Tue 27 Jun 2017, 2:07PM

ಹೆಚ್ಚಿನ ಸುದ್ದಿಗಳು

yodhaದಕ್ಷಿಣ ಕನ್ನಡ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚದ ವತಿಯಿಂದ ಹುತಾತ್ಮರಾದ ಡಿವೈಎಸ್‌ಪಿ ಮಹಮ್ಮದ್ ಅಯೂಬ್ ಪಂಡಿತ್ ಹಾಗೂ ಯೋಧ ಗಂಗಾಧರ್ ಹುತಾತ್ಮ ಯೋಧರಿಗೆ ಕದ್ರಿ ಪಾರ್ಕ್ ಬಳಿಯ ಹುತಾತ್ಮ ಯೋಧರ ಸ್ಮಾರಕದ ಬಳಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿಧಾನ ಪರಿಷತ್ತು ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ ದೇಶಕ್ಕೆ ಬಲಿದಾನ ಮಾಡಿದವರು ಅತ್ಯಂತ ಶ್ರೇಷ್ಠ ವ್ಯಕ್ತಿಗಳಾಗಿ ಸಮಾಜ ಅವರನ್ನು ಗೌರವಿಸುತ್ತದೆ ಬಿಜೆಪಿ ಯುವಮೋರ್ಚ ದ.ಕ ಪ್ರೇರಣೆ ಕಾರ್ಯಕ್ರಮ ಇದಾಗಿದೆ ಎಂದರು.
ಯುವಮೋರ್ಚ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ ಮಾತನಾಡಿ ಕಾಶ್ಮೀರದಲ್ಲಿ ನಡೆದಿರುವ ಭಯೋತ್ಪಾದಕ ಕೃತ್ಯವನ್ನು ಕಂಡಿಸಿದರು ಮತ್ತು ಈ ರೀತಿಯ ಭಯೋತ್ಪಾದಕ ಕೃತ್ಯವು ಪಾಕ್ ಪ್ರೇರಿತ ಉಗ್ರರಿಂದಲೇ ನಡೆದಿರುವುದು ಅತ್ಯಂತ ಕೇದಕರ ಎಂದರು ಹತ್ಯೆಗಿಡಾದ ಡಿವೈಎಸ್‌ಪಿ ಹಾಗೂ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಪ್ರಧಾನ ಕಾರ್ಯದರ್ಶಿ ಸಂದೇಶ ಶೆಟ್ಟಿ ಭಾಜಪ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೆಶ್ ಚೌಟ, ರಾಜ್ಯ ಗೋ ಪ್ರಕೋಷ್ಠದ ಸಿದ್ಧಾರ್ಥ್ ಗೊಯಾಂಕ್, ನಂದನ್ ಮಲ್ಯ, ಅಭಿಲಾಶ್, ಯಶ್ ಪಾಲ್ ವಿನಯ್ ಶೆಟ್ಟಿ ಹಾಗೂ ಜಿಲ್ಲಾ ಯುವಮೋರ್ಚ ಪಧಾದಿಕಾರಿಗಳು ಉಪಸ್ಥಿತರಿದ್ದರು. ದೇಶಭಕ್ತ ಬಂಧುಗಳೆಲ್ಲ ಸೇರಿ ದೇಶಕ್ಕಾಗಿ ಹುತಾತ್ಮರಾದ ಯೋಧರ ಅಗಲಿದ ಆತ್ಮಕ್ಕೆ ಪ್ರಾಥನೆ ಸಲ್ಲಿಸಲಾಯಿತು

BAC Photoನಗರದ ರಾ.ಹೆ. – 66 ಕುಂಟಿಕಾನ್ ಜಂಕ್ಷನ್‌ನಲ್ಲಿರುವ ಮಾರುತಿ ಸುಝುಕಿಯವರ ಅಧಿಕೃತ ಡೀಲರ್ ಮತ್ತು ಸರ್ವಿಸ್ ಸೆಂಟರ್ ಭಾರತ್ ಅಟೋ ಕಾರ್‍ಸ್ (ಪ್ರೈ).ಲಿ. ನಲ್ಲಿ ಮಾರುತಿ ಸುಝುಕಿಯವರ ಎಲ್ಲಾ ಕಾರುಗಳಿಗೆ ಮಾನ್ಸೂನ್ ಕೊಡುಗೆಯಾಗಿ ಉಚಿತ ತಪಸಣಾ ಶಿಬಿರವು ಜೂ. 24(ಇಂದು)  ಬೆಳಿಗ್ಗೆ 9.00 ರಿಂದ ಸಂಜೆ 5 ರ ತನಕ ನಡೆಯಿತು. ಶಿಬಿರಕ್ಕೆ ಗ್ರಾಹಕರಿಂದ  ಉತ್ತಮ ಪ್ರತಿಕ್ರಿಯೆ ದೊರಕಿತು.

ಈ ಉಚಿತ ತಪಸಣಾ ಶಿಬಿರವು ಸತತವಾಗಿ 12ನೇ ವರ್ಷದಲ್ಲಿ ನಡೆಯುತ್ತಿದ್ದು, ಭಾರತ್ ಅಟೋ ಕಾರ್‍ಸ್ ರವರ ಮುಖ್ಯ ಮಳಿಗೆ ಮಂಗಳೂರು ಮತ್ತು 2ನೇ ಡೀಲರ್‌ಶಿಪ್ ಕಾರವಾರ ಮತ್ತು ಇತರ ಮಳಿಗೆಗಳಾದ ಪುತ್ತೂರು, ಬೆಳ್ತಂಗಡಿ, ಮೂಡಬಿದ್ರಿ, ಮುಲ್ಕಿ, ತೊಕೊಟ್ಟು, ಕುಮಟಾ, ಅಂಕೋಲ, ಉಜಿರೆ, ಭಟ್ಕಳ ಹಾಗೂ ಸಿದ್ದಾಪುರದಲ್ಲ್ಲಿ ಏಕಕಾಲಕ್ಕೆ ಜರಗಿತು.

Harale doctor 1ಉಜಿರೆ : ಬೆಳ್ತಂಗಡಿ ತಾಲೂಕಿನ ನಿಡ್ಲೆ, ನೆರಿಯ, ಮುಂಡಾಜೆ, ಉಜಿರೆ, ಕೊಕ್ಕಡ ಮೊದಲಾದೆಡೆ ಸರಕಾರಿ ವೈದ್ಯರಾಗಿ ಸೇವೆ ಸಲ್ಲಿಸಿ ತಾಲೂಕು ವೈದ್ಯಾಧಿಕಾರಿಯಾಗಿ ನಿವೃತ್ತರಾಗಿದ್ದ ಡಾ| ರೇವಣಪ್ಪ ಸಿದ್ದಪ್ಪ ಹರಳೆ ಜೂ. 23ರಂದು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಮೂಲತಃ ರಾಯಚೂರಿನವರಾಗಿದ್ದು ಸುಮಾರು 40 ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ನೆಲೆಸಿದ್ದರು. ಪುತ್ರ, ಪುತ್ರಿ ಹಾಗೂ ಬಂಧವರ್ಗದವರನ್ನು ಅಗಲಿದ್ದಾರೆ. ಅವರ ಅಂತ್ಯ ಸಂಸ್ಕಾರವನ್ನು ಹಳೆಪೇಟೆ ರುದ್ರಭೂಮಿಯಲ್ಲಿ ಜೂ. 24(ಇಂದು) ನಡೆಸಲಾಯಿತು.

krshi 1

krshiನಡ : ರಾಜ್ಯ ಸರಕಾರದ ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ನಡ ಗ್ರಾಮ ಒಳಬೈಲು ಅಜಿತ್ ಕುಮಾರ್‌ರವರ ಜಾಗದಲ್ಲಿ ಭತ್ತದ ಕೃಷಿಯಲ್ಲಿ ಯಾಂತ್ರೀಕೃತ ನಾಟಿ ಪ್ರಾತ್ಯಕ್ಷಿಕೆಯನ್ನು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಜೂ. 23 ರಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಸಕ ವಸಂತ ಬಂಗೇರ, ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

hosangadi 1

Hosangadiಸೆಲ್ಕೋ ಸೋಲಾರ್ ಸಂಸ್ಥೆಯಿಂದ ಹೊಸಂಗಡಿ ಗ್ರಾಮ ಪಂಚಾಯತ್ ಗೆ ಸೋಲಾರ್ ಆಧಾರಿತ ಶುಧ್ದ ಕುಡಿಯುವ ನೀರಿನ ಘಟಕದ ಕೊಡುಗೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹೇಮಾವಸಂತ್ ಉದ್ಘಾಟಿಸಿದರು. 1,45,000 ರೂ ವೆಚ್ಚದ ಘಟಕ ಅಳವಡಿಸಿದ್ದು, ಗ್ರಾಮ ಪಂಚಾಯತ್ ರೂ 25,000 ನೀಡಿದ್ದು 1,20,000 ರೂ ಅನ್ನು ಸೆಲ್ಕೋ ಸಂಸ್ಥೆ ಭರಿಸಿರುತ್ತದೆ. ಗಂಟೆಗೆ ಸುಮಾರು 200 ಲೀಟರ್ ನೀರು ಪೂರೈಕೆ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಗ್ರಾಮ ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಗಣೇಶ್ ಶೆಟ್ಟಿಯವರು ಮಾತನಾಡಿ ನಮ್ಮ ಗ್ರಾಮ ಪಂಚಾಯತ್ ವತಿಯಿಂದ ಹೊಸಂಗಡಿ ಗ್ರಾಮದ ಎಲ್ಲಾ ಮನೆಗಳಿಗೆ ಸೋಲಾರ್ ಹಾಕುವ ಉದ್ದೇಶ ಹೊಂದಿದ್ದು ಗ್ರಾಮಸ್ಥರು ಸಹಕರಿಸಬೇಕೆಂದರು. ಅಲ್ಲದೆ ಗ್ರಾಮದ ಎಲ್ಲಾ ಪ.ಜಾತಿ, ಪ.ಪಂಗಡದ ಮನೆಗಳಿಗೆ ಸೋಲಾರ್ ಅಳವಡಿಕೆ ಮಾಡುತ್ತಿದ್ದು ಪಂಚಾಯತ್ ವತಿಯಿಂದ ಅಂಚಿನ ಹಣವನ್ನು ನೀಡಿರುತ್ತೇವೆ ಎಂದರು. ಸೆಲ್ಕೋ ಸಂಸ್ಥೆಯಿಂದ ಹೊಸಂಗಡಿ ಪಂಚಾಯತ್ ವ್ಯಾಪ್ತಿಯ ಎಲ್ಲಾ ಅಂಗನವಾಡಿಗಳಿಗೆ ಸೋಲಾರ್ ಅಳವಡಿಸಿದ್ದು ಮತ್ತು ಹೊಸಂಗಡಿ ಹಿರಿಯ ಪ್ರಾಥಮಿಕ ಶಾಲೆಗೆ DEP (ಡಿಜಿಟಲ್ ಎಜ್ಯುಕೇಷನ್ ಪ್ರೋಗ್ರಮ್) ಮುಖಾಂತರ 50% ರಿಯಾಯಿತಿಯಲ್ಲಿ ನೀಡಿರುತ್ತಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ  ಗ್ರಾಮ ಪಂಚಾಯತ್ ನ ಎಲ್ಲ ಸದಸ್ಯರು ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸದಸ್ಯ ಮಾಜಿ ಅಧ್ಯಕ್ಷ ಹರಿಪ್ರಸಾದ್ ನಿರೂಪಿಸಿ ಸ್ವಾಗತಿಸಿದರು. ಸೆಲ್ಕೋ ಸಂಸ್ಥೆಯಿಂದ ನವೀನ್ ಕುಮಾರ್ ಹಾಗು ಕಾರ್ತಿಕ್ ಬಂಗೇರ ಉಪಸ್ಥಿತರಿದ್ದರು.

