರಿಯುತ್ತಿದೆ ಎಂದು ತಿಳಿಸಿದರು. ಯು.ಪಿ.ಎ ಆರಂಭಿಸಿದ್ದ ಆಹಾರ ಭದ್ರತೆ ಉದ್ಯೋಗ ಖಾತ್ರಿಯನ್ನು ಕೇಂದ್ರ ನಿಲ್ಲಿಸಿದೆ. ನೋಟು ಅಪನಗದೀಕರಣದಿಂದಾಗಿ ಕೃಷಿಕರು, ಕೂಲಿ ಕಾರ್ಮಿಕರು ಸಣ್ಣ ವ್ಯಾಪಾರಿಗಳು, ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶ್ರೀಮಂತರಿಗೆ ಇದರಿಂದ ಯಾವುದೇ ಸಮಸ್ಯೆಯಾಗಿಲ್ಲ, ನಮ್ಮ ದುಡ್ಡನ್ನು ತೆಗೆಯಲು ಮಿತಿ ಹಾಕಿ ನಿರ್ಬಂಧ, ಬಿಸಿಲಲ್ಲಿ ನಿಂತು ನೂರಾರು ಮಂದಿ ಸಾಯುವ ಸ್ಥಿತಿ ನಿರ್ಮಿಸಿದ್ದಾರೆ. ವಾಹನಗಳ ಲೈಸನ್ಸ್, ಮಾರಾಟ, ದಾಖಲೆ ನವೀಕರಣ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪಡೆಯಲು ದುಬಾರಿ ಮೊತ್ತ ಹಾಗೂ ದುಪ್ಪಟ್ಟು ದಂಡ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ ಕಳೆದ ೭೦ ವರ್ಷಗಳಲ್ಲಿ ಇಂತಹ ಆಡಳಿತವನ್ನು ಯಾರೂ ನೋಡಿಲ್ಲ ಇದರ ವಿರುದ್ಧ ತಾಲೂಕು ಹಾಗೂ ಜಿಲ್ಲೆಯಲ್ಲಿ ಹೋರಾಟ ನಡೆಸುತ್ತೇವೆ ಎಂದರು. ಪಾಂಡುರಂಗ ಭಂಡಾರ್ಕರ್ ಅವರು ಮಾತನಾಡಿ ಮೋಟಾರು ವಾಹನ ರಿನಿವಲ್, ಲೈಸನ್ಸ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪಡೆಯಲು ಹಿಂದೆ ಇದ್ದ ದರದ ಹತ್ತು ಪಟ್ಟು ಏರಿಕೆ ಆಗಿದೆ. ಅನಿಲ್ ಮೋರಾಸ್ ಕಕ್ಕೆಜಾಲು ಇವರ ಮಾರುತಿ ಕಾರಿಗೆ ಈಗ ರೂ.25 ಸಾವಿರ ಮೌಲ್ಯ. ಇದರ ರಿನಿವಲ್‌ಗೆ ಹಿಂದೆ ರೂ.100 ದಂಡ ಕಟ್ಟಬೇಕಾಗುತ್ತಿತ್ತು. ಆದರೆ ಜ.೬ರಿಂದ ದಂಡದ ಮೊತ್ತವನ್ನು ರೂ.೩೦ ಸಾವಿರಕ್ಕೆ ಏರಿಸಲಾಗಿದೆ. ಇಂತಹ ಅನೇಕ ಘಟನೆಗಳು ತಾಲೂಕಿನಲ್ಲಿದೆ. ಎಲ್ಲಾ ದರ, ಹಾಗೂ ದಂಡವನ್ನು ಹತ್ತು ಪಟ್ಟು ಹೆಚ್ಚು ಮಾಡಿದ್ದು ಚಾಲಕರು, ವಾಹನಗಳ ಮಾಲಕರು ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾಮೀಣ ಘಟಕದ ಅಧ್ಯಕ್ಷ ರಾiಚಂದ್ರ ಗೌಡ, ಯಶವಂತ ಬಾಳಿಗ, ಸಂತೋಷ್ ಉಪಸ್ಥಿತರಿದ್ದರು.

ವಿಧಾನ ಮಂಡಲ ಅಧಿವೇಶನ ಹಿನ್ನಲೆ ಎ.ಪಿ.ಎಂ.ಸಿ ಚುನಾವಣೆ ಮುಂದೂಡಿಕೆ

Thursday, November 17th, 2016 | Suddi Belthangady | no responses   ನೂತನ ವೇಳಾಪಟ್ಟಿ ಪ್ರಕಟ ಜ.12ಕ್ಕೆ ಚುನಾವಣೆ    ನಾಮಪತ್ರ ಸಲ್ಲಿಸಿದವರು
ಮತ್ತೆ ನಾಮಪತ್ರ ಸಲ್ಲಿಸಬೇಕುಮುಂದೆ ಓದಿ

ಎರಡು ಗ್ರಾ.ಪಂ. ಬಿಜೆಪಿ ಮೇಲುಗೈ

ಎರಡು ಗ್ರಾ.ಪಂ. ಬಿಜೆಪಿ ಮೇಲುಗೈ

Thursday, April 21st, 2016 | Suddi Belthangady | no responses ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ವೇಣೂರು ಮತ್ತು ಆರಂಬೋಡಿ ಗ್ರಾಮ ಪಂಚಾಯತುಗಳ ೩೬… ಮುಂದೆ ಓದಿ

ವೇಣೂರು- ಆರಂಬೋಡಿ ಗ್ರಾ.ಪಂ. ಚುನಾವಣೆಯ ಇಂದು ಮತ ಎಣಿಕೆ

Wednesday, April 20th, 2016 | Suddi Belthangady | no responses ಬೆಳ್ತಂಗಡಿ: ಎ. 17ರಂದು ವೇಣೂರು ಮತ್ತು ಆರಂಬೋಡಿ ಗ್ರಾ.ಪಂ.ಗೆ ನಡೆದ ಚುನಾವಣೆಯ ಮತ… ಮುಂದೆ ಓದಿ

ವೇಣೂರು-ಆರಂಬೋಡಿ ಗ್ರಾ.ಪಂ. ಚುನಾವಣೆ 76ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಾಳೆ ನಿರ್ಧಾರ

Tuesday, April 19th, 2016 | Suddi Belthangady | no responses ವೇಣೂರು: ಎ. 17ರಂದು ವೇಣೂರು ಮತ್ತು ಆರಂಬೋಡಿ ಗ್ರಾಮ ಪಂಚಾಯತುಗೆ ನಡೆದ ಚುನಾವಣೆಯ… ಮುಂದೆ ಓದಿ

ಮಚ್ಚಿನ ಗ್ರಾ.ಪಂ. ನಲ್ಲಿ ಮತದಾನ

ಮಚ್ಚಿನ ಗ್ರಾ.ಪಂ. ನಲ್ಲಿ ಮತದಾನ

Monday, April 18th, 2016 | Suddi Belthangady | no responses ಮಚ್ಚಿನ: ಮಚ್ಚಿನ ಗ್ರಾ.ಪಂ.ನಲ್ಲಿ ಎ. 17ರಂದು ನಡೆದ ಉಪ ಚುನಾವಣೆಯಲ್ಲಿ ಮಚ್ಚಿನ 1ನೇ… ಮುಂದೆ ಓದಿ

ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸದಸ್ಯರುಗಳಿಗೆ ಸನ್ಮಾನ

Thursday, March 10th, 2016 | Suddi Belthangady | no responses ಕಕ್ಕಿಂಜೆ: ಜಿಲ್ಲಾ ಪಂಚಾಯತ್ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ಶ್ರೀಮತಿ ನಮಿತ ಉಜಿರೆ ಕ್ಷೇತ್ರ,… ಮುಂದೆ ಓದಿ

ಬೆಳ್ತಂಗಡಿ ನಗರ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

Thursday, March 10th, 2016 | Suddi Belthangady | no responses ಬೆಳ್ತಂಗಡಿ: ನಗರ ಪಂಚಾಯತ್‌ನ ಅಧ್ಯಕ್ಷರಾಗಿ ಮುಗುಳಿ ನಾರಾಯಣ ರಾವ್ ಹಾಗೂ ಉಪಾಧ್ಯಕ್ಷರಾಗಿ ಜಗದೀಶ್… ಮುಂದೆ ಓದಿ

ಬೆಳ್ತಂಗಡಿ ಬಿಜೆಪಿ ಮತದಾರರಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ವಿಜಯೋತ್ಸವ

Thursday, March 10th, 2016 | Suddi Belthangady | no responses ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಇದರ ಫೆ. 20ರಂದು ನಡೆದ… ಮುಂದೆ ಓದಿ

ನಗರ ಪಂಚಾಯತು ಯಾರು ಅಧ್ಯಕ್ಷರಾಗುವರು ಈ ಇಬ್ಬರೊಳಗೆ..?

Thursday, March 3rd, 2016 | Suddi Belthangady | no responses ಬೆಳ್ತಂಗಡಿ : ಬೆಳ್ತಂಗಡಿ ನಗರ ಪಂಚಾಯತದ ಮುಂದಿನ ಎರಡೂ ವರೆ ವರ್ಷ ಅವಧಿ… ಮುಂದೆ ಓದಿ

ಕಸಾಪ ರಾಜ್ಯಾಧ್ಯಕ್ಷತೆಗೆ  ಫೆ. ೨೮ರಂದು ಚುನಾವಣೆ

Friday, February 26th, 2016 | suddiblt | no responses ಬೆಳ್ತಂಗಡಿ: ಕನ್ನಡ ಸಾಹಿತ್ಯ ಪರಿಷತ್ ಇದರ ರಾಜ್ಯಾಧ್ಯಕ್ಷರ ಆಯ್ಕೆ ಚುನಾವಣೆ ಫೆ. ೨೮… ಮುಂದೆ ಓದಿ

ಕ್ಷೇತ್ರವಾರು ನೋಟಾ ಮತದಾನ:  ನೇತ್ರಾವತಿ ತಿರುವು ಯೋಜನೆ ಪರಿಣಾಮವೇ?

Friday, February 26th, 2016 | suddiblt | no responses ಬೆಳ್ತಂಗಡಿ: ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ತಿರಸ್ಕರಿಸುವ ವಿಶೇಷ ಅಧಿಕಾರವಾದ ನೋಟಾ ಮತದಾನದಲ್ಲಿ… ಮುಂದೆ ಓದಿ

ಪಕ್ಷ ವಿರೋಧಿ ಚಟುವಟಿಕೆ ಕಾಂಗ್ರೆಸ್‌ನಿಂದ 8 ಮಂದಿ ಉಚ್ಚಾಟನೆ

Thursday, February 25th, 2016 | Suddi Belthangady | no responses ಬೆಳ್ತಂಗಡಿ: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ… ಮುಂದೆ ಓದಿ

ಜಿ.ಪಂ. ಚುನಾವಣೆ: ಸೋತು ಗೆದ್ದ ತುಂಗಪ್ಪ ಬಂಗೇರ

Thursday, February 25th, 2016 | Suddi Belthangady | no responses ಬೆಳ್ತಂಗಡಿ ಗಡಿ ಪ್ರದೇಶವಾದ ಬಂಟ್ವಾಳ ತಾಲೂಕು ಸಂಗಬೆಟ್ಟು ಜಿಲ್ಲಾ ಪಂಚಾಯತಿ ಕ್ಷೇತ್ರದಿಂದ ಬಿಜೆಪಿ… ಮುಂದೆ ಓದಿ

ಕಾಂಗ್ರೆಸ್ ವಿಜಯೋತ್ಸವ: ಮುಗಿಲುಮುಟ್ಟಿದ ಕಾರ್ಯಕರ್ತರ ಸಂಭ್ರಮಾಚರಣೆ

Tuesday, February 23rd, 2016 | Suddi Belthangady | no responses ಬೆಳ್ತಂಗಡಿ: ಕಾಂಗ್ರೆಸ್ ಪಕ್ಷ ಈ ಬಾರಿ ತಾ.ಪಂ ಮತ್ತು ಜಿ. ಪಂ ಚುನಾವನೆಯ… ಮುಂದೆ ಓದಿ

2016ನೇ ತಾ.ಪಂ ಚುನಾವಣೆಯ ಫಲಿತಾಂಶ

2016ನೇ ತಾ.ಪಂ ಚುನಾವಣೆಯ ಫಲಿತಾಂಶ

Tuesday, February 23rd, 2016 | Suddi Belthangady | no responses ಬೆಳ್ತಂಗಡಿ: 2016ನೇ ತಾ.ಪಂ ಚುನಾವಣೆಯು ಫೆ. 20ರಂದು ನಡೆದು, ಇದರ ಫಲಿತಾಂಶ ಇಂದು… ಮುಂದೆ ಓದಿ

ಉಜಿರೆ ತಾ.ಪಂ. ಕ್ಷೇತ್ರದಿಂದ ಬಿಜೆಪಿ ಶಶಿಧರ ಕಲ್ಮಂಜ ಗೆಲುವು

Tuesday, February 23rd, 2016 | Suddi Belthangady | no responses ಏಕೈಕ ಗ್ರಾಮ ವ್ಯಾಪ್ತಿ ಹೊಂದಿದ ತಾಲೂಕಿನ ಇನ್ನೊಂದು ಅತಿ ದೊಡ್ಡ ಕ್ಷೇತ್ರವಾಗಿರುವ ಉಜಿರೆ… ಮುಂದೆ ಓದಿ

ಅಂಡಿಂಜೆ ತಾ.ಪಂ. ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸುಧೀರ್ ಆರ್. ಸುವರ್ಣ ಗೆಲುವು

Tuesday, February 23rd, 2016 | Suddi Belthangady | no responses ಅಂಡಿಂಜೆ ತಾ.ಪಂ ಚುನಾವಣಾ ಕ್ಷೇತ್ರಕ್ಕೆ ಅಂಡಿಂಜೆ, ಸಾವ್ಯ, ಕೊಕ್ರಾಡಿ, ಕುದ್ಯಾಡಿ, ನಾವರ ಮತ್ತು… ಮುಂದೆ ಓದಿ

ಅಳದಂಗಡಿಯಲ್ಲಿ ತಾ.ಪಂ. ಕಾಂಗ್ರೆಸ್ ಅಭ್ಯರ್ಥಿ ವಿನೂಷ ಪ್ರಕಾಶ್ ಪೂಜಾರಿ ಗೆಲುವು

Tuesday, February 23rd, 2016 | Suddi Belthangady | no responses ಹಿಂದುಳಿದವರ್ಗ ಎ ಮಹಿಳೆಗೆ ಮೀಸಲಾದ ಕ್ಷೇತ್ರ ಅಳದಂಗಡಿಯಲ್ಲೂ ಈ ಬಾರಿ ಪ್ರಮುಖ ಎರಡು… ಮುಂದೆ ಓದಿ

ಹೊಸಂಗಡಿಯಲ್ಲೂ ತಾ.ಪಂ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಓಬಯ್ಯ ಗೆಲುವು

Tuesday, February 23rd, 2016 | Suddi Belthangady | no responses ಹೊಸಂಗಡಿ ತಾ. ಪಂ ಕ್ಷೇತ್ರಕ್ಕೆ ಈ ಬಾರಿ ಅನುಸೂಚಿತ ಜಾತಿ ಮೀಸಲಾತಿ ದೊರೆತಿದ್ದು… ಮುಂದೆ ಓದಿ

7 ಜಿಲ್ಲಾ ಪಂಚಾಯತ್‌ಗಳಲ್ಲಿ ಚುನಾವಣಾ ಫಲಿತಾಂಶ

7 ಜಿಲ್ಲಾ ಪಂಚಾಯತ್‌ಗಳಲ್ಲಿ ಚುನಾವಣಾ ಫಲಿತಾಂಶ

Tuesday, February 23rd, 2016 | Suddi Belthangady | no responses ಬೆಳ್ತಂಗಡಿ : ಬೆಳ್ತಂಗಡಿ ವಿಧಾನ ಸಭಾ ವ್ಯಾಪ್ತಿಯ ೭ ಜಿ.ಪಂ. ಕ್ಷೇತ್ರಗಳಿಗೆ ನಡೆದ… ಮುಂದೆ ಓದಿ

ಲಾಯಿಲ ತಾ.ಪಂ ಕ್ಷೇತ್ರದಲ್ಲಿ ಪಕ್ಷದ ಬಿಜೆಪಿ ಅಭ್ಯರ್ಥಿ ಸುಧಾಕರ ಗೆಲುವು

Tuesday, February 23rd, 2016 | Suddi Belthangady | no responses ಈ ಕ್ಷೇತ್ರದಲ್ಲಿ 3118 ಪುರುಷ ಮತದಾರರು, 3139 ಮಹಿಳಾ ಮತದಾರರು ಸೇರಿ ಒಟ್ಟು… ಮುಂದೆ ಓದಿ