Vibhanavyaಕಳೆದ ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರು ಶಾರದಾ ವಿದ್ಯಾಲಯದ ವಿದ್ಯಾರ್ಥಿನಿ ವಿಭಾನವ್ಯ ಖಂಡಿಗ ಇವರಿಗೆ ಮರುಮೌಲ್ಯಮಾಪನದಲ್ಲಿ ಇಂಗ್ಲೀಷ್‌ನಲ್ಲಿ 6 ಅಂಕ ಹೆಚ್ಚುವರಿ ಪಡೆದು 600ರಲ್ಲಿ 589 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಹಿಂದೆ 583 ಅಂಕ ಇದ್ದು, ಇದೀಗ 589 ಆಗಿರುತ್ತದೆ. ಈ ವಿದ್ಯಾರ್ಥಿನಿ ಬೆಳ್ತಂಗಡಿ ತಾಲೂಕು ಉರುವಾಲು ಉಮೇಶ್ ಖಂಡಿಗ ಮತ್ತು ಹೇಮ ದಂಪತಿಗಳ ಪುತ್ರಿ.

santhekatteಬೆಳ್ತಂಗಡಿ : ಸಂತೆಕಟ್ಟೆಯಲ್ಲಿ ಬಸ್, ಒಮಿನಿ, ಪಿಕಪ್ ಜೂ. 23ರಂದು ಡಿಕ್ಕಿ ಹೊಡೆದಿದೆ. ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

madanthyar 1

madanthyar 2ಮಡಂತ್ಯಾರು : 125 ವರ್ಷಗಳ ಭವ್ಯ ಇತಿಹಾಸ ಇರುವ ಶತಮಾನೋತ್ತರ ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಜೂ.23 ರಂದು ಪಾಲಕರ ಹಬ್ಬ ಹಾಗೂ ಶತಮಾನೋತ್ತರ ಬೆಳ್ಳಿಹಬ್ಬಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ಡಾ| ಎಲೋಸಿಯಸ್ ಪೌಲ್ ಡಿಸೋಜ ಚಾಲನೆ ನೀಡಿದರು.
ಬೆಳಿಗ್ಗೆ 10 ಗಂಟೆಗೆ ನಡೆದ  ದಿವ್ಯಬಲಿ ಪೂಜೆ ಜರಗಿತು. ಬಳಿಕ ಧರ್ಮಾಧ್ಯಕ್ಷರು ಶತಮಾನೋತ್ತರ ಬೆಳ್ಳಿಹಬ್ಬಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂ.ಫಾ| ಬಾಜಿಲ್‌ವಾಸ್, ವರ್ಗಾವಣೆಗೊಂಡಿರುವ ಫಾ| ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರುಗಳು, ಕಾಲೇಜಿನ ಪ್ರಾಂಶುಪಾಲರು ಹಾಗೂ ಬೆಳ್ತಂಗಡಿ ವಲಯದ ಎಲ್ಲಾ ಧರ್ಮಗುರುಗಳು ಭಾಗವಹಿಸಿದ್ದರು.

baby copyಇಂದಬೆಟ್ಟು ಗ್ರಾಮದ ಬಂಗಾಡಿ ಲಿಂಗನ್ತ್ಯಾರು ನವೀನ್ ಮೊಲಿ ಮತ್ತು ಶ್ರೀಮತಿ ನವ್ಯ ದಂಪತಿಯ ಪುತ್ರಿ ನಿಧಿ ಈಕೆಯ ಪ್ರಥಮ ವರ್ಷದ ಹುಟ್ಟುಹಬ್ಬವು ಜೂ.22 ರಂದು ಆಚರಿಸಲಾಯಿತು.

Supreethಮುಂಡಾಜೆ ಗ್ರಾಮದ ಪಡೀಲ್ ನಿವಾಸಿ, ಯಂಗ್ ಚಾಲೆಂಜರ್‍ಸ್ ಕ್ರೀಡಾ ಸಂಘದ ನಿಕಟಪೂರ್ವ ಅಧ್ಯಕ್ಷ ನಾಗರಾಜ್ ನಾಯ್ಕ ಮತ್ತು ಸುಜಾತಾ ದಂಪತಿ ಪುತ್ರ ಸುಪ್ರೀತ್ ಅವರ 4ನೇ ವರ್ಷದ ಹುಟ್ಟುಹಬ್ಬವನ್ನು ಜೂ. 18 ರಂದು ಆಚರಿಸಲಾಯಿತು.

ಗುಂಡೂರಿ ಗ್ರಾಮದ ಕುಞಡಿ ಸದಾನಂದ ಪೂಜಾರಿ ಮತ್ತು ಶ್ರೀಮತಿ ಪುಷ್ಪಾ ದಂಪತಿಯ ಪುತ್ರಿ ಸಾನ್ವಿಯ 3ನೇ ವರ್ಷದ ಹುಟ್ಟುಹಬ್ಬವನ್ನು ಜೂ. 5ರಂದು ಆಚರಿಸಿಕೊಳ್ಳಲಾಯಿತು.

Gahandeepಮೇಲಂತಬೆಟ್ಟು ಗ್ರಾಮದ ಅನುಗ್ರಹ ನಿವಾಸಿ ಸಂದೀಪ್ ಹಾಗೂ ದಿವ್ಯ ದಂಪತಿಗಳ ಪುತ್ರ ಗಹನ್‌ದೀಪ್‌ನ ಹುಟ್ಟುಹಬ್ಬವು ಜೂ. 17ರಂದು ಮನೆಯಲ್ಲಿ ಆಚರಿಸಲಾಯಿತು.

Anvish newsಉಜಿರೆ ಗ್ರಾಮದ ಸತ್ಕೃತಾ ನಿವಾಸದ ಸತೀಶ್ ಮತ್ತು ಕುಸುಮಾ ದಂಪತಿ ಪುತ್ರ ಅನ್ವೇಷ್ ಇವರ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಜೂ.22ರಂದು ಆಚರಿಸಲಾಯಿತು.

nagesh-yashmithaಪಡಂಗಡಿ ಗ್ರಾಮದ ನಿಸರ್ಗ ನಿಲಯ ಬರಾಯ ಬದ್ಯಾರು ತಾ.ಪಂ. ಸದಸ್ಯೆ ಸುಶೀಲಾ ಮತ್ತು ಗೋಪು ಸಾಲಿಯನ್‌ರವರ ಪುತ್ರ ಗುರುವಾಯ ನಕೆರೆ ನಿಸರ್ಗ ಕಾರ್ಟನ್ ಬೇಡ್ ಹೌಸ್ ಮಾಲಕ ನಾಗೇಶ್‌ರವರ ವಿವಾಹವು ಮಚ್ಚಿನ ಗ್ರಾಮದ ಕೋಲಾಜೆ ಮೇಗಿನ ಮನೆ ಗೋಪಾಲ ಪೂಜಾರಿಯವರ ಪುತ್ರಿ ಯಶ್ಮಿತರೊಂದಿಗೆ ಜೂ-18ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ ಸಂಕಿರ್ಣ ಆಶಾ ಸಾಲಿಯನ್ ಕಲ್ಯಾಣ ಮಂಟಪದಲ್ಲಿ ಜರಗಿತು.

Yashodha - vishwanatha newsಓಡಿಲ್ನಾಳ ಗ್ರಾಮದ ಮೈರಾರು ಮನೆ ದಿ| ಮಂಜಪ್ಪ ಪೂಜಾರಿಯವರ ಪುತ್ರಿ ಯಶೋಧ(ಪ್ರತಿಮಾ)ರ ವಿವಾಹವು ಗುರುವಾಯನಕೆರೆ ಪಾಡ್ಯಾರು ಚಂದಪ್ಪ ಪೂಜಾರಿಯವರ ಪುತ್ರ ವಿಶ್ವನಾಥರೊಂದಿಗೆ ಜೂ. 18ರಂದು ಬೆಳ್ತಂಗಡಿ ಸಿ.ವಿ.ಸಿ ಹಾಲ್‌ನಲ್ಲಿ ಜರಗಿತು.

ranjitha-ranjithಕಲ್ಮಂಜ ಗ್ರಾಮದ ಆರ್ಲ ಮನೆ ಎಂ. ರವೀಂದ್ರ ಪೂಜಾರಿಯವರ ಪುತ್ರಿ ರಂಜಿತಾರವರ ವಿವಾಹವು ಅಡ್ಯಾರು ಎ. ಚಂದ್ರಹಾಸ ಅಮೀನ್‌ರವರ ಪುತ್ರ ರಂಜಿತ್ ಎ.ರೊಂದಿಗೆ ಜೂ.19 ರಂದು ಯಶಸ್ವಿ ಹಾಲ್ ಅರ್ಕುಳ ಫರಂಗಿಪೇಟೆಯಲ್ಲಿ ಜರುಗಿತು.

belthangady malekudiya vedikeyinda sahayaಬೆಳ್ತಂಗಡಿ : ವಿದ್ಯಾದಾನ ಹಾಗೂ ಬಡವರ ಸೇವೆಯ ಪರಿಕಲ್ಪನೆಯೊಂದಿಗೆ ಪ್ರಾರಂಭವಾಗಿ ಒಂದು ವರ್ಷದ ಪಯಣದ ಸಾರ್ಥಕತೆಯೊಂದಿಗೆ ಸುಮಾರು ೨೪ ಸೇವಾಶ್ರೀತರಿಗೆ ಸಹಾಯಹಸ್ತವ ನೀಡಿ ಯುವಕರ ಸ್ಪೂರ್ತಿಯ ಚಿಲುಮೆ ಮಲೆಕುಡಿಯರ ಯುವವೇದಿಕೆ
ಇದೀಗ 25ನೇ ಸೇವಾಯೋಜನೆಯಾಗಿ ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ಕೋಲೋಡಿಯ ಅಶೋಕ್‌ರವರು ಎರಡು ವರ್ಷಗಳ ಹಿಂದೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಇದೀಗ ಗಾಯ ಶಮನಗೊಳ್ಳದೆ ಉಲ್ಬಣಗೊಂಡಿದ್ದು, ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.ಅಶೋಕ್ ಅವರ ಚಿಕಿತ್ಸೆಗೆ ಕೈಲಾದಷ್ಟು ನೆರವು ನೀಡಬೇಕೆಂಬ ನಮ್ಮ ಮನವಿಗೆ ಸ್ಪಂದಿಸಿದ ಯುವವೇದಿಕೆ ಪದಾಧಿಕಾರಿಗಳು ಹಾಗೂ ಸದಸ್ಯರ ನೆರವಿನಿಂದ ಸುಮಾರು 8,000 ರೂ ಸಂಗ್ರಹವಾಗಿದ್ದು ಈ ಮೊತ್ತವನ್ನು ಜೂ.20ರಂದು ಮಲೆಕುಡಿಯರ ಯುವವೇದಿಕೆಯ ಅಧ್ಯಕ್ಷೆ ಶ್ರೀಮತಿ ವಸಂತಿ ಬೈರಕಟ್ಟಾರವರ ಸಮ್ಮುಖದಲ್ಲಿ ಪದಾಧಿಕಾರಿಗಳು ಮತ್ತು ಸದಸ್ಯರು ಭೇಟಿ ಮಾಡಿ, ಆರೋಗ್ಯ ವಿಚಾರಿಸಿ, ಚೆಕ್ಕನ್ನು ವಿತರಿಸಲಾಯಿತು.

student

student1

student2ಬೆಳ್ತಂಗಡಿ : ವಿದ್ಯಾರ್ಥಿಗಳು ಬಸ್‌ಪಾಸ್ ವಿತರಣೆಯಲ್ಲಿ ವಿಳಂಬವಾಗಿರುವುದನ್ನು ಖಂಡಿಸಿ, ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವಂತೆ ಒತ್ತಾಯಿಸಿ ಬೆಳ್ತಂಗಡಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಜೂ. 14ರಂದು ಬೆಳ್ತಂಗಡಿ ತಾಲೂಕು ಕಚೇರಿಯ ಎದುಗಡೆ ಪ್ರತಿಭಟನೆ ನಡೆಸಿದರು.

madanthyar bellihabbaಮಡಂತ್ಯಾರು : 125 ವರ್ಷಗಳ ಇತಿಹಾಸ ಇರುವ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಚರ್ಚಿನ ಶತಮಾ ನೋತ್ಸವ ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ ಮಡಂತ್ಯಾರು ಚರ್ಚ್‌ನಲ್ಲಿ ಜೂ.23 ರಂದು ಪಾಲಕರ ಹಬ್ಬದ ದಿನದಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ಡಾ| ಎಲೋಸಿಯಸ್ ಪೌಲ್ ಡಿಸೋಜ ಚಾಲನೆ ನೀಡಿಲಿದ್ದಾರೆ. ಜೂ.23 ರಂದು ಬೆಳಿಗ್ಗೆ 10 ಗಂಟೆಗೆ ದಿವ್ಯಬಲಿ ಪೂಜೆ. ಪೂಜೆಯ ಬಳಿಕ ಧರ್ಮಾಧ್ಯಕ್ಷರು ಶತಮಾನೋತ್ಸವ ಬೆಳ್ಳಿಹಬ್ಬಕ್ಕೆ ಚಾಲನೆ ನೀಡುವರು. ಮೇ.2, 2018ರ ವರೆಗೆ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಚರ್ಚ್‌ಗೆ ನೂತನವಾಗಿ ಆಗಮಿಸಿದ ವಂ.ಫಾ| ಬಾಜಿಲ್‌ವಾಸ್ ಪತ್ರಿಕೆಗೆ ತಿಳಿಸಿದರು.

belthangady catholic yuva sanchalanaಮಡಂತ್ಯಾರು : ಭಾರತೀಯ ಕಥೋಲಿಕ್ ಯುವ ಸಂಚಾಲನ ವಲಯವು ಯುವಜನರಿಗೆ ಪುರಸ್ಕಾರ 2017 ಕಾರ್‍ಯಕ್ರಮವನ್ನು ನಾರಾವಿ ಚರ್ಚ್ ಸಭಾಂಗಣದಲ್ಲಿ ನಡೆಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಯುವಜನರಿಗೆ ಪುರಸ್ಕಾರವನ್ನು ಮಾಡಿದರು. ಐಸಿವೈಎಂ ಮಂಡತ್ಯಾರಿನ ಟೈಸನ್‌ರವರಿಗೆ ನಾಟಕ ಕ್ಷೇತ್ರದಲ್ಲಿ ಸಾಧನೆಗೈದ ಯುವ ವ್ಯಕ್ತಿ ಎಂದು ಸನ್ಮಾನಿಸಿದರು. ಹಾಗೂ ಮಡಂತ್ಯಾರಿನ ಐಸಿವೈಎಂ ಘಟಕವು ಬೆಳ್ತಂಗಡಿ ವಲಯದ ಶ್ರೇಷ್ಠ ಘಟಕ ಮತ್ತು ವಿಭಿನ್ನ ಕಾರ್‍ಯಕ್ರಮ ಮಾಡಿದ ಘಟಕ ಎಂದು ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಮತ್ತು 2017-18 ನೇ ಐಸಿವೈಎಂ ವಲಯ ಮಟ್ಟದ ಚುನಾವಣೆಯು ನೆರವೇರಿತು. ಇದರಲ್ಲಿ ಮಡಂತ್ಯಾರು ಚರ್ಚ್‌ನ ವಿವಿಯನ್, ಬೆಳ್ತಂಗಡಿ ವಲಯದ ಕಾರ್‍ಯದರ್ಶಿಯಾಗಿ ಹಾಗೂ ಉಪಾಧ್ಯಕ್ಷರಾಗಿ ಪ್ರೇಮ್ ಪ್ರಕಾಶ್ ಆಯ್ಕೆಯಾದರು.
ಮುಖ್ಯ ಅತಿಥಿಗಳಾಗಿ ನಾರಾವಿ ಚರ್ಚ್‌ನ ಧರ್ಮಗುರುಗಳು ಫಾ| ಸೈಮನ್ ಡಿಸೋಜ, ಐಸಿವೈಎಂ ಬೆಳ್ತಂಗಡಿ ವಲಯದ ನಿರ್ದೇಶಕ ಫಾ| ಅರುಣ್ ಲೋಬೊ, ಮಡಂತ್ಯಾರ್ ಚರ್ಚ್‌ನ ಸಹಾಯಕ ಧರ್ಮಗುರು ಫಾ| ಆಲ್ವಿನ್ ಡಿಸೋಜ, ಹಾಗೂ ಮಂಗಳೂರು ಪ್ರಾಂತ್ಯದ ಐಸಿವೈಎಂ ನಿರ್ದೇಶಕ ಫಾ| ರೋನಾಲ್ಡ್ ಹಾಗೂ ಬೆಳ್ತಂಗಡಿ ವಲಯದ ಅಧ್ಯಕ್ಷ ಜೋವೆಲ್, ಕಾರ್‍ಯದರ್ಶಿ ರಿಚರ್ಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕು|. ಶೈನಿ ಹಾಗೂ ಆರ್‍ವಿನ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

santhu jci phothoಯುವಜನತೆ ತಮ್ಮ ಕೆಲಸಕಾರ್ಯಗಳೊಂದಿಗೆ ವ್ಯಕ್ತಿತ್ವ ವಿಕಸನಗೊಳಿಸುತ್ತಾ ಹೆಜ್ಜೆ ಇರಿಸಿದಾಗ ನಾವು ಉತ್ತಮ ನಾಯಕರಾಗುವುದರ ಜೊತೆಗೆ ಸಮಾಜದಲ್ಲಿ ಓರ್ವ ಆದರ್ಶ ವ್ಯಕ್ತಿಯಾಗಿ ಬಾಳಲು ಸಹಕಾರಿಯಾಗುತ್ತದೆ.
ಬೆಳ್ತಂಗಡಿಯಲ್ಲಿ ಸುಮಾರು 1977ರಲ್ಲಿ ಪ್ರಾರಂಭವಾದ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಸಂಸ್ಥೆ ಇಂದು 40ನೇ ವರ್ಷದಲ್ಲಿದ್ದು ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವುದರೊಂದಿಗೆ ಜನಮನ್ನಣೆಯನ್ನು ಪಡೆದು ಸುತ್ತ-ಮುತ್ತಲಿನ ಯುವಕ-ಯುವತಿಯರಿಗೆ ವ್ಯಕ್ತಿತ್ವ ವಿಕಸನದ ಮೂಲಕ ಉತ್ತಮ ನಾಯಕರಾಗುವ ಗುಣವನ್ನು, ಮೌಲ್ಯವನ್ನು ಸಕಾರಗೊಳಿಸುವಲ್ಲಿ ಕಾರಣಿಭೂತವಾಗಿದೆ.
-ಜೇಸಿ ಸದಾನಂದ ನಾವಡ ಪೂರ್ವರಾಷ್ಟ್ರೀಯ ಉಪಾಧ್ಯಕ್ಷ

ಬೆಳ್ತಂಗಡಿ : ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯು ಹತ್ತು-ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಅ ಮುಖೇನ ಗುರುತಿಸಿಕೊಂಡು ಮಧ್ಯಾಂತರ ಸಮ್ಮೇಳನದಲ್ಲಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದೆ. ಈ ಬಾರಿ ಘಟಕದಲ್ಲಿ ನಿರಂತರವಾಗಿ ಮೂರು ದಿನಗಳ ಕಾಲ ನಡೆದ ಭಾಷಣ ಕಲೆ, ಸಮಯ ನಿರ್ವಹಣೆ, ನಾಯಕತ್ವ ಗುಣ ಈ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು ಇದರ ಸಮರೋಪ ಸಮಾರಂಭವು ಜೂ.19 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ.ಕೋಟ್ಯಾನ್ ಬಳಂಜ ವಹಿಸಿದ್ದರು.
ವೇದಿಕೆಯಲ್ಲಿ ಜೆಸಿಐ ಇಂಡಿಯಾದ ಪೂರ್ವರಾಷ್ಟ್ರೀಯ ಉಪಾಧ್ಯಕ್ಷರು, ರಾಷ್ಟ್ರೀಯ ತರಬೇತುದಾರರು ಸದಾನಂದ ನಾವಡ, ವಲಯಾಧಿಕಾರಿ ಚಿದಾನಂದ ಇಡ್ಯಾ, ನಿಕಟಪೂರ್ವಧ್ಯಕ್ಷ, ವಲಯಾಧಿಕಾರಿ ವಸಂತ ಶೆಟ್ಟಿ ಶ್ರದ್ದಾ, ಕಾರ್ಯದರ್ಶಿ ರಂಜಿತ್ ಎಚ್.ಡಿ, ಕಾರ್ಯಕ್ರಮ ಸಂಯೋಜಕ ಪ್ರಸಾದ್ ಬಿ.ಎಸ್, ಜೆಸಿರೆಟ್ ಅಧ್ಯಕ್ಷೆ ಅಮೃತಾ, ಜೂನಿಯರ್ ಜೇಸಿ ಅಧ್ಯಕ್ಷ ಮನೋಜ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯುತ್ ಕಾಂಗ್ರೇಸ್ ಚುನಾವಣೆಯಲ್ಲಿ ಜಯಗಳಿಸಿದ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದ ಉಪಾಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್‌ರವರನ್ನು ಸನ್ಮಾನಿಸಲಾಯಿತು. ಹಾಗೂ ಬೆಳ್ತಂಗಡಿಯ ಹಬ್ಬವೆಂದೇ ಖ್ಯಾತಿ ಪಡೆದ ಜೇಸಿ ಸಪ್ತಾಹದ ಕಾರ್ಯಕ್ರಮ ಸಂಯೋಜಕರಾಗಿ ಘಟಕದ ಉಪಾಧ್ಯಕ್ಷ ಪ್ರಸಾದ್ ಕಕ್ಕಿಂಜೆಯವರನ್ನು ಆಯ್ಕೆಮಾಡಲಾಯಿತು.
ಘಟಕದ ಉಪಾಧ್ಯಕ್ಷ ಪ್ರಶಾಂತ್ ಲಾಯಿಲ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಸದಸ್ಯ ಗುರುರಾಜ್‌ರವರು ಜೇಸಿವಾಣಿ ಉದ್ಘೋಷಿಸಿದರು, ಸತೀಶ್ ಸುವರ್ಣ ಪರಿಚಯ ಪತ್ರ ವಾಚಿಸಿದರು, ಅಧ್ಯಕ್ಷ ಸಂತೋಷ್.ಪಿ.ಕೋಟ್ಯಾನ್ ಸ್ವಾಗತಿಸಿ, ಕಾರ್ಯದರ್ಶಿ ರಂಜಿತ್‌ಎಚ್.ಡಿ ಧನ್ಯವಾದವಿತ್ತರು.