ನಾರಾವಿ ತಾ.ಪಂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೂಪಲತಾ ಗೆಲುವು

Tuesday, February 23rd, 2016 | Suddi Belthangady | no responses ನಾರಾವಿ ತಾ. ಪಂ ಕ್ಷೇತ್ರಕ್ಕೆ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾದ ಕ್ಷೇತ್ರಕ್ಕೆ… ಮುಂದೆ ಓದಿ

ಕೊಕ್ಕಡ ಮತದಾನ

ಕೊಕ್ಕಡ ಮತದಾನ

Monday, February 22nd, 2016 | Suddi Belthangady | no responses ಕೊಕ್ಕಡ ತಾ.ಪಂ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಕ್ಷ್ಮೀನಾರಾಯಣ ಚುನಾವಣೆಯ ಕೇಂದ್ರಕ್ಕೆ ಭೇಟಿ ನೀಡಿ… ಮುಂದೆ ಓದಿ

ಕಳೆಂಜ ಶಾಲೆತ್ತಡ್ಕದಲ್ಲಿ ಮತದಾನ

ಕಳೆಂಜ ಶಾಲೆತ್ತಡ್ಕದಲ್ಲಿ ಮತದಾನ

Monday, February 22nd, 2016 | Suddi Belthangady | no responses ಕಳೆಂಜ ತಾ.ಪಂ. ಬಿಜೆಪಿ ಅಭ್ಯರ್ಥಿ ಸುಶೀಲ ರವರು ಬೂತ್‌ಗಳನ್ನು ರಚಿಸಿ ಮತದಾರರಿಗೆ ಚೀಟಿ… ಮುಂದೆ ಓದಿ

ಕಳೆಂಜ ಶಾಲೆತ್ತಡ್ಕದಲ್ಲಿ ಮತದಾನ

ಕಳೆಂಜ ಶಾಲೆತ್ತಡ್ಕದಲ್ಲಿ ಮತದಾನ

Monday, February 22nd, 2016 | Suddi Belthangady | no responses ಕಳೆಂಜ ಶಾಲೆತ್ತಡ್ಕದಲ್ಲಿ ಮತದಾನಕ್ಕಾಗಿ ಸಾಲಾಗಿ ನಿಂತಿರುವ ಮತದಾರರು. ಯಾವುದೇ ಅಹಿತಕರ ಘಟನೆ ನಡೆಯದೆ… ಮುಂದೆ ಓದಿ

ಶಿಶಿಲದಲ್ಲಿ ಮತದಾನ

ಶಿಶಿಲದಲ್ಲಿ ಮತದಾನ

Monday, February 22nd, 2016 | Suddi Belthangady | no responses ಶಿಶಿಲದಲ್ಲಿ ಮತದಾನ ನಡೆಯುತ್ತಿದ್ದು, ಧರ್ಮಸ್ಥಳ ಜಿ.ಪಂ. ಬಿಜೆಪಿ ಅಭ್ಯರ್ಥಿ ಕೊರಗಪ್ಪ ನಾಯ್ಕ ಹಾಗೂ… ಮುಂದೆ ಓದಿ

ಪುದುವೆಟ್ಟು ಮತದಾನ

ಪುದುವೆಟ್ಟು ಮತದಾನ

Saturday, February 20th, 2016 | Suddi Belthangady | no responses ಪುದುವೆಟ್ಟು ಬಿಜೆಪಿ ತಾ.ಪಂ. ಅಭ್ಯರ್ಥಿ ಸುಲೋಚನಾ ಹಾಗೂ ಜಿ.ಪಂ. ಮಂಜುಳಾ ಪರವಾಗಿ ಮತಯಾಚಿಸುವುದು.… ಮುಂದೆ ಓದಿ

ನೆರಿಯ ಬೂತ್‌ನಲ್ಲಿ ಮತಯಾಚನೆ

ನೆರಿಯ ಬೂತ್‌ನಲ್ಲಿ ಮತಯಾಚನೆ

Saturday, February 20th, 2016 | Suddi Belthangady | no responses ಕಾಂಗ್ರೆಸ್ ಕಾರ್ಯಕರ್ತರು ಮತದಾನ ಮಾಡುವಲ್ಲಿ ನಿರತರಾಗಿದ್ದರು. ನೆರಿಯ ತಾ.ಪಂ. ಬಿಜೆಪಿ ಅಭ್ಯರ್ಥಿ ಸುಲೋಚನಾ… ಮುಂದೆ ಓದಿ

ತೋಟತ್ತಾಡಿ ಮತದಾನ

ತೋಟತ್ತಾಡಿ ಮತದಾನ

Saturday, February 20th, 2016 | Suddi Belthangady | no responses ತೋಟತ್ತಾಡಿ ಸ.ಹಿ.ಪ್ರಾ.ಶಾಲೆ ಚುನಾವಣಾ ಆಯೋಗದ ವತಿಯಿಂದ ಮತದಾರರಿಗೆ ಮಾಹಿತಿ ನೀಡಿ ಸರ್ಕಾರಿ ನೌಕರರಿಗೆ… ಮುಂದೆ ಓದಿ

ಚಾರ್ಮಾಡಿ ಚಿಬಿದ್ರೆ ಗ್ರಾಮದ ಸ.ಹಿ.ಪ್ರಾ. ಶಾಲೆ ಅಣಿಯೂರಿನಲ್ಲಿ ಮತದಾನ

Saturday, February 20th, 2016 | Suddi Belthangady | no responses ಚಾರ್ಮಾಡಿ ಗ್ರಾ.ಪಂ. ಕ್ಷೇತ್ರದ ಚಿಬಿದ್ರೆ ಗ್ರಾಮದ ಸ.ಹಿ.ಪ್ರಾ. ಶಾಲೆ ಅಣಿಯೂರು, ಕಕ್ಕಿಂಜೆ ಇಲ್ಲಿ… ಮುಂದೆ ಓದಿ

Periyadka Hithesh abhinandane copyಪೆರಿಯಡ್ಕ: ಸ.ಕಿ.ಪ್ರಾ. ಶಾಲೆ ಪೆರಿಯಡ್ಕ (ಬಿ) ಬೆಳಾಲಿನಲ್ಲಿ ನಡೆದ ಸೈಂಟ್ ಥೋಮಸ್ ಪದವಿ ಕಾಲೇಜು ಹಳೆಕೋಟೆ ಬೆಳ್ತಂಗಡಿ ಇಲ್ಲಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ, ಝೀ ಕನ್ನಡ ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕುಮಾರ್ ಕಾಪಿನಡ್ಕ ಇವರನ್ನು ಶಾಲಾ ಹಾಗೂ ಎನ್.ಎಸ್.ಎಸ್. ಶಿಬಿರ ವ್ಯವಸ್ಥಾಪನಾ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.
ಅಧ್ಯಕ್ಷತೆಯನ್ನು ಬೆಳಾಲು ಗ್ರಾ.ಪಂ. ಅಧ್ಯಕ್ಷ ದಿನೇಶ್ ಕೋಟ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೆ|ಫಾ| ಜೋಸ್ ವಲಿಯ ಪರಂಬಿಲ್, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ಪ್ರಾಂಶುಪಾಲರಾದ ಪ್ರೊ| ಫಾತುಮಾಬಿ ಸಾಹಿರ, ಬೆಳಾಲು ಸಿ.ಎ. ಬ್ಯಾಂಕ್ ಅಧ್ಯಕ್ಷ ಹೆಚ್. ಪದ್ಮಗೌಡ, ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಮೋದರ ಗೌಡ ಸುರುಳಿ, ಬೆಳಾಲು ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿ, ಗ್ರಾ.ಪಂ. ಸದಸ್ಯರುಗಳಾದ ಸತೀಶ್ ಗೌಡ ಎಳ್ಳುಗದ್ದೆ, ಜಯಂತ ಗೌಡ, ವಿಮಲಾ, ಕುಸುಮಾವತಿ, ಹಿರಿಯರಾದ ಬಾಬು ಗೌಡ ಅಲಕೆದಡ್ಡ, ಸಮಿತಿಯ ಸಂಚಾಲಕ ಶ್ರೀನಿವಾಸ ಗೌಡ ಗಣಪನಗುತ್ತು, ಎಸ್.ಡಿ.ಎಂ.ಸಿ. ಅಧ್ಯಕ್ಷ ಕುಶಾಲಪ್ಪ ಗೌಡ, ಶೇಖರ ಗೌಡ ಕೊಲ್ಲಿಮಾರ್ ಭಾಗವಹಿಸಿದ್ದರು.

maya swacha shradda kendra copyಬೆಳಾಲು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಮಸ್ತ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛ ಭಾರತ-ಸ್ವಚ್ಛ ಶ್ರದ್ಧಾ ಕೇಂದ್ರ ಯೋಜನೆಯಡಿಯಲ್ಲಿ ಜ.8ರಂದು ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಾಲು ವಿಭಾಗದ ಪ್ರಗತಿಬಂಧು ಒಕ್ಕೂಟ, ಸ್ವಸಹಾಯ ಸಂಘ, ಜ್ಞಾನವಿಕಾಸ ಕೇಂದ್ರ ಜನಜಾಗೃತಿ ವೇದಿಕೆ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ನೆರವಿನೊಂದಿಗೆ ದೇವಸ್ಥಾನದ ವಠಾರದಲ್ಲಿ ಶುಚಿತ್ವ ಮಾಡುವ ಕೆಲಸವನ್ನು ಶ್ರಮದಾನದ ಮೂಲಕ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ನಾರಾಯಣ ಸುವರ್ಣ, ಬೆಳಾಲು ಗ್ರಾ.ಪಂ ಅಧ್ಯಕ್ಷ ದಿನೇಶ್ ಕೋಟ್ಯಾನ್, ಮಾಯಾಗುತ್ತು ಪುಷ್ಪದಂತ ಜೈನ್, ಗ್ರಾ.ಪಂ ಸದಸ್ಯ ದಯಾನಂದ ಪಿ, ಮಾಯಾ ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ಹಾಗೂ ಶ್ರೀ ಮಾಯಾ ಮಹೇಶ್ವರ ಭಜನಾ ಮಂಡಳಿ ಅಧ್ಯಕ್ಷ ಗಂಗಾಧರ ಸಾಲಿಯಾನ್, ಸೇವಾ ಪ್ರತಿನಿಧಿ ಕು| ಆಶಾ, ಬೆಳಾಲು ಒಕ್ಕೂಟದ ಅಧ್ಯಕ್ಷ ಜನಾರ್ದನ ಪೂಜಾರಿ, ಬೆಳಾಲು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ರುಕ್ಮಯ್ಯ ಗೌಡ, ಸುದ್ದಿ ಬಿಡುಗಡೆಯ ಸಹಾಯಕ ವ್ಯವಸ್ಥಾಪಕ ಪಿ.ಜಾರಪ್ಪ ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶೇಖರ ಗೌಡ ಕೊಲ್ಲಿಮಾರು, ನವಜೀವನ ಸಮಿತಿ ಅಧ್ಯಕ್ಷ ರತ್ನಾಕರ ಆಚಾರ್ಯ, ಕೃಷ್ಣಪ್ಪ ಗೌಡ ಬೆರ್ಕೆಜಾಲು, ರಮೇಶ್ ಪೂಜಾರಿ ಗುಂಡ್ಯ, ಜ್ಞಾನ ವಿಕಾಸ ಹಾಗೂ ಸ್ವಸಹಾಯ ಸಂಘದ ಸದಸ್ಯರುಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಒಂದು ದಿನದ ಶ್ರಮದಾನದ ಮೂಲಕ ದೇವಸ್ಥಾನ ವಠಾರ ಶುಚಿತ್ವಗೊಳಿಸಲಾಯಿತು. ಆಡಳಿತಾಧಿಕಾರಿ ನಾರಾಯಣ ಸುವರ್ಣ ಕೃತಜ್ಞತೆ ಸಲ್ಲಿಸಿದರು.

billava sanga bajana tarabeti copy

billava sanga bajana tarabeti udhgatane copy

ಬೆಳ್ತಂಗಡಿ : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ, ಬಿಲ್ಲವ ಮಹಿಳಾ ವೇದಿಕೆ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಗುರುನಾರಾಯಣ ಸಂಕೀರ್ಣದ ಸಭಾ ಭವನದಲ್ಲಿ ಭಜನಾ ತರಬೇತಿ ಶಿಬಿರ ಜ.10 ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ದೇವದಾಸ ಪ್ರಭು ಭಾಗವಹಿಸಿ ಒಂದು ದಿನದ ಭಜನಾ ತರಬೇತಿಯನ್ನು ನಡೆಸಿಕೊಟ್ಟರು. ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ. ಭಜನಾ ತರಬೇತಿ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಬಿಲ್ಲವ ಮಹಿಳಾ ವೇದಿಕೆ ಮಾಜಿ ಅಧ್ಯಕ್ಷೆ ಶ್ರೀಮತಿ ವಿನೋದಿನಿ ರಾಮಪ್ಪ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಚಿದಾನಂದ ಇಡ್ಯ, ಸಂಘದ ನಿರ್ದೇಶಕರಾದ ಶ್ರೀಮತಿ ಸುಜಾತ ಅಣ್ಣಿ ಪೂಜಾರಿ, ಚಂದ್ರಶೇಖರ ಇಂದಬೆಟ್ಟು, ಗೋಪಾಲಕೃಷ್ಣ ಸಾಲಿಯಾನ್, ಭಜನಾ ಸಮಿತಿಯ ಮಾಜಿ ಅಧ್ಯಕ್ಷ ಎಚ್.ರಾಮಪ್ಪ, ನವೀನ್ ಕುಮಾರ್, ಶ್ರೀಮತಿ ಸುಮತಿ ಪ್ರಮೋದ್, ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಶಾಂತಾ ಬಂಗೇರ, ಸದಸ್ಯರುಗಳು ಉಪಸ್ಥಿತರಿದ್ದರು. ಶ್ರೀಮತಿ ಸುಧಾಮಣಿ ಆರ್ ಕಾರ್ಯಕ್ರಮ ನಿರೂಪಿಸಿದರು.

sdm puc Sanskrit samaropa copyಉಜಿರೆ : ಪ್ರಾಚೀನ ಹಸ್ತ ಪ್ರತಿಗಳ ಗ್ರಂಥದಲ್ಲಿ ಅತ್ಯಮೂಲ್ಯ ಜ್ಞಾನರಾಶಿಯೇ ಅಡಗಿದೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಇಂತಹ ಸಾವಿರಾರು ಪ್ರಾಚೀನ ಹಸ್ತಪ್ರತಿ ಗ್ರಂಥಗಳಿವೆ. ಇನ್ನೂ ಈ ಬಗ್ಗೆ ವಿಫುಲ ಸಂಶೋಧನೆ ಆಗಬೇಕಾಗಿದೆ. ಒಟ್ಟಾರೆ ಪ್ರಾಚೀನ ಹಸ್ತಪ್ರತಿ ಗ್ರಂಥಗಳ ರಕ್ಷಣೆ ಅತ್ಯವಶ್ಯವಾಗಿದ್ದು, ಪ್ರಾಚೀನ ಕಾಲದ ಸಾಹಿತ್ಯ, ವೈಜ್ಞಾನಿಕ ವಿಷಯಗಳನ್ನು ನಾವು ಈ ಮೂಲಕ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ಸಂಶೋಧಕ ಡಾ. ಎಸ್.ಆರ್ ವಿಘ್ನರಾಜ್ ಹೇಳಿದರು.
ಅವರು ಉಜಿರೆಯ ಶ್ರೀ ಧ.ಮಂ.ಪ.ಪೂ ಕಾಲೇಜಿನ ಸಂಸ್ಕೃತ ಸಂಘದ ಸಮಾರೋಪ ಸಮಾರಂಭದಲ್ಲಿ ಹಸ್ತಪ್ರತಿಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಎಸ್.ಡಿ.ಎಂ. ಸನಿವಾಸ ಪ.ಪೂ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಮಹೇಶ್‌ಭಟ್‌ರವರು ಸಂಸ್ಕೃತ ಸಂಘದ ಸಮಾರೋಪ ಭಾಷಣ ಮಾಡಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ್ ಐತಾಳ್ ಅಧ್ಯಕ್ಷತೆ ವಹಿಸಿದ್ದರು.ಸಂಸ್ಕೃತ ಸಂಘದ ಅಧ್ಯಕ್ಷ ಸಂದೇಶ್‌ಭಟ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೀರ್ತನ್ ಶಬರಾಯ ಸ್ವಾಗತಿಸಿ, ಪ್ರಜ್ಞಾಶ್ರೀ ನಿರೂಪಿಸಿ, ಸಂದೇಶ್‌ಭಟ್ ವಂದಿಸಿದರು.

  ಕ್ಯಾಶ್‌ಲೆಸ್ ಅಭಿಯಾನದಲ್ಲಿ ಭಾಗವಹಿಸಿ 10 ಕುಟುಂಬವನ್ನು ಕ್ಯಾಶ್‌ಲೆಸ್ ಸೊಸೈಟಿಗೆ ಬದಲಾಯಿಸಿದರೆ ಅವರಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಮಣಿಪಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 10 ಕುಟುಂಬವನ್ನು ಕ್ಯಾಶ್‌ಲೆಸ್ ಸೊಸೈಟಿಗೆ ಬದಲಾಯಿಸಿದ ವೀಡಿಯೋ ತುಣುಕು ಅಥವಾ ಇನ್ನತರೆ ಯಾವುದೇ ದಾಖಲೆಯನ್ನು ಅಪ್‌ಲೋಡ್ ಮಾಡಿದವರಿಗೆ ಮಾನವ ಸಂಪನ್ಮೂಲ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

  ಶೂನ್ಯ ಮೊತ್ತದ ಖಾತೆ ಹಾಗೂ ಜನಧನ್ ಖಾತೆಗಳನ್ನು ಹೊರತುಪಡಿಸಿ ಇನ್ನುಳಿದ ಬ್ಯಾಂಕ್ ಖಾತೆದಾರರಿಂದ ಪಾನ್‌ಕಾರ್ಡು ಪಡೆಯುವಂತೆ ಕೇಂದ್ರ ಸರಕಾರ ಆದೇಶ ನೀಡಿದೆ. ಫೆ.28ರೊಳಗೆ ಪಾನ್ ಸಂಖ್ಯೆ ಅಥವಾ ಫಾರ್ಮ್ ೬೦ ಪಡೆಯಬೇಕು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧಿಸೂಚನೆ ಹೊರಡಿಸಿದೆ. ಈ ಹಿನ್ನೆಲೆ ಆದಾಯ ತೆರಿಗೆ ನಿಯಮಗಳಲ್ಲೂ ಬದಲಾವಣೆ ಮಾಡಲಾಗಿದ್ದು, ಈವರೆಗೆ ಪಾನ್ ಅಥವಾ ಫಾರ್ಮ್ 60 ಸಲ್ಲಿಸದ ಗ್ರಾಹಕರು ಈಗ ಸಲ್ಲಿಸಬೇಕು ಎಂದು ಹೇಳಿದೆ. ಆದರೆ, ಈ ನಿಯಮ ಕನಿಷ್ಠ ಉಳಿತಾಯ ಬ್ಯಾಂಕ್ ಠೇವಣೀ ಖಾತೆ (ಬಿ.ಎಸ್.ಬಿ.ಡಿ.ಎ) ಗಳಿಗೆ ಅನ್ವಯಿಸುವುದಿಲ್ಲ.

  ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸದ್ಯದಲ್ಲಿಯೇ ಕನ್ನಡ ಭಾಷೆಯಲ್ಲಿ ವೆಬ್‌ಸೈಟ್‌ವೊಂದನ್ನು ಆರಂಭಿಸಲಿದೆ. ನ್ಯಾಶನಲ್ ಇಂಟರ್ನೆಟ್ ಎಕ್ಸ್ ಚೇಂಜ್ ಆಫ್ ಇಂಡಿಯಾ, ಭಾರತೀಯ ಭಾಷೆಗಳಲ್ಲಿ ವೆಬ್‌ಸೈಟ್ ನಿರ್ಮಿಸುವ ಅಧಿಕೃತ ಕೇಂದ್ರವಾಗಿದ್ದು ಇದೀಗ ಕನ್ನಡದಲ್ಲಿ ತಯಾರು ಮಾಡುತ್ತಿದೆ. ಆಧುನಿಕ ತಂತ್ರಜ್ಞಾನ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಬಹುಪಾಲು ಜನರಲ್ಲಿರುವ ಕಂಪ್ಯೂಟರ್ ಅನಕ್ಷರತೆ, ಇಂಗ್ಲಿಷ್ ಭಾಷೆಯ ಸಮಸ್ಯೆಯಿದ್ದು, ಇವೆರಡರ ನಡುವಣ ಅಂತರವನ್ನು ಕಡಿಮೆ ಮಾಡಲು ಸ್ಥಳೀಯ ಭಾಷೆಯಲ್ಲಿ ಇದನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ನಿಕ್ಸಿಯ ಅಧಿಕಾರಿಗಳು ತಿಳಿಸಿದ್ದಾರೆ.

 ಬಡತನ ರೇಖೆಗಿಂತ ಕೆಳಗಿರುವ ಅಂದರೆ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ರಾಜ್ಯ ಸರ್ಕಾರ ಉಚಿತವಾಗಿ ಗ್ಯಾಸ್ ಸ್ಟೌವ್ ಮತ್ತು ರೆಗ್ಯುಲೇಟರ್ ನೀಡಲು ಮುಂದಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್ ಈ ಕುರಿತು ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ಒಂದು ಸಿಲಿಂಡರ್ ಸೌಲಭ್ಯವುಳ್ಳ ಅಡುಗೆ ಅನಿಲ ಸಂಪರ್ಕ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಉತ್ತಮ ಗುಣಮಟ್ಟದ ಸ್ಟೌವ್ ಮತ್ತು ರೆಗ್ಯುಲೇಟರ್ ನೀಡಲಿದೆ ಎಂದಿದ್ದು, ಕರ್ನಾಟಕದಲ್ಲಿ ಉಜ್ವಲ ಯೋಜನೆಯಡಿ ಸಿಲಿಂಡರ್ ಪಡೆಯಲು ಸುಮಾರು 3 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ ಎಂದಿದ್ದಾರೆ.

  ಬೆಳ್ತಂಗಡಿ : ಬಿಎಸ್‌ಎನ್‌ಎಲ್ ಸಂಸ್ಥೆಯಲ್ಲಿ 2 ದಶಕಕ್ಕೂ ಹೆಚ್ಚು ಕಾಲ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಸೇರಿದಂತೆ ವಿವಿಧ ಸವಲತ್ತುಗಳನ್ನು ನೀಡುವಂತೆ ಒತ್ತಾಯಿಸಿ ಜ. 12ರಿಂದ ಮಂಗಳೂರಿನ ಕಾರ್ಮಿಕ ಆಯುಕ್ತರ ಕಚೇರಿ ಎದುರು ಅನಿರ್ಧಿಷ್ಠಾವದಿ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ದಿನೇಶ್ ಗೌಡ ತಿಳಿಸಿದ್ದಾರೆ.

sajikumar copyಬೆಳ್ತಂಗಡಿ : ನೆಲ್ಯಾಡಿ, ಆಲಂಕಾರು ಶಾಖಾ ಕಛೇರಿ ಮತ್ತು ನೆಲ್ಯಾಡಿ ಸಬ್ ಸ್ಟೇಷನ್ ನಲ್ಲಿ ಜೆ.ಇ. ಆಗಿ ಕಳೆದ ಎರಡುವರೆ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಇಚಿಲಂಪಾಡಿ ಮೂಲದ ಸಜಿಕುಮಾರ್ ಇವರಿಗೆ ಭಡ್ತಿಯಾಗಿ ಬೆಳ್ತಂಗಡಿ ನಗರ ಸಹಾಯಕ ಇಂಜಿನಿಯರ್ ಆಗಿ ಭಡ್ತಿ ಹೊಂದಿದ್ದಾರೆ. ನೆಲ್ಯಾಡಿಯ ಜವಾಬ್ದಾರಿ ಯಲ್ಲದೆ ಹೆಚ್ಚುವರಿಯಾಗಿ ಕಡಬ ವಿಭಾಗದ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ತಾಂತ್ರಿಕ ಸಹಾಯಕ ಇಂಜಿನಿಯರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದ ಇವರು ಭಡ್ತಿಗೊಂಡು ಬೆಳ್ತಂಗಡಿಗೆ ವರ್ಗಾವಣೆಯಾಗಿದ್ದಾರೆ.

viveka 1

viveka 2

viveka 4

viveka

ಬೆಳ್ತಂಗಡಿ : ಇಂದು ತಾಲೂಕು ಪಂಚಾಯತಿ ಸಭಾಭವನದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ-2017ನ್ನು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ರಾಜಗುರು ಹೆಬ್ಬಾರ್ ನೆರವೇರಸಿದರು.
ಸಭಾಧ್ಯಕ್ಷತೆಯನ್ನು ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸಿ.ಆರ್ ನರೇಂದ್ರ ಆಗಮಿಸಿದ್ದರು. ಬೆಳ್ತಂಗಡಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಲಕ್ಷ್ಮಣ ಶೆಟ್ಟಿ ಪ್ರಧಾನ ಭಾಷಣಕಾರರಾಗಿದ್ದರು. ಈ ಸಂದರ್ಭದಲ್ಲಿ ಅನೇಕ ಗಣ್ಯರು ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

thungappa bangera pressmeet copyಪುಂಜಾಲಕಟ್ಟೆ : ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ, ಜೆ.ಸಿ.ಐ. ಮಡಂತ್ಯಾರು ಇದರ ಸಂಯುಕ್ತ ಆಶ್ರಯದಲ್ಲಿ ಮಾ.5ರಂದು 9ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮತ್ತು ಫೆ.26ರಿಂದ ಮಾ.4ರ ತನಕ ದಿ| ಶಿಶಿರ್ ಕುಮಾರ್ ಪಿ.ಎಸ್. ಇವರ ಸ್ಮರಣಾರ್ಥ ದ.ಕ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಫ್ರೆಂಡ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ತಿಳಿಸಿದ್ದಾರೆ.
ಅವರು ಬಂಟ್ವಾಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. 33ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ 33 ವರ್ಷಗಳಿಂದ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿ, ವಿವಿಧ ಸಾಧಕರಿಗೆ ಸ್ವಸ್ತಿಕ್ ಪುರಸ್ಕಾರ ರಾಜ್ಯ ಪ್ರಶಸ್ತಿ ನೀಡುವ ಉತ್ತಮ ಕಾರ್ಯ ಮಾಡುತ್ತಿದೆ. ಎಂ. ತುಂಗಪ್ಪ ಬಂಗೇರರು ೧೯೮೩ರಲ್ಲಿ ಸಮಾನ ಮನಸ್ಕ ಯುವಕರೊಂದಿಗೆ ಸ್ವಸ್ತಿಕ್ ಕ್ರಿಕೆಟ್ ತಂಡವನ್ನು ಕಟ್ಟಿಕೊಂಡು ಕ್ಲಬ್‌ನ್ನು ಸ್ಥಾಪನೆಗೊಳಿಸಿ ನಿರಂತರ ಕಬಡ್ಡಿ ಪಂದ್ಯಾಟ ಆಯೋಜಿಸುತ್ತಿರುವುದು ಕ್ಲಬ್‌ನ ಹೆಗ್ಗಳಿಕೆ ಎಂದರು.
ಇದರ ಜೊತೆಗೆ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳ ಜೊತೆಗೆ ಸ್ವಸ್ತಿ ಸಿರಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ಸಾಮೂಹಿಕ ವಿವಾಹದೊಂದಿಗೆ ಅದ್ದೂರಿಯಾಗಿ ಆಚರಿಸಿ ನಾಡಿನ ಗಮನ ಸೆಳೆದಿದೆ ಉಚಿತ ಸಾಮೂಹಿಕ ವಿವಾಹಕ್ಕೆ ಸಂಬಂಧಿಸಿದಂತೆ 10 ಜೋಡಿಗಿಂತ ಮೇಲ್ಪಟ್ಟು ಪ.ಜಾತಿಯ ವಧುವರರು ಭಾಗವಹಿಸಿದ್ದಲ್ಲಿ ಸರಕಾರದಿಂದ ತಲಾ ರೂ. 5೦ಸಾವಿರ ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದರು. ನಾಟಕದಲ್ಲಿ ಆಯ್ದ 7 ತಂಡಗಳಿಗೆ ಮಾತ್ರ ಅವಕಾಶವಿದ್ದು, ಪ್ರಥಮ ರೂ.30ಸಾವಿರ, ದ್ವೀತಿಯ ರೂ.20ಸಾವಿರ, ತೃತೀಯ ಮತ್ತು ಚತುರ್ಥ ತಲಾ ರೂ.10ಸಾವಿರ ಬಹುಮಾನ ಜೊತೆಗೆ ವೈಯಕ್ತಿಕ ಬಹುಮಾನಗಳಿವೆ. ಸ್ಪರ್ಧಾ ತಂಡಕ್ಕೆ ರೂ.10 ಸಾವಿರ ಭತ್ಯೆ ನೀಡಲಾಗುವುದು ಹೆಚ್ಚಿನ ಮಾಹಿತಿಗೆ 9901098038ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಲಬ್‌ನ ಅಧ್ಯಕ್ಷ ಪ್ರಶಾಂತ್ ಎಂ., ಕಾರ್ಯದರ್ಶಿ ಜಯರಾಜ್, ಹೆಚ್.ಕೆ. ನಯನಾಡು, ಪ್ರಭಾಕರ ಪಿ.ಎಂ, ರಾಜೇಶ್ ಪುಳಿಮಜಲು ಉಪಸ್ಥಿತರಿದ್ದರು.

bdy varshikothsava copyಬೆಳ್ತಂಗಡಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರದ ಸಹಯೋಗದೊಂದಿಗೆ ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ ಯಲಹಂಕದ 20ನೇ ವಾರ್ಷಿಕೋತ್ಸವ ಜ.08ರಂದು ಬೆಂಗಳೂರು ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಸಭಾಂಗಣದ ಯಲಹಂಕದಲ್ಲಿ ನಡೆಯಿತು.
ಈ ಕಾರ‍್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರು ಉದ್ಯಮಿ ಗೋವಿಂದೂರು ವೆಂಕಪ್ಪ ಹೆಗ್ಡೆ ಉದ್ಘಾಟಿಸಿ, ದಕ್ಷಿಣ ಕನ್ನಡದವರು ಹೃದಯ ಶ್ರೀಮಂತಿಕೆ ಉಳ್ಳವರು. ಬುದ್ದಿ ಜೀವಿಗಳು. 20 ವರ್ಷದಿಂದ ಈ ಸಂಘವನ್ನು ಕಟ್ಟಿ ಜನರನ್ನು ಒಗ್ಗೂಟಿಸಿದ್ದೀರಿ. ಈ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರು ಸಾಹಿತಿಗಳಾದ ಬೊಳುವಾರು ಮಹಮ್ಮದ್ ಕುಂಞಿ, ಕನ್ನಡದ ಹಿರಿಯ ಚಲನಚಿತ್ರ ನಟಿ ಶ್ರೀಮತಿ ಸತ್ಯಭಾಮ ಆರೂರು, ರಾಜು ಬಲ್ಲಾಲ್ ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ದಯಾನಂದ ಕೊಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಚಿತ್ರಕಲಾ ರಘುನಾಥ ರೈ, ಕೋಶಾಧಿಕಾರಿಯಾದ ಅಲಂಗಾರು ಜಯರಾಮ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷರುಗಳಾದ ಕೆ.ವಿಠಲ ಶೆಟ್ಟಿ, ಆನಂದ ಶೆಟ್ಟಿ, ಕೆ.ಲಕ್ಷ್ಮೀ ನಾರಾಯಣ ಆಳ್ವ, ಪರಿಕಾ ಭಾಸ್ಕರ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ಕನ್ನಡದ ಹಿರಿಯ ಚಲನಚಿತ್ರ ನಟಿ ಸತ್ಯಭಾಮ ಇವರನ್ನು ಸಂಘದಿಂದ ಸನ್ಮಾನಿಸಲಾಯಿತು. ಚಿತ್ರಕಲಾ ರಘುನಾಥ ರೈ ವರದಿ ಮಂಡಿಸಿದರು. ರಾಮಚಂದ್ರ ಮಿಚಾರು ಕಾರ‍್ಯಕ್ರಮ ನಿರೂಪಿಸಿ, ಸಂಘದ ಉಪಾಧ್ಯಕ್ಷರಾದ ಬಾಬು ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿಯಾದ ಚಿತ್ರಕಲಾ, ರಘುನಾಥ ರೈ ಧನ್ಯವಾದವಿತ್ತರು.
ನಂತರ ಶ್ರೀನಿವಾಸ ನಿರ್ದೇಶನದಲ್ಲಿ ಸಮಿತಿ ಸದಸ್ಯರಿಂದ ಯಕ್ಷಗಾನ ನಡೆಯಿತು. ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ujire janardhana temple 1 copy