kokkada koli tajya suriyalu panchayathnindale vyavasteಕೊಕ್ಕಡ : ಇತರ ಗ್ರಾಮಗಳನ್ನು ಹೋಲಿಸಿದಲ್ಲಿ ಕೊಕ್ಕಡದಲ್ಲಿ ಕೋಳಿ ಮಾರಾಟ ಅಂಗಡಿಗಳು ಮತ್ತು ಸಾಕಾಣಿಕಾ ಕೇಂದ್ರಗಳು ಅಧಿಕವಾಗಿದ್ದು ಹೆಚ್ಚಿನ ಮಾರಾಟಗಾರರಿಗೆ ತಮ್ಮಲ್ಲಿ ಸಂಗ್ರಹಿತವಾದ ಕೋಳಿತ್ಯಾಜ್ಯಗಳನ್ನು ಹಾಕಲು ವ್ಯವಸ್ಥೆ ಇಲ್ಲದಿರುವುದು ಕಂಡು ಬಂದಿದ್ದು ಗ್ರಾ.ಪಂ. ನಿಂದಲೇ ಮುಂದಿನ ದಿನಗಳಲ್ಲಿ ಕೋಳಿ ತ್ಯಾಜ್ಯಗಳನ್ನು ಹಾಕಲು ಟ್ಯಾಂಕ್ ನಿರ್ಮಿಸಿ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಇದಕ್ಕೆ ತಗಲುವ ವೆಚ್ಚವನ್ನು ಉಪಯೋಗಿಸುವವರೇ ಭರಿಸಬೇಕು ಎಂದು ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್ ನುಡಿದರು.
ನದಿಮೂಲಗಳ ಸಂರಕ್ಷಣಾ ಸಮಿತಿ ಮತ್ತು ಕೊಕ್ಕಡ ಗ್ರಾ.ಪಂ. ಸಹಯೋಗದಲ್ಲಿ ಕೊಕ್ಕಡ ಗ್ರಾಮದ ಕೋಳಿ ಸಾಕಾಣಿಕೆದಾರರ ಮತ್ತು ಮಾರಾಟಗಾರರ ಸಭೆಯು ಜೂ.19 ರಂದು ಕೊಕ್ಕಡ ಗ್ರಾ.ಪಂ. ಸಭಾಂಗಣದಲ್ಲಿ ನಡೆದಿದ್ದು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನದಿಮೂಲಗಳ ಸಂರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ ರವಿಚಂದ್ರ ಗೌಡ ಹೊಸವೊಕ್ಲು ಮಾತನಾಡಿ ಪ್ರಪ್ರಥಮವಾಗಿ ಕೊಕ್ಕಡದಲ್ಲಿ ಕೋಳಿ ಸಾಕಾಣಿಕೆದಾರರು ಮತ್ತು ಕೋಳಿ ಮಾರಾಟಗಾರರ ಸಂಘವು ಇಂದು ಅಸ್ತಿತ್ವಕ್ಕೆ ಬಂದಿರುವುದು ಸಂತಸದ ವಿಷಯ . ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ನದಿಮೂಲಗಳ ಸಂರಕ್ಷಣೆಯ ಜಾಗೃತಿ ನಮ್ಮ ಸಮಿತಿಯ ಮೂಲಕ ಆರಂಭವಾಗಿದೆ. ನಮ್ಮ ನದಿಮೂಲಗಳ ಸಂರಕ್ಷಣೆಯ ಕಾರ್ಯದಲ್ಲಿ ಪ್ರಮುಖವಾದದ್ದು ಕೋಳಿ ತ್ಯಾಜ್ಯಗಳ ಸೂಕ್ತ ನಿರ್ವಹಣೆಯಿಲ್ಲದೆ ಸಾರ್ವಜನಿಕ ಸ್ಥಳ, ಹಳ್ಳ ತೋಡುಗಳಲ್ಲಿ ಎಸೆಯುವುದರಿಂದ ನಮ್ಮ ಜಲಮೂಲಗಳು ಮಲಿನವಾಗುತ್ತಿದೆ ಅನ್ನುವ ಪ್ರಮುಖ ಉದ್ದೇಶವಾಗಿದೆ. ಈ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ಕೊಕ್ಕಡದ ಸಾರ್ವಜನಿಕರೂ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ನದಿಮೂಲಗಳ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಯೋಗೀಶ್ ಗೌಡ ಆಲಂಬಿಲ ಮಾತನಾಡಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಆರಂಭಿಸಲಾದ ಈ ಜಾಗೃತಿಯು ಯಾವುದೇ ಸ್ವಾರ್ಥದಿಂದ ಕೂಡಿರುವುದಾಗಿಲ್ಲ. ಅಲ್ಲದೇ ಕೋಳಿ ಸಾಕಾಣಿಕೆದಾರರನ್ನಾಗಲೀ, ಮಾರಾಟಗಾರರನ್ನಾಗಲೀ ಅಪರಾಧೀ ಮನೋಭಾವದಿಂದ ನೋಡುವ ಉದ್ದೇಶವೂ ಇಲ್ಲ. ನಮ್ಮ ಪರಿಸರವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳುವ ಗುರುತರ ಹೊಣೆ ನಮ್ಮೆಲ್ಲರ ಮೇಲಿದೆ ಅನ್ನುವ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ರಾಜೀವಿ ಶೆಟ್ಟಿ, ಕಾರ್ಯದರ್ಶಿ ಭಾರತಿ, ಸದಸ್ಯರಾದ ಇಬ್ರಾಹಿಂ ಸೌತಡ್ಕ, ಕುಶಾಲಪ್ಪ ಗೌಡ ಪುಡಿಕೆತ್ತೂರು, ನದಿಮೂಲಗಳ ಸಂರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಭಿಲಾಷ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕಿ ರವಿಕಲಾ, ನೆಲ್ಯಾಡಿ ಭಾಗದ ಮೇಲ್ವಿಚಾರಕ ಧರ್ಣಪ್ಪ ಗೌಡ, ನೆಲ್ಯಾಡಿಯ ಗ್ರಾಮಾಭಿವೃದ್ದಿ ಯೋಜನೆ ಒಕ್ಕೂಟಗಳ ಅಧ್ಯಕ್ಷ ತುಕಾರಾಮ ರೈ, ಗೋಳಿತೊಟ್ಟು ಮೇಲ್ವಿಚಾರಕ ನೇಮಿರಾಜ್ ಕಲಾಯಿ, ಕೊಕ್ಕಡ ಗ್ರಾಮದ ಕೋಳಿ ಮಾರಾಟಗಾರರು ಮತ್ತು ಸಾಕಾಣಿಕೆದಾರರ ಸಂಘದ ಅಧ್ಯಕ್ಷ ಮೇಕ್ಸಿಂ ಲೋಬೋ, ಉಪಾಧ್ಯಕ್ಷರು ಗಳಾದ ಗಣೇಶ ನಾಯ್ಕ್ , ಪ್ರೇಮಚಂದ್ರ ಮರಿಕ್ಕೆ, ಜಯಂತ ಗೌಡ, ರಘು ಬಾರೆಗುಡ್ಡೆ,ಕಾರ್ಯದರ್ಶಿ ಗುರುಪ್ರಸಾದ್, ಜತೆ ಕಾರ್ಯದರ್ಶಿಗಳಾದ ಹಸನಬ್ಬ, ದಿನೇಶ್ ಉಪಸ್ಥಿತರಿದ್ದರು. ಕೊಕ್ಕಡ ಗ್ರಾಮದ ವ್ಯಾಪ್ತಿಯಲ್ಲಿರುವ ಎಲ್ಲಾ ಕೋಳಿ ಸಾಕಾಣಿಕೆದಾರರು ಮತ್ತು ಮಾರಾಟಗಾರರ ನೂತನ ಸಮಿತಿಯನ್ನು ಈ ಸಭೆಯಲ್ಲಿ ರಚಿಸಲಾಯಿತು.
ಯೋಗೀಶ್ ಗೌಡ ಆಲಂಬಿಲ ಸ್ವಾಗತಿಸಿದರು. ರಾಜೀವಿ ಶೆಟ್ಟಿ ವಂದಿಸಿದರು.

JCI abhinanadhan sanmanaಬೆಳ್ತಂಗಡಿ : ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಉಪಾಧ್ಯಕ್ಷರಾಗಿದ್ದು, ಈ ಬಾರಿಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಜಯಗಳಿಸಿದ ಅಭಿನಂಧನ್ ಹರೀಶ್ ಕುಮಾರ್‌ರವರನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಜೂ. 19ರಂದು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಬಳಂಜ, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ, ನಿಕಟ ಪೂರ್ವಾಧ್ಯಕ್ಷ, ವಲಯಾಧಿಕಾರಿ ವಸಂತ ಶೆಟ್ಟಿ, ವಲಯಾಧಿಕಾರಿ ಚಿದಾನಂದ ಇಡ್ಯ, ಕಾರ್ಯದರ್ಶಿ ರಂಜಿತ್ ಹೆಚ್.ಡಿ, ಪೂರ್ವಾಧ್ಯಕ್ಷ ಸುಭಾಶ್ವಂದ್ರ ಎಂ.ಪಿ., ಕೇಶವ ಪೈ, ನಾರಾಯಣ ಶೆಟ್ಟಿ, ಶ್ರೀನಾಥ್ ಕೆ.ಎಂ., ಜೆಸಿರೆಟ್ ಅಧ್ಯಕ್ಷೆ ಅಮೃತಾ, ಕಾರ್ಯಕ್ರಮ ಸಂಯೋಜಕ ಪ್ರಸಾದ್ ಬಿ.ಎಸ್. ಜೂನಿಯರ್ ಜೇಸಿ ಅಧ್ಯಕ್ಷ ಮನೋಜ್, ಕೋಶಾಧಿಕಾರಿ ವಿಶಾಲ್ ಅಗಸ್ಟಿನ್ ಹಾಗೂ ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

venur samalochana shabeವೇಣೂರು: ಪುಷ್ಪಗಿರಿ ಶ್ರೀ ಪುಷ್ಪದಂತ ಸಾಗರ ಮುನಿಮಹಾರಾಜರ ಶಿಷ್ಯರಾದ 108 ಶ್ರೀ ಪ್ರಸಂಗಸಾಗರ್‌ಜೀ ಮುನಿರಾಜರ ಚಾತುರ್ಮಾಸ ವರ್ಷಾಯೋಗವು ಜುಲೈ ತಿಂಗಳಿನಿಂದ ವೇಣೂರು ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ಪ್ರಾರಂಭಗೊಳ್ಳಲಿದ್ದು, ಈ ಸಂಬಂಧ ಶ್ರಾವಕರ ಸಮಾಲೋಚನಾ ಸಭೆಯು ಇಲ್ಲಿಯ ಯಾತ್ರಿ ನಿವಾಸದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಚಾತುರ್ಮಾಸ ವ್ಯವಸ್ಥಾಪನಾ ಸಮಿತಿ ಕಾರ್ಯಾಧ್ಯಕ್ಷ ನವೀನ್‌ಚಂದ್ರ ಬಲ್ಲಾಳ್ ಮಾತನಾಡಿ, ಮುನಿಶ್ರೀಯವರ ಚಾತುರ್ಮಾಸ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಚಾತುರ್ಮಾಸ ವ್ಯವಸ್ಥಾಪನಾ ಸಮಿತಿ ರಚಿಸಲಾಗಿದೆ. ಮೂಡಬಿದಿರೆ ಜೈನ ಮಠದ ಭಾರತಭೂಷಣ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಯವರನ್ನು ಗೌರವ ಮಾರ್ಗದರ್ಶಕರಾಗಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರನ್ನು ಗೌರವಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಸೀಮೆಯ ಅರಸರಾದ ಡಾ| ಪದ್ಮಪ್ರಸಾದ ಅಜಿಲರನ್ನು ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ಹಲವಾರು ಸಮಿತಿ ಹಾಗೂ ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಮಂಗಳೂರು ಎಪಿಎಂಸಿಯ ಮಾಜಿ ಅಧ್ಯಕ್ಷ ಕರಿಂಜೆಗುತ್ತು ಕೃಷ್ಣರಾಜ ಹೆಗ್ಡೆಯವರು ಮಾತನಾಡಿ, ಮುನಿಶ್ರೀಗಳವರ ಚಾತುರ್ಮಾಸ ವರ್ಷಾಯೋಗವನ್ನು ನಡೆಸುವ ಪುಣ್ಯದ ಕೆಲಸ ನಮಗೆ ದೊರಕಿರುವುದು ಪೂರ್ವಜನ್ಮದ ಪುಣ್ಯದ ಫಲ. ಇದನ್ನು ಅಚ್ಚುಕಟ್ಟಾಗಿ ಮುನಿಧರ್ಮಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಶ್ರದ್ಧಾಭಕ್ತಿಯಿಂದ ಆಯೋಜಿಸಬೇಕಾಗಿದೆ ಎಂದರು. ಬಿಳಿಯೂರುಗುತ್ತು ಧನ್ಯಕುಮಾರ್ ರೈ ಮಾತನಾಡಿ, ಮುಂದಿನ ಪೀಳಿಗೆಗೆ ಧಾರ್ಮಿಕ ವಿಚಾರಗಳ ಮಹತ್ವವನ್ನು ತಿಳಿಸುವ ಮಾದರಿ ಚಾತುರ್ಮಾಸ ಇದಾಗಬೇಕು ಎಂದು ಆಶಿಸಿದರು. ಸಭೆಯಲ್ಲಿ ಮಂಗಳೂರಿನ ಯಶೋಧರ ಪೂವಣಿ, ರಾಜ್ಯ ಜೈನ ಸ್ವಯಂ ಸೇವಕ ತಂಡದ ಜಿಲ್ಲಾ ಸಂಚಾಲಕ ವೃಷಭ ಆರಿಗ ಮೊದಲಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ವಿಜಯರಾಜ ಅಧಿಕಾರಿ ಮಾರಗುತ್ತು, ಕೋಶಾಧಿಕಾರಿ ರತ್ನವರ್ಮ ಇಂದ್ರ ಬಜಿರೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಮಾಲೋಚನಾ ಸಭೆಗೆ ಮಂಗಳೂರು, ಮೂಡಬಿದಿರೆ, ಬಂಟ್ವಾಳ, ಬೆಳ್ತಂಗಡಿ ಹಾಗೂ ಇತರ ಊರುಗಳಿಂದ ಶ್ರಾವಕರು ಆಗಮಿಸಿ ಸಲಹೆ ಸೂಚನೆಗಳನ್ನು ನೀಡಿದರು. ಭಾರತೀಯ ಜೈನ್ ಮಿಲನ್ ನಿರ್ದೇಶಕ ಬಿ. ಸೋಮಶೇಖರ ಶೆಟ್ಟಿ ಉಜಿರೆ ಪ್ರಸ್ತಾವಿಸಿ, ಚಾತುರ್ಮಾಸ ವ್ಯವಸ್ಥಾಪನಾ ಸಮಿತಿ ಪ್ರ. ಕಾರ್ಯದರ್ಶಿ ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿ ಕೋಶಾಧಿಕಾರಿ ವಿ. ಪ್ರವೀಣ್ ಕುಮಾರ್ ಇಂದ್ರ ವಂದಿಸಿದರು. ವೇಣೂರು ಜೈನ್ ಮಿಲನ್, ಬ್ರಾಹ್ಮಿ ಮಹಿಳಾ ಸಂಘ, ಶ್ರೀ ಬಾಹುಬಲಿ ಯುವಜನ ಸಂಘದ ಪದಾಧಿಕಾರಿಗಳು ಸಹಕರಿಸಿದರು.

LIC Y dharmaraj bilkodugeಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆಯಲ್ಲಿ ಕಳೆದ 28 ವರ್ಷಗಳಿಂದ ಅಭಿವೃದ್ದಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಗೊಂಡ ವೈ.ಧರ್ಮರಾಜ್ ರವರಿಗೆ ಬೀಳ್ಕೊಡುಗೆ ಸಮಾರಂಭ ಜೂ 14ರಂದು ಬೆಳ್ತಂಗಡಿ ಉಪಗ್ರಹ ಶಾಖೆಯಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಖೆಯ ಹಿರಿಯ ಶಾಖಾಧಿಕಾರಿ ಡಿ ಬಾಲಕೃಷ್ಣ ವಹಿಸಿ ನಿವೃತ್ತಿಗೊಂಡ ಧರ್ಮರಾಜ್‌ರವರಿಗೆ ಅಭಿವೃದ್ದಿ ಅಧಿಕಾರಿಗಳ, ಪ್ರತಿನಿಧಿಗಳ, ಮತ್ತು ಶಾಖಾ ವತಿಯಿಂದ ಚಿನ್ನದ ಉಂಗುರ, ಸ್ಮರಣಿಕೆ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿಯ ಅಭಿವೃದ್ದಿ ಅಧಿಕಾರಿಗಳ ಸಂಘದ ಅಧ್ಯಕ್ಷ ಕೆ.ವಿಶ್ವನಾಥ ಬಂಟ್ವಾಳ ಶಾಖೆಯ ಉಪಶಾಖಾಧಿಕಾರಿ ಮಧುಸೂದನ್, ಆಡಳಿತ ಅಧಿಕಾರಿ ರಾಮಯ್ಯ ಶೆಟ್ಟಿ ಭಾಗವಹಿಸಿ ಶುಭಹಾರೈಸಿದರು.
ಅಭಿವೃದ್ದಿ ಅಧಿಕಾರಿಗಳಾದ ಗೋಕುಲ್ ಶೇಟ್, ಮಧ್ವರಾಜ್, ಎ.ಜಯದೇವ್, ಎಂ.ವಿ.ಶೆಟ್ಟಿ ಪ್ರತಿನಿಧಿಗಳ ಪರವಾಗಿ ಮನೋಹರ್ ಪಡಿವಾಳ್, ಅಶೋಕ್ ಕುಮಾರ್ ಬಿ.ಪಿ, ಗಂಗಾಧರ ಮಾಸ್ಟರ್, ಧರಣೇಂದ್ರ ಕುಮಾರ್ ಶುಭಕೋರಿದರು. ಸಮಾರಂಭದಲ್ಲಿ ಬಂಟ್ವಾಳ ಮತ್ತು ಬೆಳ್ತಂಗಡಿ ಉಪಗ್ರಹ ಶಾಖೆಯ ಅಭಿವೃದ್ದಿ ಅಧಿಕಾರಿಗಳು, ಧರ್ಮರಾಜರವರ ಬಳಗದ ಪ್ರತಿನಿಧಿಗಳು ಶಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಬೆಳ್ತಂಗಡಿ ಉಪಗ್ರಹ ಶಾಖಾಕಾರಿ ಆರ್.ಡಿ.ಯೋಗೇಂದ್ರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿನಿಧಿ ಜಗನ್ನಾಥ್ ಹೆಚ್. ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.ಅಭಿವೃದ್ದಿ ಅಧಿಕಾರಿ ಉದಯ ಶಂಕರ್ ಸನ್ಮಾನಿತರ ಪರಿಚಯ ವಾಚಿಸಿದರು. ಪ್ರತಿನಿಧಿ ಜಾರಪ್ಪ ಪೂಜಾರಿ ಬೆಳಾಲು ವಂದಿಸಿ, ಅಭಿವೃದ್ದಿ ಅಧಿಕಾರಿ ಟಿ.ಡಿ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

congress pressmeetಬೆಳ್ತಂಗಡಿ : ರಮಾನಾಥ ರೈ ಯವರು ಜವಾಬ್ಧಾರಿಯುತ ಸರಕಾರದ ಪ್ರತಿನಿಧಿಯಾಗಿ ಕಾನೂನು ಸುವ್ಯವಸ್ಥೆಯ ಬಗ್ಗೆ ಉನ್ನತ ಅಧಿಕಾರಿಯ ಜೊತೆ ಖಾಸಗಿಯಾಗಿ ಮಾತನಾಡಿ ಜಿಲ್ಲೆಯ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮತ್ತು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಮರ್ಥ ನಾಯಕತ್ವ ತೋರಿದ್ದಾರೆ. ರಮಾನಾಥ ರೈಗಳು ಬಂಟ್ವಾಳ ಕ್ಷೇತ್ರದಿಂದ 6 ಬಾರಿ ಶಾಸಕರಾಗಿ 3 ಬಾರಿ ಸಚಿವರಾಗಿ ಅವರ ಸೇವೆ ಬಂಟ್ವಾಳದ ಜನತೆಗೆ, ಜಿಲ್ಲೆಗೆ ಗೊತ್ತಿದೆ. ಜನರು ಅವರಿಗೆ ಸರ್ಟಿಫಿಕೆಟ್ ಕೊಟ್ಟಿದ್ದಾರೆ. ಅವರಿಗೆ ಪ್ರಭಾಕರ ಭಟ್ ಅವರ ಸರ್ಟಿಫಿಕೆಟ್ ಬೇಕಾಗಿಲ್ಲ ಎಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದರು.
ವೀಡಿಯೋ ಅಸಲಿಯೋ, ನಕಲಿಯೋ :
ಅನೇಕ ಸಂದರ್ಭಗಳಲ್ಲಿ ರಾಜ್ಯದಲ್ಲಿ ಇಂತಹ ವೀಡಿಯೋಗಳು ಹೊರಬಂದಿದೆ. ಅದು ಅಸಲಿಯೋ ನಕಲಿಯೋ ಎಂದು ಇದುವರೆಗೆ ತಿಳಿಯಲು ಸಾಧ್ಯವಾಗಿಲ್ಲ. ಅದೇನೇ ಇದ್ದರೂ ಬಿಜೆಪಿ ಮತ್ತು ಸಂಘ ಪರಿವಾರದವರು ಇದನ್ನೇ ಬಳಸಿಕೊಂಡು ರೈ ವಿರುದ್ಧ ಆಕ್ರಮಣಕಾರಿಯಾಗಿ ಮಾತನಾಡುತ್ತಿದ್ದಾರೆ. ಯಾವತ್ತೂ ಚುನಾವಣೆಯ ಸಂದರ್ಭ ಇಂತಹ ಪ್ರಕರಣಗಳು ಜಾಸ್ತಿಯಾಗುತ್ತದೆ. ಸದ್ರಿ ವೀಡಿಯೋದಲ್ಲಿ, ಪ್ರಚೋದನಕಾರಿ ಭಾಷಣ ಮಾಡಿದವರನ್ನು ಬಂಧಿಸಿ ಎಂದು ರೈ ಅವರು ಹೇಳಿದ್ದಾರೆ ಅಷ್ಟೇ. ಬಿಟ್ಟರೆ ಪ್ರಭಾಕರ ಭಟ್ ಅವರನ್ನು ಬಂಧಿಸಿ ಎಂದು ಹೇಳಿಲ್ಲ ಎಂದು ಸಮರ್ಥಿಸಿಕೊಂಡರು.
ರೈ ನೈಜ ಜತ್ಯಾತೀತವಾದಿ ನಮ್ಮ ನಾಯಕ :
ಅವರು ಯಾವತ್ತೂ ಜಾತೀವಾದಿ, ಮತೀಯವಾದಿಯಲ್ಲ. ಅದಕ್ಕೆ ಅವಕಾಶವನ್ನೂ ಕೊಟ್ಟಿಲ್ಲ. ನೈಜ ಜಾತ್ಯಾತೀತ ಮನೋಭಾವವುಳ್ಳ ನಮ್ಮ ನಾಯಕ. ಮೊನ್ನೆಯ ಪರಿಸ್ಥಿತಿಯನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರು ಪಕ್ಷದ ಸಮರ್ಥ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಬಿಜೆಪಿಯವರು ಸುಳ್ಳನ್ನೇ 100 ಬಾರಿ ಹೇಳಿ ಸತ್ಯ ಎಂದು ನಂಬಿಸುವ ಕೆಲಸದಲ್ಲಿ ನಿಸ್ಸೀಮರು. ದ.ಕ. ಜಿಲ್ಲೆಯಲ್ಲಿ 8 ಕ್ಷೇತ್ರಗಳಲ್ಲಿ 7 ರಲ್ಲಿ ಕಾಂಗ್ರೆಸ್ ಶಾಸಕರು ಇದ್ದು ಒಳ್ಳೆ ಕೆಲಸದ ಮೂಲಕ ಒಳ್ಳೆಯ ಹೆಸರು ಪಡೆದಿದ್ದಾರೆ. ಇದನ್ನು ಬಿಜೆಪಿಗರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಗೊಂದಲ ಮೂಡಿಸುವ ಹುನ್ನಾರ ಮಾಡುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಎದುರಿಸಲು ಕಾಂಗ್ರೆಸ್ ಕಾರ್ಯಕರ್ತರು ಸಿದ್ಧರಿದ್ದಾರೆ. ಇನ್ನಾದರೂ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಕೈ ಜೋಡಿಸಲಿ. ಅವರಿಗೆ ಇಲ್ಲಿ ನೆಲೆ ಇಲ್ಲದಂತಾಗಿದೆ. ರಾಜ್ಯದಲ್ಲೂ ಕೂಡ ಕಾಂಗ್ರೆಸ್ ಸರಕಾರ ಉತ್ತಮ ಕೆಲಸ ಮಾಡುತ್ತಿದೆ. ಆಡಳಿತ ಅವಧಿಯಲ್ಲಿ ಎಲ್ಲೂ ಕೂಡ ಕೋಮು ಗಲಭೆಗೆ ಅವಕಾಶ ಕೊಟ್ಟಿಲ್ಲ. ಆದರೆ ಇವರು ಮಾತ್ರ ಕೋಮು ಸಂಘರ್ಷವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಜಾತ್ಯಾತೀತ ಪಕ್ಷವೆಂದು ಹೆಸರಿಟ್ಟುಕೊಂಡಿರುವರೂ ಅವರ ಜೊತೆ ಸೇರಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬೆಳ್ತಂಗಡಿ ವಸಂತ ಬಂಗೇರ ೬ ನೇ ಬಾರಿಗೆ ದಾಖಲೆ ಮತಗಳಿಂದ ಗೆಲ್ಲಲಿದ್ದಾರೆ :
ಕಾಂಗ್ರೆಸ್‌ಗೆ ರಾಜ್ಯದಲ್ಲೂ ಭವಿಷ್ಯವಿದೆ. ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯಾಗುತ್ತಿದ್ದು ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಎಂಟಕ್ಕೆ ಎಂಟೂ ಕ್ಷೇತ್ರಗಳಲ್ಲೂ ನಾವು ಜಯಗಳಿಸುತ್ತೇವೆ. ಅಲ್ಲದೆ ಬೆಳ್ತಂಗಡಿಯಲ್ಲಿ 6ನೇ ಬಾರಿಗೆ ವಸಂತ ಬಂಗೇರ ಅವರು ದಾಖಲೆ ಮುರಿಯದ ರೀತಿಯ ಪ್ರಮಾಣದ ಮತಗಳ ಮೂಲಕ ಜಯಗಳಿಸಲಿದ್ದಾರೆ. ಆ ಮೂಲಕ ಪಕ್ಷದ ಸರಕಾರ ಗೆಲ್ಲಿಸಿಕೊಡಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಕೆ. ರಾಮಚಂದ್ರ ಗೌಡ, ತಾಲೂಕು ಎಸ್.ಸಿ. ಘಟಕದ ಅಧ್ಯಕ್ಷ ಬಿ.ಕೆ. ವಸಂತ್ ಉಪಸ್ಥಿತರಿದ್ದರು.