ujire janardhana temple copy

ಉಜಿರೆ : ಇತಿಹಾಸ ಪ್ರಸಿದ್ಧ ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಶ್ರೀ ಜನಾರ್ದನ ದೇವರ ವಾರ್ಷಿಕ ಜಾತ್ರೆಯು ಜ.14 ಮಕರ ಸಂಕ್ರಾಂತಿಯಂದು ಪ್ರಾರಂಭಗೊಂಡು, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜ.24ರ ವರೆಗೆ ನಡೆಯಲಿದೆ.
ಜ.19ರಂದು ಸಂಜೆ 5 ಗಂಟೆಗೆ ಸದಾಶಿವ ಶೆಟ್ಟಿ ಮತ್ತು ಕುಟುಂಬಸ್ಥರು ದುರ್ಗಾನಿಲಯ, ಉಜಿರೆ ಇವರು ಸೇವಾ ರೂಪವಾಗಿ ಶ್ರೀ ಜನಾರ್ಧನ ದೇವರ ಸನ್ನಿಧಿಗೆ ನೂತನ ಚಂದ್ರಮಂಡಲ ರಥವನ್ನು ಸಮರ್ಪಿಸಲಿದ್ದಾರೆ. ಜ.೨೦ರಂದು ರಾತ್ರಿ ವಿಶಿಷ್ಟ ಕಾಷ್ಠಕಲೆಯಿಂದ ರಚಿಸಲಾದ ನೂತನ ಚಂದ್ರಮಂಡಲ ರಥದಲ್ಲಿ ಶ್ರೀ ಜನಾರ್ದನ ದೇವರ ಉತ್ಸವ ನಡೆಯಲಿದೆ.
ಜ.14ರಂದು ರಾತ್ರಿ ಧ್ವಜಾರೋಹಣ, ಭಂಡಾರ ಏರುವುದು. ಜ.15ರಂದು ರಾತ್ರಿ ಬದಿ ಮೇಲೆ ಉಳ್ಳಾಲ್ತಿ, ಪೊಸಲ್ತಾಯಿ ಕುಮಾರಸ್ವಾಮಿ ದೈವಗಳಿಗೆ ನೇಮ. ಜ.16ರಂದು ಸಾಯಂಕಾಲ ಬದಿ ಮೇಲೆ ನೆತ್ತರ ಮುಗುಳಿ ದೈವದ ನೇಮ, ರಾತ್ರಿ ಭಂಡಾರ ಇಳಿಯುವುದು. ದೇವಸ್ಥಾನದಲ್ಲಿ ಉತ್ಸವ, ಶ್ರೀ ಕೃಷ್ಣ ಮಂಟಪದಲ್ಲಿ. ಜ.18ರಂದು ರಾತ್ರಿ ಅಶ್ವತ್ಥಕಟ್ಟೆ ಉತ್ಸವ, ಜ.18ರಂದು ರಾತ್ರಿ ಪುಷ್ಕರಣಿ ಕಟ್ಟೆ ಉತ್ಸವ, ಜ.19ರಂದು ರಾತ್ರಿ ಶ್ರೀ ಜನಾರ್ದನ ದೇವರ ಪೇಟೆಸವಾರಿ ಉತ್ಸವ. ಜ.20ರಂದು ರಾತ್ರಿ ಚಂದ್ರಮಂಡಲ ರಥೋತ್ಸವ. 21ರಂದು ಬೆಳಿಗ್ಗೆ ದೇವರ ಉತ್ಸವ ದರ್ಶನಬಲಿ. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಶ್ರೀ ಮಹಾರಥೋತ್ಸವ, ಶ್ರೀ ಭೂತ ಬಲಿ, ಜ.22ರಂದು ಬೆಳಿಗ್ಗೆ ಕವಾಟೋದ್ಘಾಟನೆ. ಸಾಯಂಕಾಲ ಅವಭೃತ ರಾತ್ರಿ ಧ್ವಜಾವರೋಹಣ ನಡೆಯಲಿದೆ. 24ರಂದು ಬೆಳಿಗ್ಗೆ ಕಲಶಾಭಿಷೇಕ, ಸಂಪ್ರೋಕ್ಷಣೆ. ಜ.17ರಿಂದ 22ರವರೆಗೆ ಪ್ರತಿದಿನ ಸಾಯಂಕಾಲ ಗಂಟೆ 6.30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀ ಶಾರದಾ ಮಂಟಪದಲ್ಲಿ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಯು.ವಿಜಯರಾಘವ ಪಡ್ವೆಟ್ನಾಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

uruvalu camp copyಉರುವಾಲು : ಶ್ರೀ ಭಾರತಿ ವಿದ್ಯಾಸಂಸ್ಥೆ ಉರುವಾಲು ಇಲ್ಲಿ ಡಿ.24ರಿಂದ ಡಿ.30 ರವರೆಗೆ ಶ್ರೀ ಭಾರತಿ ಕಾಲೇಜು ನಂತೂರು ಇವರ ವತಿಯಿಂದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರವು ಏರ್ಪಟ್ಟಿತು.
ಡಿ.24ರಂದು ಉದ್ಘಾಟನಾ ಸಮಾರಂಭವು ಜರಗಿತು. ವೇದಿಕೆಯಲ್ಲಿ ಶ್ರೀ ಭಾರತಿ ಕಾಲೇಜು ನಂತೂರು ಇದರ ಅಧ್ಯಕ್ಷ, ಪ್ರಾಂಶುಪಾಲರು, ಯೋಜನಾಧಿಕಾರಿ ಗಳು ಹಾಗೂ ಶ್ರೀ ಭಾರತೀ ವಿದ್ಯಾಸಂಸ್ಥೇ ಉರುವಾಲು ಇದರ ಸೇವಾ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತಾಧಿಕಾರಿ ಗಳು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಕೊಡುಗೈ ದಾನಿ ರವಿರಾಜ ಉರುವಾಲು ಆಗಮಿಸಿದ್ದರು. ಈ ಯೋಜನೆಯ ವತಿಯಿಂದ ಡಿ.27ರಂದು ಶ್ರೀ ಭಾರತೀ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಎ.ಬಿ ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು ಇಲ್ಲಿನ ಶಿಕ್ಷಣಾರ್ಥಿಗಳು ಮಕ್ಕಳ ದಂತ, ಕಣ್ಣು, ಕಿವಿ, ನಾಲಗೆ ಹಾಗೂ ಆರೋಗ್ಯ ತಪಾಸಣೆ ಮಾಡಿದರು. ಏಳು ದಿನಗಳ ಕಾಲ ನಡೆದ ಶಿಬಿರದಲ್ಲಿ ಶಿಬಿರಾರ್ಥಿಗಳು ಶಾಲಾ ಆಟದ ಮೈದಾನ ಹಾಗೂ ಶಾಲಾ ಪರಿಸರ ವನ್ನು ಸ್ವಚ್ಛಗೊಳಿಸಿದರು. ಡಿ.೩೦ರಂದು ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ| ಜತ್ತಿ ಈಶ್ವರ ಭಟ್ ವಹಿಸಿದ್ದರು. ವೇದಿಕೆಯಲ್ಲಿ ಕಣಿಯೂರು ಗ್ರಾ.ಪಂ ಅಧ್ಯಕ್ಷ ಸುನೀಲ್ ಬೇಂಗಾ, ರೈತಬಂಧು ಮಾಲಕ ಶಿವಶಂಕರ ನಾಕ್, ಶಾಲಾ ಸೇವಾ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಹಾಗೂ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

patturu chinnara kalavara copyಪಟ್ಟೂರು : ಶ್ರೀ ರಾಮ ವಿದ್ಯಾಸಂಸ್ಥೆ ಪಟ್ಟೂರು ಇಲ್ಲಿನ ವಾರ್ಷಿಕೋತ್ಸವ ಚಿಣ್ಣರ ಕಲರವ 2016-17 ಈ ಕಾರ್ಯಕ್ರಮವು ಡಿ.31 ರಂದು ನಡೆಯಿತು.
ಬೆಳಿಗ್ಗೆ ಶ್ರೀ ರಾಮ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ನಾರಾಯಣ ಶಬರಾಯ ಧ್ವಜಾರೋಹಣವನ್ನು ನೆರವೇರಿಸಿದರು. ಸಭಾ ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಡ್ವ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಪಟ್ರಮೆ ಗ್ರಾ.ಪಂ. ಉಪಾಧ್ಯಕ್ಷೆ ಬಾಬಿ, ಶ್ರೀರಾಮ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ ಶೆಟ್ಟಿ ದೇರಾಜೆ, ಸದಸ್ಯರುಗಳಾದ ನಾರಾಯಣ ಶಬರಾಯ , ಶಿವರಾಮಭಟ್ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಥಮಿಕ ವಿಭಾಗದ ಶಿಕ್ಷಕಿ ಸೌಮ್ಯಶ್ರೀ ಕೆ. ಆರ್.ಸ್ವಾಗತಿಸಿದರು. ಪ್ರೌಢಶಾಲಾ ವಿಭಾಗದ ಶಿಕ್ಷಕಿ ಗುಣವತಿ ಕೆ.ಎನ್. ವಂದಿಸಿದರು. ಶಿಕ್ಷಕಿ ಕೋಮಲಾಂಗಿ ಕೆ. ನಿರೂಪಿಸಿದರು.
ಪುತ್ತೂರು ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ. ಪ್ರಭಾಕರ ಭಟ್ ಇವರು ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಹೃದಯವಂತನಾಗಲು ಸಾಧ್ಯವೆಂದು ಸಂಸ್ಕಾರಯುತ ಶಿಕ್ಷಣದ ಮಹತ್ವವನ್ನು ತಿಳಿಸಿದರು.
ಶ್ರೀರಾಮ ವಿದ್ಯಾ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಡ್ವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಮಾಜಿ ಸೈನಿಕ ಕೃಷ್ಣ ಸ್ವಾಮಿ ಬಿ.ಎಸ್., ಪಿಡಬ್ಲ್ಯುಡಿ ಗುತ್ತಿಗೆದಾರ ಪ್ರಕಾಶ್ ಟಿ. ಪಿಲಿಕ್ಕಭೆ, ಕಡಬ ಸರಸ್ವತೀ ವಿದ್ಯಾಲಯ ಸಂಚಾಲಕ ವೆಂಕಟ್ರಮಣ ರಾವ್, ಪಟ್ರಮೆ ಗ್ರಾ.ಪಂ. ಅಧ್ಯಕ್ಷ ನವೀನ್ ಕಜೆ, ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ದೇರಾಜೆ ಉಪಸ್ಥಿತರಿದ್ದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಚೆಂಡೆ ವಾದನದ ಮೂಲಕ ವೇದಿಕೆಗೆ ಕರೆತಂದು ದೀಪ ಪ್ರಜ್ವಲನ ಮಾಡಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಗೋಪೂಜೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಸಂಸ್ಥೆಯ ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ ನಡೆಯಿತು. ಶಾಲಾ ಮಕ್ಕಳಿಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಪ್ರೌಢಶಾಲಾ ಮುಖ್ಯ ಶಿಕ್ಷಕ ಉಮೇಶ್ ಬಿ. ವರದಿ ವಾಚಿಸಿದರು. ಪುರಂದರ ಕಡಿರ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಲಾ ವೈಭವಗಳು ಜರಗಿತು. ಪ್ರಾಥಮಿಕ ವಿಭಾಗದ ಶಿಕ್ಷಕಿ ಗೀತಾ ಕೆ ಸಾಂಸ್ಕೃತಿಕ ಕಲಾ ವೈಭವದ ನಿರೂಪಣೆ ಗೈದರು. ಮುಖ್ಯ ಶಿಕ್ಷಕ ಚಂದ್ರಶೇಖರ್ ಶೇಟ್ ವಂದಿಸಿದರು.

mundaje ca bank pan card abhiyana copy  ಪಾನ್‌ಕಾರ್ಡ್ ನೊಂದಾವಣೆ ಅಭಿಯಾನ ಕ್ಯಾಶ್‌ಲೆಸ್ ವ್ಯವಹಾರದ ಬಗ್ಗೆ ಮಾಹಿತಿ ಟ್ಯಾಕ್ಸ್ ವ್ಯವಹಾರ ಮಾಹಿತಿ

ಮುಂಡಾಜೆ : ಕೇಂದ್ರ ಸರಕಾರದ ಹೊಸ ಆರ್ಥಿಕ ಕ್ರಾಂತಿಯ ನಂತರದ ಬೆಳವಣಿಗೆಯಂತೆ ಸಹಕಾರಿ ಸಂಘದ ಸದಸ್ಯರಿಗೆ ಕ್ಯಾಶ್‌ಲೆಸ್ ವ್ಯವಹಾರ, ಟ್ಯಾಕ್ಸ್ ಬಗ್ಗೆ ಮಾಹಿತಿ, ಡಿಜಿಟಲೀಕರಣ ಆರ್ಥಿಕ ವ್ಯವಹಾರ ಮತ್ತು ಪಾನ್‌ಕಾರ್ಡ್ ನೊಂದಾವಣಾ ಮಾಹಿತಿ ಅಭಿಯಾನ ಜ.10 ರಂದು 3 ಕಡೆ ನಡೆಸಲಾಯಿತು. ಕಕ್ಕಿಂಜೆ ಶಾಖೆ, ನೆರಿಯ ಶಾಖೆ ಮತ್ತು ಮುಂಡಾಜೆಯಲ್ಲಿ ನಡೆದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಸಿ.ಎ. ವೆಂಕಟ್ರಮಣ, ಗಜಾನನ ವಝೆ, ಥೋಮಸ್ ನೆರಿಯ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ಎನ್.ಎಸ್. ಗೋಖಲೆ ವಹಿಸಿದ್ದು, ಬದಲಾದ ಸಮಾಜದಲ್ಲಿ ಬದಲಾವಣೆ ಅನಿವಾರ್ಯ. ಉಳಿದ ಸದಸ್ಯರುಗಳಿಗೆ ಜ. 17 ರ ವಿಶೇಷ ಸಭೆಯಲ್ಲಿ ಮಾಹಿತಿ ನೀಡಲಾಗುವುದು ಎಂದರು. ಉಪಾಧ್ಯಕ್ಷ ವಿ.ಟಿ. ಸೆಬಾಸ್ಟಿಯನ್, ನಿರ್ದೇಶಕರಾದ ಜ್ಯೋತಿ ಜೆ. ಫಡ್ಕೆ, ಮಿನಿ ಬೇಬಿ, ಲಿಂಗಪ್ಪ ಗೌಡ, ಗೋವಿಂದ ಚಿಪ್ಲೊನ್ಕರ್, ಪ್ರಕಾಶ್ ನಾರಾಯಣ ರಾವ್ ಭಾಗಿಯಾಗಿದ್ದರು. ಸುಮಾರು 250 ಮಂದಿ ಸದಸ್ಯರು, ಸಂಘದ ಸಿಬ್ಬಂದಿಗಳು ಇದರ ಪ್ರಯೋಜನ ಪಡೆದರು. ಚಾರ್ಟೆಡ್ ಎಕೌಂಟೆಂಟ್ ಗಾಯತ್ರಿ ಉಪಸ್ಥಿತರಿದ್ದರು. ಸಂಘದ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ ಕಾರ್ಯಕ್ರಮ ಸಂಯೋಜಿಸಿ ಸ್ವಾಗತಿಸಿ ವಂದಿಸಿದರು.
ಚಿತ್ರ: ನಾರಾಯಣ ಫಡ್ಕೆ.

prashanth copy

kishor copy

ಉಜಿರೆ : ಉಜಿರೆ ಯುವವಾಹಿನಿ ಗ್ರಾಮ ಸಮಿತಿಯ ರಚನೆಯು ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಪ್ರಶಾಂತ್ ಬರೆಮೇಲು, ಕಾರ್ಯದರ್ಶಿಯಾಗಿ ಕಿಶೋರ್ ಪೆರ್ಲ ಆಯ್ಕೆಯಾಗಿದ್ದಾರೆ. ಇತರ ಪದಾಧಿಕಾರಿಗಳಾಗಿ ಗೌರವ ಸಲಹೆಗಾರರಾಗಿ ರವಿಕುಮಾರ್ ಬರೆಮೇಲು, ಉಪಾಧ್ಯಕ್ಷರಾಗಿ ಚಂದ್ರಶೇಖರ್ ನಿನ್ನಿಕಲ್ಲು, ಕೋಶಾಧಿಕಾರಿಯಾಗಿ ಶರತ್ ಕುಂಜರ್ಪ, ಜೊತೆ ಕಾರ್ಯದರ್ಶಿಯಾಗಿ ಕೇಶವ ನಿನ್ನಿಕಲ್ಲು, ಮಹಿಳಾ ಪ್ರತಿನಿಧಿಯಾಗಿ ಲೀಲಾವತಿ ಅಜಿತ್ ನಗರ, ವಿದ್ಯಾರ್ಥಿ ಪ್ರತಿನಿಧಿಯಾಗಿ ಗುರುಪ್ರಸಾದ್ ಕೋಟ್ಯಾನ್, ಸಂಘ ಸಂಸ್ಥೆಗಳ ಪ್ರತಿನಿಧಿ ಧೀರಜ್ ಕುಂಜರ್ಪ, ಕ್ರೀಡಾ ಪ್ರತಿನಿಧಿಯಾಗಿ ರೀತೇಶ್ ಪೂಜಾರಿ, ಸಾಂಸ್ಕೃತಿಕ ಪ್ರತಿನಿಧಿಯಾಗಿ ಹರೀಶ್ ಪೂಜಾರಿ ಪೆರ್ಲ ಹಾಗೂ ನಿರ್ದೇಶಕರುಗಳಾಗಿ ಪ್ರವೀಣ್ ಪೂಜಾರಿ ಮೈಕಾಡಿ, ವಸಂತ ಪೂಜಾರಿ ಬಾಕ್ರೊಟ್ಟು, ಮಧುಕರ ಪೂಜಾರಿ ಬರೆಮೇಲು, ಸಂತೋಷ್ ಮಾಚಾರು, ದಿನೇಶ್ ಪೂಜಾರಿ ರಂಜಿತ್ ನರ್ಸರಿ, ನಿತೇಶ್ ಕಲ್ಲೆ, ಸಲಹೆಗಾರರಾಗಿ ಹರೀಶ್ ಕುಮಾರ್ ಬರೆಮೇಲು, ರಮೇಶ್ ಪೂಜಾರಿ ಮಾಚಾರು, ಉದಯ ಮಾಚಾರು, ಗಿರೀಶ್ ಪೆರ್ಲ, ರಮೇಶ್ ಪೂಜಾರಿ ಅಜಿತ್‌ನಗರ, ಸುರೇಶ್ ಪೂಜಾರಿ ಪೆರ್ಲ, ಉಮೇಶ್ ಪೂಜಾರಿ ಪಾರ ಉಜಿರೆ, ಸುರೇಶ್ ಪೂಜಾರಿ ವಿದ್ಯಾನಗರ, ಸಚಿನ್ ಕಲ್ಲೆ, ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕರಾದ ಸಂಪತ್ ಬಿ.ಸುವರ್ಣ, ಯುವ ವಾಹಿನಿಯ ತಾಲೂಕು ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಯುವವಾಹಿನಿಯ ಉಪಾಧ್ಯಕ್ಷ ಅಶ್ವಥ್ ಕುಮಾರ್, ಯುವವಾಹಿನಿ ಕಾರ್ಯದರ್ಶಿ ಪ್ರಶಾಂತ್ ಮಚ್ಚಿನ, ಯುವ ವಾಹಿನಿಯ ಮಾಜಿ ಅಧ್ಯಕ್ಷರಾದ ರಾಕೇಶ್ ಕುಮಾರ್ ಮೂಡುಕೋಡಿ, ಉಜಿರೆಯ ಉದ್ಯಮಿ ರವಿಕುಮಾರ್ ಬರೆಮೇಲು, ನಿರ್ದೇಶಕರುಗಳಾದ ಯಶೋಧರ ಚಾರ್ಮಾಡಿ, ಜಯರಾಜ್ ನಡಕ್ಕರ, ಪ್ರದೀಪ್ ಮಚ್ಚಿನ, ಮೊದಲಾವದರು ಉಪಸ್ಥಿತರಿದ್ದರು.

rudset tarabeti savanda copyಉಜಿರೆ : ರುಡ್‌ಸೆಟ್ ಸಂಸ್ಥೆಯ ತರಬೇತಿಯಿಂದ ನಿರುದ್ಯೋಗ ನಿವಾರಣೆ ಮಾತ್ರವಲ್ಲದೇ ಬದುಕಿನಲ್ಲಿ ಅನೇಕ ಜೀವನ ಮೌಲ್ಯಗಳನ್ನು ಕೂಡ ಅಳವಡಿಸಿಕೊಳ್ಳಬಹುದು. ರುಡ್‌ಸಂಸ್ಥೆಯಲ್ಲಿ ತರಬೇತಿಯನ್ನು ಪಡೆಯಲು ದೊರೆತ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬದುಕಿರಿ ಎಂದು ಸಿಂಡಿಕೇಟ್‌ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಸ್. ಮಲ್ಲಿಕಾರ್ಜುನ ರಾವ್ ಅಭಿಪ್ರಾಯಪಟ್ಟರು. ಅವರು ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ನಡೆಯುತ್ತಿರುವ ತರಬೇತಿ ಕಾರ್ಯಕ್ರಮದ ಶಿಬಿರಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಿಂಡಿಕೇಟ್‌ಬ್ಯಾಂಕಿನ ಉಪ ಮಹಾಪ್ರಬಂಧಕ ಎಸ್.ಎಮ್. ದೇಸಾಯಿ ಮತ್ತು ಆರ್‌ಸೆಟಿಗಳ ರಾಷ್ಟ್ರೀಯ ನಿರ್ದೇಶಕ ಕೆ.ಎನ್. ಜನಾರ್ಧನ್ ಉಪಸ್ಥಿತರಿದ್ದರು. ರುಡ್‌ಸೆಟ್ ಸಂಸ್ಥೆಯ ಕೇಂದ್ರ ಕಛೇರಿಯ ಕಾರ್ಯನಿರ್ವಾಹಕ ನಿರ್ದೇಶಕ ಅರುಣ್ ವಿ.ಜೆ  ಅತಿಥಿಗಳನ್ನು ಸ್ವಾಗತಿಸಿ, ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಶ್ರೀಮತಿ ಅನಸೂಯ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ನಿರ್ದೇಶಕ ಅಜಿತ್ ಕೆ. ರಾಜಣ್ಣವರ್ ವಂದಿಸಿದರು. ಉಪನ್ಯಾಸಕ ಅಬ್ರಹಾಂ ಜೇಮ್ಸ್ ಸಹಕರಿಸಿದರು.

Ujire jilla sahithya sabhe copyಸರಕಾರಿ ಅಧಿಕಾರಿಗಳು, ಸಂಘ ಸಂಸ್ಥೆ ಪದಾಧಿಕಾರಿಗಳು, ಸಮಿತಿಯ ಪದಾಧಿಕಾರಿಗಳ ಜಂಟಿ ಸಭೆ

ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು

* ರವೀಂದ್ರ ಒಪ್ಪಂತಾಯ ಮಾತನಾಡಿ, ಸಮ್ಮೇಳನದ ದಿನಗಳಲ್ಲಿ ಗುರುವಾಯನಕೆರೆಯಿಂದ ಉಜಿರೆ ವರೆಗೆ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಪೊಲೀಸ್ ಕ್ರಮ ಆಗಬೇಕು ಮತ್ತು ಬೆಳಾಲಿನಿಂದ ಉಜಿರೆಗೆ ಬರುವ ರಸ್ತೆ ತೀರಾ ನಾದುರಸ್ಥಿಯಲ್ಲಿದ್ದು ಗುಂಡಿ ಮುಚ್ಚುವ ಕೆಲಸ ಆಗಬೇಕು ಎಂದರು. ಎರಡಕ್ಕೂ ಕ್ರಮ ಕೈಗೊಳ್ಳುವು ದಾಗಿ ಶಾಸಕರು ಭರವಸೆ ನೀಡಿದರು.
* ಶಾಲಾ ಮಕ್ಕಳ ಭಾಗವಹಿಸುವಿಕೆಯ ಅನುಕೂಲಕ್ಕಾಗಿ ಬಸ್ಸಿನ ವ್ಯವಸ್ಥೆ ಬಂದರೆ ಒಳ್ಳೆದು.
* ಸಮ್ಮೇಳನದ ದಿನಗಳಲ್ಲಿ ಉಜಿರೆಯಲ್ಲಿ ಸ್ವಚ್ಚತೆಗೆ ಆಧ್ಯತೆ ಕೊಡಬೇಕು. ಪ್ರತೀ ಸರಕಾರಿ ನೌಕರರೂ (ಎ ಇಂದಿ ಡಿ ವರೆಗೆ) ಸಮ್ಮೇಳನ ಸದಸ್ಯತ್ವವನ್ನು ಪಡೆಯುವುದನ್ನು ಕಡ್ಡಾಯಗೊಳಿಸಿದಲ್ಲಿ ಸಂಪನ್ಮೂಲ ಕ್ರೂಢೀಕರಣ ಸುಲಭ ಸಾಧ್ಯವಾಗಲಿದೆ ಎಂದು ಗಮಕ ಪರಿಷತ್ ಅಧ್ಯಕ್ಷರೂ ಆಗಿರುವ ಸುರೇಶ್ ಕುದ್ರಂತಾಯ ಹೇಳಿದರು.
* ತಾಲೂಕಿನಲ್ಲಿ 680 ಶಿಕ್ಷಕರಿದ್ದು ಕನಿಷ್ಠ ತಲಾ ೧೦೦ ರೂ. ನಂತೆ ದೇಣಿಗೆ ಸಂಗ್ರಹಿಸಿ ಕೊಡುತ್ತೇವೆ. ಮಕ್ಕಳನ್ನು ಸಮ್ಮೇಳನಕ್ಕೆ ಕರೆತರುವುದು ಮತ್ತು ಮಕ್ಕಳಿಂದ ತಲಾ 10 ರೂ. ಗಳಂತೆ ದೇಣಿಗೆ ಸಂಗ್ರಹಿಸುವ ಬಗ್ಗೆ ವಲಯವಾರು ಮಟ್ಟದಲ್ಲಿ ವಿಂಗಡಿಸಿ ಮಾಡಿದಲ್ಲಿ ಅನುಕೂಲವಾಗಲಿದೆ. ಸಮ್ಮೇಳನದಲ್ಲಿ ಭಾಗವಹಿಸಲು ಓಓಡಿ ನೀಡಲಾಗಿದೆ. ಶನಿವಾರ ಒಂದು ದಿನ ಜಿಲ್ಲೆಯಲ್ಲಿ ಶಾಲೆ ರಜೆ ಘೋಷಿಸಿದರೆ ಮಕ್ಕಳನ್ನು ಕರೆತರಲು ಸುಲಭ ಎಂದು ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಹೆಗ್ಡೆ ಹಟ್ಟಾಜೆಗುತ್ತು ಹೇಳಿದರು. ಈ ಬಗ್ಗೆ ಕ್ರಮಕೈಗೊಳ್ಳು ವುದಾಗಿ ಶಾಸಕರು ಭರವಸೆ ನೀಡಿದರು.
* ಸಹಕಾರಿ ಸಂಘದಿಂದ ಸಹಕಾರ ನೀಡಲಾಗುವುದು. ಯೋಗೀಶ್ ಕುಮಾರ್ ಕೆ. ಎಸ್.
* ಮಕ್ಕಳ ಸಾಹಿತ್ಯ ಸಮ್ಮೇಳನದ ಬಗ್ಗೆ ಸೋಮಶೇಖರ ಶೆಟ್ಟಿ ಮಾಹಿತಿ ನೀಡಿದರು.
* ಲಯನ್ಸ್ ಕ್ಲಬ್‌ನ ಸಹಕಾರದ ಬಗ್ಗೆ ಅಧ್ಯಕ್ಷೆ ಸುಶೀಲಾ ಎಸ್. ಹೆಗ್ಡೆ ಅವರು ಸಮಿತಿ ಜೊತೆ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಬೆಳ್ತಂಗಡಿ : ಸುಮಾರು 20 ವರ್ಷಗಳ ನಂತರ ನಮ್ಮ ತಾಲೂಕಿನಲ್ಲಿ ಮತ್ತೊಮ್ಮೆ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮಹಾಭಾಗ್ಯ ನಮ್ಮ ಪಾಲಿಗೆ ದೊರೆತಿದ್ದು ಈ ಕಾರ್ಯಕ್ರಮವನ್ನು ನಾವೆಲ್ಲರೂ ನಮ್ಮ ಮನೆಯ ವೈಯುಕ್ತಿ ಕಾರ್ಯಕ್ರಮವೆಂದೇ ಪರಿಗಣಿಸಿ, ಶ್ರಮ ಪಟ್ಟು ಕಾರ್ಯನಿರ್ವಹಿಸಿ ಯಶಸ್ವಿಗೊಳಿಸಬೇಕು ಎಂದು ಶಾಸಕ ವಸಂತ ಬಂಗೇರ ಹೇಳಿದರು.
ಜನವರಿ 27, 28, 29 ರಂದು ಉಜಿರೆಯಲ್ಲಿ ನಡೆಯುವ ದ.ಕ.ಜಿಲ್ಲಾ ಮಟ್ಟದ 21ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ ಜ. 9 ರಂದು ಬೆಳ್ತಂಗಡಿ ಎಸ್‌ಡಿಎಂ ಕಲಾಭವನದಲ್ಲಿ ಕರೆಯಲಾಗಿದ್ದ ಸ್ವಾಗತ ಸಮಿತಿ ಪದಾಧಿಕಾರಿಗಳು, ಸರಕಾರಿ ಇಲಾಖಾ ಮುಖ್ಯಸ್ಥರುಗಳು, ಶಿಕ್ಷಕರ ಸಂಘ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಚ್ಚ ಭಾಷೆ, ಸ್ವಚ್ಚ ಜೀವನ, ಸ್ವಚ್ಚ ಸಮಾಜ ಸಮ್ಮೇಳನದ ಧ್ಯೇಯ: ಕಲ್ಕೂರ
ಸಮ್ಮೇಳನದ ಆಶಯದ ಮಾತುಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಅವರು, ಈ ಬಾರಿ ಸ್ವಚ್ಚ ಭಾಷೆ- ಸ್ವಚ್ಚ ಜೀವನ- ಸ್ವಚ್ಚ ಸಮಾಜ ಎಂಬ ಪ್ರಮುಖ ಪರಿಕಲ್ಪನೆಯಡಿ ಸಮ್ಮೇಳನ ನಡೆಸಲು ಉದ್ಧೇಶಿಸಿದ್ದೇವೆ. ಮೈಸೂರು ಒಡೆಯರಾಗಿದ್ದ ಕೃಷ್ಣ ರಾಜ ಒಡೆಯರ್ ಅವರು ಪ್ರಾರಂಭಿಸಿದ ಸಾಹಿತ್ಯ ಸಮ್ಮೇಳನ ಪರಿಕಲ್ಪನೆ ಇಂದು ಇಲ್ಲಿವರೆಗೆ ಮುಂದುವರಿದುಕೊಂಡು ಬಂದಿದೆ. 1998ರಲ್ಲಿ ಬೆಳ್ತಂಗಡಿ ಸಿವಿಸಿ ಸಭಾಂಗಣದಲ್ಲಿ ಅಮೃತ ಸೋಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆದಿತ್ತು. ದೀರ್ಘ ಅವಧಿಯ ಬಳಿಕ ಇದೀಗ ಮತ್ತೊಮ್ಮೆ ಬೆಳ್ತಂಗಡಿ ತಾಲೂಕಿಗರಿಗೆ ಅವಕಾಶ ಕೂಡಿ ಬಂದಿದೆ. ಇಲ್ಲಿ ಏನೇ ಕಾರ್ಯಕ್ರಮ ಆದರೂ ಅದು ಪರಿಪೂರ್ಣ ನೆಲೆಗಟ್ಟು ಹೊಂದಿರುತ್ತದೆ. ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರ ಗೌರವಾಧ್ಯಕ್ಷತೆಯಲ್ಲಿ ಉಜಿರೆಯ ದಣಿಗಳಾದ ವಿಜಯರಾಘವ ಪಡುವೆಟ್ನಾಯ ಅವರ ಮುತ್ಸದ್ದಿತನದಲ್ಲಿ ಕಾರ್ಯಕ್ರಮ ನಡೆಯಲಿದೆ. ಹಳೆ ಬೇರು ಹೊಸ ಚಿಗುರು ಎಂಬಂತೆ ಪ್ರತಾಪಸಿಂಹ ನಾಯಕ್ ಆದಿಯಾಗಿ ಯುವಕರನ್ನೂ ಸಮಿತಿಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ತಿಳಿಸಿದರು. ಎಲ್ಲರೂ ಈ ಕನ್ನಡದ ಕೈಂಕರ್ಯ ಒಂದಾಗಿ ಕೈ ಜೋಡಿಸಬೇಕು ಎಂದು ಕೇಳಿಕೊಂಡರು. ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ| ಎಂ.ಪಿ. ಶ್ರೀನಾಥ್ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ವಿಜಯರಾಘವ ಪಡುವೆಟ್ನಾಯ ಅವರು ಮಾತನಾಡಿ, ಉಳಿದ ಕಡೆಗಳಲ್ಲಿ ವ್ಯವಸ್ಥೆಯ ದೃಷ್ಟಿಯಿಂದ ಸಮ್ಮೇಳನವನ್ನು ಅಳೆಯುವ ಕೆಲಸವಾದರೆ ಇಲ್ಲಿ ಅರ್ಥಪೂರ್ಣತೆಯ ರೀತಿಯಲ್ಲಿ ಎಲ್ಲರೂ ಕೊಂಡಾಡುವಂತಾಗಬೇಕು ಎಂದು ಇಂಗಿತ ವ್ಯಕ್ತಪಡಿಸಿದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಪ್ರತಾಪಸಿಂಹ ನಾಯಕ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಮ್ಮೇಳನದ ದೃಷ್ಟಿಯಿಂದ ಕೇವಲ ಸ್ವಾಗತ ಸಮಿತಿ ಮತ್ತು ಪರಿಷತ್ ಮಾತ್ರ ಎಂಬುದು ಆಗದೆ ತಾಲೂಕಿನ ಪ್ರತೀ ಮನೆಯಿಂದ 2 ತೆಂಗಿನಕಾಯಿಯಾದರೂ ಸರಿ ಎಲ್ಲರೂ ಇದರಲ್ಲಿ ಸಣ್ಣ-ದೊಡ್ಡ ದೇಣಿಗೆ ನೀಡಿ ಸಂಭ್ರಮಿಸುವಂತಾಗಬೇಕು ಎಂದರು.
ಸಭೆಯಲ್ಲಿ ಜೆಸಿಐ ಉಜಿರೆ ಮತ್ತು ಬೆಳ್ತಂಗಡಿ ಪದಾಧಿಕಾರಿಗಳು, ಲಯನ್ಸ್ ಕ್ಲಬ್, ಮಾಜಿ ಸೈನಿಕರ ಸಂಘ, ಗಮಕ ಕಲಾ ಪರಿಷತ್, ಜಿ.ಪಂ. ಸದಸ್ಯರಾದ ಸೌಮ್ಯಲತಾ ಮತ್ತು ಮಮತಾ ಎಂ. ಶೆಟ್ಟಿ, ಎಸ್.ಡಿ.ಎಂ. ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಕೆ.ಎಸ್. ಮೋಹನ್‌ನಾರಾಯಣ್, ಶ್ರೀಧರ ಜಿ. ಭಿಡೆ, ಯದುಪತಿ ಗೌಡ, ಸಂಪತ್ ಬಿ. ಸುವರ್ಣ, ಟಿ.ಕೆ. ಶರತ್, ಜಗದೀಶ್ ಇಂಜಿನಿಯರ್, ಅನಿಲ್ ನಾಯ್ಗ, ಶಿವಶಂಕರ ಭಟ್, ಶರತ್‌ಕೃಷ್ಣ ಪಡುವೆಟ್ನಾಯ, ಬಾಬು ಮುಗೇರ ಎರ್ನೋಡಿ, ಸವಿತಾ ಜಯದೇವ್, ಲೋಕೇಶ್ವರೀ ವಿನಯಚಂದ್ರ, ಎಂ.ಜಿ. ಶೆಟ್ಟಿ, ಕಾಂಚೋಡು ಗೋಪಾಲಕೃಷ್ಣ ಭಟ್, ರೂಪಾ ಜಿ. ಜೈನ್, ಮೋಹನ್ ಶೆಟ್ಟಿಗಾರ್, ಬಿ.ಎಂ. ಹಮೀದ್ ಉಜಿರೆ, ಲಕ್ಷ್ಮಣ ಸಪಲ್ಯ, ರಾಘವೇಂದ್ರ ಬೈಪಡಿತ್ತಾಯ, ರಮೇಶ್ ಮಯ್ಯ, ರಘುರಾಮ ಶೆಟ್ಟಿ ಸಾಧನ, ಟಿ.ಕೆ. ಶರತ್, ನಾಮದೇವ ರಾವ್ ಮುಂಡಾಜೆ, ಚಿದಾನಂದ ಇಡ್ಯ, ಸಂತೋಷ್ ಪಿ. ಕೋಟ್ಯಾನ್, ವಸಂತ ಶೆಟ್ಟಿ ಶ್ರದ್ಧಾ, ಪ್ರೋ. ಕೃಷ್ಣಪ್ಪ ಪೂಜಾರಿ, ಸುಧಾಮಣಿ ಆರ್, ಮೊದಲಾ ದವರೂ ಸೇರಿದಂತೆ ವಿವಿಧ ಸರಕಾರಿ ಇಲಾಖಾ ಅಧಿಕಾರಿಗಳು, ಗಣ್ಯರು ಭಾಗಿಯಾಗಿದ್ದರು. ವಾಣಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ತಾ| ಕಸಾಪ ಗೌರವ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ನಿರೂಪಿಸಿ, ಶಿಕ್ಷಕ ದೇವುದಾಸ್ ನಾಯಕ್ ಧನ್ಯವಾದವಿತ್ತರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