Shobith shettyತಂದೆ ಜಯಂತ ಶೆಟ್ಟಿ ಮತ್ತು ತಾಯಿ ಶ್ರೀಮತಿ ಜಲಜಾಕ್ಷಿ ಶೆಟ್ಟಿ ಜೊತೆ ಶೋಭಿತ್ ಶೆಟ್ಟಿ

ಉಜಿರೆ: ತಂದೆಯ ಈರ್ವರು ಸಹೋದರರು ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆ ಎಳೆಯ ಶೋಭಿತ್‌ಗೆ ಸ್ಪೂರ್ತಿ ಹಾಗೂ ಪ್ರೇರಣೆ ನೀಡಿತು. ಫಲವಾಗಿ ಛಲಬಿಡದೆ ಎರಡನೇಬಾರಿ ನಡೆಸಿದ ಪ್ರಯತ್ನ ಫಲಿಸಿತು. ಭಾರತೀಯ ಭೂ ಸೇನೆಯ ಟೆಕ್ನಿಕಲ್ ಗ್ರಾಜುವೇಟ್ ಕೋರ್ಸ್ ಸಂದರ್ಶನದಲ್ಲಿ ಆಯ್ಕೆಯಾದ ಆತ ಡೆಹ್ರಾಡೋನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಜಂಟಲ್‌ಮೆನ್ ಕೆಡೆಟ್ ಆಗಿ ತರಬೇತಿಗೊಂಡು ಕಳೆದ ಜೂ 10ರಂದು ನಡೆದ ಪಾಸ್‌ಔಟ್ ಪೆರೇಡ್‌ನಲ್ಲಿ ಲೆಫ್ಟಿನೆಂಟ್ ಆಗಿ ನೇಮಕ ಗೊಂಡಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಹೆಸರುವಾಸಿ ಕುಂಟಿನಿ ಮನೆತನದ ದಿ| ಬಾಬು ಶೆಟ್ಟಿಯವರ ಮೊಮ್ಮಗ ಶೋಭಿತ್ ಶೆಟ್ಟಿ ಓರಿಯಂಟಲ್ ಇನ್ಶೂರೆನ್ಸ್‌ನ ಹಿರಿಯ ಅಭಿವೃದ್ಧಿ ಅಧಿಕಾರಿ ಜಯಂತ ಶೆಟ್ಟಿ ಕುಂಟಿನಿ ಮತ್ತು ಶ್ರೀಮತಿ ಜಲಜಾಕ್ಷಿ ಶೆಟ್ಟಿ ದಂಪತಿಗಳ ಹೆಮ್ಮೆಯ ಪುತ್ರ. 1992 ಮೇ 21ರಂದು ಜನಿಸಿದ ಶೋಭಿತ್ ಉಜಿರೆಯ ಅನುಗ್ರಹ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ (2005) ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೌಢ ಶಿಕ್ಷಣ (2008)ವನ್ನು ಶೇ. 95 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿರುತ್ತಾನೆ. ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ. (2010)ಯನ್ನು ಡಿಸ್ಟಿಂಕ್ಷನ್‌ನಲ್ಲಿ ಮುಗಿಸಿ, ಬೆಂಗಳೂರಿನ ಅಂಬೇಡ್ಕರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಶಿಕ್ಷಣ ಪದವಿ (2014) ಪೂರೈಸಿರುತ್ತಾರೆ.
ಬಾಲ್ಯದಿಂದಲೇ ದೇಶಭಕ್ತಿ ಮೈಗೂಡಿಸಿಕೊಂಡ ಶೋಭಿತ್ ಸೇನೆಗೆ ಸೇರಬೇಕೆಂಬ ಮಹತ್ವಾಕಾಂಕ್ಷೆಹೊಂದಿ ಅಂತಿಮ ಇಂಜಿನಿಯರಿಂಗ್ ಹಂತದಲ್ಲೇ ಭಾರತೀಯ ನೌಕಾದಳದ ಸಂದರ್ಶನದಲ್ಲಿ ಟೆಕ್ನಿಕಲ್ ಎಂಟ್ರಿ ಮೂಲಕ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಜತೆಗೆ ಟೆಕ್‌ಮಹೀಂದ್ರ ಸಾಪ್ಟ್‌ವೇರ್ ಕಂಪೆನಿ ಹಾಗೂ ಟೊಯೊಟಾ ಕಿರ್ಲೋಸ್ಕರ್ ಕಂಪೆನಿಗೂ ಆಯ್ಕೆಯಾಗಿರುತ್ತಾರೆ. ಅಂತಿಮ ಪದವಿ ಫಲಿತಾಂಶ ವಿಳಂಬವಾದ ಕಾರಣ ನೌಕಾಸೇನೆಗೆ ಸೇರಲು ಸಾಧ್ಯವಾಗದೆ ಟೊಯೊಟಾ ಕಿರ್ಲೋಸ್ಕರ್ ಕಂಪೆನಿಗೆ ಪ್ರೊಡಕ್ಷನ್ ಇಂಜಿನಿಯರ್ ಆಗಿ ಸೇರ್ಪಡೆಗೊಂಡರು. ಆದರೂ ಸೇನೆಗೆ ಸೇರಬೇಕೆಂಬ ಉತ್ಕಟ ಆಕಾಂಕ್ಷೆ ಮನದಾಳದಲ್ಲಿ ಬೇರೂರಿತ್ತು.
ಕಡೆಗೂ ಅವರ ಬಯಕೆಯ ಮಹತ್ವಾಕಾಂಕ್ಷೆ ಈಡೇರಿತು. ಎರಡನೇ ಬಾರಿಗೆ ಭಾರತೀಯ ಭೂಸೇನೆಯ ಟೆಕ್ನಿಕಲ್ ಗ್ರಾಜುವೇಟ್ ಕೋರ್ಸ್ ಸಂದರ್ಶನದಲ್ಲಿ ಆಯ್ಕೆಯಾಗಿ ಡೆಹ್ರಾಡೂನ್‌ನ ಇಂಡಿಯನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಜಂಟಲ್‌ಮೆನ್ ಕೆಡೆಟ್‌ಆಗಿ ತರಬೇತಿ ಪಡೆದು ಜೂ ತಿಂಗಳಲ್ಲಿ ನಡೆದ ಪಾಸ್‌ಔಟ್ ಪೆರೇಡ್‌ನಲ್ಲಿ ಲೆಪ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ. ಅವರ ಬಹುಕಾಲದ ನಿರೀಕ್ಷೆಯ ಕನಸು ಇಂದು ನನಸಾಗಿದೆ. ಇದು ಬೆಳ್ತಂಗಡಿ ತಾಲೂಕಿಗೆ, ದ.ಕ. ಜಿಲ್ಲೆ ಹಾಗೂ ರಾಜ್ಯಕ್ಕೆ ಪ್ರತಿಷ್ಠೆಯ ಹೆಗ್ಗಳಿಕೆಗೆ ಕಾರಣವಾಗಿದೆ.

BJP PRATIBATANEಬೆಳ್ತಂಗಡಿ : ನಾಲ್ಕು ಕೋಣೆಯ ಮಧ್ಯೆ ಕೂತು ಅಧಿಕಾರಿಗಳನ್ನು ಕೂಡಿಸಿ ರಾಜಕಾರಣ ಮಾಡುತ್ತಿರುವ ಸಚಿವ ರಮಾನಾಥ ರೈ ಅವರು ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಸಂಘ ಪರಿವಾರದ ನಾಯಕರನ್ನು ಬಂಧಿಸುವಂತೆ ತಾಕೀತು ಮಾಡಿರುವುದು ಜಿಲ್ಲೆಯ ಜನತೆ ತಲೆತಗ್ಗಿಸುವಂತಾಗಿದೆ ಎಂದು ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ರಂಜನ್ ಜಿ. ಗೌಡ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಇತ್ತೀಚೆಗೆ ಬಂಟ್ವಾಳ ಐಬಿಯಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ವೀಡಿಯೋ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಜೂ. 19ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಒಂದು ಸಮುದಾಯದ ಹಾಗೂ ಕಾಂಗ್ರೆಸ್ ನಾಯಕರ ಮುಂದೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಪ್ರತೀ ಬಾರಿ ಕಾಂಗ್ರೆಸ್ ಸರಕಾರ ಇರುವಾಗಲೇ ಜಿಲ್ಲೆಯಾದ್ಯಂತ ಕೋಮು ಗಲಭೆಗಳು ನಡೆಯುವುದಕ್ಕೆ ಉಸ್ತುವಾರಿ ಸಚಿವರೇ ಜವಾಬ್ದಾರರಾಗಿದ್ದಾರೆ. ಇತ್ತೀಚೆಗೆ ಕಲ್ಲಡ್ಕ ಹಾಗೂ ಜಿಲ್ಲೆಯಾದ್ಯಂತ ನಡೆಯುವ ಕೋಮು ಗಲಭೆಗಳಿಗೆ ಮತ್ತು ಹಿಂದೂ ನಾಯಕರ ಹತ್ಯೆ ಹಾಗೂ ಹಲ್ಲೆಗಳಲ್ಲಿ ಉಸ್ತುವಾರಿ ಸಚಿವರ ನೇರ ಕೈವಾಡ ಮತ್ತು ಸಮಾಜಘಾತುಕ ಶಕ್ತಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಜಗಜ್ಜಾಹೀರಾಗಿದೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ, ಸೌಮ್ಯಲತಾ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ತಾ.ಪಂ. ಸದಸ್ಯರಾದ ವಿಜಯ ಗೌಡ ವೇಣೂರು, ಲಕ್ಷ್ಮೀನಾರಾಯಣ ಕೊಕ್ಕಡ, ಸುಧಾಕರ ಬಿ.ಎಲ್, ಕೊರಗಪ್ಪ ಗೌಡ ಅರಣಪಾದೆ, ಕೃಷ್ಣಯ್ಯ ಆಚಾರ್ಯ, ಧನಲಕ್ಷ್ಮೀ ಜನಾರ್ದನ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸಂಪತ್ ಬಿ. ಸುವರ್ಣ, ಮುಖಂಡರುಗಳಾದ ರಾಘವ ಕಲ್ಮಂಜ, ಸಿ.ಕೆ. ಚಂದ್ರಕಲಾ, ಗೀತಾ ರಾಮಣ್ಣ ಗೌಡ, ಬಾಲಕೃಷ್ಣ ಗೌಡ, ಅಶೋಕ್ ಕೋಟ್ಯಾನ್, ಎಪಿಎಂಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್, ಹಾಲಿ ಸದಸ್ಯೆ ಸೆಲೆಸ್ಟಿನ್ ಡಿಸೋಜಾ, ರಘುಚಂದ್ರ, ಶಂಕರ ಹೆಗ್ಡೆ, ನಾರಾಯಣ ಆಚಾರ್, ಗಿರೀಶ್ ಡೋಂಗ್ರೆ, ಅಶೋಕ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.