UP Shivananda press meet copyಬೆಳ್ತಂಗಡಿ : ಸಾಮಾಜಿಕ ತಾಣಗಳಾದ ವಾಟ್ಸ್‌ಪ್ ಮತ್ತು ಫೇಸ್ಬುಕ್‌ಗಳಲ್ಲಿ ಒಳ್ಳೆಯ ಸಂದೇಶವನ್ನು ಸ್ವಾಗತಿಸುವ, ಆದರೆ ಇನ್ನೊಬ್ಬರ ಬಗ್ಗೆ ಅವಹೇಳನ, ಅಪಪ್ರಚಾರದ ಸಂದೇಶಗಳು ಬಂದಾಗ ಇದರ ಸತ್ಯಾಸತ್ಯತೆಯನ್ನು ತಿಳಿದು ವಿಮರ್ಶೆ ಮಾಡಬೇಕು, ಇದು ಸುಳ್ಳಾದರೆ ಸಂದೇಶ ಕಳುಹಿಸಿದವರ ಮನ ಪರಿವರ್ತನೆ ಮಾಡಿ ಅವರನ್ನು ಸರಿದಾರಿಗೆ ತರುವ ಸ್ವಾಸ್ಥ್ಯ ಸಮಾಜ ನಿರ್ಮಾಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸುದ್ದಿ ವೇದಿಕೆಯಿಂದ ಮಾಡಲಾಗುತ್ತಿದೆ ಎಂದು ವೇದಿಕೆಯ ನಿರ್ದೇಶಕ ಡಾ| ಯು.ಪಿ. ಶಿವಾನಂದ ಹೇಳಿದರು.
ಅವರು ಜ.೬ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ‘ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಹೇಗೆ? ಎಂಬ ಬಗ್ಗೆ ಮಾತನಾಡಿ, ನಾವು ಸಾಧ್ಯವಾದಷ್ಟು ವಾಟ್ಸಪ್ ಮತ್ತು ಫೇಸ್ಬುಕ್‌ಗಳಲ್ಲಿ ಸೇರಿಕೊಳ್ಳುವುದು ಉತ್ತಮ. ಇದರಿಂದ ನಮಗೆ ಹಲವು ಉತ್ತಮ ಮಾಹಿತಿ ದೊರೆಯುತ್ತದೆ. ಅಲ್ಲದೆ ತನ್ನ, ತನ್ನ ಸಂಸ್ಥೆಯ, ಸ್ನೇಹಿತರ, ಸಂಬಂಧಿಕರ ಬಗ್ಗೆ ಬಂದಿರುವ ಒಳ್ಳೆಯ ನ್ಯೂಸ್‌ಗಳು ಮಾತ್ರವಲ್ಲ ಅಪಪ್ರಚಾರದ ನ್ಯೂಸ್‌ಗಳ ಮಾಹಿತಿಯು ಲಭ್ಯವಾಗುತ್ತದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಸಂದೇಶ ಬಂದರೆ ಸ್ವೀಕರಿಸುವ, ಆದರೆ ಅದರಲ್ಲಿ ಬೇರೆಯವರ ಬಗ್ಗೆ ಅಪಪ್ರಚಾರದ, ಅವಹೇಳನ ಸಂದೇಶಗಳು ಎಂದು ಕಂಡು ಬಂದರೆ ಅದನ್ನು ರವಾನಿಸದೇ, ಈ ಸಂದೇಶ ಕಳುಹಿಸಿದವರಲ್ಲಿ ವಿಚಾರಿಸುವುದು, ಸಂದೇಶ ಕಳುಹಿಸಿದ ಉದ್ದೇಶ ಕೇಳುವುದು ಅಥವಾ ಯಾರ ಬಗ್ಗೆ ಸಂದೇಶವಿದೆಯೋ ಅವರ ಪರಿಚಯ ವಿದ್ದರೇ ಅವರಲ್ಲೇ ವಿಚಾರಿಸಿ, ಸತ್ಯಾಸತ್ಯಾತೆಯನ್ನು ತಿಳಿದುಕೊಳ್ಳು ವುದು ಅವಶ್ಯ. ಒಂದು ವೇಳೆ ಅಪಪ್ರಚಾರಕ್ಕಾಗಿ, ಅವಹೇಳನ ಕ್ಕಾಗಿ ಬ್ಲ್ಯಾಕ್‌ಮೇಲ್ ಸಂದೇಶವೆಂದು ಕಂಡು ಬಂದರೆ ಕಳುಹಿಸಿದವರನ್ನು ಗುರುತಿಸಿ ಅದರಿಂದ ತೊಂದರೆಗೊಳಗಾಗುವ ವರಿಗೆ ತಿಳಿಸುವುದು, ಜೊತೆಗೆ ಅವರ ರಕ್ಷಣೆಗೆ, ಬೆಂಬಲಕ್ಕೆ ಕೈಜೋಡಿಸುವುದು. ಅಂತಹ ಸಂದೇಶ ಕಳುಹಿಸಿದವರನ್ನು ತಮ್ಮ ಗ್ರೂಪ್‌ನಿಂದ ತೆಗೆದು ಇತರರಿಗೆ ತಿಳಿಸುವುದು. ಹೀಗೆ ಮಾಡಿದರೆ ತಮ್ಮ ಬಗ್ಗೆ ಅಥವಾ ಯಾರ ಬಗ್ಗೆಯಾದರೂ ಅಪಪ್ರಚಾರ, ಅವಹೇಳನವಾದಾಗ ರಕ್ಷಣೆ ದೊರೆಕು ವಂತಾಗುತ್ತದೆ ಎಂದರು. ಅವಹೇಳನ, ಅಪಪ್ರಚಾರ, ಬ್ಲ್ಯಾಕ್‌ಮೇಲ್ ಮಾಡು ವವರ ಮನಃಪರಿವರ್ತನೆಗೆ ಪ್ರಯತ್ನಿಸು ವುದು ಅವರು ಸರಿಯಾಗದಿದ್ದರೆ ಅವರನ್ನು ಸಾಧ್ಯವಾದಷ್ಟು ದೂರವಿಟ್ಟು ತಮ್ಮ ತಮ್ಮ ಸಾಮಾಜಿಕ ಚಟುವಟಿಕೆಗಳಿಂದ ಬಹಿಷ್ಕರಿಸುವುದು, ಅಪಪ್ರಚಾರ ಮಾಡಿದ್ದು ಯಾರೆಂದು ತಿಳಿಯದಿದ್ದರೆ, ಅದನ್ನು ಪರಿಚಯದವರ ಹತ್ತಿರ ಕೇಳುತ್ತಾ ಹೋದಾಗ ಅದನ್ನು ಕಳುಹಿಸಿ ದವರ ಮೂಲ ಮತ್ತು ಉದ್ದೇಶ ಗೊತ್ತಾಗುತ್ತದೆ. ಆ ಸಂದೇಶದಿಂದ ತೊಂದರೆಗೊಳಗಾದವರು ಮತ್ತು ಆ ಸಂದೇಶವನ್ನು ಸ್ವೀಕರಿಸಿದ ಎಲ್ಲರೂ ಮತ್ತು ಜನತೆ ಅಪಪ್ರಚಾರಕ್ಕೆ ಕಾರಣನಾದವನನ್ನು ಬಹಿರಂಗವಾಗಿ ಪ್ರಶ್ನಿಸಿ ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಮಾಡುವುದು. ಇದರಿಂದ ಮುಂದಕ್ಕೆ ಯಾವುದೇ ಅಪಪ್ರಚಾರಗಳು ನಡೆಯಲಾರದು. ನಡೆದರೂ ಅವರು ಹರಡಲಾರರು ಕೇಸು ಆಗುವುದಿಲ್ಲ ಎಂಬ ನಂಬಿಕೆಯಿಂದ ಅದನ್ನು ಮಾಡುವವರಿಗೆ ಶಿಕ್ಷೆ ಆಗದಿದ್ದರೂ ಜನರ ತಿರಸ್ಕಾರದ ಶಿಕ್ಷೆ ದೊರೆತರೆ ಅವರು ಪರಿವರ್ತನೆಯಾಗುವುದು ಖಂಡಿತ ಎಂದು ಹೇಳಿದರು. ಸುದ್ದಿ ವೇದಿಕೆಯ ಈ ಜನಜಾಗೃತಿ ಕಾರ್ಯಕ್ರಮಕ್ಕೆ ಎಲ್ಲಾ ಸಂಘ-ಸಂಸ್ಥೆಯವರು, ತಾಲೂಕಿನ ನಾಗರಿಕರು ಬೆಂಬಲ ನೀಡಬೇಕು ಎಂದು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸುದ್ದಿ ವೇದಿಕೆಯ ಸಂತೋಷ್ ಶಾಂತಿನಗರ, ಸುದ್ದಿ ಬೆಳ್ತಂಗಡಿ ಕಚೇರಿ ವ್ಯವಸ್ಥಾಪಕ ಮಂಜುನಾಥ ರೈ ಉಪಸ್ಥಿತರಿದ್ದರು.