aranya 1ಬೆಳ್ತಂಗಡಿ : ಲಾರಿಯೊಂದರಲ್ಲಿ ಅಕ್ರಮವಾಗಿ 39 ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬೆಳ್ತಂಗಡಿ ಅರಣ್ಯ ಇಲಾಖೆಯವರು ಪತ್ತೆ ಹಚ್ಚಿ ಸುಮಾರು ರೂ.8ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ ಪ್ರಕರಣ ಜೂ.18ರಂದು ವರದಿಯಾಗಿದೆ.
ಉಜಿರೆ ಕಡೆಯಿಂದ ಬೆಳ್ತಂಗಡಿಯತ್ತ ಲಾರಿ ನಂಬ್ರ ಕೆ.ಎ 41-0418ರಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ವಯ ಉಜಿರೆ ಶಾಖಾ ಉಪ ವಲಯ ಅರಣ್ಯ ಅಧಿಕಾರಿಯವರು, ಉಜಿರೆ-ಬೆಳ್ತಂಗಡಿ ರಸ್ತೆಯ ಲಾಯಿಲ ಕ್ರಾಸ್ ಹಳೆಪೇಟೆ ಎಂಬಲ್ಲಿ ಹೋಗುತ್ತಿದ್ದ ಲಾರಿಯನ್ನು ತಡೆ ಹಿಡಿದು ಪರಿಶೀಲನೆ ನಡೆಸಿದಾಗ ಲಾರಿಯಲ್ಲಿ ಬೆಳ್ತಂಗಡಿ ಕಡೆಗೆ ಸಾಗಾಟ ಮಾಡುತ್ತಿದ್ದ ಬಣ್ಪು ಜಾತಿಯ 39 ಮರದ ದಿಮ್ಮಿಗಳು ಪತ್ತೆಯಾಗಿದೆ. ನಂತರ ಸೊತ್ತು ಸಮೇತ ಲಾರಿಯನ್ನು ವಶಪಡಿಸಿಕೊಂಡು ಸರಕಾರಕ್ಕೆ ಅಮಾನತು ಪಡಿಸಿಕೊಂಡಿದ್ದಾರೆ. ಸದ್ರಿ ಪ್ರಕರಣದ ಆರೋಪಿಗಳಾದ ಇಬ್ರಾಹಿಂ ಸೋಮಂತಡ್ಕ ಮುಂಡಾಜೆ ಗ್ರಾಮ ಮತ್ತು ಜಾಫರ್, ಮಲೆಬೆಟ್ಟು ಕೊಯ್ಯೂರು ಗ್ರಾಮ ಇವರುಗಳನ್ನು ದಸ್ತಗಿರಿ ಮಾಡಲಾಗಿದೆ. ಅಮಾನತು ಪಡಿಸಿಕೊಂಡ ಸೊತ್ತು ಹಾಗೂ ವಾಹನದ ಒಟ್ಟು ಮೌಲ್ಯ ಸುಮಾರು ರೂ. 8 ಲಕ್ಷ ಎಂದು ಅಂದಾಜಿಸಲಾಗಿದೆ. ಸದ್ರಿ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಉಜಿರೆ ಶಾಖಾ ಉಪ ವಲಯ ಅರಣ್ಯಾಧಿಕಾರಿ ಕೀರ್ತನ್, ಉಲ್ಲಾಸ್ ಕೆ. ದುಗ್ಗಪ್ಪ ನಾಯ್ಕ, ಮಾರ್ಕ್ ಡಿಸೋಜಾ, ಅರಣ್ಯ ರಕ್ಷಕರುಗಳಾದ ಭವಾನಿ ಶಂಕರ್ ಪುತ್ರನ್, ಪಿ. ಶಂಕರ್, ಕುಮಾರಿ ಕಮಲ, ಅರಣ್ಯ ವೀಕ್ಷಕ ಸದಾನಂದ ಇವರು ಭಾಗವಹಿಸಿರುತ್ತಾರೆ.
ಸದ್ರಿ ಪ್ರಕರಣದ ಮುಂದಿನ ತನಿಖೆಯನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ಕೆ.ಟಿ. ಹನುಮಂತಪ್ಪ ಹಾಗೂ ಮಂಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎನ್. ಸತೀಶ್ ಬಾಬಾ ರೈ ಇವರ ನಿರ್ದೇಶನದಂತೆ ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿ ಸುಬ್ಬಯ್ಯ ನಾಯ್ಕ್ ಇವರು ನಡೆಸುತ್ತಿದ್ದಾರೆ.