 ಗುರುವಾಯನಕೆರೆ, ಬೆಳ್ತಂಗಡಿ, ಧರ್ಮಸ್ಥಳ ವಿದ್ಯುತ್ ಲೈನ್‌ನಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಜ.13ರಂದು ಬೆಳಿಗ್ಗೆ 9.30ರಿಂದ ಸಂಜೆ 5.30ರ ತನಕ ಬೆಳ್ತಂಗಡಿ, ಧರ್ಮಸ್ಥಳ ಮತ್ತು ವಗ್ಗ (ಬಂಟ್ವಾಳ ತಾಲೂಕು) ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ ಫೀಡರ್‌ಗಳಲ್ಲಿ ಹಾಗೂ ಮಡಂತ್ಯಾರ್ ಹಾಗೂ ಬಳ್ಳಮಂಜ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

lanchana bidugade copyಉಜಿರೆ: ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ಜನವರಿ 27, 28, 29 ರಂದು ಸ್ವಚ್ಛ ಭಾಷೆ-ಸ್ವಚ್ಛ ಜೀವನ-ಸ್ವಚ್ಛ ಸಮಾಜ ಎಂಬ ಆಶಯದೊಂದಿಗೆ, ಡಾ. ಕೆ. ಚಿನ್ನಪ್ಪ ಗೌಡರ ಸರ್ವಾಧ್ಯಕ್ಷತೆಯಲ್ಲಿ ಜರಗಲಿರುವ 21ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆ ಜ.10 ರಂದು ಅನಾವರಣಗೊಳಿಸಿದರು.
ಈ ಸಂದರ್ಭ ಸಮ್ಮೇಳನ ಸ್ವಾಗತ ಸಮತಿ ಅಧ್ಯಕ್ಷ ವಿಜಯರಾಘವ ಪಡ್ವೆಟ್ನಾಯ, ಕಾರ್ಯದರ್ಶಿ ಡಾ. ಎಂ. ದಯಾಕರ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಗೌರವ ಕಾರ್ಯದರ್ಶಿ ಡಾ. ಎಂ.ಪಿ. ಶ್ರೀನಾಥ್ ಮತ್ತು ಪೊಳಲಿ ನಿತ್ಯಾನಂದ ಕಾರಂತ ಉಪಸ್ಥಿತರಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶಾಸಕ ವಸಂತ ಬಂಗೇರ ಅವರ ನೇತೃತ್ವದಲ್ಲಿ, ಡಾ| ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ವಿವಿಧ ಸಮಿತಿಗಳ ದುಡಿಮೆಯೊಂದಿಗೆ ಸಮ್ಮೇಳನದ ಪೂರ್ವಸಿದ್ದತೆ ಭರದಿಂದ ನಡೆಯುತ್ತಿದೆ.

chandrahas balanja' copyಬೆಳ್ತಂಗಡಿ : ಪುತ್ತೂರು ತಾಲೂಕಿನ ಕಾಣಿಯೂರು ನಲ್ಲಿ  ಜ.7 ರಂದು ನಡೆದ 2016-17ನೇ ಸಾಲಿನ ಜಿಲ್ಲಾ ಯುವಜನ ಮೇಳದ ಲಾವಣಿ ಹಾಡು ಸ್ಪರ್ಧೆಯಲ್ಲಿ ಬಹುಮುಖ ಪ್ರತಿಭೆ ಚಂದ್ರಹಾಸ ಬಳಂಜ ದ್ವಿತೀಯ ಸ್ಥಾನವನ್ನು ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಚಂದ್ರಹಾಸ ಬಳಂಜರವರು ಎಸ್.ಡಿ.ಎಮ್. ಕಾಲೇಜು ಉಜಿರೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಇದೀಗ ಪೂರೈಸಿದ್ದು ಯುವ ಸಾಹಿತಿಯಾಗಿದ್ದು, ಗಾಯನ, ಬರವಣಿಗೆ, ನಾಟಕ, ಚಿತ್ರಕಲೆ ಹೀಗೆ ಬಹುಮುಖ ಪ್ರತಿಭಾವಂತರಾಗಿದ್ದಾರೆ.

Ramesh Bangera copy ಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮದ ಚೇರ್‌ಮೆನ್ ಕ್ಲಬ್ ಸದಸ್ಯ ಪ್ರತಿನಿಧಿ ಕೆ.ರಮೇಶ್ ಬಂಗೇರರವರು 2017ನೇ ಸಾಲಿನ ಎಂಡಿಆರ್‌ಟಿ ಆಯ್ಕೆಯಾಗಿದ್ದಾರೆ.  ಜೀವ ವಿಮಾ ಪ್ರತಿನಿಧಿಯಾಗಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಇವರು ಉತ್ತಮ ವ್ಯವಹಾರದೊಂದಿಗೆ ಬಂಟ್ವಾಳ ಶಾಖೆಯ ಬೆಳ್ತಂಗಡಿ ಉಪಗ್ರಹ ಶಾಖೆಯಿಂದ ಈ ವರ್ಷದ ಎರಡನೇ ಎಂಡಿಆರ್‌ಟಿಯಾಗಿ ಹೊರಹೊಮ್ಮಿದ್ದಾರೆ. ಫೆಬ್ರವರಿಯಲ್ಲಿ ಯುಎಸ್‌ಎಯಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದ್ದಾರೆ ಎಂದು ಬೆಳ್ತಂಗಡಿ ಉಪಗ್ರಹ ಶಾಖಾಧಿಕಾರಿ ಟಿ.ಆರ್ ಯೋಗೇಂದ್ರ ತಿಳಿಸಿದ್ದಾರೆ.

4ಉಜಿರೆ: ಇಲ್ಲಿಯ ಸಂತ ಅಂತೋನಿ ಚರ್ಚ್‌ನ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಹಾಗೂ ಉದ್ಯಮಿ ಅರುಣ್ ರೆಬೆಲ್ಲೊ ಕನ್ಯಾಡಿ ಇವರು ಹಾಗೂ ಕಾರ್ಯದರ್ಶಿಯಾಗಿ ಉಜಿರೆ ಅನುಗ್ರಹ ಕೋ-ಆಪರೇಟಿವ್ ಸೊಸೈಟಿ ಹಾಗೂ ಬೆಳ್ತಂಗಡಿ ತಾಲೂಕು ಟೈಲರ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿರುವ ವಲೇರಿಯಾನ್ ರೊಡ್ರಿಗಸ್ ಆಯ್ಕೆಯಾಗಿದ್ದಾರೆ.

santhara padayathre copyಧರ್ಮ ರಕ್ಷಾ ಸಮಿತಿ ವತಿಯಿಂದ ಮೇಲಂತಬೆಟ್ಟು ಕೆಲ್ಲಕೆರೆ ಕಾಲನಿಯಲ್ಲಿ ಸಂತರ ಪಾದಯಾತ್ರೆ

ಉಚಿತ ಶಿಕ್ಷಣ: ಕಾಲನಿಯ ಅಥವಾ ಇದೇ ರೀತಿ ಆರ್ಥಿಕ ತೊಂದರೆಯಲ್ಲಿರುವ ಹಿಂದೂ ಕುಟುಂಬಗಳ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ತೆಗೆದುಕೊಂಡು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಧರ್ಮ ಜಾಗರಣ ವಿಭಾಗ ಸಿದ್ದವಿದ್ದು ಶಾಲಾ ಕಾಲೇಜು ಆರಂಭಕ್ಕೂ ಮುನ್ನ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಸಂಪರ್ಕಿಸಿದರೆ ಅಂತಹ ಮಕ್ಕಳಿಗೆ ಎಲ್ಲಾ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು ಎಂದು ಮುನಿಯಪ್ಪ ಪ್ರಕಟಿಸಿದರು.

ಬೆಳ್ತಂಗಡಿ : ಹಿಂದೂಗಳಾದ ನಾವೆಲ್ಲಾ ಜಾತಿಗಳ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತೇವೆ. ಧರ್ಮದಲ್ಲಿ ಸಂಪ್ರದಾಯ ಬದ್ಧತೆ ಹೊರತಾಗಿ ಜಾತಿಯ ವ್ಯತ್ಯಾಸಗಳಿಲ್ಲ. ಪ್ರತಿಯೊಬ್ಬರೂ ಕರ್ತವ್ಯವನ್ನು ಮಾಡುವುದೇ ಧರ್ಮ. ಧರ್ಮದಲ್ಲಿ ಅಸ್ಪೃಷ್ಯತೆ ಎಂಬ ಶಬ್ಧವೇ ಇಲ್ಲ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.
ಧರ್ಮರಕ್ಷಾ ಸಮಿತಿ ಮೆಲಂತಬೆಟ್ಟು ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಜ.8 ರಂದು ನಡೆದ ಮೇಲಂತಬೆಟ್ಟು ಗ್ರಾಮದ ಕೆಲ್ಲಕೆರೆ ಕಾಲನಿಯಲ್ಲಿ ಸಂತರ ಪಾದಯಾತ್ರೆ ಮತ್ತು ಧಾರ್ಮಿಕ ಜನಜಾಗೃತಿ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಜೀವ-ದೇಹ-ಮನಸ್ಸು ಅನ್ಯೋನ್ಯವಾಗಿರಬೇಕು. ದುಶ್ಚಟಗಳಿಂದ ನಾವು ಅಸ್ತಿತ್ವ ಕಳೆದುಕೊಳ್ಳುತ್ತಿದ್ದೇವೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸನ ಮುಕ್ತಿಗೆ ಪ್ರಯತ್ನಗಳು ಈ ಭಾಗದಲ್ಲಿ ನಡೆಯುತ್ತಿದೆ. ನಮ್ಮ ಮನೆ ಮನಸ್ಸು ಸ್ವಚ್ಚ ಇರಬೇಕು. ಧರ್ಮ ರಕ್ಷಣೆಯ ನಿಟ್ಟಿನಲ್ಲಿ ನಮ್ಮಲ್ಲಿ ಒಗ್ಗಟ್ಟು ಮುಖ್ಯವಾಗಿದೆ. ಸಂಪ್ರದಾಯಗಳು ಬದುಕಿಗೆ ಪೂರಕವಾದುದು. ಧರ್ಮ ಜಾಗೃತಿಯ ಒಟ್ಟಿಗೆ ನಮ್ಮ ಮನದಲ್ಲಿ ಧರ್ಮವನ್ನು ಉದ್ದೀಪನಗೊಳಿಸುವುದು ಮತ್ತು ಕಾಲನಿಯ ನಿವಾಸಿಗಳ ಮನೆಗಳಿಗೆ ಬೇಟಿ ನೀಡಿ ಅವರ ಕಷ್ಟ ಸುಖಗಳನ್ನು ತಿಳಿದು ಸ್ಪಂದಿಸುವ ಭಾವನೆಯಿಂದಾಗಿ ಈ ಪಾದಯಾತ್ರೆ ಎಂದವರು ಹೇಳಿದರು.
ಸಾಂಸ್ಕೃತಿಕ ರಾಷ್ಟ್ರವಾದ ನಿರ್ಮಾಣವಾಗಲಿ: ಕರ್ನಾಟಕ ದಕ್ಷಿಣ ಪ್ರಾಂತದ ಧರ್ಮ ಜಾಗರಣ ಪ್ರಾಂತ ಪ್ರಮುಖ್ ಮುನಿಯಪ್ಪ ಧಾರ್ಮಿಕ ಜಾಗೃತಿ ಭಾಷಣ ನೆರವೇರಿಸಿ, ಪ್ರತಿಯೊಬ್ಬರ ಮನಸ್ಸಿನಲ್ಲಿ ಧರ್ಮದ ಬೆಳಕು ಹಚ್ಚುವುದೇ ಧರ್ಮ ರಕ್ಷಾ ಸಮಿತಿ ಉದ್ಧೇಶ. ಅಸ್ಪೃಶ್ಯತೆ ಎನ್ನುವುದು ಕ್ಯಾನ್ಸರ್‌ಗಿಂದ ಅಪಾಯಕಾರಿ. ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125 ಜನ್ಮಜಯಂತಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅಸ್ಪೃಶ್ಯತೆ ಆದಿಯಾಗಿ ಶೋಷಣೆಗಳು ತೊಲಗಿ ಸಾಂಸ್ಕೃತಿಕ ರಾಷ್ಟ್ರವಾದ ನಿರ್ಮಾಣವಾಗಬೇಕು. ಹಿಂದೂ ಧರ್ಮ ಯಾವ ಧರ್ಮದ ಮೇಲೂ ದಬ್ಬಾಳಿಕೆ ಮಾಡಿಲ್ಲ. ಉಳಿದ ಧರ್ಮಗಳು ತಾವು ಪ್ರತಿಪಾದಿಸುವ ವ್ಯಕ್ತಿಯೇ ದೇವರು ಎಂದು ಹೇಳುತ್ತದೆ. ಆದರೆ ಹಿಂದೂ ಧರ್ಮ ಎಲ್ಲರನ್ನೂ ದೇವರು ಎಂದು ಸ್ವೀಕರಿಸುವ ಮಹತ್ ಚಿಂತನೆ ಹೊಂದಿದೆ. ಇಥಿಯೋಫಿಯಾದಂತಹ ಕ್ರೈಸ್ತ ಧರ್ಮ ಪ್ರಧಾನವಾಗಿರುವ ದೇಶಗಳಲ್ಲಿ ಇಂದೂ ಕಿತ್ತು ತಿನ್ನುವ ಬಡತನವಿದ್ದು, ಅಲ್ಲಿ ಕೆಲಸ ಮಾಡದ ಕ್ರೈಸ್ತ ಮಿಶನಿರಿಗಳು ನಮ್ಮ ದೇಶದ ಗಲ್ಲಿಗಲ್ಲಿಗಳಲ್ಲಿ ಆರ್ಥಿಕ ದುರ್ಬಲವಾಗಿರುವ, ತುಳಿತಕ್ಕೊಳಗಾಗಿರುವ ಸಮುದಾಯದವರನ್ನು ಗುರಿಯಾಗಿಸಿ ಮತಾಂತರ ಮಾಡುತ್ತಿರುವುದನ್ನು ನಾವು ಸಹಿಸುವುದಿಲ್ಲ. ಸೇವೆ ಮಾಡಿ ಆದರೆ ದೇವರನ್ನೇ ಬದಲಾಯಿಸುವುದು ವಿಶಾಲ ಮನೋಭಾವನೆ ಇರುವ ಹಿಂದೂ ಧರ್ಮದ ಮೇಲಿನ ಆಕ್ರಮಣಕಾರಿ ಪ್ರವೃತಿ ಎಂದರು.
ಉಪಸ್ಥಿತಿ: ಸ್ವಾಮೀಜಿಗಳ ಪಾದಯಾತ್ರೆಯುದ್ದಕ್ಕೂ ಬಿಜೆಪಿ ತಾ| ಅಧ್ಯಕ್ಷ ರಂಜನ್ ಜಿ. ಗೌಡ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಕುಶಾಲಪ್ಪ ಗೌಡ ಪೂವಾಜೆ, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ವಿಮಲಾ ಕಂಚಿಂಜ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಮಾಜಿ ಕಾರ್ಯದರ್ಶಿ ನಾರಾಯಣ ಆಚಾರ್, ಮೇಲಂತಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಭಾಕರ್ ಆಚಾರ್ಯ, ಚಂದ್ರರಾಜ್, ತಾ.ಪಂ. ಮಾಜಿ ಅಧ್ಯಕ್ಷ ಕೇಶವ ಎಂ, ಧರ್ಮ ರಕ್ಷಾ ಸಮಿತಿ ಅಧ್ಯಕ್ಷ ದಿನಕರ ಆದೇಲು, ಜಿ.ಪಂ. ಮಾಜಿ ಸದಸ್ಯೆ ಸಿ.ಕೆ. ಚಂದ್ರಕಲಾ, ರಾಘವ ಕಲ್ಮಂಜ, ಕುವೆಟ್ಟು ಗ್ರಾ.ಪಂ. ಅಧ್ಯಕ್ಷ ಅಶೋಕ್ ಕೋಟ್ಯಾನ್, ಮೋಹನ್‌ದಾಸ್, ಸಂಘಟನೆಯಲ್ಲಿ ಸಹಕಾರ ನೀಡಿದ ಪ್ರಜ್ವಲ್ ಮಡಂತ್ಯಾರು, ರಕ್ಷಿತ್ ಮಡಂತ್ಯಾರು, ಯತೀಶ್ ಮೇಲಂತಬೆಟ್ಟು, ಪ್ರಶಾಂತ್ ಮಡಂತ್ಯಾರು, ನೀಕ್ಷಿತ್, ಸಚಿನ್, ವಿಕ್ರಮ್ ಮೊದಲಾದವರು ಭಾಗಿಯಾಗಿ ಸಹಕಾರ ನೀಡಿದರು. ಧರ್ಮರಕ್ಷಾ ಗ್ರಾಮ ಸಮಿತಿ ಅಧ್ಯಕ್ಷ ಹಾಗೂ ಮೇಲಂತಬೆಟ್ಟು ಗ್ರಾ. ಪಂ. ಸದಸ್ಯ ಸತೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಕೋರಿದರು. ನಾಗೇಶ್ ಮಧ್ವ ಸ್ವಾಗತಿಸಿದರು. ನವೀನ್ ಕನ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಹಾಸ ಧನ್ಯವಾದವಿತ್ತರು.