Thaluku panchayath sabheಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಹಾಗೂ ಸರ್ವೆ ಇಲಾಖೆಯಲ್ಲಿ ಜಿಲ್ಲಾಧಿಕಾರಿ ಗಳ ಆದೇಶವನ್ನು ಸಿಬ್ಬಂದಿಗಳು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ, ಬಡವರ ಯಾವುದೇ ಕೆಲಸಗಳು ತಾಲೂಕು ಕಚೇರಿಯಲ್ಲಿ ನಡೆಯುವುದಿಲ್ಲ, ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿದೆ ಎಂದು ಜೂ.20ರಂದು ನಡೆದ ತಾ.ಪಂ ಸಮಾನ್ಯ ಸಭೆಯಲ್ಲಿ ಸದಸ್ಯರು ಆರೋಪಿಸಿದರು.
ಸಭೆಯ ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ವಹಿಸಿದ್ದರು.
ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀರ್ ಆರ್.ಸುವರ್ಣ, ತಹಶೀಲ್ದಾರ್ ತಿಪ್ಪೇಸ್ವಾಮಿ, ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ, ತಾ.ಪಂ. ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ ಉಪಸ್ಥಿತರಿದ್ದರು.
ಪಾರೆಂಕಿಯ ಮಾಜಿ ಯೋಧ ವಿಕ್ಟರ್ ರೊಡ್ರಿಗಸ್ ಎಂಬವರಿಗೆ 1 ಎಕ್ರೆ ಭೂ ಮಂಜೂರಾತಿ ವಿಷಯ ಇಂದಿನ ಸಭೆಯಲ್ಲಿ ಚರ್ಚೆಗೆ ಒಳಗಾಯಿತು. ಇವರಿಗೆ ಜಾಗ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಜಿಲ್ಲಾಧಿಕಾರಿಗಳಿಂದ ಆದೇಶ ಬಂದಿಲ್ಲ ಎಂದು ತಹಶೀಲ್ದಾರ್ ತಿಪ್ಪೇಸ್ವಾಮಿ ಸಭೆಗೆ ವಿವರ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಜೊಯೆಲ್ ಮೆಂಡೋನ್ಸಾ ಅವರು 2005-06ನೇ ಸಾಲಿನಲ್ಲಿ ಜಿಲ್ಲಾಧಿಕಾರಿಗಳು ಇವರಿಗೆ ಜಾಗ ಮಂಜೂರಾತಿಗೆ ಆದೇಶ ಮಾಡಿದ್ದು, ಈ ಆದೇಶದ ಪ್ರತಿಯನ್ನು ಸಭೆಯಲ್ಲಿ ಪ್ರದರ್ಶಿಸಿದರು. ತಾಲೂಕು ಕಚೇರಿಗೆ ಆದೇಶದ ಪ್ರತಿ ಬಂದಿದೆ. ಆದರೆ ಇಲ್ಲಿಯ ಸಿಬ್ಬಂದಿಗಳು ಜಿಲ್ಲಾಧಿಕಾರಿಗಳ ಆದೇಶವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸದಸ್ಯರು ಆರೋಪಿಸಿದರು.
2013ರಲ್ಲಿ ಕಲ್ಮಂಜ ಗ್ರಾಮದ ಸ.ನಂ. 194/14ರಲ್ಲಿ 17 ಮಂದಿಯ ಜಾಗದ ಪ್ಲಾಟಿಂಗ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಇದು ಸರ್ವೆ ಇಲಾಖೆಗೆ ಬಂದು ನಾಲ್ಕು ವರ್ಷ ಆದರೂ ಇನ್ನೂ ಆಗಿಲ್ಲ. ಇವರ ನಂತರ ಅರ್ಜಿ ಕೊಟ್ಟವರ ಪಕ್ಕದ ಜಾಗ ಪ್ಲಾಟಿಂಗ್ ಆಗಿದೆ ಎಂದು ಸದಸ್ಯ ಶಶಿಧರ್ ವಿವರಿಸಿದರು. ತಾಲೂಕು ಕಚೇರಿ ಮತ್ತು ಸರ್ವೆ ಇಲಾಖೆಯಲ್ಲಿ ಹಣ ಕೊಟ್ಟವರ ಕೆಲಸ ಆಗುತ್ತದೆ. ಬಡವರ ಯಾವುದೇ ಕೆಲಸ ಆಗುವುದಿಲ್ಲ, ಮಧ್ಯವರ್ತಿಗಳ ಮೂಲಕ ಹೋದರೆ ಎಲ್ಲಾ ಕೆಲಸ ಕ್ಷಣ ಮಾತ್ರದಲ್ಲಿ ಆಗುತ್ತದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಕಚೇರಿಯಲ್ಲಿ ಉಪತಹಶೀಲ್ದಾರ್ ಸೇರಿದಂತೆ, ಸಿಬ್ಬಂದಿಗಳ ಕೊರತೆಯಿದ್ದು, ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ನನ್ನ ಗಮನಕ್ಕೆ ತನ್ನಿ ಎಂದು ತಹಶೀಲ್ದಾರ್ ತಿಪ್ಪೇಸ್ವಾಮಿ ಸಮಜಾಯಿಕೆ ನೀಡಿದರು. ಆದರೆ ತಹಶೀಲ್ದಾರ್ ಎದುರು ಆಯಿತು ಎಂದು ಒಪ್ಪಿಕೊಳ್ಳುವ ಸಿಬ್ಬಂದಿಗಳು ನಂತರ ಕೆಲಸವೇ ಮಾಡಿಕೊಡದಿರುವ ಅನೇಕ ಉದಾಹರಣೆಗಳಿವೆ ಎಂದು ಸದಸ್ಯರು ತಿಳಿಸಿದರು. ಒಂದು ಹಂತದಲ್ಲಿ ತಹಶೀಲ್ದಾರ್ ಮೇಲೆ ನಿರಂತರ ಆರೋಪಗಳು ಬಂದಾಗ ಸದಸ್ಯ ಗೋಪಿನಾಥ್ ನಾಯಕ್ ಹತ್ತು ವರ್ಷಗಳ ಹಿಂದೆ ಆದ ಘಟನೆ ಬಗ್ಗೆ ತಹಶೀಲ್ದಾರ್‌ರಲ್ಲಿ ಪ್ರಶ್ನೆ ಕೇಳಿದರೆ ಹೇಗೆ ಎಂದು ಆಕ್ಷೇಪ ವ್ಯಕ್ತಪಡಿಸಿದಾಗ, ಇತರ ಸದಸ್ಯರು ಇದಕ್ಕೆ ತೀವ್ರ ಪ್ರತಿರೋಧ ಒಡ್ಡಿದಾಗ ಸಭೆಯಲ್ಲಿ ಗೊಂದಲ ನಿರ್ಮಾಣವಾಯಿತು. ತಾ.ಪಂ. ಕಾರ್ಯನಿರ್ವಾಹಣಾಧಿಕಾರಿಗಳು ಸಭೆಯಲ್ಲಿ ಎಲ್ಲರಿಗೂ ಪ್ರಶ್ನಿಸುವ ಅಧಿಕಾರ ಇದೆ ಎಂದು ಹೇಳಿ ಸಭೆಯನ್ನು ಮುನ್ನಡೆಸಿದರು. ಕಂದಾಯ ಇಲಾಖೆಯ ಪ್ರತ್ಯೇಕ ಸಭೆಗೆ ಗೋಪಿನಾಥ ನಾಯಕ್ ಒತ್ತಾಯಿಸಿದರು.
ವೇಣೂರಿನ ಅಜಿಲಕೆರೆ ವಿವಾದದ ಬಗ್ಗೆ ಎ.ಸಿ. ನ್ಯಾಯಾಲಯದಲ್ಲಿದೆ ಎಂದು ಉತ್ತರ ನೀಡಲಾಗುತ್ತಿದೆ. ಇದು ಸಾರ್ವಜನಿಕ ಕೆರೆ ಇದನ್ನು ಶೀಘ್ರವಾಗಿ ಇತ್ಯರ್ಥ ಪಡಿಸಬೇಕು, ಇಲ್ಲಿಯ 8.50 ಎಕ್ರೆ ಜಾಗವನ್ನು ಪಂಚಾಯತಕ್ಕೆ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳುವಂತೆ ವಿಜಯ ಗೌಡ ಒತ್ತಾಯಿಸಿದರು. ಅದರಂತೆ ನಿರ್ಣಯ ಮಾಡಿ ಕಳುಹಿಸಲು ನಿರ್ಧರಿಸಲಾಯಿತು.
ಕೊಕ್ಕಡದಲ್ಲಿರುವ 900 ಎಕ್ರೆ ಡಿ.ಸಿ ಮನ್ನಾ ಜಾಗದಲ್ಲಿ ಗೇರು ನಿಗಮದ ವಶವಿರುವ ಜಾಗ ಮತ್ತು ಇತರ ಖಾಸಗಿ ವ್ಯಕ್ತಿಗಳು ಎಷ್ಟು ಜಾಗವನ್ನು ಅತಿಕ್ರಮಣ ಮಾಡಿದ್ದಾರೆ ಉಳಿದ ಜಾಗ ಎಷ್ಟು ಎಂದು ಮಾಹಿತಿ ನೀಡುವಂತೆ ಸದಸ್ಯ ಲಕ್ಷ್ಮೀನಾರಾಯಣ ಒತ್ತಾಯಿಸಿದಾಗ ಮುಂದಿನ ಸಭೆಯಲ್ಲಿ ನೀಡುವುದಾಗಿ ತಹಶೀಲ್ದಾರ್ ಭರವಸೆಯಿತ್ತರು.
ಆಧಾರ್ ಕಾರ್ಡ್ ಮಾಡಿಸಿಕೊಡಲು ಕೆಲವೊಂದು ಖಾಸಗಿ ಸಂಸ್ಥೆಗಳು ರೂ.200 ತೆಗೆದುಕೊಳ್ಳುತ್ತಿದ್ದಾರೆ ಇದರ ಬಗ್ಗೆ ತಹಶೀಲ್ದಾರರು ಕ್ರಮ ತೆಗೆದುಕೊಳ್ಳುವಂತೆ ಸದಸ್ಯ ವಿಜಯ ಗೌಡ, ಲಕ್ಷ್ಮೀನಾರಾಯಣ, ಶಶಿಧರ್, ಸುಶೀಲ, ವಸಂತಿ ಮೊದಲಾದವರು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ತಹಶೀಲ್ದಾರ್ ನಮ್ಮ ಕಚೇರಿಯಲ್ಲಿ ಯಾವುದೇ ಹಣ ತೆಗೆದುಕೊಳ್ಳುವುದಿಲ್ಲ, ಖಾಸಗಿ ಏಜೆನ್ಸಿಯವರು ನಮ್ಮ ಕಂಟ್ರೋಲ್‌ಗೆ ಬರುವುದಿಲ್ಲ ಎಂದು ತಿಳಿಸಿದರು. ಉಜಿರೆಯಲ್ಲಿಯೂ ಹೊರಗಿನ ವ್ಯಕ್ತಿಗಳು ರೇಷನ್ ಕಾರ್ಡ್ ಮಾಡಿಸಿಕೊಡುವುದಾಗಿ ಜನರಿಂದ ಹಣ ವಸೂಲಿ ಮಾಡಿರುವುದನ್ನು ಸದಸ್ಯರು ಸಭೆಯ ಗಮನಕ್ಕೆ ತಂದರು. ಇವರ ಬಗ್ಗೆ ಪೊಲೀಸ್ ಕೇಸು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭ ಸದಸ್ಯ ಜೊಯೆಲ್ ಮಾತನಾಡಿ ಖಾಸಗಿ ಏಜೆನ್ಸೀಯವರು ಸರಕಾರ ನಿಗದಿತ ಶುಲ್ಕವನ್ನು ಪಡೆದುಕೊಳ್ಳಬಹುದು ಎಂದು ನೆಟ್‌ನಲ್ಲಿ ಮಾಹಿತಿ ಇದೆ ಎಂದು ವಿವರಿಸಿದರು.
ಚಾರ್ಮಾಡಿ ಗ್ರಾಮದ ಕುತ್ರಿಜಾಲು ಪ್ರದೇಶಕ್ಕೆ ಸರಕಾರಿ ಬಸ್ಸು ಬೇಕು. ಈ ಭಾಗದ ನಾಗರಿಕರಿಗೆ, ಶಾಲಾ, ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕಳೆದ ಸಭೆಯಲ್ಲಿಯೂ ಇದನ್ನು ಪ್ರಸ್ತಾಪಿಸಿದ್ದೇನೆ ಎಂದು ಸದಸ್ಯ ಕೊರಗಪ್ಪ ಗೌಡ ಹೇಳಿದಾಗ ಮಾತನಾಡಿದ ಕೆಎಸ್ಸಾರ್ಟಿಸಿ ಅಧಿಕಾರಿಗಳು ಪರಿಶೀಲನೆ ನಡೆಸುವ ಭರವಸೆ ನೀಡಿದರು. ಧರ್ಮಸ್ಥಳ ಡಿಪ್ಪೋದಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಸ್ಥಳೀಯರು ಯಾರೂ ಉದ್ಯೋಗಕ್ಕೆ ಬರುತ್ತಿಲ್ಲ, ಬಸ್ಸಿನ ಕೊರತೆಯೂ ಇದೆ. ಈಗಾಗಲೇ ಚಾಲ್ತಿಯಲ್ಲಿರುವ ಬಸ್ಸಿನ ಸಮಯವನ್ನು ಶಾಲಾ ಮಕ್ಕಳ ಅನುಕೂಲಕ್ಕಾಗಿ ಬದಲಾವಣೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಅಕ್ರಮ ಮದ್ಯಮಾರಾಟ: ಬಂದಾರು ಗ್ರಾಮದ ಮೈರೋಳ್ತಡ್ಕ ಪರಿಸರ ಸೇರಿದಂತೆ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ದಂದೆ ಬಗ್ಗೆ ಸದಸ್ಯ ಕೃಷ್ಣಯ್ಯ ಆಚಾರ್ಯ ಸಭೆಯಲ್ಲಿ ಪ್ರಶ್ನಿಸಿದರು. ಇದುವರೆಗೆ ತಾಲೂಕಿನಲ್ಲಿ 60 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇನ್ಸ್‌ಪೆಕ್ಟರ್ ತುಕರಾಮ ಮಾಹಿತಿ ಇತ್ತರು.
ಅಬಕಾರಿ ಇಲಾಖೆಯವರು ಕೇಸು ಹಾಕಿದವರು ಜಾಮೀನು ಪಡೆದುಕೊಂಡು ನಂತರ ಅದೇ ಕಾಯಕವನ್ನು ಮುಂದುವರಿಸುತ್ತಿರುವ ಬಗ್ಗೆ ಸದಸ್ಯರು ಆತಂಕ ವ್ಯಕ್ತಪಡಿಸಿದರು. ಕಳಿಯ ಗ್ರಾಮದಲ್ಲಿ ಅಕ್ರಮ ಮಾರಾಟಗಾರರ ಲಿಸ್ಟ್ ಕೊಟ್ಟಿದೆ, ಗಾಡಿ ನಂಬ್ರ ಕೊಟ್ಟಿದೆ ಆದರೆ ಇಲಾಖೆಯಿಂದ ಯಾವುದೇ ಕ್ರಮ ಇಲ್ಲ ಮಾರುವುದು ನಿಂತಿಲ್ಲ, ಇದೇ ರೀತಿಯಾದರೆ ಗ್ರಾಮಕ್ಕೊಂದು ವೈನ್ ಶಾಪ್ ಕೊಡಿ ಎಂದು ಗ್ರಾ.ಪಂ. ಅಧ್ಯಕ್ಷ ಶರತ್‌ಕುಮಾರ್ ಹೇಳಿದರು. ಅಬಕಾರಿ ಇಲಾಖೆಯವರು ರೈಡ್‌ಗೆ ಹೊರಟಾಗ ಅಕ್ರಮ ಮಾರಾಟಗಾರರಿಗೆ ಇದರ ಮಾಹಿತಿ ಪೋನ್ ಮೂಲಕ ತಲುಪುತ್ತದೆ ಎಂದು ಕೇಶವತಿ ಹೇಳಿದರೆ, ಕಳೆಂಜದಲ್ಲಿ ಇಂದಿಗೂ ಒಂದು ಕಡೆ ಮಾರಾಟ ನಿಂತಿಲ್ಲ ಎಂದು ಸದಸ್ಯ ಸುಶೀಲ ಸಭೆಯ ಗಮನಕ್ಕೆ ತಂದರು. ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡು ಪುನಃ ಅದೇ ಕಾರ್ಯವನ್ನು ಮುಂದುವರಿಸುವವರ ಮೇಲೆ ಕಠಿಣ ಕ್ರಮಕ್ಕೆ ಸದಸ್ಯರು ಒತ್ತಾಯಿಸಿದರು. ಪದೇ, ಪದೇ ಸಿಕ್ಕಿ ಹಾಕಿಕೊಂಡವರ ಮೇಲೆ ಮೇಲಾಧಿಕಾರಿಗಳ ಆದೇಶದಂತೆ ಗುಂಡಾ ಕಾಯ್ದೆ ಹಾಕಬಹುದು ಎಂದು ತುಕರಾಮ್ ಮಾಹಿತಿ ನೀಡಿದರು.
ಗುರುವಾಯನಕೆರೆ ಪ್ರೌಢ ಶಾಲೆ: ಗುರುವಾಯನಕೆರೆ ಪೌಢ ಶಾಲೆ ಸತತ 6ನೇ ಬಾರಿ ಶೇ 100 ಫಲಿತಾಂಶ ಪಡೆದು ತಾಲೂಕಿಗೆ ಕೀರ್ತಿ ತಂದಿದೆ. ಆದರೆ ಇಲ್ಲಿ ಮುಖ್ಯೋಪಾಧ್ಯಾಯರು ಸೇರಿದಂತೆ ಗಣಿತ ಮತ್ತು ಪಿ.ಟಿ ಮಾಸ್ಟರ್‌ರ ಕೊರತೆ ಇದೆ ಎಂದು ಸದಸ್ಯ ಗೋಪಿನಾಥ ನಾಯಕ್ ಹೇಳಿ ಶಿಕ್ಷಕರ ನೇಮಕ್ಕೆ ಒತ್ತಾಯಿಸಿದರು. ಮಾಲಾಡಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ಜೊಯೆಲ್ ಸಭೆಗೆ ವಿವರಿಸಿದರು. ಎಸ್.ಸಿ, ಎಸ್.ಟಿ ಮಕ್ಕಳಿಗೆ ಬಸ್‌ಪಾಸ್ ನೀಡಿದಂತೆ ಸರಕಾರ ಇತರ ಎಲ್ಲಾ ಮಕ್ಕಳಿಗೂ ಇದನ್ನು ವಿಸ್ತರಿಸಬೇಕು ಎಂದು ಶಶಿಧರ್ ಕಲ್ಮಂಜ ಆಗ್ರಹಿಸಿದರು. ಕಡಿರುದ್ಯಾವರ ಶಾಲೆಯಲ್ಲಿ ಶಿಕ್ಷಕರ ಕೊರತೆ ಮತ್ತು ಕಜಕೆ ಶಾಲೆಯಲ್ಲಿ 6ನೇ ತರಗತಿ ಆರಂಭಿಸುವ ಬಗ್ಗೆ ಸದಸ್ಯ ಜಯರಾಮ ಒತ್ತಾಯಿಸಿದರು.
ಬೆಳ್ತಂಗಡಿ ತಾಲೂಕಿಗೆ 12 ಕಾಮಗಾರಿಗಳಿಗೆ ಸರಕಾರ ರೂ. 20 ಕೋಟಿ ಮಂಜೂರುಗೊಳಿಸಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಪ್ರಸಾದ್ ಮಾಹಿತಿ ನೀಡಿದರು. ಮೆಸ್ಕಾಂನಿಂದ ತಾಲೂಕಿನಲ್ಲಿ 366 ಪರಿವರ್ತಕಗಳನ್ನು ನಿರ್ಮಿಸಲು ರೂ.18.56 ಕೋಟಿ ಅನುದಾನ ಬಿಡುಗಡೆಯಾಗಿ, ಕಾಮಗಾರಿ ಆರಂಭಗೊಂಡಿದೆ ಎಂದು ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಶಿವಶಂಕರ್ ಸಭೆಗೆ ಮಾಹಿತಿ ನೀಡಿದರು. ಆರ್.ಟಿ.ಇ ಯೋಜನೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 200ರಲ್ಲಿ 183 ಮಕ್ಕಳು ನೇಮಕಗೊಂಡಿದ್ದಾರೆ.
ಇವರಲ್ಲಿ 176 ಮಂದಿ ಮಕ್ಕಳು ಶಾಲೆಗೆ ಸೇರ್‍ಪಡೆಗೊಂಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದರು.
ತಾ.ಪಂ ಕಾರ್ಯ ನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ ಸ್ವಾಗತಿಸಿದರು. ತಾಲೂಕು ಸಂಯೋಜಕ ಜಯಾನಂದ ವಂದಿಸಿದರು.

ಬೆಳ್ತಂಗಡಿ : ಬಿ.ಎಸ್.ಎನ್.ಎಲ್ ಸೇವ್ ಪ್ರತಿಭಟನೆ

Friday, December 16th, 2016 | Suddi Belthangady | no responses ಬೆಳ್ತಂಗಡಿ :  ದೇಶಾದ್ಯಂತ ತನ್ನ ನೆಟ್‌ವರ್ಕ್ ಹೊಂದಿರುವ ಬಿ.ಎಸ್.ಎನ್.ಎಲ್ ಸಂಸ್ಥೆ ಇದೀಗ ಬಹಳ… ಮುಂದೆ ಓದಿ

ಭಾರತ ಸಂಚಾರ್ ನಿಗಮ

ಭಾರತ ಸಂಚಾರ್ ನಿಗಮ

Thursday, August 13th, 2015 | suddiblt | no responses ಮುಂದೆ ಓದಿ

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top