muguli ksthetrada raste udhgatane copyಉಜಿರೆ: ವಂದೇ ತದ್ಗುಣ ಲಬ್ದಯೇ ಎಂದು ಜೈನರು ದೇವರನ್ನು ಆರಾಧಿಸುತ್ತಾರೆ. ಅಂದರೆ ದೇವರಲ್ಲಿರುವ ಅನಂತ ಗುಣಗಳು ತಮಗೂ ಬರಲಿ ಎಂದು ಬೇಡಿಕೊಳ್ಳುತ್ತಾರೆ. ಧನ, ಧಾನ್ಯ, ಸಂಪತ್ತು ಯಾವುದನ್ನೂ ಬೇಡುವುದಿಲ್ಲ. ಏಕೆಂದರೆ ಎಲ್ಲವನ್ನೂ ತ್ಯಾಗ ಮಾಡಿದಾಗ ಮಾತ್ರ ತೀರ್ಥಂಕರರಾಗಬಹುದು. ಭಯದಿಂದ ಭಕ್ತಿ ಬರಬಾರದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಜ.5 ರಂದು ಮುಗುಳಿ ತೀರ್ಥ ಕ್ಷೇತ್ರದಲ್ಲಿ ಶೀತಲನಾಥ ತೀರ್ಥಂಕರರ ಸಾನ್ನಿಧ್ಯದಲ್ಲಿರುವ ಬ್ರಹ್ಮಯಕ್ಷ ದೇವರ ಬಸದಿಯಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವದ ಸಂದರ್ಭ ಶಾಸಕರ ಅನುದಾನದಿಂದ ನಿರ್ಮಿಸಲಾದ ನೂತನ ರಸ್ತೆಯನ್ನು ಉದ್ಘಾಟಿಸಿ, ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಜೈನ ಧರ್ಮದ ಶಕ್ತಿ ಮತ್ತು ಸತ್ವದಿಂದ ಕೆಲವು ಸಾನ್ನಿಧ್ಯಗಳಲ್ಲಿ ಅತಿಶಯಗಳು ನಡೆಯುತ್ತವೆ. ಬಂಗಾಡಿಯಲ್ಲಿ ನೀರಿನಲ್ಲಿ ಕಲ್ಲಿನ ಗುಂಡು ತೇಲುವುದು. (ಈಗ ಇದು ನಡೆಯುತ್ತಿಲ್ಲ) ಭಕ್ತರಲ್ಲಿ ಭಕ್ತಿ ಮಾಡಲು ಇಂತಹ ಪುರಾವೆಗಳು, ಅತಿಶಯಗಳು ಬೇಕಾಗುತ್ತವೆ. ಆಗ ಭಕ್ತರೂ ಶರಣಾಗುತ್ತಾರೆ. ಆದರೆ ಭಕ್ತರು ಜಿಜ್ಞಾಸುಗಳಾಗಬೇಕು. ಕುತೂಹಲದಿಂದ ದೆ ಯಾವುದನ್ನೂ ನಂಬಬಾರದು ಎಂದು ಅವರು ಸಲಹೆ ನೀಡಿದರು. ಜೈನ ಧರ್ಮದ ಪ್ರಕಾರ ಯಕ್ಷ-ಯಕ್ಷಿಯರು ಭಕ್ತರನ್ನು ದೇವರ ಕಡೆಗೆ ಆಕರ್ಷಿಸುವ ಕಾರ್ಯ ಮಾಡುತ್ತಾರೆ. ಆಗ ಧರ್ಮದ ರಕ್ಷಣೆಯಾಗಿ ಶಾಂತಿ, ನೆಮ್ಮದಿ ಸಿಗುತ್ತದೆ ಎಂದರು.
ಮುಗುಳಿ ಕ್ಷೇತ್ರದಲ್ಲಿ ನೀರಿನ ಕೊರತೆ, ಅಂತರ್ ಜಲದಮಟ್ಟ ಕುಸಿತದಿಂದಾಗಿ ತೀರ್ಥ ಹರಿದು ಬರುವುದು ನಿಂತಿದೆ. ಬಸದಿಯ ಸುತ್ತಲೂ ಒಂದೆರಡು ಕೆರೆಗಳನ್ನು ನಿರ್ಮಿಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.ಧರ್ಮಸ್ಥಳ ವತಿಯಿಂದ ಹಮ್ಮಿಕೊಳ್ಳಲಾದ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನಕ್ಕೆ ಈಗಾಗಲೇ ಮೂವತ್ತು ಸಾವಿರ ಶ್ರದ್ಧಾಕೇಂದ್ರಗಳ ಪ್ರತಿನಿಧಿಗಳು ಸಹಕಾರ ನೀಡಲು ಒಪ್ಪಿದ್ದಾರೆ. ಕೇರಳ ಗಡಿಭಾಗದ ಚರ್ಚ್, ಮಸೀದಿಗಳ ಪ್ರತಿನಿಧಿಗಳೂ ಬೆಂಬಲ ನೀಡಿದ್ದಾರೆ. ಇದೇ ೧೩ರೊಳಗೆ ರಾಜ್ಯದ ಎಲ್ಲಾ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನ ಪೂರ್ಣಗೊಳ್ಳಲಿದೆ ಎಂದರು. ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಬೆಳ್ತಂಗಡಿ ತಾಲೂಕಿನಲ್ಲಿ ಬಂಗಾಡಿ, ಸವಣಾಲು ಮತ್ತು ಮುಗುಳಿ ಎಂಬ ಮೂರು ಕ್ಷೇತ್ರಗಳಲ್ಲಿ ಬ್ರಹ್ಮಯಕ್ಷ ಸಾನ್ನಿಧ್ಯವಿದೆ. ಮುಗುಳಿ ಕ್ಷೇತ್ರದಲ್ಲಿ ನಡೆದ ನವೀಕರಣ ಹಾಗೂ ಪೂಜಾ ವಿಧಿ-ವಿಧಾನಗಳಿಂದ ಬ್ರಹ್ಮಯಕ್ಷ ಪ್ರಸನ್ನ ಗೊಂಡಿದ್ದು ಹೂ ಬೀಳುವ ಮೂಲಕ ಅಪ್ಪಣೆಯಾಗಿದೆ. ಮುಂದೆ ತೀರ್ಥ ಹರಿದು ಬಂದು ಇದು ಅತಿಶಯ ಕ್ಷೇತ್ರವಾಗಿ ಬೆಳಗಲಿದೆ ಎಂದು ಭವಿಷ್ಯ ನುಡಿದರು. ಶಾಸಕ ಕೆ. ವಸಂತ ಬಂಗೇರ ಮತ್ತು ಮುಗುಳಿ ನಾರಾಯಣ ಭಟ್ ಶುಭಾಶಂಸನೆ ಮಾಡಿದರು. ಬಳಕ್ಕ ಜೀವಂಧರ ಕುಮಾರ್ ಸ್ವಾಗತಿಸಿದರು. ಸುರೇಂದ್ರ ಜೈನ್ ಧರ್ಮಸ್ಥಳ ಧನ್ಯವಾದವಿತ್ತರು. ಸೋಮಶೇಖರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ujire 1

ujire 2

ujire 3

ujire 4

ujire

ಉಜಿರೆ : ಇಲ್ಲಿನ ಕಾಲೇಜು ರಸ್ತೆಯ ಪೈ ಶೋಪ್ಪಿ ಬಿಲ್ಡಿಂಗ್ಸ್‌ನಲ್ಲಿ ಸ್ಯೂ ಫಿಟ್ ಎಂಬ ಟೈಲರಿಂಗ್ ಸಂಸ್ಥೆಯು ಇಂದು(ಜ.12ರಂದು) ಉದ್ಘಾಟನೆಗೊಂಡಿತು.
ಶತಾಬ್ದಿ ವಿದ್ಯಾಲಯ ಸಮಿತಿಯ ಅಧ್ಯಕ್ಷರಾದ ಶ್ರೀಧರ ಜಿ ಭಿಡೆಯವರು ಉದ್ಘಾಟನೆಗೊಳಿಸಿ ನವನವೀನ ಮಾದರಿಯ, ಇಂದಿನ ಯುಗದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿದೆ. ಈ ಆವಿಷ್ಕಾರಗಳಲ್ಲಿ ಇನ್ನಷ್ಟು ವೈವಿಧ್ಯತೆ ಈ ಸಂಸ್ಥೆಯಿಂದ ಮೂಡಿ ಬರಲಿ ಎಂದು ಹೇಳಿದರು.
ಮುಂಡಾಜೆ ಗ್ರಾ.ಪಂ ಸದಸ್ಯೆ ಅಶ್ವಿನಿ ಎ ಹೆಬ್ಬಾರ್, ಅರೆಕಲ್ಲು ರಾಮಚಂದ್ರ ಭಟ್, ಶಶಿಧರ ಖಾಡಿಲ್ಕಾರ್, ಯೋಗೀಶ್ ಭಿಡೆ, ಮಾಲಿನಿ ಎಸ್ ಭಿಡೆ, ಸುಜಿತ್ ಎಂ.ಭಿಡೆ, ಪ್ರೊ| ಎನ್.ಜಿ ಪಡವರ್ಧನ್, ಕಟ್ಟಡದ ಮಾಲಕ ನಾರಾಯಣ ಪೈ, ಎಸ್.ಡಿ.ಎಂ ಎಜ್ಯುಕೇಶನಲ್ ಸೊಸೈಟಿಯ ಲಾರೆನ್ಸ್ ಪಿರೇರಾ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಸಂಸ್ಥೆಯ ಮಾಲಕಿ ಶ್ರೀಮತಿ ಸಂಜನಾ ಎಸ್.ಭಿಡೆ ಸ್ವಾಗತಿಸಿ, ಸುನೀಲ್ ಭಿಡೆ ವಂದಿಸಿದರು.

Harish kumar press meet copyಬೆಳ್ತಂಗಡಿ : ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳ ಕಾಂಗ್ರೆಸ್ ಆಡಳಿತದಿಂದ ಏನೂ ಪ್ರಗತಿಯಾಗಿಲ್ಲ ನಾವು ದೇಶವನ್ನೇ ಬದಲಾಯಿಸುತ್ತೇವೆ, ಪ್ರಜ್ವಲಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಎರಡು ವರ್ಷದ ಆಡಳಿತದ ಪರಿಣಾಮ ಈಗ ಬಡವರು ಕೃಷಿಕರು, ಕೂಲಿಕಾರ್ಮಿಕರು ಹಾಗೂ ಜನಸಾಮಾನ್ಯರು ತೀವ್ರ ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕೇಂದ್ರ ಸರಕಾರ ಬಡವರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಆರೋಪಿಸಿದರು.
ಅವರು ಜ.11ರಂದು ಬೆಳ್ತಂಗಡಿ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸ್ವಾತಂತ್ರ್ಯ ದೊರೆತಾಗ ದೇಶದ ಸ್ಥಿತಿ ಹೇಗಿತ್ತು. ನಂತರದ 70 ವರ್ಷಗಳ ಕಾಂಗ್ರೆಸ್ ಆಡಳಿತದಿಂದ ದೇಶದ ಪ್ರಗತಿ ಹೇಗಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಸರಕಾರದ ಕ್ರಾಂತಿಕಾರಕ ಯೋಜನೆಗಳಿಂದ, ಜನಪರ ಯೋಜನೆಗಳಿಂದ ಬಡವರು, ಕೃಷಿಕರು ಸೇರಿದ ದೇಶದ ಎಲ್ಲಾ ನಾಗರಿಕರು ನೆಮ್ಮದಿಯಿಂದ ಜೀವನ ನಡೆಸುವ ವಾತಾವರಣವಿತ್ತು. ಆದರೆ ಮೋದಿ ಸರಕಾರದ ಆಡಳಿತದಿಂದ ಜನಜೀವನ ದುಸ್ತರಗೊಂಡಿದೆ. ಲೀಟರಿಗೆ ರೂ.30 ಇದ್ದ ಪೆಟ್ರೋಲ್ ದರ ರೂ.70ಕ್ಕೆ ಏರಿದೆ. ಒಂದು ವರ್ಷದಲ್ಲಿ ಆರು ಬಾರಿ ಪೆಟ್ರೋಲ್ ಮತ್ತು ಡೀಸಿಲ್ ಬೆಲೆ ಏರಿಕೆ ಮಾಡಿದೆ. ಯು.ಪಿ.ಎ ಸರಕಾರದ ಅವಧಿಯಲ್ಲಿ ಆಧಾರ್ ಕಾರ್ಡ್, ಜಿ.ಎಸ್.ಟಿ ಮತ್ತು ಎಫ್.ಐ.ಡಿ ಮತ್ತು ಗ್ಯಾಸ್ ಸಬ್ಸಿಡಿಯನ್ನು ವಿರೋಧಿಸುತ್ತಿದ್ದ ಮೋದಿ ಹಾಗೂ ಬಿಜೆಪಿ ಪಕ್ಷ ಈಗ ಆಧಾರ್‌ನ್ನು ಎಲ್ಲದಕ್ಕೂ ಲಿಂಕ್ ಮಾಡುತ್ತಿದೆ ಈ ಸರಕಾರದ ಯಾವುದೇ ಹೊಸ ಕಾರ್ಯಕ್ರಮಗಳಿಲ್ಲ, ಯುಪಿಎ ಸರಕಾರದ ಕಾರ್ಯಕ್ರಮಗಳೇ ಈಗ ಮುಂದುವರಿಯುತ್ತಿದೆ ಎಂದು ತಿಳಿಸಿದರು. ಯು.ಪಿ.ಎ ಆರಂಭಿಸಿದ್ದ ಆಹಾರ ಭದ್ರತೆ ಉದ್ಯೋಗ ಖಾತ್ರಿಯನ್ನು ಕೇಂದ್ರ ನಿಲ್ಲಿಸಿದೆ. ನೋಟು ಅಪನಗದೀಕರಣದಿಂದಾಗಿ ಕೃಷಿಕರು, ಕೂಲಿ ಕಾರ್ಮಿಕರು ಸಣ್ಣ ವ್ಯಾಪಾರಿಗಳು, ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶ್ರೀಮಂತರಿಗೆ ಇದರಿಂದ ಯಾವುದೇ ಸಮಸ್ಯೆಯಾಗಿಲ್ಲ, ನಮ್ಮ ದುಡ್ಡನ್ನು ತೆಗೆಯಲು ಮಿತಿ ಹಾಕಿ ನಿರ್ಬಂಧ, ಬಿಸಿಲಲ್ಲಿ ನಿಂತು ನೂರಾರು ಮಂದಿ ಸಾಯುವ ಸ್ಥಿತಿ ನಿರ್ಮಿಸಿದ್ದಾರೆ. ವಾಹನಗಳ ಲೈಸನ್ಸ್, ಮಾರಾಟ, ದಾಖಲೆ ನವೀಕರಣ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪಡೆಯಲು ದುಬಾರಿ ಮೊತ್ತ ಹಾಗೂ ದುಪ್ಪಟ್ಟು ದಂಡ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ ಕಳೆದ ೭೦ ವರ್ಷಗಳಲ್ಲಿ ಇಂತಹ ಆಡಳಿತವನ್ನು ಯಾರೂ ನೋಡಿಲ್ಲ ಇದರ ವಿರುದ್ಧ ತಾಲೂಕು ಹಾಗೂ ಜಿಲ್ಲೆಯಲ್ಲಿ ಹೋರಾಟ ನಡೆಸುತ್ತೇವೆ ಎಂದರು. ಪಾಂಡುರಂಗ ಭಂಡಾರ್ಕರ್ ಅವರು ಮಾತನಾಡಿ ಮೋಟಾರು ವಾಹನ ರಿನಿವಲ್, ಲೈಸನ್ಸ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪಡೆಯಲು ಹಿಂದೆ ಇದ್ದ ದರದ ಹತ್ತು ಪಟ್ಟು ಏರಿಕೆ ಆಗಿದೆ. ಅನಿಲ್ ಮೋರಾಸ್ ಕಕ್ಕೆಜಾಲು ಇವರ ಮಾರುತಿ ಕಾರಿಗೆ ಈಗ ರೂ.25 ಸಾವಿರ ಮೌಲ್ಯ. ಇದರ ರಿನಿವಲ್‌ಗೆ ಹಿಂದೆ ರೂ.100 ದಂಡ ಕಟ್ಟಬೇಕಾಗುತ್ತಿತ್ತು. ಆದರೆ ಜ.೬ರಿಂದ ದಂಡದ ಮೊತ್ತವನ್ನು ರೂ.೩೦ ಸಾವಿರಕ್ಕೆ ಏರಿಸಲಾಗಿದೆ. ಇಂತಹ ಅನೇಕ ಘಟನೆಗಳು ತಾಲೂಕಿನಲ್ಲಿದೆ. ಎಲ್ಲಾ ದರ, ಹಾಗೂ ದಂಡವನ್ನು ಹತ್ತು ಪಟ್ಟು ಹೆಚ್ಚು ಮಾಡಿದ್ದು ಚಾಲಕರು, ವಾಹನಗಳ ಮಾಲಕರು ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾಮೀಣ ಘಟಕದ ಅಧ್ಯಕ್ಷ ರಾiಚಂದ್ರ ಗೌಡ, ಯಶವಂತ ಬಾಳಿಗ, ಸಂತೋಷ್ ಉಪಸ್ಥಿತರಿದ್ದರು.

ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

January 2017
M T W T F S S
« Dec    
 1
2345678
9101112131415
16171819202122
23242526272829
3031  

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top